ತಡೆದು ಹಿಡಿಯಲ್ಪಟ್ಟಿರುವ ಕೊಲೆಗಾರ
ಈಜಿಪ್ಟಿನ Vನೆಯ ರ್ಯಾಮ್ಸೀಸ್ ಫರೋಹನು ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಸತ್ತನು. ಅವನ ಮರಣದ ನಿಶ್ಚಯ ಕಾರಣ ಯಾರಿಗೂ ತಿಳಿದಿರಲಿಲ್ಲ. ಆದರೆ ಈ ದಿನಗಳ ತನಕವೂ ಅವನ ರಕ್ಷಿಸಲ್ಪಟ್ಟಿರುವ ಮೃತ ದೇಹ ಒಬ್ಬ ವಿಚಿತ್ರ ಕೊಲೆಗಾರನ ರಟ್ಟು ಮಾಡುವ ಗುರುತನ್ನು ಇಟ್ಟುಕೊಂಡಿದೆ. ಇದೇ ಕ್ರೂರಿ ತನ್ನ ಧ್ವಂಸ ಮಾಡುವ ಗುರುತನ್ನು ಪುರಾತನ ಕಾಲದ ಭಾರತ, ಚೈನ, ಗ್ರೀಸ್ ಮತ್ತು ಸಾಧಾರಣವಾಗಿ ಪ್ರತಿಯೊಂದು ರಾಷ್ಟ್ರದಲಿಯ್ಲೂ ಬಿಟ್ಟುಹೋಗಿದ್ದಾನೆ.
ಈ ಕೊಲೆಗಾರ ಎಷ್ಟು ಬಲಾಢ್ಯವೆಂದರೆ ಅದು ಇತಿಹಾಸದ ಪಥವನ್ನೇ ಬದಲಾಯಿಸಿದೆ. ಒಂದು ಮೂಲಕ್ಕನುಸಾರ, ಅದು ಕೆಳಗಣ ಸಿಂಧು ನದಿಯ ಕಣಿವೆಯಲ್ಲಿ, ಮಹಾ ಅಲೆಕ್ಸಾಂಡರನ ಬಲಾಢ್ಯ ಸೈನ್ಯಕ್ಕೂ ಕಠಿಣ ಹೊಡೆತವನ್ನು ಕೊಟ್ಟಿತು. ದೇಶಾನ್ವೇಷಕ ಕಾರ್ಟೆಸನ ಜೊತೆಗೆ ಮೆಕ್ಸಿಕೊ ದೇಶಕ್ಕೆ ಹೋದ ಇದು ದೇಶೀಯ ಜನಸಂಖ್ಯೆಯನ್ನು ಎಷ್ಟು ನೆಲಸಮ ಮಾಡಿಬಿಟ್ಟಿತೆಂದರೆ ಅದು ಆ ನಾಯಕನಿಗೆ ಸುಲಭ ವಿಜಯದ ಖಾತರಿ ಕೊಟ್ಟಿತು. 18ನೆಯ ಶತಮಾನದ ಯೂರೋಪಿನಲ್ಲಿ, ಈ ಕೊಲೆಗಾರನ ಹಿಡಿತದಲ್ಲಿ ಕೆಲವು ವರ್ಷ 6,00,000 ದಷ್ಟೂ ಜನರು ಸಾಯುವುದು ತೋರಿಬಂತು. ಇವರೆಲ್ಲರೂ ನೋಡಸಾಧ್ಯವಿಲ್ಲದ ಒಂದು ಶತ್ರುವಿಗೆ—ಚಿಕ್ಕ, ಇಟ್ಟಿಗೆಯಾಕಾರದ ಸೂಕ್ಷ್ಮಾಣುವಾದ ಸಿಡುಬು ರೋಗಾಣುವಿಗೆ ಬಲಿ ಬಿದ್ದರು.
ಈ ಆಧುನಿಕ ದಿನಗಳಲ್ಲಿಯೂ ಸಿಡುಬು ಎಂದರೆ ಸಾಕು, ಅನೇಕರ ಹೃದಯ ಭಯದಿಂದ ನಡುಗುತ್ತದೆ. ಉದಾಹರಣೆಗೆ, 1947ರಲ್ಲಿ, ನ್ಯೂ ಯೋರ್ಕ್ ನಗರದಲ್ಲಿ 12 ಸಿಡುಬಿನ ಕೇಸುಗಳು ವರದಿಯಾದಾಗ ಅಲ್ಲಿಯ 60 ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ವ್ಯಾಕ್ಸಿನೇಶನ್ ಕೊಡಲಾಯಿತು. ಮತ್ತು, 1967 ರಷ್ಟೂ ಇತ್ತೀಚೆಗೆ, ಸಿಡುಬು ಇಪ್ಪತ್ತು ಲಕ್ಷ ಜನರನ್ನು ಆಹುತಿ ತೆಗೆದುಕೊಂಡಿತೆಂದು ಅಂದಾಜು ಮಾಡಲಾಗಿದೆ. ಈ ರೋಗ ಇಷ್ಟು ಭಯಂಕರವೇಕೆ? ಇದು ಇಂದೂ ಅಪಾಯಕಾರಿಯೇ?
