ಯಾರು ಪ್ರೀತಿಸದ ಮೀನು
ಷಾರ್ಕ್ ನಿಮ್ಮ ನೆಚ್ಚಿನ ಮೀನೋ? ಇರಲಿಕ್ಕಿಲ್ಲ. ಅನೇಕ ಜನರಿಗೆ, ಷಾರ್ಕ್ ನೆಚ್ಚಿನದ್ದಾಗಿರುವುದಿಲ್ಲ. ಆದರೂ ಅದು ಕೆಲವರಿಗೆ ಅವರ ನೆಚ್ಚಿನ ಊಟ, ಅವರ ನೆಚ್ಚಿನ ವಿಧದ ಚರ್ಮವನ್ನೊದಗಿಸುತ್ತದೆ, ಯಾ ಪ್ರಾಯಶಃ ಕ್ರೀಡೆಗಾಗಿ ಕೊಲ್ಲಲು ಅವರ ನೆಚ್ಚಿನ ಜೀವಿಯಾಗಿರುತ್ತದೆ. ಅಂತಹ ಕಾರಣಗಳಿಗಾಗಿ ಹೆಚ್ಚೆಚ್ಚು ಷಾರ್ಕ್‌ಗಳು ಕೊಲ್ಲಲ್ಪಡುತ್ತವೆ. ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಗಮನಿಸುವುದೇನೆಂದರೆ ಕೇವಲ ಮೆಕ್ಸಿಕೊದ ಖಾರಿ, ಕ್ಯಾರಿಬಿಯನ್, ಮತ್ತು ಅಮೆರಿಕಾದ ಪೂರ್ವ ಕರಾವಳಿಯ ಆಚೆ ವಾರ್ಷಿಕ ಷಾರ್ಕ್ ಹಿಡಿಯುವಿಕೆಯು ಕಳೆದ ಹತ್ತು ವರ್ಷಗಳಲ್ಲಿ 1,000 ಸೇಕಡಕ್ಕಿಂತಲೂ ಮೇಲಕ್ಕೆರಿದೆ!
ಷಾರ್ಕ್‌ಗಳ ಸಂರಕ್ಷಣೆಗಾಗಿ ಕರೆಯ ಕೂಗನ್ನು ಒಂದು ವೇಳೆ ನೀವು ಕೇಳದೆ ಇರುವಲ್ಲಿ, ಇದೇನೂ ಆಶ್ಚರ್ಯವಲ್ಲ. ಯಾಕಂದರೆ, ಅನೇಕರು ಷಾರ್ಕನ್ನು ಒಂದು ಕೇಡು, ಮಾನವರನ್ನು ತಿನ್ನುವ ಅಪೇಕ್ಷೆಯಲ್ಲದೆ ಅದರ ಮಿದುಳಿನಲ್ಲಿ ಹೆಚ್ಚೇನೂ ಇಲ್ಲದ ಒಂದು ತೃಪ್ತಿಗೊಳಿಸಲಾಗದ ಭಕ್ಷಕ ಯಂತ್ರವಾಗಿದೆ ಎಂಬಂತೆ ನೋಡುತ್ತಾರೆ. ಷಾರ್ಕ್ ಆಕ್ರಮಣಗಳು ಜರುಗುತ್ತವಾದರೂ, ದಿಗಿಲು ಬೀಳಿಸುವ ಚಲನ ಚಿತ್ರದ ಔತಣ ತಯಾರಕರು ನೀವು ನಂಬುವಂತೆ ಮಾಡುವದಕ್ಕಿಂತ ವಿರಳವಾಗಿ ಅವು ಇವೆ.
ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್‌ಗನುಸಾರ, “ಪ್ರತಿ ವರ್ಷ ಲೋಕ ವ್ಯಾಪಕವಾಗಿ 100ಕ್ಕಿತಲೂ ಕಡಿಮೆ [ಷಾರ್ಕ್ ಆಕ್ರಮಣಗಳು] ವರದಿಸಲ್ಪಡುತ್ತವೆ, ಮತ್ತು ಹೆಚ್ಚಿನವು ಮಾರಕವಲ್ಲ.” ಇದಲ್ಲದೆ, ಎಲ್ಲಾ ಷಾರ್ಕ್‌ಗಳು ಆಕ್ರಮಣ ಮಾಡುವಂಥವುಗಳಾಗಿ ಇರುವದಿಲ್ಲ. ಅವುಗಳ ಜಾತಿಯ ಉದ್ದದ ವ್ಯಾಪ್ತಿ 10 ಸೆಂಟಿಮೀಟರ್‌ದಿಂದ 18 ಮೀಟರ್‌ಗಳು, ಮತ್ತು ಅವುಗಳ ಭಾರ 28 ಗ್ರ್ಯಾಮ್‌ಗಳಿಗೂ ಕಡಿಮೆಯಿಂದ ಹಿಡಿದು 14,000 ಕಿಲೊಗ್ರಾಮ್‌ಗಳ ವರೆಗಿದೆ! 300 ಷಾರ್ಕ್ ಜಾತಿಗಳಲ್ಲಿ ಸುಮಾರು 90 ಸೇಕಡದಷ್ಟು (ಅತಿ ದೊಡ್ಡವುಗಳನ್ನೂ ಸೇರಿಸಿ) ಮನುಷ್ಯರಿಗೆ ಕೇಡನ್ನೊಡ್ಡುವದಿಲ್ಲ.
