ಭಾಗ 3
ವಿಜ್ಞಾನ—ಸತ್ಯಕ್ಕಾಗಿ ಮಾನವ ಕುಲದ ಮುಂದುವರಿಯುತ್ತಿರುವ ತಲಾಷು
ಧರ್ಮ ಮತ್ತು ವಿಜ್ಞಾನ—ಒಂದು ನ್ಯೂನ ಮಿಶ್ರಣ
ವೈಜ್ಞಾನಿಕ ಸತ್ಯಕ್ಕಾಗಿ ಸಾವಿರಾರು ವರುಷಗಳ ಹುಡುಕಾಟವು ಅನಂತರದ ಸಂಶೋಧನೆಗೆ ಒಂದು ಬಲವಾದ ಬುನಾದಿಯನ್ನು ಸ್ಥಾಪಿಸಿರುವಂತೆ ಕಂಡಿತು. ಮುಂದಿನ ಪ್ರಗತಿಯ ದಾರಿಯಲ್ಲಿ ಯಾವುದೂ ನಿಲ್ಲಲಾರದೆಂಬುದು ಖಂಡಿತ. ಆದರೂ, ದ ಬುಕ್ ಆಫ್ ಪಾಪ್ಯುಲರ್ ಸೈಎನ್ಸ್ ಹೇಳುವುದು, “ಎ. ಡಿ. ಮೂರು, ನಾಲ್ಕು, ಮತ್ತು ಐದನೇ ಶತಮಾನಗಳಲ್ಲಿ ವಿಜ್ಞಾನವು ಕಾರ್ಯತಃ ಕೇಡನ್ನನುಭವಿಸಿತು.”
ಈ ಪರಿಸ್ಥಿತಿಗೆ ಮಹತ್ವದ್ದಾಗಿ ಎರಡು ಘಟನೆಗಳು ನೆರವಾದವು. ಮೊದಲನೇ ಶತಮಾನದಲ್ಲಿ ಯೇಸು ಕ್ರಿಸ್ತನೊಂದಿಗೆ ಒಂದು ಹೊಸ ಧಾರ್ಮಿಕ ಯುಗವು ಒಳತರಲ್ಪಟ್ಟಿತು. ಮತ್ತು ಹಲವಾರು ದಶಕಗಳ ಮುಂಚೆ, ಸಾ.ಶ.ಪೂ. 31ರಲ್ಲಿ, ರೋಮನ್ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಒಂದು ಹೊಸ ರಾಜಕೀಯ ಯುಗವು ಜನಿಸಿತು.
ಅವರ ಮುಂಚೆ ಇದ್ದ ಗ್ರೀಕ್ ತತ್ವಜ್ಞಾನಿಗಳಂತಿರದೆ, ರೋಮನರು “ಅಮೂರ್ತ ಸತ್ಯಕ್ಕಾಗಿ ಶೋಧದಲ್ಲಿರುವುದಕ್ಕಿಂತ, ಜೀವಿತದ ಪ್ರತಿನಿತ್ಯದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಹೆಚ್ಚು ಅಭಿರುಚಿಯುಳ್ಳವರಾಗಿದ್ದರು,” ಎಂದು ಮೇಲೆ ಪ್ರಸ್ತಾಪಿಸಲ್ಪಟ್ಟ ಆಧಾರ ಗ್ರಂಥವು ಹೇಳುತ್ತದೆ. ಹಾಗಾದರೆ ತರ್ಕಬದ್ಧವಾಗಿಯೆ, “ಶುದ್ಧ ವಿಜ್ಞಾನಕ್ಕಾಗಿ ಅವರ ನೆರವುಗಳು ಕೊಂಚ ಮಟ್ಟದ್ದಾಗಿದ್ದವು.”
ಆದಾಗ್ಯೂ, ರೋಮನರು ಆ ಸಮಯದ ತನಕ ಶೇಖರವಾಗಿದ್ದ ವೈಜ್ಞಾನಿಕ ಜ್ಞಾನವನ್ನು ದಾಟಿಸುವುದರಲ್ಲಿ ಸಾಧನವಾಗಿದ್ದರು. ಉದಾಹರಣೆಗಾಗಿ, ಪ್ಲಾಯಿನಿ., ಎಲರ್ಡ್ ನೆಟ್ಯುರಲ್ ಹಿಸ್ಟರಿ ಎಂದು ಕರೆಯಲಾದ ವೈಜ್ಞಾನಿಕ ವಿಷಯ ಸಂಗ್ರಹಣೆಯನ್ನು ಮೊದಲ ಶತಮಾನದಲ್ಲಿ ಮಾಡಿದನು. ತಪ್ಪಿಲ್ಲದೆ ಇಲ್ಲದಿರುವುದಾದರೂ, ಅದು ನಂತರದ ಸಂತತಿಗಳಿಗೆ ನಷ್ಟವಾಗಬಹುದಾದ ನಾನಾ ಬಗೆಗಳ ವೈಜ್ಞಾನಿಕ ಮಾಹಿತಿಯನ್ನು ಉಳಿಸಿತು.
ಧರ್ಮವು ಸಂಬಂಧಿಸಿರುವ ಮಟ್ಟಿಗೆ, ತೀವ್ರಗತಿಯಲ್ಲಿ ವಿಸ್ತಾರಗೊಳ್ಳುತ್ತಿದ್ದ ಕ್ರೈಸ್ತ ಸಭೆಯು ಆಗಿನ ವೈಜ್ಞಾನಿಕ ತಲಾಷಿನಲ್ಲಿ ಒಳಗೂಡಿರಲಿಲ್ಲ. ಕ್ರೈಸ್ತರು ಅದಕ್ಕೆ ವಿರೋಧವಾಗಿದ್ದರೆಂದಲ್ಲ, ಆದರೆ ಸ್ವತಃ ಕ್ರಿಸ್ತನ ಮೂಲಕ ಇಡಲ್ಪಟ್ಟಂತೆ, ಧಾರ್ಮಿಕ ಸತ್ಯವನ್ನು ತಿಳಿದುಕೊಳ್ಳುವುದರಲ್ಲಿ ಮತ್ತು ಹರಡುವುದರಲ್ಲಿ ಕ್ರೈಸ್ತ ಪ್ರಾಶಸ್ತ್ಯವು ಸರಳವಾಗಿ ಇತ್ತು.—ಮತ್ತಾಯ 6:33; 28:19, 20.
