ಕುಲವು ಅಂತಹ ಒಂದು ವಿವಾದಾಂಶವಾಗಿರುವುದು ಏಕೆ?
ದಾಖಲಿಸಲ್ಪಟ್ಟ ಇತಿಹಾಸದ ಆರಂಭದಂದಿನಿಂದ, “ಅವರ,” ಮತ್ತು “ನಮ್ಮ” ನಡುವೆ ಒಂದು ಕಂದರವಿದೆ ಎಂಬ ಅಭಿಪ್ರಾಯವು ಜನರ ಯೋಚನೆಯನ್ನು ಪ್ರಭಾವಿಸಿದೆ. ಪ್ರತಿಯೊಂದನ್ನೂ ಮಾಡುವುದರಲ್ಲಿ ಯೋಗ್ಯ ಮಾರ್ಗಗಳನ್ನು ಅನುಸರಿಸುವುದರಲ್ಲಿ ಅವರು ಮಾತ್ರ ಆದರ್ಶಪ್ರಾಯ ಜನರೆಂದು ಅನೇಕರು ಸ್ವತಃ ತಾವಾಗಿಯೇ ಮನವರಿಕೆ ಮಾಡಿಕೊಂಡಿದ್ದಾರೆ. ಒಬ್ಬನ ಸ್ವಂತ ಜನರು ಮತ್ತು ಮಾರ್ಗಗಳು ಮಾತ್ರವೇ ಮೌಲ್ಯವುಳ್ಳವುಗಳು ಮತ್ತು ಅರ್ಥಗರ್ಭಿತವಾದವುಗಳು ಎಂಬ ಅಭಿಪ್ರಾಯವನ್ನು ವಿಜ್ಞಾನಿಗಳು ಕುಲಕೇಂದ್ರಿತ ಶಾಸ್ತ್ರವೆಂದು ಕರೆಯುತ್ತಾರೆ.
ಉದಾಹರಣೆಗೆ, ಪ್ರಾಚೀನ ಗ್ರೀಕರು, ಗ್ರೀಕನಲ್ಲದ ಯಾವನಿಗಾದರೂ ಅವರು ಅನ್ವಯಿಸುತ್ತಿದ್ದ ಒಂದು ಪದವಾದ “ಅಸಂಸ್ಕೃತರು” (ಬಾರ್ಬೇರಿಅನ್ಸ್)ರ ಕುರಿತು ಹೆಚ್ಚು ಚಿಂತಿಸತ್ತಿರಲಿಲ್ಲ. ಅನ್ಯದೇಶೀಯ ಭಾಷೆಗಳು ಗ್ರೀಕರಿಗೆ ಬಹಳಮಟ್ಟಿಗೆ ಬುದಿಯ್ಧಿಲ್ಲದ “ಬಾರ್ಬಾರ್”ನಂತೆ ಧ್ವನಿಸುತ್ತಿದ್ದ ವಿಧಾನದಿಂದ “ಬಾರ್ಬೇರಿಅನ್” ಎಂಬ ಪದವು ವಿಕಾಸಗೊಂಡಿತು. ಗ್ರೀಕರಿಗೆ ಮುಂಚಿನ ಐಗುಪ್ತರು ಮತ್ತು ಅನಂತರದ ರೋಮನರು ಕೂಡ ಇತರ ಜನರಿಗಿಂತಲೂ ತಾವೇ ತ್ಕೃಉಷ್ಟರು ಎಂದು ಭಾವಿಸಿದ್ದರು.
ಶತಮಾನಗಳ ವರೆಗೆ ಚೀನಾದೇಶದವರು ಅವರ ದೇಶವನ್ನು ಡ್ರೂಂಗ್ ಗ್ವಾ, ಅಥವಾ ಮಧ್ಯ ರಾಜ್ಯವೆಂದು ಕರೆಯುತ್ತಿದ್ದರು, ಯಾಕಂದರೆ ಚೀನಾ ವಿಶ್ವದ ಅಲ್ಲವಾದರೂ ಲೋಕದ ಕೇಂದ್ರವಾಗಿದೆ ಎಂದು ಅವರಿಗೆ ಮನವರಿಕೆಯಿತ್ತು. ಅನಂತರ, ಕೆಂಬಣ್ಣದ ಕೂದಲಿನ, ಪಚ್ಚೆ ಕಣ್ಣಿನ, ಮತ್ತು ಕೆಂಪು ಕಳೆಯುಳ್ಳ ಯೂರೋಪಿನ ಮಿಷನೆರಿಗಳು ಚೀನಾಕ್ಕೆ ಬಂದಾಗ, ಚೀನಾದವರು ಅವರನ್ನು “ವಿದೇಶೀ ದೆವ್ವಗಳು” ಎಂದು ಹೆಸರಿಟ್ಟರು. ತದ್ರೀತಿ, ಪ್ರಾಚ್ಯರು ಯೂರೋಪ್ ಮತ್ತು ಉತ್ತರ ಅಮೆರಿಕಕ್ಕೆ ಮೊದಲು ಆಗಮಿಸಿದಾಗ, ಅವರ ಓರೆ ಕಣ್ಣುಗಳು ಮತ್ತು ಅಪರಿಚಿತ ಸಂಪ್ರದಾಯಗಳೆಂದು ಪರಿಗಣಿಸಲ್ಪಟ್ಟವುಗಳು ಅವರನ್ನು ಅಪಹಾಸ್ಯ ಮತ್ತು ಸಂದೇಹದ ಸುಲಭ ಗುರಿಹಲಗೆಗಳನ್ನಾಗಿ ಮಾಡಿದವು.
