ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 1/15 ಪು. 19
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ಜನಪ್ರಿಯ ಪದ್ಧತಿಗಳ ಕುರಿತು ಒಂದು ಸಮತೂಕ ನೋಟ
    ಎಚ್ಚರ!—2000
  • “ನಾವೊಂದು ಕಾರ್ಡನ್ನು ಕಳುಹಿಸೋಣ”
    ಎಚ್ಚರ!—1993
  • ಮೃತರಿಗೆ ಗೌರವ ಸಲ್ಲಿಸಬೇಕೊ?
    ಎಚ್ಚರ!—1999
  • ನಿಮಗೆ ಜ್ಞಾಪಕವಿದೆಯೆ?
    ಕಾವಲಿನಬುರುಜು—1991
ಇನ್ನಷ್ಟು
ಕಾವಲಿನಬುರುಜು—1992
w92 1/15 ಪು. 19

ವಾಚಕರಿಂದ ಪ್ರಶ್ನೆಗಳು

▪ಯಾರಾದರೂ ಸತ್ತಾಗ, ಕುಟುಂಬಕ್ಕೆ ಹೂವುಗಳನ್ನು ಕೊಡುವುದು ಅಥವಾ ಶವಸಂಸ್ಕಾರ ನಿಲಯಕ್ಕೆ ಹೂವುಗಳನ್ನು ಕಳುಹಿಸುವುದು ಕ್ರೈಸ್ತರಿಗೆ ಯೋಗ್ಯವೋ?

ಕೆಲವು ದೇಶಗಳಲ್ಲಿ ಹಾಗೆ ಮಾಡುವದು ವಾಡಿಕೆಯಾಗಿ ಇದೆ. ಆದರೆ ಶವಸಂಸ್ಕಾರಗಳಲ್ಲಿ ಹೂವುಗಳನ್ನು ಉಪಯೋಗಿಸುವುದಕ್ಕೆ ಕೆಲವೊಮ್ಮೆ ಒಂದು ಧಾರ್ಮಿಕ ಅರ್ಥವಿರುತ್ತದೆ. ಆದ್ದರಿಂದ ನಾವದನ್ನು ಸ್ವಲ್ಪ ಸವಿಸ್ತಾರವಾಗಿ ಪರೀಕ್ಷಿಸೋಣ, ವಿಶೇಷವಾಗಿ ಯಾಕಂದರೆ ಸುಳ್ಳುಧರ್ಮಕ್ಕೆ ಸಂಬಂಧಿಸಿದಂತೆ ತೋರುವ ತದ್ರೀತಿಯ ಬೇರೆ ಪದ್ಧತಿಗಳೂ ಅಲ್ಲಿರುವುದರಿಂದಲೇ. ಎನ್‌ಸೈಕ್ಲೊಪೀಡಿಯ ಆಫ್‌ ರಿಲಿಜನ್‌ (1987) ಇದರ ಕೆಲವು ಹೇಳಿಕೆಗಳನ್ನು ಗಮನಿಸಿರಿ:

“ಹೂವುಗಳು ದೇವ-ದೇವತೆಗಳೊಂದಿಗೆ ಜೊತೆಗೂಡಿದ್ದ ಮೂಲಕವಾಗಿ ಪವಿತ್ರ ಕ್ಷೇತ್ರಕ್ಕೆ ಸಂಬಂಧಿಸಲ್ಪಟ್ಟಿವೆ. ವಸಂತಋತು ಮತ್ತು ಪುಷ್ಪಗಳ ರೋಮನ್‌ ದೇವತೆಯಾದ ಫ್ಲೋರಾ, ಹೂವುಗಳಿಗೆ ಸುವಾಸನೆಯನ್ನೂ ಸೌಂದರ್ಯವನ್ನೂ ತರುತ್ತಾಳೆ. . . . ತಿಂಡಿಗಳನ್ನು ಮತ್ತು ಹೂವುಗಳನ್ನು ಅರ್ಪಿಸುವ ಮೂಲಕ ದೇವತೆಗಳನ್ನು ಶಾಂತಗೊಳಿಸಬಹುದು ಅಥವಾ ಆರಾಧಿಸಬಹುದು.

“ಮರಣ ಸಂಸ್ಕಾರಗಳೊಂದಿಗೆ ಹೂವುಗಳ ಜತೆಗೂಡುವಿಕೆಯು ಲೋಕದಲ್ಲೆಲ್ಲೂ ಸಂಭವಿಸುತ್ತದೆ. ಗ್ರೀಕರು ಮತ್ತು ರೋಮನರು ಮೃತರನ್ನು ಮತ್ತು ಅವರ ಸಮಾಧಿಗಳನ್ನು ಹೂವುಗಳಿಂದ ಆವರಿಸುತ್ತಿದ್ದರು. ಸಾಯುತ್ತಿರುವ ಬೌದ್ದರ ಆತ್ಮಗಳನ್ನು ಜಪಾನಿನಲ್ಲಿ ಒಂದು ತಾವರೆ ಹೂವಿನಲ್ಲಿ ಮೇಲಕ್ಕೆ ಒಯ್ಯಲಾಗುತ್ತದೆ, ದಫನಭೂಮಿಯಲ್ಲಿನ ಸಮಾಧಿಶಿಲೆಗಳು ಕೊರೆದ ತಾವರೆ ಹೂವುಗಳ ಮೇಲೆ ಆಧರಿಸಿ ನಿಂತಿರುತ್ತವೆ.  . . ತಾಹಿತಿ ದೇಶದವರು ಎಲೆಗಳಿಂದ ಸುತ್ತಿದ ಪುಷ್ಪಗುಚ್ಛಗಳನ್ನು ಮರಣಾನಂತರ ಶವದ ಪಕ್ಕದಲ್ಲಿಡುತ್ತಿದ್ದರು ಮತ್ತು ಮರಣಾನಂತರದ ಪವಿತ್ರ ಜೀವನದೊಳಗೆ ಅದರ ಪ್ರವೇಶವನ್ನು ಹಾಯಾಗಿಡಲು ಶವದ ಮೇಲೆ ಅನಂತರ ಪನ್ನೀರನ್ನು ಸುರಿಸಲಾಗುತ್ತದೆ.  . . ಹೂವುಗಳು ಪವಿತ್ರ ಸಂಸ್ಕಾರಗಳ ಸಮಯದಲ್ಲೂ ಧೂಪ ಅಥವಾ ಸುಗಂಧ ದ್ರವ್ಯದ ರೂಪದಲ್ಲಿ ಅಲ್ಲಿರುತ್ತವೆ.”

ಹೂವುಗಳು ಸುಳ್ಳುಧರ್ಮದ ಸಂಬಂಧದಲ್ಲಿ ಉಪಯೋಗಿಸಲ್ಪಡುತ್ತವೆ ಎಂಬ ಅರಿವುಳ್ಳವರಾಗಿ ಕೆಲವು ಕ್ರೈಸ್ತರು, ಶವಸಂಸ್ಕಾರಕ್ಕಾಗಿ ತಾವು ಹೂವುಗಳನ್ನು ಕಳಿಸಬಾರದು ಯಾ ಕೊಡಬಾರದು ಎಂದು ಭಾವಿಸಿರುತ್ತಾರೆ. ಅವರ ಭಾವನೆಯು ಲೌಕಿಕ ಪದ್ಧತಿಗಳನ್ನು ವರ್ಜಿಸುವ ಒಂದು ಅಪೇಕ್ಷೆಯನ್ನೂ ಪ್ರತಿಬಿಂಬಿಸಬಹುದು ಯಾಕಂದರೆ ಯೇಸುವಿನ ಹಿಂಬಾಲಕರು, “ಲೋಕದ ಭಾಗವಾಗದೇ” ಇರಬೇಕಾಗಿದೆ. (ಯೋಹಾನ 15:19) ಆದರೂ ಸಂಬಂಧಿತ ಬೈಬಲ್‌ ವಚನಗಳು ಮತ್ತು ಸ್ಥಳೀಕ ಭಾವುಕತೆಗಳು ಈ ವಿಷಯದ ಮೇಲೆ ಪ್ರಭಾವ ಬೀರುತ್ತವೆ.

