ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 3/8 ಪು. 15-17
  • ಉಬ್ಬಸವನ್ನು ತಿಳಿದುಕೊಳ್ಳುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಉಬ್ಬಸವನ್ನು ತಿಳಿದುಕೊಳ್ಳುವುದು
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಉಬ್ಬಸವೆಂದರೇನು?
  • ಉಬ್ಬಸಕ್ಕೆ ಯಾವುದು ಕಾರಣ?
  • ಆಕ್ರಮಣವನ್ನು ತಡೆಯುವ ವಿಧ
  • ನಿಮ್ಮ ಮಗು ಉಬ್ಬಸ ರೋಗಿಯೋ?
  • ಯಾರಿಗಾದರೂ ಉಬ್ಬಸ ಹೊಡೆದಾಗ . . .
  • ಉಬ್ಬಸಕ್ಕೆ ಚಿಕಿತ್ಸೆ
  • ರೋಗಲಕ್ಷಣಗಳನ್ನು ಗುರುತಿಸಿ ಕ್ರಮ ಕೈಕೊಳ್ಳುವುದು
    ಎಚ್ಚರ!—1997
  • ಚಿಂತೆ ಮಾಡಬೇಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
  • ಆತಂಕದ ಕಾಯಿಲೆ ಇರುವವರಿಗೆ ನೆರವು ನೀಡುವುದು ಹೇಗೆ?
    ಎಚ್ಚರ!—2012
ಇನ್ನಷ್ಟು
ಎಚ್ಚರ!—1991
g91 3/8 ಪು. 15-17

ಉಬ್ಬಸವನ್ನು ತಿಳಿದುಕೊಳ್ಳುವುದು

ಉಬ್ಬಸವು ಲೋಕ ವ್ಯಾಪಕ ವ್ಯಾಧಿಯು. ಇಲ್ಲಿ, ನ್ಯೂಜಿಲ್ಯಾಂಡ್‌ನಲ್ಲಿ, ಹತ್ತರಲ್ಲಿ ಒಬ್ಬನು ಆ ವ್ಯಾದಿಗ್ರಸ್ತನೆಂದು ಅಂದಾಜು. ಎಳೆಯರು ಮತ್ತು ವೃದ್ಧರೆನ್ನದೆ, ಪಟ್ಟಣಿಗರು ಮತ್ತು ಹಳ್ಳಿಗರೆನ್ನದೆ, ಕೈದುಡಿಮೆಯವರು ಮತ್ತು ಕಚೇರಿಯ ಕಾರ್ಮಿಕರೆನ್ನದೆ ಎಲ್ಲರೂ ಆ ರೋಗದಲ್ಲಿ ಭಾಗಿಗಳು.

ಆದರೂ ಉಬ್ಬಸವು ಕೊಂಚವಾಗಿ ಅರ್ಥೈಸಲ್ಪಡುತ್ತದೆ ವಿಶೇಷವಾಗಿ ಆ ರೋಗವಿಲ್ಲದವರಿಂದ. ಉಬ್ಬಸ ರೋಗಿಗಳಿಗೆ ಸಹಾ ಕೆಲವೊಮ್ಮೆ ತಮಗೇನು ಸಂಭವಿಸುತ್ತದೆಂದು ತಿಳಿಯುವುದಿಲ್ಲ. ಇದು ಅವರಲ್ಲಿ ಉದ್ವೇಗವನ್ನು ಬರಮಾಡಿ, ಅವರ ಪ್ರಕೃತಿಯನ್ನು ಹೆಚ್ಚು ಕೆಡಿಸುತ್ತದೆ. ಪ್ರಾಯಶಃ, ನ್ಯೂಜಿಲ್ಯಾಂಡ್‌ನಲ್ಲಿ ನಡೆದ ಸಂಶೋಧನೆ ಮತ್ತು ಅನುಭವಗಳಲ್ಲಿ ಆಧರಿತವಾದ ಈ ಕೆಳಗಿನ ಹೇಳಿಕೆಗಳು ಆ ತಿಳುವಳಿಕೆಯ ಕೊರತೆಯನ್ನು ಕಡಿಮೆಗೊಳಿಸಲು ನೆರವಾಗಬಹುದು.

ಉಬ್ಬಸವೆಂದರೇನು?

ಒಂದು ಸಾಮಾನ್ಯ ಉಬ್ಬಸದ ಹೊಡೆತದಲ್ಲಿ ರೋಗಿಗೆ, ಎದೆಯಲ್ಲಿ ಬಿಗುಪಿನ ಅನುಭವವಾಗುತ್ತದೆ. ಗೊರಗುಟ್ಟುತ್ತಾ ಮತ್ತು ಕೆಮ್ಮುತ್ತಾ ಅವನು ಉಸಿರಾಡಲು ಹೋರಾಡುತ್ತಾನೆ. ಆ ಅನುಭವವು ಭೀತಿದಾಯಕ! ಉಬ್ಬಸದ ಹೊಡೆತವು ಉಗ್ರವಾಗಿರಬಹುದು ಅಥವಾ ತೀರಾ ಸೌಮ್ಯವಾಗಿಬಹುದು. ರೋಗ ಲಕ್ಷಣಗಳು ವಿವಿಧವಾಗಿವೆ, ಆಕ್ರಮಣಗಳು ಅಡಿಗಡಿಗೆ ಸಂಭವಿಸಲೂ ಬಹುದು. ಕೆಲವು ವ್ಯಕ್ತಿಗಳಿಗೆ ಯಾವಾಗಲೂ ರೋಗಲಕ್ಷಣಗಳಿವೆ ಆದರೂ, ಅವು ತೀವ್ರತೆಯಲ್ಲಿ ಹೆಚ್ಚುಕಡಿಮೆಯುಳ್ಳವುಗಳು.

