ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 12/8 ಪು. 17-19
  • ಹವ್ಯಾಸಗಳ ವಿಷಯದಲ್ಲೇನು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹವ್ಯಾಸಗಳ ವಿಷಯದಲ್ಲೇನು?
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಾಡಿ ನೋಡಲರ್ಹವಾದ ಹವ್ಯಾಸಗಳು
  • ವೆಚ್ಚವನ್ನು ಲೆಕ್ಕಿಸಿ
  • ಸಮತೆಯನ್ನು ಕಾಪಾಡಿಕೊಳ್ಳಿರಿ!
  • ನೋಹನು ಒಂದು ನಾವೆಯನ್ನು ಕಟ್ಟುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದವನು
    ಅವರ ನಂಬಿಕೆಯನ್ನು ಅನುಕರಿಸಿ
  • ನೋಹನ ಹಡಗು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ದೇವರು ಅವನನ್ನೂ ಅವನ ಕುಟುಂಬವನ್ನೂ ಕಾಪಾಡಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
ಇನ್ನಷ್ಟು
ಎಚ್ಚರ!—1992
g92 12/8 ಪು. 17-19

ಯುವ ಜನರು ಪ್ರಶ್ನಿಸುವುದು . . .

ಹವ್ಯಾಸಗಳ ವಿಷಯದಲ್ಲೇನು?

ಹವ್ಯಾಸಗಳು ಸುಖದಾಯಕ. “ಒಬ್ಬ ವ್ಯಕ್ತಿ ತನ್ನ ಬಿಡು ಸಮಯದಲ್ಲಿ ಮಾಡಬಯಸುವ ಬಹುಮಟ್ಟಿಗೆ ಯಾವುದೇ ವಿಷಯ” ವೆಂದು ಅವುಗಳ ಅರ್ಥವನ್ನು ನಿರೂಪಿಸಲಾಗಿದೆ. ಕೆಲವು ಯುವಜನರು ತಮ್ಮ ಬಿಡುಸಮಯವನ್ನು ಈಜಾಡುವುದರಲ್ಲಿ, ಫುಟ್‌ಬಾಲ್‌ ಆಡುವುದರಲ್ಲಿ ಯಾ ಓಡುವುದರಲ್ಲಿ ಕಳೆಯುತ್ತಾರೆ. ಕಡಮೆ ಕ್ರೀಡಾಸಕ್ತಿಯ ಯುವಜನರು ಸಂಗೀತವನ್ನಾಲಿಸಲು, ದೂರ ನಡೆಯಲು, ಯಾ ಕೇವಲ ಮನೆಯಲ್ಲಿ ಕುಳಿತು ಓದಲು ಇಷ್ಟಪಡಬಹುದು. ಇತರರು ಸಾಮರ್ಥ್ಯಗಳನ್ನು ಬೆಳೆಯಿಸಲು ಯಾ ವಸ್ತುಗಳನ್ನು ಶೇಖರಿಸಲು ಇಷ್ಟಪಡುತ್ತಾರೆ. ನ್ಯಾಟಲಿಯ ಹವ್ಯಾಸ ಕೊಳಲೂದುವುದು. ಅವಳ ತಂಗಿ ನಿಕಿ ಎಂಬವಳು ಬೊಂಬೆಗಳನ್ನು ಶೇಖರಿಸುತ್ತಾಳೆ.

