ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 8/8 ಪು. 30-31
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಏಷ್ಯಾದಲ್ಲಿ ಇನ್ನೂ ಹೆಚ್ಚು ವ್ಯಸನಿಗಳು
  • ಭೂಕಂಪ ಮರಣಗಳು
  • ಬಲೂನ್‌ ಉದ್ಯಮದಲ್ಲಿ ಗಾಳಿ ಕಡಮೆ
  • ಡಾಲ್ಫಿನ್‌ನ ಮರಣ
  • ಪ್ರಾಣಿ ಆರೋಗ್ಯಾರೈಕೆ
  • ಹೆಚ್ಚು ವೇಗದಲ್ಲಿ ಕಾಣೆಯಾಗುತ್ತಿರುವ ಕಾಡು
  • 666 ಸಂಖ್ಯೆಯ ಅಂತ್ಯ
  • ಏಯ್ಡ್ಸ್‌ ವರ್ಧಿಸುತ್ತದೆ
  • ವ್ಯರ್ಥ ಬಂದೂಕುಗಳು
  • ಷಾರ್ಕ್‌ಭಕ್ಷಕ ನರರು
  • ಕಡಮೆ ಉಪ್ಪು ಪ್ರಯೋಜನಕರ
  • ಗಾಳಿಯ ಜೊತೆ ಜೊತೆ
    ಎಚ್ಚರ!—2002
  • ಕೋಟ್ಯಂತರ ಜೀವಗಳು ಹೊಗೆಯಾಗಿ ಹೋಗಿ ನಷ್ಟವಾಗುತ್ತಿವೆ
    ಎಚ್ಚರ!—1995
  • ಗ್ರೇಟ್‌ ವೈಟ್‌ ಷಾರ್ಕ್‌—ಆಕ್ರಮಣಕ್ಕೆ ತುತ್ತಾಗುತ್ತಿದೆ
    ಎಚ್ಚರ!—2000
  • ಲೋಕವನ್ನು ಗಮನಿಸುವುದು
    ಎಚ್ಚರ!—1993
ಇನ್ನಷ್ಟು
ಎಚ್ಚರ!—1992
g92 8/8 ಪು. 30-31

