ಕುರುಡರಿಗೆ ಯಾವ ನಿರೀಕ್ಷೆ?
ಜಾನ್ ಮಿಲ್ಟನ್ ಪೂರ್ಣ ಕುರುಡನಾಗಿದ್ದಾಗಲೂ ತನ್ನ ಮಹಾಕಾವ್ಯ ಕೃತಿಯಾದ ಪ್ಯಾರಡೈಸ್ ಲಾಸ್ಟ್ ಆ್ಯಂಡ್ ಪ್ಯಾರಡೈಸ್ ರಿಗ್ನೆಯ್‌ಡ್‌ನ್ನು ರಚಿಸಿದನು. ಕುರುಡಳೂ ಕಿವುಡಳೂ ಆಗಿದ್ದ ನಿಜತ್ವವು ಹೆಲೆನ್ ಕೆಲರ್ ಎಂಬವಳನ್ನು ಶಾರೀರಿಕ ನ್ಯೂನತೆಗಳಿದ್ದವರಿಗೆ ಕಲಿಸುವ ಮತ್ತು ಸಹಾಯ ಮಾಡುವ ಅವಳ ಪ್ರಯತ್ನಗಳಿಂದ ಹಿಮ್ಮೆಟ್ಟಿಸಲಿಲ್ಲ. ಹೌದು, ದೃಷ್ಟಿಹೀನತೆಯಿಂದಾಗಿ ಉಂಟಾಗುವ ಕಷ್ಟಗಳನ್ನು ಅನೇಕ ಕುರುಡರು ಚೆನ್ನಾಗಿ ನಿಭಾಯಿಸುತ್ತಾರೆ. ಆದರೆ ಪ್ರತಿಯೊಬ್ಬರು ಒಳ್ಳೆಯ ದೃಷ್ಟಿಯಲ್ಲಿ ಆನಂದಿಸಶಕ್ತರಾಗುವುದಾದರೆ ಅದೆಷ್ಟು ಆಶ್ಚರ್ಯಕರವಾಗುತ್ತಿತ್ತು! ಕುರುಡನು ಅಥವಾ ದುರ್ಬಲ ದೃಷ್ಟಿಯ ಪ್ರಿಯ ವ್ಯಕ್ತಿಯು ಯಾ ಸ್ನೇಹಿತನು ನಿಮಗೆ ಇರುವುದಾದರೆ ನೀವು ವಿಶೇಷವಾಗಿ ಇದನ್ನು ಒಪ್ಪಬಹುದು.
ಕೆಲವು ದೇಶಗಳಲ್ಲಿ ಪುನಃ ಸ್ಥಾಪನಾ ಕಾರ್ಯಕ್ರಮಗಳು ದುರ್ಬಲ ದೃಷ್ಟಿಯ ಜನರಿಗೆ ದಿನನಿತ್ಯ ಜೀವಿತದ ಕೌಶಲಗಳನ್ನು ಕಲಿಸುತ್ತವೆ ನಿಜ. ಬ್ರೇಲ್ ಮತ್ತು ತರಬೇತಾದ ದಾರಿತೋರುಗ ನಾಯಿಗಳು ಕುರುಡರಿಗೆ ಅವರ ಅನೇಕ ಅಗತ್ಯಗಳನ್ನು ನಿಭಾಯಿಸಲು ಸಹಾಯ ಮಾಡುತ್ತವೆ. ಆದಾಗ್ಯೂ, ಹೆಚ್ಚಿನ ಜನರು ನೇತ್ರಹೀನತೆಯನ್ನು ಅತ್ಯಂತ ಭೀಕರ ದೌರ್ಬಲ್ಯವಾಗಿ ವೀಕ್ಷಿಸುತ್ತಾರೆ. ಒಬ್ಬ ಲೇಖಕನು ಒತ್ತಿಹೇಳಿದ್ದು: “ಒಬ್ಬ ಕುರುಡ ವ್ಯಕ್ತಿಯು ನಮ್ಮ ಇಂದ್ರಿಯಗ್ರಾಹ್ಯ ಜಗತ್ತಿನ ಅತ್ಯಂತ ಗಮನಾರ್ಹ ಭಾಗಕ್ಕೆ ಪ್ರವೇಶವನ್ನು ಕಳೆದುಕೊಳ್ಳುತ್ತಾನೆ.” ಅದೇ ಸಮಯದಲ್ಲಿ, ಅನೇಕ ಕುರುಡರಿಗೆ ಅಧಿಕಾಧಿಕವಾಗಿ ಬೇರೆಯವರ ಮೇಲೆ ಆತುಕೊಳ್ಳಬೇಕಾಗುತ್ತದೆ.