ಆದರೂ, ದ ಕೈಂಡ್ಸ್ ಆಫ್ ಮ್ಯಾನ್ಕೈಂಡ್ ಎಂಬ ಪುಸ್ತಕವು ಹೇಳುವಂತೆ, ಪರಿಗಣಿಸಲು ಒಂದು ಅರ್ಥಗರ್ಭಿತವಾದ ಸಂಗತಿ ಅಲ್ಲಿದೆ: “ಒಬ್ಬನ [ಕುಲ ಸಂಬಂಧವಾದ] ಉತ್ಕೃಷ್ಟತೆಯಲ್ಲಿ ನಂಬಿಕೆಯನ್ನಿಡುವುದು ಸುಲಭವಾಗಿದೆ; ವಿಜ್ಞಾನದ ಕಂಡುಹಿಡಿಯುವಿಕೆಗಳನ್ನು ಉಪಯೋಗಿಸುವ ಮೂಲಕ, ಅದನ್ನು ಸಮರ್ಥಿಸಲು ಪ್ರಯತ್ನಿಸುವುದು ಸಂಪೂರ್ಣವಾಗಿ ಬೇರೆ ವಿಚಾರವಾಗಿದೆ.” ಒಂದು ಕುಲವು ಇನ್ನೊಂದಕ್ಕಿಂತ ಉತ್ಕೃಷ್ಟವಾದದ್ದು ಎಂದು ರುಜುಪಡಿಸಲು ಮಾಡುವ ಪ್ರಯತ್ನಗಳು ಸಂಬಂಧಸೂಚಕವಾಗಿ ಹೊಸತಾಗಿವೆ. ಮಾನವಶಾಸ್ತ್ರಜ್ಞರಾದ ಆಶ್ಲೆ ಮಾಂಟಗು ಬರೆದದ್ದೇನಂದರೆ “ಮಾನಸಿಕವಾಗಿ ಹಾಗೆಯೇ ಭೌತಿಕವಾಗಿ ಒಂದರಿಂದ ಇನ್ನೊಂದು ಭಿನ್ನವಾಗಿರುವ, ಮಾನವ ಕುಲದ ಸ್ವಾಭಾವಿಕ ಅಥವಾ ಜೈವಿಕ ಕುಲಗಳು ಇವೆ ಎಂಬುದರ ಕುರಿತಾದ ಕಲ್ಪನೆಯು ಹದಿನೆಂಟನೆಯ ಶತಮಾನದ ಅಂತ್ಯ ಭಾಗದ ತನಕ ಅದು ವಿಕಾಸಹೊಂದಿರದ ಅಭಿಪ್ರಾಯವಾಗಿದೆ.”
ಕುಲದ ಉತ್ಕೃಷ್ಟತೆಯ ಕುರಿತಾದ ವಿವಾದವು 18ನೆಯ ಮತ್ತು 19ನೆಯ ಶತಮಾನಗಳಲ್ಲಿ ಯಾಕೆ ಅಷ್ಟೊಂದು ಪ್ರಾಮುಖ್ಯವಾಯಿತು?
ಗುಲಾಮ ವ್ಯಾಪಾರ ಮತ್ತು ಕುಲ
ಒಂದು ಪ್ರಧಾನ ಕಾರಣವೇನಂದರೆ, ಆಗ ಲಾಭಕರವಾದ ಗುಲಾಮ ವ್ಯಾಪಾರವು ಅದರ ತುತ್ತತುದಿಯನ್ನು ತಲಪಿತ್ತು, ಮತ್ತು ನೂರಾರು ಸಾವಿರ ಆಫ್ರಿಕನರು ಬಲವಂತವಾಗಿ ಒಯ್ಯಲ್ಪಟ್ಟರು ಮತ್ತು ಯೂರೋಪ್ ಮತ್ತು ಅಮೆರಿಕಗಳಲ್ಲಿ ಗುಲಾಮತನಕ್ಕೆ ಒಪ್ಪಿಸಲ್ಪಟ್ಟರು. ಅನೇಕ ವೇಳೆ ಪುರುಷರು, ಸ್ತ್ರೀಯರು, ಮತ್ತು ಮಕ್ಕಳು ಲೋಕದ ವಿವಿಧ ಭಾಗಗಳಿಗೆ ಕಳುಹಿಸಲ್ಪಡುವುದರಿಂದ ಕುಟುಂಬಗಳು ಪುನಃ ಎಂದಿಗೂ ಒಬ್ಬರನ್ನೊಬ್ಬರು ನೋಡದಂತೆ ವಿಚ್ಛಿನ್ನವಾದವು. ಅಧಿಕಾಂಶ ಮಂದಿ ಕ್ರೈಸ್ತರೆಂದು ಹೇಳಿಕೊಳ್ಳುವ, ಗುಲಾಮ ವ್ಯಾಪಾರಿಗಳು ಮತ್ತು ಗುಲಾಮರ ಒಡೆಯರು, ಅಂತಹ ಅಮಾನುಷ ಕೃತ್ಯಗಳನ್ನು ಹೇಗೆ ಸಮರ್ಥಿಸುವರು?
ಕಪ್ಪು ಆಫ್ರಿಕನರು ಸ್ವಭಾವತಃ ನಿಕೃಷ್ಟರೆಂಬ ಸಮೀಕ್ಷಣವನ್ನು ಪ್ರಸಾರಮಾಡುವ ಮೂಲಕವೇ. “ಎಲ್ಲಾ ನೀಗ್ರೊಗಳು, ಮತ್ತು ಸಾಮಾನ್ಯವಾಗಿ ಮಾನವರ ಇತರ ಎಲ್ಲಾ ವರ್ಗಗಳು ಸ್ವಭಾವತಃ ಬಿಳಿಯರಿಗೆ ನಿಕೃಷ್ಟರಾಗಿದ್ದಾರೆಂಬದನ್ನು ನಾನು ಸಂದೇಹಿಸುವ ಪ್ರವೃತ್ತಿಯುಳ್ಳವನಾಗಿದ್ದೇನೆ,” ಎಂದು 18ನೆಯ ಶತಮಾನದ ಸ್ಕಾಟ್ಲೆಂಡಿನ ತ್ತತ್ವಜ್ಞಾನಿ ಡೇವಿಡ್ ಹ್ಯೂಮ್ ಬರೆದರು. ವಾಸ್ತವದಲ್ಲಿ, ಹ್ಯೂಮ್ ವಾದಿಸಿದ್ದೇನಂದರೆ “[ನೀಗ್ರೋಗಳ] ಮಧ್ಯೆ ಕುಶಲ ಶೋಧನೆಗಳನ್ನಾಗಲಿ, ಕಲೆಯನ್ನಾಗಲಿ, ವಿಜ್ಞಾನವನ್ನಾಗಲಿ,” ಒಬ್ಬನು ಕಾಣಸಾಧ್ಯವಿಲ್ಲ.
