ನಮ್ಮ ವಾಚಕರಿಂದ
ಕ್ಯಾನ್ಸರ್ ಚಿಕಿತ್ಸೆಗಳು “ಜಗತ್ತನ್ನು ಗಮನಿಸುವುದು” ವಿಭಾಗದಲ್ಲಿ ಬಂದ “ಚಿಕಿತ್ಸೆಗಳನ್ನು ಹೋಲಿಸುವುದು” (ಅಕ್ಟೋಬರ 8, 1992) ಎಂಬ ವಿಷಯ ಗುರುತರವಾಗಿ ತಪ್ಪಿಗೆ ನಡೆಸುವಂತಹದ್ದಾಗಿತ್ತು. ಕ್ಯಾನ್ಸರಿನಿಂದ ನರಳುವ ಜನರು ಒಂದು ಸ್ಥಾಪಿತ ವೈದ್ಯಕೀಯ ಕೇಂದ್ರದ ಚಿಕಿತ್ಸೆಯಿಂದ ಪಡೆಯುವಷ್ಟೇ ಪ್ರಯೋಜನವನ್ನು ಸಂಪ್ರದಾಯಬದ್ಧವಲ್ಲದ ಚಿಕಿತ್ಸೆಯಿಂದಲೂ ಪಡೆಯುವರೆಂದು ಅದು ಸೂಚಿಸಿತು. ನಿಮ್ಮ ವಿಷಯ ಯಾವುದರ ಮೇಲೆ ಆಧಾರಿತವಾಗಿತ್ತೋ ಆ ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯ ಧಾಟಿ ನಿಮ್ಮದಕ್ಕಿಂತ ತೀರಾ ವಿಭಿನ್ನವಾಗಿತ್ತು.
ಎ. ಆರ್., ಎಮ್.ಡಿ., ಯುನೊಯಿಟೆಡ್ ಸ್ಟೇಟ್ಸ್
ನಮ್ಮ ಸಂಕ್ಷಿಪ್ತ ಲೇಖನ ನಿಷ್ಕೃಷ್ಟವಾಗಿದ್ದರೂ ಆ ಅಧ್ಯಯನದ ಒಂದು ಮುಖ್ಯ ಕಂಡುಹಿಡಿತವನ್ನು ವರದಿ ಮಾಡಲು ತಪ್ಪಿದೆವು. ಅದೇನಂದರೆ, ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಕೊನೆಯ ಅವಧಿಯಲ್ಲಿರುವ ರೋಗಿಗಳು, ಸಂಪ್ರದಾಯಬದ್ಧವಲ್ಲದ ಚಿಕಿತ್ಸೆ ಪಡೆಯುತ್ತಿರುವವರಿಗಿಂತ “ಗಮನಾರ್ಹವಾಗಿ ಹೆಚ್ಚು ಉತ್ತಮವಾದ ಜೀವದ ಗುಣಮಟ್ಟ”ವನ್ನು ವರದಿಮಾಡಿದರು. ಆದರೂ, ನಮ್ಮ ಲೇಖನ ತೋರಿಸಿದಂತೆ, ರೋಗಿಗಳ ಜೀವವನ್ನು ಮುಂದೆ ದೂಡುವುದರಲ್ಲಿ ಈ ಎರಡು ಚಿಕಿತ್ಸೆಗಳೂ ಕಾರ್ಯಸಾಧಕವಾಗಿರಲಿಲ್ಲ. ಹೀಗೆ ಆ ಅಧ್ಯಯನ ಕೆಲವು ಕೊನೆಯ ಅವಧಿಯಲ್ಲಿರುವ ರೋಗಿಗಳಿಗೆ “ಯಾವ ಚಿಕಿತ್ಸೆಯೂ ಇಲ್ಲದ ಅನ್ಯಮಾರ್ಗ” ವನ್ನು ಸೂಚಿಸಿತು. ಸಂಶೋಧಕರಿಗನುಸಾರ, ಈ ಕಂಡುಹಿಡಿತಗಳು “[ಕ್ಯಾನ್ಸರಿನ] ಕಡಮೆ ಮುಂದುವರಿದ ಹಂತದಲ್ಲಿರುವ ರೋಗಿಗಳಿಗೆ ಸಾಮಾನ್ಯೀಕರಿಸಸಾಧ್ಯವಿಲ್ಲ” ಎಂಬುದನ್ನೂ ವಾಚಕರು ಗಮನಿಸಬೇಕು. ಆ ಅಧ್ಯಯನದ ಕರ್ತೃಗಳು, ಕೆಲವು ಸಂಪ್ರದಾಯಬದ್ಧವಲ್ಲದ ಚಿಕಿತ್ಸೆಗಳು ವೈದ್ಯಕೀಯ ಸಂಶೋಧಕರಿಂದ “ಸಮಂಜಸವಾದ ತನಿಖೆಗೆ ಸಮರ್ಥನೆಯನ್ನು ಕೊಡಬಹುದು” ಎಂದು ತೀರ್ಮಾನಿಸುತ್ತಾರೆ.—ಸಂ.
