ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 1/8 ಪು. 12-14
  • ತಾಯಿಯ ಹಾಲಿನ ಪರವಾದ ಪ್ರಮಾಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತಾಯಿಯ ಹಾಲಿನ ಪರವಾದ ಪ್ರಮಾಣ
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅತ್ಯುತ್ತಮ ಪೋಷಣೆ
  • ಮೊಲೆಯುಣಿಸುವಿಕೆಯು ಜೀವಗಳನ್ನು ರಕ್ಷಿಸುತ್ತದೆ
  • ತಾಯಂದಿರಿಗೆ ಪ್ರಯೋಜನಗಳು
  • ಮೊಲೆಯುಣಿಸಲು ನಿರ್ಣಯಿಸುವುದು
  • ಮೊಲೆಯೂಡಿಸುವಿಕೆಯ ಮೂಲಪಾಠಗಳು
    ಎಚ್ಚರ!—1994
  • ಮಹಿಳೆಯರು ಸ್ತನದ ಕ್ಯಾನ್ಸರಿನ ಕುರಿತು ತಿಳಿಯಬೇಕಾದ ವಿಷಯಗಳು
    ಎಚ್ಚರ!—1994
  • ಹಸುಗೂಸುಗಳ ಅಗತ್ಯಗಳು ಮತ್ತು ಅಪೇಕ್ಷೆಗಳು
    ಎಚ್ಚರ!—2004
ಎಚ್ಚರ!—1994
g94 1/8 ಪು. 12-14

ತಾಯಿಯ ಹಾಲಿನ ಪರವಾದ ಪ್ರಮಾಣ

ನೈಜೀರಿಯದಲ್ಲಿನ ಎಚ್ಚರ! ಸುದ್ದಿಗಾರರಿಂದ

ರುಚಿಯಾದ, ಪಚನವಾಗಲು ಸುಲಭವಾದ, ಮತ್ತು ಬೆಳೆಯುವ ಶಿಶುಗಳ ಎಲ್ಲ ಪುಷ್ಟಿಕರವಾದ ಆಹಾರದ ಅಗತ್ಯಗಳನ್ನು ತಲಪುವ ಮಗುವಿನ ಆಹಾರದ ಕುರಿತು ಆಲೋಚಿಸಿರಿ. ರೋಗದ ವಿರುದ್ಧ ಕಾಪಾಡುವ ಮತ್ತು ಚಿಕಿತ್ಸೆ ನಡಸುವ “ರೋಗ ಪರಿಹಾರಕ”ವಾಗಿರುವ ಆಹಾರದ ಕುರಿತು ಆಲೋಚಿಸಿರಿ. ಏನೂ ಕ್ರಯವಿಲ್ಲದ ಮತ್ತು ಭೂಮಿಯ ಮೇಲೆ ಎಲ್ಲ ಕಡೆಯಲ್ಲಿ ಕುಟುಂಬಗಳಿಗೆ ಸುಲಭವಾಗಿ ದೊರಕುವ ಆಹಾರದ ಕುರಿತು ಆಲೋಚಿಸಿರಿ.

ಅಸಾಧ್ಯವೆಂದು, ನೀವನ್ನುವಿರೋ? ಒಳ್ಳೇದು, ಅಂತಹ ಒಂದು ಉತ್ಪಾದನೆಯು ಕೈಗಾರಿಕಾ ವಿಜ್ಞಾನಿಗಳಿಂದ ಬೆಳೆಯಿಸಲ್ಪಡದಿದ್ದರೂ, ಆಸ್ತಿತ್ವದಲ್ಲಿದೆ. ಅದು ತಾಯಿಯ ಹಾಲು.

