‘ಅವರು ನಗುತ್ತಿದ್ದರು’
ಹಂಗೆರಿಯ ಸೈನ್ಯದಲ್ಲಿ ಕೆಲಸ ಮಾಡುವವನೊಬ್ಬನು, ಸ್ವಲ್ಪ ಸಮಯಕ್ಕೆ ಮೊದಲು ಬೈಬಲಿನ ವಿಷಯ ಮಾತಾಡುವವರನ್ನು ನೋಡಿ ಜನರು ನಗುತ್ತಿದ್ದರು ಎಂದು ಹೇಳುತ್ತಾನೆ. ಆದರೆ ಕಾಲ ಬದಲಾಗಿದೆ. ಈ ಸೈನಿಕನು ಇತ್ತೀಚೆಗೆ ವಾಚ್‌ಟವರ್ ಸೊಸೈಟಿಯ ಬುಡಪೆಸಿನ್ಟ ಆಫೀಸಿಗೆ ಹೀಗೆ ಪತ್ರ ಬರೆದನು:
ಕೆಲವೇ ದಿನಗಳಿಗೆ ಮೊದಲು, ನಾನು ನಿಮ್ಮ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕ ಓದಿದೆ. ಆ ಪುಸ್ತಕದಲ್ಲಿ ಬರೆದಿರುವ ವಿಷಯಗಳು ನನಗೆ ಆಳವಾಗಿ ತಾಕಿ ನಾನು ಯೋಚಿಸುವಂತೆ ಮಾಡಿವೆ. ಈ ಸೈನಿಕನಿಗೆ ಒಂದು ಬೈಬಲು ಮತ್ತು ಹೆಚ್ಚು ಮಾಹಿತಿಯ ಅಗತ್ಯವಿತ್ತು. ಪೂರ್ವ ಯೂರೋಪಿನಲ್ಲಿ ಇಂಥ ಪ್ರತಿಕ್ರಿಯೆ ಈಗ ಅಸಾಮಾನ್ಯವಲ್ಲ.
ಬುಡಪೆಸ್ಟ್ ಆಫೀಸಿಗೆ ಬಂದ ಇನ್ನೊಂದು ಪತ್ರ ಹೇಳುವುದು: “ನಾನು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಓದಿದ್ದೇನೆ. ಈ ಪುಸ್ತಕ ನನ್ನನ್ನು ಆಳವಾಗಿ ತಟ್ಟಿದೆ, ಮತ್ತು ನನಗೆ ಕ್ರಮವಾದ ಬೈಬಲ್ ಆಧ್ಯಯನ ದೊರೆಯುವಂತೆ ಒಬ್ಬ ಸಾಕ್ಷಿ ನನ್ನ ಮನೆಗೆ ಭೇಟಿ ಕೊಡುವಂತೆ ಕೇಳಲಿಕ್ಕಾಗಿ ಈ ಪತ್ರ ಬರೆಯುತ್ತಿದ್ದೇನೆ.”
ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬುದು ಬೈಬಲಿನ ಉತ್ತರಗಳನ್ನು ಸೂಚಿಸುತ್ತಾ ನಿರೀಕ್ಷೆ ಕೊಡುವ ಒಂದು ಪುಸ್ತಕ. ಇದು ಅನೇಕ ಜೀವಗಳನ್ನು ಬದಲಾಯಿಸಿರುವ ಮಾಧ್ಯಮ. ನಿಮಗೆ ಒಂದು ಪ್ರತಿ ಬೇಕಿರುವಲ್ಲಿ, ಜೊತೆಗಿರುವ ಕೂಪಾನನ್ನು ತುಂಬಿಸಿ ರವಾನಿಸಿರಿ.
ಹೆತ್ತವರು ಸಕಾರಣವುಳ್ಳವರಾಗಿ ತಮ್ಮ ಪ್ರೀತಿಯ ಮಗು ವೇದನೆಯ ಶಸ್ತ್ರ ಚಿಕಿತ್ಸೆಗೊಳಪಡುವಂತೆ ಅನುಮತಿಸುತ್ತಾರೆ. ಮಾನವರು ತತ್ಕಾಲಕ್ಕೆ ಬಾಧೆ ಪಡುವಂತೆ ಅನುಮತಿಸಲು ದೇವರಿಗೂ ಸಕಾರಣವಿದೆ.