ನಮ್ಮ ವಾಚಕರಿಂದ ನಾನು ಯಾವಾಗಲೂ “ನಮ್ಮ ವಾಚಕರಿಂದ” ಎಂಬ ಭಾಗವನ್ನು ಓದಲು ಮುನ್ನೋಡುತ್ತೇನೆ. ನಿಮ್ಮ ಉತ್ತರಗಳಲ್ಲಿ ನೀವು ತೋರಿಸುವ ಸಮಯೋಚಿತ ನಯವು ನನಗೆ ಅಚ್ಚರಿಯನ್ನು ಉಂಟುಮಾಡುತ್ತದೆ. ತಪ್ಪು ಮುದ್ರಣ ಯಾ ತಪ್ಪು ಇರುವಲ್ಲಿ ನೀವು ನಮ್ರತೆಯಿಂದ ಒಪ್ಪಿಕೊಳ್ಳುತ್ತೀರಿ. ಆದರೆ, ವಾಚಕನು ಎಷ್ಟೇ ರೇಗಿರಲಿ, ದೇವರ ವಾಕ್ಯದ ಸತ್ಯದಿಂದ ನೀವು ಹಿಂತೆರಳುವುದಿಲ್ಲ. ಮತ್ತು ನಿಮಗೆ ವಿನೋದ ಪ್ರವೃತ್ತಿಯೂ ಇದೆ! ಫೆಬ್ರವರಿ 22, 1991ರ ಇಂಗ್ಲಿಷ್ ಸಂಚಿಕೆಯ “ಮಿಸೇಕ್ಟನ್ ಐಡೆಂಟಿಟಿ” ಯ ಕೆಳಗಿದ್ದ ಉತ್ತರದಿಂದ ನನಗೆ ಒಂದು ಒಳ್ಳೆಯ ನಗು ಬಂತು.
ಸಿ. ಡಬ್ಲ್ಯು., ಯುನೊಯಿಟೆಡ್ ಸ್ಟೇಟ್ಸ್
ಅಸ್ತವ್ಯಸ್ತತೆ “ಅಸ್ತವ್ಯಸ್ತತೆ ನಿಯಂತ್ರಣ ತಪ್ಪುವಾಗ” (ಆಗಸ್ಟ್ 8, 1992) ಎಂಬ ಸುಂದರ ಲೇಖನಕ್ಕೆ ಸಹಸ್ರ ಉಪಕಾರಗಳು. ನನ್ನ ಹನ್ನೆರಡು ವರ್ಷಗಳ ವಿವಾಹ ಸಮಯದಲ್ಲಿ, ನಾನು ತುಂಬಿದ, ಉಬ್ಬಿದ, ಯಾವುದೂ ದೊರೆಯದ ಕಪಾಟುಗಳೊಡನೆ ಹೆಣಗಾಡಿದ್ದೇನೆ! (ವಸ್ತುಗಳನ್ನು ಬಿಸಾಡದೆ ಇಟ್ಟುಕೊಳ್ಳಲು ನನಗೆ ಎಲ್ಲ ವಿಧದ ಕಾರಣಗಳಿದ್ದವು.) ನಿಮ್ಮ ಲೇಖನ ಓದಿದ ಬಳಿಕ ಕಸದ ಚೀಲಗಳ ದೊಡ್ಡ ರಾಶಿಯನ್ನು ಹಾಕಲು ನಾನು ಶಕ್ತಳಾದೆ. ನನ್ನ ಶುಚಿಯಾದ ಕಪಾಟುಗಳು ಹಿಂದೆ ವಿರಳವಾಗಿ ಮಾಡಿರುವಂತೆ ನನ್ನ ಕಡೆ ನಸುನಗೆ ಬೀರಿದವು. ಪುನಃ ಅಸ್ತವ್ಯಸ್ತವಾಗುವುದನ್ನು ತಡೆಯುವಂತೆ ನಾನು ಈ ಲೇಖನನ್ನು ಕಪಾಟಿನಲ್ಲಿ ತೋರುವಂತೆ ಇಡುವೆ.
