ಜಗತ್ತನ್ನು ಗಮನಿಸುವುದು
“ಅಧಿಕಾರಯುಕ್ತ” ಹೆತ್ತವರು ಅತ್ಯುತ್ತಮ
“ಕ್ರೂರವಾಗಿ ದಂಡಿಸದಿರುವ, ಆದರೂ ಸ್ಥಿರವಾವಾದ ಸೀಮಿತಗಳನ್ನು ಇಟ್ಟು ಅದನ್ನು ಜಾರಿಗೊಳಿಸುವ ಹೆತ್ತವರು, ಹೆಚ್ಚು ಉನ್ನತವಾದದ್ದನ್ನು ಸಾಧಿಸುವ ಮತ್ತು ಇತರರೊಂದಿಗೆ ಒಳ್ಳೆಯದಾಗಿ ವರ್ತಿಸಶಕ್ತ ಮಕ್ಕಳನ್ನು ಬೆಳೆಸ ಶಕ್ತರು,” ಎಂದು ಯು.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳುತ್ತದೆ. ಅಂತಹ ಹೆತ್ತವರನ್ನು “ಅಧಿಕಾರಯುಕ್ತವಾಗಿರುವ” (“ಈ ಕಾರಣಕ್ಕಾಗಿ ಇದನ್ನು ಮಾಡು”), ಇದಕ್ಕೆ ವಿರುದ್ಧವಾಗಿ “ಅಧಿಕಾರದರ್ಪದವರಾಗಿರುವ” (“ಇದನ್ನು ಮಾಡು ಯಾಕಂದರೆ ನಾನು ಹೆತ್ತವನು”) ಮತ್ತು “ಸ್ವೇಚ್ಛಾಚಾರಿಗಳಾಗಿರಲು ಅನುಮತಿಸುವ” (ನೀನು ಬಯಸುವುದನ್ನೆಲ್ಲಾ ಮಾಡು”) ಹೆತ್ತವರೆಂದು ಹೆಸರಿಸಲಾಗಿದೆ, ಶಿಸ್ತುಬದ್ಧವಾದ ನಮೂನೆಗಳು ಭಿನ್ನವಾದ ನಡತೆಯ ಲಕ್ಷಣವಿರುವ ಮಕ್ಕಳನ್ನು ಉತ್ಪಾದಿಸಿದೆ. ಎರಡು ದಶಕಗಳನ್ನು ಆವರಿಸಿದ ಈ ಅಧ್ಯಯನವು, ಅಧಿಕಾರಯುಕ್ತವಾಗಿರುವ ಹೆತ್ತವರು ಸ್ಥಿರತೆಯ, ತೃಪ್ತಿಯಿಂದಿರುವ, ಸ್ವ-ನಿಯಂತ್ರಣವಿರುವ ಮತ್ತು ಸ್ವತಃ ಭರವಸವಿಡಶಕ್ತವಾದ ಮಕ್ಕಳನ್ನು ಉತ್ಪಾದಿಸಲು ಹೆಚ್ಚು ಶಕ್ತರಾಗಬಹುದು ಮತ್ತು ಮಾದಕೌಷಧದೊಂದಿಗೆ ಅನುಭವಪಡೆಯಲು ಹೋಗುವುದು ಕಡಿಮೆ ಎಂದು ತೋರಿಸಿದೆ. “ಅಧಿಕಾರಯುಕ್ತತೆಯ ಹೆತ್ತವರು ದೊರೆಗಳ ಹಾಗೆ ಇರುವುದಿಲ್ಲ,” ಎಂದು ಈ ಅಧ್ಯಯನ ನಡಿಸಿದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮನೋಶಾಸ್ತ್ರಜ್ಞೆ ಡಯಾನ ಬೌಮ್‌ರಿಂಡ್ ಹೇಳುತ್ತಾಳೆ. “ತಮ್ಮ ಮಕ್ಕಳು ಶಾಲೆಯಲ್ಲಿ ಏನು ಮಾಡುತ್ತಾರೆ ಮತ್ತು ಅವರು ಮಿತ್ರರು ಯಾರು ಎಂದು ತಿಳಿಯುವುದನ್ನು ಅವರು ತಮ್ಮ ಕರ್ತವ್ಯವಾಗಿ ನೋಡುತ್ತಾರೆ. ಅವರ ಹತೋಟಿಯು ಮಗುವಿನ ಕಡೆಗೆ ಅವರ ಉನ್ನತ ಮಟ್ಟದ ಕಟ್ಟುಪಾಡನ್ನು ಪ್ರತಿಬಿಂಬಿಸುತ್ತದೆ ಮತ್ತು ಮಗುವನ್ನು ಮುಖಾಮುಖಿ ಎದುರಿಸಲು ಅವರು ಹೆದರುವುದಿಲ್ಲ.” (g90 1/22)