ಜೀವಿತರ ಸಂತೋಷಕ್ಕಾಗಿ ದೇವರ ಒಳ್ಳೇ ದಾನಗಳಲ್ಲಿ ಹೂವುಗಳು ಒಂದು ಭಾಗವಾಗಿವೆ. (ಅಪೊಸ್ತಲರ ಕೃತ್ಯ 14:15-17; ಯಾಕೋಬ 1:17) ಆತನಿಂದ ನಿರ್ಮಿಸಲ್ಪಟ್ಟ ಪುಷ್ಪ ಸೌಂದರ್ಯವು ಸತ್ಯಾರಾಧನೆಯಲ್ಲಿ ಉಪಯೋಗಿಸಲ್ಪಟ್ಟಿದೆ. ಗುಡಾರದ ದೀಪಸ್ತಂಭವು “ಬಾದಾಮಿ ಹೂವುಗಳಿಂದ ಮತ್ತು ಪುಷ್ಪಗಳಿಂದ” ಅಲಂಕರಿಸಲ್ಪಟ್ಟಿತ್ತು. (ವಿಮೋಚನಕಾಂಡ 25:31-34) ದೇವಾಲಯದ ಕೆತ್ತನೆ ಕೆಲಸಗಳಲ್ಲಿ ಹೂವುಹಾರಗಳೂ ಖರ್ಜೂರವೃಕ್ಷಗಳೂ ಇದ್ದವು. (1 ಅರಸು 6:18, 29, 32) ಹೂವುಗಳ ಮತ್ತು ಹೂವುಮಾಲೆಗಳ ವಿಧರ್ಮಿ ಪ್ರಯೋಗವು, ಸತ್ಯಾರಾಧಕರು ಅದರ ಉಪಯೋಗವನ್ನು ಯಾವಾಗಲೂ ವರ್ಜಿಸಬೇಕೆಂಬ ಅರ್ಥಕೊಡಲಿಲವ್ಲೆಂಬದು ಸ್ಪಷ್ಟ.—ಅಪೊಸ್ತಲರ ಕೃತ್ಯಗಳು 14:13.

ಆದರೆ ಶವ ಸಂಸ್ಕಾರ ಪದ್ಧತಿಯೇ ಮುಂತಾದ ಸ್ಥೂಲ ಪದ್ಧತಿಗಳನ್ನು ಪಾಲಿಸುವ ಪ್ರಶ್ನೆಯ ವಿಷಯದಲ್ಲೇನು? ಬೈಬಲ್‌ ಅನೇಕ ಪದ್ಧತಿಗಳನ್ನು ನಿರ್ದೇಶಿಸುತ್ತದೆ, ಕೆಲವು ಸತ್ಯಾರಾಧಕರಿಗೆ ಅಯೋಗ್ಯವಾದದ್ದು, ಬೇರೆ ಕೆಲವು ದೇವಜನರಿಂದ ಅನುಸರಿಸಲ್ಪಡುವವುಗಳು. ಒಂದನೆಯ ಅರಸುಗಳು 18:28 ಬಾಳನ ಆರಾಧಕರು ತಮ್ಮ “ಪದ್ಧತಿಯ ಪ್ರಕಾರ,” “ಗಟ್ಟಿಯಾಗಿ ಕೂಗಿ ರಕ್ತಸೋರುವಷ್ಟು ಗಾಯ ಮಾಡಿಕೊಂಡ” ಕುರಿತು ತಿಳಿಸುತ್ತದೆ. ಇಂಥ ಪದ್ಧತಿಯನ್ನು ಸತ್ಯಾರಾಧಕರು ಪಾಲಿಸುವುದಿಲ್ಲ. ಇನ್ನೊಂದು ಕಡೆ, ರೂತಳು 4:7, “ಯಾವುದಾದರೊಂದು ವಸ್ತುವನ್ನು ತೆಗೆದುಕೊಳ್ಳುವಾಗಲೂ ಕೊಡುವಾಗಲೂ ಮಾತನ್ನು ದೃಢಪಡಿಸುವದಕ್ಕೊಸ್ಕರ ಇಸ್ರಾಯೇಲ್ಯರಲ್ಲಿ ಪೂರ್ವಕಾಲದಿಂದಿದ್ದ ಪದ್ಧತಿಯ” ಕುರಿತು ಯಾವ ಅಸಮ್ಮತಿಯನ್ನೂ ಸೂಚಿಸುವುದಿಲ್ಲ.

