ಲೋಕವನ್ನು ಗಮನಿಸುವುದು
ದೇವದೂಷಣೆಯ ಟಯರುಗಳೊ?
ಜಪಾನಿನ, ಯೊಕೊಹಾಮಾದ, ಒಂದು ದೊಡ್ಡ ರಬ್ಬರ್ ಕಂಪೆನಿಯು, ಮುಸಿಮ್ಲರು ಅವುಗಳಿಂದ ಮನ ನೋಯಿಸಲ್ಪಟ್ಟದರಿಂದ, ವಾಹನ ಟಯರುಗಳಲ್ಲಿ ಒಂದು ರೀತಿಯ ಟಯರಿನ ಸಾಲಿನ ಉತ್ಪಾದನೆಯನ್ನು ನಿಲ್ಲಿಸಿತು. ಟಯರಿನ ನಮೂನೆಯು “ಅಲ್ಲಾ” ಗೆ ಉಪಯೋಗಿಸುವ ಆ್ಯರಬಿಕ್ ಪದವನ್ನು ಹೋಲುತ್ತದೆ ಎಂದು ಮುಸಿಮ್ಲರು ಆಪಾದಿಸಿದರು. ಕಂಪನಿಯು ಇಸ್ಲಾಮ್ ಧರ್ಮದ ಬಗ್ಗೆ ತನ್ನ ಜ್ಞಾನದ ಕೊರತೆಗಾಗಿ ಕ್ಷಮಾಯಾಚನೆಯನ್ನು ಹೊರಡಿಸಿ ಹೆಚ್ಚಿನ ವಾಹನ ಚಲಾವಣೆಯ ಸುರಕ್ಷೆಗಾಗಿ ಒಂದು ಕಂಪ್ಯೂಟರ್ ಈ ನಮೂನೆಯನ್ನು ರೂಪಿಸಿತು ಎಂದು ವಿವರಿಸಿತೆಂದು ಆಸಾಹಿ ಈವ್ನಿಂಗ್ ನ್ಯೂಸ್ ಹೇಳಿತು. ಅಲ್ಲಾನ ಸಂಬಂಧದಲ್ಲಿ ಮನನೋಯಿಸುವುದನ್ನು ಯಾ ದೂಷಣೆಯನ್ನು ಕಂಪೆನಿ ಅರ್ಥೈಸಿರಲಿಲ್ಲ. ಕಂಪೆನಿಯು ಇಸ್ಲಾಮಿಕ್ ದೇಶಗಳಲ್ಲಿ ಇರುವ ಟಯರುಗಳನ್ನು ಹಿಂದಕ್ಕೆ ಕರೆಯುತ್ತಿದೆ ಇಲ್ಲವೆ ಸ್ಥಾನಭರ್ತಿ ಮಾಡುತ್ತಿದೆ. (g93 3/8)
ಒಂದು ಉತ್ತಮ ವ್ಯಾಪಾರ
ಅರ್ಜೆಂಟೀನದಲ್ಲಿ, ಪ್ರಾಣಿ ಹಾಗೂ ಮಾನವ ಬಲಿಗಳ ವರದಿಗಳಿಂದ ಜನರು ಕಳವಳಗೊಂಡಿದ್ದಾರೆ. ಕ್ಲಾರೀನ್ ಪತ್ರಿಕೆಗನುಸಾರ, ಅರ್ಜೆಂಟೀನಾದ 5,000 ಪಂಗಡಗಳಲ್ಲಿ ಅನೇಕ ಪಂಗಡಗಳು ಪ್ರೇತವ್ಯವಹಾರವಾದ, ಸೈತಾನಾರಾಧನೆ, ಮತ್ತು ಮಾಂತ್ರಿಕವಾದದ ಬೇರೆ ವಿಧಗಳನ್ನು ಪರಿಶೀಲಿಸುತ್ತದೆ. ಈ ಪಂಗಡಗಳ ಹೆಚ್ಚಿನವುಗಳಲ್ಲಿ ಪ್ರತಿಮೆಗಳ ಉಪಯೋಗವು ಪ್ರಧಾನವಾಗಿದೆ. ಬೇನ್ವಸ್ ಅರೀಸ್‌ನಲ್ಲಿ, ಅಂಗಡಿಗಳು ಯೇಸು ಕ್ರಿಸ್ತನು ಮತ್ತು ಕ್ಯಾತೊಲಿಕ್ “ಸಂತರ” ಪ್ರತಿಮೆಗಳನ್ನು, ದೆವಗ್ವಳ ಮೂರ್ತಿಗಳಿರುವ ಅದೇ ಹಲಗೆಯ ಮೇಲೆ ಪ್ರದರ್ಶಿಸುವುದನ್ನು ನೋಡುವುದು ಅಸಾಮಾನ್ಯವಲ್ಲ. ಒಂದು ಜನಪ್ರಿಯ ಪ್ರತಿಮೆಯನ್ನು “ಲೂಸಿಫರ್, ಮಹಾ ನಾಯಕ ಮತ್ತು ದುಷ್ಟ ದೇವರುಗಳಲ್ಲಿ ಅತಿ ಭಯಂಕರನು” ಎಂದು ಕರೆಯಲಾಗುತ್ತದೆ. ಈ ಸೈತಾನನ ಪ್ರತಿಮೆಗಳನ್ನು ಸರಬರಾಜು ಮಾಡುವವರು ಕ್ಯಾತೊಲಿಕ್ ಪ್ರತಿಮೆಗಳನ್ನೂ ಹಂಚುವವರೆಂದು ಕ್ಲಾರೀನ್ ಗಮನಿಸುತ್ತದೆ. ಒಬ್ಬ ಅಂಗಡಿ ಮಾಲಿಕನು ಕ್ಯಾತೊಲಿಕ್ ಪ್ರತಿಮೆಗಳನ್ನೂ, ಸೈತಾನನ ಪ್ರತಿಮೆಗಳನ್ನೂ ಮಾರುವುದು ಒಂದು “ಉತ್ತಮ ವ್ಯಾಪಾರ” ಎಂದು ಒಪ್ಪಿಕೊಂಡನು. (g93 2/22)