ಜಗತ್ತನ್ನು ಗಮನಿಸುವುದು

ಏಷ್ಯಾದಲ್ಲಿ ಇನ್ನೂ ಹೆಚ್ಚು ವ್ಯಸನಿಗಳು

ಏಷ್ಯಾದ ಅನೇಕ ದೇಶಗಳಲ್ಲಿ, ಹಿರೋಯಿನ್‌ ವ್ಯಸನ ಗಗನಕ್ಕೇರಿರುತ್ತದೆ. ಉದಾಹರಣೆಗಾಗಿ, 1980ರಲ್ಲಿ, ಶ್ರೀ ಲಂಕದಲ್ಲಿ 50ಕ್ಕಿಂತಲೂ ಕಡಮೆ ಗುರುತಿಸಬಹುದಾಗಿದ್ದ ಹಿರೋಯಿನ್‌ ವ್ಯಸನಿಗಳಿದ್ದರು. ಈಗ ಸಾಧಾರಣ 40,000 ಅಲ್ಲಿರುತ್ತಾರೆ. ಅದೇ ಸಮಯದಲ್ಲಿ, ಪಾಕಿಸ್ತಾನದ ವ್ಯಸನಿಗಳ ಸಂಖ್ಯೆ ಕೇವಲ ಕೆಲವೇ ಸಾವಿರಗಳಿಂದ 18 ಲಕ್ಷಕ್ಕೇರಿದೆ. ಏಷ್ಯಾವೀಕ್‌ ಪತ್ರಿಕೆ ಹೇಳುವುದು: “ಹೆಚ್ಚು ಕಠಿಣ ದಂಡನೆಗಳು ಅಮಲೌಷಧ ವ್ಯಾಪಾರದ ಏರುತ್ತಿರುವ ಪ್ರವಾಹವನ್ನು ನಿಧಾನಿಸಲು ತಪ್ಪಿವೆ. ಅಮಲೌಷಧ ಉಳ್ಳವನಾಗಿರುವುದಕ್ಕೆ ಲೋಕದಲ್ಲಿ ಬಿಗಿಯಾದ ಶಿಕ್ಷೆ ಇರುವಂಥ ದೇಶಗಳಲ್ಲಿ ಶ್ರೀ ಲಂಕ ಒಂದಾಗಿರುತ್ತದೆ: ಎರಡು ಗ್ರ್ಯಾಮ್‌ ಹಿರೋಯಿನ್‌ ಯಾ ಕೊಕೆಯ್ನ್‌ ಉಳ್ಳವನಾಗಿರುವಂಥದ್ದು ಮರಣ ಶಿಕ್ಷೆ ಯಾ ಜೀವಾವಧಿ ಸೆರೆವಾಸವನ್ನು ತರುತ್ತದೆ.” ಅಮಲೌಷಧ ವ್ಯಾಪಾರದಲ್ಲಿನ ಆರ್ಥಿಕ ಲಾಭ, ರೈತರು ಬೇರೆ ಬೆಳೆಗಳಿಂದ ತಮ್ಮ ವ್ಯವಸಾಯವನ್ನು ಹಿರೋಯಿನ್‌ ಉತ್ಪಾದಿಸುವ ಗಸಗಸೆ ಗಿಡಗಳಿಗೆ ಬದಲಾಯಿಸಿಕೊಳ್ಳುವಂತೆ ದುರ್ದರ ಪ್ರೇರಕವಾಗಿದೆ. ಕೊಲೊಂಬೋದ ನ್ಯಾಷನಲ್‌ ಡೇಂಜರಸ್‌ ಡ್ರಗ್ಸ್‌ ಕಂಟ್ರೋಲ್‌ ಬೋರ್ಡಿನ ಡಾ. ರವಿ ಪಿರೇರ ಗಮನಿಸಿದ್ದು: “ನಾಳೆ ಸಕ್ಕರೆ ಇಲ್ಲದಿರುವುದಾದರೇನು. ಹಿರೋಯಿನ್‌ ಇಲ್ಲದಿರುವುದಾದರೆ ಗೋಡೆಗಳ ಮೇಲೆ ತೆವಳುವ ಜನರಿರುವರು. ಅದನ್ನು ಪಡೆಯಲು ಅವರು ಎಷ್ಟಾದರೂ ಬೆಲೆ ತೆರುವರು.” (g91 7/22)

ಭೂಕಂಪ ಮರಣಗಳು

ಕಳೆದ ವರ್ಷ, ಭೂಕಂಪಗಳು ಸುಮಾರು ಹಿಂದಿನ ಇಡೀ ದಶಕದಲ್ಲಿ ಅವುಗಳಿಂದಾದ ಮರಣದಷ್ಟೆ ಮರಣಗಳಿಗೆ ಕಾರಣವಾದುವು. ಅಮೆರಿಕದ ಜಿಯೊಲಾಜಿಕಲ್‌ ಸರ್ವೇ ಪ್ರಕಾರ, 1980 ಮತ್ತು 1989ರ ನಡುವಣ ವರ್ಷಗಳಲ್ಲಿ ಭೂಕಂಪಗಳಿಂದ ಸತ್ತವರಾದ 57,500 ಮಂದಿಯೊಂದಿಗೆ ಹೋಲಿಸಿದಾಗ 1990ರಲ್ಲಿ ಭೂಕಂಪಗಳಿಂದ 52,000ಕ್ಕಿಂತಲೂ ಹೆಚ್ಚು ಸಾವುಗಳು ವರದಿಯಾದವು. 1976ರಿಂದ ಹಿಡಿದರೆ ಇದು ಅತ್ಯುನ್ನತ ವಾರ್ಷಿಕ ಮೊತ್ತ. ಜೂನ್‌ನಲ್ಲಿ ಇರಾನ್‌ಗೆ ಬಡಿದ 7.7 ಪ್ರಮಾಣದ ಏಕ ಕಂಪನದಲ್ಲಿ ಅಧಿಕಾಂಶ ಮರಣಗಳು ಸಂಭವಿಸಿದವು. ಆಗ ಹೆಚ್ಚು ಕಡಮೆ 50,000 ಮಂದಿ ಕೊಲ್ಲಲ್ಪಟ್ಟು, ಬೇರೆ 60,000 ಜನರು ಗಾಯಗೊಂಡರು. ವರದಿಯು ಹಿಂದಿನ ವರ್ಷಕ್ಕಿಂತ 8 ಹೆಚ್ಚಿಗೆ ಅಂದರೆ, 68 ದೊಡ್ಡ ಭೂಕಂಪಗಳನ್ನು ದಾಖಲೆ ಮಾಡಿತು. (g91 8/8)