ಈ ಅಹಿತಕರ ವೇದನೆಗಳನ್ನು ಉಂಟುಮಾಡುವುದು ಯಾವುದು? ನಿಮಗೆ ಪ್ರಾಯಶಃ ಗೊತ್ತಿರುವಂತೆ ಗಾಳಿಯು, ನಮ್ಮ ಶ್ವಾಸನಳಿಗೆಯ ಮೂಲಕ ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ಹೆಚ್ಚಿನ ಉಬ್ಬಸ ರೋಗಿಗಳಲ್ಲಿ ಸೂಕ್ಷ್ಮಸಂವೇದಿ ಪ್ರತಿಕ್ರಿಯೆಗಳು ಈ ನಳಿಗೆಗಳಲ್ಲಿ ಅತಿರೇಕ ನಾಜೂಕುತನವನ್ನು ಉಂಟುಮಾಡುತ್ತವೆ. ಶ್ವಾಸನಾಳದ ಸ್ನಾಯುಗಳು ಸಂಕುಚಿತವಾಗಿ, ನಳಿಗೆಯನ್ನು ಆವರಿಸುವ ಪೊರೆಯು ಉಬ್ಬಬಹುದು ಮತ್ತು ಶ್ವಾಸನಳಿಗೆಗೆ ಸಂಬಂಧಿಸಿದ ಆವರಣವು ಅತಿರೇಕ ಲೋಳೆಯನ್ನು ಒಸರಿಸಬಹುದು. ಫಲಿತಾಂಶ? ನಳಿಗೆಗಳು ಸಂಕುಚಿತಗೊಳ್ಳುತ್ತವೆ. ರೋಗಿಗೆ ಉಸಿರಾಡಲು ಕಷ್ಟವಾಗುವುರಲ್ಲಿ ಆಶ್ಚರ್ಯವೇನಿಲ್ಲ!

ಉಬ್ಬಸಕ್ಕೆ ಯಾವುದು ಕಾರಣ?

ಉಬ್ಬಸ ರೋಗಕ್ಕೆ ಕಾರಣ ಯಾವುದು? ಒಂದು ಅಂಟುರೋಗ, ಮಾನಸಿಕ ಕ್ಷೋಭೆ ಅಥವಾ ಯಾವುದಾದರೊಂದು ವಿಷಯಕ್ಕೆ ಸೂಕ್ಷ್ಮ ಸಂವೇದನೆ ಅದಕ್ಕೆ ಕಾರಣವಾಗಬಹುದು. ಆದರೂ, ಒಮ್ಮೆ ಆ ರೋಗವು ಒಬ್ಬನಲ್ಲಿ ಕಾಲೂರಿತೆಂದರೆ ಅಲ್ಲಿ, ಹಲವಾರು ಪ್ರತಿವಿಷಜನಕ ವಸ್ತುಗಳು ಅಥವಾ ವಿಶಿಷ್ಠ ಸ್ವತಗಳು ಶ್ವಾಸನಳಿಗೆಯಲ್ಲಿ ಸೂಕ್ಷ್ಮ ಸಂವೇದಿಯನ್ನು ಉಂಟುಮಾಡಬಹುದು. ಆ ಕೂಡಲೇ ಶ್ವಾಸನಳಿಗೆಗಳು ಪ್ರತಿಕ್ರಿಯಿಸುತ್ತವೆ ಮತ್ತು ಬೇರೆ ಪ್ರಕ್ರಿಯೆಗಳಾದ ಉಷ್ಣತೆಯಲ್ಲಿ ಬದಲಾವಣೆ, ತ್ಯಾವದಲ್ಲಿ ವೈವಿಧ್ಯತೆ, ಮಾನಸಿಕ ಏರಿಳಿತಗಳು ಅಥವಾ ವ್ಯಾಯಾಮ ಮುಂತಾದವುಗಳು ಸಹಾ ದಿಢೀರನೇ ಈ ರೋಗವನ್ನು ಬರಮಾಡಬಹುದು.

ಉಬ್ಬಸದ ಆಕ್ರಮಣವನ್ನು ತರುವ ಕೆಲವು ಪ್ರತಿವಿಷಜನಕ ವಸ್ತುಗಳನ್ನು ಡಾಕ್ಟರರು ಗುರುತಿಸ ಶಕ್ತರಾಗಬಹುದು ಆದರೂ, ಅವೆಲ್ಲವನ್ನು ಕಂಡುಹಿಡಿಯಲು ಹೆಚ್ಚಾಗಿ ಅವರು ಶಕ್ತರಲ್ಲ. ಮತ್ತು ಅವು ಕಂಡು ಹಿಡಿಯಲ್ಪಟ್ಟಾಗಲೂ ಅವನ್ನು ಯಾವಾಗಲೂ ವಿಸರ್ಜಿಸ ಸಾಧ್ಯವಿಲ್ಲ. ಉಬ್ಬಸದ ಕಾರಣವನ್ನು ಕಂಡು ಹಿಡಿಯಲು ಪೂರಾ ತರದ ಸಂಶೋಧನೆ ಮತ್ತು ಉತ್ತಮ ನಿರ್ವಹಣೆಗಾಗಿ ತುಂಬಾ ಸಮಯ ತಗಲೀತು. ಅದಕ್ಕಾಗಿ ರೋಗಿ ಮತ್ತು ಡಾಕ್ಟರರು ತುಂಬಾ ತಾಳ್ಮೆಯನ್ನು ತೋರಿಸಬೇಕಾದೀತು. ಆದರೆ ವ್ಯಯಿಸಲ್ಪಡುವ ಅಂಥಹ ಸಮಯವು ರೋಗ ಲಕ್ಷಣಗಳನ್ನು ನಿಯಂತ್ರಿಸುವುದಕ್ಕೆ ಹೆಚ್ಚಿನ ಶಕ್ಯತೆಯನ್ನು ಒದಗಿಸುವುದು.

ಆಕ್ರಮಣವನ್ನು ತಡೆಯುವ ವಿಧ

ಅನೇಕ ವಿಷಯಗಳು ಶ್ವಾಸಕೋಶಗಳನ್ನು ನವೆಸುತ್ತವೆ ಮತ್ತು ಉಬ್ಬಸ ರೋಗಿಯಲ್ಲಿ ಒಂದು ಆಕ್ರಮಣವನ್ನು ಉದ್ರೇಕಿಸಬಹುದು. ಈ ಕೆಳಗಿನವುಗಳ ಸಂಪರ್ಕದಿಂದ ದೂರವಿರುವಂತೆ ಪ್ರಯತ್ನಿಸಿರಿ.