ಪ್ರಾಚೀನ ಐಗುಪದ್ತಲ್ಲಿ ಅಮಲೌಷಧಗಳು
“ಮ್ಯೂನಿಕ್ ಮತ್ತು ಅಲ್ಮ್ [ಜರ್ಮನಿಯಲ್ಲಿ] ವಿಶ್ವವಿದ್ಯಾಲಯಗಳ ವಿಜ್ಞಾನಿಗಳು, ಐಗುಪದ್ತ ರಕಿತ್ಷ ಶವಗಳಲ್ಲಿ ಗಾಂಜ, ಕೊಕೆಯ್ನ್, ಮತ್ತು ನಿಕೊಟಿನಿನ ಸುಳಿವುಗಳನ್ನು ಪತೆಹ್ತಚ್ಚಿದ್ದಾರೆ,” ಎಂದು ಫ್ರಾಂಕ್‌ಫರ್ಟರ್ ಆಲೆಮ್ಗೈನ್ ಟ್ಸಾಟಿಂಗ್ ವರದಿಸುತ್ತದೆ. ಶೋಧಕರು 1070 ಸಾ.ಶ.ಪೂ. ಮತ್ತು 395 ಸಾ.ಶ. ಮಧ್ಯದ ತಾರೀಕಿನ ಅನೇಕ ರಕಿತ್ಷ ಶವಗಳ ಎಲುಬು, ಕೂದಲು, ಮತ್ತು ಕಣಗಳ ಮಾದರಿಗಳನ್ನು ಪರೀಕ್ಷಿಸಿದರು. ಈ ವೈಜ್ಞಾನಿಕ ಕಂಡುಹಿಡಿತಗಳು ಪ್ರಾಚೀನ ಐಗುಪದ್ತ ಜೀವನದ ಕುರಿತು ನಮಗೆ ಏನನ್ನು ಹೇಳುತ್ತವೆ? “ಐಗುಪ್ತರು ಸ್ಪಷ್ಟವಾಗಿಗಿ ಅಳುವ ಮಕ್ಕಳನ್ನು ಸಂತೈಸಲೂ ಕೂಡ ಅಮಲೌಷಧಗಳನ್ನು ಉಪಯೋಗಿಸಿದರು,” ಎಂದು ವಾರ್ತಾಪತ್ರಿಕೆ ಹೇಳುತ್ತದೆ. ವಿಜ್ಞಾನಿಗಳಿಗೆ ಹೇಗೆ ತಿಳಿದಿದೆ? ಒಂದು ಜಂಬುಕಾಗದವು, ನೊಣದ ಮಲ ಮತ್ತು ಗಸಗಸೆಯ ಮಿಶ್ರಣವು ಒಂದು ತೀಕ್ಷೈವಾದ ಶಾಮಕವೆಂದು ವರ್ಣಿಸುತ್ತದೆ. (g93 3/8)
“ನೊಣಗಳಿಲ್ಲದ ನಗರ”
ಚೀನಾದ, ಬೇಜಿಂಗ್‌ನ ನಿವಾಸಿಗಳು, ನೊಣಗಳ ಮೇಲೆ ಒಂದು ಸಂಪೂರ್ಣ ಯುದ್ಧವನ್ನು ಘೋಷಿಸಿದ್ದಾರೆ, ಎಂಬುದಾಗಿ ಇಂಟರ್‌ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್ ವರದಿಸುತ್ತದೆ. “ನೊಣಗಳಿಲ್ಲದ ಒಂದು ನಗರವನ್ನು ಸೃಷ್ಟಿಸುವುದೇ ನಮ್ಮ ಉದ್ದೇಶ,” ವೆಂದು ಒಬ್ಬ ಹಿರಿಯ ಆರೋಗ್ಯಾಧಿಕಾರಿ ವರದಿಸಿದನು. “ಆದರೆ ನಾವು ನೊಣಗಳನ್ನು ಕೇವಲ ಕೊಲ್ಲುವುದಿಲ್ಲ. ನಾವು ಶುದ್ಧವಾದ ನಗರಗಳನ್ನು ಸೃಷ್ಟಿಸಲು ಬಯಸುತ್ತೇವೆ.” “ಜನಸಮೂಹವನ್ನು ಸನ್ನದಗ್ಧೊಳಿಸುವ” ಒಂದು ಪ್ರಯತ್ನದಲ್ಲಿ, ನಾಗರಿಕರು