ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 2/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಶ್ರೀಮಂತ-ಬಡವ ಅಂತರ ಹೆಚ್ಚುತ್ತದೆ
  • ನೈಜಿರೀಯ ತನ್ನ ಜನಗಣಿತಿ ಮಾಡುತ್ತದೆ
  • ಖೋಟಾ ಔಷಧಗಳ ಎಚ್ಚರಿಕೆ
  • ಆಧುನಿಕ ಕಲೆ ಒಂದು ಪರೀಕ್ಷೆಯಲ್ಲಿ ನಪಾಸಾಗುತ್ತದೆ
  • ಕುಟುಂಬದ ರಕ್ತ ಕೊಲ್ಲಬಲ್ಲದು
  • ಧಾನ್ಯದ ಅಭಾವ
  • ಕ್ಷಯರೋಗ ಹಿಂದಿರುಗುತ್ತದೆ
  • ಕೆಲಸದ ಸ್ಥಳಗಳಲ್ಲಿ ಮಹಿಳೆಯರು
  • ಲೈಂಗಿಕ ಆಕ್ರಮಣಗಳಿಗೆ ಕಾಮಿಕ್‌ ಪುಸ್ತಕಗಳ ಮೇಲೆ ದೂರು
  • ಅತಿ ಹಳೆಯ ಬ್ರೆಡ್‌ ಕಾರ್ಖಾನೆ?
  • ಮದ್ಯಸಾರ ಮತ್ತು ಕೊಬ್ಬು?
  • ಅನಾಸಕ್ತಿಯ ಸೇದುವಿಕೆಯ ಮೊಕದ್ದಮೆ
  • ಮಳೆ ಕಾಡುಗಳನ್ನು ಏಕೆ ರಕ್ಷಿಸಬೇಕು?
    ಎಚ್ಚರ!—1991
  • ಯೇಸುವನ್ನು ದಂಡನೆಗೊಳಪಡಿಸಿದ ಮಹಾ ಯಾಜಕ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಮಾಲಿನ್ಯತೆ ಆದರ ಕಾರಣ ಯಾರು?
    ಎಚ್ಚರ!—1991
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
ಇನ್ನಷ್ಟು
ಎಚ್ಚರ!—1993
g93 2/8 ಪು. 28-29

ಜಗತ್ತನ್ನು ಗಮನಿಸುವುದು

ಶ್ರೀಮಂತ-ಬಡವ ಅಂತರ ಹೆಚ್ಚುತ್ತದೆ

ಕಳೆದ 30 ವರ್ಷಗಳಲ್ಲಿ ಶ್ರೀಮಂತ, ಬಡವರ ಮಧ್ಯೆ ಇರುವ ಅಂತರ ಇಮ್ಮಡಿಯಾಗಿದೆ, ಎನ್ನುತ್ತದೆ ಯುನೊಯಿಟೆಡ್‌ ನೇಷನ್ಸ್‌ ವಿಕಾಸ ಕಾರ್ಯಕ್ರಮಕ್ಕಾಗಿ ಪ್ರಕಟ ಪಡಿಸಿದ ಹ್ಯೂಮನ್‌ ಡೆವಲಪ್‌ಮೆಂಟ್‌ ರಿಪೋರ್ಟ್‌ 1992. ರಾಷ್ಟ್ರೀಯ ಸರಾಸರಿಗಳ ಮೇಲೆ ಆಧಾರ ಮಾಡಿರುವ ಈ ವರದಿ, 1960ರಲ್ಲಿ ಲೋಕ ಜನಸಂಖ್ಯೆಯ ಅತಿ ಐಶ್ವರ್ಯದ 20 ಪ್ರತಿಶತ ಜನರು ಅತಿ ದರಿದ್ರರಾದ 20 ಪ್ರತಿಶತಕ್ಕಿಂತ 30 ಪಾಲು ಹೆಚ್ಚು ಧನಿಕರೆಂದು ತಿಳಿಸಿತು. ಅವರು 1989ರೊಳಗೆ ಸುಮಾರು 60 ಪಾಲು ಹೆಚ್ಚು ಧನಿಕರಾದರು. ಒಬ್ಬೊಬ್ಬರಾಗಿರುವ ಆಧಾರದಲ್ಲಿ, ಲೋಕದ 100 ಕೋಟಿ ಅತಿ ಧನಿಕರು 100 ಕೋಟಿ ಅತಿ ಬಡವರಿಗಿಂತ ಕಡಮೆ ಪಕ್ಷ 150 ಪಾಲು ಅನುಕೂಲಸ್ಥರು. (g92 11/08)