ಹವ್ಯಾಸಗಳು ಕೆಲಸದ ಮತ್ತು ಆಟದ ಮಧ್ಯೆ ಸಮತೆಯನ್ನು ನೀಡಿ, ವಿರಾಮ ಸಮಯದಲ್ಲಿ ಬೇಜಾರನ್ನು ತಡೆಹಿಡಿಯುತ್ತದೆ. ಅವು ವಿಶ್ರಮಿಸಲು ನಿಮಗೆ ಸಹಾಯಮಾಡ ಬಲ್ಲವು. ಮತ್ತು ಯೋಗ್ಯ ರೀತಿಯ ವಿಶ್ರಾಮ ಹೆಚ್ಚು ಉತ್ತಮವಾದ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಉಂಟುಮಾಡುತ್ತದೆ. ಕೆನಡದ ಡಾಕ್ಟರ್‌ ಸರ್‌ ವಿಲ್ಯಮ್‌ ಆಸರ್ಲ್‌ ವಾದಿಸಿದ್ದು: “ಹವ್ಯಾಸವಿಲ್ಲದಿರುವಲ್ಲಿ ಯಾವ ಮನುಷ್ಯನೂ ನಿಜವಾಗಿ ಸಂತೋಷಿ ಯಾ ಸುರಕ್ಷಿತನಲ್ಲ.” ಅವರು ಕೂಡಿಸಿ ಹೇಳಿದ್ದು: “ಹೊರಗಣ ಅಭಿರುಚಿ ಏನೇ ಇರಲಿ, ವ್ಯತ್ಯಾಸ ಸ್ವಲ್ಪವೂ ಇಲ್ಲ . . . ಒಬ್ಬನಿಗೆ ಒಂದು ಹವ್ಯಾಸವಿರುವಲ್ಲಿ ಮತ್ತು ಅವನು ಅದಕ್ಕೆ ತುಂಬಾ ಗಮನವನ್ನು ಕೊಡುವಲ್ಲಿ ಅದು ಯಾವ ಹವ್ಯಾಸವಾದರೂ ಚಿಂತಿಲ್ಲ.” ಆದರೆ ಉತ್ತಮ ರಾಹುತನು ತನ್ನ ಕುದುರೆಯನ್ನು ನಿಯಂತ್ರಿಸುವಂತೆಯೇ, ಹವ್ಯಾಸ ನಿಮ್ಮನ್ನು ನಿಯಂತ್ರಿಸುವಂತೆ ಬಿಡುವ ಬದಲು ನೀವು ಅದನ್ನು ನಿಯಂತ್ರಿಸಬೇಕು. ಹೇಗೆ?

ಪ್ರಥಮವಾಗಿ, ನೀವು ಜೀವನದ ಹೆಚ್ಚು ಪ್ರಾಮುಖ್ಯ ವಿಷಯಗಳಾದ ಕ್ರೈಸ್ತ ಕೂಟಗಳಿಗೆ ಹಾಜರಾಗುವುದು, ಮನೆಯ ಕೆಲಸಗಳ ಜಾಗ್ರತೆ ವಹಿಸುವುದು, ಮತ್ತು ನಿಮ್ಮ ಶಾಲಾ ಮನೆಗೆಲಸವನ್ನು ಮಾಡುವುದು, ಇಂಥ ವಿಷಯಗಳಿಗೆ ಆದ್ಯತೆಯನ್ನು ಕೊಡಲು ನಿಶ್ಚಯಿಸಬೇಕು. (ಫಿಲಿಪ್ಪಿ 1:10) ಈಗ ನಿಮ್ಮ ಬಿಡುಸಮಯದಲ್ಲಿ ಎಷ್ಟು ಸಮಯ ಹವ್ಯಾಸದ ಸಮಯವೆಂದು ನೀವು ನಿರ್ಧರಿಸಬಲ್ಲಿರಿ.

ಮಾಡಿ ನೋಡಲರ್ಹವಾದ ಹವ್ಯಾಸಗಳು

ಕಸೂತಿ ಕೆಲಸ, ಉಡುಪು ತಯಾರಿಸುವುದು, ಯಾ ಪಾಕ ಕಲೆಯನ್ನು ಕಲಿಯುವುದು, ಇಂಥ ಅಮೂಲ್ಯ ನೈಪುಣ್ಯಗಳನ್ನು ವಿಕಸಿಸಲು ಕೆಲವು ಹವ್ಯಾಸಗಳು ಸಹಾಯ ಮಾಡುತ್ತವೆ. ಈ ಹವ್ಯಾಸಗಳು ವಿಶೇಷವಾಗಿ ಹುಡುಗಿಯರಿಗೆ ಹಿಡಿಸುತ್ತವೆಂಬುದು ಸತ್ಯ. ಆದರೂ, ಅಡುಗೆಯಲ್ಲಿ ಪುರುಷಯೋಗ್ಯವಲ್ಲದ ಯಾವ ವಿಷಯವೂ ಇಲ್ಲ. (ಯೋಹಾನ 21:9-12 ಹೋಲಿಸಿ.) ನೀವು ರಸಜ್ಞರ ಮಟ್ಟವನ್ನು ಮುಟ್ಟಲಿಕ್ಕಿಲ್ಲವಾದರೂ, ಅಡುಗೆ ಮಾಡಲು ಸ್ವಲ್ಪ ಕಲಿಯುವುದರಿಂದ, ನೀವು ಎಂದಾದರೂ ನಿಮ್ಮ ಸ್ವಂತ ಜಾಗ್ರತೆಯನ್ನು ವಹಿಸಬೇಕಾಗುವ ಸಂದರ್ಭ ಬರುವಲ್ಲಿ ನಿಮ್ಮ ಸಾಮರ್ಥ್ಯವನ್ನು ಬೆಳೆಸಲು ಬೆಲೆಯುಳ್ಳದ್ದಾಗಬಲ್ಲುದು. ಮತ್ತೊಂದು ಕಡೆಯಲ್ಲಿ, ಹುಡುಗಿಯರು ಕಾರ್‌ ಯಂತ್ರಿಗ ಕೆಲಸ ಯಾ ಮನೆಯ ಆವಶ್ಯಕತೆಗಳ ರಿಪೇರಿಯ ಕೆಲಸವನ್ನು ಪ್ರಯತ್ನಿಸಬಹುದು.