ಮೊದಲನೇ ಶತಮಾನವು ಅಂತ್ಯವಾಗುವುದಕ್ಕೆ ಮುಂಚೆ, ಹಬ್ಬಿಸುವಂತೆ ಅವರಿಗೆ ಆಜ್ಞಾಪಿಸಿದ ಧಾರ್ಮಿಕ ಸತ್ಯವನ್ನು ಮತಭ್ರಷ್ಟ ಕ್ರೈಸ್ತರು ಆಗಲೆ ಕಲಬೆರಕೆ ಮಾಡಲಾರಂಭಿಸಿದ್ದರು. ಇದು ಮುಂತಿಳಿಸಲ್ಪಟ್ಟಂತೆಯೆ, ಅನಂತರ ಕ್ರೈಸ್ತತ್ವದ ಒಂದು ಧರ್ಮಭ್ರಷ್ಟ ರೂಪವನ್ನು ಸ್ಥಾಪಿಸುವುದಕ್ಕೆ ನಡಿಸಿತು. (ಅ. ಕೃತ್ಯಗಳು 20:30; 2 ಥೆಸಲೊನೀಕ 2:3; 1 ತಿಮೊಥೆಯ 4:1) ಧಾರ್ಮಿಕ ಸತ್ಯದ ಅವರ ತೊರೆಯುವಿಕೆಯು, ವೈಜ್ಞಾನಿಕ ಸತ್ಯದ ಕಡೆಗೆ ಉದಾಸೀನತೆಯ—ಕೆಲವೊಮ್ಮೆ ವೈರತ್ವದ ಕೂಡ—ಒಂದು ಮನೋಭಾವದೊಂದಿಗೆ ಜೊತೆಗೂಡಿರುವುದನ್ನು ತದನಂತರದ ಘಟನೆಗಳು ತೋರಿಸಿಕೊಟ್ಟವು.
“ಕ್ರೈಸ್ತ” ಯೂರೋಪ್ ಅದರ ನೇತೃತ್ವವನ್ನು ಕಳೆದುಕೊಳ್ಳುತ್ತದೆ
ಮಧ್ಯ ಯುಗಗಳಲ್ಲಿ (5ರಿಂದ 15ನೇ ಶತಮಾನದ ವರೆಗೆ), “ಯೂರೋಪಿನಲ್ಲಿ, ಪಂಡಿತರು ನಿಸರ್ಗದ ಅಧ್ಯಯನಕ್ಕಿಂತ, ದೇವತಾಶಾಸ್ತ್ರದಲ್ಲಿ ಯಾ ಧರ್ಮದ ಅಧ್ಯಯನದಲ್ಲಿ ಹೆಚ್ಚು ಆಸಕ್ತರಿದ್ದರು,” ಎಂದು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ವಿವರಿಸುತ್ತದೆ. ಮತ್ತು ಈ “ನಿಸರ್ಗದ ಮೇಲಿನ ಶೋಧನೆಗಿಂತ ರಕ್ಷಣೆಯ ಮೇಲೆ ಒತ್ತು ಹಾಕುವಿಕೆಯು ವಿಜ್ಞಾನಕ್ಕೆ ಒಂದು ಉತ್ತೇಜಕವಾಗುವುದಕ್ಕಿಂತ ಹೆಚ್ಚಾಗಿ ಒಂದು ಆತಂಕವಾಗಿತ್ತು,” ಎಂದು ಕಾಲಿಯರ್ ಎನ್ಸೈಕ್ಲೊಪೀಡಿಯ ಸೂಚಿಸುತ್ತದೆ.
ಕ್ರಿಸ್ತನ ಬೋಧನೆಗಳು ಅಂಥ ಒಂದು ಆತಂಕವಾಗುವಂತೆ ಉದ್ದೇಶಿಸಲ್ಪಟ್ಟಿರಲ್ಲಿಲ. ಆದಾಗ್ಯೂ, ಅಮರತ್ವದ ಆತ್ಮವೆಂಬುದರ ರಕ್ಷಣೆಯ ಅತಿಯಾದ ಒತ್ತಿ ಹೇಳುವಿಕೆ ಸೇರಿದ್ದು, ಸುಳ್ಳು ಧಾರ್ಮಿಕ ಕಲ್ಪನೆಗಳ ಕ್ರೈಸ್ತ ಪ್ರಪಂಚದ ಚಕ್ರವ್ಯೂಹವು, ಈ ಬೆಳವಣಿಗೆಯನ್ನು ಪ್ರೋತ್ಸಾಹಿಸಿತು. ಹೆಚ್ಚಿನ ಕಲಿಯುವಿಕೆಯು ಚರ್ಚಿನ ಹತೋಟಿಯಡಿಯಲ್ಲಿತ್ತು ಮತ್ತು ಮುಖ್ಯವಾಗಿ ಸನ್ಯಾಸಿಮಠದಲ್ಲಿ ಬೆಳೆಸಲಾಗುತಿತ್ತು. ಈ ಧಾರ್ಮಿಕ ಮನೋಭಾವವು ವೈಜ್ಞಾನಿಕ ಸತ್ಯಕ್ಕಾಗಿರುವ ತಲಾಷನ್ನು ನಿಧಾನಿಸಿತು.
ಸಾಮಾನ್ಯ ಶಕದ ಅತಿ ಆರಂಭದಿಂದಲೇ ವೈಜ್ಞಾನಿಕ ವಿಷಯಗಳು ದೇವತಾಶಾಸ್ತ್ರದ ತುಲನೆಯಲ್ಲಿ ಎರಡನೇ ಸ್ಥಾನವನ್ನು ತಕ್ಕೊಂಡಿತು. ವ್ಯಾವಹಾರ್ಯವಾಗಿ ಪ್ರಸ್ತಾಪಿಸ ಯೋಗ್ಯವಾಗಿರುವ ಒಂದೇ ವೈಜ್ಞಾನಿಕ ಅಭಿವೃದ್ಧಿಯು ವೈದ್ಯಕೀಯ ರಂಗದಲ್ಲಿ ಮಾಡಿದ್ದಾಗಿದೆ. ಉದಾಹರಣೆಗಾಗಿ, “ಹಿಪೊಕ್ರ್ಯಾಟ್ಸ್ ಆಫ್ ದ ರೋಮನ್ಸ್” ಎಂದು ಕರೆಯಲ್ಪಟ್ಟಿರುವ ಸಾ.ಶ. ಮೊದಲನೇ ಶತಮಾನದ ರೋಮನ್ ಬರಹಗಾರ ಅಲುಸ್ ಕೆಲ್ಸುಸ್, ಈಗ ವೈದ್ಯಕೀಯ ಶ್ರೇಷ್ಠತೆ ಎಂದು ಗಮನಿಸಲಾಗುವಂಥಹದ್ದನ್ನು ಬರೆದನು. ನೀರೋವಿನ ರೋಮನ್ ಸೇನೆಗಳೊಂದಿಗೆ ಶಸ್ತ್ರ ವೈದ್ಯನಾಗಿದ್ದ ಗ್ರೀಕ್ ಔಷಧಶಾಸ್ತ್ರಜ್ಞ ಪೆಡಾನಿಯಸ್ ಡೈಯಸ್ಕೊರಡಿಜ್, ಅನೇಕ ಶತಮಾನಗಳ ವರೆಗೆ ಸವಿಸ್ತಾರವಾಗಿ ಬಳಸಲಾಗಿದ್ದ ಪ್ರಮುಖ ಔಷಧಶಾಸ್ತ್ರದ ಪಠ್ಯ ಪುಸ್ತಕವನ್ನು ಪೂರ್ಣಗೊಳಿಸಿದನು. ಎರಡನೇ ಶತಮಾನದ ಗ್ರೀಕನಾದ, ಗ್ಯಾಲನ್, ಪ್ರಾಯೋಗಿಕ ಶರೀರ ವಿಜ್ಞಾನವನ್ನು ಕಂಡುಹಿಡಿಯುವುದರ ಮೂಲಕ, ಅವನ ಸಮಯದಿಂದ ಮಧ್ಯ ಯುಗದವರೆಗೆ ವೈದ್ಯಕೀಯ ವಾದ ಮತ್ತು ಆಚರಣೆಯನ್ನು ಪ್ರಭಾವಿಸಿದನು.