ನೈಜಿರೀಯ ತನ್ನ ಜನಗಣಿತಿ ಮಾಡುತ್ತದೆ

ಮಾರ್ಚ್‌ 20, 1992ರಂದು, ಸಕಲ ದೊಡ್ಡ ವೃತ್ತಪತ್ರಕೆಗಳು ಶೀರ್ಷಿಕೆಗಳಲ್ಲಿ ಒಂದೇ ಸಂಖ್ಯೆಯನ್ನು ಕೊಟ್ಟವು—8 ಕೋಟಿ 85 ಲಕ್ಷ. ನಿಷ್ಕೃಷ್ಟವಾಗಿ 8,85,14,501 ಇದ್ದ ಆ ಸಂಖ್ಯೆ, ನೈಜಿರೀಯದಲ್ಲಿ ನವಂಬರ 1991ರಲ್ಲಿ ತೆಗೆದ ಜನಗಣಿತಿಯ ಒಟ್ಟು ಮೊತ್ತವೆಂದು ರಾಷ್ಟ್ರಕ್ಕೆ ಪ್ರಕಟಿಸಲಾಯಿತು. ಜನಗಣಿತಿಯ ಪರಿಣಾಮ ಎರಡು ಆಶ್ಚರ್ಯದ ಸುದ್ದಿಗಳನ್ನು ತಂದಿತು. ಇವುಗಳಲ್ಲಿ ಒಂದು, ಅನೇಕ ರಾಷ್ಟ್ರಗಳ ನಮೂನೆಗೆ ವ್ಯತಿರಿಕ್ತವಾಗಿ, ಪುರುಷರು ಸ್ತ್ರೀಯರಿಗಿಂತ ತುಸು ಹೆಚ್ಚಾಗಿದ್ದರು. ಎರಡನೆಯದು, 1963ರಲ್ಲಿ ತೆಗೆದಿದ್ದ ಜನಗಣತಿಯ ಮೇಲೆ ಆಧಾರ ಮಾಡಿದ್ದ ಪ್ರಕ್ಷೇಪಣೆಗಳ ಮೇಲೆ ಆಧರಿಸಿದ್ದ ಅಂದಾಜು ಸಂಖ್ಯೆಗಳಾದ 10-12 ಕೋಟಿಗಳಿಗಿಂತ ಇದು ಎಷ್ಟೋ ಸಣ್ಣದಾಗಿತ್ತು. ಆದರೆ, ಒಟ್ಟು ಸಂಖ್ಯೆ ಸಾಮಾನ್ಯ ಅಂದಾಜುಗಳಿಗಿಂತ 20ಕ್ಕೂ ಹೆಚ್ಚು ಪ್ರತಿಶತ ಕಡಮೆಯಾಗಿದ್ದರೂ, ನೈಜಿರೀಯವು ಆಫ್ರಿಕನ್‌ ಭೂಖಂಡದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರವಾಗಿದೆ. (g92 11/08)

ಖೋಟಾ ಔಷಧಗಳ ಎಚ್ಚರಿಕೆ

ಪ್ರತಿ ವರ್ಷ, ನೀತಿನಿಷ್ಠೆಗಳಿಲ್ಲದ ವ್ಯಾಪಾರಿಗಳು ಖೋಟಾ ಔಷಧಗಳನ್ನು ಮಾರಿ ಕೋಟಿಗಟ್ಟಲೆ ಹಣವನ್ನು ಗಳಿಸುತ್ತಾರೆ. ಆದರೆ ಇತರ ಖೋಟಾ ಉತ್ಪಾದನೆಗಳಿಗೆ ಅಸದೃಶವಾಗಿ, “ಖೋಟಾ ಔಷಧಗಳು ಆರೋಗ್ಯವನ್ನು ಗುರುತರವಾಗಿ ಕೆಡಿಸಬಹುದು ಮತ್ತು ಕೊಲಲ್ಲೂ ಬಹುದು” ಎಂದು ಲೋಕಾರೋಗ್ಯ ಸಂಸ್ಥೆಯ ಒಂದು ವಾರ್ತಾ ಪ್ರಕಟನೆ ಎಚ್ಚರಿಸುತ್ತದೆ. ಇವುಗಳಲ್ಲಿ ಅನೇಕ ಔಷಧಗಳು, ಅವುಗಳಲ್ಲಿ ಔಷಧ ಮೌಲ್ಯ ಸ್ವಲ್ಪವೇ ಇರುವ ಯಾ ಏನೂ ಇಲ್ಲದೆ ಇರುವ ಕಾರಣ ಮಲೇರಿಯ ಯಾ ಮಧುಮೂತ್ರದಂಥ ಗುರುತರವಾದ ಕಾಯಿಲೆಗಳಿಂದ ನರಳುವ ವ್ಯಕ್ತಿಗೆ ಸಹಾಯ ಮಾಡಲಾರವು. ಇವುಗಳಲ್ಲಿ ಕೆಲವು ಅನನುಮತಿಯಿರುವ ಯಾ ವಿಷವಿರುವ ವಸ್ತುಗಳನ್ನೂ ಕೂಡಿಕೊಂಡಿರುತ್ತವೆ. “ಕೆಮ್ಮಲಿಗಾಗಿ ತಕ್ಕೊಂಡ ಔಷಧದ ಕಾರಣ ಸತ್ತ ನೈಜಿರೀಯ ಮಕ್ಕಳ ಇತ್ತೀಚಿನ ವರದಿಯು ಈ ರೀತಿಯ ವ್ಯಾಪಾರದ ಗಂಭೀರತೆಯನ್ನು ಹೃದಯದ್ರಾವಕವಾಗಿ ದೃಢೀಕರಿಸುತ್ತದೆ,” ಎನ್ನುತ್ತದೆ ಆ ವರದಿ. ತಾವು ಕಡಮೆ ಕ್ರಯದಲ್ಲಿ ಗಣ್ಯ ಕಂಪೆನಿಯಿಂದ ಒಳ್ಳೆಯ ಔಷಧವನ್ನು ಖರೀದಿಸುತ್ತೇವೆಂದು ನೆನಸುವ ವಿಕಾಸಶೀಲ ಜಗತ್ತಿನ ಬಡ ಜನರಿಗಂತೂ ಸಮಸ್ಯೆಯು ವಿಶೇಷವಾಗಿ ಗುರುತರವಾಗಿದೆ. ಉತ್ಪಾದನೆಯ ಹೆಸರು ಪಟ್ಟಿಯಾಗಲಿ, ಕಟ್ಟಾಗಲಿ ಅದು ಅಪ್ಪಟವೆಂಬ ಖಾತರಿಯನ್ನು ಕೊಡುವುದಿಲ್ಲ. ಅವು ಔಷಧದಷ್ಟೆ ಖೋಟಾವಾಗಿರಬಹುದು. (g92 11/08)