ಭಯ ಪಡಬೇಕಾದ ಕೊಲೆಗಾರ
ನಮ್ಮಲ್ಲಿ ಅನೇಕರಿಗೆ, ಈ ರೋಗದ ಪರಿಚಯವಾಗುವುದು ಅಪರಿಚಿತನೊಬ್ಬನ ಕುಳಿ ಮುಖದಲ್ಲಿರುವ ವಿಶಿಷ್ಟ ಕಲೆಗಳು ಅವನು ಈ ಕೊಲೆಗಾರನ ಭೇಟಿಯಲ್ಲಿ ಬದುಕಿ ಉಳಿದವನೆಂಬ ಕಥೆಯನ್ನು ಹೇಳುವ ಮೂಲಕವೇ. ಆದರೂ ಅನೇಕರು ಬದುಕಿ ಉಳಿಯಲಿಲ್ಲ. ಕೆಲವು ವಠಾರಗಳಲ್ಲಿ ಕಾಯಿಲೆ ಬಿದ್ದ ಪ್ರತಿ ಇಬ್ಬರಲ್ಲಿ ಒಬ್ಬನು ಸತ್ತದ್ದೂ ಉಂಟು.
ಆದರೂ, ಅನೇಕರಿಗೆ ಅದರ ಅಸಹ್ಯ ರೋಗಸೂಚನೆಯೂ ಅದರ ಉನ್ನತ ಮರಣ ಸಂಖ್ಯೆಯಷ್ಟೇ ಭಯಾನಕವಾಗಿತ್ತು. ಒಬ್ಬ ವ್ಯಕ್ತಿಗೆ ರೋಗ ಹಿಡಿದು ಎರಡು ವಾರಗಳೊಳಗೆ ಆ ರೋಗಾಣು ನಿಜ ಸಮಸ್ಯೆಯನ್ನು ತರಲು ಸಾಕಾಗುವಷ್ಟು ವೃದ್ಧಿಯಾಗುತ್ತಿತ್ತು. ಅತಿ ಜಾಸ್ತಿ ಜ್ವರ, ತಲೆನೋವು, ಮತ್ತು ಚಳಿ ಆರಂಭವಾಗಿ ಸ್ವಲ್ಪದರಲ್ಲಿ ರಭಸ ಕಂಪನ ಮತ್ತು ಬೆನ್ನೆಲುಬಿನಲ್ಲಿ ಚುಚ್ಚುವ ವೇದನೆ ಅನುಸರಿಸಿ ಬರುತ್ತದೆ. ಕೆಲವೇ ದಿನಗಳಲ್ಲಿ ಚಿಕ್ಕ ಕೆಂಪು ಚುಕ್ಕೆಗಳು, ಮೊದಲಾಗಿ ಮುಖದ ಮೇಲೆ, ಬಳಿಕ ತೋಳು, ಎದೆ, ಬೆನ್ನು ಮತ್ತು ಅಂತಿಮವಾಗಿ ಕಾಲುಗಳಲ್ಲಿ ತೋರಿಬರುತ್ತವೆ. ಇದು ಬೇಗನೆ ದೊಡ್ಡದಾಗಿ ಕೀವು ತುಂಬಿದ ಗುಳ್ಳೆ ಯಾ ಬೊಕ್ಕೆಗಳಾಗಿ ಮಾರ್ಪಟ್ಟು ರೋಗಿಗೆ ಭಯಂಕರ ರೂಪವನ್ನು ಕೊಡುತ್ತದೆ. ಶರೀರದ ಜೀವದಾಯಕ ಅವಯವಗಳ ಮೇಲೆ ಇದು ಮಾಡುವ ಆಕ್ರಮಣ ಇನ್ನೂ ಗುರುತರವಾದುದು. ದೇಹದ ಸೋಂಕು ರಕ್ಷಕ ವ್ಯವಸ್ಥೆ ತನ್ನ ರಕ್ಷಣಾ ಸಾಮರ್ಥ್ಯವನ್ನು ಸಾಕಷ್ಟು ಹೆಚ್ಚಿಸದಿರುವಲ್ಲಿ, ಈ ಅವಯವಗಳಲ್ಲಿ ಒಂದೋ, ಹೆಚ್ಚೋ ಕುಸಿದು ಬೀಳುವ ಕಾರಣ ಅದು ರೋಗಿಯ ಮರಣಕ್ಕೆ ನಡೆಸುತ್ತದೆ.
ತೀರಾ ಅಂಟುವ ಜಾಡ್ಯವೆಂದು ಎಣಿಸಲ್ಪಡುವುದಿಲ್ಲವಾದರೂ, ರೋಗಿಯಾದ ಮನುಷ್ಯನ ಹೊರಗೆ ಸುಮಾರು ದೀರ್ಘಕಾಲ ಬದುಕಿ ಉಳಿಯಲು ಸಿಡುಬಿಗಿರುವ ಸಾಮರ್ಥ್ಯವು, ಅದು ರೋಗಿಗೆ ಸಮೀಪ ಸಂಪರ್ಕದಲ್ಲಿರುವ ಯಾ ಅವನ ಮಲಿನ ಹಾಸಿಗೆ ಮತ್ತು ಬಟ್ಟೆಗೆಳನ್ನು ಮುಟ್ಟುವ ಇತರರಿಗೆ ಬೇಗನೆ ಹರಡಬಲ್ಲದೆಂದು ತೋರಿಸುತ್ತದೆ. ಅದರ ಕೊನೆಯ ಬಲಿಯ ಒಡೆದ ಬೊಕ್ಕೆಗಳಿಂದ ಬಿಡುಗಡೆ ಹೊಂದಿರುವ ಈ ಕೊಲೆಗಾರ ರೋಗಾಣು ದೂಳಿನ ಕಣ ಯಾ ನೀರಿನ ಹನಿಯ ಮೇಲೆ ಸವಾರಿ ಮಾಡುತ್ತಾ ಇನ್ನೊಬ್ಬ ಬಲಿಯ ಗಂಟಲನ್ನು ಯಾ ಉಸಿರಾಟದ ಮಾರ್ಗವನ್ನು ಸುಲಭವಾಗಿ ಪ್ರವೇಶಿಸಿ ಅದರ ಸೋಂಕಿನ ಚಕ್ರವನ್ನು ಪುನಃ ಆರಂಭಿಸಬಲ್ಲದು.
