ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 11/8 ಪು. 28-29
  • “ನಾವೊಂದು ಕಾರ್ಡನ್ನು ಕಳುಹಿಸೋಣ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಾವೊಂದು ಕಾರ್ಡನ್ನು ಕಳುಹಿಸೋಣ”
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಮ್ಮ ಸ್ವಂತ ಕಾರ್ಡುಗಳನ್ನು ಮಾಡುವುದು
  • ಒಂದು ಯುಕ್ತವಾದ ಸಂದೇಶ
  • ಕಾರ್ಡುಗಳನ್ನು ಕಳುಹಿಸಲು ಸಂದರ್ಭಗಳು
  • ನಾನು ಒಂದು ಕ್ರೆಡಿಟ್‌ ಕಾರ್ಡನ್ನು ತೆಗೆದುಕೊಳ್ಳಬೇಕೋ?
    ಎಚ್ಚರ!—2000
  • JW.ORG ಕಾರ್ಡ್‌ಗಳನ್ನು ಚೆನ್ನಾಗಿ ಉಪಯೋಗಿಸುತ್ತಿದ್ದೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ರಕ್ತವನ್ನು ವಿಸರ್ಜಿಸುವುದರಲ್ಲಿ ನಮಗೆ ನೆರವನ್ನು ನೀಡಲು ಹೊಸ ಒದಗಿಸುವಿಕೆ
    2004 ನಮ್ಮ ರಾಜ್ಯದ ಸೇವೆ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1992
ಇನ್ನಷ್ಟು
ಎಚ್ಚರ!—1993
g93 11/8 ಪು. 28-29

“ನಾವೊಂದು ಕಾರ್ಡನ್ನು ಕಳುಹಿಸೋಣ”

“ಎಂತಹ ಒಂದು ಆಹ್ಲಾದಕರ ವಾರಾಂತ್ಯ ಅದಾಗಿತ್ತು!” ಸ್ನೇಹಿತರೊಂದಿಗೆ ಸಂದರ್ಶನಮಾಡಿ ಮನೆಗೆ ಹಿಂದಿರುಗಿದ ಅನಂತರ, ಆ ವಿಶ್ರಾಂತಿಕರ ಸಮಯದ ಸಂತೋಷದ ನೆನಪುಗಳು ನಿಮಗಿವೆ. ನಿಮ್ಮನ್ನು ಸತ್ಕರಿಸಿದವರು ಎಷ್ಟೊಂದು ಉದಾರಿಗಳಾಗಿದ್ದರು! ನಿಮ್ಮ ಗಣ್ಯತೆಯನ್ನು ವ್ಯಕ್ತಪಡಿಸಲು, ನೀವು ನಿಮ್ಮ ಕುಟುಂಬಕ್ಕೆ ಹೇಳುತ್ತೀರಿ: “ನಾವೊಂದು ಕಾರ್ಡನ್ನು ಕಳುಹಿಸುವ.”

ಸ್ಥಳಿಕ ಅಂಗಡಿಗಳಿಗೆ ಒಂದು ಕಾರ್ಡನ್ನು ಕೊಂಡುಕೊಳ್ಳಲು ನೀವು ಹೋಗುತ್ತೀರಿ. ಒಂದು ಅಪಾರವಾದ, ಆದರೆ ಅಸ್ತವ್ಯಸ್ತವಾದ ರಚನೆಯನ್ನು ನೀವು ಕಾಣುತ್ತೀರಿ. ‘ಯಾವ ಕಾರ್ಡನ್ನು ನಾನು ಆಯ್ದುಕೊಳ್ಳಲಿ?’ ‘ಯಾವುದು ಸರಿಯಾದ ನುಡಿಗಳನ್ನು ಹೊಂದಿದೆ?’ ಯಾವುದೇ ರೀತಿಯಲ್ಲೂ ಸುಲಭವಾದ ಆರಿಸುವಿಕೆಯಲ್ಲ! ಆದುದರಿಂದ ನಿಮ್ಮದೇ ಸ್ವಂತ ಕಾರ್ಡನ್ನು ಯಾಕೆ ಮಾಡಬಾರದು?

