ಮರಳು, ತೈಲ, ಮತ್ತು ಧರ್ಮದ ಮೇಲೆ ಕಟ್ಟಿರುವ ಒಂದು ರಾಜ್ಯ
ಪಶ್ಚಿಮ ಯೂರೋಪಿನಷ್ಟು ದೊಡ್ಡದಾಗಿರುವ, 1 ಕೋಟಿ 20 ಲಕ್ಷ ಜನಸಂಖ್ಯೆಯಿರುವ, ಮತ್ತು ಸುಮಾರು ಸಕಲವೂ ಮರುಭೂಮಿಯಾಗಿರುವ ದೇಶ ಯಾವುದು? 1932ರಲ್ಲಿ ಸ್ಥಾಪಿಸಲ್ಪಟ್ಟು, 1938ರಲ್ಲಿ ಹೇರಳವಾಗಿ ತೈಲವಿದೆಯೆಂದು ಕಂಡುಹಿಡಿಯಲ್ಪಟ್ಟು, ಜಗತ್ತಿನ ಅತಿ ದೊಡ್ಡ ಅಪಕ್ವ ತೈಲ ಉತ್ಪಾದಕರಲ್ಲಿ ಮೂರನೆಯದಾಗಿ ಪರಿಣಮಿಸಿದ ರಾಜ್ಯ ಯಾವುದು? ಕುರಾನನ್ನು ತನ್ನ ಸಂವಿಧಾನವಾಗಿ ಆಯ್ದುಕೊಂಡಿರುವ ಮತ್ತು ಇಸ್ಲಾಮಿನ ಅತಿ ಪವಿತ್ರ ನಗರಗಳಲ್ಲಿ ಮತ್ತು ಮಸೀದಿಗಳಲ್ಲಿ ಎರಡು ಇರುವ ರಾಜ್ಯ ಯಾವುದು?
ಈ ಸಕಲ ಪ್ರಶ್ನೆಗಳ ಉತ್ತರವು ಫಾದ್ ಬಿನ್ ಅಬ್ದುಲ್ ಅಝೀಝ್ ಅರಸರು ಆಳುವ ಸೌದಿ ಅರೇಬಿಯ ರಾಜ್ಯವೇ. 22,40,000 ಚ. ಕಿ.ಮೀ. ವಿಸ್ತಾರವಿರುವ ಇದು, ಪಶ್ಚಿಮದಲ್ಲಿ ಕೆಂಪು ಸಮುದ್ರ, ದಕ್ಷಿಣದಲ್ಲಿ ಅರಬಿ ಸಮದ್ರ, ಮತ್ತು ಪೂರ್ವದಲ್ಲಿ ಅರೇಬಿಯನ್ ಕೊಲ್ಲಿ ಉಳ್ಳದ್ದಾಗಿದ್ದು ಅಧಿಕಾಂಶ ಅರೇಬಿಯನ್ ದ್ವೀಪಕಲ್ಪವನ್ನು ಆವರಿಸುತ್ತದೆ.
ಈ ಅರಬಿ ದೇಶದಲ್ಲಿ ನನಗೆ ಹೇಗೆ ಆಸಕ್ತಿ ಹುಟ್ಟಿತು? ನಾನು ವೃತ್ತಪತ್ರಕೆಯಲ್ಲಿ ಸೌದಿ ಅರೇಬಿಯನ್ ಸರಕಾರ ನ್ಯೂ ಯಾರ್ಕ್ ನಗರದಲ್ಲಿ ಏರ್ಪಡಿಸಿದ ಒಂದು ಪ್ರದರ್ಶನಕ್ಕೆ ಆಮಂತ್ರಣವನ್ನು ನೋಡಿದೆ. ಈ ಪ್ರತ್ಯೇಕ ಸಂಸ್ಕೃತಿ ಮತ್ತು ಜೀವನ ರೀತಿಯ ಕುರಿತು ಹೆಚ್ಚು ತಿಳಿಯಲು ಕುತೂಹಲಪಟ್ಟೆ. ಮತ್ತು, ನನಗೆ ಪ್ರಾಯಶಃ ಸೌದಿ ಅರೇಬಿಯಕ್ಕೆ ಹೋಗುವ ಸಂದರ್ಭ ಎಂದಿಗೂ ಇಲ್ಲದೆ ಇರುವ ಕಾರಣ, ಸೌದಿ ಅರೇಬಿಯವನ್ನೆ ನನ್ನ ಬಳಿಗೆ ಏಕೆ ಬರಗೊಡಿಸಬಾರದು?