ಇನ್ನೊಂದು ಅರ್ಹತೆಯ ಹವ್ಯಾಸ ಭಾಷೆಯನ್ನು ಕಲಿಯುವುದೆ. ದೃಷ್ಟಾಂತಕ್ಕೆ, ಎಳೆಯ ಜೇಮ್ಸ್‌ ಈಗ ರಷ್ಯನ್‌ ಭಾಷೆಯನ್ನು ಕಲಿಯುತ್ತಾನೆ. ಎಂದೋ ಒಂದು ದಿನ ಒಂದು ವಿದೇಶದಲ್ಲಿ ಇತರರಿಗೆ ಬೈಬಲ್‌ ಸತ್ಯಗಳನ್ನು ಕಲಿಸಲು ಎರಡನೆಯ ಭಾಷೆಯು ನಿಮಗೆ ಸಾಧ್ಯ ಮಾಡೀತು! ಹೌದು, ಹವ್ಯಾಸಗಳು ಅನೇಕ ವೇಳೆ, ಇತರರಿಗೆ ನೆರವಾಗುವ ಮಾಧ್ಯಮವಾಗಬಲ್ಲವು.

ದೃಷ್ಟಾಂತಕ್ಕೆ, ತೋಟಗಾರಿಕೆ ನಿಮ್ಮ ಹವ್ಯಾಸವೆ? ನಿಮ್ಮ ಅಜ್ಜಅಜಿಗ್ಜೆ ಯಾ ಯೋಗ್ಯವಾಗಿ ನೋಡಿಕೊಳ್ಳಲು ಕಷ್ಟವಾಗುವ ಇತರ ವೃದ್ಧರಿಗೆ ಸೇರಿರುವ ತೋಟದಲ್ಲಿ ಕೆಲಸಮಾಡಿ ನಿಮ್ಮ ತೋಟಗಾರಿಕೆಯ ನೈಪುಣ್ಯವನ್ನು ಏಕೆ ಉತ್ತಮಗೊಳಿಸಬಾರದು? ಸ್ವತಃಕರಣ ಕೆಲಸದಲ್ಲಿ ನೀವು ಆನಂದಿಸುತ್ತೀರೆ? ಹಾಗಿದ್ದರೆ, ಒಬ್ಬ ವೃದ್ಧನಿಗೆ ಯಾ ಒಬ್ಬ ವಿಧವೆಗೆ ಮನೆ ರಿಪೇರಿ ಮಾಡುವುದರಲ್ಲಿ ಸಹಾಯವನ್ನೇಕೆ ನೀಡಬಾರದು? ಅಡುಗೆ ಮಾಡುವುದು ನಿಮ್ಮ ಹವ್ಯಾಸವಾಗಿದ್ದರೆ ಮತ್ತು ನಿಮಗೆ ಪ್ರಿಯವಾದ ಒಂದು ಪಾಕವಿಧಾನ ನಿಮ್ಮಲ್ಲಿರುವಲ್ಲಿ, ಅವಶ್ಯವಿರುವ ಯಾವನಿಗಾದರೂ ಕೊಡುಗೆಯಾಗಿ ನೀಡುವ ಉದ್ದೇಶದಿಂದ ಅದನ್ನು ಏಕೆ ತಯಾರಿಸಬಾರದು? “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ವೆಂದು ಯೇಸು ಹೇಳಿದನೆಂದು ನೆನಪಿರಲಿ.—ಅ. ಕೃತ್ಯಗಳು 20:35.

