ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 8/8 ಪು. 29
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1993
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1993
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1994
ಎಚ್ಚರ!—1993
g93 8/8 ಪು. 29

ನಮ್ಮ ವಾಚಕರಿಂದ

ಮಕ್ಕಳನ್ನು ಬೆಳೆಸುವುದು ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕನೋಪಾದಿ, “ನಿಮ್ಮ ಮಕ್ಕಳು—ಅವರಿಗಾಗಿ ಯಾವುದು ಅತ್ಯುತ್ತಮವೊ ಅದನ್ನು ಮಾಡುವುದು” ಎಂಬ ಲೇಖನಗಳನ್ನು ನಾನು ಬಹಳವಾಗಿ ಗಣ್ಯಮಾಡಿದೆ. (ಜನವರಿ 8, 1993) ಯಾರಲ್ಲಿ ನಿಜಾಸಕ್ತಿಯನ್ನು ತೆಗೆದುಕೊಳ್ಳಲು ಹೆತ್ತವರು ತೀರಾ ಕಾರ್ಯಮಗ್ನರಾಗಿರುತ್ತಾರೋ ಅಂತಹ ಮಕ್ಕಳೊಂದಿಗೆ ನಿಭಾಯಿಸುವುದೇ ಇಂದು ಶಿಕ್ಷಕರು ಎದುರಿಸುವ ದೊಡ್ಡ ಪಂಥಾಹ್ವನಗಳಲ್ಲಿ ಒಂದಾಗಿದೆ. ಇತ್ತೀಚಿಗೆ ನಮ್ಮ ಶಾಲೆಯ ಹೆತ್ತವರ ವಾರ್ಷಿಕ ರಾತ್ರಿಯಲ್ಲಿ, ಈ ಸಂಚಿಕೆಯ ಕೆಲವು ಅಭಿಪ್ರಾಯಗಳಲ್ಲಿ ನಾನು ಪಾಲಿಗನಾದೆ. ಹೆತ್ತವರು ನಮ್ಮ ಚರ್ಚೆಯನ್ನು ವಿವೇಕವುಳ್ಳದ್ದು ಹಾಗೂ ಯೋಚನೆಯನ್ನು ಕೆರಳಿಸುವಂತಹದ್ದು ಎಂದು ಕಂಡುಕೊಂಡರು.

ಎಮ್‌. ಪಿ., ಯುನೊಯಿಟೆಡ್‌ ಸ್ಟೇಟ್ಸ್‌

ನೀವು ಅಪೇಕ್ಷಿಸಿದ ಅಂತ್ಯವನ್ನು ಪಡೆದಿರಿ. ಅವು ನಾನು ಓದಿರುವುವುಗಳಲ್ಲಿ ಅತ್ಯಂತ ಉತ್ತಮ ಲೇಖನಗಳಾಗಿದ್ದವು. ನೀವು ಕೆಟ್ಟ ಉದಾಹರಣೆಗಳನ್ನು ತೋರಿಸಿದಿರಿ ಮಾತ್ರವಲ್ಲ ಪರಿಹಾರಗಳನ್ನೂ ಸೂಚಿಸಿದಿರಿ.

ಎಮ್‌. ಆರ್‌., ಜರ್ಮನಿ

ಲೇಖನಗಳು ಚೆನ್ನಾಗಿ ಬರೆಯಲ್ಪಟ್ಟಿದ್ದವು, ಆದರೆ ಮಕ್ಕಳ ದೂಷಣೆಯ ಕುರಿತು ನಿಮ್ಮ ಸ್ಪಷ್ಟ ಉಲ್ಲೇಖಕ್ಕೆ ನಾನು ಆಕ್ಷೇಪಣೆಯನ್ನು ತೆಗೆದುಕೊಳ್ಳಬೇಕು. ಅದು ನನ್ನನ್ನು ತಲ್ಲಣಗೊಳಿಸಿತು.