ಲಾಂಛನಗಳನ್ನು ಪ್ರದರ್ಶಿಸಿದರು ಮತ್ತು ಚಳುವಳಿಯನ್ನು ಪ್ರಕಟಿಸುವ ಇಪ್ಪತ್ತು ಲಕ್ಷ ಕಿರುಹೊತ್ತಗೆಗಳನ್ನು ಹಂಚಿದರು. ಪ್ರಕಟನೆಯನ್ನು ಹಿಂಬಾಲಿಸಿದ ಒಂದು ವಿಶೇಷ “ಆಕ್ರಮಣ ವಾರ,” ದಲ್ಲಿ ನಗರವು ಸುಮಾರು 15 ಟನ್ ಕ್ರಿಮಿನಾಶಕಗಳನ್ನು ಮತ್ತು 2,00,000 ನೊಣ ಕೊಲ್ಲುವ ಫ್ಲೈಸ್ಪಾಟರ್‌ಗಳನ್ನು ಹಂಚಿತು. ಮುಂದಿನ ತಿಂಗಳಿನ ಇನ್ನೊಂದು ಆಕ್ರಮಣಾ ವಾರದಲ್ಲಿ, ವೃದ್ಧ ಜನರ ಮತ್ತು ಚಿಕ್ಕ ಮಕ್ಕಳ 1,000 ತಂಡವು ನೊಣಗಳ ವಿರುದ್ಧ 8,000 ಕಿಲೊಗ್ರಾಮ್ ವಿಷದಿಂದ ಹೋರಾಡಿದರು. ಜೂನ್ ತಿಂಗಳಿನಲ್ಲಿ ಬೇಜಿಂಗ್‌ನ ಕೆಲವು ಪ್ರದೇಶಗಳು ಪ್ರತಿ ಕೋಣೆಗೆ 33 ರಷ್ಟು ಅಧಿಕ ನೊಣಗಳ ಸಂಖ್ಯೆಯಿಂದ ತಳಮಳಿಸುತಿದ್ದವು. ಈ ಸಾಂದ್ರತೆಯ ಮಟ್ಟವನ್ನು ಪ್ರತಿ 100 ಕೋಣೆಗಳಿಗೆ ಎರಡು ನೊಣಗಳಿಗೆ ತರುವ ಉದ್ದೇಶವಿದೆ. (g93 3/8)
ಹಿಂಸಾಚಾರದ ಚಲನಚಿತ್ರಗಳ ಪರಿಣಾಮ
ಬ್ರಾಸೀಲಿಯ್ವನ್ ಪತ್ರಿಕೆ ವೇಜ ಮಾಡಿದ ಸಂದರ್ಶನದಲ್ಲಿ, ಚಲನಚಿತ್ರ ನಿರ್ದೇಶಕ ಸೀವ್ಟನ್ ಸ್ಪೀಲ್‌ಬರ್ಗರೊಡನೆ, ಮನೋರಂಜನೆಯಲ್ಲಿರುವ ಹಿಂಸಾಚಾರ ವೀಕ್ಷಕರ ಮೇಲೆ ಮಾಡುವ ಪರಿಣಾಮದ ಕುರಿತು ಕೇಳಲಾಯಿತು. ಸ್ಪೀಲ್‌ಬರ್ಗ್ ಹೇಳಿದ್ದು: “ನೈಜವಾಗಿ ಯಾ ಟಿವಿ ವಾರ್ತೆಗಳಲ್ಲಿ ನೋಡುವುದಕ್ಕಿಂತ ಹಿಂಸಾಚಾರವನ್ನು ಚಲನಚಿತ್ರಗಳಲ್ಲಿ ಯಾ ಟಿವಿ ಕಾರ್ಯಕ್ರಮಗಳಲ್ಲಿ ವೀಕ್ಷಿಸುವುದು, ನೋಡಿದನ್ನು ಅನುಕರಿಸುವಂತೆ ಪ್ರೇಕ್ಷಕರನ್ನು ಹೆಚ್ಚು ಪ್ರಚೋದಿಸುತ್ತದೆ. ಚಲನಚಿತ್ರಗಳಲ್ಲಿ, ಹಿಂಸಾಚಾರವನ್ನು ಇನ್ನೂ ರಂಜಕವಾಗಿ ಮಾಡಲು, ಅದನ್ನು ಪರಿಪೂರ್ಣವಾದ ಬೆಳಕು, ಪ್ರೇಕ್ಷಣೀಯ ದೃಶ್ಯ, ಹಾಗೂ ನಿಧಾನವಾದ ಚಲನೆಯೊಂದಿಗೆ ಚಿತ್ರೀಕರಿಸಲಾಗುತ್ತದೆ. ಆದರೂ, ವಾರ್ತೆಗಳಲ್ಲಿ, ಸಾರ್ವಜನಿಕರಿಗೆ ಹಿಂಸಾಚಾರವು ಎಷ್ಟು ಭಯಂಕರವಾಗಿರಬಹುದೆಂಬ ಉತ್ತಮ ಗ್ರಹಿಕೆ ಇರುತ್ತದೆ, ಮತ್ತು ಚಲನಚಿತ್ರಗಳಲ್ಲಿ ಅಸ್ಥಿತ್ವದಲ್ಲಿರದ ಉದ್ದೇಶಗಳೊಂದಿಗೆ ಅದನ್ನು ಉಪಯೋಗಿಸಲಾಗುತ್ತದೆ.” ತಮ್ಮ ಎಳೆಯ ಮಗನಿಗೆ ತಮ್ಮ ಕೆಲವೊಂದು ಪ್ರಸಿದ್ಧವಾದ ಚಲನಚಿತ್ರಗಳನ್ನು (ಜಾಸ್, ಇಂಡಿಯಾನಾ ಜೋನ್ಸ್ ಧಾರಾವಾಹಿ) ಇಷ್ಟರವರೆಗೆ ವೀಕ್ಷಿಸಲು ತಾನು ಅನುಮತಿ ನೀಡಿಲ್ಲ, ಯಾಕಂದರೆ ಅವುಗಳಲ್ಲಿ ಬಹಳ ರಕ್ತವನ್ನು ಮತ್ತು ಹಿಂಸಾಚಾರವನ್ನು ತೋರಿಸಲಾಗಿದೆ ಎಂದು ಸ್ಪೀಲ್‌ಬರ್ಗ್ ಸೇರಿಸಿ ಹೇಳುತ್ತಾರೆ. (g93 3/8)
“ಹೇರಳತನದ ಅಸಂಗತೋಕ್ತಿ”
ಸ್ವಿಟ್ಸರ್ಲೆಂಡಿನ, ಜಿನೀವಾದಲ್ಲಿ ನಡೆದ ಇತ್ತೀಚಿನ ಒಂದು ಕೂಟದಲ್ಲಿ, ಎರಡು ಯುಎನ್ ಸಂಸ್ಥೆಗಳು “ಲೋಕವ್ಯಾಪಕ ನ್ಯೂನಪೋಷಣೆಯ ವಿರುದ್ಧ ಹಿಂದೆಂದೂ ಮಾಡಿರಲಾರದ ಒಂದು ಅತಿ ದೊಡ್ಡ ಆಕ್ರಮಣದಲ್ಲಿ,” ತಮ್ಮ ಪ್ರಯತ್ನಗಳನ್ನು ಏಕೀಕರಿಸುವವು ಎಂದು ಪ್ರಕಟಿಸಿದವು. ಆಹಾರ ಮತ್ತು ಕೃಷಿ ಸಂಸ್ಥೆ ಹಾಗೂ ಲೋಕ ಆರೋಗ್ಯ ಸಂಸ್ಥೆಗಳು, “ಹೇರಳತನದ ಅಸಂಗತೋಕ್ತಿ” ಎಂದು ಅವು ಕರೆಯುವ ವಿಷಯವನ್ನು ಜಯಿಸಲು ಕಾರ್ಯ ತೆಗೆದುಕೊಳ್ಳುವದಾಗಿ ಹೇಳಿದ್ದನ್ನು, ಪ್ಯಾರಿಸ್ ದಿನಪತ್ರಿಕೆ ಲ ಮೋಂಡ್ ವರದಿಸಿತು. ಇಡೀ ಮಾನವ ಕುಟುಂಬದ ಪೌಷಿಕ್ಟ ಅಗತ್ಯತೆಗಳನ್ನು ತೃಪ್ತಿಗೊಳಿಸಲು ಬೇಕಾಗುವಷ್ಟು ಆಹಾರವನ್ನು ಭೂಮಿಯು ಉತ್ಪಾದಿಸಿದರೂ, ಆ ಆವಶ್ಯಕತೆಗಳಿಗೆ ಹೊಂದಾಣಿಕೆಯಾಗುವಂತೆ ಸಂಗ್ರಹವನ್ನು ಹಂಚಲಾಗುವದಿಲ್ಲ. ಆಫ್ರಿಕಾದಲ್ಲಿ, ಕ್ಷಾಮವು ಪ್ರತಿ ದಿನ 4 ಕೋಟಿ ಜನರ ಜೀವಗಳಿಗೆ ಅಪಾಯ ತರುತ್ತದೆ. ನ್ಯೂನಪೋಷಣೆಯು 19 ಕೋಟಿ 20 ಲಕ್ಷ ಮಕ್ಕಳನ್ನು ಬಾಧಿಸುತ್ತದೆ. ಮತ್ತು ಅವರಲ್ಲಿ 40,000 ಮಂದಿ ಪ್ರತಿ ದಿನ ಸಾಯುತ್ತಾರೆ. (g93 2/22)
ತನ್ನ ತೂಕದಲ್ಲಿ ಬಂಗಾರದಷ್ಟು ಮೌಲ್ಯವುಳ್ಳ ಸೀಸ
ಎರಡು ಸಾವಿರ ವರ್ಷಗಳ ಹಿಂದೆ ಸಾರ್ಡಿನಿಯನ್ ತೀರದಲ್ಲಿ ಮುಳುಗಿ ಹೋದ ಒಂದು ರೋಮನ್ ಹಡಗಿನಲ್ಲಿ ಸಿಕ್ಕಿದಂತಹ ಸೀಸ ಗಟಿಗ್ಟಳ ಒಂದು ಸರಕನ್ನು “ತನ್ನ ತೂಕದಲ್ಲಿ ಬಂಗಾರದಷ್ಟು ಮೌಲ್ಯವುಳ್ಳದೆಂದು,” ಇಟಾಲಿಯನ್ ವಾರ್ತಾಪತ್ರಿಕೆ ಇಲ್ ಮೆಸಾಜರೊ ವರದಿಸಿತು. ಈ ಸಾಮಾನಿನ ಆದಿಗಮ್ಯಸ್ಥಳವಾದ ಪ್ರಾಚೀನ ರೋಮಿನಲ್ಲಿ, “ಪೈಪುಗಳನ್ನು ಮಾಡಲು, ಸೀಸದ ಕೊಳವೆಗಳನ್ನು ಬೆಸೆಯಲು, ಮತ್ತು ತೂಕಗಳನ್ನು ಎರಕ ಹೊಯ್ಯಲು,” ಈ ಲೋಹವು ಬಹು ಮೂಲ್ಯವುಳ್ಳದ್ದಾಗಿರುತಿತ್ತು. ಆದರೆ ವಿಜ್ಞಾನಿಗಳು ಕಂಡುಹಿಡಿತವನ್ನು ಇನ್ನೂ ಹೆಚ್ಚು ಅಮೂಲ್ಯವೆಂದು ಪರಿಗಣಿಸುತ್ತಾರೆ. ಈ ಗಟಿಗ್ಟಳು ಸಮುದ್ರದ ತಳದಲ್ಲಿ, “ಉಸುಬಿನ ಭಾರ ಹೊದಿಕೆ” ಯ ಕಾರಣ, ಕಾಸ್ಮಿಕ್ ಕಿರಣಗಳ ಪ್ರಭಾವದಿಂದ ರಕ್ಷಿಸಲ್ಪಟ್ಟದರಿಂದ, ಸಮಯವು ವಿದ್ಯುತ್ ವಿಕಿರಣ ಕ್ರಿಯಾಶಕ್ತಿಯ ಪ್ರತಿಯೊಂದು ಸುಳಿವನ್ನು ರದ್ದು ಮಾಡಿದೆ. ಬೇರೆಲಿಯ್ಲೂ ಕಾಣಲು ಅಸಾಧ್ಯವಾದ, ಇಂತಹ ಶುದ್ಧವಾದ ಸೀಸವು, ಪ್ರಯೋಗಾಲಯದಲ್ಲಿ ನಡೆಸುವ ಸೂಕ್ಷ್ಮ ಅಳತೆಗಳ ಮೇಲೆ ಯಾವುದೇ ಪ್ರಭಾವವಿರದ ರಕ್ಷಾ ಕವಚಗಳ ಸಂಬಂಧದಲ್ಲಿ, ಭೌತವಿಜ್ಞಾನಿ ಶೋಧಕರಿಗೆ ಅತ್ಯುತ್ಕೃಷ್ಟ ಮೌಲ್ಯವುಳ್ಳದ್ದಾಗಿದೆ. (g93 3/8)
ವೃದ್ಧರಿಗೆ ಕಡಿಮೆ ಮರ್ಯಾದೆ
ಏಷಿಯದಲ್ಲಿ ವೃದ್ಧರ ಜನಸಂಖ್ಯೆಯು ಗಮನಾರ್ಹವಾಗಿ ಬೆಳೆಯುತ್ತಿದೆ. ಜಪಾನಿನಲ್ಲಿ, ಮುಂದಿನ 30 ವರ್ಷಗಳಲ್ಲಿ, 65 ಮತ್ತು ಹೆಚ್ಚು ವಯಸ್ಸಿನ ಜನರ ಸಂಖ್ಯೆಯು ಸದ್ಯದ 1 ಕೋಟಿ 55 ಲಕದ್ಷಿಂದ 3 ಕೋಟಿ 20 ಲಕ್ಷಕ್ಕೆ ಬೆಳೆಯಲಿದೆ ಎಂದು ಕೆಲವರು ನಿರೀಕ್ಷಿಸುತ್ತಾರೆ. ಏಷಿಯವೀಕ್ ನ ಅನುಸಾರ, ಪ್ರತಿ 4 ಜಪಾನೀಯರಲ್ಲಿ 1 ವ್ಯಕ್ತಿಯು ಇಸವಿ 2020 ರೊಳಗೆ ವೃದ್ಧರಾಗಿರುವನು. “ಸಿಂಗಾಪುರದವರಲ್ಲಿ 9% ಕ್ಕಿಂತ ಹೆಚ್ಚಿನವರು ತಮ್ಮ 60 ನೆಯ ಜನ್ಮದಿನವನ್ನು ತಲುಪಿದ್ದಾರೆ. ಮತ್ತು ಸಾ.ಶ. 2000 ದೊಳಗಾಗಿ, ಸುಮಾರು 15 ಲಕ್ಷ ಮಲೇಶಿಯದವರು ಹಿರಿಯ ನಾಗರಿಕರಾಗಿ ಅರ್ಹತೆ ಪಡೆಯುವರೆಂದು,” ಏಷಿಯವೀಕ್ ಸೇರಿಸಿತು. ಈ ಹೆಚ್ಚಳವು, ವೃದ್ಧರಿಗೆ ಪರಾಮರಿಸುವ ಹಾಗೂ ಮರ್ಯಾದೆ ತೋರಿಸುವ ಹಳೆಯ ಸಂಪ್ರದಾಯಗಳು ಕ್ರಮೇಣ ಸವೆಯುವ ಸಮಯದಲ್ಲಿ ಬರುತ್ತಿದೆ. ಹೆನ್ರಿ ಲಿಮ್, ಸಿಂಗಾಪುರದ ಹಿರಿಯ ನಾಗರಿಕರ ವಕೀಲರು, ವರದಿಸುವುದು: “ವಯಸ್ಸಾದ ಜನರೆಡೆಗೆ ಬಲಹೀನವಾಗುತ್ತಿರುವ ಮರ್ಯಾದೆಯ ಪ್ರವೃತ್ತಿ ಇದೆ.” ಎಳೆಯ ಜನರಿಗೆ ಅನೇಕ ವೇಳೆ “ತಮ್ಮ ಹೆತ್ತವರಿಗಿಂತ ನಾಯಿಗಳಿಗೆ ಹೆಚ್ಚು ಸಮಯವಿದೆ,” ಎಂದು ಅವರು ಕೂಡಿಸಿ ಹೇಳಿದರು. (g93 2/22)