ಬಲೂನ್‌ ಉದ್ಯಮದಲ್ಲಿ ಗಾಳಿ ಕಡಮೆ

ಸಾವಿರಾರು ಉಜ್ವಲ ವರ್ಣಗಳುಳ್ಳ ಬಲೂನ್‌ಗಳು ನಿಧಾನವಾಗಿ ಆಕಾಶಕ್ಕೇರಿ ಕಣ್ಮರೆಯಾಗುವುದನ್ನು ನೋಡುವುದು ಅನೇಕರಿಗೆ ಹರ್ಷಗೊಳಿಸುವ ಅನುಭವ. ಆದರೆ ಅಮೆರಿಕದಲ್ಲಿ ಇದು ಇನ್ನು ಮುಂದೆ ಸಾಮಾನ್ಯವಾಗಿರುವುದಿಲ್ಲ. 1985ರಲ್ಲಿ ನ್ಯೂ ಜರ್ಸಿಯಲ್ಲಿ ಒಂದು ಬಲೂನು, ದಡಕ್ಕೆ ಕೊಚ್ಚಿಕೊಂಡು ಬಂದ ಒಂದು ಸತ್ತ ತಿಮಿಂಗಿಲದ ಹೊಟ್ಟೆಯಲ್ಲಿ ಮತ್ತು ಇನ್ನೊಂದು ಒಂದು ಸತ್ತ ಲೆದರ್‌ಬ್ಯಾಕ್‌ ಕಡಲಾಮೆಯಲ್ಲಿ ದೊರೆತಂದಿನಿಂದ, ದೇಶದಾದ್ಯಂತ ಮಕ್ಕಳು, ಸಾವಿರಾರು ಪ್ರಾಣಿಗಳು ಹೀಗೆ ಅಲೆದು ಹೋಗಿರುವ ಬಲೂನುಗಳನ್ನು ತಿಂದಿರುವುದರಿಂದ ಸತ್ತವೆಂದು ನಂಬುತ್ತಾ ಬಲೂನುಗಳ ಮೇಲೆ ನಿರ್ಬಂಧಕ್ಕಾಗಿ ಕೂಗಾಡುತ್ತಿದ್ದರು. ಶಾಸಕರು ಮಕ್ಕಳ ಈ ಕೂಗನ್ನು ಕೇಳಿರುತ್ತಾರೆ, ಮತ್ತು ಅನೇಕ ರಾಜ್ಯಗಳು ಮತ್ತು ನಗರಗಳು, ಈಗಾಗಲೆ ಬಲೂನು ಬಿಡುವುದನ್ನು ನಿರ್ಬಂಧಿಸಿದ್ದಾರೆ ಯಾ ನಿಷೇಧಿಸಿದ್ದಾರೆ. ಬಲೂನು ಉದ್ಯಮ ಪ್ರಾಣಿ ಮರಣಗಳ ಹೇಳಿಕೆ ತಪ್ಪೆಂದು ವಾದಿಸುವಾಗ, ಬಲೂನು ಮಾರುವವರು ಒಂದು ವರ್ಷಕ್ಕೆ 60 ಲಕ್ಷ ಡಾಲರುಗಳಷ್ಟನ್ನು ವ್ಯಾಪಾರದಲ್ಲಿ ಕಳೆದುಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ. (g91 7/22)