ಆಧುನಿಕ ಕಲೆ ಒಂದು ಪರೀಕ್ಷೆಯಲ್ಲಿ ನಪಾಸಾಗುತ್ತದೆ

ಸಮಕಾಲೀನ ಕಲಾ ಕುಶಲಿಗಳ ಅನೇಕ ಚಿತ್ರಗಳು ಎದುರಿಸುತ್ತಿರುವ ಆಶ್ಚರ್ಯಕರವಾದ ಅಪಾಯವು—ಅವು ಶಿಥಿಲವಾಗುವುದು—ಕಲಾ ಜಗತ್ತಿಗೆ ನಡುಕವನ್ನುಂಟುಮಾಡಿಯದೆ. ಡೇವಿಡ್‌ ಹಾಕ್ನಿ, ಜ್ಯಾಕ್ಸನ್‌ ಪಾಲಕ್‌ ಮತ್ತು ಮಾರ್ಕ್‌ ರಾತ್ನೊರಂಥ ಕಲಾ ಕುಶಲಿಗಳ ಚಿತ್ರಗಳು ವರ್ಣಹೀನವಾಗುತ್ತಿರುವಾಗ ಯಾ ಒಡೆಯುತ್ತಿರುವಾಗ ಇತರರ ವರ್ಣಚಿತ್ರಗಳು ಉದುರಿ ಚಿತ್ರಪಟದಿಂದ ಕೆಳಗೆ ಬೀಳುತ್ತಿವೆಯೆಂದು ಲಂಡನಿನ ದ ಸಂಡೇ ಟಯಿಮ್ಸ್‌ ವರದಿ ಮಾಡುತ್ತದೆ. ಇದರ ಮುಖ್ಯ ಅಪರಾಧಿಯು 1960ಗಳಲ್ಲಿ ಉಪಯೋಗಿಸಿದ ಆ್ಯಕ್ರಿಲಿಕ್‌ ಪೆಯಿಂಟ್‌ ಎಂದು ಆರೋಪಿಸಲಾಗಿದೆ. ಆಧುನಿಕ ರಾಸಾಯನಿಕಾಧಾರಿತ ವಸ್ತುಗಳು, 1962ರಲ್ಲಿ ಮಾರುಕಟ್ಟೆಯಲ್ಲಿ ಮೊದಲು ತೋರಿಬಂದಾಗ ಸ್ವಾಗತಿಸಲ್ಪಟ್ಟರೂ, ನ್ಯೂ ಯಾರ್ಕ್‌ ನಗರದ ಮ್ಯುಸೀಯಮ್‌ ಆಫ್‌ ಮಾಡರ್ನ್‌ ಆರ್ಟ್‌ನ ಸಹ ಪಾಲನಾಧಿಕಾರಿ ಕ್ಯಾರಲ್‌ ಸ್ಟ್ರಿಂಗಾರಿ ಹೇಳಿದ್ದು: “ಒಂದು ಆ್ಯಕ್ರಿಲಿಕ್‌ ವರ್ಣಚಿತ್ರದಿಂದ ತುಸು ಕೊಳೆಯನ್ನು ತೆಗೆಯಲು ಯಾರೋ ಮೊದಲ ಬಾರಿ ಪ್ರಯತ್ನಿಸಿದಾಗ, ಅದು ಹೋಗುವುದಿಲ್ಲವೆಂದು ಅವರಿಗೆ ತಿಳಿದುಬಂತು. ಅದನ್ನು ಹೇಗೆ ತೆಗೆಯುವುದೆಂದು ನಮಗೆ ಇನ್ನೂ ಗೊತ್ತಿಲ್ಲ.” (g92 11/08)