ತಂಬಾಕು ಹೊಗೆ: ಧೂಮ್ರಪಾನ ಮಾಡಬೇಡಿ ಮತ್ತು ಹೊಗೆತುಂಬಿದ ಕೋಣೆಗಳಿಂದ ದೂರವಿರ್ರಿ. ಧೂಮ್ರಪಾನವನ್ನು ಪಟ್ಟುಹಿಡಿಯುವ ದಮ್ಮು ರೋಗಿಗಳಲ್ಲಿ ಡಾಕ್ಟರರು ತ್ವರೆಯಾಗಿ ಸಹಾನುಭೂತಿ ಕಳಕೊಳ್ಳುತ್ತಾರೆ. ಉಬ್ಬಸ ಬಾಧಿತ ರೋಗಿಯ ಎದುರಲ್ಲಿ ಅವನ ಮಿತ್ರರು ಧೂಮ್ರಪಾನ ಮಾಡಬಾರದು. ಆವನು ಆ ಕೂಡಲೇ ಅದರಿಂದ ಬಾಧಿತನಾಗದಿದ್ದರೂ ತಾಸುಗಳ ನಂತರ, ಆ ಹೊಗೆಯ ಪರಿಣಾಮವಾಗಿ ಅವನು ಕಷ್ಟಪಟ್ಟಾನು.

ಧೂಳು: ಧೂಳು ತುಂಬಿದ, ಮುಚ್ಚಿರುವ ಕ್ಷೇತ್ರಗಳಿಂದ ದೂರವಿರಲು ಪ್ರಯತ್ನಿಸಿರಿ. ನಿಮ್ಮ ಕೆಲಸವು ನಿಮ್ಮನ್ನು ತುಂಬಾ ಧೂಳಿನ ಸಂಪರ್ಕಕ್ಕೆ ತರುವುದಾದರೆ, ಅದನ್ನು ಬದಲಾಯಿಸುವ ಕಡೆಗೆ ಗಂಭೀರ ಗಮನ ಕೊಡಿರಿ. ರಾತ್ರಿಯಲ್ಲಿ ಮಾತ್ರವೇ ಅಥವಾ ತಮ್ಮ ಮಲಗುವ ಕೋಣೆಯಲ್ಲಿ ಅದರ ಲಕ್ಷಣಗಳು ತೋರಿಬರುವುದನ್ನು ಕೆಲವು ಗೂರುಬ್ಬಸ ರೋಗಿಗಳು ಕಂಡಿದ್ದಾರೆ. ಇದು ಮನೆಯಲ್ಲಿ ಧೂಳಿರುವ ಕಾರಣದಿಂದಲೋ ಅಥವಾ ಆ ಚಿಕ್ಕ ಮನೇ-ಧೂಳಿನ ನುಸಿಗಳಿಂದಲೋ? ಅನೇಕ ಸಂದರ್ಭಗಳಲ್ಲಿ ಅದು ಹಾಗಿದೆ. ಆದ್ದರಿಂದ, ಗೂರುಬ್ಬಸ ರೋಗಿಯ ಮಲಗುವ ಕೋಣೆಯು ಆದಷ್ಟು ಹೆಚ್ಚು ಧೂಳುಮುಕ್ತವಾಗಿರಬೇಕು. ವಿಶೇಷವಾಗಿ ಉಬ್ಬಸ ರೋಗಿಗಳಿಗೆ ರಚಿಸಲಾದ ಕೆಲವು ಮನೆಗೆಲಸದ ಸಲಹೆಗಳು ಹೀಗಿವೆ:

ಮಲಗುವ ಕೋಣೆಯನ್ನು ದಿನಾಲೂ ಶುಚಿಮಾಡಿರಿ.

ಪ್ರತಿ ವಾರ ಹಾಸಿಗೆಗಳನ್ನು, ಮಂಚದ ತಳವನ್ನು, ಕಂಬಳಿಗಳನ್ನು ಮತ್ತು ನೆಲವನ್ನು ಧೂಳು ಹೀರಕದಿಂದ ಶುಚಿಮಾಡಿ ಸ್ವಚ್ಛಗೊಳಿಸಿರಿ. ಗಟ್ಟಿಯಾದ ಮರದ ನೆಲಗಳು ಕಾರ್ಪೆಟ್‌ ಮತ್ತು ರಗ್ಗುಗಳಿಗಿಂತ ಒಳ್ಳೆಯವು, ವೆನೆಶಿಯನ್‌ ತೆರೆಗಳು ಬಟ್ಟೆಯ ಪರದೆಗಳಿಗಿಂತ ಹಿತಕಾರಕ.

ಪೀಠೋಪಕರಣ, ಬಾಗಲಂಚುಗಳನ್ನು, ಕಿಟಿಕಿ ಚೌಕಟ್ಟುಗಳನ್ನು ಮತ್ತು ಹೊಸಿಲುಗಳನ್ನು ಒದ್ದೆ ಅಥವಾ ಎಣ್ಣೇ ಬಟ್ಟೆಯಿಂದ ಒರಸಿರಿ.

ಕೋಣೆಯನ್ನು ಸರಿಯಾಗಿ ಗಾಳಿಗೆ ತೆರೆದಿಡಬೇಕು ಮತ್ತು ಅನಂತರ, ವ್ಯಕ್ತಿಯು ಮಲಗುವ ಮುಂಚೆ, ಮೂರು ನಾಲ್ಕು ತಾಸಾದರೂ ಮುಚ್ಚಿಡಬೇಕು.

ಹಾಸಿಗೆಗಳು, ಕಂಬಳಿಗಳು ಮತ್ತು ತಲೆದಿಂಬುಗಳು ತುರಿಕೆ ತರುವ ವಸ್ತುಗಳಿಂದ ಮಾಡಿರಬಾರದು ಮತ್ತು ಶಕ್ಯವಾದಲ್ಲಿ ಬಿಸಿಲಲ್ಲಿ ಹಾಕಿ ಒಣಗಿಸಬೇಕು.a

ಇನ್ನೊಂದು ವಿಷಯ. ಸಾಕು ಪ್ರಾಣಿಗಳನ್ನು ಮಲಗುವ ಕೋಣೆಯೊಳಗೆ ಬಿಡಬಾರದು. ನಿಮ್ಮ ಮುದ್ದಿನ ಪ್ರಾಣಿಗೆ ನೀವು ಸೂಕ್ಷ್ಮ ಸಂವೇದಿಗಳಾಗಿರುವ ಯಾವುದೇ ಪುರಾವೆ ಅಲ್ಲಿದ್ದರೆ ಅದಕ್ಕಾಗಿ, ಬೇರೊಂದು ಮನೆ ಹುಡುಕಿರಿ—ಇಲ್ಲವೇ ಕಡಿಮೆ ಪಕ್ಷ, ಯಾವಾಗಲೂ ಅದನ್ನು ಮನೆಯ ಹೊರಗಿಡಿರಿ.

