ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 3/8 ಪು. 29
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1993
  • ಅನುರೂಪ ಮಾಹಿತಿ
  • ಜೂಜಾಟದ ಹೊಸ ಪ್ರವೇಶಿಗಳು ಯುವಜನರು!
    ಎಚ್ಚರ!—1995
  • ಜೂಜಾಡುವುದು ನಿಜವಾಗಿಯೂ ಅಷ್ಟು ಕೆಟ್ಟದ್ದೆ?
    ಎಚ್ಚರ!—1992
  • ಜೂಜಾಟ
    ಎಚ್ಚರ!—2015
  • ನಮ್ಮ ವಾಚಕರಿಂದ
    ಎಚ್ಚರ!—1993
ಇನ್ನಷ್ಟು
ಎಚ್ಚರ!—1993
g93 3/8 ಪು. 29

ನಮ್ಮ ವಾಚಕರಿಂದ

ಬಲಾತ್ಕಾರಹರಣ “ಯಾವ ಮೂಢತನವನ್ನೂ ಮಾಡಬೇಡ, ಕೊಂದು ಬಿಡುವೆ,” (ಡಿಸೆಂಬರ್‌ 8, 1992) ಎಂಬ ಲೇಖನಕ್ಕೆ ತುಂಬಾ ಉಪಕಾರ. ಅದು ನನಗೆ ಕಣ್ಣೀರು ಬರುವಂತೆ ಮಾಡಿತು. ಲೀಸ ಡ್ಯಾವನ್‌ಪೋರ್ಟ್‌ರ ಅನುಭವ ನನಗೆ ಎಂದಿಗೂ ಆಗಿರಲಿಲ್ಲವಾದರೂ, ಕೆಲವು ಸಮಯದಿಂದ ವ್ಯಾಕುಲಚಿತ್ತಳಾಗಿರುವ ನಾನು, ಆಗಾಗ ಸಾಯುವ ಬಯಕೆಯುಳ್ಳವಳಾಗಿದ್ದೆ. ಆದರೆ ಆ ಲೇಖನ, ಯೆಹೋವ ದೇವರು ಕೊಡುವ ಬಲವಾದ ಬೆಂಬಲದ ಬಗೆಗೆ ಮತ್ತು ಆತನು ಅಗತ್ಯವಿರುವಾಗ ಸದಾ ಹೇಗೆ ಸಹಾಯ ನೀಡುತ್ತಾನೆಂಬ ವಿಷಯದಲ್ಲಿ ನಾನು ಆಳವಾಗಿ ಚಿಂತಿಸುವಂತೆ ಮಾಡಿತು.

ಎನ್‌. ಓ., ಜಪಾನ್‌

ಕುಟುಂಬಗಳು ಹತ್ತಿರ ಬನ್ನಿ “ಕುಟುಂಬಗಳು—ಹೊತ್ತು ಮೀರುವ ಮೊದಲೇ ಹತ್ತಿರ ಬನ್ನಿರಿ” (ಒಕ್ಟೋಬರ 8, 1992) ಎಂಬ ಲೇಖನಮಾಲೆಯ ಬಗೆಗೆ ನನಗೆ ಎಷ್ಟೋ ಸಂತೋಷವಿದೆ. ಸುಂದರ ರಕ್ಷಾವರಣವನ್ನು ನೋಡಿ ನನ್ನ ಕಣ್ಣುಗಳಲ್ಲಿ ನೀರು ತುಂಬಿತು. ಅಲ್ಲದೆ, ಪ್ರತಿಯೊಂದು ಪದ ಮತ್ತು ಪದಸಮೂಹವನ್ನು ಎಷ್ಟೋ ಜಾಗರೂಕತೆಯಿಂದ ಆಯ್ದುಕೊಂಡು ಎಷ್ಟೋ ಮಮತೆಯಿಂದ ಬರೆಯಲಾಗಿತ್ತು! ಒತ್ತಾಗಿರುವ ಕುಟುಂಬಗಳ ಪ್ರಾಮುಖ್ಯತೆಯನ್ನು ನೆನಪಿಸಿದುದಕ್ಕಾಗಿ ನಿಮಗೆ ಉಪಕಾರ.

