ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 3/8 ಪು. 30-31
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಿಕ್ಕಿದ ಹಾಲು ಎಸೆಯಲ್ಪಡುತ್ತದೆ
  • ಮೋಡಗಳ ಕೊಯ್ಲು
  • ಪಾನಕ ನದಿ
  • ವಿದೇಶದ ಸಹಾಯ—ಯಾರಿಗೆ, ಎಷ್ಟು?
  • ದೀರ್ಘಾಯುಸ್ಸಿನ ಜಪಾನೀಯರು
  • ಜೇಡರ ಭಯದ ಅಗತ್ಯವಿಲ್ಲ
  • ಜಮೀನಾಕ್ರಮಣಕಾರಕ ಉಭಯಸಂಕಟ
  • ಔಷಧವಾಗಿ ಕಾಫಿ?
  • ವೈದ್ಯರಿಗೆ ಅನುಭೂತಿಯನ್ನು ಕಲಿಸುವುದು
  • ಪೋಪರ ಕ್ಷಮಾಯಾಚನೆ
  • ಆ ಬೆಲೆಬಾಳುವ ಕೊಂಬುಗಳ ಕೆಳಗಿರುವ ಪ್ರಾಣಿ
    ಎಚ್ಚರ!—1995
  • ಜಗತ್ತನ್ನು ಗಮನಿಸುವುದು
    ಎಚ್ಚರ!—1991
  • ಜೀವದ ದಾನವೋ ಅಥವಾ ಸಾವಿನ ಚುಂಬನವೋ?
    ಎಚ್ಚರ!—1991
  • ರಕ್ತಪೂರಣಗಳು—ಅವೆಷ್ಟು ಅಪಾಯರಹಿತ?
    ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು ಬ್ರೋಷರ್‌
ಇನ್ನಷ್ಟು
ಎಚ್ಚರ!—1993
g93 3/8 ಪು. 30-31

ಜಗತ್ತನ್ನು ಗಮನಿಸುವುದು

ಮಿಕ್ಕಿದ ಹಾಲು ಎಸೆಯಲ್ಪಡುತ್ತದೆ

ವಿಪರೀತ ಆಹಾರದ ಅಭಾವವಿದ್ದರೂ ಕೂಡ, ಕಳೆದ ಐದು ವರ್ಷಗಳಲ್ಲಿ ದಕ್ಷಿಣ ಆಫ್ರಿಕದ ಹೈನುಗಾರಿಕೆಗಳ ಮೂಲಕ ಲಕ್ಷಗಟ್ಟಲೆ ಲೀಟರ್‌ ಹಾಲು ಎಸೆಯಲ್ಪಟ್ಟಿದೆ. ಹೈನುಗಾರಿಕಾ ಸಮಿತಿಯು ಹೈನುಗಾರಿಕೆಗಳಿಂದ ತೆರಿಗೆಯನ್ನು ವಸೂಲು ಮಾಡಿರುವುದರಿಂದ ಮಿಕ್ಕಿದ ಹಾಲನ್ನು ವಿತರಿಸಲು ಮುನ್ನೇರ್ಪಾಡನ್ನು ಮಾಡಬೇಕಾಗಿತ್ತು. ಆದರೆ ಹೈನುಗಾರಿಕಾ ಸಮಿತಿಯು ಹಾಗೆ ಮಾಡದಿರುವದರಿಂದ, ನ್ಯಾಷನಲ್‌ ಮಿಲ್ಕ್‌ ಡಿಸ್ಟ್ರಿಬ್ಯೂಟರ್ಸ್‌ ಅಸೋಷಿಯೇಷನ್‌ನ ಒಬ್ಬ ಕಾರ್ಯ ನಿರ್ವಾಹಕ ಹೇಳಿದ್ದು: “ನಾವೇನನ್ನು ಮಾಡಬಹುದು? ನಾವದನ್ನು ಎಸೆಯಲೇ ಬೇಕು. ಅದನ್ನು ಕೊಟ್ಟುಬಿಡುವುದರ ಮೂಲಕ ಯಾ ಅದನ್ನು ಕೊಂಡೊಯ್ಯಲು ಕೂಲಿ ಕೊಡುವುದರ ಮೂಲಕ ನಮ್ಮ ಸ್ವಂತ ಮಾರುಕಟ್ಟೆಗಳನ್ನು ಶಿಥಿಲಗೊಳಿಸುವುದು ಆರ್ಥಿಕ ಅರ್ಥಕೊಡುವುದಿಲ್ಲ.” ಇನ್ನೊಂದು ಕಡೆಯಲ್ಲಿ, ಇತರ ಸಂಸ್ಥೆಗಳು ಈ ಹಾಳಾಗುವಿಕೆಯ ಬಗ್ಗೆ ಸಂತಪಿಸಿದರು. “ಮಿಲ್ಯಾಂತರ ವೃದ್ಧ ದಕ್ಷಿಣ ಆಫ್ರಿಕನರು ಬದುಕಿ ಉಳಿಯಲು ಕನಿಷ್ಠ ಅವಶ್ಯಕತೆಗಳನ್ನು ಕೊಳ್ಳಲು ಹೆಣಗಾಡುವ ಸಮಯದಲ್ಲಿ” ಹಾಲನ್ನು ಎಸೆಯಲಾಗುತ್ತದೆ ಎಂದು ಕೌನ್ಸಿಲ್‌ ಫಾರ್‌ ದಿ ಏಜೆಡ್‌ ಹೇಳುತ್ತದೆ. (g92 11/22)