ಸಿಡುಬಿನ ಹರಡುವಿಕೆಯನ್ನು ನಿಲ್ಲಿಸುತ್ತದೆಂದು ಹೆಸರು ಪಡೆದಿರುವ ಯಾವ ರಸಾಯನವಾಗಲಿ ಯಾ ಔಷಧವಾಗಲಿ ಹಿಂದೆ ಇದ್ದಿರಲಿಲ್ಲ, ಈಗಲೂ ಇರುವುದಿಲ್ಲ. ಡಾಕ್ಟರರು ಮತ್ತು ನರ್ಸ್ಗಳು ರೋಗಿಗೆ ಸಾಧ್ಯವಾಗುವಷ್ಟು ಉಪಶಮನವನ್ನು ಒದಗಿಸುತ್ತಾ ರೋಗ ಹರಡುವ ಅಪಾಯವನ್ನು ಕಡಮೆ ಮಾಡಲು ಔಷಧವನ್ನು ಕೊಡುತ್ತಿದ್ದರು. ವಾಸಿಯಾಗುವ ಒಂದೇ ನಿರೀಕ್ಷೆ ಮಾನವ ದೇಹದೊಳಗೆ ಆಶ್ಚರ್ಯಕರವಾಗಿ ರಚಿಸಲ್ಪಟ್ಟಿರುವ ರೋಗರಕ್ಷಕ ವ್ಯವಸ್ಥೆಯೇ ಆಗಿತ್ತು. ಮತ್ತು, ಆಧುನಿಕ ಔಷಧಶಾಸ್ತ್ರದ ಅತ್ಯಂತ ದೊಡ್ಡ ಕಂಡುಹಿಡಿತವನ್ನು ಮಾಡಲಾದದ್ದು ಇಲ್ಲಿಯೇ. ಹೀಗೆ ಈ ನಿರ್ದಯದ ಕೊಲೆಗಾರನನ್ನು ತಡೆಯಲು ಆಯುಧವನ್ನು ಒದಗಿಸಲಾಯಿತು.
ಕೊಲೆಗಾರನನ್ನು ಕೊಲ್ಲಲು ಒಂದು ಆಯುಧ
“ಮುಂದಿನ ಜನಾಂಗಗಳು ಇತಿಹಾಸದ ಮೂಲಕ ಮಾತ್ರ ಅಸಹ್ಯವಾದ ಸಿಡುಬು ಒಮ್ಮೆ ಇತ್ತು ಎಂದು ತಿಳಿಯುವರು” ಎಂದು 1806 ರಲ್ಲಿ, ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್ಸನ್ ಬರೆದರು. ಸಿಡುಬನ್ನು ಸದೆಬಡೆಯಲು ಒಂದು ಸಾಧನವನ್ನು ಕಂಡುಹಿಡಿದುದಕ್ಕೆ ಬ್ರಿಟಿಷ್ ಹಳ್ಳಿನಾಡಿನ ವೈದ್ಯ ಮತ್ತು ಪ್ರಕೃತಿಶಾಸ್ತ್ರಜ್ಞ ಎಡರ್ಡ್ವ್ ಜೆನ್ನರ್ ಅವರನ್ನು ಅಭಿನಂದಿಸುತ್ತಾ ಬರೆದ ಪತ್ರದಲ್ಲಿ ಅವರು ಹೀಗೆ ಬರೆದರು. ಕೊನೆಗೆ ವ್ಯಾಕ್ಸಿನೇಶನ್ ಎಂದು ಕರೆಯಲ್ಪಟ್ಟ ಈ ಜೆನ್ನರ್ ಚಿಕಿತ್ಸೆಯೂ, ಈ ಶತಮಾನದ ಪ್ರಯಾಣಿಕರಿಗೆ ಪರಿಚಯವಿರುವ ವಿಧಾನವೂ ಮೂಲರೀತಿಯಲ್ಲಿ ಒಂದೇ ಆಗಿದೆ.
ಜೆನ್ನರರ ತನಿಖೆಗಳು ನಡೆಯುವುದಕ್ಕೆ ಶತಮಾನಗಳಿಗೆ ಮೊದಲು ಅದಕ್ಕೆ ತುಸು ಹೋಲುತ್ತಿದ್ದ ಸಿಡುಬಿನ ಇನ್ನೊಂದು ಚಿಕಿತ್ಸೆ ಆಗಲೇ ಉಪಯೋಗದಲ್ಲಿತ್ತು. ದೃಷ್ಟಾಂತಕ್ಕೆ, ಭಾರತದ ಬಂಗಾಳದಲ್ಲಿ, ಗುರುತರವಲ್ಲದ ಸಿಡುಬು ರೋಗ ಸೋಂಕಿರುವ ವಸ್ತುಗಳನ್ನು ಸಂಗ್ರಹಿಸಿ ಅದನ್ನು ನಿಯಂತ್ರಿತ ರೀತಿಯಲ್ಲಿ ಆರೋಗ್ಯವುಳ್ಳವರಿಗೆ ಕೊಡುವುದು ಶೀತಲ ಮಾತೆ (ಸಿಡುಬು ದೇವತೆ) ಯ ಪುರಾತನ ಪೂಜಾರಿಗಳ ಪದ್ಧತಿಯಾಗಿತ್ತು. ಈ ಅಸಂಸ್ಕೃತ ರೀತಿಯ ರೋಗವಿಷ ಚುಚ್ಚುವಿಕೆಯಿಂದ ಅನೇಕ ವೇಳೆ ಅಷ್ಟು ಕಠಿಣ ರೀತಿಯದ್ದಲ್ಲದ ರೋಗ ಬರುತ್ತಿತ್ತು. ಆದರೆ ಕೊಡಲ್ಪಟ್ಟವನ ರೋಗರಕ್ಷಕ ವ್ಯವಸ್ಥೆ ಅದನ್ನು ಒಮ್ಮೆ ಜಯಿಸಿತೆಂದರೆ ಆ ವ್ಯಕ್ತಿ ಮುಂದಿನ ಆಕ್ರಮಣಗಳಿಗೆ ಪೂರ್ತಿ ನಿರೋಧ ಶಕ್ತಿಯುಳ್ಳವನಾಗಿರುತ್ತಿದ್ದನು.