ಕುರುಡುತನವು ಏಕೆ ಅಷ್ಟು ವ್ಯಾಪಕವಾಗಿ ಇದೆ ಎಂದು ನೀವು ಸೋಜಿಗಗೊಳ್ಳಬಹುದು. ಒಳ್ಳೇದು, ಟ್ರಕೋಮ ಎಂಬದರ ಕುರಿತು ನೀವು ಕೇಳಿದ್ದೀರೋ? ಅದು ದೃಷ್ಟಿಹೀನತೆಯ ಸುಮಾರು 90 ಲಕ್ಷ ವಿದ್ಯಮಾನಗಳಿಗೆ ಕಾರಣವಾಗಿದೆ. ಅದರ ಕುರಿತು ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಇದು ಹರಡುವ ರೋಗವಾಗಿದೆ ಮತ್ತು ಜನರ ಗುಂಪುಗಳು ಒತ್ತೊತ್ತಾಗಿ ನೆಲೆಸುವ ಸಾಕಷ್ಟು ಆರೋಗ್ಯ ಸೂತ್ರಗಳಿರದ ಪರಿಸರಗಳಲ್ಲಿ ಅದು ವರ್ಧಿಸುತ್ತದೆ. ತೊಳೆಯಲು ನೀರಿನ ಅಭಾವ, ಮನುಷ್ಯ ಮಲಮೂತ್ರಗಳಿಗೆ ಆಕರ್ಷಿಸಲ್ಪಡುವ ನೊಣಗಳ ಸಮೂಹ ಈ ರೋಗದ ಹರಡುವಿಕೆಗೆ ನೆರವಾಗುತ್ತದೆ. ಕೆಲವು ವಿಧಗಳಲ್ಲಿ ಟ್ರಕೋಮ ಒಂದು ವೈದ್ಯಕೀಯ ಸಮಸ್ಯೆಗಿಂತಲೂ ಮುಖ್ಯವಾಗಿ ಸಾಮಾಜಿಕ ಸಮಸ್ಯೆಯಾಗಿರುತ್ತದೆ; ಜೀವಿತ ಮಟ್ಟಗಳನ್ನು ಸುಧಾರಿಸಲು ಸಾಧ್ಯವಿರುವಲ್ಲಿ, ಜನನಿಬಿಡತೆಯು ಕಡಿಮೆಗೊಳಿಸಲ್ಪಡುವಲ್ಲಿ, ನೊಣಗಳು ಹಿಮ್ಮೆಟ್ಟಿಸಲ್ಪಡುವಲ್ಲಿ, ಮತ್ತು ಸಾಕಷ್ಟು ನೀರಿನ ಸರಬರಾಯಿಗಳು ಕಾದಿಡಲ್ಪಡುವಲ್ಲಿ, ಟ್ರಕೋಮದ ಸಂಭವವು ತೀವ್ರವಾಗಿ ಇಳಿಯುತ್ತದೆ.” ಇನ್ನು ಸುಮಾರು ಹತ್ತು ಲಕ್ಷ ಜನರು ನದಿಯಾಂಧತೆ (ಆಂಕೊಸರ್ಕಾಯಸಿಸ್) ಇದರಿಂದ ಬಾಧೆಪಡುತ್ತಾರೆ. ಮತ್ತು ಜಿರಫ್ತಾಲ್ಮಿಯ ಇದರ ಕುರಿತೇನು? ಹೆಸರು ಕಷ್ಟವಾಗಿದ್ದಾಗ್ಯೂ, ಇದರ ನಿಜತ್ವವೇನಂದರೆ ಇದು ಕುರುಡುತನಕ್ಕೆ ಸರ್ವಸಾಮಾನ್ಯ ಕಾರಣವಾಗಿರುತ್ತದೆ. ಸಿಹಿಮೂತ್ರ, ಗಳಚರ್ಮರೋಗ, ಸಿಡುಬು, ಕೆಂಜ್ವರ, ಮತ್ತು ರತಿರವಾನಿತ ರೋಗಗಳು ಸಹ ಅಂಧತೆಗೆ ನಡಿಸಬಹುದು.