ಸೌದಿ ಅರೇಬಿಯ—ಪುರಾತನ ಮತ್ತು ನೂತನ
ನಾನು ಪ್ರದರ್ಶನ ಕ್ಷೇತ್ರಕ್ಕೆ ಬಂದೊಡನೆ, ಸಾರ್ವಜನಿಕರು ಈ ಅರೇಬಿಯನ್ ದೇಶದ ವಿಷಯ ಒಳ್ಳೆಯ ಅಭಿಪ್ರಾಯಪಡುವಂತೆ ಸಕಲವನ್ನೂ ರಚಿಸಲಾಗಿದೆ ಎಂದು ಗ್ರಹಿಸಿದೆ. ಎಲ್ಲೆಲ್ಲಿಯೂ ಅಮೇರಿಕದಲ್ಲಿ ವಾಸಿಸುತ್ತಿದ್ದ ವಿಶ್ವವಿದ್ಯಾಲಯದ ಸೌದಿ ವಿದ್ಯಾರ್ಥಿಗಳು ಸುಬೋಧಪ್ರದ ಗೈಡ್ಗಳಾಗಿ ಕೆಲಸಮಾಡುತ್ತಿದ್ದರು. ಎಲ್ಲರ ಉಡುಪು ಪಾದ ಮುಟ್ಟುವ ಉದ್ದದ ನಿಲುವಂಗಿಯನ್ನು ಹೋಲುವ ಬಿಳಿಯ, ಪ್ರತಿನಿಧಿರೂಪದ ತೋಬ್ ಉಡುಪಾಗಿತ್ತು. ಪ್ರತಿಯೊಬ್ಬನು ಕೆಂಪು-ಬಿಳಿ ಮಿಶ್ರಿತ ಗುತ್ರ, ಅಥವಾ ತಲೆಬಟ್ಟೆಯನ್ನು ಧರಿಸಿದ್ದನು. ಇದನ್ನು ಕಪ್ಪು ದಾರದ ದಯ್ವ ದುಂಡುಪಟ್ಟಿ ಅದರ ಸ್ಥಾನದಲ್ಲಿಟ್ಟಿತ್ತು. ಎಲ್ಲರೂ ಒಳ್ಳೆಯ ಇಂಗ್ಲಿಷ್ ಭಾಷೆಯನ್ನಾಡಿ ನನ್ನ ಯಾ ಪ್ರಶ್ನೆ ಕೇಳಲು ಮನಸ್ಸಿರುವ ಇನ್ನಾವನ ಪ್ರಶ್ನೆಗೂ ಸಭ್ಯತೆಯಿಂದ ಉತ್ತರ ಕೊಟ್ಟರು.
ಸೌದಿ ಅರೇಬಿಯದ ರಾಜಮನೆತನದ ಚಿತ್ರಗಳೂ ದೇಶದ ವಿವಿಧ ರೂಪಗಳ ಮಲ್ಲಿಸೈಡ್ ಚಿತ್ರಗಳೂ ಇದ್ದ ಆರಾಮಕೋಣೆಯನ್ನು ದಾಟಿ ಆ ಬಳಿಕ ನಾನು ಅರಬಿ ಮತ್ತು ಬೆಡುಯೀನ್ ಸಾಂಪ್ರದಾಯಿಕ ಜೀವನವನ್ನು ಚಿತ್ರಿಸುವ ಆವರಣಕ್ಕೆ ಬಂದೆ. ಅಲ್ಲಿ ಒಂದು ಕಪ್ಪು ಬೆಡುಯೀನ್ ಡೇರೆಯೂ ಅದರೊಳಗೆ ಆ ಚರಪಶುಪಾಲ ಜೀವನದ ಉಡಿಗೆತೊಡಿಗೆಗಳೂ ಇದ್ದವು. ಆದರೆ ಆಧುನಿಕ ಯಾಂತ್ರಿಕ ಪ್ರಗತಿಯ ಕಾರಣ, ಬೆಡುಯೀನ್ ಜೀವನ-ರೀತಿ, ಅಪರಿಚಿತರಿಗೆ ತೋರಿಸುವ ಆದರ್ಶ ಅತಿಥಿಸತ್ಕಾರದೊಂದಿಗೆ ಈಗ ದಾಟಿ ಹೋಗುತ್ತಾ ಇದೆ.