ಈ ಅದ್ಭುತಕರ ಆಹಾರವು ಮಾನವ ಇತಿಹಾಸದಲ್ಲಿಲ್ಲಾ ಮಕ್ಕಳ ಆರೈಕೆಗೆ ನಿರ್ಣಾಯಕವೆಂದು ಪರಿಗಣಿಸಲಾಗಿತ್ತು. ಉದಾಹರಣೆಗಾಗಿ, ಫರೋಹನ ಮಗಳು ಕೂಸಾದ ಮೋಶೆಯನ್ನು ಕಂಡುಕೊಂಡಾಗ, ಅವಳು ಅವನನ್ನು ನೋಡಿಕೊಳ್ಳಲು “ಒಬ್ಬಳು ದಾದಿಯನ್ನು” ಕರೆದು ತರಲು ಅವನ ಸಹೋದರಿಯನ್ನು ಆದೇಶಿಸಿದಳು. (ವಿಮೋಚನಕಾಂಡ 2:5-9) ತರುವಾಯ, ಗ್ರೀಕ್‌ ಮತ್ತು ರೋಮ್‌ ಸಮಾಜಗಳಲ್ಲಿ, ಶ್ರೀಮಂತ ಹೆತ್ತವರ ಕೂಸುಗಳಿಗೆ ಹಾಲನ್ನು ಒದಗಿಸಲು ದೇಹದಾರ್ಢ್ಯವುಳ್ಳ ಮೊಲೆಯೂಡಿಸುವ ದಾದಿಗಳನ್ನು ಸಾಮಾನ್ಯವಾಗಿ ಕೆಲಸಕ್ಕಿಟ್ಟುಕೊಂಡಿದ್ದರು. ಆದಾಗ್ಯೂ, ಇತ್ತೀಚಿನ ದಶಮಾನಗಳಲ್ಲಿ, ಭಾಗಶಃ ಜಾಹೀರಾತಿನಿಂದಾಗಿ ಅನೇಕ ಜನರು, ಆಧುನಿಕ ಯಂತ್ರಕಲಾಶಾಸ್ತ್ರದ ಕೂಸು ಹಾಲುರಚನಾಸೂಚಿಗಳಿಗಿಂತ ಎದೆಹಾಲು ಕೀಳು ತೆರದಾಗಿದೆ ಎಂದು ಆಲೋಚಿಸುವಂತೆ ಮಾಡಿರುವುದರಿಂದ, ಮೊಲೆಯೂಡಿಸುವ ಪದ್ಧತಿಯು ತೀವ್ರ ಇಳಿತರ ಹೊಂದಿದೆ. ಇಂದು, “ಮೊಲೆಯೂಡಿಸುವಿಕೆಯು ಅತ್ಯುತ್ತಮ” ಎಂದು ಹೆಚ್ಚು ಹೆಚ್ಚಾಗಿ ತಾಯಂದಿರು ಅರಿತುಕೊಳ್ಳುತ್ತಿರುವಾಗ ಆ ಪ್ರವೃತ್ತಿಯು ವಿಪರ್ಯಸ್ತ ಹೊಂದುತ್ತಿದೆ.

ಅತ್ಯುತ್ತಮ ಪೋಷಣೆ

ಕೂಸುಗಳನ್ನು ಉಣಿಸುವ ಸೃಷ್ಟಿಕರ್ತನ ಅಂತರ್‌ನಿರ್ಮಿತ ವಿಧಾನದ ಮೇಲೆ ವಿಜ್ಞಾನಿಗಳು ಪ್ರಗತಿಯನ್ನು ಮಾಡಿರುವರೋ? ಇಲ್ಲ. ಯೂನಿಸೆಫ್‌ (ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ) ಹೇಳುವುದು: “ಕೂಸುಗಳಿಗೆ ಮೊದಲ ನಾಲ್ಕರಿಂದ ಆರು ತಿಂಗಳ ಜೀವನದಲ್ಲಿ ಎದೆಹಾಲು ಮಾತ್ರವೇ ಅತ್ಯುತ್ತಮ ಸಾಧ್ಯ ಆಹಾರ ಮತ್ತು ಪಾನೀಯವಾಗಿದೆ.” ಎಲ್ಲ ಸಸಾರಜನಕ, ಬೆಳವಣಿಗೆ ಉತ್ತೇಜಕ, ಕೊಬ್ಬು, ಶರ್ಕರ ಷ್ಟಿ, ರಾಸಾಯನಿಕ ಕಿಣ್ವ, ಜೀವಸ್ವತಗಳು, ಮತ್ತು ಜೀವಿತದ ಮೊದಲ ಕೆಲವು ತಿಂಗಳುಗಳಾವಧಿಯಲ್ಲಿ ಒಂದು ಕೂಸಿನ ಆರೋಗ್ಯಕರ ಬೆಳವಣಿಗೆಗೆ ಪ್ರಾಮುಖ್ಯವಾಗಿರುವ ಟ್ರೇಸ್‌ ರಾಸಾಯನಿಕ ಘಟಕಾಂಶಗಳು ಎದೆಹಾಲಿನಲ್ಲಿ ಸೇರಿವೆ.