ಎಫ್‌. ಎಮ್‌., ಕೆನಡ

ಮುಗ್ಧ, ರಕ್ಷಣೆಯಿಲ್ಲದ ಮಕ್ಕಳ ಮೇಲೆ ವಯಸ್ಕರು ಮಾಡುವ ಅಪಪ್ರಯೋಗದ ಕುರಿತು ಓದುವುದು ನಿಜವಾಗಿಯೂ ತಲ್ಲಣಗೊಳಿಸುವ ವಿಷಯವಾಗಿದೆ. ಕೆಲವು ಓದುಗರು ಅಂತಹ ವಿಷಯಗಳ ಓದುವಿಕೆಯನ್ನು ಅರುಚಿಯದ್ದಾಗಿ ಕಾಣಬಹುದೆಂಬುದನ್ನು ನಾವು ಗಣ್ಯಮಾಡಿದರೂ, ಇಂದು ಮಕ್ಕಳು ಎದುರಿಸುವ ತೀರಾ ನಿಜವಾದ ಅಪಾಯಗಳ ಬಗ್ಗೆ ಹೆತ್ತವರಿಗೆ ತಿಳಿಯಹೇಳಬೇಕು. (2 ಕೊರಿಂಥ 2:11 ಹೋಲಿಸಿ.) ಆದುದರಿಂದ ಅಂಥ ವಿಷಯಗಳಲ್ಲಿ ನಿರ್ದಿಷ್ಟವಾಗಿರುವ, ಸಾಧ್ಯವಾದಷ್ಟು ರುಚಿಕರವಾಗಿ ಮಾಡುವ ಹಂಗು ನಮಗಿದೆಯೆಂದು ನಮಗನಿಸಿತು.—ಸಂಪಾದಕರು.

ಹೆತ್ತವರಿಗೆ ಒಂದು ಪತ್ರ “ಅಪ್ಪ ಮತ್ತು ಅಮ್ಮನಿಗೆ ಒಂದು ಪತ್ರ” (ಜನವರಿ 8, 1993) ಎಂಬ ಲೇಖನವು ನನ್ನ ಕಣ್ಣುಗಳಲ್ಲಿ ಕಣ್ಣೀರನ್ನು ತಂದಿತು. ನನ್ನ ಹೆತ್ತವರು ಅವರ ಎಂಟು ಮಕ್ಕಳನ್ನು ಬೆಳೆಸುವುದರಲ್ಲಿ ಎಂತಹ ಕಷ್ಟವನ್ನು ಅನುಭವಿಸಿರಬೇಕೆಂದು ನಾನು ಗ್ರಹಿಸುವಂತೆ ಅದು ಮಾಡಿತು. ಆದುದರಿಂದ, 42ರ ವಯಸ್ಸಿನಲ್ಲಿ, ಅಪ್ಪ ಮತ್ತು ಅಮ್ಮನಿಗೆ ನನ್ನ ಸ್ವಂತ ಉಪಕಾರದ ಪತ್ರವನ್ನು ನಾನು ಬರೆದಿದ್ದೇನೆ.

ಜೆ. ಡಿ., ಯುನೊಯಿಟೆಡ್‌ ಸ್ಟೇಟ್ಸ್‌

ಆ ಯುವ ಮನುಷ್ಯನಿಂದ ಪಟ್ಟಿ ಮಾಡಲಾದ ವಿಷಯಗಳಲ್ಲಿ ಯಾವುದನ್ನೂ ನನ್ನ ಹೆತ್ತವರು ನನಗೆ ಕೊಡಲಿಲ್ಲವಾದ್ದರಿಂದ ಅದನ್ನು ಓದುವುದು ಬಹಳ ನೋವನ್ನುಂಟುಮಾಡುವುದಾಗಿತ್ತು. ಆದರೆ ಅದನ್ನು ನಾನು ಮತ್ತೆ ಓದಿದಾಗ, ನಮ್ಮ ಪರಲೋಕದ ತಂದೆಯಾದ, ಯೆಹೋವನು, ನನಗೆ ಮತ್ತು ಅನೇಕ ಇತರರಿಗೆ ಎಷ್ಟನ್ನು ಮಾಡಿದ್ದಾನೆಂದು ನಾನು ಗ್ರಹಿಸಿದೆನು. ಆತನು ನನಗೆ ಪ್ರೀತಿಯನ್ನು ಕಲಿಸಿದ್ದಾನೆ ಮತ್ತು ನನಗೆ ಅಗತ್ಯವಿದ್ದಾಗ ನೀತಿಶಿಕ್ಷಣವನ್ನು ಕೊಟ್ಟಿದ್ದಾನೆ. ಹೀಗೆ, ನಾನು ಅನುಭವಿಸಿದ ನೋವು ತುಂಬಿದ ಬಾಲ್ಯಾವಸ್ಥೆಯಿಂದ ಸ್ವಲ್ಪ ಉಪಶಮನವನ್ನು ಆತನು ನನಗೆ ಕೊಟ್ಟಿದ್ದಾನೆ.

