ನಮ್ಮ ವಾಚಕರಿಂದ
ಒಂದು ಮಗುವಿನ ಮರಣ “ಬೈಬಲಿನ ದೃಷ್ಟಿಕೋನ”ದ ಲೇಖನಗಳಾದ “ದೇವರು ನನ್ನ ಮಗುವನ್ನು ಏಕೆ ಕೊಂಡೊಯ್ದನು?” (ಮೇ 8, 1992) ಮತ್ತು “ಒಂದು ಮಗುವಿನ ಮರಣ—ಅದನ್ನು ದೇವರು ಯಾಕೆ ಅನುಮತಿಸುತ್ತಾನೆ?” (ಮಾರ್ಚ್ 8, 1991 ಇಂಗ್ಲಿಷಿನಲ್ಲಿ) ನನಗೆ ಅಗತ್ಯವಿರುವ ಆದರಣೆಯನ್ನು ಸರಿಯಾದ ಸಮಯದಲ್ಲೇ ನೀಡಿತು. ಜನವರಿ 9, ರಂದು ನಾನು ಒಂದು ಮಗುವಿಗೆ ಜನ್ಮವಿತ್ತು ಅದು ಮೂರು ತಾಸುಗಳ ಬಳಿಕ ಅದು ಸತ್ತಿತು. ನಾನು ನನ್ನ ಮೇಲೆಯೆ ಕೋಪಗೊಂಡೆ ಮತ್ತು ನನ್ನ ತಪ್ಪಾದ ಕೋಪವನ್ನು ದೇವರ ಕಡೆಗೂ ತಿರುಗಿಸಿದೆನು. ನಂತರ ನಾನು ಈ ಲೇಖನಗಳನ್ನು ಓದಿದೆ. ದೇವರ ಕರುಣೆಯ ಆಳವು ಪುಟಗಳಿಂದ ಹೊರಹೊಮ್ಮಿತು, ಮತ್ತು ನಾನು ಬಹಳವಾಗಿ ಅತೆನ್ತು. ನಾನು ಒಬ್ಬಂಟಿಗಳಾಗಿದ್ದು, ದುಃಖಕ್ಕೀಡಾದಾಗ ನೀವು ಒದಗಿಸಿದ ನಿರೀಕ್ಷೆಗಾಗಿ ನಿಮಗೆ ಉಪಕಾರ.
ಸಿ. ಕೆ., ಜಪಾನ್
ಹಾಡು ಹಕ್ಕಿಗಳು ಮೇ 8, 1992ರ ಸಂಚಿಕೆಯಲ್ಲಿ ಹಾಡುಹಕ್ಕಿಗಳ ವಿಷಯದಲ್ಲಿ ಮೋಹಗೊಳಿಸುವ ಲೇಖನಕ್ಕಾಗಿ ನಿಮಗೆ ಉಪಕಾರಗಳು. ನನ್ನ ಗಂಡ ಅನೇಕ ವರ್ಷಗಳಿಂದ ಹಕ್ಕಿಗಳಿಗೆ ಹಿತ್ತಲು ಭಾಗದಲ್ಲಿ ತಿಂಡಿ ಹಾಕುತ್ತಿದ್ದಾರೆ, ಮತ್ತು ನಾವಿಬ್ಬರು ಅವುಗಳನ್ನು ಗಮನಿಸುವಲ್ಲಿ ಆನಂದಿಸುತ್ತೇವೆ. ಆದರೆ ಹಕ್ಕಿಗಳು ಆಶ್ಚರ್ಯಕರ ವಿಧಾನದಲ್ಲಿ ಅವುಗಳ ಸರ್ವವನ್ನು ಉತ್ಪಾದಿಸುವುದರ ಬಗ್ಗೆ ಓದಿದ ನಂತರ, ನಾವೀಗ ಅವುಗಳನ್ನು ಆಲಿಸಲಿಕ್ಕೂ ತೊಡಗಿದ್ದೇವೆ. ಯೆಹೋವನ ಅದ್ಭುತಗಳಲ್ಲಿ ಮತ್ತೊಂದರ ಬಗ್ಗೆ ನಿಮ್ಮ ಸುಂದರವಾಗಿ ಬರೆದ ವರ್ಣನೆಗಾಗಿ ನಾವು ನಿಮಗೆ ಬಹಳ ಅಭಾರಿಗಳಾಗಿದ್ದೇವೆ.
