ನಿಮಗೆ ಕೃತಕ ದಂತಪಂಕ್ತಿಗಳ ಆವಶ್ಯವಿದೆಯೊ?
ಅನೇಕ ಬಾರಿ ಹಾಸ್ಯಗಳಿಗೆ ಗುರಿಯಾಗುವ, ಕೃತಕ ಹಲ್ಲುಗಳು, ಅನೇಕ ಬಳಕೆದಾರರಿಗೆ ನಗುಬರಿಸುವಂತಹ ವಿಷಯವಲ್ಲ. ನಿಮ್ಮ ಎಲ್ಲಾ ನೈಸರ್ಗಿಕ ಹಲ್ಲುಗಳು ಉತ್ತಮ ಪರಿಸ್ಥಿತಿಯಲ್ಲಿರುವದಾದರೆ, ಕೃತಕ ಹಲ್ಲುಗಳ ಪ್ರಶ್ನೆಯು ನಿಮಗೆ ಪ್ರಾಮುಖ್ಯವೆಂದು ತೋರಲಾರದು. ನಿಮಗೆ ಆ ವಿವಾದವನ್ನು ಎದುರಿಸುವ ಆವಶ್ಯಕತೆ ಎಂದೂ ಬರದಿದ್ದರೂ, ಈ ಲೇಖನದಲ್ಲಿ ಹೇಳಲ್ಪಡುವ ವಿಷಯಗಳು ಸ್ವಸ್ಥ, ಆರೋಗ್ಯಕರ ಹಲ್ಲುಗಳ ಆರ್ಶೀವಾದವನ್ನು ಗಣ್ಯ ಮಾಡುವಂತೆ ಸಹಾಯ ಮಾಡಬಹುದು ಮತ್ತು ನಿಮ್ಮ ಮೇಲೆ ಅವಲಂಬಿತವಾಗಿರುವ ವರೆಗೆ—ಅವುಗಳನ್ನು ಆ ರೀತಿಯಲ್ಲಿ ಇಟ್ಟುಕೊಳ್ಳುವಂತೆ ನಿಮ್ಮನ್ನು ದೃಢಪಡಿಸಬಹುದು.
ತಮ್ಮ ದಂತ ಆರೈಕೆಯಲ್ಲಿ ತಾವು ನಿಷ್ಠಾವಂತರೆಂದು ಯೋಚಿಸುತ್ತಿದ್ದ ಅನೇಕ ಜನರು ಒಂದು ದಿನ ತಮ್ಮ ಹಲ್ಲುಗಳು ಸಡಿಲವಾಗುತ್ತಿರುವದನ್ನು ಕಂಡುಹಿಡಿಯುವುದು ಏಕೆ? ಯಾವ ದಂತ ವೈದ್ಯನನ್ನಾದರೂ ಕೇಳಿ. ಒಮ್ಮೆ ಜನರು 30ರ ವಯಸ್ಸನ್ನು ದಾಟಿದ ಮೇಲೆ, ಹಲ್ಲಿನ ನಷ್ಟಕ್ಕೆ ರೋಗಗ್ರಸ್ಥ ಒಸಡುಗಳು (ಪೆರಿಯೋಡಾಂಟಲ್ ರೋಗ) ಅತಿ ದೊಡ್ಡ ಕಾರಣವಾಗಿವೆ. ಆದರೂ, ವ್ಯಕ್ತಿಯು ಅಪಘಾತದಿಂದ ಯಾ ಹಲ್ಲಿನ ಕೊಳೆತದಿಂದ ಕೂಡ ಹಲ್ಲುಗಳನ್ನು ಕಳೆದುಕೊಳ್ಳಬಹುದು.
ಆದರೆ ನೀವು ಕೆಲವೊಂದು ಯಾ ಎಲ್ಲಾ ಹಲ್ಲುಗಳನ್ನು ಕಳೆದುಕೊಂಡಿರುವದಾದರೆ ನಿಮಗೆ ಕೃತಕ ದಂತಪಂಕ್ತಿಗಳ ಆವಶ್ಯಕತೆಯು ನಿಜವಾಗಿಯೂ ಇದೆಯೊ?a ಕೆಲವು ಜನರು ಅವುಗಳಿಲ್ಲದೆ ಕಾರ್ಯ ನಡೆಸುತ್ತಾರೆಂದು ತೋರುವುದು ಯಾಕೆ? ದಂತಪಂಕ್ತಿಗಳು ಸಾರ್ವಜನಿಕರ ಮೇಲೆ ಹೊರುವ ಕೇವಲ ಇನ್ನೊಂದು ವಾಣಿಜ್ಯ ಉತ್ಪಾದನೆಯಾಗಿದೆಯೊ?