ಆದರೂ, ಅಂತಹ ವಾದಗಳು ತಪ್ಪಾಗಿವೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯಾ (1973) ಗಮನಿಸಿದ್ದು: “ನೂರಾರು ವರ್ಷಗಳ ಹಿಂದೆಯೇ ಆಫ್ರಿಕದ ಅನೇಕ ಭಾಗಗಳಲ್ಲಿ ಹೆಚ್ಚು ಅಭಿವೃದ್ಧಿಗೊಂಡ ನೀಗ್ರೊ ರಾಜ್ಯಗಳು ಅಸ್ತಿತ್ವದಲ್ಲಿದ್ದವು. . . . ಕ್ರಿ.ಶ. 1200 ಮತ್ತು 1600ರ ನಡುವೆ, ಪಶ್ಚಿಮ ಆಫ್ರಿಕದ ಟಿಂಬುಕ್ಟುವಿನಲ್ಲಿ ಒಂದು ನೀಗ್ರೊ-ಅರ್ಯಾಬಿಕ್ ವಿಶ್ವವಿದ್ಯಾನಿಲಯವು ಪ್ರವರ್ಧಿಸಿತು ಮತ್ತು ಸ್ಪೆಯಿನ್, ಉತ್ತರ ಆಫ್ರಿಕ, ಮತ್ತು ಮಧ್ಯ ಪೂರ್ವದಲ್ಲೆಲ್ಲಾ ಪ್ರಸಿದ್ಧಿಗೆ ಬಂತು.” ಆದಾಗ್ಯೂ, ಗುಲಾಮ ವ್ಯಾಪಾರದಲ್ಲಿ ಒಳಗೊಂಡಿದವ್ದರು, ಕೆಳಜಾತಿಯ ಮನುಷ್ಯರು, ನಿಶ್ಚಯವಾಗಿ, ಕರಿಯರು ಬಿಳಿಯರಿಗಿಂತ ನಿಕೃಷ್ಟವಾದ ಒಂದು ಕುಲವಾಗಿದ್ದಾರೆಂಬ ಹ್ಯೂಮನಂಥ ತ್ತತ್ವ ಶಾಸ್ತ್ರಜ್ಞರ ಕಲ್ಪನೆಯನ್ನು ಹೊಂದಿಸಿಕೊಳ್ಳುವುದರಲ್ಲಿ ತ್ವರಿತರಾಗಿದ್ದರು.
ಧರ್ಮ ಮತ್ತು ಕುಲ
ಗುಲಾಮ ವ್ಯಾಪಾರಿಗಳು ಅವರ ಜಾತೀಯ ಅಭಿಪ್ರಾಯಗಳಿಗೆ ಗಮನಾರ್ಹವಾದ ಬೆಂಬಲವನ್ನು ಧಾರ್ಮಿಕ ಮುಖಂಡರಿಂದ ಪಡಕೊಂಡರು. 1450ರುಗಳಷ್ಟು ಆರಂಭದಲ್ಲಿ, ರೋಮನ್ ಕ್ಯಾತೊಲಿಕ್ ಪೋಪರುಗಳು ಕಟ್ಟಳೆಗಳು, “ವಿಧರ್ಮಿಗಳ” ಮತ್ತು “ನಾಸ್ತಿಕರ” “ಆತ್ಮಗಳು” “ದೇವರ ರಾಜ್ಯಕ್ಕಾಗಿ” ರಕ್ಷಿಸಲ್ಪಡುವಂತೆ ಗುಲಾಮತನ ಮತ್ತು ಅಡಿಯಾಳುತನವನ್ನು ಅನುಮೋದಿಸಿದವು. ಚರ್ಚಿನ ಆಶೀರ್ವಾದವನ್ನು ಪಡೆದುಕೊಂಡದರ್ದಿಂದ, ಪ್ರಾಚೀನ ಯೂರೋಪಿನ ಪರಿಶೋಧಕರು ಮತ್ತು ಗುಲಾಮ ವ್ಯಾಪಾರಿಗಳು, ಸಜ್ವನರ ಅವರ ಪಾಶವೀಯ ವರ್ತನೆಯ ಕುರಿತಾಗಿ ಯಾವುದೇ ಅಳುಕನ್ನು ವ್ಯಕ್ತಪಡಿಸಲಿಲ್ಲ.
“ಇಸವಿ 1760ರುಗಳಲ್ಲಿ, ಮುಂದೆ ಬರಲಿಕ್ಕಿದ್ದ ಅನೇಕ ಶತಮಾನಗಳ ವರೆಗೆ, ಕರಿಯರ ಗುಲಾಮತನವು ಕ್ಯಾತೊಲಿಕ್, ಆ್ಯಂಗ್ಲಿಕನ್, ಲೂತರನ್, ಪ್ರೆಜ್ಬಿಟೀರಿಯನ್, ಮತ್ತು ರಿಫಾರ್ಮ್ಡ್ ಚರ್ಚ್ ಅನುಯಾಯಿಗಳಿಂದ ಮತ್ತು ದೇವತಾ ಶಾಸ್ತ್ರಜ್ಞರಿಂದ ಅನುಮೋದಿಸಲ್ಪಟ್ಟಿತ್ತು,” ಎಂದು ಸೇವ್ಲರಿ ಆ್ಯಂಡ್ ಹ್ಯೂಮನ್ ಪ್ರೋಗ್ರೆಸ್ ಪುಸ್ತಕವು ಹೇಳುತ್ತದೆ. “ಕಪ್ಪು ಗುಲಾಮರ ಸ್ವಾಮ್ಯಹೊಂದುವುದು ಅಥವಾ ವ್ಯಾಪಾರ ಮಾಡುವುದರಿಂದ ಅದರ ಸದಸ್ಯರನ್ನು ನಿರುತ್ಸಾಹಗೊಳಿಸಲು ಯಾವುದೇ ಚರ್ಚ್ ಆಗಲಿ ಅಥವಾ ಪಂಥವಾಗಲಿ ಪ್ರಯತ್ನಿಸಲಿಲ್ಲ.”