ನಿಮ್ಮ ಸ್ವಂತ ಕಾರ್ಡುಗಳನ್ನು ಮಾಡುವುದು

ಆರಂಭದಲ್ಲಿ ನೀವು ಯೋಚಿಸಬಹುದಾದುದಕ್ಕಿಂತಲೂ ಇದು ಸುಲಭವಾಗಿದೆ. ನಿಮಗೆ ಅಗತ್ಯವಿರುವುದೇನಂದರೆ ತಿಳಿಯಾದ ಕಾಗದದ ಹಾಳೆ ಅಥವಾ ಒಂದು ತೆಳುವಾದ ಕಾರ್ಡ್‌, ಒಂದು ಬರೆಯವ ಸಾಧನ, ಮತ್ತು, ಅವಶ್ಯವಾಗಿ, ಒಂದು ಸಂದೇಶ. ನಿಮ್ಮ ಆಯ್ಕೆಯ ಒಂದು ವಿನ್ಯಾಸದೊಂದಿಗೆ, ವೈಯಕ್ತಿಕ ಚಿತ್ರಿಸುವಿಕೆಯನ್ನು ನೀವು ಕೂಡಿಸಬಹುದು. ಹೇಗೆ? ಇಲ್ಲಿ ಎರಡು ಸಲಹೆಗಳಿವೆ.

(1) ನೀವು ಇಷ್ಟಪಡುವ ಒಂದು ಚಿತ್ರವನ್ನು ಆರಿಸಿಕೊಳ್ಳಿ. ಅದು ಪ್ರಾಯಶಃ ಒಂದು ಪತ್ರಿಕೆಯಿಂದ ನೀವು ಕತ್ತರಿಸಿ ತೆಗೆಯಬಹುದಾದ ಮತ್ತು ನಿಮ್ಮ ಕಾರ್ಡ್‌ಗೆ ಅಂಟಿಸಸಾಧ್ಯವಿರುವ ಒಂದು ಚಿತ್ರವಾಗಿರಬಹುದು. ಅವರ ವಿವಾಹದ 25ನೆಯ ವಾರ್ಷಿಕೋತ್ಸವವನ್ನು ಆಚರಿಸಲು ಒಬ್ಬ ಹೆಂಡತಿಯು ಅವಳ ಗಂಡನನ್ನು ಒಂದು ನವೀನ ಕಾರ್ಡ್‌ನಿಂದ ಅಚ್ಚರಿಗೊಳಿಸಿದಳು. ಅವರ, ಸಹಭಾಗಿತ್ವದ ಜೀವಿತಕ್ಕಾಗಿ ಅವಳ ಸಂತೋಷದ ಭಾವನೆಯನ್ನು ವ್ಯಕ್ತಪಡಿಸಲು, ಅವಳ ಗಂಡನ ಮತ್ತು ಅವಳ ಎರಡು ಚಿಕ್ಕ ಛಾಯಾಚಿತ್ರಗಳನ್ನು ಕತ್ತರಿಸಿ ತೆಗೆದಳು ಮತ್ತು ಅವುಗಳನ್ನು ಒಂದು ಸರಳವಾದ ಕಾರ್ಡಿನ ಮೇಲೆ ಅಂಟಿಸಿದಳು.

(2) ಹೂವುಗಳನ್ನು ಉಪಯೋಗಿಸಿ. ಅವುಗಳಾಗಲೇ ಚೆನ್ನಾಗಿ ವಿನ್ಯಾಸಿಸಲ್ಪಟ್ಟಿವೆ. ಅವುಗಳನ್ನು ಅದುಮಿ ಮತ್ತು ಒಣಗಿಸಿದ ಅನಂತರ, ಆಹ್ಲಾದ ಮತ್ತು ಅಭಿರುಚಿಯನ್ನು ಹೆಚ್ಚಿಸಲು ಅವುಗಳನ್ನು ನಿಮ್ಮ ಕಾರ್ಡ್‌ಗೆ ಅಂಟಿಸಿ.—ಚೌಕಟ್ಟನ್ನು ನೋಡಿರಿ.

