ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 7/8 ಪು. 28
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಂಸರ್ಗ ಸಮಸ್ಯೆಗಳು
  • ಬಡವರಲ್ಲಿ ಅತಿ ಬಡವರು
  • ನಡೆಯುವದು ಆರೋಗ್ಯಕ್ಕೆ ಒಳ್ಳೆಯದು
  • ಜಗತ್ತಿನ ಅತಿ ಉದ್ದವಾದ ರೈಲು
  • ಅಪಾಯಕಾರಿ ಕೆಲಸ
  • ಕೊಬ್ಬಿನ ತ್ವರಿತ ಆಹಾರ
  • ರಕ್ತಪೂರಣಗಳು—ಅವೆಷ್ಟು ಅಪಾಯರಹಿತ?
    ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು ಬ್ರೋಷರ್‌
  • ಜೀವದ ದಾನವೋ ಅಥವಾ ಸಾವಿನ ಚುಂಬನವೋ?
    ಎಚ್ಚರ!—1991
  • ಬೂದಿಬಣ್ಣದ ಕುದುರೆಯು ಸವಾರಿಗೈಯುತ್ತಾ ಇದೆ
    ಎಚ್ಚರ!—1990
  • ಏಯ್ಡ್ಸ್‌ ಹದಿಹರೆಯದವರಿಗೆ ಆಪತ್ಕಾಲ
    ಎಚ್ಚರ!—1992
ಇನ್ನಷ್ಟು
ಎಚ್ಚರ!—1991
g91 7/8 ಪು. 28

ಜಗತ್ತನ್ನು ಗಮನಿಸುವುದು

ಸಂಸರ್ಗ ಸಮಸ್ಯೆಗಳು

ಜಪಾನಿನಲ್ಲಿ ಮಕ್ಕಳಿಗಾಗಿ ಒಂದು ಟೆಲಿಫೋನ್‌ ಸಲಹೆ ಖಾತೆಯಾಗಿರುವ, ಡಯಲ್‌ ಸರ್ವಿಸ್‌ ಹೇಳುವದೇನಂದರೆ, ಇತ್ತೀಚೆಗೆ, ಯಾವ ತುರ್ತಾದ ಸಮಸ್ಯೆಗಳಿಲ್ಲದ ಮತ್ತು ಬುದ್ಧಿವಾದ ಬೇಡವಾಗಿರುವ ಹೆಚ್ಚಿನ ಮಕ್ಕಳು ಕೇವಲ ತಮ್ಮ ದಿನದ ಕುರಿತಾಗಿ ಯಾರೊಂದಿಗೂ ಮಾತಾಡಲು ದೂರವಾಣಿಯಲ್ಲಿ ಕರೆಯುತ್ತಾರೆ. ಕುಟುಂಬ ಸಂಭಾಷಣೆಯ ಕೊರತೆಯನ್ನು ತುಂಬಿಸಲು ಅವರು ಈ ಬದಲಿಯನ್ನು ಆಯ್ದುಕೊಳ್ಳುತ್ತಾರೆ ಎಂದು ಖಾತೆಯು ಹೇಳುತ್ತದೆ. ಆದಾಗ್ಯೂ, ಈ ಸಲಹೆಗಾರರಿಗೂ ಸಂಸರ್ಗ ಸಮಸ್ಯೆಗಳಿವೆ. “ಸಲಹೆಗಾರನ ಕಂಠದಲ್ಲಿ ಒಂದು ಬೋಧಿಸುವ ಲಕ್ಷಣಗಳಿದ್ದರೆ, ಮಕ್ಕಳು ಅದನ್ನು ಬದಿಗಿಡುತ್ತಾರೆ,” ಎಂದು ಒಬ್ಬ ಸಿಬ್ಬಂದಿ ಸದಸ್ಯನು ಹೇಳಿದನು. (g90 4/8)

