ಜಗತ್ತನ್ನು ಗಮನಿಸುವುದು
ಕಾಲ್ಚೆಂಡಾಟವನ್ನು ವೈಪರೀತ್ಯಕ್ಕೆ ಕೊಂಡುಹೋಗುವುದು
ಇಂಗ್ಲೆಂಡ್‌ನಲ್ಲಿ, ಕಾಲ್ಚೆಂಡಾಟದಲ್ಲಿ ಆಸಕ್ತರಾಗಿರುವ ಕೆಲವರು ಅವರ ಭಕ್ತಿಯನ್ನು ಅಸಾಮಾನ್ಯವಾದ ವೈಪರೀತ್ಯಕ್ಕೆ ಕೊಂಡೊಯ್ದಿದ್ದಾರೆ: ತಾವು ಸತ್ತ ಬಳಿಕ, ತಮ್ಮ ಭಸ್ಮವನ್ನು (ಹೆಣದ ಬೂದಿ) ತಮ್ಮ ಅಚ್ಚುಮೆಚ್ಚಿನ ತಂಡದ, ಆಟದ ಮೈದಾನದಲ್ಲಿ ಹರಡುವಂತೆ ಅವರು ಕೇಳಿಕೊಂಡಿದ್ದಾರೆ. ಪ್ರತಿ ವರ್ಷ, ಒಂದು ಜನಪ್ರಿಯ ತಂಡವು ಅಂತಹ ಬಿನ್ನಹಗಳನ್ನು ಸುಮಾರು 25ರಷ್ಟು ಸಂಖ್ಯೆಯಲ್ಲಿ ಪಡೆಯುತ್ತದೆ. ಈ ಪದ್ಧತಿಯು ಎಷ್ಟೊಂದು ವ್ಯಾಪಕವಾಗಿದೆಯೆಂದರೆ, ಇಂಗ್ಲಿಷ್ ಫುಟ್‌ಬಾಲ್ ಅಸೋಸಿಏಷನ್, ಅಂತಹ ಎಷ್ಟು ಮಾನವ ಅವಶೇಷಗಳು ಕೂಡಿಡಲ್ಪಡಬೇಕು ಎಂಬುದರ ಕುರಿತು, ಕಾಲ್ಚೆಂಡಾಟದ ಕ್ಲಬ್‌ಗಳಿಗೆ ಒಂದು ಎಚ್ಚರಿಕೆಯನ್ನು ಹೊರಡಿಸಬೇಕಾಯಿತು. ದ ಮೆಡಿಕಲ್ ಪೋಸ್ಟ್‌ಗನುಸಾರ, ಅವರ ಸಲಹೆಯು ಈ ರೀತಿಯಲ್ಲಿ ಒಳಗೊಂಡಿದೆ: “ಎಲ್ಲಾ ಭಸ್ಮಗಳನ್ನು ಚಿಮುಕಿಸುವ ಅಗತ್ಯವಿಲ್ಲ. ಕೇವಲ ಸಣ್ಣ ಭಾಗವನ್ನು ಮಾತ್ರ ಎರಚಸಾಧ್ಯವಿದೆ. ಒಂದು ದೊಡ್ಡ ರಾಶಿಯು ಹುಲ್ಲನ್ನು ನಾಶಮಾಡಬಲ್ಲದು. . . . ಲಘುವಾಗಿ ಮತ್ತು ಸಮಾನವಾಗಿ ಹರಡುವಂತೆ ನಿಶ್ಚಿತ ಪಡಿಸಲಿಕ್ಕಾಗಿ ಭಸ್ಮಗಳನ್ನು ಒಂದು ಪೊರಕೆಯಿಂದ ಬಳಿಯಿರಿ.” (g94 9⁄22)
ಒಂದು “ಪಿಶಾಚ” ಕಮ್ಮಿ