ದೇವರಿಗೆ ಸ್ವೀಕರಣೀಯವಾದ ಪದ್ಧತಿಗಳು ಕಟ್ಟುನಿಟ್ಟಿನ ಧಾರ್ಮಿಕ ವಿಷಯಗಳಲ್ಲೂ ವಿಕಾಸಗೊಳ್ಳಬಹುದು. ದೇವರು ಪಸ್ಕದಾಚರಣೆಯ ವಿವರವನ್ನು ಕೊಟ್ಟಾಗ, ದ್ರಾಕ್ಷಾಮದ್ಯದ ಉಪಯೋಗವನ್ನು ತಿಳಿಸಿರಲಿಲ್ಲ. ಆದರೆ ಒಂದನೆಯ ಶತಕದೊಳಗೆ ದ್ರಾಕ್ಷಾಮದ್ಯದ ಉಪಯೋಗವು ವಾಡಿಕೆಯಾಗಿತ್ತು. ಯೇಸು ಮತ್ತು ಅತನ ಅಪೊಸ್ತಲರು ಈ ಧಾರ್ಮಿಕ ಪದ್ಧತಿಯನ್ನು ತಿರಸ್ಕರಿಸಲಿಲ್ಲ. ಅದು ಆಕ್ಷೇಪಣೀಯವಲ್ಲವೆಂದು ಅವರು ಕಂಡರು ಮತ್ತು ಅನುಸರಿಸಿದರು.—ವಿಮೋಚನಕಾಂಡ 12:6-18; ಲೂಕ 22:15-18; 1 ಕೊರಿಂಥ 11:25.

ಕೆಲವು ಶವಸಂಸ್ಕಾರದ ಪದ್ಧತಿಗಳಲ್ಲೂ ಇದೇ ರೀತಿ ಇದೆ. ಐಗುಪ್ತ್ಯರಲ್ಲಿ ಶವಕ್ಕೆ ಸುಗಂಧದ್ರವ್ಯ ತುಂಬಿಸುವ ಪದ್ಧತಿಯಿತ್ತು. ನಂಬಿಗಸ್ತ ಮೂಲಪಿತೃ ಯೋಸೇಫನು, ‘ಇದು ಒಂದು ವಿಧರ್ಮಿ ಪದ್ಧತಿ, ಇಬ್ರಿಯರಾದ ನಾವು ಅದನ್ನು ವರ್ಜಿಸಬೇಕು’ ಎಂದು ಯಾಂತ್ರಿಕವಾಗಿ ಪ್ರತಿಕ್ರಿಯಿಸಲಿಲ್ಲ. ಬದಲಿಗೆ ಅವನು, “ತನ್ನ ಸೇವಕರಾದ ವೈದ್ಯರಿಗೆ—ನನ್ನ ತಂದೆಯ ಶವವನ್ನು ಸುಗಂಧದ್ರವ್ಯಗಳಿಂದ ತುಂಬಿ ಸಿದ್ಧಪಡಿಸಿರಿ ಎಂದು ಅಪ್ಪಣೆಕೊಟ್ಟನು.” ಯಾಕೋಬನನ್ನು ವಾಗ್ದತ್ತ ದೇಶದಲ್ಲಿ ಹೂಣಿಡಲು ಸಾಧ್ಯವಾಗುವಂತೆ ಹೀಗೆ ಮಾಡಿರಬೇಕೆಂಬದು ವ್ಯಕ್ತ. (ಆದಿಕಾಂಡ 49:29–50:3) ತದನಂತರ ಯೆಹೂದ್ಯರು, ಮೃತದೇಹಕ್ಕೆ ಸ್ನಾನಮಾಡಿಸುವ ಮತ್ತು ಸತ್ತ ದಿನವೇ ಅದನ್ನು ಹೂಣುವ ಬೇರೆ ಬೇರೆ ಶವಸಂಸ್ಕಾರ ಪದ್ಧತಿಗಳನ್ನು ವಿಕಾಸಿಸಿದರು. ಆರಂಭದ ಕ್ರೈಸ್ತರು ಅಂಥ ಯೆಹೂದಿ ಪದ್ಧತಿಗಳನ್ನು ಸ್ವೀಕರಿಸಿದ್ದರು.—ಅಪೊಸ್ತಲರ ಕೃತ್ಯಗಳು 9:37.