ನಾವು ಮುದುಕರಾದಂತೆ, ಮಾಂಸಲ ಅವನತಿ ಮತ್ತು ಗ್ಲಾಕೋಮದಂತಹ ಅಕ್ರಮಗಳ ಪರಿಣಾಮವಾಗಿ ನಮ್ಮ ದೃಷ್ಟಿಯು ಮಂದವಾಗಬಹುದು; ಕಣ್ಣಿನ ಪೊರೆಗಳು ಸಹ ನಮ್ಮ ದೃಷ್ಟಿಯನ್ನು ದುರ್ಬಲಗೊಳಿಸಬಲ್ಲವು. ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಗಮನಿಸುವುದು: “ಲೋಕದ ಅನೇಕ ದೇಶಗಳಲ್ಲಿ ಅಂಧತೆಯ ಮೂಲಕಾರಣಗಳ ಪಟ್ಟಿಯಲ್ಲಿ ಕಣ್ಣಿನ ಪೊರೆ ಇನ್ನೂ ತುತ್ತತುದಿಯಲ್ಲಿದೆ, ಮತ್ತು ಶಸ್ತ್ರಕ್ರಿಯೆಯ ಮೂಲಕ ಅದು ಅಷ್ಟು ಸುಲಭವಾಗಿ ವಾಸಿಯಾಗುವ ನಿಜತ್ವದ ಕಾರಣ ಇದು ಇನ್ನಷ್ಟು ಹೆಚ್ಚು ಶೋಚನೀಯವಾಗಿದೆ.”
ನೇತ್ರಶಾಸ್ತ್ರದಲ್ಲಿ ಹೊಸ ಸಂಶೋಧನೆಗಳಾದಾಗ್ಯೂ, ಕುರುಡುತನದ ನಿರ್ಮೂಲನವು ಭವಿಷ್ಯದಲ್ಲಿ ಬಹಳ ದೂರವಿರುವಂತೆ ಕಾಣುತ್ತದೆ. ಅದೇ ಎನ್‌ಸೈಕ್ಲೊಪೀಡಿಯ ಹೇಳುವುದು: “ಕುರುಡುತನದ ತಡೆಗಟ್ಟುವಿಕೆಯಲ್ಲಿ ಮತ್ತು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಸುಧಾರಣೆಗಳು ವೈದ್ಯಕೀಯ ಆರೈಕೆಗೆ ಪ್ರವೇಶಸಾಧ್ಯವಿರುವ ಜನರಿಗೆ ಮಾತ್ರ ಪ್ರಯೋಜನವಾಗಬಲ್ಲದು. ಲೋಕದ ಜನಸಂಖ್ಯೆಯ ದೊಡ್ಡ ಭಾಗದ ಪೋಷಕ ಮತ್ತು ಆರೋಗ್ಯ ಸೂತ್ರಗಳ ಮಟ್ಟಗಳು ಸುಧಾರಣೆ ಹೊಂದುವ ತನಕ, ನಿವಾರಣೀಯ ಅಂಧತೆಯು ಅದರ ಪ್ರಚಲಿತ ಉನ್ನತ ಪ್ರಮಾಣದಲ್ಲಿ ಉಳಿಯುವುದು.”