ಎದೆಹಾಲು ಹೊಸದಾಗಿ ಹುಟ್ಟಿದ ಕೂಸುಗಳಿಗೆ ಅತ್ಯುತ್ತಮ ಆಹಾರವಾಗಿರುವುದು ಮಾತ್ರವಲ್ಲ ಅದು ಅವುಗಳಿಗೆ ಅಗತ್ಯವಿರುವ ಒಂದೇ ಅಹಾರವೂ ಆಗಿರುತ್ತದೆ. “ಜೀವನದ ಮೊದಲ ನಾಲ್ಕರಿಂದ ಆರು ತಿಂಗಳುಗಳಲ್ಲಿ, ಸಾಮಾನ್ಯ ಕೂಸಿನ ಪೌಷ್ಟಿಕ ಆವಶ್ಯಕತೆಗಳನ್ನು ನಿರ್ವಹಿಸಲು ಎದೆ ಹಾಲಲ್ಲದೆ ಇನ್ನಾವುದೇ ಆಹಾರ ಮತ್ತು ದ್ರವ—ನೀರೂ—ಅವಶ್ಯವಿಲ್ಲ,” ಎಂದು ಲೋಕಾರೋಗ್ಯ ಸಮ್ಮೇಳನ ಮೇ 1992ರಲ್ಲಿ ಪುನರ್‌ದೃಢೀಕರಿಸಿತು. ಬಿಸಿ, ಒಣ ವಾಯುಗುಣಗಳಲ್ಲಿಯೂ ಕೂಡ ಮಗುವಿನ ಬಾಯಾರಿಕೆಯನ್ನು ತಣಿಸಲು ಎದೆಹಾಲಿನಲ್ಲಿ ಸಾಕಷ್ಟು ನೀರಿರುತ್ತದೆ. ಹೆಚ್ಚಿನ ನೀರು ಯಾ ಸಿಹಿ ಪಾನೀಯಗಳ ಸೀಸೆಹಾಲನ್ನುಣಿಸುವುದು ಅನಗತ್ಯವಾಗಿದೆ ಮಾತ್ರವಲ್ಲ, ಕೂಸುಗಳು ಸೀಸೆಹಾಲನ್ನುಣ್ಣುವ ಸಾಪೇಕ್ಷ ನಿರಾತಂಕತೆಗೆ ಸಾಮಾನ್ಯವಾಗಿ ಆದ್ಯತೆಯನ್ನೀಯುವುದು, ಮಗುವು ಮೊಲೆಯುಣ್ಣುವುದನ್ನು ಪೂರ್ಣವಾಗಿ ನಿಲ್ಲಿಸಲು ಕಾರಣವಾಗಬಲ್ಲದು. ನಿಶ್ಚಯವಾಗಿಯೂ, ಜೀವನದ ಪ್ರಥಮ ಕೆಲವು ತಿಂಗಳುಗಳ ಅನಂತರ, ಇತರ ಆಹಾರ ಮತ್ತು ಪಾನೀಯವನ್ನು ಕೂಸಿನ ಪಥ್ಯಕ್ಕೆ ಕ್ರಮೇಣ ಸೇರಿಸಬೇಕು.

ಕೂಸುಗಳ ಆರೋಗ್ಯಕರ ಬೆಳವಣಿಗೆ ಮತ್ತು ವಿಕಸನವನ್ನು ಉತ್ತೇಜಿಸಲು ಯಾವುದೇ ಬದಲಿಯು, ಪದಾರ್ಥಗಳ ಅಂತಹ ಒಂದು ಆದರ್ಶ ಸಮತೂಕವನ್ನು ಒದಗಿಸುವುದಿಲ್ಲ. ಪುನರುತ್ಪನ್ನಕಾರಕ ಆರೋಗ್ಯ—ಲೋಕವ್ಯಾಪಕ ವಿವಾದಾಂಶ (ರಿಪ್ರೊಡಕಿವ್ಟ್‌ ಹೆಲ್ತ್‌—ಗ್ಲೋಬಲ್‌ ಇಷ್ಯು) ಎಂಬ ಪುಸ್ತಕವು ಅನ್ನುವುದು: “ಎದೆಹಾಲಿಗಾಗಿ ಬದಲಿಯ ಪ್ರಯತ್ನಗಳು ಯಶಸ್ವಿಯಾಗಿರುವುದಿಲ್ಲ. ಕೂಸು ಊಡುವಿಕೆಯ ವಿಷಯದ ಮೇಲಿನ ಐತಿಹಾಸಿಕ ಸಾಹಿತ್ಯವು, ಮೊಲೆಯುಣಿಸಲ್ಪಟ್ಟ ಕೂಸುಗಳಿಗಿಂತ ಮೊಲೆಯುಣಿಸಲ್ಪಡದ ಕೂಸುಗಳು ಸೋಂಕಿನ ಮತ್ತು ನ್ಯೂನಪೋಷಣೆಯ ಅತಿ ಹೆಚ್ಚಿನ ಗಂಡಾಂತರದಲ್ಲಿವೆ ಎಂದು ರುಜುವಾತಿನೊಂದಿಗೆ ಸಂಪೂರಿತವಾಗಿದೆ.”