ಕೃತಕ ದಂತಪಂಕ್ತಿಗಳು ಯಾಕೆ?
ಈ ಪ್ರಶ್ನೆಗಳನ್ನು ಉತ್ತರಿಸಲು, ನಾವು ನಮ್ಮ ಹಲ್ಲುಗಳ ಕಾರ್ಯದೆಡೆ ನೋಡೋಣ. ಅವು ನಮ್ಮ ತೋರಿಕೆಯನ್ನು ಪ್ರಭಾವಿಸುವದಕ್ಕಿಂತ ಹೆಚ್ಚಿನದನ್ನು ಮಾಡುತ್ತವೆ. ನಾವು ನಮ್ಮ ಆಹಾರವನ್ನು ಅಗಿಯುವಾಗ, ಜೀರ್ಣಕಾರಿ ರಸಗಳು ಸೂಕ್ಷ್ಮ ಚೂರುಗಳೊಂದಿಗೆ ಮಿಶ್ರವಾಗಿ, ದೇಹವು ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಬಿಡುವಂತೆ ತುಂಡು ಮಾಡಲ್ಪಡುತ್ತದೆ. ಆದರೆ ನಮಗೆ ಕಡಿಮೆ ಯಾ ಹಲ್ಲುಗಳೇ ಇಲ್ಲದಿದ್ದರೆ, ನಮ್ಮ ಆಹಾರವು ಬೇಕಾದಷ್ಟು ಮಟ್ಟಿಗೆ ಅರೆಯಲ್ಪಡುವದಿಲ್ಲ. ಬಹಳ ದೃಢವಾದ ಒಸಡುಗಳ ಎಲುಬಿನ ಏಣುಗಳು ಕೂಡ ಇದನ್ನು ತಕ್ಕಷ್ಟು ಮಟ್ಟಿಗೆ ಮಾಡಲಾರವು. ಆದುದರಿಂದ, ಆಹಾರವನ್ನು ಕಾಫಿ, ಟೀ, ಯಾ ಬೇರೆ ಇತರ ಪಾನೀಯಗಳಿಂದ ಕೆಳಗೆ ತಳ್ಳುವ ಹಲಿಲ್ಲದ್ಲ ಜನರಿಗೆ ಜೀರ್ಣಶಕ್ತಿಯ ಸಮಸ್ಯೆಗಳಿರಬಹುದು. ಕೇವಲ ಕೆಲವೇ ಹಲ್ಲುಗಳು ಇಲ್ಲದಿರುವಾಗ ಕೂಡ, ಆಹಾರವು ಮಿತಗೊಳಿಸಲ್ಪಡುತ್ತದೆ, ಯಾಕಂದರೆ ಹೆಚ್ಚಿನ ಅಗಿಯುವಿಕೆಯ ಅಗತ್ಯವಿರುವ ಗಟ್ಟಿಯಾದ ಯಾ ನಾರುಪದಾರ್ಥವನ್ನು ಸಾಮಾನ್ಯವಾಗಿ ತ್ಯಜಿಸಲಾಗುತ್ತದೆ.