ಉಷ್ಣತೆ ಮತ್ತು ತ್ಯಾವತೆ: ಉಷ್ಣತೆಯಲ್ಲಿ ದಿಢೀರ್‌ ಬದಲಾವಣೆಗಳು ಮತ್ತು ಜೋರು ಶೆಖೆ ಅಥವಾ ಚಳಿಯು ಈ ಖಾಯಿಲೆಯನ್ನು ಉದ್ರೇಕಿಸಬಹುದು. ತುಸು ಬೆಚ್ಚಗಿನ ಮತ್ತು ತ್ಯಾವದ ಹವೆಯು ಹಿತಕರ. ಆದಕಾರಣ, ಗೂರುಬ್ಬಸ ಬಾಧಿತರು ನೀವಾಗಿದ್ದರೆ ದಟ್ಟವಾದ ಅಥವಾ ಬಿರುಸಾದ ಶೀತಹವೆಯಲ್ಲಿ ಆದಷ್ಟು ವಿರಳವಾಗಿ ಅಡ್ಡಾಡಿರಿ. ಬೆಚ್ಚನೆಯ, ಶುಷ್ಕ ಕೇಂದ್ರ ಶಾಕವಾಹಕದಿಂದ ದೂರವಿರ್ರಿ. ಉಷ್ಣತೆಗಳಲ್ಲಿ ಬದಲಾವಣೆಗಳು ರಾತ್ರಿ ವೇಳೆ ಉಬ್ಬಸವನ್ನು ತಂದರೆ, ಚಳಿಯ ತಿಂಗಳುಗಳಲ್ಲಿ ಶೀತೋಷ್ಣ ನಿಯಂತ್ರಣ ಮಾಪಕವನ್ನು ನಿಮ್ಮ ಕೋಣೆಯಲ್ಲಿಡುವಂತೆ ಪ್ರಯತ್ನಿಸಿರಿ. ತ್ಯಾವವು ಉಬ್ಬಸವನ್ನು ಬರಮಾಡಿದಲ್ಲಿ, ತ್ಯಾವ ನಿಯಂತ್ರಣ ಮಾಪಕವನ್ನು ಬಳಸಿ ನೋಡಿರಿ.

ಭಾವೋದ್ರೇಕ ಒತ್ತರ ಮತ್ತು ದಣಿವು: ಇವುಗಳಲ್ಲೊಂದು ಸಹಾ ಉಬ್ಬಸ ಆಘಾತವನ್ನು ತರಬಹುದು. ಭಾವೋದ್ರೇಕ ಒತ್ತರವನ್ನು ನಾವು ಯಾವಾಗಲೂ ಅಂಕೆಯಲ್ಲಿಡಲಾರೆವು ನಿಜ. ಆದರೆ, ಬೈಬಲ್‌ ತತ್ವಗಳು ಈ ಕ್ಷೇತ್ರದಲ್ಲಿ ಅವರಿಗೆ ನೆರವಾಗುವುದನ್ನು ಅನೇಕ ಉಬ್ಬಸ ರೋಗಿಗಳು ಕಂಡುಕೊಂಡಿದ್ದಾರೆ. ಬೈಬಲು ನಮಗನ್ನುವುದು: “ಶಾಂತ ಹೃದಯವು ದೇಹಕ್ಕೆ ಜೀವಾಧಾರವು.” (ಜ್ಞಾನೋಕ್ತಿ 14:30, ದಿ ಜೆರೂಸಲೆಮ್‌ ಬೈಬಲ್‌) ಅಲ್ಲದೆ, ಪರಿಜ್ಞಾನವುಳ್ಳ ಉಬ್ಬಸ ಬಾಧಿತರು ತಮ್ಮ ದೈಹಿಕ ಸೀಮಿತಗಳ ಅರಿವುಳ್ಳವರಾಗಿರ ಪ್ರಯತ್ನಿಸುತ್ತಾ, ಆಯಾಸಗೊಳ್ಳುವುದರಿಂದ ದೂರವಿರುವರು ಯಾಕೆಂದರೆ ಅದು ಕೂಡಾ ಉಬ್ಬಸದ ಆಕ್ರಮಣವನ್ನು ಬರಿಸುತ್ತದೆ.

ಆಹಾರ: ಆಹಾರದ ಸೂಕ್ಷ್ಮ ಸಂವೇದಿಗಳು ಸಹಾ ಉಬ್ಬಸವನ್ನು ಸುರುಮಾಡಬಹುದು ವಿಶೇಷವಾಗಿ ಮಕ್ಕಳಲ್ಲಿ, ಇಲ್ಲವೇ ಬಾಲ್ಯದಿಂದಲೇ ಉಬ್ಬಸ ರೋಗವಿದ್ದ ವಯಸ್ಕರಲ್ಲಿ. ಸಾಮಾನ್ಯ ಆಹಾರಗಳಾದ ಹಾಲು, ಮೊಟ್ಟೆ ಮತ್ತು ದವಸಧಾನ್ಯಗಳು ಸಹಾ ಸಂದೇಹಾಸ್ಪದವಾಗಿರ ಬಹುದು. ಆದರೆ ಅಪರಾಧಿಯನ್ನು ಹಿಡಿಯಲು, ವಿಶೇಷವಾಗಿ ಸಕ್ಕರೆಯೇ ಮುಂತಾದ ವಿಸ್ತಾರ್ಯವಾಗಿ ಬಳಸಲ್ಪಡುವ ವಸ್ತುವು ಅದಾಗಿದ್ದಲ್ಲಿ, ಬಹಳಷ್ಟು ಪತ್ತೇದಾರಿಕೆ ಮಾಡಬೇಕಾದೀತು. ಮತ್ತು ಒಂದಕ್ಕಿಂತ ಹೆಚ್ಚು ಅಹಾರ ಸಾಮಗ್ರಿಗಳು ಅದರಲ್ಲಿ ಒಳಗೂಡಿರ ಬಹುದೆಂಬದೂ ನಿಶ್ಚಯ. ಮದ್ಯಸಾರ ಪಾನೀಯಗಳು, ವಿಶೇಷವಾಗಿ ಬೀರ್‌ ಮತ್ತು ದ್ರಾಕ್ಷಾ ಮದ್ಯಗಳು ಈ ಖಾಯಿಲೆ ವರ್ಧಕಗಳಾಗಿರಲಾಗಿ, ಪ್ರೌಢ ರೋಗಿಗಳು ಅವನ್ನು ಲಕ್ಷ್ಯಕ್ಕೆ ತರುವಂತೆ ಸೂಚಿಸಲ್ಪಡುತ್ತದೆ.