ಮೊಲೆಯುಣಿಸುವಿಕೆಯು ಜೀವಗಳನ್ನು ರಕ್ಷಿಸುತ್ತದೆ

ಲೋಕಾರೋಗ್ಯ ಸಂಘದ ಪ್ರಕಾರ, ಜೀವನದ ಮೊದಲ ನಾಲ್ಕರಿಂದ ಆರು ತಿಂಗಳ ಕಾಲಾವಧಿಯಲ್ಲಿ ಎಲ್ಲ ತಾಯಂದಿರು ತಮ್ಮ ಕೂಸುಗಳಿಗೆ ಎದೆಹಾಲನ್ನೇ—ಬೇರೇನೂ ಅಲ್ಲ—ಊಡಿಸುವಲ್ಲಿ ಪ್ರತಿ ವರ್ಷ ಲೋಕವ್ಯಾಪಕವಾಗಿ ಹತ್ತು ಲಕ್ಷ ಶಿಶು ಮರಣಗಳು ತಡೆಯಲ್ಪಡುವುವು. ಯೂನಿಸೆಫ್‌ ವರದಿ ಲೋಕದ ಮಕ್ಕಳ ಸ್ಥಿತಿ 1992 (ದ ಸ್ಟೇಟ್‌ ಆಫ್‌ ದ ವರ್ಲ್ಡ್‌ ಚಿಲ್ಡ್ರನ್‌ 1992) ಹೇಳುವುದು: “ಬಡ ಸಮಾಜದಲ್ಲಿ ಕೇವಲ ಎದೆ ಹಾಲನ್ನೇ ಉಣಿಸಿದ ಮಗುವಿಗಿಂತ ಸೀಸೆಹಾಲು ಉಣಿಸಲ್ಪಟ್ಟ ಮಗುವು ಬಹುಮಟ್ಟಿಗೆ 15 ಪಟ್ಟು ಅತಿ ಭೇದಿ ರೋಗದಿಂದ ಸಾಯುವ ಸಂಭವವಿದೆ ಮತ್ತು ಬಹುಮಟ್ಟಿಗೆ 4 ಪಟ್ಟು ನ್ಯುಮೋನಿಯದಿಂದ ಸಾಯುವ ಸಂಭವವಿದೆ.”

ಇದು ಯಾಕೆ? ಒಂದು ಕಾರಣವು ಹುಡಿಗೊಳಿಸಲ್ಪಟ್ಟ ಹಾಲು, ತಾಯಿಯ ಹಾಲಿಗಿಂತ ಪೌಷ್ಟಿಕಾಂಶದಲ್ಲಿ ಕೀಳು ತೆರದಾಗಿ ಇರುವುದು ಮಾತ್ರವಲ್ಲ, ಅದು ಅನೇಕ ಬಾರಿ ಅಶುದ್ಧ ನೀರನ್ನು ಬೆರಸಿ ತೆಳ್ಳಗೆ ಮಾಡಲ್ಪಟ್ಟು, ಅನಂತರ ಕ್ರಿಮಿಶುದ್ಧಿ ಮಾಡದ ಉಣಿಸುವ ಸೀಸೆಗಳಲ್ಲಿ ನೀಡಲಾಗುತ್ತದೆ. ಹೀಗೆ ಸೀಸೆಯ ಹಾಲು, ವಿಕಾಸಶೀಲ ದೇಶಗಳಲ್ಲಿ ಮಕ್ಕಳ ದೊಡ್ಡ ಕೊಲೆಗಾರರಾದ, ಅತಿಭೇದಿ ರೋಗ ಮತ್ತು ಉಸಿರಾಟದ ಸೋಂಕುಗಳನ್ನುಂಟು ಮಾಡುವ ಏಕಾಣುಜೀವಿ ಮತ್ತು ಸಾಂಕ್ರಾಮಿಕ ವಿಷಾಣುಗಳಿಂದ ಸುಲಭವಾಗಿ ಕಲುಷಿತಗೊಳ್ಳಬಹುದು. ವಿರುದ್ಧಭಾವದಲ್ಲಿ, ಮೊಲೆಯಿಂದ ನೇರವಾಗಿ ಕೊಡುವ ಹಾಲು ಸುಲಭವಾಗಿ ಕಲುಷಿತಗೊಳ್ಳುವುದಿಲ್ಲ, ಬೆರೆಸುವ ಅಗತ್ಯವಿಲ್ಲ, ಹಾಳಾಗುವುದಿಲ್ಲ, ಮತ್ತು ಅತಿ ತೆಳ್ಳಗಾಗುವುದಿಲ್ಲ.

