ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 2/8 ಪು. 20
  • ಕುರುಡರಿಗೋಸ್ಕರ ಹಣವಿಲ್ಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುರುಡರಿಗೋಸ್ಕರ ಹಣವಿಲ್ಲ
  • ಎಚ್ಚರ!—1991
  • ಅನುರೂಪ ಮಾಹಿತಿ
  • ಯೆಹೋವನ ಬಗ್ಗೆ ಕಲಿಯಲು ಅಂಧರಿಗೆ ಸಹಾಯ ಮಾಡಿ
    2015 ನಮ್ಮ ರಾಜ್ಯದ ಸೇವೆ
  • ಕುರುಡರಿಗೆ ಯಾವ ನಿರೀಕ್ಷೆ?
    ಕಾವಲಿನಬುರುಜು—1994
  • ಸುವಾರ್ತೆಗೆ ಕಣ್ಣುಗಳನ್ನು ತೆರೆಯುವುದು
    ಕಾವಲಿನಬುರುಜು—1994
  • ಫರಿಸಾಯರ ಹಟಮಾರಿತನದ ಅಪನಂಬಿಕೆ
    ಅತ್ಯಂತ ಮಹಾನ್‌ ಪುರುಷ
ಇನ್ನಷ್ಟು
ಎಚ್ಚರ!—1991
g91 2/8 ಪು. 20

ಕುರುಡರಿಗೋಸ್ಕರ ಹಣವಿಲ್ಲ

ಪ್ರಪಂಚದ ಎಂಭತ್ತು ಸೇಕಡಾ ಕುರುಡರು ಅಭಿವೃದ್ಧಿಶೀಲ ದೇಶಗಳಲ್ಲಿರುತ್ತಾರೆ. ಇವರಲ್ಲಿ ಅತಿ ದೊಡ್ಡ ಪ್ರಮಾಣವು ಆಗ್ನೇಯ ಏಷ್ಯಾದಲ್ಲಿ ಕೇಂದ್ರೀಕೃತವಾಗಿದೆ. ಅಲ್ಲಿರುವ 25 ಮಂದಿಗಳಲ್ಲಿ ಒಬ್ಬನು ಪೂರ್ಣ ಇಲ್ಲವೇ ಆಂಶಿಕ ಕುರುಡನಾಗಿದ್ದಾನೆ ಎಂದು WHO (ಜಾಗತಿಕ ಆರೋಗ್ಯ ಸಂಸ್ಥೆ) ವರದಿ ಮಾಡಿದೆ. ಮುಖ್ಯ ಕಾರಣಗಳು ಯಾವುವು? ನ್ಯೂನ್ಯ ಪೋಷಣೆ ಮತ್ತು ನಿಕೃಷ್ಟವಾದ ಆರೋಗ್ಯಕ್ರಮರಹಿತತೆಯಿಂದುಂಟಾಗುವ ಜಾಡ್ಯಗಳು ಆಗಿವೆ.

ಡಚ್‌ ಪತ್ರಿಕೆ ಇಂಟರ್‌ನ್ಯಾಶನಲೇ ಸಮೀನ್‌ವರ್‌ಕಿಂಗ್‌ಗನುಸಾರ ಪ್ರತಿವರ್ಷ ಎರಡು ಸಾವಿರ ಮಿಲಿಯ ಅಮೆರಿಕನ್‌ ಡಾಲರುಗಳಿಂದ ವಿಕಾಸಶೀಲ ದೇಶಗಳಲ್ಲಿರುವ ಕುರುಡುತನದ ವಿರುದ್ಧ ಪರಿಣಾಮಕಾರೀಯಾಗಿ ಆಂದೋಲನ ನಡಿಸ ಸಾಧ್ಯವಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆ ವಾದಿಸುತ್ತದೆ. ಇದು ಲೋಕದ ಸರಕಾರಗಳು ಮಿಲಿಟರಿ ಉದ್ದೇಶಗಳಿಗಾಗಿ ಒಂದು ದಿನ ಖರ್ಚು ಮಾಡುವದಕ್ಕಿಂತಲೂ ಕಡಿಮೆಯಾಗಿರುತ್ತದೆಯಾದರೂ, ಆವಶ್ಯಕವಾಗಿರುವಷ್ಟು ಹಣನಿಧಿಯನ್ನು ಪಡೆಯಲು ಆಶಕ್ತವಾಗಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆ ಘೋಷಿಸುತ್ತದೆ.

ಆದುದರಿಂದ, ಬೇಕಾಗುವಷ್ಟು ಆದಾಯದ ಕೊರತೆಯಿಂದ, ಅಂಧತ್ವವನ್ನು ತಡೆಗಟ್ಟುವ ಪ್ರಯತ್ನದಲ್ಲಿ ಈಗ ಅದು ಮಾಡಸಾಧ್ಯವಿರುವುದೇನಂದರೆ, ಮಕ್ಕಳಿಗೆ ವಿಟಾಮಿನ್‌ ಎ ಗುಳಿಗೆಗಳನ್ನು ವಿತರಿಸುವುದೇ. ವಿಟಾಮಿನ್‌ ಎ ಕೊರತೆಯಿಂದ ಇಂಡಿಯಾ, ಇಂಡೋನೇಶಿಯಾ, ಬಾಂಗ್ಲಾ ದೇಶ ಮತ್ತು ಫಿಲಿಪ್ಪೈನ್‌ನ ಸುಮಾರು 4,00,000 ಮಕ್ಕಳು ಬಾಧಿತರಾಗಿದ್ದಾರೆ. ಆದರೆ 2000 ಇಸವಿಯೊಳಗೆ, ಸದ್ಯದ ವೇಗಗತಿಯಲ್ಲಿ ಪ್ರಪಂಚದಲ್ಲಿ 8 ಕೋಟಿ 40 ಲಕ್ಷ ಜನರು ಪೂರ್ಣ ಇಲ್ಲವೇ ಆಂಶಿಕವಾಗಿ ಕುರುಡರಾಗಿರುವ ಕರಾಳ ಚಿತ್ರಣವನ್ನು ಜಾಗತಿಕ ಆರೋಗ್ಯ ಸಂಸ್ಥೆ ಭವಿಷ್ಯ ನುಡಿಯುತ್ತದೆ. (g90 2/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