ಯಾವುದೇ ಅಲಂಕರಿಸುವಿಕೆಯನ್ನು ನೀವು ಆರಿಸಿಕೊಂಡರೂ, ಖಂಡಿತವಾಗಿಯೂ ಅದರಲ್ಲಿರುವ ಸಂದೇಶವು ಅತ್ಯಂತ ಹೆಚ್ಚಿನ ಬೆಲೆಯದ್ದಾಗಿದೆ. ನಿಮ್ಮ ಸ್ವಂತ ಕಾರ್ಡುಗಳನ್ನು ತಯಾರಿಸುವುದು ನಿಮ್ಮ ಮನೋಭಾವನೆಗಳನ್ನು ನಿಜವಾಗಿ ವ್ಯಕ್ತಪಡಿಸುವಂತಹ ಪದಗಳನ್ನು ಜೋಡಿಸುವ ಅವಕಾಶವನ್ನು ಕೊಡುತ್ತದೆ.

ಒಂದು ಯುಕ್ತವಾದ ಸಂದೇಶ

ಪುರಾತನದ ಅರಸ ಸೊಲೊಮೋನನು “ಯಥಾರ್ಥಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು.” (ಪ್ರಸಂಗಿ 12:10) ಅಂತಹ ಮಾತುಗಳ ಆರಿಸುವಿಕೆಯು ಗ್ರಾಹಕನಿಗೆ, ನಿಮ್ಮ ಲಿಖಿತ ಸಂದೇಶವನ್ನು “ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ”ವಾದದ್ದಾಗಿ ಮಾಡುವುವು.—ಜ್ಞಾನೋಕ್ತಿ 25:11.

ಆಹ್ಲಾದಕರವಾದ ಪರಿಣಾಮವನ್ನು ಹೊಂದಿರುವ ಮಾತುಗಳನ್ನು ಆರಿಸಿಕೊಳ್ಳಿ. ನಿಮ್ಮ ನಿಷ್ಕಪಟ ಭಾವನೆಗಳನ್ನು ತಿಳಿಯಪಡಿಸಲಿಕ್ಕಾಗಿ ಬೈಬಲಿನ ಕೆಲವೊಂದು ಪ್ರೇರಿತ ಮಾತುಗಳನ್ನು ಸಮರ್ಪಕವಾಗಿಯೇ ನೀವು ಒಳಗೂಡಿಸಬಹುದು, ಅವುಗಳು ಅತ್ಯಧಿಕವಾಗಿ ಸ್ವಾಗತಿಸಲ್ಪಡುವುವು.

ಕಾರ್ಡ್‌ನ ಮೇಲೆ ಆ ಮಾತುಗಳನ್ನು ನೀವು ಹೇಗೆ ಬರೆಯುತ್ತೀರೆಂಬುದು ಕೂಡ ಒಂದು ಸಂದೇಶವನ್ನು ರವಾನಿಸುತ್ತದೆ. ಅವುಗಳನ್ನು ಅಂದವಾಗಿ ಮತ್ತು ಸ್ಪಷ್ಟವಾಗಿಗಿ ಮಾಡುವುದು, ಕಳುಹಿಸುವವರಾದ ನಿಮ್ಮ ಕುರಿತು ಹೆಚ್ಚನ್ನು ಹೇಳುತ್ತದೆ.