ವ್ಯಾಯಾಮ: ಕೆಲವು ಸಾರಿ ಉಬ್ಬಸದ ಆಕ್ರಮಣವು ಮಿತಿಮೀರಿದ ದಣಿವಿನಿಂದಲೂ ಸುರುವಾಗುತ್ತದೆ, ಸಾಮಾನ್ಯವಾಗಿ ವ್ಯಾಯಾಮ ಮಾಡಿ ಮುಗಿಸಿದ ಮೇಲೆ ಅದು ಹೊಡೆಯುತ್ತದೆ. ಇದು ನಿಮ್ಮ ಅನುಭವವಾಗಿದ್ದಲ್ಲಿ, ಸ್ಕ್ವಾಷ್‌ ಮುಂತಾದ ಬಿರುಸಿನ ಬಲಪ್ರಯೋಗದ ಆಟಗಳನ್ನು ವಿಸರ್ಜಿಸಿರಿ ಮತ್ತು ಈಜಾಟ ಮತ್ತು ಸೈಕ್‌ಲಿಂಗ್‌ ಮುಂತಾದ ಹೆಚ್ಚು ನಿಧಾನ ಗತಿಯ ವ್ಯಾಯಾಮಗಳನ್ನು ಮಾಡಿರಿ. ಯಾವುದೇ ಪರಿಶ್ರಮದ ಚಟುವಟಿಕೆಯ ಮೊದಲು ಬ್ರಾಂಕೊಡಿಲೇಟರ್‌ (ಶ್ವಾಸ ನಾಳಗಳಲ್ಲಿನ ದಟ್ಟತೆಯನ್ನು ಶಮನ ಮಾಡುವ ಔಷಧಿ) ಉಪಯೋಗಿಸುವುದು ಪ್ರಾಯಶಃ ಸಹಾಯಕಾರಿಯು. ಒಂದುವೇಳೆ ಒಬ್ಬ ವಿದ್ಯುತ್‌ಚಿಕಿತ್ಸಕನು ನಿಮ್ಮ ವ್ಯಾಯಾಮ ಸಹಿಷ್ಣುತೆಯನ್ನು ಹೆಚ್ಚಿಸುವ ಒಂದು ಕಾರ್ಯಕ್ರಮದಿಂದ ನಿಮಗೆ ಸಹಾಯ ಮಾಡ ಶಕ್ತನಾಗಬಹುದು. ಉಸಿರಾಟಕ್ಕೆ ಕೊರತೆಯಾಗದೆ ನೀವು ಹೆಚ್ಚಿನ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ನಿಮಗೆ ಸಾಧ್ಯಮಾಡುವುದು.

ಅಂಟು ರೋಗ: ಹೆಚ್ಚಾಗಿ ಉಸಿರಾಟಕ್ಕೆ ಸಂಬಂಧಿತ ಅಲ್ಪ ಜಾಡ್ಯಗಳಾದ ನೆಗಡಿ ಅಥವಾ ಇನ್‌ಪ್ಲುಯೆಂಜಾ ಮುಂತಾದವುಗಳು ಉಬ್ಬಸದ ಆಕ್ರಮಣವನ್ನು ಉದ್ರೇಕಿಸುವುದು ಇಲ್ಲವೇ ರೋಗ ಲಕ್ಷಣಗಳನ್ನು ಅಧಿಕಗೊಳಿಸುವುದು. ಅಂಟುರೋಗವು ತಗಲಿರುವಾಗ ಉಬ್ಬಸ ಉಪಶಮನದ ಸಾಮಾನ್ಯ ಔಷಧಿಯು ಯಾವಾಗಲೂ ಪರಿಣಾಮಕಾರಿಯಾಗುವುದಿಲ್ಲ.

ಪುಷರೇಣುಗಳೊಂದಿಗೆ ಜೀವಿಸುವುದು: ಉಸಿರಾಟ ಸಂಬಂಧದ ರೋಗವಿರುವವರಿಗೆ ಚಳಿಗಾಲದ ತಿಂಗಳುಗಳು ಅನೇಕ ಸಮಸ್ಯೆಗಳನ್ನು ತರುತ್ತದಾದರೂ ಅನೇಕರು ನಿಯತಕಾಲದ ಉಬ್ಬಸವೆಂದು ಕರೆಯಲ್ಪಡುವದರಿಂದ ಬಾಧೆಪಡುತ್ತಾರೆ. ಬೇಸಗೆಯ ಗಾಳಿಯಲ್ಲಿ ತೇಲಾಡುವ ಸೂಕ್ಷ್ಮಾತಿಸೂಕ್ಷ್ಮ ಪುಷ್ಪ ರೇಣುಗಳು ಉಬ್ಬಸ ಬಾಧಿತರಿಗೆ ಅಪಾರ ಸಂಕಟ ಮತ್ತು ಕಿರಿಕಿರಿಯನ್ನು ತಂದಿವೆ. ಈ ಪುಷ್ಪರೇಣುಗಳ ಮೂಲವನ್ನು ಅಳಿಸಿಬಿಡಲು ಅಶಕ್ಯ ಆದರೂ, ತುಸು ವ್ಯವಹಾರ ಜ್ಞಾನವು ಸಹಾಯವಾದೀತು. ಉದಾಹರಣೆಗೆ, ಪುಷ್ಪರೇಣುಗಳ ಋತುವಿನಲ್ಲಿ, ಆಗಲೇ ಕೊಯ್ದ ಹುಲ್ಲಿನ ಬಯಲಲ್ಲಿ ಹಾಗೂ ಕಾಡುಗುಡ್ಡೆ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿ ಅಡ್ಡಾಡುವದರಿಂದ ದೂರವಿರ್ರಿ ಮತ್ತು ಸಾಧ್ಯವಿದ್ದರೆ, ಪರಿಣಾಮಕಾರಕ ಏರ್‌ ಕಂಡಿಶನ್‌ ಉಪಯೋಗಿಸಿರಿ.