ಒಂದು ಹವ್ಯಾಸವು ನೀವು ಅಧ್ಯಾತ್ಮಿಕವಾಗಿ ಪುರೋಗಮನ ಹೊಂದುವಂತೆಯೂ ಸಹಾಯ ಮಾಡಬಲ್ಲದು. ಉದಾಹರಣೆಗೆ, ನೀವು ಮಾದರಿ ಪ್ರತಿಕೃತಿಗಳನ್ನು ಮಾಡಲು ಇಷ್ಟವುಳ್ಳವರಾದರೆ, ಒಂದು ಸೂಕ್ಷ್ಮಾಕಾರದ ತೇಲುಪೆಟ್ಟಿಗೆಯನ್ನು ಮಾಡುವುದು, ನೋಹನ ನಂಬಿಕೆಯ ಶಕ್ತಿಗೆ ನಿಮ್ಮ ಗಣ್ಯತೆಯನ್ನು ಗಾಢವಾಗಿ ಮಾಡಲಾರದೆ? (ಬಾಕ್ಸ್‌ ನೋಡಿ.) ಸಾಕ್ಷಿಗುಡಾರ ಯಾ ದೇವಾಲಯದ ಪ್ರತಿಕೃತಿಯನ್ನು ರಚಿಸುವುದು, ದೇವರ ಸೇವಕರು ಬಹು ಪೂರ್ವದಲ್ಲಿ ಆರಾಧಿಸಿದ ವಿಧದ ಕುರಿತ ನಿಮ್ಮ ಜ್ಞಾನವನ್ನು ಇದೇ ರೀತಿ ಅಭಿವೃದ್ಧಿಪಡಿಸಬಹುದು. ಬೈಬಲ್‌ ಸಮಯಗಳಲ್ಲಿ ಕುರುಬ ಹುಡುಗ ದಾವೀದನು ತನ್ನ ವಿರಾಮ ಕಾಲದಲ್ಲಿ ಕಿನ್ನರಿಯನ್ನು ಬಾರಿಸಿದನು. ತರುವಾಯ ಅವನು ಯೆಹೋವನ ಸ್ತುತಿಗಾಗಿ ಸುಂದರ ಗೀತೆಗಳನ್ನು ರಚಿಸಿದನು. ನೀವು ಒಂದು ಸಂಗೀತ ಉಪಕರಣವನ್ನು ಬಾರಿಸಲು ಕಲಿಯಬಲಿರ್ಲೆ? ಹಾಗಿರುವಲ್ಲಿ, ಸಿಂಗ್‌ ಪ್ರೆಯ್ಸೆಸ್‌ ಟು ಜೆಹೋವa ಎಂಬ ಗೀತಪುಸ್ತಕದಿಂದ ಸರ್ವ ವಿನ್ಯಾಸಗಳನ್ನು ಕಲಿತು, ದೇವರನ್ನು ಸ್ತುತಿಸಲು ನಿಮ್ಮ ಸಾಮರ್ಥ್ಯವನ್ನು ಏಕೆ ಉಪಯೋಗಿಸಬಾರದು? ನೀವು ರಾಗ ಬಾರಿಸುವಾಗ ಭಾವಗೀತೆ ವ್ಯಕ್ತಪಡಿಸುವ ಚಿತ್ತವೃತ್ತಿಯನ್ನು ಪರ್ಯಾಲೋಚಿಸಿರಿ. ನೀವು ಒಬ್ಬ ಸಂಗ್ರಹಕಾರರೆ? ಹಾಗಿರುವಲ್ಲಿ, ಬೈಬಲಿಗೆ ಸಂಬಂಧಪಟ್ಟ ಸಂಗತಿಗಳನ್ನು ಸಂಗ್ರಹಿಸಿರಿ. ಅಥವಾ, ಬೈಬಲ್‌ ದೇಶಗಳ ಚಿತ್ರಗಳನ್ನು ಒಂದು ಪುಸ್ತಕದಲ್ಲಿ ಅಂಟಿಸಿಡಲು ಪ್ರಯತ್ನಿಸಿರಿ.