ಕೆಲವೊಂದು ಚರ್ಚುಗಳು ವಿಶ್ವವ್ಯಾಪಕ ಕ್ರೈಸ್ತ ಸಹೋದರತ್ವದ ಕುರಿತು ಮಾತಾಡುತ್ತಿದ್ದರೂ, ಕುಲ ಸಂಬಂಧಿತ ವಾಗ್ವಾದವನ್ನು ತೀಕ್ಷೈಗೊಳಿಸಿದ ಬೋಧನೆಗಳನ್ನು ಕೂಡ ಅವು ಉತ್ತೇಜಿಸಿದವು. ಉದಾಹರಣೆಗೆ, ಎನ್ಸೈಕ್ಲೊಪೀಡಿಯಾ ಜೂಡೇಯಿಕ ಹೇಳಿಕೆ ನೀಡುವುದೇನಂದರೆ “ದೀರ್ಘವಾದ ಹೋರಾಟಗಳ ಮತ್ತು ದೇವತಾ ಶಾಸ್ತ್ರದ ವಾದವಿವಾದಗಳ ಅನಂತರ ಮಾತ್ರವೇ ಸ್ಪೆಯ್ನ್ ದೇಶೀಯರು, ಅಮೆರಿಕದಲ್ಲಿ ಅವರು ಕಂಡುಕೊಂಡ ಸ್ಥಳೀಯ ಕುಲಗಳು ಆತ್ಮಸಂಪನ್ನರಾದ ಮಾನವರೆಂದು ಅಂಗೀಕರಿಸಿದರು.”
ಕ್ರೈಸ್ತತ್ವಕ್ಕೆ ಮತಾಂತರಿಸಲ್ಪಡುವ ಮೂಲಕ ಅಂತಹ ಸ್ಥಳೀಯ ಕುಲಗಳ ಜನರ “ಆತ್ಮಗಳು” ಎಷ್ಟರ ತನಕ “ರಕ್ಷಿಸಲ್ಪಡು”ತವ್ತೋ ಅಷ್ಟರ ವರೆಗೆ, ಅವರು ಭೌತಿಕವಾಗಿ ಹೇಗೆ ಉಪಚರಿಸಲ್ಪಡುತ್ತಾರೆಂಬುದು ಅಪ್ರಾಮುಖ್ಯವಾದದ್ದು ಎಂಬ ಭಾವನೆಯಿತ್ತು. ಮತ್ತು ಕರಿಯರ ಪರಿಸ್ಥಿತಿಗೆ ಬರುವಾಗ, ಹೇಗಿದ್ದರೂ ಅವರು ದೇವರಿಂದ ಶಪಿಸಲ್ಪಟ್ಟಿದ್ದಾರೆಂದು ಅನೇಕ ಧಾರ್ಮಿಕ ಮುಖಂಡರು ವಾದಿಸಿದರು. ಇದನ್ನು ರುಜುಪಡಿಸಲು ಪ್ರಯತ್ನಿಸುವಲ್ಲಿ ಶಾಸ್ತ್ರವಚನಗಳು ತಪ್ಪಾಗಿ ಅನ್ವಯಿಸಲ್ಪಟ್ಟವು. ವೈದಿಕರಾದ ರಾಬರ್ಟ್ ಜೇಮ್ಸನ್, ಎ. ಆರ್. ಫಾಸೆಟ್, ಮತ್ತು ಡೇವಿಡ್ ಬ್ರೌನ್, ಅವರ ಬೈಬಲ್ ವಿಮರ್ಶೆಯಲ್ಲಿ ಪ್ರತಿಪಾದಿಸಿದ್ದು: “ಕಾನಾನನು ಶಾಪಗ್ರಸ್ತನಾಗಲಿ [ಆದಿಕಾಂಡ 9:25]—ಈ ದಂಡನೆಯು ಕಾನಾನ್ಯರ ನಾಶನದಲ್ಲಿ,—ಐಗುಪ್ತ್ಯರ ಅವನತಿ, ಮತ್ತು ಹಾಮನ ವಂಶಜರಾದ ಆಫ್ರಿಕದವರ ಗುಲಾಮತನದಲ್ಲಿ ನೆರವೇರಿಸಲ್ಪಟ್ಟಿತು.”—ಸಂಪೂರ್ಣ ಬೈಬಲಿನ ಮೇಲೆ, ವಿಮರ್ಶನಶೀಲ ಮತ್ತು ವಿವರಣಾತ್ಮಕ ವ್ಯಾಖ್ಯಾನ. (ಕಾಮಂಟರಿ, ಕ್ರಿಟಿಕಲ್ ಆ್ಯಂಡ್ ಎಕ್ಸ್ಪೆನ್ಲೆಟರಿ, ಒನ್ ದ ಹೋಲ್ ಬೈಬಲ್.)