ಕಾರ್ಡುಗಳನ್ನು ಕಳುಹಿಸಲು ಸಂದರ್ಭಗಳು

ವಿವಾಹಗಳು ಸಂತೋಷಕರವಾದ ಘಟನೆಗಳಾಗಿದ್ದು, ಅದಕ್ಕಾಗಿ ದಂಪತಿಗಳು ಅವರ ಸ್ನೇಹಿತರು ಮತ್ತು ಸಂಬಂಧಿಕರನ್ನು ಆಮಂತ್ರಿಸಲು ಬಯಸಬಹುದು. ವಿವಾಹ ಸಮಾರಂಭವನ್ನು ಹಿಂಬಾಲಿಸಿ ಒಂದು ಸತ್ಕಾರ ಕೂಟವನ್ನು ಅವರು ಹೊಂದಿರುವುದಾದರೆ, ಆಹ್ವಾನ ಪತ್ರಿಕೆಯಲ್ಲಿ ಅದು ಆರಂಭವಾಗುವ ಮತ್ತು ಮುಕ್ತಾಯಗೊಳ್ಳುವ ವೇಳೆಯ ಕುರಿತು ಒಂದು ಸೂಚನೆಯನ್ನು ಒಳಗೂಡಿಸುವ ಮೂಲಕ ಬಹುದೂರದಿಂದ ಅವರನ್ನು ಸಂದರ್ಶಿಸುವವರ ಯೋಗಕ್ಷೇಮಕ್ಕಾಗಿ ಅವರು ಕಾಳಜಿಯನ್ನು ವ್ಯಕ್ತಪಡಿಸಸಾಧ್ಯವಿದೆ.

ಒಂದು ಮಗುವಿನ ಜನನವು ಒಂದು ಕಾರ್ಡನ್ನು ಕಳುಹಿಸಲು ಇನ್ನೊಂದು ಸಂದರ್ಭವಾಗಿರ ಸಾಧ್ಯವಿದೆ. ಇದು ನೀವು ಅವರ ಆನಂದವನ್ನು ಹಂಚಿಕೊಳ್ಳತ್ತೀರೆಂದು ಮಗುವಿನ ಹೆತ್ತವರಿಗೆ ತಿಳಿಯುವಂತೆ ಮಾಡುತ್ತದೆ.

ಅಂತಹ ಸಂದರ್ಭಗಳ ಜೊತೆಗೆ, ನಿಮಗೆ ಜನರು ತೋರಿಸಿರುವ ಸೌಜನ್ಯಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಎಷ್ಟೊಂದು ವಿಚಾರಪರವಾದದ್ದಾಗಿದೆ. ಅಸ್ವಸ್ಥರನ್ನು ಮತ್ತು ಆಸ್ಪತ್ರೆಯಲ್ಲಿರುವವರನ್ನು, ಕೂಡ ನಿಮ್ಮ ಪ್ರೀತಿ ಮತ್ತು ಹಿತಾಸಕ್ತಿಯ ಕುರಿತು ಅವರಿಗೆ ಭರವಸೆ ಕೊಡುತ್ತಾ ಸಂತೈಸಸಾಧ್ಯವಿದೆ. ನಿಮ್ಮ ಉತ್ಸಾಹಭರಿತ ಅಭಿವಂದನೆಗಳು ಮತ್ತು ನಿಮ್ಮ ಕಾರ್ಡ್‌ ತರುವ ಆಹ್ಲಾದಕರವಾದ ಚಿತ್ರವು ವ್ಯಾಕುಲತೆ ಮತ್ತು ಖಿನ್ನತೆಯನ್ನು ಕಡಿಮೆಗೊಳಿಸುವಂತೆ ಸಹಾಯಮಾಡಬಲ್ಲದು. ನಿಜವಾಗಿಯೂ, ಜ್ಞಾನೋಕ್ತಿಯು ಹೇಳುವಂತೆ, “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯವಿದೆ!”—ಜ್ಞಾನೋಕ್ತಿ 15:23.