ಟೋಕಿಯೊದ ವಿವಾಹಿತ ದಂಪತಿಗಳು ತಮ್ಮ ನವಜಾತ ಶಿಶುವಿಗೆ ಆಕುಮ—ಇದರ ಅರ್ಥ “ಪಿಶಾಚ”—ಎಂದು ಹೆಸರಿಟ್ಟರು. “ಎಂತಹ ಒಂದು ಪರಿಣಾಮ ಅದಕ್ಕಿದೆಯೆಂದರೆ, ಒಮ್ಮೆ ನೀವು ಅದನ್ನು ಕೇಳುವಲ್ಲಿ, ನೀವು ಅದನ್ನು ಎಂದಿಗೂ ಮರೆಯಲಾರಿರಿ” ಎಂದು ತಂದೆ ಹೇಳಿದನು. “ನನ್ನ ಮಗನು ದೊಡ್ಡವನಾದಾಗ, ಅನೇಕ ಜನರನ್ನು ಸಂಧಿಸುವಂತೆ ಅವನನ್ನು ಶಕ್ತನನ್ನಾಗಿ ಮಾಡುವ ಒಂದು ಹೆಸರು ಅದಾಗಿದೆ.” ಆರಂಭದಲ್ಲಿ ಸ್ಥಳೀಯ ಅಧಿಕಾರಿಗಳು ಹೆಸರನ್ನು ಅಧಿಕೃತವಾಗಿ ದಾಖಲುಮಾಡಲು ಒಪ್ಪಿಕೊಂಡರು, ಆದರೆ ತದನಂತರ ಅದನ್ನು ಅನಂಗೀಕೃತವೆಂದು ಮತ್ತು ಹೆತ್ತವರ ಹಕ್ಕುಗಳ ಒಂದು ದುರುಪಯೋಗವೆಂದು ಹೇಳುತ್ತಾ, ಅದು ಪರಿಹಾಸ್ಯ ಮತ್ತು ಪಕ್ಷಪಾತವನ್ನು ಆಹ್ವಾನಿಸಬಹುದೆಂದು, ಅದನ್ನು ಹೊಡೆದುಹಾಕಿದರು. ಕೋರ್ಟುಗಳಲ್ಲಿ ತಿಂಗಳುಗಟ್ಟಲೆ ಹೋರಾಡಿದ ಬಳಿಕ, ಹೆತ್ತವರು ಸೋಲೊಪ್ಪಿಕೊಂಡರು ಮತ್ತು ಇನ್ನೂ ಹೆಚ್ಚಿನ ಅಡಚಣೆಯಿಲ್ಲದೆ ತಮ್ಮ ದೈನಂದಿನ ಜೀವಿತವನ್ನು ಮುಂದುವರಿಸಲಿಕ್ಕಾಗಿ ಹಾಗೂ ಹುಡುಗನನ್ನು ಅಧಿಕೃತವಾಗಿ ಅನಾಮಧೇಯನನ್ನಾಗಿ ಬಿಡದಿರಲಿಕ್ಕಾಗಿ, ತಮ್ಮ ಮಗನನ್ನು ಬೇರೊಂದು ಹೆಸರಿನ ಕೆಳಗೆ ದಾಖಲಿಸುತ್ತೇವೆಂದು ಅವರು ಹೇಳಿದರು. ಆದಾಗ್ಯೂ, ಅದು ಮನೆಯಲ್ಲಿ ಸನ್ನಿವೇಶಗಳನ್ನು ಬದಲಾಯಿಸಲಿಲ್ಲ. “ನಾವು ಅವನನ್ನು ಆಕುಮ ಎಂದು ಅವನ ಸರ್ವಸಾಮಾನ್ಯವಾದ ಹೆಸರಿನಿಂದ ಕರೆಯುವುದನ್ನು ಮುಂದುವರಿಸುವೆವು” ಎಂದು ತಂದೆ ಹೇಳಿದನು, ಮತ್ತು ಮಗುವು ಪ್ರತಿಕ್ರಿಯಿಸುವಂತಹ ಹೆಸರು ಅದೇ ಆಗಿದೆ. (g94 9⁄22)