ಹಲ್ಲುಗಳು ನಮಗೆ ಮಾತನಾಡಲು ಸಹ ಸಹಾಯ ಮಾಡುತ್ತವೆ, ಈ ಪ್ರಯೋಜನವನ್ನು, ಕೆಲವು ಹಲ್ಲುಗಳು ಇಲ್ಲದೆ ಹೋಗುವ ತನಕ ನಾವು ಅಪರೂಪವಾಗಿಯೇ ಯೋಚಿಸುತ್ತೇವೆ. ತಿಳಿವಳಿಕೆಗೆ ಅಗತ್ಯವಿರುವ ಮಾತುಗಳ ಶಬ್ಧವನ್ನು ರೂಪಿಸಲು ಅವು ನಾಲಗೆ ಮತ್ತು ತುಟಿಗಳಿಗೆ ಸಹಾಯ ಮಾಡುತ್ತವೆ. ಉದಾಹರಣೆಗೆ, ಒಂದು ಪದದ ಕೊನೆಗೆ ಬರುವ ವ್ಯಂಜನ ಉಚ್ಚಾರವನ್ನು ಹಲ್ಲುಗಳಿಲ್ಲದೆ ಸರಿಯಾಗಿ ಮಾಡಲು ಸಾದ್ಯವಿಲ್ಲ. ಹಲ್ಲು ಇಲ್ಲದ ಒಬ್ಬ ವ್ಯಕ್ತಿಯು ಮಾತಾಡುವದನ್ನು ನೀವು ಎಂದಾದರೂ ಕೇಳಿರುವದಾದರೆ, ಬಹುಶಃ ಇದನ್ನು ನೀವು ಗಮನಿಸಿದ್ದೀರಿ. ಆದುದರಿಂದ, ಕೃತಕ ಹಲ್ಲುಗಳುಳ್ಳ ಒಬ್ಬ ವ್ಯಕ್ತಿಯು ಸರಿಯಾದ ಶಬ್ಧಗಳನ್ನು ಪುನಃ ಬರಿಸಲು ಅವನ ನಾಲಗೆಯನ್ನು ಅವುಗಳಿಗೆ ಹೊಂದಿಸಿಕೊಳ್ಳಬೇಕು. ಇದು ಸ್ವಲ್ಪ ಸಮಯವನ್ನು ತೆಗೆದು ಕೊಂಡರೂ, ಫಲಿತಾಂಶವು ಹಲ್ಲು ಇಲ್ಲದೆ ಇರುವದಕ್ಕಿಂತ ಸಾಮಾನ್ಯವಾಗಿ ಉತ್ತಮವಾಗಿರುತ್ತದೆ.
ಒಬ್ಬನಿಗೆ ಕೃತಕ ದಂತಪಂಕ್ತಿಗಳು ಇರುವಾಗ ಹಾಡುವ ಯಾ ಕೆಲವು ಸಂಗೀತ ವಾದ್ಯಗಳನ್ನು ನುಡಿಸುವ ಕುರಿತೇನು? ಈ ಚಟುವಟಿಕೆಗಳನ್ನು ಸಾಮಾನ್ಯವಾಗಿ, ದಂತಪಂಕ್ತಿಗಳನ್ನು ಹಲವಾರು ರೀತಿಗಳಲ್ಲಿ ಬದಲಾಯಿಸುವ ಮೂಲಕ ಪರಿಣಾಮಕಾರಿಯಾಗಿ ಮಾಡಬಹುದು. ಹಾಡುವವರು, ನಟರು, ವಾಯು ವಾದ್ಯ ನುಡಿಸುವವರು, ಸೌವಾರ್ತಿಕರು, ಮತ್ತು ಛಾಯಾಚಿತ್ರವನ್ನು ತೆಗೆಯುವವನ ಮಾಡೆಲ್ಗಳು, ತಮ್ಮ ಕೆಲಸಗಳನ್ನು ಹಲ್ಲುಗಳಿಲ್ಲದೆ ನಡೆಸುವುದು ಅಸಾಧ್ಯವಲ್ಲದಿದ್ದರೆ, ಕಷ್ಟಕರವಾಗಿಯೂ ಕಾಣುವರು.
ವೈಯಕ್ತಿಕ ತೋರಿಕೆಯನ್ನು ಕೂಡ ಹಲ್ಲುಗಳ ಅನುಪಸ್ಥಿತಿಯು ಪ್ರಭಾವಿಸುತ್ತದೆ. ಬಾಯಿಯ ಸುತ್ತಲು ಇರುವ ಮೃದುವಾದ ಅಂಗಾಂಶಗಳ ಕೂಡಿ ಬರುವಿಕೆ ಮತ್ತು ಮೂಗು ಹಾಗೂ ಗಲ್ಲದ ಸೆಳೆತವು, ಒಬ್ಬ ವ್ಯಕ್ತಿಯು ನಿಜವಾಗಿ ಇರುವದಕ್ಕಿಂತ ಹೆಚ್ಚು ವೃದ್ಧನಾಗಿ ಕಾಣುವಂತೆ ಮಾಡುತ್ತವೆ. ಇದು ಒಬ್ಬನ ಆತ್ಮ ವಿಶ್ವಾಸವನ್ನು ಪ್ರಭಾವಿಸ ಸಾಧ್ಯವಿದೆ ಮತ್ತು ಕೆಲವರಿಗೆ ಮನೋವೈಜ್ಞಾನಿಕ ಕ್ಷೋಭೆಯನ್ನೂ ಉಂಟುಮಾಡಬಹುದು.