ಕುಟುಂಬದ ರಕ್ತ ಕೊಲ್ಲಬಲ್ಲದು

ಜಪಾನ್‌ ರೆಡ್‌ ಕ್ರಾಸ್‌ ಸೊಸೈಟಿ, “ಕುಟುಂಬದ ಸದಸ್ಯರು, ಅದರಲ್ಲೂ ಗ್ರಾಹಕನ ತಂದೆತಾಯಿ ಇಲ್ಲವೆ ಮಗು ರಕ್ತ ಕೊಟ್ಟಿರುವಲ್ಲಿ ಅದನ್ನು ಪೂರಣ ಮಾಡುವುದನ್ನು ತಪ್ಪಿಸಲು ವಿಶೇಷ ಪ್ರಯತ್ನ ಮಾಡಬೇಕೆಂದು ಡಾಕ್ಟರರನ್ನು ಕೇಳಿಕೊಳ್ಳುತ್ತಿದೆ” ಎನ್ನುತ್ತದೆ ಆಸಾಹಿ ಶೀಂಬೂನ್‌. ರೆಡ್‌ ಕ್ರಾಸ್‌ ವರದಿ ತಿಳಿಸುವುದೇನಂದರೆ, ಕುಟುಂಬದ ಸದಸ್ಯರ ರಕ್ತವನ್ನು ಉಪಯೋಗಿಸುವುದು, ಪೂರಣ ಮಾಡಿದ ರಕ್ತದಲ್ಲಿರುವ ಲಿಂಫೊಸೈಟ್‌ ಕಣಗಳು ಗ್ರಾಹಕನ ಎಲುಬಿನ ನೆಣ, ಪಿತ್ತಜನಕಾಂಗ, ಮತ್ತು ಚರ್ಮವನ್ನು ಆಕ್ರಮಿಸುವಾಗ ಬರುವ ರೋಗವಾದ ಜಿವಿಎಚ್‌ಡಿ (GVHD) ರೋಗವನ್ನು ಹುಟ್ಟಿಸಬಲ್ಲದು. ಆಗ ದೇಹದ ರೋಗ ರಕ್ಷಕ ವ್ಯವಸ್ಥೆಗೆ ಹಾನಿ ತಟ್ಟುತ್ತದೆ ಮತ್ತು ಮರಣದ ಪ್ರಮಾಣ ಹೆಚ್ಚು. ಇದಲ್ಲದೆ, ದಾನ ಮಾಡಿದ ಮೇಲೆ 72 ತಾಸುಗಳೊಳಗೆ ಉಪಯೋಗಿಸಿದ ರಕ್ತವು ಸಹ ಜಿವಿಎಚ್‌ಡಿಯನ್ನು ಹುಟ್ಟಿಸಬಲ್ಲದೆಂಬ ಕಂಡುಹಿಡಿತದ ಕಾರಣ ಹೊಸ ರಕ್ತವನ್ನು ಉಪಯೋಗಿಸುವುದರ ವಿರುದ್ಧ ಬಲವಾದ ಎಚ್ಚರಿಕೆಯನ್ನು ಕೊಡಲಾಗಿದೆ. ಈ ವರದಿಯನ್ನು, ಜಿವಿಎಚ್‌ಡಿ ಉಳ್ಳವರೆಂದು ಕಂಡುಹಿಡಿಯಲ್ಪಟ್ಟ ನೂರಾರು ರೋಗಿಗಳ ಎರಡು ವರ್ಷಗಳ ಸವಿಸ್ತಾರ ಅಧ್ಯಯನದ ಮೇಲೆ ಮತ್ತು 14,083 ಮಂದಿ ಡಾಕ್ಟರರ ಸಮೀಕ್ಷೆಯ ಮೇಲೆ ಆಧಾರ ಮಾಡಲಾಗಿದೆ. ಡಾಕ್ಟರರಲ್ಲಿ ಸುಮಾರು ಅರ್ಧಾಂಶ, ಜಿವಿಎಚ್‌ಡಿ ರೋಗ ದೇಹದ ರೋಗ ರಕ್ಷಕ ವ್ಯವಸ್ಥೆ ಬಲಹೀನವಾದಾಗ ಮಾತ್ರ ಬರುತ್ತದೆಂದೂ, ಈ ರೋಗವು ರಕ್ತ ಪೂರಣಗಳಿಗೆ ಸಂಬಂಧವಿಲ್ಲದೆಂದೂ ನಂಬಿದರು. ಆದರೆ ಅವರ ನಂಬಿಕೆ ತಪ್ಪಾಗಿತ್ತು. (g92 11/08)

ಧಾನ್ಯದ ಅಭಾವ

ಸುಮಾರು ಒಂದು ಕೋಟಿ ಟನ್ನು ಮುಸುಕಿನ ಜೋಳವನ್ನು ಆಫ್ರಿಕದ ದಕ್ಷಿಣ ಪ್ರದೇಶಗಳಿಗೆ ಮುಂದಿನ ವರ್ಷ ಆಮದು ಮಾಡಬೇಕು, ಎನ್ನುತ್ತದೆ ಒಂದು ಪ್ರಾದೇಶಿಕ ಮುನ್ನೆಚ್ಚರಿಕೆಯ ತಂಡವಾದ ಸದರ್ನ್‌ ಆಫ್ರಿಕನ್‌ ಡೆವಲಪ್‌ಮೆಂಟ್‌ ಕೋಆರ್ಡಿನೇಷನ್‌ ಕಾನ್‌ಫರೆನ್ಸ್‌. ಅದರ ಬುಲೆಟಿನ್‌ ಹೇಳುವುದು: “ಪ್ರತೀಕ್ಷಿತವಾದಷ್ಟು ಭಾರೀ ಪ್ರಮಾಣದಲ್ಲಿ ಧಾನ್ಯದ ರವಾನೆಯನ್ನು ನಿಭಾಯಿಸಲು ಲಭ್ಯವಿರುವ ರೇವು, ರೆಯ್ಲು, ರಸ್ತೆ ಮತ್ತು ಉಗ್ರಾಣ ಸ್ಥಳಗಳ ಕೆಳರಚನೆಯ ಸಾಮರ್ಥ್ಯದ ಕುರಿತು ಅತಿ ಗುರುತರವಾದ ಚಿಂತೆಯಿದೆ.” ಹಿಂದಿನ ವರ್ಷದ ಮುಸುಕಿನ ಜೋಳ ಉತ್ಪಾದನೆ ಸರಾಸರಿಗಿಂತ ಕಮ್ಮಿಯಾಗಿದ್ದರೂ, ಈ ವರ್ಷದ ಉತ್ಪಾದನೆ ಕಳೆದ ವರ್ಷಕ್ಕಿಂತ 40 ಪ್ರತಿಶತ ಕಮ್ಮಿಯೆಂದು ನಿರೀಕ್ಷಿಸಲಾಗುತ್ತದೆ. ಈ ಅನಾವೃಷ್ಟಿ, ಈ ಶತಮಾನದಲ್ಲಿ ಆಫ್ರಿಕದ ದಕ್ಷಿಣ ದೇಶಗಳಿಗೆ ತಟ್ಟಿರುವ ಅನಾವೃಷ್ಟಿಗಳಲ್ಲಿ ಅತಿ ಕೆಡುಕಿನದ್ದಾಗಿರುವ ಸಾಧ್ಯತೆಯಿದೆ. (g92 11/08)