ಇದರಲ್ಲಿ ಅಂತರ್ಗತ ಅಪಾಯಗಳಿದ್ದರೂ, ಈ ಚಿಕಿತ್ಸಾ ವಿಧವನ್ನು ಜೆನ್ನರ್ಪೂರ್ವದ ಸಮಯಾವಧಿಯಲ್ಲಿ ಯೂರೋಪಿಗೆ ಪರಿಚಯಪಡಿಸಲಾಯಿತು. 1757ರಲ್ಲಿ, ಎಂಟು ವಯಸ್ಸಿನ ಹುಡುಗನಾಗಿದ್ದಾಗ, ಜೆನ್ನರ್ ತಾನೇ, ಅವನ ಪಾಲಕರು ಅವನನ್ನು ಆಗ ಸಾಮಾನ್ಯವಾಗಿದ್ದ ಈ ರೋಗದಿಂದ ರಕ್ಷಿಸುವ ಸಲುವಾಗಿ ಆ ದಿನಗಳಲ್ಲಿ ಸಾಮಾನ್ಯವಾಗಿದ್ದ “ರೋಗವಿಷ ಚುಚ್ಚುವ ಕೊಟ್ಟಿಗೆ” ಗಳಿಗೆ ಕಳುಹಿಸಿದಾಗ ಇದರ ಸುವ್ಯಕ್ತ ಅರಿವನ್ನು ಪಡೆದಿದ್ದನು. ಚಲನೆಯನ್ನು ನಿಯಂತ್ರಿಸಲು ಹಗ್ಗದ ಬಾರಿಗೆ ಕಟ್ಟಲ್ಪಟ್ಟಿದ್ದ ಅವನನ್ನು, ಅಲ್ಲಿದ್ದ ಇತರರಂತೆ ಒಂದು ಹುಲ್ಲು ಆವರಿತ ಹಲಗೆಯ ಮೇಲೆ ಮಲಗಿಸಲಾಯಿತು. ಅಲ್ಲಿ ಅವನಿಗೆ ರೋಗವಿಷ ಚುಚ್ಚಿನಿಂದ ಉಂಟಾದ ಸಿಡುಬಿನ ಸಂಕಟಕರವಾದ ಪರಿಣಾಮಗಳ ಅನುಭವ ಅತಿ ಅಸಂಸ್ಕೃತ ರೀತಿಯ ಆರೈಕೆಯ ಕೆಳಗಾಯಿತು.
ಜೆನ್ನರ್ ಇದರಿಂದ ಬದುಕಿ ಉಳಿದರೂ, ಅನೇಕ ವರುಷಗಳ ವರೆಗೆ ಅವರು ಪೂರ್ತಿ ಗುಣ ಹೊಂದಲಿಲ್ಲ. ಈ ಅನುಭವ, ರೋಗರಕ್ಷಣೆಯ ಹೆಚ್ಚು ಉತ್ತಮ ವ್ಯವಸ್ಥೆಯನ್ನು ಕಂಡುಹಿಡಿಯುವರೇ ಅವರ ಅನಂತರದ ಜೀವನದಲ್ಲಿ ಅವರಿಗಿದ್ದ ಹುರುಪನ್ನು ಸ್ವಲ್ಪ ಮಟ್ಟಿಗೆ ವಿವರಿಸುತ್ತದೆ. ಈ ಸಂದರ್ಭ, ಅವರು ಡಾಕ್ಟರರಾಗಿ ಇಂಗ್ಲೆಂಡಿನ ಗ್ರಾಮಪ್ರದೇಶದ ಸಾಡ್ಬೆರಿಯಲ್ಲಿ ಕೆಲಸವನ್ನಾರಂಭಿಸಿದಾಗ ಬಂತು. ದನದ ಸಿಡುಬೆಂದು ಪ್ರಸಿದ್ಧವಾಗಿರುವ ರೋಗ ಹಿಡಿದ ಗೌಳಿಗಿತ್ತಿಯರಿಗೆ ಸಿಡುಬು ರೋಗ ಹಿಡಿಯುವುದೇ ಇಲ್ಲವೆಂಬ ಹಳೆಯ ಹಳ್ಳಿಮಾತಿನ ಸತ್ಯದಿಂದ ಅವರು ಸ್ತಂಭಿತರಾದರು. 1796 ರಲ್ಲಿ, ಅನೇಕ ವರ್ಷ ಕೇಸುಗಳ ಅಧ್ಯಯನ ಮಾಡಿದ ಬಳಿಕ, ತನ್ನ ಕಂಡುಹಿಡಿತವನ್ನು ಪರೀಕ್ಷಿಸಲು ಅವರು ಬೇಕೆಂದು ಜೇಮ್ಸ್ ಫಿಪ್ಸ್ ಎಂಬ ಚಿಕ್ಕ ಹುಡುಗನಿಗೆ ತೀರಾ ಮೃದು ಪರಿಣಾಮದ ದನದ ಸಿಡುಬನ್ನು ಸೋಂಕಿಸಿದರು. ಅವರ ಕಲ್ಪನೆ ಏನಾಗಿತ್ತೆಂದರೆ ಜೇಮ್ಸ್ ತುಸು ಅಸುಖದಿಂದ ಚೇತರಿಸಿಕೊಂಡ ಮೇಲೆ ಮಾರಕವಾದ ಸಿಡುಬು ಅಂಟುವುದರಿಂದ ರಕ್ಷಿತನಾಗಿರುವನು.
ಆದರೆ ಜೆನ್ನರರ ಈ ನಿಶಿತ್ಚಾಭಿಪ್ರಾಯದಲ್ಲಿ ಎಲ್ಲರೂ ಪಾಲಿಗರಾಗಲಿಲ್ಲ. ಸ್ಥಳೀಕ ಹಳ್ಳಿಗರು ಅವರು ಒಂದು ಭಯಂಕರ ಹೊಸ ವ್ಯಾಧಿಯನ್ನು ಆರಂಭಿಸುವರೆಂದೂ ಅವರು ಚಿಕಿತ್ಸೆ ನಡೆಸಿದ ಮಕ್ಕಳು ಗೋ ಜಾತಿಯ ಲಕ್ಷಣಗಳನ್ನು ಪಡೆಯುವರೆಂದೂ ಹೇಳಿ ಪ್ರತಿಭಟನೆ ತೋರಿಸಿದರು. ಜೆನ್ನರ್ ಈ ಎದುರಿಸುವಿಕೆಯನ್ನು ಸಹಿಸಿಕೊಂಡರು, ಮತ್ತು ಜೇಮ್ಸ್ ಯಾವ ಸಮಸ್ಯೆಗಳೂ ಇಲ್ಲದೆ ಚೇತರಿಸಿಕೊಂಡಾಗ ಮತ್ತು ಸರ್ವಶ್ರೇಷ್ಠವಾಗಿ, ಸಿಡುಬಿನಿಂದ ಪೂರ್ತಿಯಾಗಿ ರಕ್ಷಿತನಾದಾಗ, ಸ್ಥಳೀಕ ವಿರೋಧ ನಿಂತು ಹೋಯಿತು. ಇದರ ಸಂಶೋಧನೆ 1798ರ ತನಕ ಮುಂದುವರಿಯಿತು ಮತ್ತು ಆಗ ಜೆನ್ನರ್ ತಮ್ಮ ಕಂಡುಹಿಡಿತವನ್ನು ಲೋಕಕ್ಕೆ ಪ್ರಕಟಿಸಿದರು. ಅವರ ಕಲ್ಪನೆ ನಿರ್ದೋಷೀಕರಿಸಲ್ಪಟ್ಟಿತ್ತು. ಅಂತಿಮವಾಗಿ ಈ ಕೊಲೆಗಾರನನ್ನು ಹತಿಸುವ ಆಯುಧ ಸನ್ನಿಹಿತವಾಗಿತ್ತು.
ಹತಿಸಲು ಸುತ್ತುಗಟ್ಟಿ ಸಮೀಪಿಸುವುದು
ಜೆನ್ನರರ ಮಾರ್ಗದರ್ಶಕ ಕೆಲಸವನ್ನು ಅನುಸರಿಸಿ ಇತರ ವಿಜ್ಞಾನಿಗಳು ಸಂಶೋಧನೆ ಮುಂದುವರಿಸಿದರು. ವ್ಯಾಕ್ಸೀನನ್ನು ಉತ್ಪಾದಿಸುವ ಮತ್ತು ಕೊಡುವ ಉತ್ತಮ ವಿಧಾನಗಳು ಕಂಡುಹಿಡಿಯಲ್ಪಟ್ಟದರ್ದಿಂದ ಹತಿಸುವ ಈ ಹೊಸ ಆಯುಧದ ಕಾರ್ಯಸಾಧಕತೆ ಹೆಚ್ಚು ಹರಿತವಾಯಿತು. ಆದರೆ, ಈ ಪ್ರಗತಿಯ ಎದುರಿನಲ್ಲೂ ಸಿಡುಬು ರೋಗಾಣು ತನ್ನ ಆಹುತಿಗಳನ್ನು ತೆಗೆದುಕೊಳ್ಳುತ್ತಾ ಮುಂದುವರಿಯಿತು. 1966ರಲ್ಲೂ, ಸಿಡುಬು 44 ದೇಶಗಳಲ್ಲಿ ವರದಿಯಾಗಿತ್ತು, ಮತ್ತು ವಿಕಾಸ ಹೊಂದುತ್ತಿರುವ ದೇಶಗಳಲ್ಲಿ ಭಯಂಕರ ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿದ್ದವು.