ದೂರದಲ್ಲಿರುವಾಗ ಅಥವಾ ಸಮೀಪದಲ್ಲಿರುವಾಗಲೂ, ಪ್ರೀತಿಸಲ್ಪಟ್ಟವರಲ್ಲಿ ಒಬ್ಬನನ್ನು ಮರಣದಲ್ಲಿ ಕಳೆದುಕೊಂಡಿರುವವರಿಗೆ ನಿಮ್ಮ ಸಹಾನುಭೂತಿಯನ್ನು ಮುಟ್ಟಿಸಿರಿ. ಬೈಬಲು ಒದಗಿಸುವ ಪುನರುತ್ಥಾನದ ಅದ್ಭುತಕರವಾದ ನಿರೀಕ್ಷೆಯ ಒಂದು ಜ್ಞಾಪಿಸುವಿಕೆಯು ಪ್ರಾಯಶಃ ಸೂಕ್ತವಾಗಿದೆ.

ಆದುದರಿಂದ, ಎಂದಾದರೂ ನಿಮ್ಮ ಭಾವನೆಗಳನ್ನು ಇತರರಿಗೆ ತಿಳಿಯಪಡಿಸುವ ಅನಿಸಿಕೆ ನಿಮಗಾಗುವಾಗ, ಒಂದು ಕಾರ್ಡನ್ನು ಯಾಕೆ ಕಳುಹಿಸಬಾರದು? ನಿಸ್ಸಂದೇಹವಾಗಿ, ಸಾಧ್ಯವಿದ್ದಾಗ ವ್ಯಕ್ತಿಯೊಂದಿಗೆ ನೇರವಾಗಿ ಮಾತಾಡುವುದನ್ನು ಇದು ಅಸಾಧ್ಯವನ್ನಾಗಿ ಮಾಡುವುದಿಲ್ಲ. ಬದಲಾಗಿ, ದಯಾಪರರಾಗಿರಲು ಇದು ಒಂದು ಕೂಡಿಸಲ್ಪಟ್ಟ ಸಂದರ್ಭವಾಗಿದೆ. (g93 8/8)

[ಪುಟ 28ರಲ್ಲಿರುವಚೌಕ]

ಒಂದು ವಿಶಿಷ್ಟವಾದ ಅಲಂಕರಿಸುವಿಕೆ

ಚಪ್ಪಟೆಯಾಗಿ ಒತ್ತಲ್ಪಟ್ಟ ಹೂವುಗಳಿಂದ ಅಲಂಕರಿಸುವುದು ನಿಮ್ಮ ಕಾರ್ಡುಗಳನ್ನು ಉತ್ಪ್ರೇಕ್ಷಿಸಬಲ್ಲದು. ಇದು ನಿಮ್ಮ ಕಾರ್ಡುಗಳಿಗೆ ಒಂದು ವಿಶಿಷ್ಟವಾದ ಶೈಲಿಯನ್ನು ಕೊಡುವುದರ ಒಂದು ಸರಳವಾದ, ಅಲ್ಪ ವ್ಯಯದ ಸಾಧನವಾಗಿದೆ. ನಿಮಗೆ ಬಹಳ ಕಡಿಮೆ ಸಾಮಾಗ್ರಿಯು ಬೇಕಾಗುತ್ತದೆ.

ಹೂವುಗಳನ್ನು ಶೇಖರಿಸುವುದು

▫ ನಿಮಗೆ ಬೇಕಾಗಿರುವ ಹೂವುಗಳನ್ನು ಆರಿಸಿಕೊಳ್ಳಲು ನಿಮಗೆ ಅನುಮತಿಯಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.

▫ ಮಳೆಯಲ್ಲಿ ಆರಿಸಿಕೊಳ್ಳುವುದನ್ನು ತೊರೆಯಿರಿ.

▫ ಹಳೆಯ ಹೂವುಗಳು ಅಥವಾ ಎಲೆಗಳನ್ನು ಆರಿಸಿಕೊಳ್ಳಬೇಡಿ.

▫ ಹೂವುಗಳನ್ನು ಹಾಳು ಮಾಡಬೇಡಿರಿ.