ಒಂದು ಹಲ್ಲಿನ ನಷ್ಟವು ದಂತದ ಕಮಾನಿನ ಕುಸಿತಕ್ಕೆ ನಡಿಸಬಹುದು. ನಮ್ಮ ಹಲ್ಲುಗಳು, ರೋಮನ್ ಕಮಾನಿನಲ್ಲಿರುವ ಕಲ್ಲುಗಳಂತೆ, ಪರಸ್ಪರವಾಗಿ ಅವಲಂಬಿತವಾಗಿವೆ. ಆದುದರಿಂದ, ಒಬ್ಬ “ನೆರೆಯವನ” ನಷ್ಟವು ಬೇರೆ ಹಲ್ಲುಗಳು ದೂರ ಸರಿಯುವಂತೆ ಮಾಡುತ್ತದೆ. ಈ ಚಲನೆಯು ಉಳಿದಿರುವ ಹಲ್ಲುಗಳ ನಡುವೆ ಅಂತರವನ್ನು ಉಂಟುಮಾಡಿ, ಒಸಡಿನ ಪ್ರದೇಶದಲ್ಲಿ ಆಹಾರ ಕಣಗಳು ಹೋಗಿ ಸೇರುವಂತೆ ಮಾಡಬಹುದು, ಮತ್ತು ಇದು ಅನೇಕ ಬಾರಿ ಒಸಡಿನ ಉರಿಯೂತಕ್ಕೆ ನಡಿಸುತ್ತದೆ. ಹಲ್ಲಿನ ಚಲನೆಯು ಹಲ್ಲುಗಳ ಸಾಲುಗಳನ್ನು ಕೆಡಿಸಿ, ಅಗಿಯುವ ಸಮಸ್ಯೆಗಳನ್ನು ಉಂಟುಮಾಡಬಹುದು.
ಅವುಗಳು ಹೋಲುವ ವಿಧ
ನೈಸರ್ಗಿಕ ಹಾಗೂ ಕೃತಕ ಹಲ್ಲುಗಳ ನಡುವೆ ಇರುವ ಮುಖ್ಯವಾದ ವ್ಯತ್ಯಾಸವು ಏನೆಂದರೆ, ನೈಸರ್ಗಿಕವಾದ ಹಲ್ಲುಗಳು ದವಡೆಗಳ ಎಲುಬಿನಲ್ಲಿ ದೃಢವಾಗಿ ಬೇರೂರಿವೆ. ನಮ್ಮ ಆಹಾರವನ್ನು ಬಹಳ ಸೂಕ್ಷ್ಮವಾದ ತುಂಡುಗಳಾಗಿ, ಪರಿಣಾಮಕಾರಿಯಾಗಿ ಕಡಿಯಲು, ಬೇರ್ಪಡಿಸಲು, ಮತ್ತು ಅರೆಯಲು ಇದು ಅವುಗಳಿಗೆ ಸಾಧ್ಯ ಮಾಡುತ್ತದೆ. ಕೆಳಗಿನ ಹಲ್ಲುಗಳು ಬಲವಾದ ಅರೆಯುವ ಹಾಗೂ ಛೇದಿಸುವ ಕಾರ್ಯದೊಡನೆ ಮೇಲಿನ ಹಲ್ಲುಗಳ ಅಡವ್ಡಾಗಿ ಚಲಿಸುತ್ತವೆ.
ಇನ್ನೊಂದು ಎಡೆಯಲ್ಲಿ, ಸಂಪೂರ್ಣ ದಂತಪಂಕ್ತಿಗಳು, ಒಸಡುಗಳ ಯಾ ಏಣುಗಳ ಮೇಲೆ ಕೇವಲ ಆತುಕೊಂಡಿವೆ. ಅವು ತಮ್ಮ ಸ್ಥಳಗಳಲ್ಲಿ, ನಾಲಗೆ, ಕೆನ್ನೆಗಳು, ಮತ್ತು ಅಂಟಿಕೊಳ್ಳುವಿಕೆಯಿಂದ ತಯಾರಾದ ಬಲಹೀನ ಶಕಿಗ್ತಳಿಂದ ಮಾತ್ರ ಹಿಡಿದಿಡಲ್ಪಡುತ್ತವೆ. ದಂತಪಂಕ್ತಿಗಳು ನೈಜವಾದ ಹಲ್ಲುಗಳಂತೆ ಆಧಾರಗೊಂಡಿರದೆ ಇರುವುದರಿಂದ, ಅವು ಸುಲಭವಾಗಿ ಸ್ಥಳಾಂತರಗೊಳ್ಳಬಲ್ಲವು.