ಡಾಲ್ಫಿನ್‌ನ ಮರಣ

ಇತ್ತೀಚಿನ ಒಂದು ಅಧ್ಯಯನ ತೋರಿಸುವುದೇನಂದರೆ, “ಲೋಕದ 65 ಸಿಟೇಶನ್ಸ್‌ (ಕಡಲ ಸಸ್ತನಿ) ಜಾತಿಗಳು ಹೆಚ್ಚುತ್ತಿರುವ ಸಂಖ್ಯೆಯಲ್ಲಿ ನಿರ್ಮೂಲವಾಗುವ ಅಂಚಿನಲ್ಲಿವೆ,” ಎಂದು ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಎನ್‌ವೈರನ್‌ಮೆಂಟ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಪ್ರಕಾಶಿತ ಬುಲೆಟಿನ್‌ ಪರ್‌ಸ್ಪೆಕ್ಟಿವ್‌ ಗಮನಿಸುತ್ತದೆ. 5,00,000ಕ್ಕಿಂತಲೂ ಹೆಚ್ಚು ಡಾಲ್ಫಿನ್‌ಗಳು ಪ್ರತಿ ವರ್ಷ ಕೊಲ್ಲಲ್ಪಡುತ್ತವೆಂದು ಸಂಶೋಧನಾಕಾರರು ಪ್ರತಿಪಾದಿಸುತ್ತಾರೆ. ಅಧ್ಯಯನ ನಡೆಸಿದ ಎನ್‌ವೈರನ್‌ಮೆಂಟ್‌ ಇನೆಸ್ವಿಗ್ಟೇಶನ್‌ ಏಜನ್ಸಿಗನುಸಾರ, “ಜಪಾನ್‌, ಮೆಕ್ಸಿಕೊ, ಪೆರು, ಸೌತ್‌ ಕೊರಿಯ, ಶ್ರೀ ಲಂಕ, ಮತ್ತು ಟಯಿವಾನ್‌ ದೇಶಗಳು ಅತಿ ದೊಡ್ಡ ಅಪರಾಧಿಗಳು, “ಮತ್ತು ಜಪಾನು ವರ್ಷಕ್ಕೆ ವಿಪರೀತ ಸಂಖ್ಯೆಯಲ್ಲಿ 1,00,000ಕ್ಕೂ ಹೆಚ್ಚು ಸಿಟೇಶನ್‌ಗಳನ್ನು ಕೊಲ್ಲುತ್ತದೆ.” ಮರಣದ ಪ್ರಮುಖ ಕಾರಣ ಕೊಚ್ಚು ಬಲೆಯಾದರೂ ಡಾಲ್ಫಿನ್‌ಗಳು, “ಗುಂಡು ಹೊಡೆಯಲ್ಪಟ್ಟು, ಇರಿಯಲ್ಪಟ್ಟು, ಈಟಿಯಿಂದ ಮತ್ತು ಕೊಕ್ಕೆ ಈಟಿಯಿಂದ ತಿವಿಯಲ್ಪಟ್ಟು, ಗಾಳದಿಂದ, ಮುಳುಗಿಸಲ್ಪಟ್ಟು, ದಡಕ್ಕೆ ತಳ್ಳಲ್ಪಟ್ಟು, ವಿದ್ಯುನ್ಮರಣಕ್ಕೆ ಒಳಗಾಗಿ, ಈಟಿಗಾಳದಿಂದ, ಬಾಂಬಿನಿಂದ ಮತ್ತು ಅಂಗಹೀನ ಮಾಡಲ್ಪಟ್ಟು” ಕೊಲ್ಲಲ್ಪಡುತ್ತವೆ. (g91 7/22)

ಪ್ರಾಣಿ ಆರೋಗ್ಯಾರೈಕೆ

ಮುದ್ದಿನ ಪ್ರಾಣಿಗಳ ಔಷಧ ಲೋಕದಲ್ಲಿ, “ನವನಾಜೂಕಿನ ಶಸ್ತ್ರಚಿಕಿತ್ಸೆಯಿಂದ ಹಿಡಿದು ಮೇಲ್ವಿಚಾರಣೆಗೊಳಗಾಗಿರುವ ಭಾರ ನಿಯಂತ್ರಣ, ದಂತಾರೈಕೆ, ಮತ್ತು ವರ್ತನಾ ಸಲಹೆಗಳ ವರೆಗೆ” ಸಕಲವೂ ಸೇರಿವೆ, ಎಂದು ದ ಟೊರಾಂಟೊ ಸ್ಟಾರ್‌ ವರದಿ ಮಾಡುತ್ತದೆ. “ಒಂದು ಪ್ರಾಣಿಯು ಇಂದು ಇರುವುದು ದುಬಾರಿ ವೆಚ್ಚದ್ದು” ಎನ್ನುತ್ತಾರೆ ಒಬ್ಬ ನರ್ಸ್‌. ಒಂದು ದೊಡ್ಡ ನಾಯಿಯ ಮುರಿದ ಕಾಲಿನ ಆರೈಕೆಗೆ 700 (ಕೆನೇಡಿಯನ್‌) ಡಾಲರಿಗೂ ಹೆಚ್ಚು ಖರ್ಚು ತಗಲೀತು. ಊದಿರುವ ಯಕೃತ್ತಿನ ಚಿಕಿತ್ಸೆಗೆ 800 ಡಾಲರು ಮತ್ತು ಹೆಚ್ಚು ತೆರಲು ಸಿದ್ಧವಾಗಿರಿ. ಒಂದು ಮೂತ್ರಜನಕಾಂಗದ ಸ್ಥಲಾಂತರ ಸುಲಭದಲ್ಲಿ 5,000 ಡಾಲರುಗಳಿಗೂ ಮೀರಿ ಹೋಗುವುದು. ವರ್ತನಾ ಸಲಹೆ ತಾಸಿಗೆ ಒಂದು ನೂರು ಡಾಲರ್‌ ಹಿಡಿಯುತ್ತದೆ. ಪ್ರಾಣಿ ಆರೋಗ್ಯಸೇವೆಗಳಲ್ಲಿ ಹೆರಿಗೆಯ ಕೊಟಡಿಗಳು, ತೀವ್ರಾರೈಕೆಯ ಅನುಕೂಲತೆಗಳು, ಆ್ಯಕ್ಯುಪಂಕ್ಚರ್‌ನ ಉಪಯೋಗ, ಇಲೆಕ್ಟ್ರೋಕಾರ್ಡಿಯೋಗ್ರ್ಯಾಮ್‌, ಕ್ಯಾಟರ್ಯಾಕ್ಟ್‌ ಪೊರೆ ನಿವಾರಣೆ, ಹಲ್ಲಿನ ರೂಟ್‌ ಕೆನಾಲ್‌ ಕೆಲಸ ಮತ್ತು ಪ್ರಾಣಿ ವಿಮೆ ಸಹ ಸೇರಿವೆ. (g91 8/8)