ಬಾಲ ದುಡಿಮೆ
ಜಾರ್ನಾಲ್ ಡ ಟಾರ್ಡ ವರದಿಸುವುದು, “ಇಸವಿ 1980 ಗಳು ಬ್ರಜಿಲಿಯನ್ ಮಕ್ಕಳಿಗೆ ಮತ್ತು ತರುಣರಿಗೆ ಅನುಕೂಲವಾಗಿರಲಿಲ್ಲವೆಂದು, ಭೂಗೋಳ ಮತ್ತು ಸಂಖ್ಯಾಶಾಸ್ತ್ರದ ಬ್ರಜಿಲಿಯನ್ ಸಂಸ್ಥೆಯ ಫೌಂಡೇಶನ್ ತೀರ್ಮಾನಿಸಿತು. ಅಲ್ಲಿಯ 5.97 ಕೋಟಿ ಮಕ್ಕಳಲ್ಲಿ, 3.2 ಕೋಟಿ ಮಕ್ಕಳು ಅಮೆರಿಕದ 40 ಡಾಲರ್ ಕನಿಷ್ಠ ಕೂಲಿಯ ಅರ್ಧಕ್ಕಿಂತ ಕಡಿಮೆಯುಳ್ಳ ವಾರ್ಷಿಕ ಆದಾಯವಿರುವ ಕುಟುಂಬಗಳಿಗೆ ಸೇರಿದ್ದಾರೆಂದು ಅಧ್ಯಯನವು ಪ್ರಕಟಿಸಿತು. ಶಾಲೆಗೆ ಹೋಗುವ ಬದಲು, 10 ಮತ್ತು 14 ರ ವಯಸ್ಸಿನ ನಡುವಿರುವ 17.2 ಸೇಕಡಾ ಬ್ರಜಿಲಿಯನ್ ಮಕ್ಕಳು—ಸುಮಾರು ಒಂದು ಕೋಟಿ—ಕಷ್ಟ ಪಡುತ್ತಿರುವ ತಮ್ಮ ಕುಟುಂಬಗಳಿಗೆ ಸಹಾಯ ಮಾಡಲು ಲೌಕಿಕವಾಗಿ ಕೆಲಸಮಾಡುತ್ತಾರೆ. ಫಲಿತಾಂಶವೇನು? ಸಮಾಜಶಾಸ್ತ್ರಜ್ಞೆ ರೊಜ ರಿಬೇರಾ ಹೇಳಿದ್ದು: “ಈ ಸನ್ನಿವೇಶವು ಬಡತನದ ಹರಡಿಕೆ ಮತ್ತು ನಿರಂತರತೆಗೆ ಕಾರಣವಾಗುತ್ತದೆ. ಸಾಕಷ್ಟು ಶಿಕ್ಷಣ ಇಲ್ಲದೆ, ಮಗುವಿಗೆ ತನ್ನ ಸಾಮಾಜಿಕ ಪರಿಸ್ಥಿತಿಯನ್ನು ಬದಲಾಯಿಸುವ ಅವಕಾಶವಿಲ್ಲ.” (g93 3/8)
ರೋಗಿಗಳ ಭಯ
ದ ನ್ಯೂ ಯಾರ್ಕ್ ಟೈಮ್ ಗೆ ಅನುಸಾರ, ತಮ್ಮ ರೋಗಿಗಳಿಂದ ರೋಗವನ್ನು ಪಡೆಯುವ ಭಯವು ಆರೋಗ್ಯಾರೈಕೆ ಕೆಲಸಗಾರರ ವರ್ತನೆಯನ್ನು ಬಹಳ ಗಂಭೀರವಾಗಿ ಪ್ರಭಾವಿಸಬಹುದು. ಅನೇಕ ವೈದ್ಯರು, ತಮ್ಮ ರೋಗಿಗಳಿಗೆ ಚಿಕಿತ್ಸೆ ನೀಡುವಾಗ, ಆಕಸ್ಮಿಕವಾಗಿ ತಮ್ಮ ಚರ್ಮವನ್ನು ವೈದ್ಯಕೀಯ ಸಾಧನಗಳಿಂದ ಚುಚಿಕ್ಚೊಳ್ಳುವ ಯಾ ಕತ್ತರಿಸಿಕೊಳ್ಳುವ ಮೂಲಕ ಏಯ್ಡ್ಸ್ ಯಾ ಹೆಪಟೈಟಿಸನ್ನು ಪಡೆಯುವ ಭಯದಲ್ಲಿದ್ದಾರೆ. ಸ್ಪಷ್ಟವಾಗಿಗಿ ಈ ಭಯವು ಆಧಾರವಿಲ್ಲದ್ದಾಗಿರುವುದಿಲ್ಲ. ನ್ಯೂ ಯಾರ್ಕ್ ನಗರದ ಆಸ್ಪತ್ರೆಯೊಂದರಲ್ಲಿ ನಡೆಸಿದ ಒಂದು