ಆದರೂ, ಒಂದು ಶವಸಂಸ್ಕಾರದ ಪದ್ಧತಿಯು ಆತ್ಮದ ಅಮರತ್ವದ ನಂಬಿಕೆಯಂಥ ಧಾರ್ಮಿಕ ಸುಳ್ಳಿನಲ್ಲಿ ಆಧಾರಿತ ಅರ್ಥದಲ್ಲಿ ವೀಕ್ಷಿಸಲ್ಪಡುವುದಾದರೆ, ಆಗೇನು? ಕೆಲವರು “ಎಲೆಗಳಿಂದ ಸುತ್ತಲ್ಪಟ್ಟ ಪುಷ್ಪಗುಚ್ಛವನ್ನು ಶವದ ಪಕ್ಕದಲ್ಲಿಟ್ಟು, ಅನಂತರ ಪವಿತ್ರ ಮರಣಾನಂತರದ ಜೀವಿತಕ್ಕೆ ಅದರ ಪ್ರವೇಶವನ್ನು ಹಾಯಾಗಿರಿಸಲು ಅದರ ಮೇಲೆ ಪನ್ನೀರನ್ನು ಸುರಿಸುವ” ಪದ್ಧತಿಯನ್ನು ನೆನಪಿಗೆ ತನ್ನಿರಿ. ಅಂಥ ಒಂದು ಪದ್ಧತಿಯು ಇರಬಹುದೆಂಬ ಸಂಗತಿಯು ದೇವರ ಸೇವಕರು ತದ್ರೀತಿಯ ಯಾವುದಾದರೂ ಪದ್ಧತಿಯನ್ನು ವರ್ಜಿಸಲೇ ಬೇಕು ಎಂದು ಅರ್ಥವಲ್ಲ. ಯೆಹೂದ್ಯರು, “ಮರಣಾನಂತರದ ಪವಿತ್ರ ಜೀವನದೊಳಗೆ ಪ್ರವೇಶವನ್ನು” ನಂಬದಿದ್ದರೂ, ಬೈಬಲು ಅನ್ನುವದು: “ಅವರು ಯೇಸುವಿನ ದೇಹವನ್ನು ತಕ್ಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.”—ಯೋಹಾನ 12:2-8; 19:40.