ಬಡವರಲ್ಲಿ ಅತಿ ಬಡವರು

ಫೆಬ್ರವರಿ 1990ರಲ್ಲಿ ಲೋಕದಲ್ಲಿನ 42 ದರಿದ್ರ ರಾಷ್ಟ್ರಗಳ ಪ್ರತಿನಿಧಿಗಳು, ಸುಮಾರು 50 ಕೋಟಿ ಜನರು ಸಹಾಯದ ತುರ್ತು ಅಗತ್ಯದಲ್ಲಿದ್ದಾರೆಂದು ಲೋಕದ ಸಮೃದ್ಧ ರಾಷ್ಟ್ರಗಳಿಗೆ ಮನಗಾಣಿಸಲು ಬಾಂಗ್ಲಾ ದೇಶದಲ್ಲಿ ಒಂದು ವಾರಾಂತ್ಯಕ್ಕಾಗಿ ಕೂಡಿಬಂದರು. ತದ್ರೀತಿಯ ಒಂದು ಸಮ್ಮೇಳನವು 1981ರಲ್ಲಿ ಜರುಗಿತು, ಆದರೆ ಅದರ ಯಾವುದೇ ಪ್ರಧಾನ ಗುರಿಗಳು ಮುಟ್ಟಲ್ಪಡಲಿಲ್ಲ. ನಿಜವಾಗಿ, ದಿ ನ್ಯೂ ಯೋರ್ಕ್‌ ಟೈಮ್ಸ್‌ ವರದಿಸುವದೇನಂದರೆ “1980ರ ದಶಕವು ಹೆಚ್ಚು ಕೀಳುರೂಪದ ಬಡತನ, ಅವನತಿ ಹೊಂದುತ್ತಿರುವ ಅಕ್ಷರಜ್ಞಾನ, ಕೆಡುತ್ತಿರುವ ಆರೋಗ್ಯ ಮತ್ತು ಸಾಮಾನ್ಯವಾಗಿ ಕೆಳಮಟ್ಟದ ಜೀವನರೀತಿಯನ್ನು ತಂದಿವೆ.” ಇವುಗಳಲ್ಲಿ 28 ರಾಷ್ಟ್ರಗಳು ಆಫ್ರಿಕಾದಲ್ಲಿವೆ, ಏಶ್ಯಾದಲ್ಲಿ 9, ಫೆಸಿಫಿಕ್‌ ಮತ್ತು ಹಿಂದೂ ಮಹಾಸಾಗರದ ನಾಲ್ಕು ದ್ವೀಪರಾಷ್ಟ್ರಗಳು ಮತ್ತು ಅಮೆರಿಕದ ಕ್ಯಾರಿಬಿಯನ್‌ ಸಮುದ್ರದಲ್ಲಿ ಒಂದು ಸೇರಿವೆ. (g90 6/8)

ನಡೆಯುವದು ಆರೋಗ್ಯಕ್ಕೆ ಒಳ್ಳೆಯದು

ಹೃದಯ ರಕ್ತನಾಳ ಸಂಬಂಧಿತ ತೊಂದರೆಗಳನ್ನು ತಪ್ಪಿಸುವದರ ಜೊತೆಗೆ ಮಿತವಾದ ವ್ಯಾಯಾಮವು ಕ್ಯಾನ್ಸರ್‌ನ ವಿರುದ್ಧ ಸಹ ಒಂದು ತಡೆಗಟ್ಟುವ ಮೌಲ್ಯವನ್ನು ಹೊಂದಿರಬಹುದು ಎಂದು ಬ್ರೇಜಿಲ್‌ನ ಸಾನ್‌ ಪೌಲೋ ವಿಶ್ವ ವಿದ್ಯಾನಿಲಯದಲ್ಲಿ ಗ್ರಂಥಿಶಾಸ್ತ್ರದ ಪ್ರೊಫೆಸರರಾಗಿರುವ ರುಯೀ ಬೆವಿಲಾಕುವ ವಾದಿಸುತ್ತಾರೆ. ಕ್ರಮಬದ್ಧ ನಡೆಯುವಿಕೆ ಅಥವಾ ವ್ಯಾಯಾಮದ ಇತರ ರೂಪಗಳು ಮೆಲ್ಲನೆ ಕೆಲಸಮಾಡುತ್ತಿರುವ ಕರುಳುಗಳನ್ನು ಉದ್ರೇಕಿಸುವಂತೆ ತೋರುತ್ತದೆ. ಬೆವಿಲಾಕುವ ಹೇಳಿದ್ದು: “ನಾವು ತಿನ್ನುತ್ತಿರುವ ಹೆಚ್ಚಿನ ಆಹಾರವು ಕ್ಯಾನ್ಸರ್‌-ಜನಕವಾಗಿದೆ ಮತ್ತು ಅದು ಕರುಳಲ್ಲಿ ಸ್ವಲ್ಪ ಸಮಯ ಉಳಿದರೆ, ಅದು ಕೋಲನ್‌ನ ಕ್ಯಾನ್ಸರ್‌ನ್ನು ಉಂಟುಮಾಡಬಹುದು.” ಅಂತೆಯೇ, ಸಾನ್‌ ಪೌಲೋ ವಿಶ್ವ ವಿದ್ಯಾನಿಲಯದಲ್ಲಿ ಹೃದಯ ಶಾಸ್ತ್ರದ ಫುಲ್‌ವಿಯೋ ಪಿಲೆಗಿ, ನಂಬುವುದೇನಂದರೆ, ಕ್ರೀಡೆಗಳಲ್ಲಿ ಭಾಗವಹಿಸದವರಿಗೆ ನಡೆಯುವದು ಒಂದು ಆದರ್ಶಪ್ರಾಯವಾದ ವ್ಯಾಯಾಮವಾಗಿದೆ. (g90 4/8)

ಜಗತ್ತಿನ ಅತಿ ಉದ್ದವಾದ ರೈಲು

ಅಗಸ್ತ್‌ 26, 1989ರಂದು ಸಮಗ್ರವಾಗಿ ಭಾರಹೊತ್ತ 660 ಸರಕಿನ ಬಂಡಿಗಳು, ಬೇರೆ ಮೂರು ಬಂಡಿಗಳು ಮತ್ತು 16 ಸಯ್ವ-ಚಲಿತ ಇಂಜಿನುಗಳು ಒಂದು ರೈಲು ರೈಲು-ಮಾರ್ಗದ ಮೇಲೆ 4.3 ಮೈಲುಗಳ ಉದ್ದವನ್ನು ವ್ಯಾಪಿಸಿತು. ಅದು ಒಂದು ಇಡೀ ಹಡಗನ್ನೇ ತುಂಬಿಸಲು ಸಾಕಷ್ಟು ಕಬ್ಬಿಣದ ಹೊರೆಯೊಂದಿಗೆ ದಕ್ಷಿಣ ಆಫ್ರಿಕಾದ ಒಂದು ಗಣಿನಗರದಿಂದ ಒಂದು ಕಡಲ ತೀರದ ಬಂದರಿಗೆ 535 ಮೈಲು ಉದ್ದದ ವಿಶೇಷ ಪ್ರಯಾಣದಲ್ಲಿ ಇತ್ತು. ಅದರ ತೂಕ 70,000 ಟನ್‌ಗಳಿಗಿಂತಲೂ ಹೆಚ್ಚಾಗಿತ್ತು. ಈ ಪ್ರಯಾಣಕ್ಕಾಗಿ ಸಿದ್ಧತೆಗಳು ಏಳು ವರ್ಷಗಳನ್ನು ತಕ್ಕೊಂಡಿತು. ಸಾಮಾನ್ಯವಾಗಿ ಈ ಮೊತ್ತದ ಸರಕಿಗೆ ಮೂರು ರೈಲುಗಳನ್ನು ಉಪಯೋಗಿಸಲಾಗುತ್ತದೆ. ಹಾಗಿದ್ದರೆ, ಈ ಉದ್ದ ರೈಲು ಏಕೆ? ಗಿನೆಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ, ಓಡಿದವುಗಳಲಿ ಅತ್ಯಂತ ಉದ್ದವಾದ ಮತ್ತು ಭಾರವಾದ ರೈಲು ಎಂದು ದಾಖಲೆ ನಿರ್ಮಿಸಲಿಗೋಸ್ಕರ. (g90 4/8)

ಅಪಾಯಕಾರಿ ಕೆಲಸ

ಪತ್ರಿಕೋದ್ಯೋಗಿ ಆಗಿರುವದು ಯಾವಾಗಲೂ ಕಠಿಣ ಕೆಲಸದೊಂದಿಗೆ ದೀರ್ಘತಾಸುಗಳನ್ನು ಒಳಪಡಿಸುತ್ತದೆ. ಈಗ ಅದು ಮಾರಕವೂ ಆಗುತ್ತಿದೆ. ಕಳೆದ ವರ್ಷ ಭೂಸುತ್ತಲೂ 53 ಪತ್ರಿಕೋದ್ಯೋಗಿಗಳು ಕೊಲ್ಲಲ್ಪಟ್ಟರು—1988ಕ್ಕಿಂತ ಎರಡು ಪಟ್ಟು ಹೆಚ್ಚು. ಸಾಹಸಿ ಪತ್ರಿಕೋದ್ಯೋಗಿ ವರದಿಗಾರರು ಮತ್ತು ಛಾಯಾ ಚಿತ್ರಗಾರರು ಹೆಚ್ಚಾಗಿ ಅಪಾಯದಲ್ಲಿರುವವರಾಗಿದ್ದಾರೆ. ಅಮಲೌಷಧಿಯ ಭಾರೀ ವ್ಯಾಪಾರಿಗಳು ಮತ್ತು ಸೇನಾಧಿಪತಿಗಳು “ಮರಣದಿಂದ ದೋಷವನ್ನು ನಿವಾರಿಸುವ” ಈ ರೀತಿಯನ್ನು ಉಪಯೋಗಿಸುವ ಹೆಚ್ಚಿನ ಸಂಭವಗಳಿರುತ್ತವೆ ಎಂದು ದಿ ನ್ಯೂ ಯೋರ್ಕ್‌ ಟೈಮ್ಸ್‌ನ ಒಂದು ಸಂಪಾದಕೀಯವು ತಿಳಿಸಿತು. ಪತ್ರಿಕೋದ್ಯೋಗಿಗಳನ್ನು “ಬಾಯಿ ಮುಚ್ಚಿಸಿದಾಗ, ಜೈಲಿಗೆ ಹಾಕಿದಾಗ ಅಥವಾ ಇಲ್ಲದಂತೆ ಮಾಡಿದಾಗ, ತಿಳುವಳಿಕೆಯು ಮಸುಕಾಗುತ್ತದೆ ಮತ್ತು ಸುದ್ದಿಯು ಕಳೆದು ಹೋಗುತ್ತದೆ.” (g90 1/22)