ಅಂಧತೆಯ ವಿರುದ್ಧ ಹೋರಾಟದಲ್ಲಿ ಪ್ರತಿವಿಷ ಔಷಧಿಗಳು ಮತ್ತು ಶಸ್ತ್ರಕ್ರಿಯೆಯು ಖಂಡಿತವಾಗಿಯೂ ತಕ್ಕದಾಗಿಯೂ ಉಪಯುಕ್ತವೂ ಆಗಿರುವುದಾದರೂ, ಖಾಯಂ ವಾಸಿಯ ನಿರೀಕ್ಷೆಯು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಡೆದ ಒಂದು ವಿಷಯಕ್ಕೆ ಸಂಬಂಧಿಸಿರುತ್ತದೆ.
ಯೇಸುವಿನ ದಿನದ ಕುರುಡರನ್ನು ವಾಸಿಮಾಡುವುದು
ತನ್ನ 30 ಗಳ ಪ್ರಾಯದಾರಂಭದಲ್ಲಿರುವ ಒಬ್ಬ ಮನುಷ್ಯನು, ದೂಳು ತುಂಬಿದ ಒಂದು ದಾರಿಯಲ್ಲಿ ನಡೆಯುತ್ತಿರುವುದನ್ನು ಕಲ್ಪಿಸಿಕೊಳ್ಳಿರಿ. ಆತನು ಹಾದುಹೋಗುತ್ತಿದ್ದಾನೆಂದು ಕೇಳಿದ ದಾರಿಬದಿಯ ಇಬ್ಬರು ಕುರುಡರು, “ನಮ್ಮನ್ನು ಕರುಣಿಸು” ಎಂದು ಗಟ್ಟಿಯಾಗಿ ಕೂಗುತ್ತಾರೆ. ಪ್ರೇಕ್ಷಕರು ಸುಮ್ಮನಿರಿ ಎಂದು ಆ ಕುರುಡರನ್ನು ಆಜ್ಞಾಪಿಸಿದರೂ ಅವರು “ನಮ್ಮನ್ನು ಕರುಣಿಸು,” ಎಂದು ಮತ್ತೂ ಗಟ್ಟಿಯಾಗಿ ಕೂಗುತ್ತಾರೆ. ಆ ಮನುಷ್ಯನು ದಯೆಯಿಂದ ಕೇಳುವುದು: “ನಾನು ನಿಮಗೆ ಏನು ಮಾಡಬೇಕೆಂದು ಕೋರುತ್ತೀರಿ?” ಆತುರದಿಂದ ಅವರು ಉತ್ತರಿಸುವುದು: “ನಮ್ಮ ಕಣ್ಣುಗಳು ತೆರೆಯಲ್ಪಡಬೇಕು.” ಈಗ ಊಹಿಸಿರಿ: ಮನುಷ್ಯನು ಅವರ ಕಣ್ಣುಗಳನ್ನು ಮುಟ್ಟುತ್ತಾನೆ, ಮತ್ತು ಆ ಕೂಡಲೆ ಅವರಿಗೆ ದೃಷ್ಟಿಬರುತ್ತದೆ!—ಮತ್ತಾಯ 20:29-34.
ಹಿಂದೆ ಕುರುಡರಾಗಿದ್ದ ಈ ಮನುಷ್ಯರಿಗೆ ಅದೆಷ್ಟು ಸಂತೋಷವಾಗುತ್ತದೆ! ಆದರೂ ಅಂಧತೆಯು ಬಹುವ್ಯಾಪಕವಾಗಿದೆ. ಇದು ಕೇವಲ ಒಂದು ಘಟನೆಯಾಗಿತ್ತು. ಅದು ನಿಮ್ಮ ಗಮನಕ್ಕೆ ಯಾಕೆ ಪಾತ್ರವಾಗಬೇಕು? ಯಾಕಂದರೆ ಆ ಕುರುಡ ಮನುಷ್ಯರಿಗೆ ದೃಷ್ಟಿಯನ್ನು ದಯೆಯಿಂದ ಅನುಗ್ರಹಿಸಿದವನು ನಜರೇತಿನ ಯೇಸುವಾಗಿದ್ದನು. ವಾಸ್ತವದಲ್ಲಿ ಯೇಸು, ‘ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿತ’ ನಾದದ್ದು ಮಾತ್ರವಲ್ಲದೆ ‘ಕುರುಡರಿಗೆ ಕಣ್ಣುಬರುವಂತೆ ಮಾಡಲು’ ಕಳುಹಿಸಲ್ಪಟ್ಟಿದ್ದನು.—ಲೂಕ 4:18.