ಮೋಡಗಳ ಕೊಯ್ಲು

ಚಿಲಿಯ ಚುಂಗುಂಗೊವಿನ ಸಣ್ಣ, ಬಡ ಮೀನುಗಾರಿಕಾ ಹಳ್ಳಿಗೆ ಅನೇಕ ವರ್ಷಗಳಿಂದ ಶುದ್ಧವಾದ ಕುಡಿಯುವ ನೀರು ಇರಲಿಲ್ಲ. ಆದರೆ ಇತ್ತೀಚೆಗೆ ಅದು ಬದಲಾಯಿತು, ನೀರನ್ನು ಸಂಗ್ರಹಿಸುವ ಗಮನಾರ್ಹ ವಿಧಾನದ ಫಲವಾಗಿ. ಈ ಪ್ರಾಂತದಲ್ಲಿ ಮಳೆಯು ವಿರಳ, ಆದರೆ ಶಾಂತ ಸಾಗರದಿಂದ ಅಡಿಗಡಿಗೆ ಮಂಜು ಹೊರಳಿ ಬರುತ್ತದೆ. ಅದು ಹಳ್ಳಿಗಿಂತ ಎತ್ತರದಲ್ಲಿ 800 ಮೀಟರ್‌ಗಳ ಗುಡ್ಡದ ಮೇಲಿನಿಂದ ಸಾಗುವಾಗ, ಆ ಮಂಜು ವಿಶಿಷ್ಟವಾಗಿ ಸಾಂದ್ರತೆಯುಳ್ಳದ್ದಾಗಿದೆ. ಇಲ್ಲಿ ಕೆನಡದ ಮತ್ತು ಚಿಲಿಯ ವಿಜ್ಞಾನಿಗಳ ಒಂದು ಗುಂಪು ಈ ಮೋಡಗಳಿಂದ ನೀರನ್ನು ಸಂಗ್ರಹಿಸಲು ತಯಾರಿಸಿದ ಸೂಕ್ಷ್ಮ ಹೆಣಿಗೆಯುಳ್ಳ 50 ದೊಡ್ಡ ಪ್ಲ್ಯಾಸ್ಟಿಕ್‌ ಬಲೆಗಳನ್ನು ಹರವಿರುತ್ತಾರೆ. ಹೆಣಿಗೆಯ ರಚನೆಯ ಮೇಲೆ ತುಂತುರು ಹನಿಗಳು ಶೇಖರಿಸಲ್ಪಟ್ಟಾಗ, ಅವು ಐಕ್ಯವಾಗುತ್ತವೆ ಮತ್ತು ಬಲೆಯ ತಳದಲ್ಲಿರುವ ಕೊಳವೆಯೊಳಗೆ ತೊಟ್ಟಿಕ್ಕುತ್ತವೆ. ಕೊಳವೆಗಳು ಒಟ್ಟು ಸೇರುತ್ತವೆ ಮತ್ತು ನೀರನ್ನು ಹಳ್ಳಿಗೆ ಕೊಂಡೊಯ್ಯುತ್ತವೆ. ಯಾವುದೇ ಶಕ್ತಿಯ ಉಪಯೋಗವಿಲ್ಲದೇ, ಸುಲಭವಾಗಿ ದುರುಸ್ತಾಗಿಟ್ಟಿರುವ ವ್ಯವಸ್ಥೆಯ ಚುಂಗುಂಗೊವಿನ 350 ನಿವಾಸಿಗಳ ಪ್ರತಿಯೊಬ್ಬರಿಗೆ ದಿನವೊಂದಕ್ಕೆ 25 ಲೀಟರ್‌ಗಳಷ್ಟು ಶುದ್ಧ ಕುಡಿಯುವ ನೀರನ್ನು ಒದಗಿಸುತ್ತದೆ. ಆರು ಖಂಡಗಳಲ್ಲಿರುವ 22 ದೇಶಗಳು ಇಂಥ ವ್ಯವಸ್ಥೆಯಿಂದ ಪ್ರಯೋಜನ ಹೊಂದಬಹುದೆಂದು ಈ ಯೋಜನೆಗೆ ಸೇರಿದ ಸಂಶೋಧಕರು ನಂಬುತ್ತಾರೆ. ಆದರೆ ಇದೊಂದು ಹೊಸ ಉಪಾಯವಲ್ಲ; ಸಾವಿರಾರು ವರ್ಷಗಳಿಂದ ಮರಗಳು ಮಂಜಿನಿಂದ ನೀರನ್ನು ಸಂಗ್ರಹಿಸುತ್ತಿದ್ದವು. (g92 12/8)