ಕೊಬ್ಬಿನ ತ್ವರಿತ ಆಹಾರ

ತ್ವರಿತ ಆಹಾರವು (ಫಾಸ್ಟ್‌ ಫೂಡ್‌) ಜೀವನದ ಒಂದು ರೀತಿಯಾಗಿರುವ ಕೆಲವು ಕೈಗಾರಿಕಾ ರಾಷ್ಟ್ರಗಳಲ್ಲಿ ಕೋಳಿಮಾಂಸದ ಅಥವಾ ಮೀನಿನ ಸ್ಯಾಂಡ್‌ವಿಚ್‌ಗಳು ಮತ್ತು ಕೋಳಿ ಮಾಂಸದ “ನಗೆಟ್ಸ್‌” (ಒರಟು ಗಟ್ಟಿಗಳು) ಹೆಚ್ಚು ಜನಪ್ರಿಯವಾಗಿವೆ. ಏಕಂದರೆ ಅವುಗಳನ್ನು ರೂಢಿಯಾಗಿರುವ ಹಾಂಬರ್ಗ್‌ರ್‌ಗಾಗಿ ಒಂದು ಕಡಿಮೆ ಕೊಬ್ಬಿರುವ ಬದಲಿ ಎಂದು ನೆನಸುತ್ತಾರೆ, ಆದರೆ ಅಂಥ ಆಹಾರವನ್ನು ಕೆಲವೊಮ್ಮೆ ಅಚಕ್ಚೊಬ್ಬು ಒಳಗೊಂಡಿರುವ ಎಣ್ಣೆಗಳಲ್ಲಿ ಬೇಯಿಸಲಾಗುತ್ತದೆ. ಅದು ಮಾತ್ರವಲ್ಲದೆ, ಒಂದು ತ್ವರಿತ ಆಹಾರದ ಕೋಳಿ ಮಾಂಸ ಸ್ಯಾಂಡ್‌ವಿಚ್‌ ಕೋಳಿಯ ಚರ್ಮದ ಒಂದು ದೊಡ್ಡ ಪ್ರಮಾಣವನ್ನು ಹೊಂದಿರುತ್ತದೆ. ಆದುದರಿಂದ ಅದು “ಒಂದೂವರೆ ಪೈಂಟ್‌ ಐಸ್‌ಕ್ರೀಮನಲ್ಲಿರುವಷ್ಟು ಕೊಬ್ಬನ್ನು ಒಳಗೊಂಡಿರಬಹುದು ಮತ್ತು ಅರ್ಧ ಡಜನ್‌ ಕೋಳಿ ಮಾಂಸದ ‘ನಗೆಟ್ಸ್‌’ನಲ್ಲಿ ಒಂದು ಹಾಂಬರ್ಗರ್‌ಗಿಂತ ಹೆಚ್ಚು ಕೊಬ್ಬು ಇರುತ್ತದೆ ಎಂದು ಮಾಶೆಚ್ಯೂಟ್ಸ್‌ ವೈದ್ಯಕೀಯ ಸಂಸ್ಥೆಯು ನಡಿಸಿದ ಒಂದು ಇತ್ತೀಚಿನ ಅಧ್ಯಯನವನ್ನು ವರದಿಸುತ್ತಾ ಇಂಟರ್‌ನ್ಯಾಶನಲ್‌ ಹೆರಾಲ್ಡ್‌ ಟ್ರಿಬ್ಯೂನ್‌ ಹೇಳಿತು. ಆಹಾರದಲ್ಲಿ ಅತಿಯಾದ ಕೊಬ್ಬು ಸಿಹಿ ಮೂತ್ರ, ಕರೊನೆರಿ ಹೃದ್ರೋಗ, ರಕ್ತದೊತ್ತಡ, ಲಕ್ವಗಳು ಮತ್ತು ಬೊಜ್ಜುಮೈಯಿರುವ ಹೆಚ್ಚಿನ ಸಂಭಾವ್ಯತೆಗೆ ಜೋಡಿಸಲಾಗಿದೆ. (g90 1/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