ವೈಜ್ಞಾನಿಕ ಜಡತೆಯ ಕಾಲಾವಧಿಯು 15ನೇ ಶತಮಾನದ ಅನಂತರದ ವರೆಗೂ ಮುಂದುವರಿಯಿತು. ಯೂರೋಪಿನ ವಿಜ್ಞಾನಿಗಳು ಈ ಸಮಯದಲ್ಲಿ ಕಂಡುಹಿಡಿಯುವಿಕೆಗಳನ್ನು ಮಾಡಿದ್ದರು ನಿಜ, ಆದರೆ ಹೆಚ್ಚಿನಾಂಶ ಅವುಗಳು ಮೂಲಭೂತವಾದವುಗಳಾಗಿರಲಿಲ್ಲ. ಟಯಿಮ್ ಪತ್ರಿಕೆ ಗಮನಿಸಿದ್ದು: “[ಚೀನಿಯರು] ವಿಜ್ಞಾನದ ಪ್ರಥಮ ಗುರುಗಳಾಗಿದ್ದರು. ಯೂರೋಪಿಯನರಿಗಿಂತ ಬಹಳ ಮುಂಚೆ, ಕೈವಾರವನ್ನು ಉಪಯೋಗಿಸಲು, ಕಾಗದ ಮತ್ತು ಬಂದೂಕಿನ ಹಾರುಮದ್ದು ಮಾಡಲು, [ಮತ್ತು] ಚಲಿಸುವ ನಮೂನೆಯೊಂದಿಗೆ ಮುದ್ರಿಸಲು ಅವರಿಗೆ ತಿಳಿದಿತ್ತು.”
ಹೀಗೆ, “ಕ್ರೈಸ್ತ” ಯೂರೋಪಿನಲ್ಲಿ ವೈಜ್ಞಾನಿಕ ಆಲೋಚನೆಯ ಸಾಮಾನ್ಯ ನಿರ್ವಾತದ ಕಾರಣ, ಅಕ್ರೈಸ್ತ ಸಂಸ್ಕೃತಿಗಳು ಮುಂದಾಳುತನವನ್ನು ವಹಿಸಿದವು.
ವೈಜ್ಞಾನಿಕ ಅಭಿವೃದ್ಧಿ
ಒಂಬತ್ತನೇ ಶತಮಾನದೊಳಗೆ, ಆ್ಯರಬ್ ವಿಜ್ಞಾನಿಗಳು ವಿಜ್ಞಾನದ ಸಂಗತಿಗಳಲ್ಲಿ ತೀವ್ರವಾಗಿ ಮುಂದಾಳುಗಳಾಗುತ್ತಿದ್ದರು. ನಿರ್ದಿಷ್ಟವಾಗಿ 10ನೇ ಮತ್ತು 11ನೇ ಶತಮಾನಗಳಲ್ಲಿ—ಕ್ರೈಸ್ತಪ್ರಪಂಚವು ಅನುತ್ಪಾದಕತೆಯಲ್ಲಿ ಮುಂದರಿಯುತ್ತಿದ್ದಾಗ—ಅವರು ಪೂರೈಕೆಯ ಸುವರ್ಣ ಯುಗವನ್ನು ಆನಂದಿಸಿದರು. ಅವರು ಔಷಧಿ, ರಸಾಯನ ಶಾಸ್ತ್ರ, ಸಸ್ಯ ವಿಜ್ಞಾನ, ಭೌತ ಶಾಸ್ತ್ರ, ಖಗೋಳ ಶಾಸ್ತ್ರ, ಮತ್ತು ಎಲ್ಲದಕ್ಕಿಂತ ಮೇಲಾಗಿ, ಗಣಿತ ಶಾಸ್ತ್ರದಲ್ಲಿ ಅಮೂಲ್ಯ ಕಾಣಿಕೆಗಳನ್ನು ಮಾಡಿದರು. (ಚೌಕಟ್ಟನ್ನು ನೋಡಿರಿ, ಪುಟ 18.) “ಆಧುನಿಕ ತ್ರಿಕೋನಮಿತಿಯೊಂದಿಗೆ ಬೀಜಗಣಿತ ಮತ್ತು ರೇಖಾಗಣಿತವು ಬಹು ಮಟ್ಟಿಗೆ ಆ್ಯರಬರ ಸೃಷ್ಟಿಯಾಗಿದೆ,” ಎಂದು ಕೊಲಂಬಿಯ ಯೂನಿವರ್ಸಿಟಿಯಲ್ಲಿ ಆ್ಯರಬಿಕ್ ಭಾಷೆಯ ಜಂಟಿ ಪ್ರೊಫೆಸರರಾದ ಮಯೆನ್ ಜೆಡ್. ಮದಿನರು ಹೇಳುತ್ತಾರೆ.