ಕೆ. ಇ., ಯುನೊಯಿಟೆಡ್‌ ಸ್ಟೇಟ್ಸ್‌

ಈ ಲೇಖನಗಳು ನಾನು ಓದಿರುವ ಅತಿ ಹೃದಯದ್ರಾವಕ ಲೇಖನಗಳಲ್ಲಿ ಕೆಲವು. ನಮ್ಮಲ್ಲಿ ಅನೇಕರು, ನಾವು ಕೇವಲ ಮಕ್ಕಳೊಡನೆ ಬೈಬಲ್‌ ಅಧ್ಯಯನ ಮಾಡುವಲ್ಲಿ, ಕ್ರೈಸ್ತ ಕೂಟಗಳಿಗೆ ತೆಗೆದುಕೊಂಡು ಹೋಗುವಲ್ಲಿ, ಮತ್ತು ಸಾರುವ ಕೆಲಸದಲ್ಲಿ ಜೊತೆಯಾಗಿ ಭಾಗವಹಿಸುವಲ್ಲಿ, ಹೆತ್ತವರಾಗಿರುವ ನಮಗೆ ಸಾಫಲ್ಯ ದೊರೆಯುತ್ತದೆ ಎಂದು ನಂಬಿದ್ದೆವು. ಆದರೆ, ಯಶ್ವಸೀ ಹೆತ್ತವರಿಗೆ ತಮ್ಮ ಮಗುವಿನೊಂದಿಗೆ ಒತ್ತಾದ ವೈಯಕ್ತಿಕ ಸಂಬಂಧ—ಹೆತ್ತವರ ಪ್ರೀತಿಯ ಆಶ್ವಾಸನೆಯನ್ನು ಮಗುವಿನಲ್ಲಿ ಹುಟ್ಟಿಸುವ ಅಂಟಿಕೆ—ಇದೆಯೆಂದು ನಾನು ಕಂಡುಕೊಂಡಿದ್ದೇನೆ. ಹಿಂದಿನ ಲೇಖನಗಳಲ್ಲಿ ಈ ವಿಷಯವು ಹೇಳಲ್ಪಟ್ಟಿದೆಯಾದರೂ ನನ್ನ ಮೇಲೆ ಈಗ ಆಗಿರುವ ಪ್ರಭಾವ ಹಿಂದೆಂದೂ ಆದದ್ದಿಲ್ಲ.

ಟಿ. ಎಚ್‌., ಯುನೊಯಿಟೆಡ್‌ ಸ್ಟೇಟ್ಸ್‌

ಮದುವೆಗೆ ಮೊದಲು ನಾನೊಬ್ಬ ಲೆಕ್ಕ ಗುಮಾಸ್ತೆಯಾಗಿದ್ದೆ. ನನ್ನ ಕೆಲಸದಲ್ಲಿ ನನಗೆ ಎಷ್ಟೋ ಆನಂದವಿತ್ತು. ಮಕ್ಕಳಾದ ಮೇಲೆ, ನಾನು ಕೆಲಸ ಬಿಟ್ಟು ಮನೆಯಲ್ಲಿ ಮಕ್ಕಳೊಂದಿಗಿರಲು ನಿರ್ಣಯಿಸಿದೆ. ಆದರೆ ಕೆಲವು ಬಾರಿ, ನಾನು ಕೆಲಸಕ್ಕೆ ಬಾರದವಳೆಂದು ನೆನಸುತ್ತಾ ಕೆಲಸಕ್ಕೆ ಹಿಂದೆ ಹೋಗಲು ಹವಣಿಸುತ್ತಿದ್ದೆ. ನಿಮ್ಮ ಲೇಖನವನ್ನು ಓದಿದ ಬಳಿಕ, ನನಗೆ ನನ್ನ ಮಕ್ಕಳ ಕಡೆಗೆ ನವೀಕರಿಸಿದ ಜವಾಬ್ದಾರಿಯ ಅನಿಸಿಕೆಯಾಗುತ್ತದೆ.

ಎಸ್‌. ಎಮ್‌., ಯುನೊಯಿಟೆಡ್‌ ಸ್ಟೇಟ್ಸ್‌

ಜೂಜಾಟ “ಯುವಜನರು ಪ್ರಶ್ನಿಸುವುದು . . . ಜೂಜಾಡುವುದು ನಿಜವಾಗಿಯೂ ಅಷ್ಟು ಕೆಟ್ಟದ್ದೆ?” ಎಂಬ ಲೇಖನಕ್ಕೆ (ನವಂಬರ 8, 1992) ನಿಮಗೆ ಉಪಕಾರ. ಒಂದು ಜೂಜಾಟ ಗೆಲ್ಲುವವನಿಗೆ 20 ಯೆನ್‌ ಸಿಗುತ್ತದೆ; ಕೆಲವು ಸಹಪಾಠಿಗಳು ಶಾಲೆಗೆ 2,000 ಯೆನ್‌ಗಳನ್ನು ತರುತ್ತಾರೆ! ಆಟಕ್ಕೆ ನಾನೊಮ್ಮೆ ಆಮಂತ್ರಿಸಲ್ಪಟ್ಟೆ. ಜೂಜಾಟ ನಿಜವಾಗಿಯೂ ಅಷ್ಟು ಕೆಟ್ಟದ್ದೆ ಎಂದು ನಾನು ಯೋಚಿಸತೊಡಗಿದೆ, ಮತ್ತು ಒಮ್ಮೆ ಮಾತ್ರ ಅದನ್ನು ಆಡಬೇಕೆಂಬ ಮನಸ್ಸು ನನಗಿತ್ತು. ಆದರೆ ಈ ಲೇಖನವನ್ನು ಓದಿದ ಬಳಿಕ, ಜೂಜಾಡುವುದು ಒಳ್ಳೆಯದಲ್ಲವೆಂದೂ, ಅದನ್ನು ಒಮ್ಮೆ ಆಡಿದರೆ ಮರಳಿ ಮರಳಿ ಆಡಬೇಕೆಂಬ ಮನಸ್ಸಾಗಬಹುದೆಂದೂ ನನಗೆ ಈಗ ಗೊತ್ತಾಗಿದೆ.