ಹೆಚ್ಚು ವೇಗದಲ್ಲಿ ಕಾಣೆಯಾಗುತ್ತಿರುವ ಕಾಡು

“ಭೂಮಿಯ ಉಷ್ಣವಲಯದ ಕಾಡುಗಳು ಹಿಂದೆ ಅಂದಾಜು ಮಾಡಿರುವುದಕ್ಕಿಂತ 50% ಹೆಚ್ಚು ವೇಗದಲ್ಲಿ ಕಾಣೆಯಾಗುತ್ತಿವೆ” ಎನ್ನುತ್ತದೆ, ಪರಿಸರ ಮತ್ತು ವಿಕಾಸದ ಅಂತಾರಾಷ್ಟ್ರೀಯ ಸಂಘದ ಬುಲೆಟಿನ್‌ ಪರ್‌ಸ್ಪೆಕ್ಟಿವ್ಸ್‌. ವರ್ಷಕ್ಕೆ 2 ಕೋಟಿ 70 ಲಕ್ಷ ಎಕ್ರೆಯ ಬದಲು, ವರ್ಲ್ಡ್‌ ರಿಸೋರ್ಸೆಸ್‌ ಸಂಘದ ಆಧಾರಾಂಶ, ಈಗ “ಪ್ರತಿ ವರ್ಷ 4 ರಿಂದ 5 ಕೋಟಿ ಎಕ್ರೆ ಉಷ್ಣವಲಯದ ಕಾಡುಗಳು ಬರಿದು ಮಾಡಲ್ಪಡುತ್ತಿರಬಹುದು” ಎಂದು ತೋರಿಸುತ್ತದೆ. (g91 8/8)