ಜೆ. ಎಸ್., ಅಮೆರಿಕಾ
ಆತ್ಮ ರಕ್ಷಣೆ “ಬೈಬಲಿನ ದೃಷ್ಟಿಕೋನ—ಆತ್ಮ ರಕ್ಷಣೆ—ಒಬ್ಬ ಕ್ರೈಸ್ತನು ಎಲ್ಲಿಯ ವರೆಗೆ ಹೋಗಸಾಧ್ಯವಿದೆ?” (ಜುಲೈ 8, 1992) ಲೇಖನವನ್ನು ಓದಿ, ಯುದ್ಧ ಕಲೆಗಳು ಕಾಳಗ ಮತ್ತು ಆಕ್ರಮಣಕ್ಕೆ ತಯಾರಾಗಿರುವಂತೆ ಒತ್ತಾಸೆ ನೀಡುವ ಅಭಿಪ್ರಾಯ ಒಬ್ಬನಿಗೆ ದೊರಕಬಹುದು. ವಿಷಯವು ಹಾಗಿರುವುದಿಲ್ಲ. ಹೆಚ್ಚಿನ ಯುದ್ಧ ಕಲೆಗಳು ದೇಹದ ಹತೋಟಿ, ಸ್ವ ಶಿಸ್ತು, ಮತ್ತು ಬೇರೆ ಅನೇಕ ಆಟಗಳಿಗಿಂತ ಮೇಲು ಮಟ್ಟದ ನ್ಯಾಯಪರ ಭಾವನೆಯನ್ನು ಒಬ್ಬನಲ್ಲಿ ತುಂಬುತ್ತವೆ.
ಟಿ. ಎಮ್., ಜರ್ಮನಿ
ಭಾಗವಹಿಸುವವರಿಗೆ ಯುದ್ಧ ಕಲೆಗಳು ಸ್ವಲ್ಪ ಮೌಲ್ಯವುಳ್ಳದ್ದಾಗಿರಬಹುದೆಂಬದು ಸತ್ಯವಾಗಿರಬಹುದು. ಆದರೂ, ಅವು ಜತೆ ಮಾನವರಿಗೆ ಹೇಗೆ ಹಾನಿ ಮಾಡಬೇಕೆಂದು ಕಲಿಸುತ್ತವೆ, ಮತ್ತು ಇದು ಯೆಶಾಯ 2:4 ಮತ್ತು ಮತ್ತಾಯ 26:52ರಲ್ಲಿ ದೊರಕುವ ಬೈಬಲ್ ತತ್ವಗಳೊಂದಿಗೆ ಅಸಂಬದ್ಧವಾಗಿರುತ್ತದೆ.—ಸಂ.
ನೀವೇನಾಗಿದ್ದೀರೋ ಅದನ್ನು ಬದಲಾಯಿಸುವುದು ಹಸ್ತಮೈಥುನದ ದುಶ್ಚಟವನ್ನು ಜಯಿಸಲು ನಾನು ಪ್ರಯತ್ನಿಸಿದರೂ ಕೂಡ, ಮರುಕೊಳಿಸುವಿಕೆಗಳಿಂದ ನಿರಾಶನಾಗಿದ್ದೆ. ಆದಾಗ್ಯೂ, “ನೀವು ಏನಾಗಿದ್ದಿರೋ ಅದನ್ನು ಬದಲಾಯಿಸಬೇಕೆ?” (ಜುಲೈ 8, 1992) ವಿಷಯದ ಮೇಲಿನ ಲೇಖನ ಮಾಲೆಯ ಮೂಲಕ, ನಾನು ನನ್ನನ್ನೇ ಬದಲಾಯಿಸಿಕೊಳ್ಳಲು ಐದು ನಿರ್ದಿಷ್ಟ ಹೆಜ್ಜೆಗಳನ್ನು ಕಲಿಯಲು ಸಾಧ್ಯವಾಯಿತು. ಅದು ನನ್ನ ದುಶ್ಚಟವನ್ನು ಜಯಿಸುವ ನನ್ನ ದೃಢತೆಯನ್ನು ಬಲಪಡಿಸಿತು.
ಆರ್. ಏಚ್., ಜಪಾನ್