ಎನ್‌. ಎನ್‌., ಜಪಾನ್‌

ಓದುವುದು ನಾನೊಬ್ಬ ಯುವಕನು ಮತ್ತು ಓದುವುದರಲ್ಲಿ ಆನಂದಿಸುತ್ತೇನೆ. ಆದಾಗ್ಯೂ, ನಾನು ಓದುವುದು ಅನೇಕ ಬಾರಿ ನನಗೆ ಅರ್ಥವಾಗುವುದಿಲ್ಲ, ಮತ್ತು ಕಷ್ಟಕರ ಪದಗಳನ್ನು ಬಿಟ್ಟುಬಿಡುವ ಪ್ರವೃತ್ತಿ ನನಗೆ ಇದೆ. ಈ ವಿಷಯದಲ್ಲಿ “ನಿಮ್ಮ ಜ್ಞಾನಮಿತಿಯನ್ನು ವಿಕಸಿಸುವ ಉದ್ದೇಶದಿಂದ ಓದಿರಿ” (ಆಗಸ್ಟ್‌ 8, 1992) ಲೇಖನವು ನನಗೆ ಪ್ರಗತಿಮಾಡಲು ಸಹಾಯ ಮಾಡಿತು.

ಎ. ಆರ್‌. ಬಿ., ಬ್ರೆಸಿಲ್‌

ಕಾವಲಿನ ಬುರುಜು ಮತ್ತು ಎಚ್ಚರ!ದ ಎಲ್ಲ ಸಂಚಿಕೆಗಳನ್ನು ಓದಬೇಕೆಂದು ನಾನು ಅನೇಕ ವರ್ಷಕಾಲ ಪ್ರಯತ್ನಿಸಿದ್ದೇನೆ. ನನಗೆ ಅವನ್ನು ಓದುವ ಕಾಲತಖ್ತೆಯಿದ್ದರೂ ನಾನು ಅದರಲ್ಲಿ ವಿಫಲಗೊಂಡಿದ್ದೆ. ನನ್ನ ಸಮಸ್ಯೆ ನ್ಯೂನ ಓದುವ ಅಭ್ಯಾಸವೇ ಎಂದು ತಿಳಿಯಲು ನಿಮ್ಮ ಲೇಖನ ಸಹಾಯ ಮಾಡಿತು. ನನ್ನ ಓದುವಿಕೆಯನ್ನು ಅಭಿವೃದ್ಧಿಗೊಳಿಸುವ ಸೂಚನೆಗಳನ್ನು ನಾನು ಗಣ್ಯ ಮಾಡುತ್ತೇನೆ.

ಎ. ಕೆ. ಎಫ್‌. ಎಮ್‌., ಬ್ರೆಸೀಲ್‌

ದೇಹದ ಎಚ್ಚರಿಕೆ ಸಣ್ಣ ವೈದ್ಯಕೀಯ ಸಮಸ್ಯೆಗಳು ಎಂದು ನಾನು ನೆನಸಿದ ಸಂಗತಿಗಳು ತೊಡಗಿದಾಗ ನನ್ನ ಡಾಕ್ಟರರು ರಜೆಯಲಿದ್ದರು. ಎಚ್ಚರಿಕೆಯ ಸೂಚನೆಗಳನ್ನು ಅಸಡ್ಡೆ ಮಾಡಲು ಮುಂದುವರಿಯುತ್ತಿದ್ದಾಗ, “ದೇಹದ ಎಚ್ಚರಿಕೆಗಳಿಗೆ ಕಿವಿಗೊಡುವುದು” (ಒಕ್ಟೋಬರ 8, 1992) ಎಂಬ ಲೇಖನ ನನಗೆ ದೊರೆಯಿತು. ಅಲ್ಲಿ ಸೂಚಿಸಿರುವಂತೆ, ನಾನು ವೈದ್ಯಕೀಯ ಸಹಾಯ ಕೋರಿದೆ, ಮತ್ತು ರೋಗ ನಿರ್ಣಯ ಕ್ಯಾನ್ಸರ್‌ ಎಂದಾಗಿತ್ತು. ನನ್ನ ದೇಹದ ಎಚ್ಚರಿಕೆಗಳಿಗೆ ಕಿವಿಗೊಟ್ಟ ಕಾರಣ, ಅದನ್ನು ಬೇಗನೆ ಕಂಡುಹಿಡಿದು ಚಿಕಿತ್ಸೆ ಮಾಡುವಂತಾಯಿತು.

ಎಸ್‌. ಎಸ್‌., ಯುನೊಯಿಟೆಡ್‌ ಸ್ಟೇಟ್ಸ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