ಆನೆಗಳು—ಈಗ ಅಪಾಯಕ್ಕೊಡ್ಡಲ್ಪಟ್ಟ ಪ್ರಾಣಿಜಾತಿ
ಅಪಾಯಕ್ಕೊಡ್ಡಲ್ಪಟ್ಟ ಪ್ರಾಣಿಜಾತಿಗಳ ಅಂತರ್ರಾಷ್ಟ್ರೀಯ ವ್ಯಾಪಾರದ ಮೇಲೆ ಒಂದು ಅಧಿವೇಶನ ಕಳೆದ ಅಕ್ಟೋಬರ್‌ನಲ್ಲಿ ಸ್ವಿಝರ್ಲೇಂಡಿನ ಲೌಸಾನ್‌ನಲ್ಲಿ ನಡೆದಾಗ, ಆನೆಗಳನ್ನು ಅದರ ಅಪಾಯಕ್ಕೊಡ್ಡಲ್ಪಟ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಯಿತು. ಆ ಕ್ರಿಯೆಯು ದಂತವ್ಯಾಪಾರವನ್ನು ನಿಷೇಧಿಸುತ್ತದೆ. ದಂತದ ಬೇಟೆಮಾಡುವವರಿಂದ ಕಳ್ಳತನದ ಕೊಲ್ಲುವಿಕೆಯು ಈ ನಿಷೇಧದಿಂದ ನಿಲ್ಲಿಸಲ್ಪಡುವುದು ಎಂದು ಈ ಅಧಿವೇಶನವು ನಿರೀಕ್ಷಿಸುತ್ತದೆ. ಕಳೆದ ದಶಕದಲ್ಲಿ ಆಫ್ರಿಕನ್ ಆನೆಗಳ ಸಂಖ್ಯೆಯು ಅರ್ಧದಷ್ಟು ಇಳಿದಿದೆ ಎಂದು ಅಂದಾಜಿಸಲಾಗಿದೆ. 1979ರಲ್ಲಿ ಸುಮಾರು 13 ಲಕ್ಷ ಆನೆಗಳು ಆ ಖಂಡದಲ್ಲಿ ಇದ್ದವು. ಆದರೆ ಈಗ ಅಲ್ಲಿ 6,25,000 ಇವೆ. (g90 1/22)
ಜಾಗತಿಕ ಅರಣ್ಯದ ತಪಶೀಲು ಪಟ್ಟಿ
ಲೋಕದ ಎಷ್ಟು ಭಾಗ ಇನ್ನೂ ಅರಣ್ಯವಾಗಿದ್ದು, ಸಾಮಾನ್ಯವಾಗಿ ಮನುಷ್ಯನು ಮುಟ್ಟದೆ ಇದೆ? ಅಂದಾಜಿಗನುಸಾರ ಸುಮಾರು ಈ ಗ್ರಹದ ಭೂಪ್ರದೇಶದ ಮೂರನೆಯ ಒಂದು ಭಾಗ—ಸುಮಾರು 1 ಕೋಟಿ 85 ಲಕ್ಷ 60 ಸಾವಿರ ಚದರಮೈಲಿಗಳಷ್ಟು—ಎಂದು 18 ತಿಂಗಳುಗಳಷ್ಟು ಈ ವಿಷಯದ ಮೇಲೆ ಸಂಶೋಧನೆ ನಡಿಸಿದ ಪರಿಸರ ಧೋರಣೆಯ ಸಂಗ್ರಾಹಕ ಜೆ. ಮೈಕಲ್ ಮಾಕ್ಲೊಸ್ಕಿ ಮತ್ತು ಭೂವಿಜ್ಞಾನಿ ಹೆದರ್ ಸ್ಪಾಲ್ಡಿಂಗ್ ಹೇಳುತ್ತಾರೆ. ವೈಮಾನಿಕ ಉಡ್ಡಯನ ತಾಂತ್ರಿಕತೆಯ ತಖ್ತೆಯನ್ನು ಅವಲೋಕಿಸುತ್ತಾ “ಅವರು ರಸ್ತೆಗಳನ್ನು, ವಸತಿ ಪ್ರದೇಶಗಳನ್ನು, ಕಟ್ಟಡಗಳನ್ನು, ವಿಮಾನ ನಿಲ್ದಾಣಗಳನ್ನು, ರೈಲುಮಾರ್ಗಗಳನ್ನು, ಪೈಪುಲೈನುಗಳನ್ನು, ವಿದ್ಯುಚ್ಛಕ್ತಿ ಲೈನುಗಳನ್ನು, ಆಣೆಕಟ್ಟುಗಳನ್ನು, ಸರೋವರಗಳನ್ನು ಮತ್ತು ಎಣ್ಣೆಬಾವಿಗಳನ್ನು ಲೆಕ್ಕಕ್ಕೆ ತೆಗೆದು ಕೊಳ್ಳಲಿಲ್ಲ,” ಎಂದು ಸಾಯನ್ಸ್ ನ್ಯೂಸ್ ಹೇಳುತ್ತದೆ. ಅವರು “ತಮ್ಮ ಭೂಪ್ರದೇಶದ ಭಾಗಗಳ ಲೆಕ್ಕವನ್ನು ಕಡಿಮೆ ಪಕ್ಷ ಹತ್ತು ಲಕ್ಷ ಎಕ್ರೆಗಳಿಗೆ ಸರಿಹೊಂದಿಸುತ್ತಿದ್ದರು.” ಪಟ್ಟಿಯಲ್ಲಿ ಮೊದಲಾಗಿ ಪೂರ್ಣ ಅರಣ್ಯವಿರುವ ಅಂಟಾರ್ಕಟಿಕ ಬರುತ್ತದೆ. ಅನಂತರ ಉತ್ತರ ಅಮೆರಿಕ (37.5 ಸೇಕಡಾ); ಸೊವಿಯೆಟ್ ಯೂನಿಯನ್ (33.6); ಆಷ್ಟ್ರೇಲೆಶಿಯಾ, ಇದರಲ್ಲಿ ನೈರುತ್ಯ ಫೆಸಿಫಿಕ್ ದ್ವೀಪಗಳು (27.9 ಸೇಕಡಾ); ಆಫ್ರಿಕಾ (27.5 ಸೇಕಡಾ); ದಕ್ಷಿಣ ಅಮೆರಿಕ (20.8 ಸೇಕಡಾ); ಏಶಿಯಾ (13.6 ಸೇಕಡಾ); ಮತ್ತು ಯೂರೋಪ್ (2.8 ಸೇಕಡಾ). ಲೋಕದ 20 ಸೇಕಡಾ ಅರಣ್ಯಪ್ರದೇಶಗಳು ಕಾನೂನುಬದ್ಧವಾಗಿ ಹಾಳುಗೆಡುವುದರಿಂದ ರಕ್ಷಿಸಲ್ಪಟ್ಟಿವೆ. (g90 2/8)
ಅಧಿಕ ಬೆದರಿಕೆ
ಪ್ರಚಲಿತ ಮಾದಕೌಷಧ ಜಾಡ್ಯಕ್ಕೆ ಇನ್ನೊಂದು ಪ್ರಮಾಣವು ಕೂಡಿದೆ: ಮಳೆ ಕಾಡುಗಳ ನಾಶನ. “ಅಮೆರಿಕ ಮತ್ತು ಯುರೋಪಿನ ಕೊಕೇಯ್ನ್ ಬೇಡಿಕೆಯಿಂದ ಪ್ರೇರಿಸಲ್ಪಟ್ಟು, ಪೆರುವಿಯನರಲ್ಲಿ ಕೊಕಾ ಬೆಳೆಗಾರರು, ಅಮೆಜಾನ್‌ನ ವಿಸ್ತಾರ ಪ್ರದೇಶದ ಮಳೆ ಕಾಡುಗಳನ್ನು ಕಡಿದು ಅಲ್ಲಿ ಅದರ ಉನ್ನತ ಪ್ರದೇಶಗಳಲ್ಲಿ ಮತ್ತು ನದಿಯ ಮೂಲಗಳಲ್ಲಿ ಲಕ್ಷಗಟ್ಟಲೆ ವಿಷಕಾರೀ ರಾಸಾಯನಿಕ ದ್ರವ್ಯಗಳನ್ನು ಸುರಿಯುತ್ತಿದ್ದಾರೆ,” ಎಂದು ದ ನ್ಯೂ ಯೋರ್ಕ್ ಟೈಮ್ಸ್ ಗಮನಿಸಿದೆ. ವರದಿಗನುಸಾರ, ಕೊಕಾ ಬೆಳೆಗಾರರು “ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ಮತ್ತು ಎರಡು ರಾಷ್ಟ್ರೀಯ ಕಾಡುಗಳನ್ನು ಆಕ್ರಮಿಸಿರುತ್ತಾರೆ, ಮತ್ತು ‘ಕಾಡುಗಳ ಹುಬ್ಬು’ ಎಂದು ಕರೆಯಲ್ಪಡುವ ನಾಜೂಕಾಗಿದ್ದ ಮೋಡದ ಕಾಡುಗಳಲ್ಲಿ ಅಧಿಕಭಾಗವನ್ನು ಕಡಿದಿರುತ್ತಾರೆ ಮತ್ತು ಸುಮಾರು 5,00,000 ಎಕ್ರೆಗಳಿಗಿಂತಲೂ ಹೆಚ್ಚು ಉಷ್ಣವಲಯದ ಕಾಡುಗಳನ್ನು ನಾಶಮಾಡಿರುತ್ತಾರೆಂದು ಅಂದಾಜಿಸಲಾಗಿದೆ.” ಪೆರುವಿಯಾದ ಅಮೆಜಾನ್‌ನಲ್ಲಿ ಕೊಕಾ ಎಲೆಗಳ ಬೆಳೆಯು ಅತಿ ದೊಡ್ಡಬೆಳೆ. ಕೊಕೇಯ್ನ್ ಬೆಳಸುವ ಅವರ ಆತುರದಲ್ಲಿ ರೈತರು ಮೇಲ್ಪದರಿನ ಮಣ್ಣುಕೊರೆತ ತಡೆಯುವ ತಮ್ಮ ಪೂರ್ವಜರ ಬೇಸಾಯ ಮಾಡುವ ಪದ್ಧತಿಗಳನ್ನು ತೊರೆದಿರುತ್ತಾರೆ. (g90 1/22)
ಪಾತಕ-ನಿಲ್ಲಿಸುವ ಕರ್ಫ್ಯೂಗಳು
ರಾತ್ರಿಯ 11 ಗಂಟೆಯ ನಂತರ ಯುವಕರು ಮನೆಯೊಳಗೆ ಇರುವಂತೆ, ಆಷ್ಟ್ರೇಲಿಯಾದ ಕ್ವೀನ್ಸ್‌ಲೇಂಡ್ ನಗರಪ್ರದೇಶವೊಂದರಲ್ಲಿ ಅವಿಧಿವತ್ತಾದ ಕರ್ಫ್ಯೂವೊಂದನ್ನು ಸ್ಥಾಪಿಸಿದೆ. ಫಲಿತಾಂಶಗಳು ಸಕಾರಾತ್ಮಕವಾಗಿವೆ. ಪೊಲೀಸ್ ಮತ್ತು ಕೌನ್ಸಿಲ್ ಸದಸ್ಯರು ಪಾತಕಗಳ ಪ್ರಮಾಣ ಇಳಿಮುಖವಾಗಿದೆ ಎಂದು ವರದಿಸಿರುತ್ತಾರೆ. ಫಲಿತಾಂಶವಾಗಿ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಎಳೆಯರ ಮೇಲೆ ಪ್ರಯೋಗ ರೀತಿಯಲ್ಲಿ ಕರ್ಫ್ಯೂ ವಿಧಿಸಲು ಮಂತ್ರಿಮಂಡಲದ ಸಮ್ಮತಿಯನ್ನು ಕ್ವೀನ್ಸ್‌ಲೇಂಡ್ ಸರಕಾರವು ಕೇಳುತ್ತದೆ. ಯೋಜನೆಗನುಸಾರ ಎರಡು ಪ್ರಯೋಗಾತ್ಮಕ ಕರ್ಫ್ಯೂಗಳನ್ನು ವಿಧಿಸಿ, ಒಂದು ಪ್ರಾಂತೀಯ ನಗರದಲ್ಲಿ, ಇನ್ನೊಂದು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೆ ತಂದು ವೀಕ್ಷಣೆ ಮಾಡುವುದು. ಪಾತಕಗಳ ಗತಿವಿಧಾನದಲ್ಲಿ ಇಳಿಮುಖದ ಸಕಾರಾತ್ಮಕ ಸೂಚನೆ ರುಜುವಾದರೆ, ಇಡೀ ಪ್ರಾಂತ್ಯದಲ್ಲಿನ ಎಲ್ಲಾ ಯುವಜನರ ಮೇಲೆ ಕರ್ಫ್ಯೂಗಳನ್ನು ವಿಧಿಸುವ ಶಾಸನವನ್ನು ತರುವಂತೆ ಸರಕಾರವನ್ನು ವಿನಂತಿಸಲಾಗುವುದು. (g90 1/8)