ಪಾನಕ ನದಿ

ದಡಗಳಲ್ಲಿರುವ ನೂರಾರು ಮಂದಿ ಹಳ್ಳಿಗರಿಗೆ ಆಹಾರದ ನಿರ್ಣಾಯಕ ಉಗಮವಾಗಿರುವ ಥಾಯ್ಲೆಂಡಿನ ನಾಮ್‌ ಪೊಂಗ್‌ ನದಿಯು, ಇತ್ತೀಚೆಗೆ ಒಮ್ಮೆಲೆ ದಟ್ಟವಾಯಿತು ಮತ್ತು ಅಂಟಂಟಾಗಿ ಪರಿವರ್ತಿಸಿತು. ಏಷಿಯಾವೀಕ್‌ ಪತ್ರಿಕೆಗನುಸಾರ, ಸ್ಥಳೀಯ ಸಕ್ಕರೆ ಕಾರ್ಖಾನೆಯಲ್ಲಿನ ಒಂದು ಹಗೇವು ಒಮ್ಮೆಗೆ ಸೋರ ತೊಡಗಿ, 9,000 ಟನ್ನು ಕಾಕಂಬಿಯನ್ನು ನದಿಯಲ್ಲಿ ಎಸೆಯಿತು. ಚೆಲ್ಲಲ್ಪಟ್ಟ ಹೊಟ್ಟೆ ತೊಳೆಸುವಷ್ಟು ಸಿಹಿಯು ನದಿಯ ಆಮ್ಲಜನಕವನ್ನು ಅಡಗಿಸಿತು, ಅದು ಕೆಳಪ್ರವಾಹದಲ್ಲಿ ಹರಿದ ಪ್ರತಿಯೊಂದು ಮೈಲಿಗೆ ಅಂದಾಜಿಸಲಾದ 2,000 ಪೌಂಡ್‌ಗಳಷ್ಟು ಮೀನುಗಳನ್ನು ಕೊಂದಿತು. ಏಷಿಯಾವೀಕ್‌ “ಹಾನಿಯನ್ನು ನಿಯಂತ್ರಿಸುವಲ್ಲಿ ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟ ಪ್ರಯತ್ನ” ಎಂದು ಕರೆದಿರುವ ವಿಧಾನದಲ್ಲಿ, ಅಧಿಕಾರಿಗಳು ಹತ್ತಿರದ ಅಣೆಕಟಿನ್ಟಿಂದ 840 ಘನ ಮೀಟರ್‌ಗಳಷ್ಟು ನೀರನ್ನು ಬಿಡುವುದರ ಮೂಲಕ ಆ ಪಾನಕವನ್ನು ಹೊರ ಹೊರಡಿಸಲು ಪ್ರಯತ್ನಿಸಿದರು. ಕಾಕಂಬಿಯನ್ನು 600 ಕಿಲೊಮೀಟರ್‌ ಕೆಳಪ್ರವಾಹದಲ್ಲಿ ಮತ್ತು ಇತರ ಎರಡು ನದಿಗಳಲ್ಲಿ ಹಬ್ಬುವಂತೆ ಮಾತ್ರ ಈ ಯೋಜನೆಯು ಯಶಸ್ವಿಯಾಯಿತು. ಈ ಮೂರು ನದಿಗಳು ಚೇತರಿಸಿಕೊಳ್ಳಲು ಕಡಿಮೆ ಪಕ್ಷ 12 ವರ್ಷಗಳು ಹಿಡಿಯಬಹುದೆಂದು ಒಬ್ಬ ಪರಿಸರ ಅನುಭವಶಾಲಿಯು ಅಂದಾಜಿಸುತ್ತಾನೆ. (g92 12/8)

ವಿದೇಶದ ಸಹಾಯ—ಯಾರಿಗೆ, ಎಷ್ಟು?

ವಿದೇಶ ಸಹಾಯವು ಬಡವರಿಗೆ ಸಹಾಯ ಮಾಡಲು ಹೆಚ್ಚಿನದ್ದನ್ನು ಮಾಡುತ್ತದೊ? ಯೂಎನ್‌ ಹ್ಯೂಮನ್‌ ಡಿವಲಪ್‌ಮೆಂಟ್‌ ರಿಪೋರ್ಟ್‌ 1992ಕ್ಕನುಸಾರವಾಗಿ, ಲೋಕದ ಅತಿ ಬಡ ಜನರ 72 ಸೇಕಡವಿರುವ ಹತ್ತು ದೇಶಗಳಿಗೆ ಕೇವಲ 27 ಸೇಕಡ ವಿದೇಶ ಸಹಾಯ ಹೋಗುತ್ತದೆ. ಅತಿ ಬಡ 40 ಸೇಕಡಕ್ಕೆ ಕೊಡಲ್ಪಡುವ ಸಹಾಯಕ್ಕಿಂತ ಎರಡಕ್ಕಿಂತ ಹೆಚ್ಚು ಪಾಲು ವಿಕಾಸಶೀಲ ಲೋಕದ ಜನಸಂಖ್ಯೆಯ ಶ್ರೀಮಂತ 40 ಸೇಕಡಕ್ಕೆ ದೊರಕುತ್ತದೆ. ಲೋಕದ ಅತಿ ಬಡವರ ಸಾಧಾರಣ ಅರ್ಧದಷ್ಟು ಜನರಿಗೆ ಮನೆಯಾಗಿರುವ ದಕ್ಷಿಣ ಏಷಿಯಾದ ರಾಷ್ಟ್ರಗಳಲ್ಲಿ, ಒಬ್ಬ ವ್ಯಕ್ತಿಗೆ 5 ಡಾಲರುಗಳಂತೆ ಸಹಾಯ ದೊರಕುತ್ತದೆ. ದಕ್ಷಿಣ ಏಷಿಯಾದ ತಲಾ ಆದಾಯಕ್ಕಿಂತ ಮುಮ್ಮಡಿ ಆದಾಯವಿರುವ ಮಧ್ಯ ಪೂರ್ವ ದೇಶಗಳು ತಲಾ 55 ಡಾಲರ್‌ ಪಡೆಯುತ್ತವೆ. ಶಸ್ತ್ರಗಳ ಮೇಲೆ ಹೆಚ್ಚು ಮಿತವಾಗಿ ವ್ಯಯ ಮಾಡುವ ದೇಶಗಳಿಗಿಂತ ಅಧಿಕವಾಗಿ ವ್ಯಯ ಮಾಡುವ ರಾಷ್ಟ್ರಗಳಿಗೆ ತಲಾ ಎರಡರಷ್ಟು ಹೆಚ್ಚು ದೊರಕುತ್ತದೆ. ಧನ ಸಹಾಯಗಳ (ಸಾಧಾರಣ 7 ಸೇಕಡ ಉಭಯ ಪಕ್ಷಗಳ ಸಹಾಯ ಮತ್ತು 10 ಸೇಕಡ ಬಹು ಪಕ್ಷಗಳ ಸಹಾಯ) ಅತ್ಯಂತ ಕಡಮೆ ಭಾಗ ಮಾತ್ರ ಮಾನವನ ಬುನಾದಿ ಅವಶ್ಯಕತೆಗಳಿಗೆ—ಶಿಕ್ಷಣ, ಆರೋಗ್ಯ ರಕ್ಷೆ, ಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯ, ಕುಟುಂಬ ಯೋಜನೆ, ಮತ್ತು ಪೋಷಣಾ ಕಾರ್ಯಕ್ರಮಗಳು—ಹೋಗುತ್ತದೆ. (g92 11/22)