ತನಿಖೆಯು, ಕ್ರಮವಾಗಿ ಕ್ಷಯ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಿದ್ದ 60 ಸೇಕಡಾ ವೈದ್ಯರು ಆ ರೋಗವನ್ನು ತಾವೇ ಅಂಟಿಸಿಕೊಂಡಿದ್ದಾರೆಂದು ಪ್ರಕಟಿಸುತ್ತದೆ. ಮತ್ತೂ, ಪ್ರತಿ ವರ್ಷ ಸುಮಾರು 12,000 ಆರೋಗ್ಯಾರೈಕೆಯ ಕೆಲಸಗಾರರು ತಮ್ಮ ರೋಗಿಗಳಿಂದ ಹೆಪಟೈಟಿಸನ್ನು ಪಡೆಯುತ್ತಾರೆ. ಏಯ್ಡ್ಸ್ ಸಾಂಕ್ರಾಮಿಕ ರೋಗ ಆರಂಭವಾದಂದಿನಿಂದ, ಅಮೆರಿಕದಲ್ಲಿ ಸುಮಾರು 47 ಆರೋಗ್ಯಾರೈಕೆಯ ಕೆಲಸಗಾರರು ತಮ್ಮ ರೋಗಿಗಳಿಂದ ಈ ರೋಗವನ್ನು ಅಂಟಿಸಿಕೊಂಡಿದ್ದಾರೆ. (g93 2/22)
ಅಡಕೆ ಮತ್ತು ಕ್ಯಾನ್ಸರ್
“ಅಗಿಯುವುದೊ ಅಗಿಯಬಾರದೊ . . . ಎಂಬುದೆ ಪ್ರಶ್ನೆಯಾಗಿದೆ.” ಈ ಪ್ರಶ್ನೆಯು, ಅಡಿಕೆಯನ್ನು ಅಗಿಯುವ ಸಂಬಂಧದಲ್ಲಿ, ಪಾಪುವಾ ನ್ಯೂ ಗಿನಿಯದ ಒಂದು ವಾರ್ತಾಪತ್ರಿಕೆಯಾದ ಪೋಸ್ಟ್ ಕೂರಿಯರ್ ನಲ್ಲಿ ಎಬ್ಬಿಸಲ್ಪಟ್ಟಿತು. ಡಾ. ಬ್ಯಾರಿ ಮಿಲ್ರೈ, ಅಡಿಕೆ ಅಗಿಯುವವರಿಗೆ ಚಿಕಿತ್ಸೆ ಮಾಡುವುದರಲ್ಲಿ ಅನುಭವವಿದ್ದ ಒಬ್ಬ ವಿಶೇಷ ಶಸ್ತ್ರ ವೈದ್ಯರು ಗಮನಿಸುವುದು, “ಸ್ಥಳೀಕ ಮಲೇರಿಯಾ ಮತ್ತು ಬಾಯಿಯೊಳಗಿನ ಕ್ಯಾನ್ಸರ್, ಪಾಪುವಾ ನ್ಯೂ ಗಿನಿಯದ ಎರಡು ದೊಡ್ಡ ಸಮಸ್ಯೆಗಳೆಂದು ತೋರುತ್ತದೆ, ಎರಡನೆಯದು ನೇರವಾಗಿ ಅಡಿಕೆಯ ಅಗಿಯುವಿಕೆಗೆ ಸಂಬಂಧಪಟಿದ್ಟೆ.” ಎಳೆಯ ಮಕ್ಕಳು ಕೂಡ ಅನೇಕ ವಾಡಿಕೆಯ ಅಡಿಕೆ ಅಗಿಯುವವರಲ್ಲಿ ಒಬ್ಬರು. ‘ಒಬ್ಬನು ಅಡಿಕೆಯನ್ನು ಅಗಿಯುವದಾದರೆ, ಆ ವ್ಯಕ್ತಿಗೆ ಕ್ಯಾನ್ಸರ್ ಬರುವುದೋ ಎಂಬುದಾಗಿ ಅಲ್ಲ, ಯಾವಾಗ ಬರುವುದು ಎಂಬುದೇ ಪ್ರಶ್ನೆಯಾಗಿದೆ,’ ಡಾ. ಮಿಲ್ರೈ ವರದಿಸಿದರು. ಅಂಥವರು ನಿಲಿಸ್ಲದಿದ್ದರೆ, “ಅವರಿಗೆ ವೈದ್ಯಕೀಯವಾಗಿ ಹೆಚ್ಚಿನ ಸಹಾಯವಿಲ್ಲ,” ಎಂದು ಅವರು ಸೇರಿಸಿ ಹೇಳಿದರು. (g93 2/22)
ಕುಟಿಲ ಹಣ ತಯಾರಕರು