ವೆಚ್ಚವನ್ನು ಲೆಕ್ಕಿಸಿ

ಒಂದು ಹವ್ಯಾಸ ಅದೆಷ್ಟೇ ಅರ್ಹವಾಗಿರಲಿ, ಅನೇಕ ವೇಳೆ ಅದಕ್ಕೆ ಎಷ್ಟು ಖರ್ಚು ತಗಲುತ್ತದೆಂದು ಪ್ರಶ್ನಿಸಿಕೊಳ್ಳುವುದು ವಿವೇಕ. (ಲೂಕ 14:28) ಆ ಹವ್ಯಾಸ ನಿಮ್ಮ ಆಯವ್ಯಯದ ಪಟ್ಟಿಗೆ ಹೊಂದಿಕೊಂಡಿದೆಯೆ? ನಿಮ್ಮ ಹವ್ಯಾಸ ಅಂಚೆ ಚೀಟಿಗಳ, ಪುರಾತನ ವಸ್ತುಗಳ, ಇಲ್ಲವೆ ಬೊಂಬೆಗಳಂಥ ವಸ್ತು ಸಂಗ್ರಹವಾಗಿರುವ ಪಕ್ಷಕ್ಕೆ, ಇದು ವಿಶೇಷವಾಗಿ ಆಹ್ವಾನಾತ್ಮಕ ವಿಷಯವಾಗುತ್ತದೆ!

ನಿಮ್ಮ ಸಂಪನ್ಮೂಲಗಳನ್ನು ನೀವು ಉಪಯೋಗಿಸುವ ವಿಧ ನಿಮ್ಮ ನಿತ್ಯಜೀವದ ಸಂಪಾದನೆಯನ್ನೂ ಬಾಧಿಸಬಲ್ಲದೆಂಬುದನ್ನು ನೆನಪಿಡಿರಿ. ಯೇಸು ಹೇಳಿದ್ದು: “ಅನ್ಯಾಯದ ಧನ [ನಿಮ್ಮ ಹಣ] ದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ; ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟು ಹೋದಾಗ ಅವರು [ಯೆಹೋವ ದೇವರು ಮತ್ತು ಯೇಸು ಕ್ರಿಸ್ತ] ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು.” (ಲೂಕ 16:9) ಒಂದು ಹವ್ಯಾಸವು, “ನಿನ್ನ ಆದಾಯದಿಂದ . . . ಯೆಹೋವನನ್ನು ಸನ್ಮಾನಿಸು”ವುದಕ್ಕೆ ಏನೂ ಉಳಿಯದಿರುವಷ್ಟು ಖರ್ಚಾಗುವ ಹವ್ಯಾಸವೆ? (ಜ್ಞಾನೋಕ್ತಿ 3:9) ಹವ್ಯಾಸಕ್ಕೆ ಹಣವನ್ನು ಒದಗಿಸುವ ವಿಷಯವು ನೀವು ಅಂಶಕಾಲದ ಕೆಲಸವನ್ನು, ಪ್ರಾಯಶಃ ಆತ್ಮಿಕ ಚಟುವಟಿಕೆಗಳನ್ನು ನಷ್ಟ ಮಾಡಿಕೊಂಡು, ತೆಗೆದುಕೊಳ್ಳುವಂತೆ ಮಾಡೀತೆ?

ಸಮತೆಯನ್ನು ಕಾಪಾಡಿಕೊಳ್ಳಿರಿ!

ಆಗಾಗ್ಗೆ, ಹವ್ಯಾಸಗಳನ್ನು ಗಂಭೀರವಾಗಿ ತೆಗೆದುಕೊಳ್ಳುವವರು, ಅದೇ ಹವ್ಯಾಸವನ್ನು ಬೆನ್ನಟ್ಟುವ ಇತರರೊಂದಿಗೆ ಇರಲು ಅತಿಕಾಂಕ್ಷಿಸುತ್ತಾರೆ. ಆದರೆ ಇದು ಅನೇಕ ಅಪಾಯಗಳನ್ನು ತರಬಲ್ಲದು. ಆದುದರಿಂದ ಹೀಗೆ ಪ್ರಶ್ನಿಸಿಕೊಳ್ಳಿ: ಇಂಥ ಸಹವಾಸ ಆತ್ಮಿಕೋನ್ನತಿಯನ್ನು ಉಂಟುಮಾಡೀತೆ? ಅವರ ಉಡುಪು ಮತ್ತು ಕೇಶ ಶೈಲಿ, ಅವರ ಮನೋರಂಜನೆಯ ಆಯ್ಕೆ, ಯಾ ಅವರ ಸಂಭಾಷಣೆ ನಿಮ್ಮ ಮೇಲೆ ಕೆಟ್ಟ ಪ್ರಭಾವವನ್ನು ಬೀರಬಲ್ಲದೆ? ನೀವು ನಿಮ್ಮ ಸ್ವಂತ ಕುಟುಂಬ ಯಾ ಕ್ರೈಸ್ತ ಒಡನಾಡಿಗಳಿಗಿಂತ ಹೆಚ್ಚಾಗಿ ಅವರ ಒಡನಾಟಕ್ಕೆ ಹೆಚ್ಚಾಗಿ ಆಕರ್ಷಿಸಲ್ಪಡುವುದನ್ನು ಕಂಡುಕೊಂಡೀರೆ? ಹೇಗೂ, ಈ ಪರಸ್ಪರ ಸಾಮಾನ್ಯ ಅಭಿರುಚಿಗಳು ನಿಮ್ಮನ್ನು ಅಹಿತಕರವಾದ ಮಿತ್ರತ್ವಕ್ಕೆ ನಡೆಸಲು ನೀವು ಅನುಮತಿಸುತ್ತೀರೊ? ನೆನಪಿರಲಿ, “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”—1 ಕೊರಿಂಥ 15:33.