ಆದುದರಿಂದ ದಂತಪಂಕ್ತಿಗಳ ಕಾರ್ಯಯೋಗ್ಯತೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ. ಯಾವ ದಂತಪಂಕ್ತಿಗೂ ನೈಜವಾದ ಹಲ್ಲುಗಳ ಕಾರ್ಯ ಸಾಮರ್ಥ್ಯ ಇಲ್ಲ. ದವಡೆಗಳ ಆಕಾರ ಮತ್ತು ಅಳತೆ, ಅಂಗಾಂಶಗಳ ಬಗೆಗಳು, ಹಾಗೂ ಧರಿಸಿಕೊಳ್ಳುವವರ ಮಾನಸಿಕ ಭಾವನೆ, ಮತ್ತು ಅವುಗಳನ್ನು ಉಪಯೋಗಿಸಲು ಕಲಿಯುವ ಸಾಮರ್ಥ್ಯವು ಕೂಡ, ದಂತಪಂಕ್ತಿಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದು ಸೂಚಿಸುವ ಅಂಶಗಳಾಗಿವೆ. ಅವುಗಳ ಮುಖ್ಯ ನ್ಯೂನತೆಯು ಅವುಗಳ ಸ್ಥಿರತೆಯ ಕೊರತೆಯೇ. ಆದರೂ, ತೋರಿಕೆಯ ಸಂಬಂಧದಲ್ಲಿ, ಕೃತಕ ಹಲ್ಲುಗಳು ನೈಜವಾದ ಹಲ್ಲುಗಳಿಂದ ಅಭಿನ್ನವಾಗಿ ತೋರುವಂತೆ ಮಾಡಸಾಧ್ಯವಿದೆ.
ಕೆಲವೊಮ್ಮೆ, ಅಸಂತೋಷಕರವಾಗಿ, ದಂತಪಂಕ್ತಿಗಳ ಹಾಕಿಕೊಳ್ಳುವಿಕೆ ಒಬ್ಬ ವ್ಯಕ್ತಿಗೆ ನೈಜವಾದ ಹಲ್ಲುಗಳ ವಿವೇಕ, ರಚನೆ, ಮತ್ತು ಪ್ರಾಯೋಗಿಕತೆಯನ್ನು ಮನದಟ್ಟು ಮಾಡುತ್ತದೆ. ಮನುಷ್ಯರು ದುರ್ಬಲವಾಗಿ ಮೂಲಭೂತವಾದದ್ದನ್ನು ನಕಲು ಮಾಡಬಹುದು, ಆದರೆ ಅದ್ಭುತಕರವಾದ ಕಾರ್ಯಯೋಗ್ಯತೆಯ ಅದೇ ಮಟ್ಟವನ್ನು ಎಂದಿಗೂ ತಲುಪಲಾರರು.
ನಿಮ್ಮ ಪರಿಸ್ಥಿತಿಯು, ನಿಮಗೆ ಪೂರ್ಣ ಯಾ ಆಂಶಿಕ ದಂತಪಂಕ್ತಿಗಳ ಅಗತ್ಯ ನಿಮಗೆ ಇದೆಯೋ ಎಂಬುದಕ್ಕೆ ಗಂಭೀರವಾದ ಯೋಚನೆ ಕೊಡುವಂತೆ ಮಾಡಬಹುದು. ನಿರ್ಣಯವು, ನಿಶ್ಚಯವಾಗಿಯೂ, ನಿಮ್ಮದಾಗಿರುವುದು, ಆದರೂ ಅದರ ಪ್ರಯೋಜನಗಳನ್ನು ಪರಿಗಣಿಸುವುದು ವಿವೇಕವೆಂದು ತೋರುತ್ತದೆ. ಅವು ಆಗಬಲ್ಲ ಜೀರ್ಣಶಕ್ತಿಯ ಸಮಸ್ಯೆಗಳನ್ನು ತಡೆಯಲು, ನಿಮಗೆ ಬೇಕಾದ ಪೌಷ್ಟಿಕತೆಯನ್ನು ಪಡೆಯಲು, ಮಾತಾಡುವ ನಿಮ್ಮ ಸಾಮರ್ಥ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡಬಹುದು. ನಿಮ್ಮ ವೈಯಕ್ತಿಕ ತೋರಿಕೆಯನ್ನು ನಿಜವಾಗಿಯೂ ಉತ್ತಮಗೊಳಿಸಬಹುದು.