“ಖೋಟಾ ಹಣವು ಒಬ್ಬ ಸಂಶಯ ಪಡದ ಅಂಗಡಿಯವನ ಯಾ ಒಂದು ಬ್ಯಾಂಕಿನಲ್ಲಿ ಹಣ ಕೊಡುವವನ ಕಣ್ಣು ತಪ್ಪಿಸಿ ಹೋಗುವುದು ಒಂದು ವಿಷಯವಾಗಿದೆ. ಫೆಡರಲ್ ರಿಸರ್ವ್‌ನಲ್ಲಿ ಹಣವನ್ನು ನಿರ್ವಹಿಸುವ ನಯನಾಜೂಕಿನ ಸಾಧನಗಳನ್ನು ಮೋಸಗೊಳಿಸುವುದು ಒಂದು ಬೇರೆಯೇ ವಿಷಯವಾಗಿದೆ,” ಎಂದು ದ ವಾಲ್ ಸ್ಟ್ರೀಟ್ ಜರ್ನಲ್ ಗಮನಿಸುತ್ತದೆ. ಆದರೂ, ಯಾರೋ ಅಮೆರಿಕದ ಹಣಕಾಸಿನಲ್ಲಿ 100 ಡಾಲರ್ ನೋಟುಗಳನ್ನು ಉತ್ಪಾದಿಸುತ್ತಾ ಅದನ್ನೇ ಮಾಡುತ್ತಿದ್ದಾರೆ. “ಅಸಾಧಾರಣವಾಗಿ ಉತ್ತಮ” ವೆಂದು ಕರೆಯಲಾದ ಈ ಖೋಟಾ ಹಣವು ಭೂಮಂಡಲದ ಸುತ್ತಲೂ ಹಠಾನೆ ಕಾಣಿಸಿಕೊಳ್ಳುತ್ತಿದೆ. ಒಂದು ಎದ್ದು ಕಾಣುವ ಮುದ್ರಣವನ್ನು ಉಪಯೋಗಿಸುವ ಕಷ್ಟಕರವಾದ ಮುದ್ರಣ ಶೈಲಿ, ಸ್ವಯಂಚಾಲಿತವಾಗಿ ದಾಖಲೆ ಮಾಡುವ ಕೆಂಪು ಮತ್ತು ನೀಲಿ ನಾರುಗಳ ಬಟ್ಟೆ ಆಧಾರಿತ ಕಾಗದ, ಮತ್ತು ವೈಶಿಷ್ಟ್ಯವಾದ ಅಯಸ್ಕಾಂತ ಶಾಯಿ ಇವುಗಳೆಲ್ಲವನ್ನು ನಿಪುಣತೆಯಿಂದ ನಕಲು ಮಾಡಲಾಗಿದೆ. ಈ ಜಾಲಿ ನೋಟುಗಳು ಎಷ್ಟು ಉತ್ತಮವಾಗಿವೆ ಎಂದರೆ, ಖೋಟಾ ನೋಟುಗಳನ್ನು ಮಂಜೂರು ಮಾಡುವ ಬ್ಯಾಂಕುಗಳ ಮೇಲೆ ಆರೋಪಣೆಯ ಸಾಮಾನ್ಯ ಕ್ರಮವನ್ನು ಅನುಸರಿಸುವ ಬದಲು, ಅಮೆರಿಕದ ಸರಕಾರವು ನಷವ್ಟನ್ನು ಸ್ವೀಕರಿಸುತ್ತಿದೆ. ಕೆಲವು ಅಧಿಕಾರಿಗಳು, ಈ ಖೋಟಾ ನೋಟುಗಳು ಒಂದು ವೈರಿ ವಿದೇಶಿ ಸರಕಾರದ ಯಾ ಒಂದು ಉಗ್ರವಾದಿ ಗುಂಪಿನ ಕೆಲಸವಾಗಿದೆ ಎಂದು ಹೆದರುತ್ತಾರೆ. (g93 2/22)
ದಮ್ಮು ರೋಗದ ಮರಣಗಳು ಹೆಚ್ಚುತ್ತಿವೆ
“ದಮ್ಮು ತಗಲಿ ಸಾಯುವ ಜನರ ಸಂಖ್ಯೆಯು [ಜರ್ಮನಿಯಲ್ಲಿ] ನಾಟಕೀಯವಾಗಿ ಹೆಚ್ಚಿದೆ,” ಎಂದು ಸೂಡ್ಚ್‌ಸ್ ಜೈಟಂಗ್ ವಾರ್ತಾಪತ್ರಿಕೆ ವರದಿಸುತ್ತದೆ. ಜರ್ಮನ್ ಶ್ವಾಸಕೋಶ ಅಂಗದ ಒಕ್ಕೂಟ ಸಂಸೆಗ್ಥನುಸಾರ, 1991 ರಲ್ಲಿ ಸುಮಾರು 5,000 ಜನರು ಶ್ವಾಸಕೋಶದ ಅನಾರೋಗ್ಯದ ಕಾರಣ ಆ ದೇಶದಲ್ಲಿ ಮರಣಪಟ್ಟಿದ್ದಾರೆ. ಮಧ್ಯ 1970 ಗಳಲ್ಲಿ, ಇದಕ್ಕೆ ಅನುರೂಪವಾದ ಸಂಖ್ಯೆಯು ಪ್ರತಿ ವರ್ಷಕ್ಕೆ ಸುಮಾರು 2,000 ವಾಗಿತ್ತು. ಸುಮಾರು 2 ಕೋಟಿ ಜರ್ಮನಿಯ ನಿವಾಸಿಗಳು ಅಲರ್ಜಿಗಳಿಂದ, 3 ರಲ್ಲಿ 1 ಉಸಿರಾಟದ ಅಲರ್ಜಿಗಳಿಂದ ನರಳುತ್ತಾರೆ. (g93 2/22)