ಅದೇ ವರುಷದ ಕೊನೆಯಲ್ಲಿ, 19 ನೆಯ ಲೋಕಾರೋಗ್ಯ ಸಮ್ಮೇಳನದಲ್ಲಿ, ರಾಷ್ಟ್ರಗಳು ಕೊನೆಗೆ ಒಂದಾಗಿ ಈ ಕೊಲೆಗಾರನನ್ನು ಹಿಡಿದು ಹತಿಸುವ ಸಕಾರಾತ್ಮಕ ಕ್ರಮವನ್ನು ಕೈಕೊಳ್ಳಲು ನಿರ್ಣಯಿಸಿದರು. ಮಾನವ ದೇಹದಿಂದ ಹೊರಗೆ ಬಂದಾಗ ಈ ಸಿಡುಬು ರೋಗಾಣು ಸಾಯುತ್ತದೆಂಬುದರ ಮೇಲೆ ಸಾಫಲ್ಯ ಆಧಾರವಾಗಿತ್ತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಮನುಷ್ಯರು ಮಾತ್ರ ಇದರ ಸೋಂಕು ವಾಹಕರಾಗಿದ್ದರು. ಆದುದರಿಂದ, ಮನುಷ್ಯರಿಂದ ಮನುಷ್ಯರಿಗೆ ದಾಟಿಹೋಗುವುದನ್ನು ತಡೆಯುವಲ್ಲಿ, ಈ ರೋಗಾಣು ಸಾಯುವುದು. ಹೀಗೆ, ಒಂದು ಹತ್ತು ವರ್ಷಗಳ ಸಿಡುಬು ನಿವಾರಣ ಯೋಜನೆ ಉದ್ಘಾಟಿಸಲ್ಪಟ್ಟಿತು. ಇದರಲ್ಲಿ ರೋಗ ತಲೆದೋರುವಿಕೆಯ ನಿಗಾವಣೆ, ಸಾರ್ವಜನಿಕರು ರೋಗವನ್ನು ವರದಿ ಮಾಡಲು ಪ್ರೋತ್ಸಾಹ, ಮತ್ತು ಹರಡದಂತೆ ಪಾತಕಿಯನ್ನು ತಡೆದು ಹಿಡಿಯಲು ಸಾಮೂಹಿಕ ವ್ಯಾಕ್ಸಿನೇಶನ್ ಸೇರಿತ್ತು.
ಇದರ ಪರಿಣಾಮವಾಗಿ, ಹೆಚ್ಚು ಕಡಮೆ ಒಡನೆ, ಆರೋಗ್ಯ ಸೇವೆ ಸೀಮಿತವಾಗಿರುವ ದೇಶಗಳಲ್ಲಿ ಸಹ ಪ್ರೋತ್ಸಾಹಕರವಾದ ಪರಿಣಾಮ ಉಂಟಾಯಿತು. ಉದಾಹರಣೆಗೆ, ಪಶ್ಚಿಮ ಮತ್ತು ಮಧ್ಯ ಆಫ್ರಿಕದಲ್ಲಿ, ಉಪಕರಣ, ಸಲಹೆಗಾರರು ಮತ್ತು ವ್ಯಾಕ್ಸೀನನ್ನು ದೊರಕಿಸಿದಾಗ, ಕೇವಲ ಮೂರುವರೆ ವರ್ಷಗಳಲ್ಲಿ 20 ರಾಷ್ಟ್ರಗಳು ರೋಗವನ್ನು ನಿವಾರಿಸಶಕ್ತನಾದವು. ಆಫ್ರಿಕದ ಯಶಸ್ಸಿನಿಂದ ಹುರಿದುಂಬಿಸಲ್ಪಟ್ಟು, ಏಶ್ಯಾ ತನ್ನ ನಿವಾರಣ ಪ್ರಯತ್ನಗಳನ್ನು ತ್ವರಿತಗೊಳಿಸಿತು. ಒಕ್ಟೋಬರ್ 16, 1975 ರೊಳಗೆ, ಪ್ರಾಕೃತಿಕವಾಗಿ ಸಂಭವಿಸಿದ ಕೊನೆಯ ಕೇಸು ಬಾಂಗ್ಲ ದೇಶದಲ್ಲಿ ಕಂಡುಹಿಡಿಯಲ್ಪಟ್ಟಿತು.
ಆದರೆ ಇದು ಸಮಾಪ್ತಿಯಾಗಿರಲಿಲ್ಲ, ಏಕೆಂದರೆ 1976ರಲ್ಲಿ ಈ ರೋಗದ ಎರಡು ಗುರುತರವಲ್ಲದ ರೂಪಗಳಲ್ಲಿ ಒಂದರ ವರದಿ ಸೋಮಾಲಿಯದಿಂದ ಇನ್ನೂ ಬರುತ್ತಿತ್ತು. ಇದನ್ನು ಹದಿಮೂರು ತಿಂಗಳುಗಳಲ್ಲಿ ಹೋರಾಡಲಾಯಿತು; ಆರೋಗ್ಯಾಧಿಕಾರಿಗಳು ಅದನ್ನು ಬೆನ್ನಟ್ಟಿ ಈ ದಗಾಕೋರನನ್ನು ತಡೆದು ಕೊನೆಗೆ, ಒಕ್ಟೋಬರ 1977 ರಲ್ಲಿ ಅದನ್ನು ಸುತ್ತುಗಟ್ಟಿದರು. ಅದರ ಕೊನೆಯ ಆಹುತಿ ನಾಡಿಗನಾದ ಆಲಿ ಮಾವ್ ಮಾಲಿನ್ ಎಂಬವನು. ಈ ಆಲಿ ಚೇತರಿಸಿಕೊಂಡಾಗ, ಪ್ರಾಕೃತಿಕ ರೀತಿಯಲ್ಲಿ ಸಂಭವಿಸಿದ ಕೊನೆಯ ಸಿಡುಬಿನ ಕೇಸು ಅಂತ್ಯಗೊಂಡಿತು. ಅಂತಿಮವಾಗಿ, ಸುಮಾರು 200 ವರುಷಗಳ ಬಳಿಕ, ಜೆನ್ನರರ ಸ್ವಪ್ನ ವಾಸ್ತವವಾಯಿತು. ಮಾನವಕುಲದ ಅತ್ಯಂತ ಭಯಂಕರ ವ್ಯಾಧಿಯಾದ ಸಿಡುಬಿನ ನಾಶನ ಸಾಧಿಸಲ್ಪಟ್ಟಿತು.