ನಮ್ಮ ಮುಂದಿನ ಭೇಟಿಯ ವಿಭಾಗ, ಸೌದಿ ಅರೇಬಿಯನ್ ಜೀವನವನ್ನು ನಡೆಸುವ ಮತ್ತು ನಿಯಂತ್ರಿಸುವ ಧಾರ್ಮಿಕ ಶಕ್ತಿಯ—ಇಸ್ಲಾಮ್—ನ ಜ್ಞಾಪನವಾಗಿತ್ತು.a
ಮಕ್ಕ, ಕಾಬ, ಮತ್ತು ಕುರಾನ್
ಇಸ್ಲಾಮಿನ ಪವಿತ್ರ ಗ್ರಂಥವಾದ ಕುರಾನ್, “[ಸೌದಿ ಅರೇಬಿಯದ] ಸಂವಿಧಾನವಾಗಿ ಎಣಿಸಲ್ಪಟ್ಟು ನಡೆವಳಿಯ ನಿಯಮಗಳನ್ನು ಮತ್ತು ಮಾರ್ಗದರ್ಶನವನ್ನು ಒದಗಿಸುತ್ತದೆ” ಎಂದು ಒಂದು ಅಧಿಕೃತ ಕೈಪಿಡಿ ತಿಳಿಸುತ್ತದೆ. ಒಂದು ಲಘುಪುಸ್ತಕ ಹೇಳುವುದು: “ರಾಜ್ಯವು ತನ್ನ ಸಾಮಾಜಿಕ, ರಾಜಕೀಯ, ಮತ್ತು ಆರ್ಥಿಕ ಕಾರ್ಯನೀತಿಗಳನ್ನು ಇಸ್ಲಾಮಿನ ಬೋಧನೆಗಳ ಬೆಳಕಿನಲ್ಲಿ ರಚಿಸುತ್ತದೆ.” ಅಲ್ಲಿ ಕುರಾನಿನ ಅನೇಕ ಹಸ್ತಪ್ರತಿಗಳಿದ್ದರೂ, ಈ ವಿಭಾಗದ ಪ್ರಧಾನ ವಿಷಯ, ಮಹಾ ಮಸೀದಿ ಮತ್ತು ಮಧ್ಯದಲ್ಲಿ ಕಾಬ ಇರುವ ಮೆಕ್ಕ (ಅರಬಿ ಭಾಷೆ, ಮಕ್ಕ) ನಗರಕ್ಕೆ ಮಾಡುವ ಪುಣ್ಯಯಾತ್ರೆಯೆ. ಇವನ್ನು ದೊಡ್ಡ ಗಾತ್ರದ ಮಾದರಿರಚನೆಯಲ್ಲಿ ಚಿತ್ರಿಸಲಾಗಿತ್ತು.
ದೊಡ್ಡ ಘನಾಕಾರದ, ಕಲ್ಲಿನಿಂದ ಮಾಡಿ ದಪ್ಪದ ಕಪ್ಪು ಬಟೆಯ್ಟಿಂದ ಮುಚ್ಚಿರುವ ಕಾಬವನ್ನು ಒಂದು ಇಸ್ಲಾಮಿಕ್ ಸಾಹಿತ್ಯ, “ದೇವರು ಅಬ್ರಹಾಮ್ ಮತ್ತು ಇಷ್ಮಾಯೇಲರಿಗೆ ನಾಲ್ಕು ಸಾವಿರ ವರ್ಷಗಳಿಗೂ ಮೊದಲು ಕಟ್ಟಲು ಹೇಳಿದ ಆರಾಧನಾ ಸ್ಥಳ”bವೆಂದು ಹೇಳುತ್ತದೆ. ಹೀಗೆ (ಪ್ರವಾದಿ ಮೊಹಮ್ಮದರಿಂದ ಸಾ.ಶ. ಏಳನೆಯ ಶತಮಾನದಲ್ಲಿ ಆರಂಭಗೊಂಡ) ಇಸ್ಲಾಮ್ ಧರ್ಮ, ಯೆಹೂದಿ ಮತ ಮತ್ತು ಕ್ರೈಸ್ತ ಧರ್ಮಗಳ ಪೂರ್ವಿಕ ಪಿತೃವಾದ ಅಬ್ರಹಾಮನಿಗೆ ಸಂಬಂಧವುಳ್ಳದ್ದೆಂದು ವಾದಿಸುತ್ತದೆ. ಹೀಗೆ ಇದು ಮೂರು ದೊಡ್ಡ ಏಕದೇವ ಧಾರ್ಮಿಕ ಪದ್ಧತಿಗಳಲ್ಲಿ ಒಂದಾಗಿದೆ.