ಈ ವೈಜ್ಞಾನಿಕ ಜ್ಞಾನದ ಹೆಚ್ಚಿನಾಂಶವು ಮೂಲಭೂತವಾಗಿತ್ತು. ಆದರೆ ಅದರಲ್ಲಿ ಕೆಲವು ಗ್ರೀಕ್ ತತ್ವಜ್ಞಾನದ ವಿಶಾಲ ಆಧಾರದ ಮೇಲೆ ನೆಲೆಸಿತ್ತು ಮತ್ತು ಆಶ್ಚರ್ಯಕರವಾಗಿ, ಧಾರ್ಮಿಕ ಒಳಗೂಡಿಸುವಿಕೆಯ ಮೂಲಕ ಹೊರ ತರಲಾಗಿತ್ತು.
ತುಲನಾತ್ಮಕವಾಗಿ ಸಾಮಾನ್ಯ ಶಕದ ಆರಂಭದಲ್ಲಿ, ಕ್ರೈಸ್ತ ಪ್ರಪಂಚವು ಪರ್ಷಿಯದೊಳಗೆ ಮತ್ತು ತದನಂತರ ಅರೇಬಿಯ ಮತ್ತು ಭಾರತದೊಳಗೆ ಹರಡಿತು. ಐದನೆಯ ಶತಮಾನದಲ್ಲಿ ಕಾನ್ಸ್ಟಂಟಿನೋಪಲಿನ ಕುಲಪತಿ, ನೆಸ್ಟೋರಿಯಸ್, ಈಸ್ಟರ್ನ್ ಚರ್ಚ್ನೊಳಗೆ ಒಡಕಿಗೆ ನಡೆಸಿದ ವಾಗ್ವಾದದಲ್ಲಿ ಗೊಂದಲಕ್ಕೀಡಾದನು. ಇದು ನೆಸ್ಟೋರಿಯನ್ಸ್ ಎಂಬ ಒಡೆದು ಹೋದ ಗುಂಪು ರೂಪುಗೊಳ್ಳುವುದಕ್ಕೆ ನಡೆಸಿತು.
ಏಳನೇ ಶತಮಾನದಲ್ಲಿ, ಲೋಕ ದೃಶ್ಯದ ಮೇಲೆ ಇಸ್ಲಾಮಿನ ಹೊಸ ಧರ್ಮವು ಒಮ್ಮೆಗೆ ಕಾಣಿಸಿಕೊಂಡು, ಅದರ ವಿಸ್ತರಣೆಯ ಕಾರ್ಯಾಚರಣೆಯನ್ನು ಆರಂಭಿಸಿದಾಗ, ನೆಸ್ಟೋರಿಯನರು ತಮ್ಮ ಜ್ಞಾನವನ್ನು ತಮ್ಮನ್ನು ಜಯಿಸಿದ ಆ್ಯರಬರಿಗೆ ದಾಟಿಸಲು ಚುರುಕಾಗಿದ್ದರು. ದ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ಗನುಸಾರ, “ಗ್ರೀಕ್ ಮೂಲಪಾಠಗಳನ್ನು ಸಿರಿಯಾಕ್ ಮತ್ತು ಅನಂತರ ಆ್ಯರಬಿಕ್ದೊಳಗೆ ಭಾಷಾಂತರಿಸುವುದರ ಮೂಲಕ ಗ್ರೀಕ್ ವಿಜ್ಞಾನ ಮತ್ತು ತತ್ವಜ್ಞಾನಕ್ಕೆ ಒತ್ತಾಸೆ ಕೊಡುವಲ್ಲಿ ನೆಸ್ಟೋರಿಯನರು ಮೊದಲಿಗರಾಗಿದ್ದರು.” ಅವರು “ಗ್ರೀಕ್ ಔಷಧಿಯನ್ನು ಬಾಗ್ದಾದ್ದೊಳಗೆ ಪರಿಚಯಿಸುವುದರಲ್ಲಿಯೂ ಮೊದಲಿಗರಾಗಿದ್ದರು.” ನೆಸ್ಟೋರಿಯನರಿಂದ ಕಲಿತ ವಿಷಯಗಳ ಮೇಲೆ ಆ್ಯರಬ್ ವಿಜ್ಞಾನಿಗಳು ಕಟ್ಟಲಾರಂಭಿಸಿದರು. ಆ್ಯರಬ್ ಸಾಮ್ರಾಜ್ಯದಲ್ಲಿ ವಿಜ್ಞಾನದ ಭಾಷೆಯಾಗಿ ಆ್ಯರಬಿಕ್ ಭಾಷೆಯಿಂದ ಸಿರಿಯಾಕ್ ಭಾಷೆಯು ಸ್ಥಾನಪಲ್ಲಟ ಹೊಂದಿತು ಮತ್ತು ವೈಜ್ಞಾನಿಕ ಬರವಣಿಗೆಗೆ ತಕ್ಕುದಾಗಿ ನೀಡಿಕೊಂಡ ಭಾಷೆಯಾಗಿ ರುಜುವಾಯಿತು.
ಆದರೆ ಆ್ಯರಬರು ಜ್ಞಾನವನ್ನು ತಕ್ಕೊಂಡರು ಮತ್ತು ಕೊಟ್ಟರು ಕೂಡ. ಮೂರ್ಸ್ರು ಸ್ಪೈನ್ ಮೂಲಕ ಯೂರೋಪಿನೊಳಗೆ—ಏಳುನೂರು ವರುಷಗಳಿಗಿಂತಲೂ ಹೆಚ್ಚಿಗೆ ನಿಲ್ಲಲು—ಸ್ಥಳಾಂತರಿಸಿದಾಗ ಅವರು ತಮ್ಮೊಂದಿಗೆ ಜ್ಞಾನೋದಯ ಹೊಂದಿದ ಮುಸ್ಲಿಂ ಸಂಸ್ಕೃತಿಯನ್ನು ತಂದರು. ಮತ್ತು 1096 ಮತ್ತು 1272ಗಳ ನಡುವೆ, ಕ್ರೈಸ್ತ ಧರ್ಮಯುದ್ಧಗಳೆಂದು ಕರೆಯಲ್ಪಟ್ಟ ಎಂಟು ಯುದ್ಧಗಳಲ್ಲಿ, ಮುಂದುವರಿದ ಇಸ್ಲಾಮಿಕ್ ನಾಗರಿಕತೆಯೊಂದಿಗೆ ಸಂಪರ್ಕಕ್ಕೆ ಬಂದ ವೆಸ್ಟರ್ನ್ ಕ್ರುಸೇಡರರು ಅದರಿಂದ ಪ್ರಭಾವಿತರಾದರು. ಒಬ್ಬ ಗ್ರಂಥಕರ್ತನು ಹೇಳಿದಂತೆ, ಅವರು “ನೂತನ ಪ್ರಭಾವಗಳ ಒಂದು ಸಮೂಹದೊಂದಿಗೆ” ಹಿಂತಿರುಗಿದರು.