ಬೈಬಲ್‌ ಸತ್ಯದೊಂದಿಗೆ ಪರಸ್ಪರ ವಿರುದ್ಧವಾದ ಪದ್ಧತಿಗಳನ್ನು ಕ್ರೈಸ್ತರು ವರ್ಜಿಸಬೇಕು. (2 ಕೊರಿಂಥ 6:14-18) ಆದರೂ, ಎಲ್ಲಾ ತರದ ವಸ್ತುಗಳಿಗೆ, ಕುರುಹುಗಳಿಗೆ ಮತ್ತು ಪದ್ಧತಿಗಳಿಗೆ, ಒಂದಲ್ಲ ಒಂದು ಸಮಯದಲ್ಲಿ ಯಾ ಸ್ಧಳದಲ್ಲಿ, ಒಂದು ಸುಳ್ಳು ನಿರೂಪಣೆಯು ಕೊಡಲ್ಪಟ್ಟಿವೆ ಅಥವಾ ಅವು ಅಶಾಸ್ತ್ರೀಯ ಬೋಧನೆಗಳಿಗೆ ಬಂಧಕವಾಗಿವೆ. ವೃಕ್ಷಗಳು ಆರಾಧಿಸಲ್ಪಡುತ್ತವೆ, ಹೃದಯಾಕಾರವು ಪವಿತ್ರವೆಂದು ವೀಕ್ಷಿಸಲ್ಪಡುತ್ತದೆ ಮತ್ತು ಧೂಪವು ವಿಧರ್ಮಿ ಸಂಸ್ಕಾರಗಳಲ್ಲಿ ಉಪಯೋಗಿಸಲ್ಪಡುತ್ತದೆ. ಇದರ ಅರ್ಥವು ಕ್ರೈಸ್ತರು ಧೂಪವನ್ನೆಂದೂ ಉಪಯೋಗಿಸಬಾರದು, ಅಲಂಕಾರಕ್ಕಾಗಿ ಯಾವ ವೃಕ್ಷಗಳನ್ನೂ ಇಡಬಾರದು ಅಥವಾ ಹೃದಯಾಕಾರದ ಆಭರಣಗಳನ್ನು ತೊಡಲೇಬಾರದು ಎಂದೋ?a ಇದು ಯೋಗ್ಯವಾದ ತೀರ್ಮಾನವಲ್ಲ.

ಒಬ್ಬ ನಿಜ ಕ್ರೈಸ್ತನು ಗಮನಿಸದ್ದಕ್ಕದ್ದು: ಒಂದು ಪದ್ಧತಿಯನ್ನು ಅನುಸರಿಸುವಿಕೆಯು ನಾನು ಅಶಾಸ್ತ್ರೀಯ ನಂಬಿಕೆಗಳನ್ನು ಯಾ ಪದ್ಧತಿಗಳನ್ನು ಸ್ವೀಕರಿಸಿದ್ದೇನೆಂದು ಇತರರಿಗೆ ಸೂಚಿಸುತ್ತದೋ? ಕಾಲಾವಧಿಯು ಮತ್ತು ಸ್ಥಳವು ಉತ್ತರವನ್ನು ಪ್ರಭಾವಿಸಬಲ್ಲದು. ಒಂದು ಪದ್ಧತಿ (ಯಾ ಕುರುಹು)ಗೆ ಸಾವಿರಾರು ವರ್ಷಗಳ ಹಿಂದೆ ಒಂದು ಸುಳ್ಳು ಧಾರ್ಮಿಕ ಅರ್ಥವು ಇದ್ದಿರಬಹುದು ಅಥವಾ ಇಂದು ದೂರದ ಒಂದು ದೇಶದಲ್ಲಿ ಹಾಗೆ ಇರಲೂಬಹುದು. ಆದರೆ ಕಾಲ-ವ್ಯಯದ ಸಂಶೋಧನೆಗೆ ಹೋಗುವ ಬದಲಿಗೆ, ಹೀಗೆ ಕೇಳಿಕೊಳ್ಳಿರಿ: ‘ನಾನು ಎಲ್ಲಿ ವಾಸಿಸುತ್ತೇನೋ ಅಲ್ಲಿನ ಸಾಮಾನ್ಯ ವೀಕ್ಷಣೆಯೇನು?’—1 ಕೊರಿಂಥ 10:25-29.