666 ಸಂಖ್ಯೆಯ ಅಂತ್ಯ

“ಬ್ರಿಟನ್‌ ಸೈತಾನಿಕ ಸಂಖ್ಯೆಯಾದ 666ನ್ನು ಆಟೊ ಲೈಸನ್ಸ್‌ ಪೇಟ್ಲುಗಳಿಂದ ತೆಗೆದಿದೆ,” ಎನ್ನುತ್ತದೆ ಲೀಡರ್ಸ್‌ ಎಂಬ ಪ್ರಕಾಶನ. ಬ್ರಿಟಿಷ್‌ ಸಾರಿಗೆ ಇಲಾಖೆಯ ಪ್ರತಿನಿಧಿ, ಆ್ಯನೆಟ್‌ ವಾಲ್ಶ್‌ ಎಂಬವರಿಗನುಸಾರ, ತಮ್ಮ ಅಪಘಾತಗಳಿಗೆ ಅದೇ ಸಂಖ್ಯೆ ಕಾರಣವೆಂದು ಡ್ರೈವರರು ಗೊಣಗಿದರಂತೆ. ವೇಲ್ಸಿನ ಒಬ್ಬನು, ತನಗೆ ಆ ನಂಬರನ್ನು ಕೊಟ್ಟು ಒಂದು ವಾರದೊಳಗೆ ತನ್ನ ನೀರಿನ ಸರಬರಾಯಿಗೆ ವಿಷ ಹಾಕಲ್ಪಟಿತ್ಟೆಂದೂ, ತನ್ನ ಮನೆಯಲ್ಲಿ ಕಳವಾಯಿತೆಂದೂ, ತನ್ನ ಕಾರಿಗೆ ಒಂದು ಟ್ರಕ್ಕು ಢಿಕ್ಕಿ ಹೊಡೆದ ಕಾರಣ ಅದು ನಾಶವಾಯಿತೆಂದೂ ಹೇಳಿದನು. ವಾಸ್ತವವೇನಂದರೆ, ಪ್ರಕಟನೆ 13:18ರಲ್ಲಿ 666ನ್ನು ಜಗತ್ತಿನ ರಾಜಕೀಯ ವ್ಯವಸ್ಥೆಯನ್ನು ಚಿತ್ರಿಸುವ ಸಾಂಕೇತಿಕ ಕಾಡು ಮೃಗಕ್ಕೆ ಅನ್ವಯಿಸುತ್ತದೆಯೇ ಹೊರತು ಅಪಘಾತ ಅಥವಾ ಇಂಥ ವ್ಯಕ್ತಿಗತ ಘಟನೆಗಳಿಗೆ ಅನ್ವಯಿಸುವುದಿಲ್ಲ. (g91 8/8)

ಏಯ್ಡ್ಸ್‌ ವರ್ಧಿಸುತ್ತದೆ

ಅತ್ಯುಗ್ರ ಏಯ್ಡ್ಸ್‌ ಭವಿಷ್ಯವಾಣಿಯನ್ನು ಲೋಕಾರೋಗ್ಯ ಸಂಘ ಇತ್ತೀಚೆಗೆ ಪ್ರಕಟಿಸಿದೆ. ಪ್ರಕ್ಷೇಪಣೆ ತೋರಿಸುವುದೇನಂದರೆ, 2000 ಇಸವಿಯೊಳಗೆ ಲೋಕವ್ಯಾಪಕವಾಗಿ, 1 ಕೋಟಿ ಮಕ್ಕಳು ಮತ್ತು 3 ಕೋಟಿ ವಯಸ್ಕರಿಗೆ ಏಯ್ಡ್ಸ್‌ ರೋಗಾಣು ತಟ್ಟುವುದು. ಅಷ್ಟರೊಳಗೆ 1 ಕೋಟಿ ಜನರು ಪೂರ್ತಿ ಬಲಿತಿರುವ ಏಯ್ಡ್ಸ್‌ ಉಳ್ಳವರಾಗುವರು ಮತ್ತು ಈ ರೋಗದ ಮರಣದಿಂದಾಗಿ 1 ಕೋಟಿ ಮಕ್ಕಳು ಅನಾಥರಾಗುವರು ಎಂದು ಅಂದಾಜು ಮಾಡಲಾಗುತ್ತದೆ. ಕೇವಲ ಒಂದು ವರ್ಷಕ್ಕೆ ಹಿಂದೆ, ಈ ಸಂಘ, ಏಯ್ಡ್ಸ್‌ ಉಳ್ಳವರು 50 ಲಕ್ಷ ಮಕ್ಕಳು ಮತ್ತು ಎರಡೂವರೆ ಕೋಟಿ ವಯಸ್ಕರು ಎಂದು ಹೇಳಿತ್ತು. ಆದರೆ ಆಫ್ರಿಕದ ಉಪ ಸಹಾರಾ ಮತ್ತು ಏಷ್ಯಾದಲ್ಲಿ ಈ ವೈರಸ್‌ ಅಪಾಯಕಾರಕವಾಗಿ ಹಬ್ಬುತ್ತಿದೆ ಎಂದು ಅಧ್ಯಯನ ತೋರಿಸಿರುವುದರಿಂದ ಈ ಭವಿಷ್ಯವಾಣಿಯನ್ನು ಪರಿಷ್ಕರಿಸಿ ಹೇಳಲಾಗಿದೆ. (g91 8/8)