ವಾಸ್ತವವಾಗಿ, ಈ ಕಾಬ ಮಕ್ಕದಲ್ಲಿರುವ ಮಹಾ ಮಸೀದಿಯ ಹೊರಾಂಗಣ ಚೌಕದ ಮಧ್ಯೆ ಇದೆ. ವಾರ್ಷಿಕ ಪುಣ್ಯಯಾತ್ರೆಯ (ಹಜ್) ಸಮಯ ಇಲ್ಲಿಗೆ ಹತ್ತು ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಪ್ರಾರ್ಥನೆಗಾಗಿ ಮತ್ತು ಕಾಬವನ್ನು ಏಳು ಬಾರಿ ಸುತ್ತಲು ನೆರೆದು ಬರುತ್ತಾರೆ. ಪ್ರತಿಯೊಬ್ಬ ದೃಢಕಾಯದ ಮುಸ್ಲಿಮನು ತಾನು ಈ ಪ್ರಯಾಣವನ್ನು ತನ್ನ ಜೀವಮಾನಕಾಲದಲ್ಲಿ ಒಮ್ಮೆಯಾದರೂ ಮಾಡಲು ಹಂಗಿಗನು ಎಂದೆಣಿಸುತ್ತಾನೆ. ಈ ಪ್ರದರ್ಶನದಲ್ಲಿ ಮೊಹಮ್ಮದನ ಸಮಾಧಿಯಿರುವ ಮೆಡೀನ (ಅರಬಿ ಭಾಷೆ, ಮದೀನ) ದಲ್ಲಿರುವ ಬೃಹದಾಕಾರದ ಮಸೀದಿಯ ಒಂದು ಮಾದರಿಯನ್ನೂ ಸೇರಿಸಲಾಗಿದೆ.
ಪ್ರದರ್ಶನದಲ್ಲಿ ಕಾಬದ ಭಾರವಾದ ಅಲಂಕಾರಿಕ ದ್ವಾರಗಳು ವಿಶೇಷ ಆಸಕ್ತಿಕಾರಕವಾಗಿದ್ದವು. ಸಾಮಾನ್ಯವಾಗಿ, ಮಕ್ಕದ ಮಸೀದಿಯೊಳಗೆ ಮುಸ್ಲಿಮರಿಗೆ ಮಾತ್ರ ಪ್ರವೇಶವಿರುವುದರಿಂದ ಅವರಿಗೆ ಮಾತ್ರ ಇದನ್ನು ನೋಡಲು ಸಿಕ್ಕುತ್ತದೆ. ಒಬ್ಬ ಗೈಡ್, ಹೊಸ ದ್ವಾರಗಳಿಂದ ಭರ್ತಿ ಮಾಡುವ ತನಕ ಅವು 1942ರಿಂದ 1982ರ ವರೆಗೆ ಉಪಯೋಗಿಸಲ್ಪಡುತ್ತಿದ್ದ ದ್ವಾರಗಳು ಎಂದು ಹೇಳುವ ತನಕ ಅವು ಮೂಲದ್ವಾರಗಳೆಂದು ನಂಬಲು ಕಷ್ಟವಾಗುತ್ತಿತ್ತು. ಅವು ಚಿನ್ನ ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿದ್ದು ಅವುಗಳ ಅಲಂಕಾರ ಫಲಕಗಳಲ್ಲಿ ಅರಬಿ ಭಾಷೆಯಲ್ಲಿ ಕುರಾನಿನ ವಚನಗಳಿದ್ದವು. ಹತ್ತಿರದ ಗೋಡೆಯ ಮೇಲಿಂದ ಇನ್ನೂ ಹೆಚ್ಚು ಕುರಾನಿನ ಉಲ್ಲೇಖಗಳ ಚಿನ್ನದ ಕಸೂತಿಯಿದ್ದ ಕಿಸ್ವ ಯಾ ಕಾಬವನ್ನು ಮುಚ್ಚಲು ಉಪಯೋಗಿಸುವ ಭಾರವುಳ್ಳ ಕರೀ ಪರದೆಯಿತ್ತು.
ಸೌದಿ ಅರೇಬಿಯದಲ್ಲಿ ಆಧುನಿಕ ಜೀವನ
ಆ ಬಳಿಕ ನಮ್ಮ ಪ್ರದರ್ಶನ ಯಾತ್ರೆಯಲ್ಲಿ, ಕುಶಲಕರ್ಮಿಗಳು ಚಾಪೆ ಹೆಣೆಯುವ ಮತ್ತು ಇತರರು ಕಬ್ಬಿಣವನ್ನು ಮನೆಯ ಪಾತ್ರೆಗಳಾಗಿ ರೂಪಿಸುವ ಪ್ರತಿನಿಧಿರೂಪದ ದಾರಿನೋಟಗಳಿದ್ದವು. ಇತರ ಕೈಕೆಲಸದವರು, ಅರಬಿ ಮೆಟ್ಟುಗಳನ್ನು ತಯಾರಿಸಲು ಚರ್ಮದ ಕೆಲಸ ಮಾಡುತ್ತಿದ್ದರು. ಇನ್ನೊಬ್ಬನು ಮರದಿಂದ ಸಾದಾ ಪಕ್ಷಿಗೂಡುಗಳನ್ನು ಮಾಡುತ್ತಿದ್ದನು. ಇನ್ನೊಬ್ಬನು ಕಾಲಿಂದ ನಡೆಸುವ ಕುಂಬಾರ ಚಕ್ರದಿಂದ ಮಣ್ಣಿನ ಪಾತ್ರೆಗಳನ್ನು ಮಾಡುತ್ತಿದ್ದನು.
ಕೊನೆಗೆ ನಾನು ಆಧುನಿಕ ಸೌದಿ ಅರೇಬಿಯದ ಸಾಧನೆಗಳನ್ನು ತೋರಿಸುವ ವಿಭಾಗಕ್ಕೆ ಬಂದೆ. ತೈಲದ ಕಂಡುಹಿಡಿತವು ಸೌದಿ ಆರ್ಥಿಕ ಸ್ಥಿತಿಯನ್ನು ಮತ್ತು ರಾಷ್ಟ್ರದ ಜೀವನಮಟ್ಟವನ್ನು ರೂಪಾಂತರಿಸಿತ್ತು ಎಂದು ವ್ಯಕ್ತವಾಗುತ್ತಿತ್ತು. ಆ್ಯರಮ್ಕೊ (ARAMCO) ಎಂಬ ಅರೇಬಿಯನ್ ಅಮೆರಿಕನ್ ಆಯಿಲ್ ಕಂಪೆನಿ 1938ರಲ್ಲಿ ತುಂಬ ತೈಲದ ನಿಧಿಗಳನ್ನು ಕಂಡುಹಿಡಿಯಿತು. ಕಪ್ಪು ದ್ರವದ ಸ್ಯಾಂಪಲ್ ಸೀಸೆಗಳು ಪ್ರದರ್ಶಿಸಲ್ಪಟ್ಟಿದ್ದವು. ಕಂಪೆನಿಯ ಒಂದು ಕೈಪಿಡಿ ಹೇಳುವುದು: “ಈಗ ಆ್ಯರಮ್ಕೊ ಕಂಪೆನಿಯಲ್ಲಿ 43,000 ಕೆಲಸಗಾರರೂ, ಉತ್ಪಾದಿಸುವ 550 ಬಾವಿಗಳೂ, 20,500 ಕಿಲೊಮೀಟರ್ ಫ್ಲೋಲೈನ್ [ಹರಿವು ಸಾಲುಗಳು] ಮತ್ತು ಪೈಪ್ಲೈನುಗಳೂ ಮತ್ತು 60ಕ್ಕೂ ಹೆಚ್ಚು ಅನಿಲ-ಎಣ್ಣೆ ಪ್ರತ್ಯೇಕಿಸುವ ಕಾರ್ಖಾನೆಗಳೂ ಇವೆ.”