ಆ್ಯರಬಿಕ್ ಗಣಿತಶಾಸ್ತ್ರದ ಸುಲಭೀಕರಣ
ಯೂರೋಪಿಗೆ ಆ್ಯರಬರು ಮಾಡಿದ ಒಂದು ಗುರುತರ ಕಾಣಿಕೆಯು ರೋಮನ್ ಅಕ್ಷರಗಳನ್ನು ಸ್ಥಾನಪಲ್ಲಟ ಮಾಡಲು ಆ್ಯರಬಿಕ್ ಅಂಕಿಗಳನ್ನು ಪರಿಚಯಿಸುವಿಕೆಯಾಗಿತ್ತು. ನಿಜತ್ವದಲ್ಲಿ, “ಆ್ಯರಬಿಕ್ ಅಂಕಿಗಳು” ಮಿಥ್ಯನಾಮ ಪ್ರಯೋಗವಾಗಿದೆ. ಹೆಚ್ಚು ನಿಷ್ಕ್ರಷ್ಟ ಪದವು ಪ್ರಾಯಶಃ “ಹಿಂದೂ ಆ್ಯರಬಿಕ್ ಅಂಕಿಗಳು” ಎಂದಾಗಿದೆ. ಒಂಬತ್ತನೇ ಶತಮಾನದ ಆ್ಯರಬ್ ಗಣಿತಜ್ಞ ಮತ್ತು ಜ್ಯೋತಿಷ್ಕ ಆಲ್ ಖೆರ್ವಿಜ್ಮೈ ಈ ವ್ಯವಸ್ಥೆಯ ಬಗ್ಗೆ ಬರೆದದ್ದು ನಿಜ, ಆದರೆ ಅವನು ಇದನ್ನು ಸಾವಿರ ವರುಷಗಳಿಗಿಂತಲೂ ಹೆಚ್ಚು ಮುಂಚೆಯೆ, ಸಾ.ಶ.ಪೂ. ಮೂರನೇ ಶತಮಾನದಲ್ಲಿಯೆ, ಇದನ್ನು ಯೋಜಿಸಿದ ಭಾರತದ ಹಿಂದೂ ಗಣಿತಜ್ಞರಿಂದ ಪಡೆದುಕೊಂಡಿದ್ದನು.
ಪ್ರಮುಖ ಗಣಿತಜ್ಞ ಲಿಯೊನಾರ್ಡೊ ಫಿಬೊನಾಟ್ಖಿ (ಪಿಸಾದ ಲಿಯೊನಾರ್ಡೊ ಎಂದು ಕೂಡ ಪ್ರಸಿದ್ಧನಾಗಿದ್ದಾನೆ) ಅದನ್ನು ಲಿಬರ್ ಅಬಾಕಿಯಲ್ಲಿ (ಆ್ಯಬಕಸ್ನ ಪುಸ್ತಕ) 1202ರಲ್ಲಿ ಪರಿಚಯಿಸಿದನು. ಈ ವ್ಯವಸ್ಥೆಯ ಪ್ರಯೋಜನವನ್ನು ಪ್ರತ್ಯಕ್ಷಾಭಿನಯ ಮಾಡುತ್ತಾ, ಅವನು ವಿವರಿಸಿದ್ದು: “ಭಾರತೀಯ ಒಂಬತ್ತು ಅಂಕೆಗಳು: 9 8 7 6 5 4 3 2 1 ಆಗಿವೆ. ಈ ಒಂಬತ್ತು ಅಂಕಿಗಳೊಂದಿಗೆ ಮತ್ತು 0 ಚಿಹ್ನೆಯೊಂದಿಗೆ . . . ಯಾವುದೇ ಸಂಖ್ಯೆಯು ಬರೆಯಲ್ಪಡಬಹುದು.” ಮೊದಮೊದಲು ಯೂರೋಪಿಯನರು ಪ್ರತಿಕ್ರಿಯಿಸಲು ನಿಧಾನರಾಗಿದ್ದರು. ಆದರೆ ಮಧ್ಯ ಯುಗಗಳ ಸಮಾಪ್ತಿಗೆ, ಅವರು ಹೊಸ ಅಂಕಿಸುವ ವ್ಯವಸ್ಥೆಯನ್ನು ಸ್ವೀಕರಿಸಿದ್ದರು, ಮತ್ತು ಅದರ ಸರಳತೆಯು ವೈಜ್ಞಾನಿಕ ಬೆಳವಣಿಗೆಯನ್ನು ಉತ್ತೇಜಿಸಿತು.
ಮುಂಚೆ ಬಳಸಲಾದ ರೋಮನ್ ಅಂಕಿಗಳಿಗಿಂತ ಹಿಂದೂ ಆ್ಯರಬಿಕ್ ಅಂಕಿಗಳು ಸುಲಭೀಕರಣಗಳೆಂಬುದನ್ನು ನೀವು ಸಂಶಯಿಸುವಲ್ಲಿ, MCMXCIIIರಿಂದ LXXIXನ್ನು ಕಳೆಯುವುದನ್ನು ಪ್ರಯತ್ನಿಸಿರಿ. ನೀವು ಕಕ್ಕಾಬಿಕ್ಕಿಗೊಂಡಿರೊ? ಪ್ರಾಯಶಃ 1,993ರಿಂದ 79 ಹೆಚ್ಚುಕಡಿಮೆ ಸುಲಭವಾಗುವುದು.