ಕಪ್ಪು ಕುಲದ ಮೂಲಪುರುಷನು ಶಪಿಸಲ್ಪಟ್ಟನು ಎಂಬ ಬೋಧನೆಯು ಸರಳವಾಗಿಯೇ ಬೈಬಲಿನಲ್ಲಿ ಕಲಿಸಲ್ಪಟ್ಟಿಲ್ಲ. ಸತ್ಯವೇನಂದರೆ, ಕಪ್ಪು ಕುಲವು ಕಾನಾನನಿಂದಲ್ಲ, ಕೂಷನ ಸಂತತಿಯಿಂದ ಬಂದದ್ದಾಗಿದೆ. 18ನೆಯ ಶತಮಾನದಲ್ಲಿ, ಅವರ ಸ್ವಭಾವ ಸಿದ್ಧ ಹಕ್ಕುಗಳಿಂದ ಅವರನ್ನು ವಂಚಿಸುತ್ತಾ, ಕರಿಯರ ಗುಲಾಮತನವನ್ನು ಸಮರ್ಥಿಸಲು, ಬೈಬಲಿನ ಈ ಶಾಪವನ್ನು ಉಪಯೋಗಿಸಿ, “ದೃಢವಾದ ಸೂತ್ರಗಳಿಂದ ಆಳಲ್ಪಡುವಂತೆ ಪ್ರಾಮಾಣಿಕವಾಗಿ ಅಪೇಕ್ಷಿಸುವ ಯಾವುದೇ ವ್ಯಕ್ತಿಯ ಮನಸ್ಸಿನೊಳಗೆ ಅಂಗೀಕರಿಸುವಂತೆ ಮಾಡಲು ಇದು ಅತ್ಯಂತ ಅವ್ಯಕ್ತವಾದ ಒಂದು ಕಲ್ಪನೆಯಾಗಿದೆ” ಎಂದು ಜಾನ್ ವುಲ್ಮನ್ ವಾದಿಸಿದರು.
ಕೃತಕವಿಜ್ಞಾನ ಮತ್ತು ಕುಲ
ಕಪ್ಪು ವರ್ಣೀಯರು ನಿಕೃಷ್ಟ ಕುಲವಾಗಿದ್ದಾರೆ ಎಂಬ ವಾದವನ್ನು ಆಧಾರಿಸುವ ಒಂದು ಪ್ರಯತ್ನದಲ್ಲಿ ಕೃತಕವಿಜ್ಞಾನವು ಸಹ ತನ್ನ ಧ್ವನಿಗೂಡಿಸಿತು. ಕುಲಗಳ ಪಕ್ಷಪಾತದ ಮೇಲಿನ ಪ್ರಬಂಧ (ಎಸ್ಸೇ ಒನ್ ದ ಇನ್ಈಕ್ವಾಲಿಟಿ ಆಫ್ ರೇಸಸ್) ಪುಸ್ತಕದಲ್ಲಿ, 19ನೆಯ ಶತಮಾನದ ಫ್ರೆಂಚ್ ಬರಹಗಾರ ಜೋಸೆಫ್ ಡ ಗಾಬಿನೋ, ಅನುಸರಿಸಿ ಬರಲಿರುವ ಅಂತಹ ಅನೇಕ ಸಾಹಿತ್ಯಾತ್ಮಕವಾದ ಕೆಲಸಗಳಿಗೆ ತಳಪಾಯವನ್ನಿಟ್ಟರು. ಅದರಲ್ಲಿ, ಗಾಬಿನೋ ಮನುಷ್ಯ ಜಾತಿಯನ್ನು ಉತ್ಕೃಷ್ಟತೆಗನುಸಾರ ಅವರೋಹಣ ಶ್ರೇಣಿಯಲ್ಲಿ, ಮೂರು ಪ್ರತ್ಯೇಕವಾದ ಕುಲಗಳನ್ನಾಗಿ ವಿಂಗಡಿಸಿದರು: ಬಿಳಿಯರು, ಪೀತವರ್ಣೀಯರು, ಮತ್ತು ಕರಿಯರು. ಪ್ರತಿಯೊಂದು ಕುಲದ ಅಪೂರ್ವ ಗುಣಗಳು ರಕ್ತದಲ್ಲಿ ಅನುವಂಶೀಯವಾಗಿ ಕೊಂಡೊಯ್ಯಲ್ಪಡುತ್ತವೆ ಮತ್ತು ಹೀಗೆ ಯಾವುದೇ ಜಾತ್ಯಂತರ ವಿವಾಹದ ಸಂಮಿಳನವು, ಉತ್ಕೃಷ್ಟ ಗುಣಗಳ ನಷ್ಟ ಮತ್ತು ಅವನತಿಯಲ್ಲಿ ಪರಿಣಮಿಸುತ್ತದೆಂದು ಅವರು ವಾದಿಸಿದರು.
ಗಾಬಿನೋ ತರ್ಕಿಸಿದ್ದೇನಂದರೆ, ಬಿಳಿಯ, ಎತ್ತರ, ಹೊಂಬಣ್ಣದ ಕೂದಲಿನ, ನೀಲ ನೇತ್ರದ, ಅವರು ಆರ್ಯರೆಂದು ಕರೆದ ಜನರ ಶುದ್ಧ ಕುಲವೊಂದು ಒಮ್ಮೆ ಅಸ್ತಿತ್ವದಲ್ಲಿತ್ತು. ಭಾರತಕ್ಕೆ ಸಂಸ್ಕೃತ ಮತ್ತು ನಾಗರಿಕತೆಯನ್ನು ಪರಿಚಯಪಡಿಸಿದವರೂ ಆರ್ಯರಾಗಿದ್ದರು, ಮತ್ತು ಪ್ರಾಚೀನ ಗ್ರೀಕ್ ಮತ್ತು ರೋಮ್ ನಾಗರಿಕತೆಯನ್ನು ಸ್ಥಾಪಿಸಿದವರೂ ಆರ್ಯರೇ ಆಗಿದ್ದರೆಂದು ಅವರು ವಾದಿಸಿದರು. ಆದರೆ ಸ್ಥಳೀಕವಾಗಿ ನಿಕೃಷ್ಟರಾದ ಜನರೊಂದಿಗೆ ಜಾತ್ಯಂತರ ವಿವಾಹದ ಮೂಲಕ, ಆರ್ಯ ಕುಲದ ಅಸಾಧಾರಣ ಪ್ರತಿಭೆ ಮತ್ತು ಒಳ್ಳೆಯ ಗುಣಗಳೊಂದಿಗೆ, ಹಿಂದೆ ವೈಭವಭರಿತವಾಗಿದ್ದ ನಾಗರಿಕತೆಗಳು ನಷ್ಟಗೊಂಡವು. ಶುದ್ಧವಾದ ಆರ್ಯರಿಗೆ ಅತ್ಯಂತ ಸಾಮೀಪ್ಯದ ಜನರು ಇನ್ನೂ ಉಳಿದಿದ್ದಾರೆ, ಮತ್ತು ಅವರು ಉತ್ತರ ಯೂರೋಪ್ನಲ್ಲಿ ಅಂದರೆ, ನಾರ್ಡಿಕ್ ಕುಲದವರಲ್ಲಿ ಮತ್ತು, ಜರ್ಮನ್ ದೇಶದ ಜನರಲ್ಲಿ ಹೆಚ್ಚು ವಿಸ್ತಾರವಾಗಿ ಕಂಡುಬರುತ್ತಾರೆಂದು ಗಾಬಿನೋ ಪ್ರತಿಪಾದಿಸಿದರು.