ಚಿಂತೆಗೆ ಇನ್ನೊಂದು ಕಾರಣ: ನಿಮ್ಮ ಹವ್ಯಾಸ ಯಾವ ವಿಧದ ಮನೋಭಾವವನ್ನು ಪ್ರೋತ್ಸಾಹಿಸುತ್ತದೆ? ಅದು ಅನಾರೋಗ್ಯಕರವಾದ ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆಯೆ? ವಿಪರೀತ ಆರೋಗ್ಯ ಅಪಾಯಗಳು ಅದರಲ್ಲಿ ಒಳಗೊಂಡಿದೆಯೆ? ಹಾಗಿರುವಲ್ಲಿ, ಅಪೊಸ್ತಲ ಪೌಲನ ಈ ಮಾತುಗಳನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಉಚಿತ: “ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿಯಾದರೋ ಎಲಾ ವಿಧದಲ್ಲಿ ಪ್ರಯೋಜನವಾದದ್ದು.”—1 ತಿಮೊಥೆಯ 4:8; ಗಲಾತ್ಯ 5:26.

ಇನ್ನೊಂದು ಕಡೆಯಲ್ಲಿ, ಸೊಲೊಮೋನನು ಹೇಳಿದ್ದು: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಪ್ರತಿಯೊಂದು ಕೆಲಸಕ್ಕೂ ತಕ್ಕ ಸಮಯವುಂಟು.” ಇದರಲ್ಲಿ “ನಗುವ ಸಮಯ” ಸಹ ಸೇರಿದೆ. ಹೌದು, ಹವ್ಯಾಸಗಳಿಗೂ ವಿನೋದಗಳಿಗೂ ತಕ್ಕ ಸ್ಥಾನವಿದೆ. ಆದರೆ ಹವ್ಯಾಸವು ನಿಮ್ಮ ಅಭಿರುಚಿಯನ್ನು, ನೀವು ಸೊಲೊಮೋನನ ಮುಂದಿನ ಮಾತುಗಳನ್ನು ಅಸಡ್ಡೆ ಮಾಡುವಷ್ಟು ಮಗ್ನಗೊಳಿಸದಂತೆ ನಿಶ್ಚಯ ಮಾಡಿರಿ: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯ] ಇದೇ.”—ಪ್ರಸಂಗಿ 3:1, 4; 12:13. (g91 11/22)

[ಅಧ್ಯಯನ ಪ್ರಶ್ನೆಗಳು]

a ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಪ್ರಕಾಶನ.

[Box on page 18]

ನಾನು ನೋಹನ ತೇಲುಪೆಟ್ಟಿಗೆಯನ್ನು ರಚಿಸಿದೆ!

ನನಗೆ ಕೈಕೆಲಸ ತುಂಬ ಇಷ್ಟ. ಮತ್ತು ಒಂದು ದಿನ ನೋಹನ ತೇಲುಪೆಟ್ಟಿಗೆಯ ಸಂಬಂಧದಲ್ಲಿ ನನಗೆ ಹೆಚ್ಚು ಕಲಿಯುವ ಪ್ರಚೋದನೆಯುಂಟಾದಾಗ, ಅದರ ಒಂದು ಚಿಕ್ಕಳತೆಯ ಮಾದರಿ ಪ್ರತಿಕೃತಿಯನ್ನು ಮಾಡಲು ನಿಶ್ಚಯಿಸಿದೆ.