ಅಣಬೆಗಳೊಂದಿಗೆ ಜೀವಿಸುವುದು: ಸಾವಿರಾರು ತರದ ಅಣಬೆಗಳು ಅಥವಾ ನಾಯಿಕೊಡೆಗಳು ನಮ್ಮ ಪರಿಸರದಲ್ಲಿ ನಿವಾಸಿಸಿವೆ. ಅಣಬೆಗಳು ಮತ್ತು ನಾಯಿಕೊಡೆ ರೇಣುಗಳು (ಪುನರುತ್ಪತ್ತಿ ದೇಹಿಗಳು) ಸಸ್ಯ ಅಥವಾ ಪ್ರಾಣಿಜನ್ಯ ವಸ್ತುಗಳ ಮೇಲೆ ಬೆಳೆಯುತ್ತವೆ. ಗೋಧಿ, ಜವೆಗೋಧಿ, ದವಸ, ಹುಲ್ಲು ಮತ್ತು ಎಲೆಗಳ ಮೇಲೂ ಅವು ಹೇರಳವಾಗಿವೆ. ಇವುಗಳಲ್ಲಿ ಕೆಲವು ಮಾತ್ರವೇ ಉಬ್ಬಸ ರೋಗಿಗಳಿಗೆ ಬಾಧಕವೆಂದು ತೋರಿಸಲ್ಪಟ್ಟರೂ ಅಣಬೆರೇಣುಗಳು ಸೂಕ್ಷ್ಮಸಂವೇದಿಗೆ ದೊಡ್ಡ ಕಾರಣವಿರಬಹುದೆಂದು ಒಂದು ನ್ಯೂಜಿಲ್ಯಾಂಡ್‌ ಅಧ್ಯಯನ ತೋರಿಸಿದೆ. ವಾಯುವಾಹ್ಯ ರೇಣುಗಳನ್ನು ನಿರ್ಮೂಲಗೊಳಿಸುವುದು ಅಶಕ್ಯವಾದರೂ, ಕೆಳಗಿನ ವಿಧಾನಗಳು ಸಹಾಯಕಾರಿಯಾಗಬಹುದು:

ಒದ್ದೆಯೂ ಹಳಸೂ ಆದ ತಳಮನೆ ಮತ್ತು ಕಟ್ಟಡಗಳಿಂದ ದೂರವಿರ್ರಿ.

ಎಲೆಗಳನ್ನು ಅಥವಾ ಒಣಹುಲ್ಲನ್ನು ಹಲುಬಬೇಡಿರಿ ಅಥವಾ ಸುಡಬೇಡಿರಿ.

ಯಾವುದೇ ಹಳಸು ವಸ್ತುಗಳನ್ನು ಸೋಂಕು ನಿವಾರಿಸಿರಿ ಅಥವಾ ನಾಶಗೊಳಿಸಿರಿ.

ಮನೆಯೊಳಗೆ ಸಸ್ಯಗಳನ್ನಿಡಬೇಡಿ ಅಥವಾ ತೋಟದಲ್ಲಿ ಮಿಶ್ರಗೊಬ್ಬರವನ್ನು ರಾಶಿ ಮಾಡಿಡಬೇಡಿ.

ಮನೆಯಲ್ಲಿ ಹಳಸು ಹಿಡಿದ ಕ್ಷೇತ್ರಗಳನ್ನು ಶುಚಿಗೊಳಿಸಿರಿ.

ನಿಮ್ಮ ಮಗು ಉಬ್ಬಸ ರೋಗಿಯೋ?

ಹಾಗಿದ್ದರೆ, ಅವನಿಗೆ ನಿಮ್ಮ ಬೆಂಬಲ ಬೇಕು. ನೀವು ಮತ್ತು ಅವನ ಶಿಕ್ಷಕರು ಅವನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದನ್ನು ನಿಭಾಯಿಸುವರೇ ಸಹಾಯ ಕೊಡಬೇಕು. ಅವನಿಂದ ಆಗದಿರುವಷ್ಟು ಕೆಲಸವನ್ನು ಮಾಡಲು ಮಗುವನ್ನು ದೂಡಬಾರದು ಮಾತ್ರವಲ್ಲ, ಉಬ್ಬಸದ ನೆವನದಿಂದಾಗಿ ತನಗೆ ಹಿತಕರವಾದದ್ದನ್ನೂ ಮಾಡದೆ ಇರುವಂತೆಯೂ ಅವನನ್ನು ಬಿಡಬಾರದು.

ಅವನ ಶಾರೀರಿಕ ಚಟುವಟಿಕೆಗಳು ಸ್ಪರ್ಧಾತ್ಮಕವಾಗಿರದಿರುವುದು ಒಳ್ಳೆಯದು, ಆದರೂ ಹೆಚ್ಚಿನ ಮಕ್ಕಳು ರೋಗ ಲಕ್ಷಣವಿರದಾಗ ಹೆಚ್ಚಿನ ಆಟಗಳನ್ನು ಆಡಶಕ್ತರು. ಆದರೂ, ಕೆಟ್ಟ ಉಬ್ಬಸವಿರುವ ಮಗುವು ಕೇವಲ ಸೀಮಿತ ಚಟುವಟಿಕೆಯನ್ನು ಆನಂದಿಸಶಕ್ತವಾಗಿದೆ ಮತ್ತು ಅವನು ತೀರಾ ಹೆಚ್ಚನ್ನು ಪ್ರಯತ್ನಿಸುವರೇ ದೂಡದಂತೆ ಪ್ರೌಢರು ಜಾಗ್ರತೆ ವಹಿಸಬೇಕು. ಔಷಧಿಯನ್ನು ಬುದ್ಧಿವಂತಿಗೆಯಿಂದ ಪ್ರಯೋಗಿಸುವಿಕೆಯು ಅವನನ್ನು ಶಾರೀರಿಕ ವ್ಯಾಯಾಮವೇ ಮುಂತಾದ ಕ್ರಮದ ಚಟುವಟಿಕೆಯಲ್ಲಿ ಆನಂದಿಸುವಂತೆ ನೆರವಾಗಬಹುದು ಮತ್ತು ಬ್ರೊಂಕೊಡಿಲೇಟರ್‌ನ್ನು ಉಪಯೋಗಿಸುವ ವಿಧಾನವು ಶಿಕ್ಷಕನಿಗೆ ತಿಳಿದಿರಬೇಕು.