ಗಾಬಿನೋ ಅವರ ಮೂಲ ಅಭಿಪ್ರಾಯಗಳು—ಮೂರು ಕುಲಗಳ ವರ್ಗೀಕರಣ, ರಕ್ತದ ಅನುವಂಶೀಯತೆ, ಆರ್ಯ ಕುಲ—ಏನಾದರೂ, ವೈಜ್ಞಾನಿಕ ತಳಹದಿಯನ್ನು ಹೊಂದಿರಲಿಲ್ಲ, ಮತ್ತು ಅವುಗಳೆಲ್ಲವೂ ಇಂದಿನ ವೈಜ್ಞಾನಿಕ ಸಮುದಾಯದಿಂದ ಸಂಪೂರ್ಣವಾಗಿ ಅಪಕೀರ್ತಿಗೊಳಗಾಗಿವೆ. ಆದಾಗ್ಯೂ, ಇತರರಿಂದ ಅವುಗಳು ಅತಿ ಬೇಗನೆ ಅಂಗೀಕರಿಸಲ್ಪಟ್ಟಿದ್ದವು. ಇಂಗ್ಲಿಷಿನವನಾದ ಹೋಸ್ಟನ್ ಸಿವ್ಟರ್ಟ್ ಚ್ಯಾಂಬರ್ಲೆನ್ ಅಂಥವರಲ್ಲಿ ಒಬ್ಬನಾಗಿದ್ದು, ಗಾಬಿನೋ ಅಭಿಪ್ರಾಯಗಳಿಂದ ಅವನು ಎಷ್ಟೊಂದು ಮನ ಸೆಳೆಯಲ್ಪಟ್ಟನೆಂದರೆ ಅವನು ಜರ್ಮನಿಯಲ್ಲಿ ಮನೆಯನ್ನು ಕೊಂಡುಕೊಂಡನು ಮತ್ತು ಕೇವಲ ಜರ್ಮನರಿಂದ ಮಾತ್ರವೇ ಆರ್ಯ ಕುಲದ ಶುದ್ಧತ್ವವನ್ನು ಸುರಕ್ಷಿತವಾಗಿ ಕಾಪಾಡುವ ನಿರೀಕ್ಷೆಯಿದೆ ಎಂಬ ಹೇತುವಿನ ಪಕ್ಷವಹಿಸಿದನು. ನಿಸ್ಸಂಶಯವಾಗಿ, ಚ್ಯಾಂಬರ್ಲೆನ್ನ ಬರಹಗಳು ಜರ್ಮನಿಯಲ್ಲಿ ವ್ಯಾಪಕವಾಗಿ ಓದಲ್ಪಟ್ಟವು, ಮತ್ತು ಅದರ ಫಲಿತಾಂಶವು ಘೋರವಾಗಿತ್ತು.
ಕುಲದ ಕುರಿತಾದ ಘೋರ ಫಲಿತಾಂಶ
ಜರ್ಮನ್ ಕುಲವು ಆರ್ಯರ ಉತ್ಕೃಷ್ಟ ಕುಲವಾಗಿದ್ದು ಅದು ತಾನೇ ಲೋಕವನ್ನಾಳುವಂತೆ ವಿಧಿಸಲ್ಪಟ್ಟಿತ್ತೆಂದು, ಮೈನ್ ಕಾಂಫ್ (ನನ್ನ ಹೋರಾಟ), ಎಂಬ ಅವನ ಪುಸ್ತಕದಲ್ಲಿ ಅಡಾಲ್ಫ್ ಹಿಟ್ಲರ್ ಪ್ರತಿಪಾದಿಸಿದ್ದನು. ಜರ್ಮನಿಯ ಆರ್ಥಿಕ ಆಡಳಿತದ ಹಾನಿಗೆ ಕಾರಣರಾದವರೆಂದು ಅವನು ಹೇಳಿದ್ದ ಯೆಹೂದ್ಯರು, ಈ ಮಹತ್ವವಾದ ಸಂಕಲ್ಪಕ್ಕೂ ತಡೆಯಾಗಿದ್ದರೆಂದು ಹಿಟ್ಲರನು ಭಾವಿಸಿದನು. ಹೀಗೆ ನಿರ್ವಿವಾದವಾಗಿ, ಮಾನವ ಇತಿಹಾಸದ ಅತ್ಯಂತ ಅಂಧಕಾರದ ಅಧ್ಯಾಯಗಳಲ್ಲೇ ಒಂದಾದ ಯೆಹೂದ್ಯರ ಮತ್ತು ಯೂರೋಪಿನ ಇತರ ಅಲ್ಪ ಸಂಖ್ಯಾತ ಪಕ್ಷದವರ ನಾಶಮಾಡುವಿಕೆಯು ಹಿಂಬಾಲಿಸಿತು. ಗಾಬಿನೋ ಮತ್ತು ಚ್ಯಾಂಬರ್ಲೆನ್ರನ್ನು ಒಳಗೊಂಡ ಕುಲ ಸಂಬಂಧವಾದ ಅಭಿಪ್ರಾಯಗಳ ವಿಪತ್ಕಾರಕ ಫಲಿತಾಂಶವು ಇದಾಗಿತ್ತು.