ಕಲಿಯುವಿಕೆಯಲ್ಲಿ ಅಭಿರುಚಿಯನ್ನು ಪುನಃ ಕೆರಳಿಸುವುದು
ಹನ್ನೆರಡನೇ ಶತಮಾನದ ಆರಂಭದಲ್ಲಿ, ಮುಸ್ಲಿಂ ಲೋಕದಲ್ಲಿ ಅತ್ಯುಜಲ್ವವಾಗಿ ಉರಿಯುತ್ತಿದ್ದ ಕಲಿಯುವಿಕೆಯ ಜ್ವಾಲೆಯು ಪ್ರಕಾಶಹೀನವಾಗಲು ಆರಂಭಿಸಿತು. ಆದಾಗ್ಯೂ, ಯೂರೋಪಿನಲ್ಲಿ ಪಂಡಿತರ ಗುಂಪುಗಳು ಆಧುನಿಕ ವಿಶ್ವವಿದ್ಯಾನಿಲಯಗಳ ಮಾರ್ಗದರ್ಶಿಗಳನ್ನು ರೂಪಿಸಲಾರಂಭಿಸಿದಾಗ ಅದು ಪುನಃ ಉರಿಯಲಾರಂಭಿಸಿತು. ಹನ್ನೆರಡನೇ ಶತಮಾನದ ಮಧ್ಯ ಭಾಗದಲ್ಲಿ, ಪ್ಯಾರಿಸ್ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯಗಳು ಆಸ್ತಿತ್ವದೊಳಗೆ ಬಂದವು. ಹದಿಮೂರನೇ ಶತಮಾನದ ಆರಂಭದಲ್ಲಿ ಕ್ಯಾಂಬ್ರಿಡ್ಜ್ನ ವಿಶ್ವವಿದ್ಯಾನಿಲಯವು ಮತ್ತು ಪ್ಯಾರಗ್ವೈ ಮತ್ತು ಹೈಡೆಲ್ಬರ್ಗ್ಗಳೆರಡು 14ರಲ್ಲಿ ಅನುಸರಿಸಿದವು. ಹತ್ತೊಂಬತ್ತನೆ ಶತಮಾನದಷ್ಟಕ್ಕೆ, ವಿಶ್ವವಿದ್ಯಾನಿಲಯಗಳು ವೈಜ್ಞಾನಿಕ ಸಂಶೋಧನೆಯ ದೊಡ್ಡ ಕೇಂದ್ರಗಳಾಗಿದ್ದವು.
ಮೂಲದಲ್ಲಿ, ಹೆಚ್ಚಿನ ಅಧ್ಯಯನಗಳು ದೇವತಾಶಾಸ್ತ್ರದೆಡೆಗೆ ಓಲಿಕೊಂಡು ಯಾ ಕೇಂದ್ರಿತವಾಗಿ, ಈ ಶಾಲೆಗಳು ಧರ್ಮದಿಂದ ಬಲವಾಗಿ ಪ್ರಭಾವಿತವಾಗಿದ್ದವು. ಆದರೆ ಅದೇ ಸಮಯದಲ್ಲಿ, ಶಾಲೆಗಳು ಗ್ರೀಕ್ ತತ್ವಜ್ಞಾನವನ್ನು, ವಿಶೇಷವಾಗಿ ಆ್ಯರಿಸ್ಟಾಟಲನ ಬರಹಗಳನ್ನು ಸ್ವೀಕರಿಸಿದವು. ದ ಎನ್ಸೈಕ್ಲೊಪೀಡಿಯ ಆಫ್ ರಿಲೀಜನ್ಗನುಸಾರ, “ಸಮಗ್ರ ಮಧ್ಯ ಯುಗಗಳ . . . ಅತಿಪಾಂಡಿತ್ಯದ ವಿಧಾನವು . . . ಅದರ ಮೂಲಪಾಠದ ಸ್ಪಷ್ಟೀಕರಣ ಮತ್ತು ಅದರ ಜಟಿಲತೆಗಳ ತೀರ್ಮಾನದಲ್ಲಿ ಅರ್ಥವಿವರಿಸುವ, ವಿಭಜಿಸುವ, ಮತ್ತು ವಿವೇಚಿಸುವ ಆ್ಯರಿಸ್ಟಾಟೆಲಿಯನ್ ತರ್ಕಸರಣಿಗನುಸಾರವಾಗಿ ಕಟ್ಟಲ್ಪಡಲಾಯಿತು.”
ಆ್ಯರಿಸ್ಟಾಟೆಲಿಯನ್ ಕಲಿಯುವಿಕೆಯನ್ನು ಕ್ರೈಸ್ತ ದೇವತಾಶಾಸ್ತ್ರದೊಂದಿಗೆ ಸಂಯೋಜಿಸಲು ಆಶಯವಿದ್ದ 13ನೇ ಶತಮಾನದ ಒಬ್ಬ ಪಂಡಿತನು, ನಂತರ “ಕ್ರೈಸ್ತ ಆ್ಯರಿಸ್ಟಾಟಲ್” ಎಂದು ಕರೆಯಲ್ಪಟ್ಟ, ತೋಮಸ್ ಅಕಿನ್ವಸ್ ಆಗಿದ್ದನು. ಆದರೆ ಕೆಲವು ವಿಷಯಗಳ ಮೇಲೆ ಆತನು ಆ್ಯರಿಸ್ಟಾಟಲ್ನೊಂದಿಗೆ ಭಿನ್ನಾಭಿಪ್ರಾಯವುಳ್ಳವನಾಗಿದ್ದನು. ಉದಾಹರಣೆಗೆ, ಲೋಕವು ಸೃಷ್ಟಿಸಲ್ಪಟ್ಟಿತ್ತೆಂದು ಶಾಸ್ತ್ರಗಳೊಂದಿಗೆ ಸಹಮತ ಸೂಚಿಸುತ್ತಾ, ಲೋಕವು ಯಾವಾಗಲೂ ಅಸ್ತಿತ್ವದಲ್ಲಿತ್ತು ಎಂಬ ಸಿದ್ಧಾಂತವನ್ನು ಅಕಿನ್ವಸ್ ನಿರಾಕರಿಸಿದನು. “ನಮ್ಮದು, ವಿವೇಚನೆಯ ಬೆಳಕಿನ ಮೂಲಕ ಗ್ರಹಿಸಸಾಧ್ಯವಿರುವ ವ್ಯವಸ್ಥಾಪಿತ ವಿಶ್ವವೆಂಬ ನಂಬಿಕೆಗೆ ದೃಢವಾಗಿ,” ಹಿಡಿದುಕೊಳ್ಳುವ ಮೂಲಕ ಅವನು “ಆಧುನಿಕ ವಿಜ್ಞಾನದ ವಿಕಾಸಕ್ಕೆ ಬೆಲೆಯುಳ್ಳ ಕಾಣಿಕೆಯನ್ನು ಮಾಡಿದನು,” ಎಂದು ದ ಬುಕ್ ಆಫ್ ಪಾಪ್ಯುಲರ್ ಸೈಎನ್ಸ್ ಹೇಳುತ್ತದೆ.