ಕ್ಷಯರೋಗ ಹಿಂದಿರುಗುತ್ತದೆ

ಹಳೆಯ ಪೀಡೆಯಾದ ಕ್ಷಯರೋಗವು ಈಗ ವರ್ಷಕ್ಕೆ 30 ಲಕ್ಷ ಜೀವಗಳನ್ನು ಆಹುತಿ ತೆಗೆದುಕೊಳ್ಳುತ್ತದೆಂದು ಡಬ್ಲ್ಯುಎಚ್‌ಓ (ಲೋಕಾರೋಗ್ಯ ಸಂಸ್ಥೆ) ವರದಿ ಮಾಡುತ್ತದೆ. ಟೊರಾಂಟೊ, ಕೆನಡದ ದ ಗ್ಲೋಬ್‌ ಆ್ಯಂಡ್‌ ಮೆಯ್ಲ್‌ ಕೂಡಿಸಿ ವಿವರಿಸುವುದೇನಂದರೆ ಪ್ರತಿ ವರ್ಷ ಸಂಭವಿಸುವ ಎಂಬತ್ತು ಲಕ್ಷ ಹೊಸ ಕೇಸುಗಳಲ್ಲಿ 96 ಪ್ರತಿಶತ ವೈದ್ಯಕೀಯ ಪರಾಮರಿಕೆ ಮತ್ತು ಸರಬರಾಯಿಗಳಿಲ್ಲದ ವಿಕಾಸಶೀಲ ದೇಶಗಳಲ್ಲಿ ಸಂಭವಿಸುತ್ತವೆ. ಡಬ್ಲ್ಯುಎಚ್‌ಓ ಸಂಘದ ಡೈರೆಕ್ಟರ್‌ ಜನರಲ್‌ ಹೀರೋಶಿ ನಾಕಜೀಮ ವಿವರಿಸುವುದು: “ಕ್ಷಯ ರೋಗವು ಕಡಮೆ ಅನುಕೂಲತೆಗಳಿರುವವರನ್ನು ಹೆಚ್ಚು ಕಠಿಣವಾಗಿ ಹೊಡೆಯುವ ಸಾಮಾಜಿಕ-ಆರ್ಥಿಕ ರೋಗವಾಗಿದೆ.” ಹೆಚ್ಚು ಸಂಪತ್ತಿನ ದೇಶಗಳಲ್ಲಿ, ಇದು ಮುಖ್ಯವಾಗಿ ವೃದ್ಧರಿಗೆ, ಅಲ್ಪ ಸಂಖ್ಯಾತ ಜಾತಿಯವರಿಗೆ ಮತ್ತು ವಲಸೆ ಹೋಗುವವರಿಗೆ ತಟ್ಟುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ, ಒಬ್ಬ ಡಬ್ಲ್ಯುಎಚ್‌ಓ ವೈದ್ಯಕೀಯ ಅಧಿಕಾರಿ ಹೇಳಿದ್ದು, ಅನೇಕ ಕೇಸುಗಳು ಮಾದಕ ಪದಾರ್ಥಗಳ ಅಪಪ್ರಯೋಗದಿಂದ ಯಾ ಏಯ್ಡ್ಸ್‌ನಿಂದ ಬಲಹೀನಗೊಂಡ ರೋಗರಕ್ಷಕ ವ್ಯವಸ್ಥೆಯಿರುವ ರೋಗಿಗಳನ್ನು ಒಳಗೊಂಡಿವೆ. (g92 11/08)

ಕೆಲಸದ ಸ್ಥಳಗಳಲ್ಲಿ ಮಹಿಳೆಯರು

ಲೋಕ ನಿಧಿ ಮತ್ತು ಇಂಟರ್‌ನ್ಯಾಷನಲ್‌ ಮಾನಿಟರಿ ಫಂಡ್‌ ಪ್ರಕಟಿಸುವ ಫಿನ್ಯಾನ್ಸ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಪತ್ರಿಕೆಗನುಸಾರ, ಲೋಕದಲ್ಲಿ ಹೆಚ್ಚೆಚ್ಚು ಮಹಿಳೆಯರು “ಆರ್ಥಿಕವಾಗಿ ಕ್ರಿಯಾಶೀಲರು” ಯಾ ಹೆಚ್ಚು ಸಂಬಳ ದೊರೆಯುವ ಕೆಲಸಗಳನ್ನು ಮಾಡುತ್ತಿರುವುದಾದರೂ ಅವರು ಇನ್ನೂ ದೊಡ್ಡ ತಡೆಗಳನ್ನು ಎದುರಿಸುತ್ತಿದ್ದಾರೆ. ಲೋಕಾದ್ಯಂತ ಸುಮಾರು 83 ಕೋಟಿ ಸ್ತ್ರೀಯರು ಆರ್ಥಿಕವಾಗಿ ಕ್ರಿಯಾಶೀಲರೆಂದೂ ಅವರಲ್ಲಿ 70 ಪ್ರತಿಶತ ವಿಕಾಸಶೀಲ ದೇಶಗಳಲ್ಲಿ ಜೀವಿಸುತ್ತಾರೆಂದೂ ಆ ಪತ್ರಿಕೆ ಅಂದಾಜು ಮಾಡುತ್ತದೆ. ಆಫ್ರಿಕ ಮತ್ತು ಏಷಿಯದ ಕೆಲವು ಭಾಗಗಳಲ್ಲಿ, ಮಾಧ್ಯಮಿಕ ಶಾಲೆಗಳಿಗೆ ಹುಡುಗರಿಗಿಂತ ಎಷ್ಟೋ ಕಡಮೆ ಹುಡುಗಿಯರು ಸೇರುತ್ತಾರೆ. ಆದುದರಿಂದ 25 ಮತ್ತು ಅದಕ್ಕೆ ಹೆಚ್ಚು ವಯಸ್ಸಿನ ಸ್ತ್ರೀಯರಲ್ಲಿ ಸುಮಾರು 75 ಪ್ರತಿಶತ ಅನಕ್ಷರಸ್ಥರಾಗಿರುವುದು ಆಶ್ಚರ್ಯವಲ್ಲ. ಮತ್ತು ಇಂಥ ಸ್ತ್ರೀಯರಿಗೆ ಯೋಗ್ಯ ಕೆಲಸ ದೊರೆಯುವುದು ಅನೇಕ ವೇಳೆ ಹೆಚ್ಚು ಕಷ್ಟಕರ. ಆರ್ಥಿಕ ರೀತಿಯಲ್ಲಿ ಕ್ರಿಯಾಶೀಲರಾಗಿರುವ ಮಹಿಳೆಯರು ಪುರುಷರಿಗಿಂತ ಎಷ್ಟೋ ಕಡಮೆಯಾದರೂ, ಮಹಿಳೆಯರು ಕೆಲಸ ಮಾಡುತ್ತಾರೋ ಇಲ್ಲವೋ ಎಂಬುದನ್ನು ಇದು ಪ್ರತಿಬಿಂಬಿಸುವುದಿಲ್ಲ. ಏಕೆಂದರೆ ಸಂಖ್ಯಾಸಂಗ್ರಹಣ ಸಾಂಪ್ರದಾಯಿಕ ಉದ್ಯೋಗಗಳನ್ನು ಲೆಕ್ಕ ಹಿಡಿಯುತ್ತದೆಯೇ ಹೊರತು ಕುಟುಂಬಗಳಲ್ಲಿ ಯಾ ಕುಟುಂಬ ಚಲಾಯಿಸುವ ಚಟುವಟಿಕೆಗಳನ್ನಲ್ಲ. ಏಷಿಯ, ಆಫ್ರಿಕ ಮತ್ತು ಶಾಂತ ಸಾಗರ ಪ್ರದೇಶಗಳಲ್ಲಿ, ಸಾಮಾನ್ಯ ಸ್ತ್ರೀ, ಸಾಮಾನ್ಯ ಪುರುಷನಿಗಿಂತ ವಾರಕ್ಕೆ 12 ಯಾ 13 ತಾಸು ಹೆಚ್ಚು ಕೆಲಸ ಮಾಡುತ್ತಾಳೆಂದು ಅಧ್ಯಯನಗಳು ತೋರಿಸಿವೆ. (g92 10/22)