ಹಾಗಿದ್ದರೂ, ಅಂತಹ ವಿಕಾರತೆಯು ಕೇವಲ ಯೂರೋಪಿಗೆ ಮಾತ್ರ ಸೀಮಿತವಾಗಿರಲಿಲ್ಲ. ಹೊಸ ಲೋಕವೆಂದು ಕರೆಯಲ್ಪಡುವ ಮಹಾಸಾಗರದ ಇನ್ನೊಂದು ಪಕ್ಕದಲ್ಲೂ, ಮುಗ್ಧ ಜನರ ಸಂತತಿಯ ಮೇಲೆ ತದ್ರೀತಿಯ ನಿರಾಧಾರದ ಕಲ್ಪನೆಗಳು ಅಗಣಿತ ಕಷ್ಟಾನುಭವಗಳನ್ನು ತಂದೊಡ್ಡಿದವು. ಅಂತಿಮವಾಗಿ ಅಂತರ್ಯುದ್ಧದ ಅನಂತರ, ಅಮೆರಿಕದಲ್ಲಿ ಆಫ್ರಿಕದ ಗುಲಾಮರು ಸ್ವತಂತ್ರವನ್ನು ಪಡೆದಿದ್ದಾಗ್ಯೂ ಅನೇಕ ದೇಶಗಳಲ್ಲಿ ಇತರ ನಾಗರಿಕರು ಆನಂದಿಸಿದ ಅನೇಕ ಸುಯೋಗಗಳನ್ನು ಕಪ್ಪು ಕುಲದವರು ಆನಂದಿಸದಂತೆ ನಿಷೇಧಾಜ್ಞೆಗಳು ಹೊರಡಿಸಲ್ಪಟ್ಟವು. ಯಾಕೆ? ಕಪ್ಪು ಕುಲದವರು ಪೌರ ಕರ್ತವ್ಯಗಳಲ್ಲಿ ಮತ್ತು ಸರಕಾರದಲ್ಲಿ ಸಹಭಾಗಿಯಾಗಲು ಪ್ರಜ್ಞಾಶಾಲಿ ಸಾಮರ್ಥ್ಯವನ್ನು ಹೊಂದಿಲ್ಲವೆಂದು ಬಿಳಿಯ ನಾಗರಿಕರು ಅಭಿಪ್ರಯಿಸಿದ್ದರು.
ಅಂತಹ ಕುಲ ಸಂಬಂಧವಾದ ಅನಿಸಿಕೆಗಳು ಎಷ್ಟೊಂದು ಆಳವಾಗಿ ಅತಿಕ್ರಮಿಸಲ್ಪಟ್ಟಿವೆಯೆಂಬುದು ಬೇರೆಬೇರೆ ಜಾತಿಯ ಸ್ತ್ರೀ ಪುರುಷ ಸಂಪರ್ಕದ ಕುರಿತಾದ ನಿಯಮವನ್ನು ಒಳಗೊಂಡಿರುವ ಒಂದು ಸಂಗತಿಯಿಂದ ಉದಾಹರಿಸಲಾಗಿದೆ. ಕಪ್ಪು ವರ್ಣೀಯರ ಮತ್ತು ಬಿಳಿಯರ ನಡುವಿನ ವಿವಾಹಗಳನ್ನು ಈ ನಿಯಮವು ನಿಷೇಧಿಸಿದೆ. ಈ ನಿಯಮವನ್ನು ಮುರಿದ ಒಬ್ಬ ದಂಪತಿಯ ಅಪರಾಧ ನಿರ್ಣಯ ಮಾಡುವಾಗ, ಒಬ್ಬ ನ್ಯಾಯಾಧೀಶನು ಅಂದದ್ದು: “ಸರ್ವಶಕ್ತನಾದ ದೇವರು ಬಿಳಿ, ಕಪ್ಪು, ಪೀತ, ಮಲೆ, ಮತ್ತು ಕೆಂಪು ವರ್ಣೀಯರನ್ನು ಸೃಷ್ಟಿಮಾಡಿದನು, ಮತ್ತು ಆತನು ಅವರನ್ನು ಪ್ರತ್ಯೇಕ ಭೂಖಂಡಗಳಲ್ಲಿ ಇರಿಸಿದನು, ಮತ್ತು ಅವನ ಏರ್ಪಾಡಿನೊಂದಿಗೆ ಅಡ್ಡ ಬರುವುದರ ಹೊರತಾಗಿ ಅಂತಹ ವಿವಾಹಗಳಿಗೆ ಯಾವುದೇ ಕಾರಣವು ಇರಸಾಧ್ಯವಿಲ್ಲ.”
ನ್ಯಾಯಾಧೀಶರು ಇದನ್ನು ಹೇಳಿದ್ದು, 19ನೆಯ ಶತಮಾನದಲ್ಲಾಗಲಿ, ಒಂದು ಹಿಂದುಳಿದ ಕ್ಷೇತ್ರದಲ್ಲಾಗಲಿ ಅಲ್ಲ, ಬದಲು 1958ರಲ್ಲಿ—ಅಮೆರಿಕದ ಶಾಸನಮಂದಿರದಿಂದ 100 ಕಿಲೊಮೀಟರ್ಗಿಂತಲೂ ಅಧಿಕ ದೂರವಿಲ್ಲ. ನಿಶ್ಚಯವಾಗಿ, 1967ರಲ್ಲಿ ಅಮೆರಿಕದ ಅತ್ಯುಚ್ಚ ನ್ಯಾಯಾಲಯವು ಅಂತರ್ಜಾತಿಯ ವಿವಾಹಗಳ ವಿರುದ್ಧವಾದ ಎಲ್ಲಾ ನಿಯಮಗಳನ್ನು ನಿರರ್ಥಕ ಮಾಡುವ ತನಕ ಅದು ಅಸ್ತಿತ್ವದಲ್ಲಿತ್ತು.