ಎಲ್. ಡಬ್ಲ್ಯೂ., ನೆದರ್ಲೆಂಡ್ಸ್
ನನ್ನ ತಾಯಿ, ಸೋದರಿ ಮತ್ತು ನಾನು ಅಸ್ತವ್ಯಸ್ತತೆಯನ್ನು ಓಡಿಸುವ ಚಳುವಳಿಗೆ ತೊಡಗಿದೆವು. ನಮ್ಮ ಬಟ್ಟೆಯ ಕಪಾಟನ್ನು ಶುಚಿಮಾಡಿ ತುಂಬಾ ಬಟ್ಟೆಗೆಳನ್ನು ಹೊರಗೆ ಕೊಟ್ಟೆವು. ಆ ಲೇಖನಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆ.
ಸೆಡ್. ಎಮ್., ಜಮೇಕ
ಬಲಾತ್ಕಾರಹರಣ “ಯಾವ ಮೂಢತನವನ್ನೂ ಮಾಡಬೇಡ, ಕೊಂದು ಬಿಡುವೆ,” (ಡಿಸೆಂಬರ್ 8, 1992) ಎಂಬ ಲೇಖನಕ್ಕಾಗಿ ಉಪಕಾರ. ನಾನೂ ಒಂದು ದರೋಡೆಯ ಬಲಿಪಶುವಾಗಿದ್ದು ನನ್ನ ಕಾರಿನಲ್ಲಿ ಬಂಧಿಸಲ್ಪಟ್ಟವಳಾಗಿದ್ದೆ. ನಾನು ಪದೇ ಪದೇ ಗಟ್ಟಿಯಾಗಿ ಯೆಹೋವನ ಹೆಸರನ್ನು ಕರೆಯುತ್ತಿದ್ದುದರಿಂದ ನನ್ನನ್ನು ಅಪಹರಿಸಿದವನಿಗೆ ನಾನು ಯೆಹೋವನ ಸಾಕ್ಷಿಯೆಂಬುದು ಗೊತ್ತಿತ್ತು. ಸಂತೋಷದ ವಿಷಯವೇನಂದರೆ, ಕೈಗಳು ಕಟ್ಟಲ್ಪಟ್ಟದರ್ದಿಂದ ಊದಿದ ಮಣಿಕಟ್ಟುಗಳು, ಮತ್ತು ಡಿಕ್ಕಿಯೊಳಗೆ ಎಸೆಯಲ್ಪಟ್ಟದರ್ದಿಂದ ಕೆಲವು ಕಲೆಗಳಲ್ಲದೆ ಇನ್ನು ಯಾವ ಶಾರೀರಿಕ ಅಪಪ್ರಯೋಗವನ್ನೂ ನಾನು ಅನುಭವಿಸಲಿಲ್ಲ. ನಾನು ಶಾಂತಳಾಗಿದ್ದೆ, ಮತ್ತು ನನ್ನ ಕಾರಿನ ಹಿಂದಿನ ಸೀಟಿನ್ನು ಕೊರೆದು ನಾನು ಡಿಕ್ಕಿಯಿಂದ ಹೊರಬರಲು ಶಕ್ತಳಾದೆ. ಈ ಸಂಭವ ಮತ್ತು ನ್ಯಾಯ ವಿಚಾರಣೆ ಸ್ಥಳೀಕ ವಾರ್ತೆಯಾಗಿ ಪರಿಣಮಿಸಿತು. ನನ್ನ ವಕೀಲ, ನೆರೆಯವರು, ಸ್ನೇಹಿತರು, ಮತ್ತು ಕುಟುಂಬ ನನ್ನ ವಿಮೋಚನೆಗಾಗಿ ಯೆಹೋವನಿಗೆ ಪ್ರಶಸ್ತಿಯನ್ನು ಕೊಟ್ಟರು.
ಇ. ಎಮ್., ಯುನೊಯಿಟೆಡ್ ಸ್ಟೇಟ್ಸ್
ದೇವಜನರಿಗೆ ಇಂದು ಅದ್ಭುತಕರವಾದ ಸಂರಕ್ಷಣೆಯನ್ನು ಬೈಬಲು ವಾಗ್ದಾನಿಸುವುದಿಲ್ಲ. ಆದರೂ, ಒಬ್ಬ ಕ್ರೈಸ್ತನು ಜೀವಾಪಾಯವಿರುವ ಸಂದರ್ಭದಿಂದ ವಿಮೋಚಿಸಲ್ಪಡುವಾಗ ದೇವರಿಗೆ ಉಪಕಾರ ಹೇಳುವುದು ತೀರಾ ಸಮಂಜಸ. (1 ಥೆಸಲೊನೀಕ 5:18)—ಸಂ.