ಒಂದು ಪದ್ಧತಿ (ಯಾ ಕುರುಹು, ಕ್ರೂಜೆಯಂಥ) ಸುಳ್ಳು ಧಾರ್ಮಿಕ ಅರ್ಥಕ್ಕೆ ಖ್ಯಾತಿವಾಗಿದ್ದಲ್ಲಿ, ಅದನ್ನು ವರ್ಜಿಸಿರಿ. ಹೀಗೆ ಕ್ರೈಸ್ತರು ಕ್ರೂಜೆಯ ರೂಪದಲ್ಲಿ ಹೂವುಗಳನ್ನು ಕಳುಹಿಸಲಾರರು ಅಥವಾ ಕೆಂಪು ಹೃದಯವು ಧಾರ್ಮಿಕ ಸೂಚಕಾರ್ಥ ಎಂದು ವೀಕ್ಷಿಸಲ್ಪಡುವುದಾದರೆ ಅದನ್ನೂ ವರ್ಜಿಸುವರು. ಅಥವಾ ಒಂದು ಶವಸಂಸ್ಕಾರದಲ್ಲಿ ಯಾ ಸಮಾಧಿ ಸ್ಥಳದಲ್ಲಿ ಧಾರ್ಮಿಕ ಅರ್ಥದ ಒಂದು ವಿಧಿವತ್ತಾದ ರೀತಿಯಲ್ಲಿ ಹೂವುಗಳು ಬಳಸಲ್ಪಡಬಹುದು. ಕ್ರೈಸ್ತರು ಇದನ್ನು ಕೂಡಾ ವರ್ಜಿಸಬೇಕು. ಆದರೂ ಶವಸಂಸ್ಕಾರದಲ್ಲಿ ಬರೇ ಒಂದು ಹೂವಿನಗುಚ್ಛವನ್ನು ಒದಗಿಸುವುದು ಅಥವಾ ಸ್ನೇಹಿತರೊಬ್ಬರಿಗೆ ಆಸ್ಪತ್ರೆಯಲ್ಲಿ ಹೂವುಗಳನ್ನು ಕೊಡುವುದನ್ನು ವರ್ಜಿಸಬೇಕಾದ ಒಂದು ಧಾರ್ಮಿಕ ಕ್ರಿಯೆಯಾಗಿ ಅವರು ವೀಕ್ಷಿಸಬಾರದು.b