ಹಾಗಿದ್ದರೂ, ಹೆಚ್ಚಿನ ಸಮಯಗಳಲ್ಲಿ, ಆ್ಯರಿಸ್ಟಾಟಲ್, ಟಾಲೆಮಿ, ಮತ್ತು ಗ್ಯಾಲೆನರ ಬೋಧನೆಗಳನ್ನು ಪರಮ ಸತ್ಯದ ಹಾಗೆ, ಚರ್ಚಿನಿಂದಲೂ ಕೂಡ ಸ್ವೀಕರಿಸಲಾಗುತ್ತಿತ್ತು. ಈ ಮೊದಲೇ ಸೂಚಿಸಲಾದ ಆಧಾರ ಕೃತಿಯು ವಿವರಿಸುವುದು: “ಮಧ್ಯಯುಗಗಳಲ್ಲಿ, ವೈಜ್ಞಾನಿಕ ಪ್ರಯೋಗ ಮತ್ತು ನೇರವಾದ ವೀಕ್ಷಣೆಯಲ್ಲಿ ಆಸಕ್ತಿಯು ಅವನತಿ ಹೊಂದುತ್ತಿದ್ದಾಗ, ಆ್ಯರಿಸ್ಟಾಟಲ್ನ ಮಾತು ನಿಯಮವಾಗಿತ್ತು. ಮಧ್ಯಯುಗದ ತತ್ವಜ್ಞಾನಿಗಳು ಒಂದು ‘ವೈಜ್ಞಾನಿಕ’ ವೀಕ್ಷಣೆಯ ಸತ್ಯವನ್ನು ರುಜುಪಡಿಸಲು, ಇಪ್ಸಿ ಡಿಕ್ಸಿಟ್ (‘ಅವನು ತಾನೇ ಹೇಳಿದ್ದು’) ಎಂಬ ವಾದವನ್ನು ಉಪಯೋಗಿಸುತ್ತಿದ್ದರು. ಈ ಪರಿಸ್ಥಿತಿಗಳ ಕೆಳಗೆ, ಪ್ರತ್ಯೇಕವಾಗಿ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರಗಳಲ್ಲಿ, ಆ್ಯರಿಸ್ಟಾಟಲ್ನ ತಪ್ಪುಗಳು ಶತಮಾನಗಳ ವರೆಗೆ ವೈಜ್ಞಾನಿಕ ಪ್ರಗತಿಯನ್ನು ತಡೆದವು.”
ಹಿಂದಿನ ನೋಟಗಳಿಗೆ ಈ ಕುರುಡು ಅಂಟಿಕೊಳ್ಳುವಿಕೆಯನ್ನು ಪಂಥಾಹ್ವಾನ ಮಾಡಿದವರು 13ನೆಯ ಶತಮಾನದ ಆಕ್ಸ್ಫರ್ಡ್ ಪಾದ್ರಿ, ರೋಜರ್ ಬೇಕನ್. “ಮಧ್ಯಯುಗದ ವಿಜ್ಞಾನದಲ್ಲಿ ಅತ್ಯಂತ ಮಹಾ ವ್ಯಕ್ತಿ” ಎಂಬುದಾಗಿ ಕರೆಯಲ್ಪಟ್ಟ ಬೇಕನ್, ಪ್ರಯೋಗ ಮಾಡುವುದು ವೈಜ್ಞಾನಿಕ ಸತ್ಯಗಳನ್ನು ಕಲಿಯುವುದರ ಒಂದು ವಿಧಾನವೆಂದು ಪ್ರತಿಪಾದಿಸುವುದರಲ್ಲಿ ಬಹುಮಟ್ಟಿಗೆ ಒಬ್ಬಂಟಿಗರಾಗಿದ್ದರು. ಇಸವಿ 1269ರಷ್ಟು ಆದಿಭಾಗದಲ್ಲಿಯೇ, ಈ ನಿಜತ್ವಗಳನ್ನು ಬೇರೆ ಇತರರು ಗ್ರಹಿಸುವ ಶತಮಾನಗಳ ಮೊದಲೇ, ಅವರು ಮೋಟರ್ಗಾಡಿಗಳು, ವಿಮಾನಗಳು, ಮತ್ತು ಸ್ವಯಂ ಚಾಲಿತ ಹಡಗುಗಳ ಕುರಿತು ಭವಿಷ್ಯನುಡಿದರೆಂದು ಹೇಳಲಾಗುತ್ತದೆ.
ಆದರೂ, ದೂರದೃಷ್ಟಿ ಮತ್ತು ಒಂದು ಪ್ರತಿಭಾವಂತ ಮನಸ್ಸಿದ್ದಾಗ್ಯೂ, ನಿಜತ್ವಗಳ ಅವರ ಜ್ಞಾನದಲ್ಲಿ ಬೇಕನ್ ಸೀಮಿತರಾಗಿದ್ದರು. ಅವರು ಜ್ಯೋತಿಶಾಸ್ತ್ರ, ಯಕ್ಷಿಣಿ, ಮತ್ತು ರಸಾಯನಶಾಸ್ತ್ರವನ್ನು ಬಲವಾಗಿ ನಂಬಿದರು. ನಿಜವಾಗಿಯೂ ವಿಜ್ಞಾನವು ಸತ್ಯಕ್ಕಾಗಿ ಮುಂದುವರಿಯುತ್ತಿರುವ ತಲಾಷೆಂದೂ ಯಾವಾಗಲೂ ಪುನರ್ವಿಮರ್ಶೆಗೆ ಗುರಿಯಾದದ್ದೆಂದೂ ಇದು ತೋರಿಸುತ್ತದೆ.
ವೈಜ್ಞಾನಿಕ ತನಿಖೆಯು 14ನೆಯ ಶತಮಾನದಲ್ಲಿ ಸುಪ್ತಾವಸ್ಥೆಯಲ್ಲಿದ್ದದ್ದಾಗಿ ತೋರಿದರೂ, 15ನೆಯ ಶತಮಾನವು ತನ್ನ ಅಂತ್ಯವನ್ನು ಸಮೀಪಿಸುತ್ತಿರುವ ಹಾಗೆ, ವೈಜ್ಞಾನಿಕ ಸತ್ಯಕ್ಕಾಗಿ ಮಾನವ ಕುಲದ ತಲಾಷು ಮುಕ್ತಾಯದಿಂದ ದೂರವಾಗಿತ್ತು. ವಾಸ್ತವದಲ್ಲಿ, ಮುಂದಿನ 500 ವರ್ಷಗಳು ಅವುಗಳ ಪೂರ್ವದಲ್ಲಿ ಇದ್ದವುಗಳನ್ನು ಮರೆಮಾಡಲಿದ್ದವು. ಒಂದು ವೈಜ್ಞಾನಿಕ ಕ್ರಾಂತಿಯ ಹೊಸ್ತಿಲಿನಲ್ಲಿ ಲೋಕವು ನಿಂತಿತ್ತು. ಮತ್ತು ಪ್ರತಿಯೊಂದು ಕ್ರಾಂತಿಯ ವಿಷಯದಲ್ಲಿ ಸತ್ಯವಾಗಿರುವಂತೆ, ಇದಕ್ಕೂ ಅದರ ನಾಯಕರು, ಖಳನಾಯಕರು, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬಲಿಪಶುಗಳು ಇರಲಿದ್ದವು. ನಮ್ಮ ಮುಂದಿನ ಸಂಚಿಕೆಯಲ್ಲಿ, “ವಿಜ್ಞಾನ—ಸತ್ಯಕ್ಕಾಗಿ ಮಾನವಕುಲದ ಮುಂದುವರಿಯುತ್ತಿರುವ ತಲಾಷು” ಇದರ 4ನೆಯ ಭಾಗದಲ್ಲಿ ಹೆಚ್ಚನ್ನು ಕಲಿಯಿರಿ. (g93 5/8)
[ಪುಟ 18 ರಲ್ಲಿರುವ ಚೌಕ]
ಆ್ಯರಬಿಕ್ ವಿಜ್ಞಾನದ ಸ್ವರ್ಣಯುಗ
ಇರಾಕಿನ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞನಾದ, ಅಲ್ಕ್ವಾರಿಜ್ಮಿ (ಎಂಟನೆಯ-ಒಂಬತ್ತನೆಯ ಶತಮಾನ); ಆ್ಯರಬಿಕ್ನಲ್ಲಿ “ಮುರಿದ ಭಾಗಗಳ ಒಕ್ಕೂಟ” ಎಂಬ ಅರ್ಥಕೊಡುವ ಆ್ಯಲ್ಚಿಬ್ರದಿಂದ “ಆ್ಯಲ್ಚಿಬ್ರ” ಎಂಬ ಪದವನ್ನು ಉದ್ಭವಿಸಿದ್ದಕ್ಕಾಗಿ ಪ್ರಸಿದ್ದನಾದವನು.