ದಂತಪಂಕ್ತಿಯನ್ನು ಹಾಕಿಕೊಳ್ಳುವವರು ತಮ್ಮ ನೈಜ ಹಲ್ಲುಗಳ ನಷ್ಟಕ್ಕೆ ಸಾಮಾನ್ಯವಾಗಿ ಪ್ರಲಾಪಿಸಿದರೂ, ಕೃತಕ ಹಲ್ಲುಗಳ ವಿಕಾಸವು ಬಹಳ ಮಟ್ಟಿಗೆ ವೈಯಕ್ತಿಕ ತೃಪ್ತಿ ಹಾಗೂ ಲೋಕವ್ಯಾಪಕವಾಗಿ ಲಕ್ಷಾಂತರ ಜನರ ಯೋಗಕ್ಷೇಮದ ಭಾವನೆಗೆ ನೆರವು ನೀಡಿದೆ.
[ಅಧ್ಯಯನ ಪ್ರಶ್ನೆಗಳು]
a ಈ ಲೇಖನದಲ್ಲಿ, “ದಂತಪಂಕ್ತಿಗಳು” ಎಂಬ ಶಬ್ಧವು ಕಳೆದುಕೊಂಡ ಹಲ್ಲುಗಳನ್ನು ಸ್ಥಾನಭರ್ತಿಮಾಡುವ ತಯಾರಿಸಿದ ಸಾಧನಗಳನ್ನು ಸೂಚಿಸುತ್ತದೆ. ಎಲ್ಲಾ ನೈಸರ್ಗಿಕ ಹಲ್ಲುಗಳು ಇಲ್ಲದಿರುವಾಗ, ಒಂದು ಸಂಪೂರ್ಣ ದಂತಪಂಕ್ತಿಯ ಆವಶ್ಯವಿದೆ. ಆದರೂ, ಕೆಲವು ಹಲ್ಲುಗಳು ಉಳಿದರೆ, ಒಂದು ಆಂಶಿಕ ದಂತಪಂಕ್ತಿಯನ್ನು ಉಪಯೋಗಿಸಲಾಗಬಹುದು. ಈ ಲೇಖನವು ಸಂಪೂರ್ಣ ಹಾಗೂ ತೆಗೆಯಬಹುದಾದ ಆಂಶಿಕ ದಂತಪಂಕ್ತಿಗಳ ಕಡೆಗೆ ದೃಷ್ಟಿಹಾಯಿಸುತ್ತದೆ.
[ಪುಟ 11 ರಲ್ಲಿರುವ ಚೌಕ]
ನಿಮ್ಮ ಹಲ್ಲಿನ ಬೆಲೆಪಟ್ಟಿಯ ವೆಚ್ಚವನ್ನು ಕಡಿಮೆಗೊಳಿಸುವುದು
ದಂತವೈದ್ಯ ಯಾ ಒಬ್ಬ ಆರ್ತೋಡಾಂಟಿಸ್ಟ್ನ ಒಂದು ಭೇಟಿಯು ಅನೇಕ ವೇಳೆ ಒಂದು ಭಾರಿಯಾದ ಬೆಲೆಪಟ್ಟಿಗೆ ಕಾರಣವಾಗಬಹುದು. ಆದರೂ, ನಿಮ್ಮ ಮಕ್ಕಳಿಗೆ ಸಹಾಯ ಮಾಡಬಹುದಾದ, ಕೆಲವೊಂದು ಕಂಡುಹಿಡಿತಗಳಿಂದ, ನೀವು ಪ್ರೋತ್ಸಾಹಿಸಲ್ಪಡಬಹುದು.