ಕೆಲವು ಮಕ್ಕಳು ಉಬ್ಬಸದಿಂದ ಎಷ್ಟು ಉಗ್ರವಾಗಿ ಬಾಧಿಸಲ್ಪಡುತ್ತಾರೆಂದರೆ ಅವರಿಗೆ ಉಸಿರಾಟ ಸದಾ ಕಷ್ಟಕರವಾಗುತ್ತದೆ ಮತ್ತು ಅಗಿಂದಾಗ್ಯೆ ಗೊರಗುಟ್ಟುತ್ತಾ ಇರುತ್ತಾರೆ. ಅಂಥ ಮಕ್ಕಳು ಹೆಚ್ಚಾಗಿ ಕುಗ್ಗು ಮತ್ತು ಒತ್ತರವನ್ನು ಅನುಭವಿಸುತ್ತಾರೆ ಮತ್ತು ಅವರ ಹೆತ್ತವರು ಮತ್ತು ಶಿಕ್ಷಕರು ಅವರ ಬಗ್ಗೆ ತುಂಬಾ ಚಿಂತಿಸುತ್ತಾರೆ. ಆ ಮಕ್ಕಳು ಆಗಿಂದಾಗ್ಯೆ ಶಾಲೆಗೆ ತಪ್ಪುತ್ತಾರೆ ಮತ್ತು ಆಟಗಳಲ್ಲಿ ಸೇರಲು ಅಶಕ್ತರಾಗಬಹುದು.

ಅಂಥ ಮಗುವನ್ನು ಹೆತ್ತವರು ತೀರಾ ಹೆಚ್ಚು ರಕ್ಷಣೆಮಾಡ ಬಯಸಬಹುದು. ಸದಾ ಬಿಗುಪು ಮತ್ತು ಜಗಳಗಳಿರುವ ಮನೆಯಿಂದ ಬರುವವನಾದರೆ ಅವನಿಗೆ, ಅತಿ ಹೆಚ್ಚಾಗಿ ಬೇಕಿರುವ ಪ್ರೀತಿ, ಬೆಂಬಲ, ತಿಳುವಳಿಕೆ ಮತ್ತು ಪ್ರೋತ್ಸಾಹನೆಯು ಸಿಕ್ಕದೆ ಹೋದೀತು. ಉಬ್ಬಸದ ಕಡೆಗೆ ಒಂದು ಹಿತಕರವಾದ ಆಶಾಯುಕ್ತ ಭಾವವನ್ನು ಸ್ವೀಕರಿಸುವ ಹೆತ್ತವರು ಮಗುವಿನ ಚಿಂತೆಯನ್ನು ಇಳಿಸಲು ನೆರವಾಗುವರು, ಆ ಖಾಯಿಲೆಯ ತೀವ್ರತೆಯನ್ನು ಕಡಿಮೆಗೊಳಿಸುವರು.

ಯಾರಿಗಾದರೂ ಉಬ್ಬಸ ಹೊಡೆದಾಗ . . .

ಅವನನ್ನು ಒಂದು ಶಾಂತ ಸ್ಥಳಕ್ಕೆ ಸರಿಸಿರಿ ಮತ್ತು ಧೈರ್ಯಹೇಳಿರಿ. ಉಬ್ಬಸ ಹೊಡೆದಾಗ ಅವನು ಹೆಚ್ಚಾಗಿ ಅಧಿಕ ಆರಾಮವೆನಿಸುವ ರೀತಿಯಲ್ಲಿ, ಅಂದರೆ ಮುಂದಕ್ಕೆ ಬಾಗಿ ನಿಲ್ಲಬಹುದು ಅಥವಾ ಕೂಡ್ರಬಹುದು. ಮತ್ತು ಅವನು ತನ್ನ ಬ್ರೊಂಕೊಡಿಲೇಟರ್‌ನ್ನು ಕೂಡಲೇ ಉಪಯೋಗಿಸಬೇಕು. ಆ ಬ್ರೊಂಕೊಡಿಲೇಟರ್‌ ಒಂದು ಸೇದುವ ಸಲಕರಣೆಯಾಗಿದ್ದರೆ ಅದು ತೀವ್ರವಾಗಿ ಕಾರ್ಯ ನಡಿಸುವುದು, ಆದ್ದರಿಂದ, ಬಾಯಿಂದ ಸೇವಿಸುವ ಔಷಧಿಗಿಂತ ಹೆಚ್ಚು ಪರಿಣಾಮಕಾರಿಯು. ಉಬ್ಬಸ ಹೊಡೆತ ಉಗ್ರವಾಗಿದ್ದಲ್ಲಿ—ವಿಶೇಷವಾಗಿ ಬಾಧಿತನು ಸರಿಯಾಗಿ ಮಾತಾಡಲಶಕ್ತನಾಗಿದ್ದರೆ— ಅವನನ್ನು ಕೂಡಲೇ ಡಾಕ್ಟರರ ಹತ್ತಿರ ಒಯ್ಯಬೇಕು. ಅದಲ್ಲದೆ, ರೋಗಿಯು ಬಹಳವಾಗಿ ತೇಕುತ್ತಾ ಕಂಪಿಸುತ್ತಾ ಇರುವುದರಿಂದ ತುಂಬಾ ತ್ಯಾವವನ್ನು ಕಳಕೊಳ್ಳುತ್ತಾನೆ. ಆದ್ದರಿಂದ, ತುಂಬಾ ದ್ರವವನ್ನು ಕುಡಿಯಲು ಕೊಡಿರಿ.