ಅಬು ಮೂಸಾ ಜಾಬೀರ್ ಇಬಿನ್ಹಿಯಾನ್ (ಎಂಟನೆಯ-ಒಂಬತ್ತನೆಯ ಶತಮಾನ) ಆ್ಯರಬ್ನ ರಸಾಯನಶಾಸ್ತ್ರದ ಪಿತಾಮಹನೆಂದು ಕರೆಯಲ್ಪಟ್ಟ ರಸವಾದಿ.
ಖಗೋಳಶಾಸ್ತ್ರಜ್ಞ ಹಾಗೂ ಗಣಿತಶಾಸ್ತ್ರಜ್ಞನಾದ ಅಲ್ಬಟ್ಟಾನಿ (ಒಂಬತ್ತನೆಯ-ಹತ್ತನೆಯ ಶತಮಾನ); ಟಾಲೆಮಿಯ ಬೃಹತ್ಸಂಖ್ಯೆಗಳನ್ನು ಉತ್ತಮಗೊಳಿಸಿ, ಹೀಗೆ ವರ್ಷ ಮತ್ತು ಋತುಗಳ ಅವಧಿಯಂತಹ ವಿಷಯಗಳನ್ನು ಮಹಾ ನಿಷ್ಕೃಷ್ಟತೆಯಿಂದ ದೃಢೀಕರಿಸಿದನು.
ಬಹಳ ಪ್ರಸಿದ್ಧವಾದ ಪರ್ಷಿಯನ್ ವೈದ್ಯರಲ್ಲಿ ಒಬ್ಬನಾದ ಅರ್ರಾಜಿ (ರಾಸ್ಸ್) (ಒಂಬತ್ತನೆಯ-ಹತ್ತನೆಯ ಶತಮಾನ); ಸಿಡುಬುರೋಗ ಮತ್ತು ದಡಾರದ ಮಧ್ಯ ವ್ಯತ್ಯಾಸವನ್ನು ಮಾಡಿದವರಲ್ಲಿ ಮತ್ತು ಎಲ್ಲಾ ವಸ್ತುಗಳನ್ನು ಪ್ರಾಣಿ, ಸಸ್ಯ, ಯಾ ಖನಿಜವೆಂದು ವರ್ಗೀಕರಿಸಿದವರಲ್ಲಿ ಪ್ರಥಮನು.
ಗಣಿತಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿಯಾದ, ಬಸ್ರಾವಿನ ಅಬು ಅಲಿ ಅಲ್ಹಾಸನ್ ಇಬ್ನೆಲ್ಹಿತೆಮ್ (ಅಲ್ಹಸನ್) (10-11ನೆಯ ಶತಮಾನ); ವಕ್ರೀಭವನ, ಪ್ರತಿಫಲನ, ದೂರದರ್ಶಕ, ಮತ್ತು ವಾಯುವಿನ ವಕ್ರೀಭವನವನ್ನು ಸೇರಿಸಿ, ದೃಷ್ಟಿಶಾಸ್ತ್ರಕ್ಕೆ ಗಮನಾರ್ಹವಾದ ಕೊಡುಗೆಗಳನ್ನು ಸಲ್ಲಿಸಿದನು; ದೃಷ್ಟಿಯು ಒಂದು ವಸ್ತುವಿನಿಂದ ಕಣ್ಣಿನ ಕಡೆಗೆ ಬರುವ ಬೆಳಕಿನ ಪ್ರಭಾವವೆಂದು ಸರಿಯಾಗಿ ವಿವರಿಸಿದವರಲ್ಲಿ ಮೊದಲಿಗನು.
ಪ್ರಖ್ಯಾತ ಪರ್ಷಿಯನ್ ಗಣಿತಶಾಸ್ತ್ರಜ್ಞ, ಭೌತವಿಜ್ಞಾನಿ, ಖಗೋಳಶಾಸ್ತ್ರಜ್ಞ, ವೈದ್ಯ, ಮತ್ತು ತತ್ವಜ್ಞಾನಿಯಾದ ಒಮ್ಮರ್ ಖ್ಖಯಾಮ್ (11-12ನೆಯ ಶತಮಾನ); ಪಾಶ್ಚಾತ್ಯದಲ್ಲಿ ಅವನ ಕವಿತೆಗಳಿಗಾಗಿ ಹೆಸರುವಾಸಿಯಾಗಿದ್ದಾನೆ.
[ಪುಟ 16 ರಲ್ಲಿರುವ ಚಿತ್ರಗಳು]
ಆ್ಯರಿಸ್ಟಾಟಲ್ (ಮೇಲೆ) ಮತ್ತು ಪ್ಲೇಟೊ (ಕೆಳಗೆ) ಶತಮಾನಗಳಲ್ಲಿ ವೈಜ್ಞಾನಿಕ ಯೋಚನೆಯನ್ನು ಬಲವಾಗಿ ಪ್ರಭಾವಿಸಿದರು
[ಕೃಪೆ]
National Archaeological Museum of Athens
Musei Capitolini, Roma