ಮೊಲೆಯೂಡಿಸುವಿಕೆಯು ಜೀವಗಳನ್ನು ರಕ್ಷಿಸುವುದಕ್ಕೆ ಎರಡನೆಯ ಕಾರಣವೇನೆಂದರೆ, ತಾಯಿಯ ಹಾಲಿನಲ್ಲಿ ಕೂಸನ್ನು ರೋಗದ ವಿರುದ್ಧ ಸಂರಕ್ಷಿಸುವ ಪ್ರತಿವಿಷ ವಸ್ತುಗಳು ಸೇರಿರುತ್ತವೆ. ಮೊಲೆಯೂಡಿಸಲ್ಪಟ್ಟ ಕೂಸುಗಳಲ್ಲಿ ಅತಿಭೇದಿ ರೋಗ ಯಾ ಇತರ ಸೋಂಕುಗಳು ಸಂಭವಿಸುವಾಗಲೂ, ಅವುಗಳು ಕಡಮೆ ತೀಕ್ಷೈವಾಗಿರುತ್ತವೆ ಮತ್ತು ಚಿಕಿತ್ಸಿಸಲು ಸುಲಭವಾಗಿರುತ್ತವೆ. ಎದೆಹಾಲಿನಿಂದ ಬೆಳೆದ ಕೂಸುಗಳು ದಂತ ರೋಗ, ಅರ್ಬುದ ರೋಗ, ಮಧುಮೇಹ, ಮತ್ತು ಅಲರ್ಜಿಗಳಿಗೆ ಕಡಮೆ ವಾಲುವಂತೆ ತೋರುತ್ತದೆಂದು ಕೂಡ ಸಂಶೋಧಕರು ಸಲಹೆ ನೀಡುತ್ತಾರೆ. ಮತ್ತು ಇದಕ್ಕೆ ಜೋರಾದ ಚೀಪುವ ಕ್ರಿಯೆಯ ಅಗತ್ಯವಿದೆಯಾದುದರಿಂದ, ಮೊಲೆಯೂಡಿಸುವಿಕೆಯು ಕೂಸುಗಳಲ್ಲಿ ಮುಖದಲಿಯ್ಲ ಮೂಳೆ ಮತ್ತು ಸ್ನಾಯುಗಳ ಯೋಗ್ಯ ಬೆಳವಣಿಗೆಯನ್ನು ಪ್ರವರ್ಧಿಸಬಹುದು.

ತಾಯಂದಿರಿಗೆ ಪ್ರಯೋಜನಗಳು

ಮೊಲೆಯೂಡಿಸುವಿಕೆಯು ಮಗುವಿಗೆ ಮಾತ್ರ ಪ್ರಯೋಜನ ಕೊಡುವುದಲ್ಲ; ಅದು ತಾಯಿಗೂ ಪ್ರಯೋಜನಗಳನ್ನುಂಟು ಮಾಡುತ್ತದೆ. ಒಂದು ವಿಷಯವು, ಮಗುವು ಮೊಲೆಯನ್ನು ಚೀಪುವುದು ಆಕ್ಸಿಟೋಸನ್‌ ಚೋದಕಸ್ರಾವದ ಬಿಡುಗಡೆಯನ್ನು ಪ್ರಚೋದಿಸುತ್ತದೆ, ಇದು ಹಾಲನ್ನು ಬಿಡುಗಡೆಗೊಳಿಸಲು ಮತ್ತು ಹರಿಯಲು ಸಹಾಯ ಮಾಡುವುದು ಮಾತ್ರವಲ್ಲ, ಗರ್ಭಾಶಯದ ಕುಗ್ಗುವಿಕೆಯು ಕೂಡ ಸಂಭವಿಸುವಂತೆ ಮಾಡುತ್ತದೆ. ಹಡೆದ ಅನಂತರ ಒಡನೆಯೇ ಗರ್ಭಾಶಯವು ಕುಗ್ಗುವಾಗ, ದೀರ್ಘ ರಕ್ತಸ್ರಾವವು ಸಂಭವಿಸುವುದು ವಿರಳ. ಮೊಲೆಯೂಡಿಸುವಿಕೆಯು ಸ್ತ್ರೀ ಅಂಡಾಣು ಮತ್ತು ಮುಟ್ಟಿನ ಮರಳುವಿಕೆಯನ್ನು ಕೂಡ ನಿಧಾನಿಸುತ್ತದೆ. ಇದು ಮುಂದಿನ ಗರ್ಭಧಾರಣೆಯನ್ನು ನಿಧಾನಿಸುವಂತೆ ಅನುಕೂಲಿಸುತ್ತದೆ. ಗರ್ಭಧಾರಣೆಯ ನಡುವಣ ದೀರ್ಘ ಮಧ್ಯಾವಧಿಗಳೆಂದರೆ ತಾಯಂದಿರು ಮತ್ತು ಕೂಸುಗಳು ಆರೋಗ್ಯವಂತರಾಗಿರುತ್ತಾರೆಂದು ಅರ್ಥ.