ವ್ಯರ್ಥ ಬಂದೂಕುಗಳು

ಪಾತಕಗಳ ಮುಂದುವರಿಯುವ ಬೆದರಿಕೆಯ ಕಾರಣ ರೋಮಿನಲ್ಲಿ ಅನೇಕರು ಆತ್ಮರಕ್ಷಣೆಯ ವಿಭಿನ್ನ ರೀತಿಗಳಲ್ಲಿ ತೊಡಗಿದ್ದಾರೆ. ಲ ರಿಪಬ್ಲಿಕ ಹೇಳುವುದು, ಜನರು ಆಕ್ರಮಣಕಾರರನ್ನು ತಡೆಯಲು ಆಕ್ರಮಣ ಮಾಡುವ ನಾಯಿ, ಯುದ್ಧ ಕಲೆ, ರಾಸಾಯನಿಕ ಸ್ಪ್ರೇ, ಚಾಕು, ಆಡ್ಡಬಿಲ್ಲು, ಮತ್ತು ಖಡ್ಗಬೆತ್ತಗಳನ್ನು ಉಪಯೋಗಿಸುತ್ತಿದ್ದಾರೆ. 15,000ಕ್ಕೂ ಹೆಚ್ಚು ಸ್ತ್ರೀಯರೂ ಪುರುಷರೂ ಪೊಲೀಸರಿಂದ ಬಂದೂಕುಗಳ ಪರ್ಮಿಟನ್ನು ಪಡೆದಿದ್ದಾರೆ. ಇಟ್ಯಾಲಿಯನ್‌ ಯೂನಿಯನ್‌ ಆಫ್‌ ಮಾರ್ಕ್ತ್ಸ್‌ಮೆನ್‌ಗೆ ರೋಮಿನ ಪ್ರತಿನಿಧಿ, ಜಿಯಫ್ರಾಂಕೊ ರೊಡೊಲೀಕೊ ಎಂಬವರಿಗನುಸಾರ, ಸಾಮಾನ್ಯರು ಬಂದೂಕು ಇಟ್ಟುಕೊಳ್ಳುವುದು ವ್ಯರ್ಥ. ಅವರಂದದ್ದು: “ಒಂದು ಪಿಸ್ತೂಲನ್ನು ಹಿಡಿದುಕೊಂಡು ಸದಾ ನೀವು ನಡೆಯಲಾರಿರಿ. ಯಾರಾದರೂ ನನ್ನ ಮೇಲೆ ಬೀಳುವಲ್ಲಿ, ಅಧಿಕಾಂಶ ನನಗೆ ಅದನ್ನು ಹೊರತೆಗೆಯುವ ಸಮಯ ನಿಶ್ಚಯವಾಗಿಯೂ ಇರಲಿಕ್ಕಿಲ್ಲ,” ಎಂದು ಲ ರಿಪಬ್ಲಿಕ ಗಮನಿಸಿತು. (g91 7/22)

ಷಾರ್ಕ್‌ಭಕ್ಷಕ ನರರು

ಷಾರ್ಕ್‌ ಮೀನು, ವಿಶೇಷವಾಗಿ ಆಸ್ಟ್ರೇಲಿಯ, ಜಪಾನ್‌, ಸೌತ್‌ ಆಫ್ರಿಕ, ಮತ್ತು ಅಮೆರಿಕದ ಕರಾವಳಿಗಳಲ್ಲಿ ಅಪಾಯಕ್ಕೊಳಗಾಗಿವೆ. ಊಟದಲ್ಲಿ ಷಾರ್ಕ್‌ ಮಾಂಸದ ಹೆಚ್ಚಿರುವ ಜನಪ್ರಿಯತೆಯ ಕಾರಣ, ಈ ಪ್ರದೇಶಗಳಲ್ಲಿ ಷಾರ್ಕ್‌ಗಳ ಸಂಖ್ಯೆ ಕಡಮೆಯಾಗುತ್ತಿದೆ. ಟೈಮ್‌ ಪತ್ರಿಕೆಗನುಸಾರ, “ಅಮೆರಿಕದಲ್ಲಿ ಷಾರ್ಕ್‌ ಮೀನಿನ ಹಿಡಿತದ ವ್ಯಾಪಾರ 1980ರಲ್ಲಿ ಇದ್ದ 500 ಟನ್ನುಗಳಿಂದ 1989ರಲ್ಲಿ 7,144 ಟನ್ನುಗಳಿಗೆ ಏರಿದೆ.” ಷಾರ್ಕ್‌ ಈಜುರೆಕ್ಕೆಯಿಂದ ಮಾಡುವ ಸೂಪ್‌ ಸಾರು ಏಷ್ಯಾದಲ್ಲಿ ರಸಭಕ್ಷ್ಯವೆಂದೆಣಿಸಲ್ಪಡುತ್ತದೆ. ಕೆಲವು ಭೋಜನಾಲಯಗಳಲ್ಲಿ ಈ ಮೆತು ಪಾಕದಂತಿರುವ ಸೂಪಿನ ಒಂದು ಪಾತ್ರೆಗೆ 50 ಡಾಲರಿನಷ್ಟೂ ಕ್ರಯವಿದೆ. ಈ ಈಜುರೆಕ್ಕೆಗಳನ್ನು ಪಡೆಯಲು, ಬೆಸ್ತರು “ಷಾರ್ಕ್‌ಗಳನ್ನು ಹಿಡಿದು, ಅವುಗಳ ಈಜುರೆಕ್ಕೆಗಳನ್ನು ಕತ್ತರಿಸಿ, ಆ ಅಂಗಹೀನ ಜೀವಿಗಳು ಸಾಯುವಂತೆ ಅವುಗಳನ್ನು ಪುನಃ ಸಾಗರಕ್ಕೆ ಬಿಸಾಡುವ ಕ್ರೂರತೆಯನ್ನು ನಡಿಸುತ್ತಾರೆ,” ಎಂದು ಟೈಮ್‌ ಗಮನಿಸುತ್ತದೆ. (g91 7/22)

