ಧರ್ಮದ ವಿಭಾಗಿತ ಮನೆ
ಲೋಕದ ಎಲ್ಲಾ ಧರ್ಮಗಳಲ್ಲಿ, ರೋಮನ್ ಕ್ಯಾತೊಲಿಕ್, ಮುಸ್ಲಿಂ, ಮತ್ತು ಹಿಂದು ಮತಗಳು ದೊಡ್ಡವು. ರೋಮನ್ ಕ್ಯಾತೊಲಿಕರು 98 ಕೋಟಿ 50 ಲಕ್ಷ ಇದ್ದಾರೆ, ಯಾ ಲೋಕದ ಜನಸಂಖ್ಯೆಯಾದ 524 ಕೋಟಿಯ 18.8 ಸೇಕಡವಿರುವಾಗ, ಮುಸ್ಲಿಮರು 91 ಕೋಟಿ 20 ಲಕ್ಷ (17.4 ಸೇಕಡ) ಎಂದು ಹೇಳಲಾಗುತ್ತದೆ, ಮತ್ತು 68 ಕೋಟಿ 60 ಲಕ್ಷ (13.1 ಸೇಕಡ) ಹಿಂದುಗಳು—32 ಕೋಟಿ ಬೌದ್ಧಮತೀಯರಿಗಿಂತ ಇಮ್ಮಡಿ—ಇದ್ದಾರೆ.
“ಎಲ್ಲಾ ಧರ್ಮಗಳಿಗಿಂತ ಕ್ರೈಸ್ತತ್ವವು ಹೆಚ್ಚಾಗಿ ಆಚಾರದಲ್ಲಿರುವಂಥ ಧರ್ಮ,” ಎಂದು ಏಷ್ಯಾಯಾವೀಕ್ ಗಮನಿಸಿತು. “ಆದರೆ ಅದು ಐತಿಹಾಸಿಕವಾಗಿ ವೈರತ್ವದ ಒಳಪಂಗಡಗಳಾಗಿ ಎಷ್ಟು ಆಳವಾಗಿ ಒಡೆಯಲ್ಪಟ್ಟಿರುತ್ತದೆಂದರೆ—ಉತ್ತರ ಐರ್‌ಲ್ಯಾಂಡಿನ ಪ್ರಾಟೆಸ್ಟಂಟರು ಮತ್ತು ಕ್ಯಾತೊಲಿಕರು ಅತಿ ಎದ್ದುಕಾಣುವ ಉಳಿದಿರುವ ಉದಾಹರಣೆ—ಇವೆಲ್ಲವುಗಳನ್ನು ಒಂದೇ ಧರ್ಮವೆಂದು ಆಲೋಚಿಸಲು ಅನೇಕ ಜನರಿಗೆ ಕಷ್ಟವಾಗಿರುತ್ತದೆ. . . . ಮುಸ್ಲಿಮರು ಕ್ರೈಸ್ತರುಗಳಿಗಿಂತ ಕಡಿಮೆ ಒಳಪಂಗಡಗಳಾಗಿ ವಿಭಾಗಿತರಾಗಿರುತ್ತಾರೆ, ಆದರೆ ಸುನ್ನಿ ಮತ್ತು ಷೀಯ ಯಾವಾಗಲೂ ಹೊಂದಿಕೆಯಿಂದಿರದ ಇತಿಹಾಸವೊಂದರ ಎರಡು ಪ್ರತ್ಯೇಕ ಪ್ರವಾಹಗಳಾಗಿವೆ.” ಮುಸ್ಲಿಮರ ಅತಿ ದೊಡ್ಡ ಗುಂಪು ಸುನ್ನಿಗಳದ್ದು.
ಇದಲ್ಲದೆ, ಲೋಕದ ಜನಸಂಖ್ಯೆಯ ಒಂದು ದೊಡ್ಡ ಗಾತ್ರವು ಧಾರ್ಮಿಕ ನಂಬಿಕೆಯನ್ನೆ ತೋರ್ಪಡಿಸಿಕೊಳ್ಳುವುದಿಲ್ಲ. ಇದರ ದೊಡ್ಡ ಭಾಗವು ಚೀನಾ, ಪ್ರಾಚ್ಯ ಯೂರೋಪ್, ಮತ್ತು ಸೋವಿಯೆಟ್ ಯೂನಿಯನ್‌ನಲ್ಲಿದೆ. ಧರ್ಮವಿಲ್ಲದವರ ಸಂಖ್ಯೆಯು 89 ಕೋಟಿ 60 ಲಕ್ಷ , ಮತ್ತು ಇನ್ನೂ 23 ಕೋಟಿ 60 ಲಕ್ಷ ನಾಸ್ತಿಕರದ್ದಾಗಿರುತ್ತದೆ. (g91 10/22)