ದೀರ್ಘಾಯುಸ್ಸಿನ ಜಪಾನೀಯರು

ವರ್ಲ್ಡ್‌ ಹೆಲ್ತ್‌ ಆರ್ಗನೈಸೇಶನ್‌ನ ಇತ್ತೀಚಿನ ಅಂಕೆಸಂಖ್ಯೆಗನುಸಾರ ಭೂಮಿಯ ಮೇಲೆ ಇರುವ ಇತರ ಯಾವುದೇ ರಾಷ್ಟ್ರಗಳಿಗಿಂತ ಹೆಚ್ಚು ಆಯುಷ್ಯ ಸಂಭಾವ್ಯತೆ ಜಪಾನೀಯರಿಗಿದೆ. ಜಪಾನಿನಲ್ಲಿ ಸರಾಸರಿ 76.2 ವರುಷಗಳು ಪುರುಷರದ್ದಿರುವಾಗ, ಸ್ತ್ರೀಯರ ಸರಾಸರಿ ಆಯುಷ್ಯ 82.5 ಆಗಿದೆ. ಸ್ತ್ರೀಯರ ಎರಡನೇ ಉಚ್ಚ ಆಯುಷ್ಯವು ಫ್ರಾನ್ಸ್‌ನಲ್ಲಿ 81.5 ವರ್ಷಗಳಿರುವಾಗ, 81.0 ವರ್ಷಗಳಿರುವ ಸ್ವಿಟ್ಸರ್ಲೆಂಡ್‌ ಅದನ್ನು ಹತ್ತಿರದಿಂದ ಅನುಸರಿಸುತ್ತದೆ. ಇನ್ನಿತರ ಸ್ವಾರಸ್ಯವುಳ್ಳ ನಿಜಾಂಶಗಳು ಕೂಡ 350 ಪುಟಗಳ ಅಂಕೆಸಂಖ್ಯೆಯ ವರ್ಷಪುಸ್ತಕದಲ್ಲಿ ಒದಗಿಸಲಾಗಿವೆ. ಲೋಕದ ಅತ್ಯಂತ ಅಧಿಕ ಫಲವತ್ತು ಪ್ರಮಾಣವು ರುಆಂಡದ್ದಾಗಿದೆ, ಅಲ್ಲಿ ಪ್ರತಿಯೊಂದು ಸ್ತ್ರೀಗೆ ಸರಾಸರಿ 8.3 ಮಕ್ಕಳಿವೆ. ಹಂಗೆರಿಯಲ್ಲಿ ಒಂದು ಲಕ್ಷಕ್ಕೆ 38.2ರಂತೆ ಆತ್ಮಹತ್ಯಾ ಪ್ರಮಾಣವು ಅತ್ಯಂತ ಅಧಿಕವಾಗಿರುವಾಗ, ಪ್ರತಿ 1,00,000ಕ್ಕೆ 1.3ರ ಅತ್ಯಂತ ಕಡಿಮೆ ಆತ್ಮಹತ್ಯಾ ಪ್ರಮಾಣವು ಬಹಾಮಸ್‌ದಲ್ಲಿದೆ. ಮತ್ತು ವಾಹನ ಅಪಘಾತ ಮರಣಗಳ ಅತ್ಯಂತ ಹೆಚ್ಚು ಪ್ರಮಾಣವು ದಕ್ಷಿಣ ಅಮೆರಿಕದ ಸಣ್ಣ ರಾಷ್ಟ್ರವಾದ ಸುರಿನಾಮ್‌ನಲ್ಲಿ 1,00,000ಕ್ಕೆ 33.5ರಂತಿದೆ. ಅತ್ಯಂತ ಕಡಿಮೆ? ಮಾಲ್ಟಾದಲ್ಲಿ. ಅಲ್ಲಿ ಪ್ರತಿ 1,00,000 ಜನರಿಗೆ ಕೇವಲ 1.6 ಮಾರಕ ವಾಹನ ಅಪಘಾತಗಳಿವೆ. (g92 11/22)