ಕೋಪ ಮತ್ತು ಹೃದಯಾಘಾತಗಳು
“ಹೃದ್ರೋಗವಿರುವ ಜನರು, ತಾವು ಕೋಪಗೊಂಡಾಗ ಹೃದಯಾಘಾತಗಳ ತಮ್ಮ ಅಪಾಯವನ್ನು ಇಮ್ಮಡಿಗಿಂತಲೂ ಅಧಿಕಗೊಳಿಸಿಕೊಳ್ಳುತ್ತಾರೆ, ಮತ್ತು ಆ ಅಪಾಯವು ಎರಡು ತಾಸುಗಳ ವರೆಗೆ ಉಳಿಯುತ್ತದೆ” ಎಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ. ಹೃದಯಬಡಿತದ ಪ್ರಮಾಣದಲ್ಲಿ ಉನ್ನತಿ, ಅಧಿಕ ರಕ್ತದ ಒತ್ತಡದಲ್ಲಿ ಹೆಚ್ಚಿಕೆ, ಮತ್ತು ಅಪಧಮನಿಗಳ ಮಾಂದ್ಯ ಹಾಗೂ ಕೋಪದ ನಡುವೆ ಒಂದು ಸಂಬಂಧವನ್ನು ಹಿಂದಿನ ಅಧ್ಯಯನಗಳು ತೋರಿಸಿರುವಾಗ, ಕೋಪವು ಕೂಡಲೆ ಒಂದು ಹೃದಯಾಘಾತಕ್ಕೆ ಮುನ್ನಡಿಸಬಲ್ಲದೆಂಬ ವೈಜ್ಞಾನಿಕ ಮಾಹಿತಿಯನ್ನು ಪ್ರಸ್ತುತಪಡಿಸುವುದರಲ್ಲಿ ಈ ಹೊಸ ಅಧ್ಯಯನವು ಮೊದಲನೆಯದಾಗಿದೆ. ಭಾವನಾತ್ಮಕ ಘರ್ಷಣೆಗಳನ್ನು ಎದುರಿಸುತ್ತಿರುವಾಗ ಶಾಂತರಾಗಿ ಉಳಿಯಲು ಪ್ರಯತ್ನಿಸುವ ಮೂಲಕ ಈ ಅಪಾಯವನ್ನು ಕಡಿಮೆಗೊಳಿಸಬಹುದು, ಎಂದು ಅಧ್ಯಯನದ ಮುಖ್ಯ ಲೇಖಕರಾದ ಡಾ. ಮರಿ ಮಿಟಲ್‌ಮೆನ್ ಹೇಳಿದರು. “ಹೃದಯಾಘಾತಗಳ ಅಪಾಯವನ್ನು ಕಡಿಮೆಗೊಳಿಸುವ, ಆ್ಯಸ್ಪಿರಿನ್ ತೆಗೆದುಕೊಳ್ಳುವ ಜನರು, ಕೋಪೋದ್ರೇಕದ ಪರಿಣಾಮಗಳಿಂದ ಸ್ವಲ್ಪ ಮಟ್ಟಿಗೆ ಸಂರಕ್ಷಿಸಲ್ಪಟ್ಟಿದ್ದರು ಎಂದೂ ಸಂಶೋಧಕರು ಗಮನಿಸಿದರು” ಎಂದು ಲೇಖನವು ಹೇಳಿತ್ತು, ಬಹುಶಃ ಅಪಧಮನಿಗಳ ಹೆಪ್ಪುಗಟ್ಟಿಸುವಿಕೆಯನ್ನು ಮತ್ತು ಅಡಚಣೆಯನ್ನು ಉಂಟುಮಾಡುವ ಪೇಟ್ಲೆಟ್ಲ್‌ಗಳ ಸಾಮರ್ಥ್ಯವನ್ನು ಆ್ಯಸ್ಪಿರಿನ್ ಕಡಿಮೆಗೊಳಿಸುತ್ತದೆ. ಆದುದರಿಂದ ಆ ಕೋಪವು ಪೇಟ್ಲೆಟ್ಲ್‌ಗಳ ಮೇಲೆ ಪರಿಣಾಮ ಬೀರಬಹುದು, ಎಂದು ಮಿಟಲ್‌ಮೆನ್ ಹೇಳಿದರು. (g94 9⁄22)
ನಿದ್ರೆ ಮತ್ತು ಸಂಪರ್ಕಮಸೂರಗಳು ಹೊಂದಿಕೊಳ್ಳುವುದಿಲ್ಲ
ಇತ್ತೀಚಿಗಿನ ಒಂದು ಅಧ್ಯಯನಕ್ಕನುಸಾರ, ಮಲಗಿರುವಾಗ ತಮ್ಮ ಸಂಪರ್ಕಮಸೂರ (ಕಾಂಟ್ಯಾಕ್ಟ್ ಲೆನ್ಸ್)ಗಳನ್ನು ಕ್ರಮವಾಗಿ ಹಾಕಿಕೊಳ್ಳುವ ಜನರು, ಹಾಕಿಕೊಳ್ಳದವರಿಗಿಂತ ಎಂಟು ಬಾರಿ ಹೆಚ್ಚು ಕಣ್ಣಿನ ಸೋಂಕನ್ನು ವಿಕಸಿಸಿಕೊಳ್ಳುವುದು ಸಂಭವನೀಯ. ಸಂಶೋಧಕರು ಕಂಡುಕೊಂಡದ್ದೇನಂದರೆ, ರಾತ್ರಿ ಮಸೂರಗಳನ್ನು ಹಾಕಿಕೊಳ್ಳುವುದರ ಅತಿಯಾದ ಅಪಾಯದ ವಿರುದ್ಧ, ಮಸೂರ-ರಕ್ಷಣೆಯ ಆರೋಗ್ಯ ಸೂತ್ರವು ಸಹ ಸಂರಕ್ಷಿಸುವುದಿಲ್ಲ, ಎಂದು ಇಂಟರ್‌ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್ ವರದಿಸುತ್ತದೆ. ಮಸೂರದ ನಮೂನೆಯ ಹೊರತು, ರಾತ್ರಿಯ ಧರಿಸುವಿಕೆಯು ಕಾರ್ನಿಯ, ಕಣ್ಣಿನ ಸ್ಪಷ್ಟವಾಗಿದ ಹೊರ ಪದರವು, ಜೀವಾಣುಗಳು ಮತ್ತು ಬ್ಯಾಕ್ಟೀರಿಯಗಳಿಂದ ಸೋಂಕಿತವಾಗುವಂತೆ ಮಾಡಬಲ್ಲದು. ಅದನ್ನು ಧರಿಸುವವರು, ಮಲಗುವುದಕ್ಕೆ ಮೊದಲು ಸಂಪರ್ಕಮಸೂರಗಳನ್ನು ತೆಗೆದಿಡುವ ಮೂಲಕ, ಕಾರ್ನಿಯ ಉರಿಯೂತದ ಸಂಭವನೀಯತೆಯನ್ನು ಸುಮಾರು 74 ಪ್ರತಿಶತದಷ್ಟು ಕಡಿಮೆಗೊಳಿಸಬಲ್ಲರು. (g94 9⁄22)
ಪ್ರದರ್ಶನವೊ ಅಥವಾ ಆರೋಗ್ಯವೊ?