ಮತ್ತು ಷಾರ್ಕ್‌ಗಳು ಬೆಲೆಯುಳ್ಳದ್ದಾಗಿವೆ. ಸಮುದ್ರದೊಳಗಿನ ಧೂಳು ಚೋಷಕರಾಗಿ, ಅವು ರೋಗಗ್ರಸ್ತ ಪ್ರಾಣಿಗಳನ್ನು ಮತ್ತು ಕಳಪೆಯನ್ನು ಗಪಗಪನೆ ತಿಂದು, ಸಾಗರಗಳಲ್ಲಿ ನಿಷ್ಕರ್ಷಕ ಶುದ್ಧಗೊಳಿಸುವ ಪಾತ್ರವನ್ನಾಡುತ್ತವೆ. ಷಾರ್ಕ್‌ಗಳು ಕ್ಯಾನ್ಸರ್ ಯಾ ಮಹಾ ಸೋಂಕುಗಳಿಂದ ಮುಕ್ತವೆಂದು ಕಂಡುಬಂದದರ್ದಿಂದ, ಅವುಗಳ ರೋಗನಿರೋಧಕ ವ್ಯವಸ್ಥೆಯನ್ನು ವಿಜ್ಞಾನಿಗಳು ಉತ್ಸಾಹದಿಂದ ಪರಿಶೀಲಿಸುತ್ತಾರೆ. ಆದರೂ, ಷಾರ್ಕ್‌ಗಳು ಅವೇಧನೀಯವಲ್ಲ. ಅವು ನಿಧಾನವಾಗಿ ಸಂತಾನೋತ್ಪತ್ತಿ ಮಾಡುತ್ತವೆ, (ಒಂದು ವರ್ಷಕ್ಕೆ, ಎರಡು ಮರಿ ಮೀನು, ಯಾ ಮರಿಗಳಷ್ಟು ಕಡಿಮೆ ಹೆರುವುದರಿಂದ), ಹೀಗೆ ಅವುಗಳನ್ನು ಬಹುವಾಗಿ ಕೊಂದುಹಾಕುವಲ್ಲಿ ಬೇಗನೆ ಸಂಖ್ಯಾಭಿವೃದ್ಧಿ ಹೊಂದಲಿಕ್ಕಿಲ್ಲ.
ಭಾಗ್ಯವಶಾತ್, ಷಾರ್ಕ್ ಕೊನೆಗಾದರೂ ಕೆಲವು ಸ್ನೇಹಿತರನ್ನು ಕಂಡುಕೊಳ್ಳುತ್ತಿದೆ. ಯು.ಎಸ್. ನ್ಯಾಷನಲ್ ಮರೀನ್ ಫಿಷರೀಸ್ ಈ ಮೀನನ್ನು ಸಂರಕ್ಷಿಸಲು 100-ಪುಟಗಳ ಯೋಜನೆಯನ್ನು ತಯಾರಿಸಿದೆ, ಅದರಲ್ಲಿ ಮಾನವರು ಎಷ್ಟೊಂದು ಷಾರ್ಕ್‌ಗಳನ್ನು ಹಿಡಿಯಬಹುದೆಂಬ ಮಿತಿಗಳನ್ನು ಕೇಳಿಕೊಳ್ಳುತ್ತದೆ. ನಿಶ್ಚಯವಾಗಿಯೂ, ಎಷ್ಟೊಂದು ಮಾನವರನ್ನು ಷಾರ್ಕ್‌ಗಳು ಹಿಡಿಯಬಹುದೆಂದು ಯಾರೂ ಇನ್ನೂ ಪ್ರಸ್ತಾಪಿಸಿಲ್ಲ; ಆದರೆ ಮಾನವ ಮತ್ತು ಷಾರ್ಕ್ ಇವೆರಡರ ನಿರ್ಮಾಣಿಕನು ಆತನ ಮಾನವ ಮಕ್ಕಳು ಈ ಭೂಮಿಯ ಮೇಲೆ ಯಾವುದಕ್ಕೂ ಹೆದರದೆ ಇರುವ ಒಂದು ಸಮಯವನ್ನು ವಾಗ್ದಾನಿಸಿದ್ದಾನೆ.—ಯೆಶಾಯ 11:6-9. (g91 11/8)
[ಪುಟ 31 ರಲ್ಲಿರುವ ಚಿತ್ರ ಕೃಪೆ]
N. Orabona/H. Armstrong Roberts