ಜೇಡರ ಭಯದ ಅಗತ್ಯವಿಲ್ಲ

ಜೇಡರ ಭಯವು “ಅನೇಕ ಬಾರಿ ಅಜ್ಞಾನದ ಫಲಿತಾಂಶವಾಗಿದೆ” ಎಂದು ಸೌತ್‌ ಆ್ಯಫ್ರಿಕನ್‌ ಪ್ಯಾನೊರಾಮ ಪತ್ರಿಕೆ ಹೇಳುತ್ತದೆ. ಆಫ್ರಿಕನ್‌ ಜೇಡರ ಮೇಲೆ ಪ್ರಮುಖ ನಿಯೋಜಿತ ಅಧಿಕಾರಿಯಾದ ಡಾ. ಆನ್ಸಿ ಡಿಪನಾರ್‌ರ ಸಂಶೋಧನೆಯ ಮೇಲೆ ವರದಿಸುತ್ತಾ, ಅದು ಸೂಚಿಸುವುದೇನೆಂದರೆ, ಲೋಕದಲ್ಲಿ ತಿಳಿದಿರುವ ಜೇಡರ ಜಾತಿಗಳ 0.2 ಪ್ರತಿಶತಕ್ಕಿಂತ ಕಡಮೆ ಜೇಡರುಗಳು ಮನುಷ್ಯನಿಗೆ ಅಪಾಯಕಾರಿಯಾದವುಗಳು. ಅವುಗಳ ಯೋಗ್ಯ ಸ್ಥಾನದಲ್ಲಿ, ಈ ಪುಟ್ಟ ಜೀವಿಗಳನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕೇ ವಿನಹ, ವೈರಿಗಳಂತಲ್ಲ. ಅವುಗಳು ಬೆಳೆಯ ವಿನಾಶಕಾರಿ ಕೀಟಗಳನ್ನು ದಮನ ಮಾಡುವಲ್ಲಿ ಅಮೂಲ್ಯವಾದವುಗಳಾಗಿವೆ. ಕೆಲವು ಜಾತಿಗಳ ಒಂದೇ ಒಂದು ಜೇಡ ಒಂದು ದಿನಕ್ಕೆ 200 ಕೀಟ ಮರಿಹುಳುಗಳಷ್ಟನ್ನು ಕೊಲ್ಲಬಹುದು. ಉದಾಹರಣೆಗಾಗಿ, ಸಾಬ್ಟ್ರೆರಿ ಹೊಲದಲ್ಲಿ ಜೇಡರನ್ನು ಉಳಿಯುವಂತೆ ಬಿಡುವಲ್ಲಿ, ಎಲ್ಲಿ ಜೇಡರು ಕೊಲ್ಲಲ್ಪಡುತ್ತವೆಯೋ ಅಲಿಗ್ಲಿಂತ, ಒಂದು ಎಕರೆಗೆ 2.4 ಟನ್ನುಗಳಷ್ಟು ಹೆಚ್ಚು ಉತ್ಪತ್ತಿಯಾಗಲು ಸಾಧ್ಯವಿದೆ. ಆ ಲೇಖನವು ಸೇರಿಸುವುದು, “ರೈತರು ಜೇಡರ ಸಂಖ್ಯೆಗಳನ್ನು ರಕ್ಷಿಸಬೇಕು, ಅದರಿಂದಾಗಿ ಪರಿಸರದ ಮಾಲಿನ್ಯಕ್ಕೆ ಸಹಾಯ ಮಾಡುವ ದುಬಾರಿ ಕೀಟ ನಾಶಕ ಔಷಧಗಳ ಉಪಯೋಗ ಕೂಡ ಮಿತವಾಗುವದು.” (g92 11/22)