ಆದಿಕಾಂಡ 6:14-16ರಲ್ಲಿ ಕೊಟ್ಟಿರುವ ಬೈಬಲ್‌ ವೃತ್ತಾಂತವನ್ನು, ವಾಚ್‌ ಟವರ್‌ ಸೊಸೈಟಿ ಪ್ರಕಾಶಿತ ಸಂಶೋಧನ ಸಹಾಯಕಗಳ ಸಹಾಯದಿಂದ ಜಾಗ್ರತೆಯಿಂದ ಅಭ್ಯಾಸ ಮಾಡಿದೆ. ಈ ತೇಲುಪೆಟ್ಟಿಗೆ ಆಧುನಿಕ ಸಮುದ್ರಯಾನದ ಜಹಜುಗಳಂತೆ ಇರಲೇ ಇಲ್ಲವೆಂದು ನನಗೆ ಶೀಘ್ರವೇ ತಿಳಿದುಬಂತು. ಬದಲಿಗೆ, ಇದು ಕೇವಲ ಒಂದು ದೊಡ್ಡ ಪೆಟ್ಟಿಗೆಯಂತಿತ್ತು: 300 ಕ್ಯೂಬಿಟ್‌ ಉದ್ದ, 50 ಕ್ಯೂಬಿಟ್‌ ಅಗಲ, 30 ಕ್ಯೂಬಿಟ್‌ ಎತ್ತರ. ಅಂದರೆ, 133.5 ಮೀಟರ್‌ ಉದ್ದ, 22.3 ಮೀಟರ್‌ ಅಗಲ, 13.4 ಮೀಟರ್‌ ಎತ್ತರ. ಹೀಗೆ ತೇಲುಪೆಟ್ಟಿಗೆಯು 134 ಮೀಟರ್‌ ಉದ್ದ—ಅಮೆರಿಕದ ಫುಟ್‌ಬಾಲ್‌ ಮೈದಾನಿನ ಒಂದೂವರೆ ಪಾಲು—ಗಾತ್ರದ್ದಾಗಿತ್ತು. ಇಂಥ ಬೃಹದಾಕಾರದ ರಚನೆಯಲ್ಲಿಯೂ ವಿಜ್ಞಾನಿಗಳು ಇವೆಯೆಂದು ಹೇಳುವ 10,00,000 ಪ್ರಾಣಿ ಜಾತಿಗಳು ಹಿಡಿಸಸಾಧ್ಯವಿರಲಿಲ್ಲ. ಆದರೂ ಕೆಲವು ತನಿಖೆಗಾರರು ಕೇವಲ 43 ಸಸ್ತನಿ “ಜಾತಿಗಳು”, 74 ಪಕ್ಷಿ “ಜಾತಿಗಳು” ಮತ್ತು 10 ಉರಗ “ಜಾತಿಗಳು” ಇಂದಿರುವ ಮಹಾ ವೈವಿಧ್ಯದ ಜಾತಿಗಳನ್ನು ಉತ್ಪಾದಿಸಲು ಸಾಕು ಎಂದು ನಂಬುತ್ತಾರೆ ಎಂದು ನಾನು ಕಲಿತೆ.

ನೋಹನ ಕೆಲಸದ ವೈಪರೀತ್ಯವನ್ನು ಗಣ್ಯ ಮಾಡುವುದರಲ್ಲಿಯೂ ನನ್ನ ಸಂಶೋಧನೆ ಸಹಾಯಿಸಿತು: ವಿದ್ಯುತ್‌ ಗರಗಸಗಳಿಲ್ಲದೆ ಮರಗಳನ್ನು ಕಡಿಯುವುದು, ಟ್ರ್ಯಾಕ್ಟರ್‌ಗಳಿಲ್ಲದೆ ಮರದ ದಿಮ್ಮಿಗಳನ್ನು ಕಟ್ಟಡ ನಿವೇಶನಕ್ಕೆ ಸಾಗಿಸುವುದು, ಎತ್ತು ಯಂತ್ರಗಳಿಲ್ಲದೆ ಭಾರವಾದ ತೊಲೆಗಳನ್ನು ಚಾವಣಿಗೆ ಎತ್ತುವುದು. ನೋಹನ ಕೆಲಸಕ್ಕೆ ತುಲನೆ ಮಾಡುವಾಗ ನನ್ನ ಕೆಲಸವೋ ಸುಲಭವಾಗಿತ್ತು! “ಮರ”ವನ್ನು ಪಡೆಯಲು ನಾನು ಕಳೆಯ ತೊಟ್ಟುಗಳ ಕೆಲವು ಕಂತೆಗಳನ್ನು ಮುರಿದೆ. ನನ್ನ “ಪ್ರಾಣಿಗಳು” ಮಣ್ಣಿನಿಂದ ಮಾಡಲ್ಪಟ್ಟವು. ಒಳಗಣ ವ್ಯವಸ್ಥೆಯ ಕುರಿತು ನಾನು ಊಹಿಸಬೇಕಾಯಿತು. ನೋಹನೂ ಅವನ ಕುಟುಂಬವೂ ಪ್ರಾಯಶಃ ಮೇಲಿನ ಮಹಡಿಯಲ್ಲಿ ಜೀವಿಸಲು ಆಯ್ದುಕೊಂಡಿರಬಹುದೆಂದು ನಾನು ಯೋಚಿಸಿದೆ. ಅಲ್ಲಿ ಅವರಿಗೆ ಹೆಚ್ಚು ಬೆಳಕು ಮತ್ತು ವಾಯು ಸಂಚಾರ ದೊರೆಯುತ್ತಿತ್ತು. ಪ್ರಾಣಿಗಳನ್ನು ನಾನು ಕೆಳಗಣ ಮಹಡಿಗಳಲ್ಲಿ ಇಟ್ಟೆ.