ಲೈಂಗಿಕ ಆಕ್ರಮಣಗಳಿಗೆ ಕಾಮಿಕ್‌ ಪುಸ್ತಕಗಳ ಮೇಲೆ ದೂರು

ಜಪಾನಿನ ಟೋಕ್ಯೋದಲ್ಲಿ ಪೊಲೀಸರು ಇತ್ತೀಚೆಗೆ ಒಬ್ಬ 16-ವಯಸ್ಸಿನ ಹೈ ಸ್ಕೂಲ್‌ ವಿದ್ಯಾರ್ಥಿಯನ್ನು ಲೈಂಗಿಕಾಕ್ರಮಣದ 25 ಅಂಶಗಳ ಮೇಲೆ ಆರೋಪಿಸಿದರು. ಇದಕ್ಕೆ ಕಾರಣ ಅಶ್ಲೀಲ ಕಾಮಿಕ್‌ ಪುಸ್ತಕಗಳೆಂದು ಆ ಯುವಕನು ಆಪಾದನೆ ಹಾಕಿದನು. ಒಂದು ಸಂದರ್ಭದಲ್ಲಿ, ಇವನು ಹೆಚ್ಚು ಸಮಯ ತೆರೆದಿರುವ ಒಂದು ಅಂಗಡಿಯಿಂದ ಒಂದು ಲೈಂಗಿಕವಾಗಿ ಮುಚ್ಚುಮರೆಯಿಲ್ಲದ ಪುಸ್ತಕವನ್ನು ತೆಗೆದುಕೊಂಡು, ಹತ್ತು ವಯಸ್ಸಿನ ಒಬ್ಬ ಹುಡುಗಿಯನ್ನು ಒಂದು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವಳು ತನ್ನೊಂದಿಗೆ ಆ ಪುಸ್ತಕದ ಅಶ್ಲೀಲ ದೃಶ್ಯಗಳನ್ನು ನಟಿಸಿ ತೋರಿಸುವಂತೆ ಬಲಾತ್ಕರಿಸಿದನೆಂದು ಹೇಳಲಾಯಿತು. ಅವನು ಇಂಥ 24 ಆಕ್ರಮಣಗಳನ್ನು ಮಾಡಿರುತ್ತಾನೆಂದೂ, ಇವುಗಳಲ್ಲಿ ಹೆಚ್ಚಿನವು ಕಾಮುಕ ಕಾಮಿಕ್‌ ಪುಸ್ತಕಗಳಿಂದ ಪ್ರೇರಿಸಲ್ಪಟ್ಟವೆಂದೂ ಅವನು ಪೊಲೀಸರಲ್ಲಿ ಒಪ್ಪಿದನು. ದ ಡೆಯ್ಲಿ ಯೋಮೀಯುರಿ ವರದಿ ಮಾಡುವುದು: “ಕಳೆದ ವರ್ಷ, ಟೋಕ್ಯೋದಲ್ಲಿ, ಅಶ್ಲೀಲ ಕಾಮಿಕ್‌ಗಳಿಂದ ಪ್ರೇರಿಸಲ್ಪಟ್ಟ, ಅಪ್ರಾಪ್ತ ವಯಸ್ಸಿನವರು ಸೇರಿದ್ದ 86 ಲೈಂಗಿಕ ಪಾತಕಗಳು ವರದಿಯಾದವು.” (g92 10/22)

ಅತಿ ಹಳೆಯ ಬ್ರೆಡ್‌ ಕಾರ್ಖಾನೆ?