ಕಡಮೆ ಉಪ್ಪು ಪ್ರಯೋಜನಕರ

ದಿನಕ್ಕೆ 3 ಗ್ರ್ಯಾಮ್‌ ಉಪ್ಪನ್ನು ಕಡಮೆ ಸೇವಿಸುವಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ಹೃದ್ರೋಗ 16 ಪ್ರತಿಶತ ಮತ್ತು ಪಾರ್ಶ್ವವಾಯುವಿನ ಹೊಡೆತ 22 ಪ್ರತಿಶತ ಕಡಮೆಯಾಗುತ್ತದೆ, ಎನ್ನುತ್ತಾರೆ ಲಂಡನಿನ ಸಂಶೋಧಕರು. ಈ ಕಮ್ಮಿ ಸೇವನೆ, ಔಷಧ ಸೇವನೆಗಿಂತ ಹೆಚ್ಚು ಕಾರ್ಯಸಾಧಕ. ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ನಲ್ಲಿ ಫಲಿತಾಂಶವನ್ನು ಪ್ರಕಟಿಸುತ್ತಾ, ಲಂಡನಿನ ಸೆಂಟ್‌ ಬರ್ತಾಲೊಮ್ಯೂಸ್‌ ಹಾಸ್ಪಿಟಲ್‌ ಮೆಡಿಕಲ್‌ ಸ್ಕೂಲಿನ ಸಂಶೋಧಕರು ಉತ್ಪಾದಕರಿಗೆ, ಅವರು ತಮ್ಮ ಉತ್ಪಾದನೆಗಳಲ್ಲಿ ಉಪ್ಪನ್ನು ಕಮ್ಮಿ ಮಾಡಬೇಕೆಂದು ಸಲಹೆ ನೀಡುತ್ತಾರೆ. ಸಂಸ್ಕರಿಸಲ್ಪಟ್ಟ ಆಹಾರದಲ್ಲಿ ಉಪ್ಪು ಹಾಕಲ್ಪಡದಿರುವಲ್ಲಿ, ಹೃದಯಾಘಾತ 30 ಪ್ರತಿಶತ ಮತ್ತು ಪಾರ್ಶ್ವವಾಯು ಹೊಡೆತದಿಂದ ಸಾವು 39 ಪ್ರತಿಶತ ಕಡಮೆಯಾಗಿ, ಕೇವಲ ಬ್ರಿಟನಿನಲ್ಲಿಯೆ 65,000 ಮರಣಗಳನ್ನು ತಡೆಯಬಹುದೆಂದು ಅವರು ಹೇಳುತ್ತಾರೆ. ಊಟ ಮಾಡುವಾಗ ಜನರು ಉಪ್ಪು ಸೇರಿಸದೆ ಮತ್ತು ಉಪ್ಪಿನ ಆಹಾರಗಳನ್ನು ತಿನ್ನುವುದರಿಂದ ದೂರವಿದ್ದು ಉಪ್ಪು ಸೇವನೆಯನ್ನು ಕಡಮೆ ಮಾಡಬೇಕೆಂದು ಜನರಿಗೆ ಸಲಹೆ ನೀಡಲಾಗುತ್ತದೆ. (g91 8/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