ಅನೇಕ ತಾಸುಗಳ ಶ್ರಮದ ಬಳಿಕ ನನ್ನ ಮಾದರಿ ಪ್ರತಿಕೃತಿ ಮುಗಿಯಿತು. ಈ ಮಾದರಿ ಕೃತಿಯು ಭಾವೋತ್ಪಾದಕವೆಂದು ಕೆಲವರು ಹೇಳಿದರೂ, ನಿಜ ತೇಲು ಪೆಟ್ಟಿಗೆ ನನ್ನ ಮಾದರಿಗಿಂತ ನೂರು ಪಾಲು ಉದ್ದವೂ ಅಗಲವೂ ಎತ್ತರವೂ ಆಗಿತ್ತು. ಇನ್ನೊಂದು ಮಾತಿನಲ್ಲಿ, ಆ ಆದಿ ತೇಲು ಪೆಟ್ಟಿಗೆಯ ಸಂಚಯನ ಶಕ್ತಿಯನ್ನು ಹಿಡಿಸಲು ನನ್ನ 10,00,000 ಮಾದರಿ ಕೃತಿಗಳು ಬೇಕಾಗುತ್ತಿದ್ದವು. ಆದುದರಿಂದ, ಈ ನನ್ನ ಯೋಜನೆ, ನಿಜ ತೇಲು ಪೆಟ್ಟಿಗೆಯ ಕುರಿತು ಹೆಚ್ಚಿನದನ್ನು ಕಂಡುಹಿಡಿಯಲು ನನ್ನ ಅಪೇಕ್ಷೆಯನ್ನು ಹೆಚ್ಚಿಸಿರುವುದು ಆಶ್ಚರ್ಯವಲ್ಲ. ಮತ್ತು ನನಗೆ ದೇವರ ನೂತನ ಲೋಕವನ್ನು ನೋಡಲು ಬದುಕಿ ಉಳಿಯುವ ಮತ್ತು ಮೃತರ ಪುನರುತ್ಥಾನವನ್ನು ನೋಡುವ ಸುಯೋಗ ಕೊಡಲ್ಪಡುವಲ್ಲಿ, ಹೊಸ ಮಾದರಿ ಕೃತಿಯನ್ನು—ಪ್ರತಿಯೊಂದು ವಿವರದಲ್ಲಿಯೂ ತಪ್ಪಿಲ್ಲದ್ದು—ಮಾಡಲು, ಪ್ರಾಯಶಃ ನೋಹನ ಸಹಾಯವನ್ನು ಕೋರಲು ಶಕ್ತನಾದೇನು.—ದತ್ತ ಲೇಖನ.

[Pictures on page 19]

ನಿಮ್ಮ ಹವ್ಯಾಸವು ನಿಮಗೂ ಇತರರಿಗೂ ಸಂತೋಷವನ್ನು ಕೊಡುತ್ತದೆಯೆ?

ಬೈಬಲ್‌ ದೇಶಗಳ ಚಿತ್ರಸಂಗ್ರಹಣ ಶಾಸ್ತ್ರಸಂಬಂಧವಾದ ಸಂಭವಗಳನ್ನು ನೀವು ಚಿತ್ರಿಸಿಕೊಳ್ಳುವಂತೆ ಸಹಾಯಮಾಡಬಲ್ಲದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