“ಸಾಮಾನ್ಯವಾಗಿ, ಉತ್ತಮ ದರ್ಜೆಯ ಕ್ರೀಡೆಗಳು ತಮ್ಮ ಕ್ರೀಡಾಪಟುಗಳ ಪ್ರದರ್ಶನವನ್ನು ಪ್ರಗತಿಗೊಳಿಸುವುದರೊಂದಿಗೆ ಸಂಪೂರ್ಣವಾಗಿ ಸಂಬಂಧಿಸಿರುತ್ತವೆ—ತಮ್ಮ ಆರೋಗ್ಯವನ್ನು ಪ್ರಗತಿಗೊಳಿಸಲಿಕ್ಕಾಗಿ ಸಂಬಂಧಿಸಿರುವುದು ಅಪರೂಪ” ಎಂದು ವೇಜಾದಲ್ಲಿ ಉದ್ಧರಿಸಲ್ಪಡುವಂತೆ ಅಂಗ ವಿಕಾರಗಳನ್ನು ಸರಿಪಡಿಸುವ ವೈದ್ಯರಾದ ವಿಕ್ಟರ್ ಮಾಟ್ಸುಡೊ ಹೇಳುತ್ತಾರೆ. “ತನ್ನ ಆರೋಗ್ಯವನ್ನು ಉತ್ತಮಗೊಳಿಸಲಿಕ್ಕಾಗಿ ಯಾರೊಬ್ಬನೂ ಕ್ರೀಡಾಪಟುವಾಗಬೇಕಾದ ಅಗತ್ಯವಿಲ್ಲ.” ವಾಸ್ತವವಾಗಿ, ಡಾ. ಮಾಟ್ಸುಡೊ ಹೇಳುವುದೇನಂದರೆ, “ಮಿತಿಮೀರಿ ವ್ಯಾಯಾಮವನ್ನು ಮಾಡುವ ಒಬ್ಬನು, ವ್ಯಾಯಾಮವನ್ನು ಮಾಡದಿರುವ ವ್ಯಕ್ತಿಗಿಂತಲೂ ಬೇಗನೆ ಸಾಯುತ್ತಾನೆ.” ಅವರು ಕೂಡಿಸಿದ್ದು: “ಸೂಕ್ತವಾದ ವ್ಯಾಯಾಮವು ಕಷ್ಟಕರವಾದದ್ದೂ, ಬೆವರು ಮತ್ತು ಕಷ್ಟಾನುಭವವನ್ನು ಉಂಟುಮಾಡುವಂತಹದ್ದೂ ಆಗಿರಬೇಕೆಂದು ಅನೇಕ ಜನರು ಇನ್ನೂ ಅಭಿಪ್ರಯಿಸುತ್ತಾರೆ. ಇದು ಸತ್ಯವಲ್ಲ. ಸೂಕ್ತವಾದ ವ್ಯಾಯಾಮವು ಮಿತವಾದ ಗಾಢತೆಯುಳ್ಳದ್ದಾಗಿದ್ದು, ವೇದನೆಯನ್ನಾಗಲಿ ಅಹಿತವನ್ನಾಗಲಿ ಸೆಡೆತವನ್ನಾಗಲಿ ಉಂಟುಮಾಡುವುದಿಲ್ಲ. . . . ವ್ಯಾಯಾಮ ಮಾಡದಿರುವ ಮತ್ತು ಒಳ್ಳೆಯ ಶಾರೀರಿಕ ಸ್ಥಿತಿಯನ್ನು ಪಡೆದುಕೊಳ್ಳಲಿಕ್ಕಾಗಿ ಕೆಲಸಮಾಡಲಾರಂಭಿಸಲು ಬಯಸುವ ಒಬ್ಬರಿಗೆ, ಕಾಲ್ನಡಗೆಯು ಪ್ರಥಮವಾಗಿ ಶಿಫಾರಸ್ಸು ಮಾಡಲ್ಪಡುತ್ತದೆ.” ವಾರಕ್ಕೊಮ್ಮೆ ಮೂರು ಅಥವಾ ನಾಲ್ಕು ಬಾರಿ, ಅರ್ಧ ತಾಸಿನಷ್ಟು ನಡೆಯುವ ವ್ಯಕ್ತಿಯೊಬ್ಬನ ಸಾಯುವ ಸಂಭವನೀಯತೆಯು, ವ್ಯಾಯಾಮ ಮಾಡದಿರುವ ಒಬ್ಬ ವ್ಯಕ್ತಿಗಿಂತಲೂ 15 ಪ್ರತಿಶತ ಕಡಿಮೆಯಿದೆ. ಕಾಲ್ನಡಗೆಯು ಸಮತಲವಾದ ನೆಲದ ಮೇಲೆ ಮತ್ತು ಒಬ್ಬನು ಸುಲಭವಾಗಿ ಉಸಿರಾಡುವಂತೆ ಮತ್ತು ಯಾರೊಂದಿಗಾದರೂ ಮಾತಾಡುವಂತೆ ಅನುಮತಿಸುವಂತಹ ಒಂದು ಸ್ಥಳದಲ್ಲಿ ಮಾಡಲ್ಪಡಬೇಕು ಎಂದು ಡಾ. ಮಾಟ್ಸುಡೊ ಸಲಹೆ ನೀಡುತ್ತಾರೆ. (g94 9⁄22)