ಅಂತಹ ಪಕ್ಷಪಾತದ ನಿಯಮಗಳು—ಹಾಗೆಯೇ ಶಾಲೆಗಳಲ್ಲಿ, ಚರ್ಚುಗಳಲ್ಲಿ, ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಪ್ರತ್ಯೇಕತೆ ಮತ್ತು ವಸತಿ ಮತ್ತು ಉದ್ಯೋಗದಲ್ಲಿ ಪಕ್ಷಪಾತಗಳು—ಅಮೆರಿಕ ಮತ್ತು ಇತರ ಅನೇಕ ಸ್ಥಳಗಳಲ್ಲಿ ಇವುಗಳು ಜೀವಿತದ ವಾಸ್ತವಿಕತೆಗಳಾಗಿ ಪರಿಣಮಿಸಿರುವ ಪೌರ ಅಶಾಂತಿ, ಪ್ರತಿಭಟನೆಗಳು, ಮತ್ತು ಬಲಾತ್ಕಾರಗಳಿಗೆ ಮುನ್ನಡಿಸಿವೆ. ಜೀವ ಮತ್ತು ಸ್ವತ್ತುಗಳ ವಿನಾಶವಲ್ಲದೆ, ಕಡುಸಂಕಟ, ದ್ವೇಷ, ಮತ್ತು ವೈಯಕ್ತಿಕ ಉಪೇಕ್ಷೆಗಳು ಮತ್ತು ಕಷ್ಟಾನುಭವಗಳು ಸುಸಂಸ್ಕೃತವೆಂದು ಕರೆಯಲ್ಪಡುವ ಒಂದು ಸಮಾಜದ ಕೇವಲ ಲಜ್ಜೆಯ ಮತ್ತು ಅಪಕೀರ್ತಿಯ ಫಲಿತಾಂಶಗಳಾಗಿ ಎಣಿಸಸಾಧ್ಯವಿದೆ.
ಹೀಗೆ, ಜಾತಿಯು ಮಾನವ ಸಮಾಜವನ್ನು ಬಾಧಿಸುತ್ತಿರುವ ಅತ್ಯಧಿಕ ವಿಭಾಜಕ ಶಕ್ತಿಗಳಲ್ಲಿ ಒಂದಾಗಿ ಪರಿಣಮಿಸಿದೆ. ಖಂಡಿತವಾಗಿ, ಇದು ನಮ್ಮನ್ನು ನಾವು ಹೀಗೆ ಕೇಳಿಕೊಳ್ಳುವುದರ ಮೂಲಕ, ನಮ್ಮ ಸ್ವಂತ ಹೃದಯಗಳನ್ನು ಪರೀಕ್ಷಿಸಿಕೊಳ್ಳುವುದನ್ನು ಆವಶ್ಯಪಡಿಸುತ್ತದೆ: ಒಂದು ಕುಲವು ಇನ್ನೊಂದು ಕುಲಕ್ಕಿಂತ ಉತ್ಕೃಷ್ಟವಾದದ್ದಾಗಿದೆ ಎಂದು ಪ್ರಕಟಿಸುವ ಯಾವುದೇ ಬೋಧನೆಗಳನ್ನು ನಾನು ನಿರಾಕರಿಸುತ್ತೇನೋ? ಕುಲ ಸಂಬಂಧವಾದ ಉತ್ಕೃಷ್ಟತೆಯ ಕುರಿತಾಗಿ ಇನ್ನೂ ಪರಿಹಾರವಾಗಿರದ ಯಾವುದೇ ಅನಿಸಿಕೆಗಳನ್ನು ತೆಗೆದುಹಾಕಲು ನಾನೆಂದಾದರೂ ಸ್ವತಃ ಪ್ರಯತ್ನಿಸಿದ್ದೇನೋ?
ಇಂದು ಇಷ್ಟೊಂದು ಅತಿರೇಕವಾಗಿ ವ್ಯಾಪಿಸಿರುವ, ಕುಲ ಸಂಬಂಧವಾದ ಪಕ್ಷಪಾತ ಮತ್ತು ಉದ್ವೇಗಕ್ಕೆ ಯಾವ ನಿರೀಕ್ಷೆಯಿದೆ, ಅದನ್ನು ಎಂದಾದರೂ ನಿರ್ಮೂಲ ಮಾಡಸಾಧ್ಯವಿದೆಯೋ? ಬೇರೆಬೇರೆ ಜನಾಂಗಗಳ, ಭಾಷೆಗಳ, ಮತ್ತು ಸಂಪ್ರದಾಯಗಳ ಜನರು ಒಟ್ಟಿಗೆ ಶಾಂತಿಯಲ್ಲಿ ಜೀವಿಸಬಲ್ಲರೋ? ಎಂದು ನಾವು ಕೇಳಿಕೊಳ್ಳುವುದು ಸಹ ಸೂಕ್ತವಾದದ್ದಾಗಿದೆ.
[ಪುಟ 7 ರಲ್ಲಿರುವ ಚಿತ್ರ]
ಅಧಿಕಾಂಶ ಬಿಳಿಯರಿಂದ, ಕರಿಯರು ಮನುಷ್ಯರಲ್ಲಿ ಕೆಳಜಾತಿಯವರಂತೆ ವೀಕ್ಷಿಸಲ್ಪಡುತ್ತಿದ್ದರು
[ಕೃಪೆ]
Reproduced from DESPOTISM—A Pictorial History of Tyranny
[ಪುಟ 8 ರಲ್ಲಿರುವ ಚಿತ್ರ]
ನಾಜಿ ನಿರ್ಮೂಲ ಶಿಬಿರಗಳು ಕುಲ ಸಂಬಂಧವಾದ ಅಭಿಪ್ರಾಯಗಳ ಒಂದು ವಿಪತ್ಕಾರಕ ಪರಿಣಾಮಗಳಾಗಿದ್ದವು
[ಕೃಪೆ]
U.S. National Archives photo