ಎಸೋಸಿಯೇಟೆಡ್‌ ಪ್ರೆಸ್‌ನ ಒಂದು ವರದಿಗನುಸಾರ, ಈಜಿಪ್ಟಿನ ಪಿರೆಮಿಡ್‌ಗಳ ಸಮೀಪ ಕೆಲಸ ಮಾಡುವ ಭೂಸಂಶೋಧಕರು ಲೋಕದಲ್ಲಿಯೇ ಅತಿ ಹಳೆಯ ರೊಟ್ಟಿಯ ಕಾರ್ಖಾನೆಯನ್ನು ಕಂಡುಹಿಡಿದಿರುವ ಸಾಧ್ಯತೆಯಿದೆ. ಈ ಬೇಕರಿ, ಪಿರೆಮಿಡ್‌ಗಳನ್ನು ಕಟ್ಟುವ ಕೆಲಸಗಾರರಿಗೆ ರೊಟ್ಟಿಯನ್ನು ಒದಗಿಸಲಿಕ್ಕಾಗಿ ಬಳಸಲ್ಪಡುತ್ತಿದ್ದುದು ವ್ಯಕ್ತ. ಈಜಿಪ್ಟ್‌ ಶಾಸ್ತ್ರಜ್ಞ ಮತ್ತು ಈ ಅಗೆತದ ಡೈರೆಕ್ಟರ್‌ಗಳಲ್ಲಿ ಒಬ್ಬರಾದ ಮಾರ್ಕ್‌ ಲೇನರ್‌ ಹೇಳಿದ್ದು: “ನಾವು ಭಾರೀ ರೊಟ್ಟಿ ಸುಡುವುದರ ಕುರಿತು, ದಿನಕ್ಕೆ 30,000 ಜನರಿಗೆ ಉಣಿಸಲು ಬೇಕಾಗುವಷ್ಟನ್ನು ಸುಡುವ ವಿಷಯ ಮಾತಾಡುತ್ತಿದ್ದೇವೆ.” ಈ ರೊಟ್ಟಿಶಾಲೆಯಲ್ಲಿ ಕೆಲಸದ ಸ್ಥಿತಿಗತಿ, ತೀವ್ರ ಕಾವು ಮತ್ತು ದಪ್ಪನೆಯ ಕರಿ ಹೊಗೆಯಿಂದ ತುಂಬಿ ಭಯಂಕರವಾಗಿದ್ದಿರಬೇಕೆಂದು ಲೇನರ್‌ ಊಹಿಸುತ್ತಾರೆ. “ಈ ಕೋಣೆಗಳು ಮಳೆಯಿಂದ ತುಂಬಿದ ರಾತ್ರಿಯ ಆಕಾಶದಂತಿದಿರ್ದಬೇಕು. ನಾವು 45 ಸೆಂಟಿಮೀಟರ್‌ ದಪ್ಪದ ಕರಿಯ ಮಖಮಲ್ಲಿನಂತಿರುವ ಶೇಖರವಾಗಿರುವ ಬೂದಿಯೊಳಗೆ ಅಗೆದಿದ್ದೇವೆ.” ಈ ಬೇಕರಿ ಪಿರೆಮಿಡ್‌ ಕಟ್ಟಲ್ಪಟ್ಟ ದಿನಗಳಿಂದ ಇತ್ತೆಂದು ನಂಬಲಾಗುತ್ತದೆ. (g92 10/22)

ಮದ್ಯಸಾರ ಮತ್ತು ಕೊಬ್ಬು?

ತುಂಬಾ ಮದ್ಯ ಪಾನೀಯಗಳನ್ನು ಕುಡಿಯುವವರು ದಪ್ಪವಾಗಿ ಬೆಳೆಯುತ್ತಾರೆಂಬುದು ತಿಳಿಯದ ವಿಷಯವಲ್ಲ. ಆದರೆ ಏಕೆ? ಸ್ವಿಟ್ಸರ್ಲೆಂಡಿನ ಸೂರಿಕ್‌ ವಿಶ್ವವಿದ್ಯಾಲಯದಲ್ಲಿನ ಇತ್ತೀಚಿನ ಒಂದು ಅಧ್ಯಯನ ಆಸಕ್ತಿಕರವಾದ ಒಂದು ಸಾಧ್ಯತೆಯನ್ನು ಹೊರತಂದಿತು. ಕೊಬ್ಬಿಸುವುದು ಮದ್ಯದಲ್ಲಿರುವ ಕ್ಯಾಲರಿಗಳು ಮಾತ್ರವಲ್ಲವಂತೆ, ಕೊಬ್ಬನ್ನು ಬಳಸಲು ದೇಹಕ್ಕಿರುವ ಸಾಮರ್ಥ್ಯದ ಮೇಲೆ ಮದ್ಯಸಾರವು ಬೀರುವ ಪರಿಣಾಮವೂ ಇದರಲ್ಲಿ ಸೇರಿದೆ. ಕೊಬ್ಬನ್ನು ಉಪಯೋಗಿಸುವ ವಿಷಯದಲ್ಲಿ ದೇಹವು ತುಸು ಜಡತೆ ತೋರಿಸುತ್ತದೆಂದೂ, ಸಕ್ಕರೆ ಮತ್ತು ಶರ್ಕರ ಪಿಷ್ಟವನ್ನು ಕೂಡಲೆ ದಹಿಸುವಾಗ ಅದು ಕೊಬ್ಬನ್ನು ಶೇಖರಿಸುವ ಪ್ರವೃತ್ತಿಯುಳ್ಳದ್ದೆಂದೂ ಪೋಷಕ ಆಹಾರಜ್ಞರು ದೀರ್ಘಕಾಲದಿಂದ ಬಲ್ಲವರಾಗಿದ್ದರು. ಆದರೆ ಮದ್ಯಸಾರವು ದೇಹವು ಇನ್ನೂ ನಿಧಾನವಾಗಿ ಕೊಬ್ಬನ್ನು ದಹಿಸುವಂತೆ ಮಾಡುತ್ತದೆ. ಒಂದು ಪ್ರಯೋಗದಲ್ಲಿ, ಪುರುಷರನ್ನು ದಿನಕ್ಕೆ 90 ಮಿಲಿಲೀಟರ್‌ ಶುದ್ಧ ಮದ್ಯಸಾರ—ಸುಮಾರು ಆರು ಬಿಯರ್‌ಗಳಿಗೆ ಸಮಾನ—ಸೇರಿರುವ ಆಹಾರಕ್ರಮದಲ್ಲಿ ಇಡಲಾಯಿತು. ಈ ಆಹಾರಕ್ರಮದಲ್ಲಿ, ಪುರುಷರು ಸಾಧಾರಣಕ್ಕಿಂತ ಮೂರನೆಯ ಒಂದಂಶ ಕಡಮೆ ಕೊಬ್ಬನ್ನು ದಹಿಸಿದರು. ಒಬ್ಬನ ಆಹಾರದಲ್ಲಿ ಎಷ್ಟು ಹೆಚ್ಚು ಕೊಬ್ಬಿದೆಯೋ ಈ ಪರಿಣಾಮ ಅಷ್ಟು ಹೆಚ್ಚು ಎದ್ದುಕಾಣುವ ಪ್ರವೃತ್ತಿಯದ್ದಾಗುತ್ತದೆ. (g92 10/22)