ಕೆಲವು ಹೂವುಗಳು ಮಾಂಸಲವಾಗಿರುವುದಾದರೆ (ನೀಲಿಗಂಟೆ ಹೂಗಳು, ಲಿಲಿ ಹೂಗಳು, ಆರ್ಕಿಡ್‌ಗಳು) ಅಥವಾ ವಕ್ರವಾದ ಆಕಾರವನ್ನು ಹೊಂದಿರುವುದಾದರೆ (ನೆಲನೈದಿಲೆ [ಡ್ಯಾಫಡಿಲ್‌], ಲೈಲಕ್‌, ದೊಡ್ಡ ಗುಲಾಬಿಗಳು, ತಿಸ್‌ಲ್‌) ಅವುಗಳು ಸರಿಯಾಗಿ ಒತ್ತಲ್ಪಡುವುದಿಲ್ಲ.

ಹೂವುಗಳನ್ನು ಅದುಮುವುದು

▫ ಎರಡು ಪ್ಲೈ ವುಡ್‌ ಹಲಗೆಗಳ ಮಧ್ಯೆ ಕ್ಲ್ಯಾಂಪ್‌ನಿಂದ ಭದ್ರಪಡಿಸಲ್ಪಟ್ಟ ಒತ್ತು ಕಾಗದದ ಹಾಳೆಗಳ ನಡುವೆ ಹೂವುಗಳನ್ನು ಇಡಿರಿ. ವಾರ್ತಾಪತ್ರಿಕೆಯ ಕೆಲವೊಂದು ಪದರಗಳನ್ನು ಸೇರಿಸುವುದು ತೇವಾಂಶವನ್ನು ಹೀರುವಂತೆ ಸಹಾಯ ಮಾಡುತ್ತದೆ. ಹೂವುಗಳು ಒಣಗಿದಂತೆ ದಿನಾಲೂ ಕ್ಲ್ಯಾಂಪ್‌ಗಳನ್ನು ಬಿಗಿಮಾಡಿರಿ.

▫ ಒತ್ತು ಯಂತ್ರವನ್ನು ತೆರೆಯುವುದಕ್ಕೆ ಕಡಿಮೆ ಪಕ್ಷ ಒಂದು ವಾರ ಕಾಯಿರಿ.

▫ ಹೂವುಗಳು ಸರಿಯಾಗಿ ಒತ್ತಲ್ಪಟ್ಟಿವೆಯೋ ಎಂಬುದನ್ನು ನೋಡಲು ಸಂಕ್ಷೇಪವಾಗಿ ಪರೀಕ್ಷಿಸಿರಿ, ಮತ್ತು ಅಗತ್ಯವಿರುವಲ್ಲಿ, ಒಣಗಿದ ಹಾಳೆಯ ಮೇಲೆ ಸ್ಥಳಾಂತರಿಸಿ.

▫ ಪುನಃ ಒತ್ತು ಯಂತ್ರವನ್ನು ಭದ್ರವಾಗಿ ಬಿಗಿಪಡಿಸಿರಿ, ಮತ್ತು ಹೂವುಗಳನ್ನು ತೆಗೆಯುವುದಕ್ಕೆ ಮೊದಲು ಎರಡು ಅಥವಾ ಮೂರು ವಾರಗಳ ತನಕ ಒಂದು ಬೆಚ್ಚಗೆರುವ, ಒಣಗಿರುವ ಸ್ಥಳದಲ್ಲಿ ಅದನ್ನು ಇಟ್ಟುಬಿಡಿರಿ.

ಹೂವುಗಳನ್ನೇರಿಸುವುದು

▫ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಂಟನ್ನು ಉಪಯೋಗಿಸಿರಿ.

▫ ಪ್ರಾಯಶಃ ಒಂದು ಜೊತೆ ಸಣ್ಣ ಚಿಮುಟಗಳನ್ನು ಉಪಯೋಗಿಸುವ ಮೂಲಕ, ಒಣಗಿದ ಹೂವುಗಳನ್ನು ಜಾಗ್ರತೆಯಿಂದ ನಿರ್ವಹಿಸಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