ಜಮೀನಾಕ್ರಮಣಕಾರಕ ಉಭಯಸಂಕಟ

ಹೆಚ್ಚಾಗಿ ತೀವ್ರ ಅನಾವೃಷ್ಟಿಯಿಂದಾಗಿ ದಕ್ಷಿಣ ಆಫ್ರಿಕದ ಸಾವಿರಾರು ಮಂದಿ ಅವರ ಹಳ್ಳಿಯ ಮನೆಗಳನ್ನು ಬಿಟ್ಟು ಉದ್ಯೋಗದ ಹುಡುಕಾಟದಲ್ಲಿ ಪಟ್ಟಣಗಳಿಗೆ ಪ್ರವಹಿಸುತ್ತಾರೆ. ಅತಿ ಮಿತವಾಗಿ ಹೇಳುವುದಾದರೆ, ಆರ್ಥಿಕ ಹಿಂಜರಿತದೊಂದಿಗೆ, ಪಟ್ಟಣಗಳಲ್ಲಿ ಉದ್ಯೋಗವನ್ನು ಕಂಡುಕೊಳ್ಳುವ ಸಂದರ್ಭಗಳು ಸಮರ್ಪಕವಾಗಿರುವುದಿಲ್ಲ. ತಾತ್ಕಾಲಿಕ ಗುಡಿಸಲುಗಳುಳ್ಳ ಜಮೀನಾಕ್ರಮಣ ವಸಾಹತುಗಳು ಬೆಳೆದಿವೆ. ಹತ್ತಿರದ ವಾಸದ ಮನೆಗಳಿರುವ ಪ್ರದೇಶಗಳಲ್ಲಿನ ಮನೆಮಾಲಕರು ಆಸ್ತಿ ಮೌಲ್ಯಗಳ ಇಳಿತ ಮತ್ತು ಕಳ್ಳತನಗಳಲ್ಲಿ ನಾಟಕೀಯ ಬೆಳವಣಿಗೆಯ ಬಗ್ಗೆ ದೂರುತ್ತಾರೆ. ಜಮೀನಾಕ್ರಮಣಕಾರರಿಗೆ ಕಡಿಮೆ ವೆಚ್ಚದ ಮನೆಗಳನ್ನು ಸರಕಾರವು ಒದಗಿಸಬೇಕೆಂಬದಾಗಿ ಕೆಲವರು ಭಾವಿಸುತ್ತಾರೆ. ಆದರೆ ಸೊವೆಟಾನ್‌ ವಾರ್ತಾಪತ್ರಿಕೆಯು ಗಮನಿಸಿದಂತೆ, ಅಂಥ ಒಂದು ಯೋಜನೆಯು “ಕಡಿಮೆ ವೆಚ್ಚದ್ದು”—ಯಾ ಸುಲಭವಾದದ್ದು—ಆಗಿರುವುದಿಲ್ಲ. ದೇಶದಲ್ಲೆಲ್ಲಾ ಇರುವ ಜಮೀನಾಕ್ರಮಣ ಶಿಬಿರಗಳಲ್ಲಿ 70,00,000 ಜನರು ಜೀವಿಸುತ್ತಾರೆ ಎಂದು ಒಂದು ಸಂಶೋಧನಾ ಗುಂಪು ಅಂದಾಜಿಸುತ್ತದೆ. (g92 12/8)

ಔಷಧವಾಗಿ ಕಾಫಿ?

ಕ್ರೀಡಾಪಟುಗಳು ತಮ್ಮ ಕ್ರೀಡಾಸಾಧನೆಯನ್ನು ವರ್ಧಿಸಲು ಒಂದು ಔಷಧವನ್ನು ಬಳಸಬಹುದಾದಷ್ಟೇ ವಿಧಾನದಲ್ಲಿ ಕಾಫಿಯನ್ನು ಬಳಸಬಹುದು—ಮತ್ತು ಕೆಲವೊಮ್ಮೆ ಬಳಸುತ್ತಾರೆ—ಎಂದು ಬ್ರೇಸಿಲ್‌ನ ಪ್ರೊಫೆಸರರೊಬ್ಬರು ಹೇಳಿದರು. ಒ ಎಸೆಡ್ಟೊ ಡೆ ಎಸ್‌. ಪೌಲೊ ವಾರ್ತಾಪತ್ರಿಕೆಗನುಸಾರವಾಗಿ, ಮೀನ ಷರೈಸ್‌ನ ಸ್ಕೂಲ್‌ ಆಫ್‌ ಫಿಸಿಕಲ್‌ ಎಡ್ಯೂಕೇಷನ್‌ ಆಫ್‌ ದ ಫೆಡರಲ್‌ ಯೂನಿವರ್ಸಿಟಿಯಲ್ಲಿನ ಲೂಯಿಷ್‌ ಆಶ್ವಾಲ್ಡು ರುತ್ರಿಗೀಸ್‌ ಹೇಳುವುದು: “ನನ್ನ ಸಂಶೋಧನೆಯಲ್ಲಿ ನಾನು ಗಮನಿಸಿದ ಕ್ರೀಡಾಪಟುಗಳು—ಕಾನೂನುಬಾಹಿರವೆಂದು ಪರಿಗಣಿಸಲ್ಪಡುತ್ತಿದ್ದುದಕ್ಕಿಂತ ಅತಿ ಕಡಿಮೆ ಪರಿಮಾಣದಲ್ಲಿ ಕ್ಯಾಫಿಈನ್‌ ತಕ್ಕೊಂಡಿದ್ದರೂ—ಮತ್ತು ಬರಿಸುವ ಪರಿಣಾಮದಡಿಯಲಿದ್ದರು ಎಂಬದರಲ್ಲಿ ನನಗೆ ಸಂಶಯವಿಲ್ಲ.” ಇಂಟರ್‌ನ್ಯಾಷನಲ್‌ ಒಲಿಂಪಿಕ್‌ ಕಮಿಟಿಯು 750 ಮಿಲಿಗ್ರಾಂ ಕ್ಯಾಫಿಈನ್‌ನನ್ನು ಮಿತಿಯಾಗಿ ಇಡುತ್ತದೆ, ಅದು 11 ಕಪ್‌ ಗಡುಸಾದ ಕಾಫಿಗಳಷ್ಟಾಗುತ್ತದೆ. ವೈದ್ಯರಿಗನುಸಾರ, ಕಾಫಿಯಲ್ಲಿರುವ ಕ್ಯಾಫಿಈನ್‌ನಿಂದಾಗಿ ದೂರದೋಟ ಓಡುವ ಓಟಗಾರರು ತಮ್ಮ ಸಾಧನೆಯನ್ನು ಸೇಕಡ 20ರಷ್ಟು ಹೆಚ್ಚಿಸಿರುತ್ತಾರೆ. (g92 12/8)