ಅದು ಪುನಃ ಎದ್ದು ಹೊಡೆದೀತೇ?
ಲೋಕವು 1980 ರಲ್ಲಿ ಸಿಡುಬಿನಿಂದ ಮುಕ್ತಿ ಹೊಂದಿದೆಯೆಂದು ಅಧಿಕೃತವಾಗಿ ಘೋಷಿಸಲಾಯಿತು. ಕಡ್ಡಾಯದ ವ್ಯಾಕ್ಸಿನೇಶನ್ ಈಗ ನಿಂತು ಹೋಗಿದೆ, ಮತ್ತು ಹೊಸ ಸಂತತಿಯೊಂದು ಈ ರೋಗಾಣುವಿನ ವಿರುದ್ಧ ರಕ್ಷಣೆಯ ಅಗತ್ಯವಿಲ್ಲದೆ ಬೆಳೆಯುತ್ತಾ ಇದೆ. ಆದರೆ ಇಂಥ ಸಾಂಕ್ರಾಮಿಕ ರೋಗ-ವಿಷವಿಲ್ಲದೆ ಬೆಳೆದಿರುವ ಜನಸಂಖ್ಯೆಗೆ ಈ ಕೊಲೆಗಾರನು ಹಿಂದಿರುಗುವಲ್ಲಿ ಏನಾಗಬಹುದು? ಪೂರ್ತಿ ಭೂಖಂಡಗಳನ್ನೇ ನಾಶಮಾಡಿ ಬಿಟ್ಟೀತೆಂಬ ಭಯವು ಇಂಥ ಹಿಂದಿರುಗುವಿಕೆ ಸಾಧ್ಯವೇ ಎಂಬ ಪ್ರಶ್ನೆಯನ್ನು ನಾವು ಕೇಳುವಂತೆ ನಮ್ಮನ್ನು ಪ್ರಚೋದಿಸುತ್ತದೆ.
ಕಲ್ಕತ್ತ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ ಇದರ ಒಬ್ಬ ರೋಗಾಣು ಶಾಸ್ತ್ರಜ್ಞನು ವಿವರಿಸಿದ್ದು: “ಎರಡು ಸಾಧ್ಯತೆಗಳಿವೆ, ಇದರಲ್ಲಿ ಒಂದು ಪ್ರಯೋಗ ಶಾಲೆಯಿಂದ ಸೋರಿ ಹೋಗುವಿಕೆ. ಇನ್ನೊಂದು ಮಾನವ ಹಗೆ ಸಾಧನೆ.”
ಈ ಬೆದರಿಕೆಗಳಲ್ಲಿ ಮೊದಲನೆಯದರ ವಾಸ್ತವಿಕತೆಯು 1978 ರಲ್ಲಿ ತೋರಿಸಲ್ಪಟ್ಟಿತು. ಆಗ, ಸ್ವಲ್ಪ ಕಾಲದ ಪುನರುತ್ಥಾನದಲ್ಲಿ, ಈ ಸಿಡುಬು ರೋಗ ಪುನಃ ತಲೆಪಂಕ್ತಿಯಾಯಿತು, ಆದರೆ ಈ ಬಾರಿ, ಇಂಗ್ಲೆಂಡಿನ ಬರ್ಮಿಂಗಮಿನಲ್ಲಿ. ಸಂಶೋಧನೆಗಾಗಿ ರೋಗಾಣುವನ್ನು ಇಟ್ಟಿದ್ದ ಪ್ರಯೋಗ ಶಾಲೆಯ ಮೇಲಂತಸ್ತಿನಲ್ಲಿ ಜೀವಿಸುತ್ತಿದ್ದ ಒಬ್ಬ ಫೊಟೋಗ್ರಫರಳಿಗೆ ಈ ರೋಗ ತಗಲಿ ಅವಳು ಸತ್ತಳು. ಆದರೆ ಸಾಯುವುದಕ್ಕೆ ಮೊದಲು ತನ್ನ ವಯಸ್ಸಾಗಿದ್ದ ತಾಯಿಗೂ ಇದನ್ನು ದಾಟಿಸಿದಳು. ಆದರೆ ಶುಭಸೂಚಕವಾಗಿ, ಬ್ರಿಟಿಷ್ ಅಧಿಕಾರಿಗಳು ತಕ್ಕೊಂಡ ಶೀಘ್ರ ಕ್ರಮದ ಕಾರಣ ಈ ರೋಗಾಣು ಪುನಃ ಬಂಧಿಯಾಗಿ ಇನ್ನು ಹೆಚ್ಚು ಮರಣಗಳಾಗುವುದನ್ನು ತಡೆಯಿತು. ಈ ರೀತಿಯ ಸಂಭವಗಳು ನಡೆಯುವುದನ್ನು ತಪ್ಪಿಸಲು ಈಗ ಸಿಡುಬನ್ನು ಕೇವಲ ಎರಡು—ಒಂದು, ಅಮೆರಿಕದ ಜಾರ್ಜಿಯದ ಅಟ್ಲಾಂಟದಲ್ಲಿ, ಇನ್ನೊಂದು, ರಷ್ಯದ ಮಾಸ್ಕೊವಿನಲ್ಲಿ—ಅತಿ ಸುರಕ್ಷಿತ ಸಂಶೋಧನಾಲಯಗಳ ಒಳಗೆ ಇಡಲಾಗಿದೆ.