ಇಂಥ ಸ್ಥಿರವಾದ ಆರ್ಥಿಕ ಅಸ್ತಿವಾರವಿರುವಾಗ, ಸೌದಿ ಅರೇಬಿಯವು 25 ಲಕ್ಷ ವಿದ್ಯಾರ್ಥಿಗಳಿರುವ 15,000 ಶಾಲೆಗಳನ್ನು ಮತ್ತು ವಿದ್ಯಾಕೇಂದ್ರಗಳನ್ನು ಬೆಂಬಲಿಸುತ್ತದೆಂದು ಮಾಹಿತಿಯ ಕೈಪಿಡಿಗಳು ಹೇಳುವುದರಲ್ಲಿ ಆಶ್ಚರ್ಯವಿಲ್ಲ. ವಿಶ್ವವಿದ್ಯಾಲಯದ ತನಕ ವಿದ್ಯಾಭ್ಯಾಸ ಎಲ್ಲರಿಗೂ ಧರ್ಮಾರ್ಥ. ಮತ್ತು ಅಲ್ಲಿ ಏಳು ವಿಶ್ವವಿದ್ಯಾಲಯಗಳಿವೆ.
ಸೌದಿ ಅರೇಬಿಯದಲ್ಲಿ ತೈಲವೇ ಸರ್ವಸ್ವವೆಂದಲ್ಲ. ದೊಡ್ಡ ನೀರಾವರಿ ಯೋಜನೆಗಳು ಮುಗಿಸಲಾಗಿವೆ, ಮತ್ತು ವ್ಯವಸಾಯ ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಈಗ ದೇಶವು ಮೀನು, ಕೋಳಿ, ಗೋಧಿ, ಖರ್ಜೂರ, ತರಕಾರಿ, ಮತ್ತು ಕ್ಷೀರ ಮತ್ತು ಇತರ ಹೊಲದ ಉತ್ಪಾದನೆಗಳನ್ನು ರಫ್ತು ಮಾಡುತ್ತದೆ.
ಪ್ರತಿಯೊಂದು ನಾಣ್ಯಕ್ಕೆ ಎರಡು ಮುಖಗಳಿವೆ
ನಾನು “ಸೌದಿ ಅರೇಬಿಯ”ಕ್ಕೆ ಕೊಟ್ಟ ಮೂರು ತಾಸುಗಳ ಭೇಟಿಯನ್ನು ಆ ಸಾಧಾರಣ ಚಿಕ್ಕ ರಾಷ್ಟ್ರದ ಸಾಧನೆಗಳಿಂದ ತುಂಬ ಮನದಟಿದ್ಟವನಾಗಿ ಮುಗಿಸಿದೆ. ಪ್ರತಿ ರಾಷ್ಟ್ರವೂ ಹೀಗೆ ಲೋಕವ್ಯಾಪಕವಾದ ಗಿರಾಕಿಯಿರುವ ಪೆಟ್ರೋಲಿಯಮ್ ಯಾ ಇನ್ನಿತರ ಸಂಪತ್ತುಗಳಿಂದ ಪ್ರಸಾದಿಸಲ್ಪಡುತ್ತಿದ್ದಲ್ಲಿ ಸಂಗತಿಗಳು ಎಷ್ಟು ವಿಭಿನ್ನವಾಗುತಿದ್ದವೆಂದು ನಾನು ಯೋಚಿಸಿದೆ.