ವೈದ್ಯರಿಗೆ ಅನುಭೂತಿಯನ್ನು ಕಲಿಸುವುದು

ಹೆಚ್ಚು ಅನುಭೂತಿಯುಳ್ಳವರಾಗುವಂತೆ ವೈದ್ಯರಿಗೆ ತರಬೇತಿ ನೀಡಲು ಅಸಾಮಾನ್ಯ ಕಾರ್ಯಕ್ರಮಗಳನ್ನು ಅಮೆರಿಕದಲ್ಲಿನ ಕೆಲವು ಆಸ್ಪತ್ರೆಗಳು ಮತ್ತು ವೈದ್ಯಕೀಯ ಶಾಲೆಗಳು ನಡೆಸುತ್ತವೆ. ಒಂದು ನ್ಯೂ ಯಾರ್ಕ್‌ ಪಟ್ಟಣದ ಆಸ್ಪತ್ರೆಯು ರೋಗಿಗಳ ಪಾತ್ರವನ್ನು ಆಡಲು ನಟರನ್ನು ಬಾಡಿಗೆಗೆ ತರುತ್ತದೆ. ತರಬೇತಿಯಲ್ಲಿರುವ ವೈದ್ಯನು ಅವರ ದೂರುಗಳನ್ನು ಕೇಳುವಾಗ, ಅವನನ್ನು ವಿಡಿಯೊ ಟೇಪ್‌ ಮಾಡಲಾಗುತ್ತದೆ ಮತ್ತು ಅನಂತರ ತನ್ನ ನಿರ್ವಹಣೆಯನ್ನು ಅವನು ವೀಕ್ಷಿಸುತ್ತಾನೆ. “ಟೇಪುಗಳ ಮೇಲಿರುವುದೇನೆಂಬದನ್ನು ವೀಕ್ಷಿಸುವಾಗ ಅವರು ವಿನೀತರಾಗುತ್ತಾರೆ ಮತ್ತು ಆಶ್ಚರ್ಯಚಕಿತರಾಗುತ್ತಾರೆ,” ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ. ಮಾರ್ಕ್‌ ಶ್ವಾರ್ಟ್ಸ್‌, ದ ನ್ಯೂ ಯಾರ್ಕ್‌ ಟೈಮ್ಸ್‌ನಲ್ಲಿ ಹೇಳುತ್ತಾರೆ. “ಅವರನ್ನುವುದು, ‘ನನ್ನ ಮುಖದ ಮೇಲೆ ಯಾವಾಗಲು ಅಂಥ ಭಾವವನ್ನು ವ್ಯಕ್ತಪಡಿಸುತ್ತೇನೊ?’ ‘ನಾನು ಅಷ್ಟು ಒರಟನೊ?’” ಮತ್ತೊಂದು ಆಸ್ಪತ್ರೆಯು, ಚಿಕಿತ್ಸೆಯ ಗ್ರಾಹಕರಾಗಿರುವಾಗ ಹೇಗೆ ಅನಿಸುತ್ತದೆಂದು ನೋಡಲು ವೈದ್ಯರು ರೋಗಿಗಳಾಗಿ ಒಳಬರುವಂತೆ ಮಾಡುತ್ತದೆ. ಮತ್ತೊಂದು ಆಸ್ಪತ್ರೆಯು ನಿವಾಸಿ ವೈದ್ಯರುಗಳಿಗೆ, ಅವರ ಇಂದ್ರಿಯಗಳನ್ನು ತಾತ್ಕಾಲಿಕವಾಗಿ, ಮಸಕು ಕಾಂಟ್ಯಕ್ಟ್‌ ಲೆನ್ಸು, ಕಿವಿ ಬಿರಡೆ, ಮತ್ತು ರಬರ್‌ ಕೈಚೀಲಗಳ ಮೂಲಕ ಮಂದಮಾಡಿ ಅವರು ವಯಸ್ಸಾದವರಿಗೆ ಸಹಾನುಭೂತಿಯುಳ್ಳವರಾಗುವಂತೆ ಕಲಿಸಲಾಗುತ್ತದೆ. ಅವರು ತಮ್ಮ ಕೀಲುಗಳನ್ನು ಗಡುಸುಗಟ್ಟಿಸಲು ದಬ್ಬೆಯನ್ನೂ ಧರಿಸಬೇಕು ಮತ್ತು ಜಡ್ಡು ಮತ್ತು ಆಣಿಗಳಿರುವಂತೆ ನಟಿಸಲು ಅವರ ಪಾದರಕ್ಷೆಗಳಲ್ಲಿ ಗಟ್ಟಿ ಪುಟಾಣಿಗಳನ್ನು ಹಾಕಬೇಕು. ನಂತರ ಅವರು ಜೀವ ವಿಮೆ ಕಾಗದಪತ್ರಗಳನ್ನು ತುಂಬುವ ಮತ್ತು ಅಭೇದ್ಯ ಸೀಸೆಗಳಿಂದ ಮುಚ್ಚಳವನ್ನು ತೆಗೆಯುವ “ಸರಳ” ಕೆಲಸಗಳನ್ನು ನಿರ್ವಹಿಸಬೇಕು. “ತದನಂತರ ಅನುಸರಿಸಿಬರುವ ಚರ್ಚೆಯ ಸಮಯಾವಧಿಯಲ್ಲಿ,” ಟೈಮ್ಸ್‌ ವರದಿಸುವುದು, “ಅನೇಕ ಬಾರಿ ನಿವಾಸಿ ವೈದ್ಯರು ತಾವು ಈ ಹಿಂದೆ ಕೆಲವು ಪ್ರಾಯಸ್ಥ ರೋಗಿಗಳೊಂದಿಗೆ ರೇಗಿದುದಕ್ಕಾಗಿ ಖೇದ ವ್ಯಕ್ತಪಡಿಸಿದರು.” (g92 12/8)