ಆದರೆ ನೀವು ಹೀಗೆ ಪ್ರಶ್ನಿಸಬಹುದು: ‘ಇಂಥ ಅಪಾಯವನ್ನು ತಡೆಯುವರೇ ಈ ಕೊಲೆಗಾರನನ್ನು ಏಕೆ ಹತಿಸಲಿಲ್ಲ?’ ಮಾನವ ಹಗೆ ಸಾಧನೆಯೇ ಇದಕ್ಕೆ ಉತ್ತರ. ಭೀಕರವೆಂದು ಕಾಣುವುದಾದರೂ, ಈ ಸಿಡುಬನ್ನು ಜೀವವಿಜ್ಞಾನ ಯುದ್ಧಕ್ಕಾಗಿ ಉಪಯೋಗಿಸುವ ಸಾಧ್ಯತೆ ಸದಾ ಇದೆ. ಇಂಥ ವಿಷಯವನ್ನು ಮಾಡಲು ಮನುಷ್ಯನು ಸಮರ್ಥನೆಂದು ಇತಿಹಾಸ ತೋರಿಸಿದೆ. 17 ನೆಯ ಶತಮಾನದಲ್ಲಿ ಉತ್ತರ ಅಮೆರಿಕದಲ್ಲಿ ನೆಲೆಸಲು ತಮಗಿದ್ದ ಯೋಜನೆಗೆ ನೆರವಾಗಲು ಕೆಲವು ನಿವಾಸಿಗಳು ಬೇಕೆಂದು ನಾಡಿಗ ಇಂಡಿಯನರ ಮಧ್ಯೆ ರೋಗವನ್ನು ಹರಡಿಸಿದರು. ಅನೇಕರು ಆಶಾವಾದಿಗಳಾಗಿ, ನಾವು ಆ ಹಂತದಿಂದ ಮುಂದುವರಿದಿದ್ದೇವೆಂದೂ ಅಂಥಹ ‘ಸಿಡುಬು ಯುದ್ಧ’ ಲೇಶ ಸಂಭವವೆಂದೂ ಅಭಿಪ್ರಯಿಸುತ್ತಾರೆ. ಅದು ಹಾಗೆಯೇ ಆಗಲೆಂದು ನಾವು ಕೇವಲ ನಿರೀಕ್ಷಿಸಬಹುದು. ಸಿಡುಬು ನಿಜವಾಗಿಯೂ ಇಲ್ಲದೇ ಹೋಗಿದೆಯೆಂದೂ ಈಗ ಅಜ್ಞಾತವಾಗಿರುವ ಯಾವುದೋ ಕಾರಣದ ನಿಮಿತ್ತ ಅದು ಭವಿಷ್ಯತ್ತಿನಲ್ಲಿ ಪುನಃ ತಲೆಯೆತ್ತುವುದಿಲ್ಲವೆಂದೂ ನಾವು ಕೇವಲ ನಿರೀಕ್ಷಿಸಬಹುದು, ಅಷ್ಟೇ.
ಡಾ. ಜೆನ್ನರರ ಕಂಡುಹಿಡಿತದ ಕಾರಣ, ಇತಿಹಾಸದಲ್ಲಿ ಪ್ರಥಮ ಬಾರಿ, ಮನುಷ್ಯನು ತನ್ನ ಮಾರಕ ರೋಗಾಣು ಶತ್ರುಗಳಲ್ಲಿ ಒಂದನ್ನು ತೊಲಗಿಸುವುದರಲ್ಲಿ ಸಾಫಲ ಪಡೆದಿದ್ದಾನೆ. ಜೆನ್ನರರಿಗೆ ಎಷ್ಟೋ ಮೀರಿದ ನಾಜೂಕಾದ ಉಪಕರಣ ಮತ್ತು ತಿಳಿವಳಿಕೆಯಿರುವ ವೈದ್ಯಕೀಯ ವಿಜ್ಞಾನವು ಈಗ ಇತರ ಸಾಂಕ್ರಾಮಿಕ ರೋಗಗಳನ್ನು ಜಯಿಸಲು ಪ್ರಯತ್ನಿಸುತ್ತಾ ಇದೆ. ಅದು ಗೆದ್ದೀತೇ? ದೊಡ್ಡ ಗಾತ್ರದ ಮುಂದು ಹೆಜ್ಜೆಯ ಎದುರಿನಲ್ಲೂ ಮೊತ್ತದ ಗುರಿ ಹಿಂದಿನಷ್ಟೇ ದೂರದಲ್ಲಿದೆ ಎಂದು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂದಿರುವ ಜಗತ್ತನ್ನು ತರಲು ಮನುಷ್ಯನದ್ದಕ್ಕೆ ಮೀರಿದ ವಿವೇಕ ಅಗತ್ಯ ಎಂಬುದು ವ್ಯಕ್ತ.—ಯೆಶಾಯ 33:24. (g91 3/22)
[ಪುಟ 12 ರಲ್ಲಿರುವಚಿತ್ರಗಳು]
ಸಿಡುಬು ರೋಗರಕ್ಷೆ ಡಾ. ಎಡರ್ಡ್ವ್ ಜೆನ್ನರರ ಕೆಲಸದಿಂದ ಆರಂಭವಾಯಿತು
[ಕೃಪೆ]
WHO photo by J. Abcede
[ಪುಟ 21 ರಲ್ಲಿರುವ ಚಿತ್ರ ಕೃಪೆ]
WHO photo