ನನ್ನ ಭೇಟಿ ಬೋಧಪ್ರದವಾಗಿ ಕಂಡುಬಂದರೂ ಧರ್ಮದ ಕ್ಷೇತ್ರದಲ್ಲಿದ್ದ ಲೋಪವನ್ನು ನನಗೆ ನೋಡದಿರಲು ಆಗಲಿಲ್ಲ. ಮಕ್ಕಕ್ಕೆ ಭೇಟಿ ನೀಡುವ ಮುಸ್ಲಿಮರು ಪೂಜ್ಯಭಾವದಿಂದ ನೋಡುವ ಕಪ್ಪಗಿನ ಕಾಬ ಉಲ್ಕಾಶಿಲೆಯ ನಿಜಸ್ಥಿತಿಯ ಕುರಿತು ನಾನೇನೂ ತಿಳಿಯಲಿಲ್ಲ. ಇಸ್ಲಾಮಿನ ಸ್ಥಾಪನೆಗೆ ಮೊದಲು ಈ ಕಲ್ಲನ್ನು “ಮೂಢಾರಾಧನೆಯ ಪೂಜ್ಯವಸ್ತುವಾಗಿ” ನೋಡಲಾಗುತ್ತಿತ್ತು” ಎಂದು ಫಿಲಿಪ್ ಕೆ. ಹಿಟಿ ತನ್ನ ಹಿಸ್ಟರಿ ಆಫ್ ದಿ ಆರಬ್ಸ್ ಪುಸ್ತಕದಲ್ಲಿ ಹೇಳುತ್ತಾರೆ. ಸಂಪ್ರದಾಯವು ಹೇಳುವುದೇನಂದರೆ, ಇಷ್ಮಾಯೇಲನು ಕಾಬವನ್ನು ಪುನಃ ಕಟ್ಟುತ್ತಿದ್ದಾಗ ದೇವದೂತ ಗಬ್ರಿಯೇಲನಿಂದ ಈ ಶಿಲೆಯನ್ನು ಪಡೆದನು.
ನಾನು ಪ್ರದರ್ಶನದಲ್ಲಿ ಕಂಡುಹಿಡಿದ ಇನ್ನೊಂದು ಲೋಪವು, ಇಸ್ಲಾಮಿನ ಸುನ್ನಿ ಮತ್ತು ಷಿಯ ಎಂಬ ಎರಡು ಪ್ರಧಾನ ಪಂಗಡಗಳ ಯಾವ ಸುದ್ದಿಯೂ ಅಲ್ಲಿರಲಿಲ್ಲ. ಈ ಒಡಕು ಮೊಹಮ್ಮದನ ಉತ್ತರಾಧಿಕಾರಿಗಳ ಸಮಯಕ್ಕೆ ಹಿಂದೆ ಹೋಗುತ್ತಾ, ಅವನ ಹಕ್ಕುದಾರರಾದ ಆತ್ಮಿಕ ಉತ್ತರಾಧಿಕಾರಿಗಳು ಯಾರು ಎಂಬ ಅರ್ಥವಿವರಣೆಯಲ್ಲಿ ಭಿನ್ನತೆಯ ಮೇಲೆ ಆಧಾರಿತವಾಗಿದೆ. ಉತ್ತರಾಧಿಕಾರಿಗಳು, ಷಿಯ ಮುಸ್ಲಿಮರು ವಾದಿಸುವಂತೆ ಮೊಹಮ್ಮದನ ರಕ್ತಸಂಬಂಧಿಗಳೊ, ಇಲ್ಲವೆ, ಬಹುಸಂಖ್ಯಾಕರಾದ ಸುನ್ನಿಗಳು ವಾದಿಸುವಂತೆ, ಚುನಾಯಿತ ಅಧಿಕಾರಿಗಳೊ? ಸೌದಿ ಜನರು ಸುನ್ನಿ ಮುಸ್ಲಿಮರ ನಾಲ್ಕು ಪಂಥಗಳಲ್ಲಿ ಅತಿ ಕಟ್ಟುನಿಟ್ಟಾದ ಹನ್ಬಾಲಿ ಪಂಥದ ಕರಾರುವಾಕಾದ ವಹಾಬ್ಹಿ ಪಂಗಡಕ್ಕೆ ಸೇರಿದವರು.
ಪ್ರದರ್ಶನದಲ್ಲಿ ಅರಬಿ ಸ್ತ್ರೀಯರ ಗೈರುಹಾಜರಿ ಗಮನಾರ್ಹವಾಗಿತ್ತು. ಇದು, ಸಾರ್ವಜನಿಕ ಜೀವನದಲ್ಲಿ ಸ್ತ್ರೀಯರ ಸ್ಥಾನದ ಕುರಿತ ಇಸ್ಲಾಮಿನ ನಿಯಮಗಳ ಸೌದಿ ಅರ್ಥವಿವರಣೆಯ ಕಾರಣವೆಂದು ನಾನು ಊಹಿಸಿದೆ.