ಮೊಲೆಯೂಡಿಸುವಿಕೆಯು ಅಂಡಾಶಯದ ಮತ್ತು ಸ್ತನದ ಕ್ಯಾನ್ಸರನ್ನು ತಗ್ಗಿಸುವುದು ಸ್ತ್ರೀಯರಿಗೆ ಇನ್ನೊಂದು ದೊಡ್ಡ ಪ್ರಯೋಜನವಾಗಿದೆ. ತನ್ನ ಕೂಸಿಗೆ ಮೊಲೆಯೂಡಿಸದೇ ಇರುವುದಕ್ಕಿಂತ ಮೊಲೆಯೂಡಿಸುವ ಒಬ್ಬ ಸ್ತ್ರೀಗೆ ಸ್ತನದ ಕ್ಯಾನ್ಸರಿನ ಅಪಾಯ ಅರ್ಧದಷ್ಟೆಂದು ಕೆಲವು ಪರಿಣತರು ಹೇಳುತ್ತಾರೆ.

ಸ್ತನಪಾನದ ಪ್ರಯೋಜನಗಳ ಪಟ್ಟಿಯಲ್ಲಿ ತಾಯಿ-ಮಗುವಿನ ಅಂಟಿಕೆಯನ್ನು ಕಡೆಗಣಿಸಬಾರದು. ಅದರಲ್ಲಿ ಆಹಾರವನ್ನು ಕೊಡುವುದು ಮಾತ್ರವಲ್ಲದೆ, ಬಾಯಿಮಾತಿನ ಸಂಪರ್ಕ, ಚರ್ಮಕ್ಕೆ ಚರ್ಮದ ಸಂಪರ್ಕ, ಮತ್ತು ದೈಹಿಕ ಬೆಚ್ಚನೆಯೂ ಒಳಗೂಡುತ್ತದಾದ್ದರಿಂದ, ಮೊಲೆಯೂಡಿಸುವಿಕೆಯು ತಾಯಿ ಮತ್ತು ಮಗುವಿನ ನಡುವಣ ಒಂದು ಪ್ರಾಮುಖ್ಯ ಅಂಟಿಕೆಯನ್ನು ಹೊಸೆಯಲು ಸಹಾಯ ಮಾಡಬಲ್ಲದು ಮತ್ತು ಮಗುವಿನ ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗೆ ಸಹಾಯಿಸಬಹುದು.