ದೇವರ ಶಕ್ತಿಶಾಲಿ ಪವಿತ್ರ ಆತ್ಮದ ಮೂಲಕವಾಗಿ ನಡಿಸಲ್ಪಟ್ಟ ಅಂಥ ಅದ್ಭುತಕರವಾದ ವಾಸಿಮಾಡುವಿಕೆಗಳಿಂದ ಜನರು ಆಶ್ಚರ್ಯಚಕಿತರಾಗಿದ್ದರು. ನಾವು ಓದುವುದು: “ಮೂಕರಾಗಿದ್ದವರು ಮಾತಾಡಿದ್ದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ ಕುಂಟರಿಗೆ ಕಾಲುಬಂದದ್ದನ್ನೂ ಕುರುಡರಿಗೆ ಕಣ್ಣುಬಂದದ್ದನ್ನೂ ಜನರು ಕಂಡು ಆಶ್ಚರ್ಯಪಟ್ಟು ಇಸ್ರಾಯೇಲ್ ಜನರ ದೇವರನ್ನು ಕೊಂಡಾಡಿದರು.” (ಮತ್ತಾಯ 15:31) ಅಂಥ ವಾಸಿಗಳಲ್ಲಿ ಯಾವುದೇ ಖರ್ಚನ್ನು ಹೊರಿಸದೆ ಯಾ ಪ್ರದರ್ಶನವನ್ನು ಮಾಡದೆ ಅಥವಾ ತನಗೆ ಘನವನ್ನು ತಂದುಕೊಳ್ಳಲು ಪ್ರಯತ್ನಿಸದೆ, ಯೇಸು ಯೆಹೋವ ದೇವರ ಪ್ರೀತಿ ಮತ್ತು ಕರುಣೆಯನ್ನು ಎತ್ತಿತೋರಿಸಿದನು. ಆದರೂ, “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದ” ಆತ್ಮಿಕವಾಗಿ ಕುರುಡರೂ ಸಹಾಯಶೂನ್ಯರೂ ಆದ ಜನರಿಗೆ ಸಹ ಯೇಸು ಕರುಣೆದೋರಿದ್ದನು.—ಮತ್ತಾಯ 9:36.
ಅಂಥ ಇತಿಹಾಸವು ರಸಕರವಾಗಿರಬಹುದಾದರೂ, ಇಂದಿನ ಕುರಿತೇನೆಂದು ನೀವು ಯೋಚಿಸಬಹುದು? ಇಂದು ಯಾರೊಬ್ಬನೂ ಯೇಸುವಿನಂತೆ ಜನರನ್ನು ವಾಸಿಮಾಡುತ್ತಿಲ್ಲವಾದ್ದರಿಂದ, ಈ ವಾಸಿಮಾಡುವಿಕೆಗಳು ನಮಗೆ ಒಂದು ಅರ್ಥವನ್ನು ಹೊಂದಿವೆಯೆ? ಕುರುಡರಿಗೆ ಯಾವ ನಿರೀಕ್ಷೆಯಾದರೂ ಇದೆಯೆ? ಹಿಂಬಾಲಿಸುವ ಲೇಖನವನ್ನು ದಯವಿಟ್ಟು ಓದಿರಿ.
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಲೋಕದ ಜನಸಂಖ್ಯೆಯ ದೊಡ್ಡ ಭಾಗದ ಪೋಷಕ ಮತ್ತು ಆರೋಗ್ಯ ಸೂತ್ರಗಳ ಮಟ್ಟಗಳು ಸುಧಾರಣೆ ಹೊಂದುವ ತನಕ, ನಿವಾರಣೀಯ ಅಂಧತೆಯು ಅದರ ಪ್ರಚಲಿತ ಉನ್ನತ ಪ್ರಮಾಣದಲ್ಲಿ ಉಳಿಯುವುದು.”—ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