ನಾನು ಪ್ರದರ್ಶನವನ್ನು ಬಿಟ್ಟುಹೋಗುವಾಗ ಪ್ರತಿಯೊಂದು ನಾಣ್ಯಕ್ಕೂ ಎರಡು ಮುಖಗಳಿವೆ ಎಂಬ ಮಾತುಗಳು ಬಲಾತ್ಕಾರದಿಂದ ನನ್ನ ಜ್ಞಾಪಕಕ್ಕೆ ತರಲ್ಪಟ್ಟವು. ಹೊರಗೆ ರಸ್ತೆಯಲ್ಲಿ ಅರಬಿ ವಿರೋಧಸೂಚಕರು ಸೌದಿ ಅರೇಬಿಯದಲ್ಲಿ ಕ್ರೌರ್ಯ ಮತ್ತು ಅನ್ಯಾಯದ ಕೃತ್ಯಗಳನ್ನು ಆರೋಪಿಸುವ ಮತ್ತು ಆ ದೇಶದಲ್ಲಿ ಪ್ರಜಾಪ್ರಭುತ್ವ ಕಾರ್ಯಗತಿಯ ಕೊರತೆಯನ್ನು ಖಂಡಿಸುವ ಲಘುಪುಸ್ತಕಗಳನ್ನು ಕೊಡುತ್ತಿದ್ದರು (ಅಲ್ಲಿ ಜಾತ್ಯತೀತ ಸಂವಿಧಾನವಾಗಲಿ ಪಾರ್ಲಿಮೆಂಟಾಗಲಿ ಇರುವುದಿಲ್ಲ). ಇದು, ಕೆಲವರಿಗೆ ಮರಳು, ತೈಲ, ಮತ್ತು ಧರ್ಮವು ಸರ್ವಸ್ವವಲ್ಲ ಎಂದು ನಾನು ಗ್ರಹಿಸುವಂತೆ ಮಾಡಿತು. ಆದರೆ, ಸೌದಿ ಅರೇಬಿಯದ ಜೀವನದ ಮತ್ತು ಅದರ ಜನರ ಮೇಲೆ ಇಸ್ಲಾಮಿನ ಪ್ರಭಾವದ ಹೆಚ್ಚು ಸ್ಪಷ್ಟವಾಗಿದ ಕಣ್ನೆಲೆಯಾದರೊ ನನಗೆ ದೊರಕಿತ್ತು.—ದತ್ತ ಲೇಖನ. (g91 1/8)
[ಅಧ್ಯಯನ ಪ್ರಶ್ನೆಗಳು]
a ಇಸ್ಲಾಮಿನ ಸವಿವರವಾದ ಚರ್ಚೆಗೆ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ 1990ರ ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್ ಎಂಬ ಪುಸ್ತಕದ 12ನೆಯ ಅಧ್ಯಾಯ, “ಇಸ್ಲಾಮ್—ದ ವೇ ಟು ಗಾಡ್ ಬೈ ಸಬ್ಮಿಶನ್” ನೋಡಿ.
b ಈ ಘಟನೆಗಾಗಲಿ ಅಬ್ರಹಾಮನು ಪುರಾತನ ಮಕ್ಕದಲ್ಲಿದ್ದನೆಂಬುದಕ್ಕಾಗಲಿ ಬೈಬಲಿನಲ್ಲಿ ಯಾವ ಸೂಚನೆಯೂ ಇಲ್ಲ.—ಆದಿಕಾಂಡ 12:8-13:18.
[ಪುಟ 28ರಲ್ಲಿರುವಚಿತ್ರ]
(For fully formatted text, see publication)
ಇರಾಕ್
ಇರಾನ್
ಸುಡಾನ್
ಮಕ್ಕ
ಸೌದಿ ಅರೇಬಿಯ
ಕೆಂಪು ಸಮುದ್ರ
ಅರಬಿ ಸಮುದ್ರ
[ಪುಟ 29 ರಲ್ಲಿರುವಚಿತ್ರ]
(ಎಡದಿಂದ) ಕಾಬದ ದ್ವಾರಗಳು, ಅರಬ್ ಶಿಲ್ಪಿ, ಮತ್ತು ಕಸೂತಿ ಹಾಕಿರುವ ಅರಬಿ ಲಿಪಿ
[ಕೃಪೆ]
David Patterson