ಮೊಲೆಯುಣಿಸಲು ನಿರ್ಣಯಿಸುವುದು

ಕೆಲವು ಆವಶ್ಯಕತೆಗಳನ್ನು ತಲಪುವಲ್ಲಿ ದೈಹಿಕವಾಗಿ ಬಹುತೇಕ ಎಲ್ಲ ತಾಯಂದಿರು ಅವರ ಕೂಸುಗಳಿಗೆ ಸಾಕಷ್ಟು ಹಾಲನ್ನು ಒದಗಿಸಲು ಸಮರ್ಥರಿದ್ದಾರೆ. ಮೊಲೆಯೂಡಿಸುವಿಕೆಯನ್ನು ಜನನದ ಅನಂತರ ಆದಷ್ಟು ಬೇಗನೆ, ಮಗುವನ್ನು ಹಡೆದಾನಂತರದ ಮೊದಲ ತಾಸಿನೊಳಗೆ, ಆರಂಭಿಸಬೇಕು. (ಕಲಾಸ್ಟ್ರಂ ಎಂದು ಕರೆಯಲ್ಪಡುವ ದಟ್ಟ ಹಳದಿ ಬಣ್ಣದ ಪದಾರ್ಥವಾದ ಮೊದಲ ಮೊಲೆ ಹಾಲು, ಕೂಸುಗಳಿಗೆ ಉತ್ತಮವಾಗಿದೆ ಮತ್ತು ರೋಗ ತಾಕುವುದರಿಂದ ರಕ್ಷಿಸಲು ಸಹಾಯಿಸುತ್ತದೆ.) ಅನಂತರ, ರಾತ್ರಿಯಾವಧಿಯನ್ನೂ ಸೇರಿಸಿ, ಕೂಸುಗಳು ಹಸಿದಾಗಲೆಲ್ಲಾ— ಒಂದು ಸ್ಥಿರ ವೇಳಾ ಪಟ್ಟಿಗನುಸಾರವಾಗಿ ಅಲ್ಲ—ಮೊಲೆಯುಣಿಸಬೇಕು. ಸ್ತನದ ಕಡೆಗೆ ಮಗುವಿನ ಸ್ಥಾನವನ್ನು ಸರಿಯಾಗಿ ಇಡುವುದೂ ಪ್ರಾಮುಖ್ಯವಾಗಿದೆ. ಈ ವಿಷಯಗಳಲ್ಲಿ ಒಬ್ಬ ಅನುಭವಿ ಮತ್ತು ಸಹಾನುಭೂತಿಯ ಸಲಹೆಗಾರರು ಸಹಾಯವನ್ನು ಒದಗಿಸಬಲ್ಲರು.

ನಿಶ್ಚಯವಾಗಿಯೂ, ಒಬ್ಬ ತಾಯಿಯು ಆಕೆಯ ಕೂಸಿಗೆ ಮೊಲೆಯೂಡಿಸಲು ನಿರ್ಣಯಿಸುತ್ತಾಳೊ ಇಲ್ಲವೊ ಎಂಬುದು ಅವಳ ದೈಹಿಕ ಸಾಮರ್ಥ್ಯಕ್ಕಿಂತ ಹೆಚ್ಚಾದುದರ ಮೇಲೆ ಅವಲಂಬಿಸಿರುತ್ತದೆ. ಲೋಕದ ಮಕ್ಕಳ ಸ್ಥಿತಿ 1992 ವರದಿಸುವುದು: “ತಮ್ಮ ಮಕ್ಕಳಿಗೆ ಸಾಧ್ಯವಿರುವಷ್ಟು ಉತ್ತಮ ಆರಂಭವನ್ನು ಕೊಡಬೇಕಾಗಿರುವಲ್ಲಿ ತಾಯಂದಿರಿಗೆ ಆಸ್ಪತ್ರೆಗಳ ಬೆಂಬಲದ ಅಗತ್ಯವಿದೆ; ಆದರೆ ಮೊಲೆಯೂಡಿಸುವಿಕೆಯನ್ನು ಮುಂದುವರಿಸಬೇಕಾಗಿರುವಲ್ಲಿ, ಅವರಿಗೆ ಧಣಿಗಳ, ಟ್ರೇಡ್‌ ಯೂನಿಯನ್‌ಗಳ, ಸಮಾಜಗಳ—ಮತ್ತು ಪುರುಷರ ಬೆಂಬಲವು ಕೂಡ ಬೇಕಾಗಿದೆ.” (g93 9/22)

[ಪುಟ 13 ರಲ್ಲಿರುವ ಚೌಕ]

ವಿಕಾಸಶೀಲ ಲೋಕದಲ್ಲಿ ಮೊಲೆಯೂಡಿಸುವುದು

1. ಕೂಸಿಗೆ ಜೀವನದ ಮೊದಲ ನಾಲ್ಕರಿಂದ ಆರು ತಿಂಗಳುಗಳಲ್ಲಿ ಎದೆ ಹಾಲು ಮಾತ್ರ ಇರುವುದರಲ್ಲಿ ಅತ್ಯುತ್ತಮವಾದ ಆಹಾರ ಮತ್ತು ಪಾನೀಯವಾಗಿದೆ.

2. ಕೂಸುಗಳು ಜನಿಸಿದ ಅನಂತರ ಸಾಧ್ಯವಾದಷ್ಟು ಬೇಗನೆ ಮೊಲೆಯೂಡುವಿಕೆಯನ್ನು ಪ್ರಾರಂಭಿಸಬೇಕು. ಕಾರ್ಯತಃ ಪ್ರತಿಯೊಬ್ಬ ತಾಯಿಯು ಅವಳ ಮಗುವಿಗೆ ಮೊಲೆಯೂಡಿಸಬಲ್ಲಳು.