ಅನಾಸಕ್ತಿಯ ಸೇದುವಿಕೆಯ ಮೊಕದ್ದಮೆ

ಆಸ್ಟ್ರೇಲಿಯದ ಡಿಸ್ಟ್ರಿಕ್ಟ್‌ ನ್ಯಾಯಾಲಯ ಇತ್ತೀಚೆಗೆ ಒಂದು ದೊಡ್ಡ ಪರಿಹಾರಧನವನ್ನು ಒಬ್ಬ 64 ವಯಸ್ಸಿನ ಸ್ತ್ರೀಗೆ ಕೊಡಲ್ಪಡುವಂತೆ ತೀರ್ಮಾನಿಸಿತು. ಆಕೆ ತನ್ನ ಮೊದಲಿನ ಧಣಿಗಳ ಮೇಲೆ, ತಾನು ಸುಮಾರು ಹನ್ನೆರಡು ವರ್ಷಕಾಲ ಹೊಗೆ ತುಂಬಿದ ಪರಿಸರದಲ್ಲಿ ಕೆಲಸ ಮಾಡಿದುದರಿಂದ ಗುರುತರವಾದ ಆರೋಗ್ಯ ಸಮಸ್ಯೆಗಳು ತನಗೆ ಬಂದಿವೆಯೆಂದು ವಾದಿಸುತ್ತಾ ಮೊಕದ್ದಮೆ ಹೂಡಿದ್ದಳು. ಈ ಹಿಂದೆ ಇಂಥ ಮೊಕದ್ದಮೆಗಳನ್ನು ಕೋರ್ಟಿನ ಹೊರಗೆ ತೀರ್ಮಾನಿಸಲಾಗುತ್ತಿತ್ತು, ಆದರೆ ಈ ಗಮನಾರ್ಹ ತೀರ್ಮಾನದಲ್ಲಿ, ನ್ಯಾಯಾಲಯವು ವಾದಿಗೆ 85,000 ಡಾಲರು (ಆಸ್ಟ್ರೇಲಿಯನ್‌) ಗಳನ್ನು ವಿಧಿಸಿತು. ಸೇದುವವನು, ಹೊಗೆ ತುಂಬಿದ ಗಾಳಿಯನ್ನು ಉಸಿರಾಡುವ ಸೇದದಿರುವವರ ಆರೋಗ್ಯವನ್ನು ಕೆಡಿಸಬಲ್ಲನೆಂದು ನ್ಯಾಯದರ್ಶಿಗಳು ತೀರ್ಮಾನಿಸಿದ್ದು ಇದು ಮೊದಲನೆಯ ಬಾರಿ ಎಂದು ದಿ ಆಸ್ಟ್ರೇಲಿಯನ್‌ ವೃತ್ತಪತ್ರಕೆ ವರದಿ ಮಾಡಿತು. ಈ ತೀರ್ಮಾನದಿಂದ ರೆಸ್ಟರಂಟ್‌, ಹೋಟೆಲ್‌, ನೈಟ್‌ಕ್ಲಬ್‌ ಮತ್ತು ಇತರ ಕೆಲಸದ ಸ್ಥಳಗಳ ಮೇಲೆ ವ್ಯಾಪಕ ಪರಿಣಾಮವಾಗಬಹುದೆಂದೂ, ಅವುಗಳಲ್ಲಿ ಹೊಗೆಬತ್ತಿ ಸೇದದ ಕೆಲಸಗಾರರಿಗೆ ಹೊಗೆಮುಕ್ತವಾಗಿರುವ ಕೆಲಸದ ಸ್ಥಳಗಳನ್ನು ಒದಗಿಸದಿರುವಲ್ಲಿ ಅವರು ದೊಡ್ಡ ಮೊತ್ತದ ಪರಿಹಾರಧನಕ್ಕಾಗಿ ಮೊಕದ್ದಮೆ ಹೂಡಸಾಧ್ಯವಿದೆಯೆಂದೂ ಕೆಲವರ ಅಭಿಪ್ರಾಯ. (g92 10/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