ಪೋಪರ ಕ್ಷಮಾಯಾಚನೆ

ಗುಲಾಮ ವ್ಯಾಪಾರಕ್ಕಾಗಿ ಆಫ್ರಿಕ ಖಂಡಕ್ಕೆ ಪೋಪ್‌ ಜಾನ್‌ II ಎರಡು ಸಲ ಕ್ಷಮೆ ಯಾಚಿಸಿರುತ್ತಾರೆ. ಪೋಪರು ಸೆನೆಗಲ್‌ಗೆ ಪ್ರವಾಸದಲ್ಲಿರುವಾಗ ಫೆಬ್ರವರಿಯಲ್ಲಿ ಮೊದಲನೆಯ ಸಲವಾಗಿತ್ತು. ಆ ಸಮಯದಲ್ಲಿ ಇಟೆಲಿಯ ದಿನಪತ್ರಿಕೆ ಕೊರಿಎರೆ ಡೆಲಾ ಸೇರ ವರದಿಸಿತೇನಂದರೆ ಪೋಪರು, “ಕ್ರೈಸ್ತರು ಕೂಡ . . . ಕಲಂಕಿತಗೊಂಡ ಗುಲಾಮತನದ ಐತಿಹಾಸಿಕ ಅಪರಾಧಕ್ಕಾಗಿ ‘ಸ್ವರ್ಗದ ಕ್ಷಮೆಯನ್ನು’ ಮತ್ತು ಆಫ್ರಿಕದ ಕ್ಷಮೆಯನ್ನು ಬೇಡಿಕೊಂಡರು.” ಎರಡನೇ ಕ್ಷಮಾಯಾಚನೆಯು, ಸಾಧಾರಣ ಎರಡು ತಿಂಗಳ ಅನಂತರ, ಸಾವ್‌ ಟೊಮ್‌ಗೆ ಅವರ ಭೇಟಿಯಲ್ಲಿ ಕೊಡಲ್ಪಟ್ಟಿತು. “ಚರ್ಚು ಕೂಡ ಪಾಪಿಗಳಿಂದ ರಚಿತವಾದ ಸಮಾಜವಾದದರಿಂದ, ಪ್ರೀತಿಯ ವಿಧಿಯ ಉಲ್ಲಂಘನೆಗಳು ಕಳೆದ ಶತಮಾನಗಳಲ್ಲಿ ಆಗಿವೆ. . . . ಅವುಗಳು ಕ್ರೈಸ್ತರ ಹೆಸರಿನೊಂದಿಗೆ ಅಲಂಕೃತರಾದ ವ್ಯಕ್ತಿಗಳ ಮತ್ತು ಗುಂಪುಗಳ ನ್ಯೂನತೆಗಳಾಗಿದ್ದವು” ಎಂದು ಪೋಪರು ವ್ಯಾಟಿಕನ್‌ನಲ್ಲಿ ವಿವರಿಸಿದರು. “ಪೋಪರ ಕ್ಷಮಾಯಾಚನೆಗಳ” ಮೇಲೆ ವ್ಯಾಖ್ಯಾನ ಮಾಡುತ್ತಾ ದೈನಿಕ ವಾರ್ತಾಪತ್ರಿಕೆ ಲಾ ರೆಪಬಿಕ್ಲಾ ಹೇಳಿತೇನಂದರೆ, ಪೋಪರು “ಕ್ರೈಸ್ತರ ಪಾಪದ ಮೇಲೆ ಸಾಮಾನ್ಯವಾಗಿ ಮಾತನಾಡಿದರು, ಆದರೆ ಅವರು ಪೋಪರುಗಳ ಬಗ್ಗೆ, ರೋಮನ್‌ ಸಭೆಗಳ ಬಗ್ಗೆ, ಮತ್ತು ಬಿಷಪ್‌ ಮತ್ತು ಪಾದ್ರಿಗಳ ಬಗ್ಗೆ ಕೂಡ ಮಾತಾಡಬಹುದಾಗಿತ್ತು. ನಿಜತ್ವದಲ್ಲಿ, ಈ ಗುಲಾಮಗಿರಿಯ ಇತಿಹಾಸವು, ಕ್ಯಾಥೊಲಿಕ್‌ ಧರ್ಮಪ್ರಭುತ್ವದ ಜವಾಬ್ದಾರಿಯೊಂದಿಗೆ ಕೂಡ ಮಿಶ್ರಿತವಾಗಿದೆ.” (g92 11/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