ಉಬ್ಬಸಕ್ಕೆ ಚಿಕಿತ್ಸೆ

ಫಿಜಿಯೊಥೆರಪಿ ಉಬ್ಬಸ ರೋಗಿಗೆ ಒಂದು ಮಹತ್ವದ ಸಹಾಯಕವಾಗಿದೆ, ವಿಶೇಷವಾಗಿ ಸರಿಯಾಗಿ ಉಸಿರಾಡುವುದು ಹೇಗೆ (ವಿಭಾಜಕಾಂಗ—DIAPHRAGM—ಬಳಸಿ) ಮತ್ತು ಉಸಿರೆಳೆಯುವಿಕೆಯನ್ನು ನೀಗಿಸುವುದು ಹೇಗೆಂದು ತೋರಿಸುವುದರಲ್ಲಿ. ಉಬ್ಬಸವನ್ನು ಅಂಕೆಯಲ್ಲಿಡುವಂತೆ ಸಹಾಯಕಾರಿಯಾದ ವಿರಾಮ, ಸರಿಯಾದ ನಿಲುವು ಮತ್ತು ವ್ಯಾಯಾಮಗಳನ್ನು ಸಹಾ ಚಿಕಿತ್ಸಕನು ಕಲಿಸಶಕ್ತನು. ಚಿಕಿತ್ಸೆಗಳು ಬೇರೆ ಬೇರೆ ಇವೆ. ಪ್ರತಿಯೊಬ್ಬನ ವ್ಯಕ್ತಿಪರ ಸಂದರ್ಭದಲ್ಲಿ ಯಾವ ಚಿಕಿತ್ಸೆಯು ಉತ್ತಮವೆಂದು ಸೂಚಿಸಲು ಸಾಮಾನ್ಯವಾಗಿ ಡಾಕ್ಟರನು ಅತ್ಯಂತ ಯೋಗ್ಯತೆ ಪಡೆದವನು.

ಚಿಕಿತ್ಸೆಯಲ್ಲಿ ಸೋಡಿಯಂ ಕ್ರೊಮೊಲಿನ್‌ ಮತ್ತು ಸ್ಟೆರೋಯ್ಡ್ಸ್‌ ಹಾಗೂ ಕೆಲವಾರು ತರದ ಬ್ರೊಂಕೊಡಿಲೇಟರ್ಸ್‌ ಸೇರಿರುತ್ತವೆ. ಔಷದ ದ್ರವ್ಯಗಳ ಪ್ರಯೋಗದಿಂದಾಗಿ ಅಡ್ಡ ಪರಿಣಾಮಗಳು ಸಂಭವನೀಯ. ಬೇರೆ ಔಷಧೋಪಚಾರವನ್ನು ಶಿಫಾರಸು ಮಾಡಲು ಡಾಕ್ಟರರು ಶಕ್ತರಾಗಬಹುದು.

ಉಬ್ಬಸವು ಒಂದು ಸಂಕೀರ್ಣ ರೋಗ. ಸಂಬಂಧಿಕರು ಮತ್ತು ಮಿತ್ರರು ಯಾವುದೇ ಸಹಾಯ ನೀಡ ಬಯಸುವುದಾದರೆ, ಅದನ್ನು ಅರ್ಥಮಾಡಿಕೊಳ್ಳಬೇಕು. ‘ನೀನು ಅದರ ಕುರಿತು ಚಿಂತಿಸಬೇಡ’ ಅಥವಾ ‘ನನಗೆ ನೀನು ತೀರಾ ಸೌಖ್ಯ ಕಾಣುತ್ತೀ’ ಎಂಬ ಹೇಳಿಕೆಯನ್ನು ವಿಸರ್ಜಿಸಿರಿ. ತಮ್ಮ ಬೇಗುದಿಯನ್ನು ಅರ್ಥಮಾಡಿಕೊಳ್ಳಲು ಕಲಿಯುವ ಉಬ್ಬಸ ಬಾಧಿತರು, ದೇವರ ನೂತನ ಲೋಕದಲ್ಲಿ ಎಲ್ಲಾ ಬೇನೆಗಳು ಅಳಿಸಿಹೋಗುವ ಮೊದಲೇ, ಉಬ್ಬಸದ ಆಕ್ರಮಣವನ್ನು ಎದುರಿಸಲು ತಮ್ಮನ್ನು ಚೆನ್ನಾಗಿ ತಯಾರಿಸಿಕೊಳ್ಳ ಸಾಧ್ಯವಿದೆ. ತಮ್ಮನ್ನು ಕಷ್ಟಪಡಿಸುವ ವಿಷಯಗಳಿಂದ ದೂರವಿರಲು ಚೆನ್ನಾಗಿ ಸನ್ನದ್ಧರಾಗುವ ಮೂಲಕ ಮತ್ತು ತಮ್ಮ ಒತ್ತರವನ್ನು, ಚಿಂತೆಯನ್ನು ಮತ್ತು ಅಸಮಾಧಾನವನ್ನು ಬಹಳವಾಗಿ ಕಡಿಮೆ ಮಾಡುವ ವಿಧಾನವನ್ನು ತಿಳಿದದಕ್ಕಾಗಿ ಸಂತೈಸುವಿಕೆಯನ್ನು ಪಡೆಯಬಹುದು. (ಯೆಶಾಯ 33:22, 24)—ಕೊಡುಗೆ ಒಬ್ಬ ಉಬ್ಬಸ ಬಾಧಿತನಿಂದ. (g90 3/22)

[ಅಧ್ಯಯನ ಪ್ರಶ್ನೆಗಳು]

a ಕೆಲವು ಸಾರಿ ಉಬ್ಬಸ ರೋಗಿ ಈ ಮನೆಗೆಲಸಗಳನ್ನು ಮಾಡಲು ತೀರಾ ಅಸ್ವಸ್ಥನಿರಬಹುದು. ಸಹಾಯಕಾರಿ ಸಲಹೆಗಳಿಗಾಗಿ, ದಯವಿಟ್ಟು ಫೆಬ್ರವರಿ 22, 1982ರ ಅವೇಕ್‌!ನ “ಎ ಕ್ಲೀನ್‌ ಹೋಮ್‌ ಡಿಸ್ಪೈಟ್‌ ಇಲ್‌ ಹೆಲ್ತ್‌” ಲೇಖನ ನೋಡಿ.

[ಪುಟ 17 ರಲ್ಲಿರುವಚಿತ್ರ]

(For fully formatted text, see publication)

ಸ್ನಾಯು ವಿರಾಮ

ಲೋಳೆ

ಅನಿರ್ಬಂಧಿತ ವಾಯುಮಾರ್ಗ

ಯಥಾಸ್ಥಿತಿ

ಸ್ನಾಯು ಸಂಕುಚಿತ

ಉದ್ರೇಕಿತ ಲೋಳೆ

ನಿರ್ಬಂಧಿತ ವಾಯುಮಾರ್ಗ

ಶ್ಲೇಷ್ಮ

ಉಬ್ಬಸ ಹೊಡೆತ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