ಸಿ. ಎ., ಯುನೊಯಿಟೆಡ್‌ ಸ್ಟೇಟ್ಸ್‌

ಆಲಿವ್‌ ಎಣ್ಣೆ ಜನವರಿ 8, 1993ರ ಸಂಚಿಕೆಯಲ್ಲಿರುವ “ವಿವಿಧ ಸಾಮರ್ಥ್ಯಗಳ ಆಲಿವ್‌ ಎಣ್ಣೆ” ಎಂಬ ಲೇಖನಕ್ಕಾಗಿ ನಿಮಗೆ ಉಪಕಾರಗಳು. ನಾನು ಆಸ್ಪತ್ರೆಯೊಂದರಲ್ಲಿ ಒಬ್ಬ ಪಥ್ಯಶಾಸ್ತ್ರಜ್ಞನಾಗಿ ಕೆಲಸಮಾಡುತ್ತೇನೆ ಮತ್ತು ಜನರಿಗೆ ಕಡಿಮೆ ಕೊಬ್ಬು, ಕಡಿಮೆ ಕಲೆಸ್ಟರಾಲ್‌ ಪಥ್ಯಗಳ ಕುರಿತು ನಾನು ಸಲಹೆ ನೀಡುತ್ತೇನೆ. ಈ ಲೇಖನವು ಬಹಳ ನಿಷ್ಕೃಷ್ಟವಾಗಿತ್ತು ಮತ್ತು ನನ್ನ ಬೋಧನೆಯಲ್ಲಿ ಉಪಯುಕ್ತವಾಗಿತ್ತು.

ಡಿ. ಎಸ್‌., ಯುನೊಯಿಟೆಡ್‌ ಸ್ಟೇಟ್ಸ್‌

ಜಗತ್ತನ್ನು ಗಮನಿಸುವುದು “ಜಗತ್ತನ್ನು ಗಮನಿಸುವುದು” ಎಂಬುದರಲ್ಲಿ ಚಿಕ್ಕ ಸಮಾಚಾರದ ಅಂಶಗಳನ್ನು ಮುದ್ರಿಸುವುದಕ್ಕಾಗಿ ನಿಮಗೆ ಉಪಕಾರ. ನನಗೆ ಒಂದು ಆಶ್ರಿತ, ಜಟಿಲವಲ್ಲದ ಜೀವಿತವು ಇದ್ದ ಕಾರಣ, ಇವು ನಿಜವಾಗಲೂ ಕಡೇ ದಿವಸಗಳೆಂದು ಸತತವಾಗಿ ನನಗೆ ನಾನೇ ಪುನರಾಶ್ವಾಸನೆ ಕೊಟ್ಟುಕೊಳ್ಳಬೇಕು. ಈ ಹಳೆಯ ಲೋಕವು ಎಷ್ಟು ಕೆಳದರ್ಜೆಯದ್ದು ಮತ್ತು ರೋಗಗ್ರಸ್ಥವಾದದ್ದು ಎಂದು ಮನದಟ್ಟು ಮಾಡಿಕೊಳ್ಳುವಲ್ಲಿ “ಜಗತ್ತನ್ನು ಗಮನಿಸುವುದು” ಒಂದು ದೊಡ್ಡ ಸಹಾಯಕವಾಗಿದೆ. ದಯವಿಟ್ಟು ಅದನ್ನು ಕ್ರಮವಾಗಿ ಪ್ರಕಟಿಸುತ್ತಾ ಹೋಗಿರಿ.

ಎಮ್‌. ಜಿ., ಯುನೊಯಿಟೆಡ್‌ ಸ್ಟೇಟ್ಸ್‌

ಹೊಸ ಜಗತ್ತು “ಸಕಲರನ್ನು ತೃಪ್ತಿಪಡಿಸುವ ಒಂದು ಹೊಸ ಜಗತ್ತು” (ಫೆಬ್ರವರಿ 8, 1993) ಎಂಬ ಲೇಖನಮಾಲೆಯು, ಇತ್ತೀಚಿನ ವರ್ಷಗಳಲ್ಲಿ ಈ ವಿಷಯದ ಮೇಲೆ ಅತ್ಯುತ್ತಮವಾದವುಗಳಲ್ಲಿ ಒಂದಾಗಿತ್ತು. ಉದಾಹರಿಸಲ್ಪಟ್ಟ ಶಾಸ್ತ್ರವಚನಗಳು ಮತ್ತು ಸುಂದರ ದೃಷ್ಟಾಂತಗಳು ನನ್ನಲ್ಲಿ ಆಳವಾದ ಗಣ್ಯತೆಯ ಭಾವನೆಯನ್ನು ಕೆರಳಿಸಿದವು. ಅದು ಅನೇಕ ಓದುಗರ ಹೃದಯವನ್ನು ಸ್ಪರ್ಶಿಸುವುದೆಂದು ನಾನು ನಂಬುತ್ತೇನೆ.

ಐ. ಜೆಡ್‌., ಇಟಲಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