ದ ನ್ಯೂ ಯಾರ್ಕ್ ಟೈಮ್ಸ್ ವರದಿಸುವುದು, “ಅಮೆರಿಕನರಲ್ಲಿ ಸ್ಥಳಾಂತರಗೊಂಡ ಹಲ್ಲುಗಳು ಮತ್ತು ವಿಕಾರ ರೂಪಗೊಂಡ ದವಡೆಗಳ ಹೆಚ್ಚಾದ ಸಂಭವಕ್ಕೆ, ನಮ್ಮ ಅತಿ ಶುದ್ಧೀಕರಿಸಲ್ಪಟ್ಟ ಆಹಾರಕ್ರಮವು ಕಾರಣವಾಗಿರಬಹುದು.” ಜೋರಾಗಿ ಅಗಿಯುವಂತೆ ಅಗತ್ಯವಿರುವ ಆಹಾರವು “ದವಡೆಯ ಬೆಳವಣಿಗೆಯನ್ನು ಪ್ರಚೋದಿಸಿ (ಹಲ್ಲುಗಳು ಕಿಕ್ಕಿರಿಯದೆ ಸಾಕಷ್ಟು ವಿಶಾಲ ಸ್ಥಳದಲ್ಲಿ ಇರುವಂತೆ ಮಾಡುತ್ತದೆ), ಕಾಯಂ ಹಲ್ಲುಗಳು ಯೋಗ್ಯವಾಗಿ ಏಳುವಂತೆ ನಡೆಸಿ, ಮುಖದ ಮತ್ತು ಬಾಯಿಯ ಕುಳಿಯ ಬೆಳವಣಿಗೆಯನ್ನು ಸಂಘಟಿಸುತ್ತದೆ,” ಎಂಬುದು ಸಿದ್ಧಾಂತವಾಗಿದೆ.
ವಿಜ್ಞಾನಿಗಳು ಮಂಗಗಳಿಗೆ ಗಟ್ಟಿಯಾದ ಹಾಗೂ ನಯವಾದ ಆಹಾರವನ್ನು ಕೊಟ್ಟು ಈ ಸಿದ್ಧಾಂತವನ್ನು ದೃಡಪಡಿಸಲು ಪ್ರಯತ್ನಿಸಿದರು. ಫಲಿತಾಂಶವೇನು? ಗಟ್ಟಿಯಾದ ಆಹಾರದ ಮೇಲಿದ್ದ ಮಂಗಗಳಿಗೆ ಬಹಳ ಕಡಿಮೆ “ಹಲ್ಲಿನ ಅಸಾಮಾನ್ಯತೆಗಳು” ಇದ್ದವು. ಆದುದರಿಂದ ನಿಮ್ಮ ಮಗುವಿಗೆ ರಭಸವಾಗಿ ಅಗಿಯುವ ಅಗತ್ಯವಿರುವ ಒಂದು ಆಹಾರವು ತಾನೇ ಹಲ್ಲಿನ ಬೆಲೆಪಟ್ಟಿಯಿಂದ ಒಂದು ತುತ್ತನ್ನು ತೆಗೆಯುವ ವಿಧವಾಗಿ ಪರಿಣಮಿಸಬಹುದು. ಇದನ್ನು ಮಾಡುವ ಇನ್ನೊಂದು ಮಾರ್ಗವು, ನಿಮ್ಮ ಮಗುವಿಗೆ ಕ್ರಮವಾಗಿ ಹಲ್ಲುಜ್ಜುವ ಮತ್ತು ನಾರಿನಿಂದ ಶುದ್ಧೀಕರಿಸುವ ಅಭ್ಯಾಸವನ್ನು ಬೆಳೆಸಲು ಸಹಾಯ ಮಾಡುವದೇ ಆಗಿದೆ.
[ಪುಟ 12 ರಲ್ಲಿರುವ ಚಿತ್ರ]
ನಮ್ಮ ಹಲ್ಲುಗಳು ಪರಸ್ಪರವಾಗಿ ಅವಲಂಬಿತವಾಗಿವೆ. ಅವುಗಳನ್ನು ತಮ್ಮ ಸ್ಥಳದಲ್ಲಿ ಇಡಲು “ನೆರೆಯವರು” ಇಲ್ಲದಿರುವಾಗ, ಹಲ್ಲುಗಳು ಬೇಗನೆ ದೂರ ಸರಿದು ಬೇರೆ ಹಲ್ಲುಗಳನ್ನು ಪ್ರತಿಕೂಲವಾಗಿ ಪ್ರಭಾವಿಸುತ್ತವೆ