ಅದಕ್ಕೆ ಪ್ರತಿಯಾಗಿ, ಹೂವುಗಳನ್ನು ಒದಗಿಸುವ ಪದ್ಧತಿಯು ಅನೇಕ ದೇಶಗಳಲ್ಲಿ ವಿಸ್ತಾರವಾಗಿ ಹರಡಿರುತ್ತದೆ ಮತ್ತು ಒಂದು ಯುಕ್ತವಾದ ದಯಾಪರತೆಯಾಗಿ ಅದು ವೀಕ್ಷಿಸಲ್ಪಡುತ್ತದೆ. ಹೂವುಗಳು ಮನೋಹರತೆಗೆ ನೆರವಾಗುತ್ತವೆ ಮತ್ತು ಒಂದು ದುಃಖದ ಪರಿಸ್ಥಿತಿಯನ್ನು ಹೆಚ್ಚು ಅಹ್ಲಾದಕರವಾಗಿ ಮಾಡಬಲ್ಲದು. ಸಹಾನುಭೂತಿ ಮತ್ತು ಅನುವೇದನೆಯ ಸೂಚಕವೂ ಅವು ಆಗಬಲ್ಲವು. ಬೇರೆಕಡೆಗಳಲ್ಲಿ ಅಂಥ ಭಾವಾತಿರೇಕಗಳನ್ನು ಪ್ರದರ್ಶಿಸುವ ವಿಧಾನವು ಅಸ್ವಸ್ಥರಿಗೆ ಅಥವಾ ದುಃಖಿತರಿಗೆ ಒಂದು ಊಟವನ್ನು ಒದಗಿಸುವಂಥಾ ಔದಾರ್ಯದ ಕ್ರಿಯೆಯಿಂದ ಪ್ರದರ್ಶಿಸಲ್ಪಡುತ್ತದೆ. (ದೊರ್ಕಳು ಇತರರಲ್ಲಿ ತೋರಿಸಿದ ಆಸಕ್ತಿ ಮತ್ತು ಗಮನಕ್ಕಾಗಿ ಅವಳಿಗೆ ತೋರಿಸಲ್ಪಟ್ಟ ಪ್ರೀತಿಯನ್ನು ನೆನಪಿಗೆ ತನ್ನಿರಿ. [ಅಪೊಸ್ತಲರ ಕೃತ್ಯಗಳು 9:36-39]) ಹಾಗೆ ಮಾಡುವುದು ಸುಳ್ಳು ನಂಬಿಕೆಯೊಂದಿಗೆ ಸ್ಪಷ್ಟವಾಗಿಗಿ ಸೇರಿಲ್ಲದಿರುವಾಗ ಕೆಲವು ಯೆಹೋವನ ಸಾಕ್ಷಿಗಳು ಆಸ್ಪತ್ರೆಯಲ್ಲಿರುವ ಒಬ್ಬ ಸ್ನೇಹಿತರಿಗಾಗಿ ಅಥವಾ ಒಂದು ಮರಣದ ಸಂದರ್ಭದಲ್ಲಿ ಚೇತನಕಾರಿಯಾದ ಹೂವುಗಳನ್ನು ಒದಗಿಸುವದನ್ನು ರೂಢಿಮಾಡಿದ್ದಾರೆ. ಮತ್ತು ವೈಯಕ್ತಿಕವಾಗಿ ಅವರು ತಮ್ಮ ಆಸಕ್ತಿ ಮತ್ತು ಅನುಕಂಪಗಳನ್ನು ಇತರ ವ್ಯಾವಹಾರ್ಯ ಕ್ರಿಯೆಗಳ ಮೂಲಕವೂ ಅಧಿಕವಾಗಿ ವ್ಯಕ್ತಪಡಿಸಬಹುದು.—ಯಾಕೋಬ 1:27; 2:14-17. (w91 10/15)

[ಅಧ್ಯಯನ ಪ್ರಶ್ನೆಗಳು]

a  ವಿಧರ್ಮಿಗಳು ತಮ್ಮ ಸಂಸ್ಕಾರಗಳಲ್ಲಿ ಪನ್ನೀರನ್ನು ದೀರ್ಘಕಾಲದಿಂದ ಉಪಯೋಗಿಸಿದ್ದಾರೆ, ಆದರೂ ದೇವಜನರು ಸತ್ಯಾರಾಧನೆಯಲ್ಲಿ ಧೂಪವನ್ನು ಬಳಸಿದ್ದು ತಪ್ಪಾಗಿರಲಿಲ್ಲ. (ವಿಮೋಚನಕಾಂಡ 30:1, 7, 8; 37:29; ಪ್ರಕಟನೆ 5:8) ದಶಂಬರ 22, 1976ರ ಅವೇಕ್‌!ನಲ್ಲಿ, “ಆರ್‌ ದೆ ಐಡಲ್ಟ್ರಸಸ್‌ ಡೆಕರೇಷನ್ಸ್‌?” ಸಹಾ ನೋಡಿರಿ.

b  ಕುಟುಂಬದ ಇಷ್ಟಗಳನ್ನು ಪರಿಗಣಿಸಬೇಕು, ಯಾಕಂದರೆ ಹೂಗಳನ್ನು ಕಳುಹಿಸ ಬಯಸುವ ಯಾರಾದರೂ ಅದಕ್ಕೆ ಬದಲಾಗಿ ಸಭೆಗಾಗಿ ಇಲ್ಲವೇ ಒಂದು ನಿರ್ದಿಷ್ಟ ಧರ್ಮಕಾರ್ಯಕ್ಕಾಗಿ ಕಾಣಿಕೆ ಕೊಡುವಂತೆ ಕೆಲವು ಕುಟುಂಬಗಳು ಪ್ರಕಟಿಸುತ್ತವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