3. ಅಡಿಗಡಿಗೆ ಚೀಪುವಿಕೆಯು ಕೂಸಿನ ಅಗತ್ಯಕ್ಕೆ ಸಾಕಷ್ಟು ಎದೆ ಹಾಲನ್ನು ಉತ್ಪಾದಿಸಲು ಅಗತ್ಯವಾಗಿದೆ.

4. ಸೀಸೆಹಾಲುಣಿಸುವಿಕೆಯು ಗಂಭೀರ ಕಾಯಿಲೆಗೆ ಮತ್ತು ಮರಣಕ್ಕೆ ನಡೆಸಬಲ್ಲದು.

5. ಮೊಲೆಯೂಡಿಸುವಿಕೆಯು ಮಗುವಿನ ಜೀವಿತದ ಎರಡನೇ ವರುಷದ ಕೊನೆಯ ವರೆಗೆ ಮತ್ತು ಸಾಧ್ಯವಿದ್ದಲ್ಲಿ ಇನ್ನೂ ದೀರ್ಘ ಮುಂದುವರಿಯಬೇಕು.

ಮೂಲ: ಜೀವನಕ್ಕಾಗಿ ಸತ್ಯಾಂಶಗಳು (ಫ್ಯಾಕ್ಟ್ಸ್‌ ಆಫ್‌ ಲೈಫ್‌), ಯೂನಿಸೆಫ್‌, ಹೂ, ಮತ್ತು ಯೂನೆಸ್ಕೊ ಮೂಲಕ ಜಂಟಿ ಪ್ರಕಾಶಿತ.

[ಪುಟ 14 ರಲ್ಲಿರುವ ಚೌಕ]

ಮೊಲೆಯೂಡಿಸುವಿಕೆ ಮತ್ತು ಏಯ್ಡ್ಸ್‌

ಏಪ್ರಿಲ್‌ 1992ರ ಕೊನೆಯಲ್ಲಿ, ಲೋಕಾರೋಗ್ಯ ಸಂಘ ಮತ್ತು ಯೂನಿಸೆಫ್‌, ಏಯ್ಡ್ಸ್‌ ಮತ್ತು ಮೊಲೆಯೂಣಿಸುವಿಕೆಯ ಸಂಬಂಧವನ್ನು ಪರಿಗಣಿಸಲು ಒಂದು ಅಂತರ ರಾಷ್ಟ್ರೀಯ ಪರಿಣತರ ಗುಂಪನ್ನು ಒಟ್ಟುಗೂಡಿಸಿತು. ಏಯ್ಡ್ಸ್‌ ಕುರಿತ ಲೋಕಾರೋಗ್ಯ ಸಂಘದ ಲೋಕವ್ಯಾಪಕ ಕಾರ್ಯಕ್ರಮದ ನಿರ್ದೇಶಕರಾದ ಡಾ. ಮೈಕಲ್‌ ಮರ್ಸನ್‌ರ ಮೂಲಕ ಈ ಕೂಟದ ಅಗತ್ಯವನ್ನೇ ವಿವರಿಸಲಾಗಿತ್ತು. ಅವರಂದದ್ದು: “ಮೊಲೆಯೂಡಿಸುವಿಕೆಯು ಮಗುವಿನ ಪಾರಾಗುವಿಕೆಯ ನಿರ್ಣಾಯಕ ಘಟಕಾಂಶವಾಗಿದೆ. ಮೊಲೆಯೂಡಿಸುವಿಕೆಯ ಮೂಲಕ ಏಯ್ಡ್ಸ್‌ನಿಂದ ಸಾಯುವ ಮಗುವಿನ ಗಂಡಾಂತರವು ಮೊಲೆಯೂಡಿಸದಿರುವಲ್ಲಿ ಇತರ ಕಾರಣಗಳಿಂದ ಸಾಯುವ ಗಂಡಾಂತರದ ವಿರುದ್ಧ ಸರಿದೂಗಬೇಕು:”

ಲೋಕಾರೋಗ್ಯ ಸಂಘದ ಪ್ರಕಾರ, ಏಚ್‌ಐವಿ ಸೋಂಕು ತಗಲಿದ ತಾಯಂದಿರಿಗೆ ಜನಿಸಿದ ಎಲ್ಲ ಕೂಸುಗಳಲ್ಲಿ ಮೂರರ ಒಂದರಷ್ಟು ಕೂಡ ಸೋಂಕು ತಗಲಿದವುಗಳಾಗಿವೆ. ಗರ್ಭಧಾರಣೆ ಮತ್ತು ಹೆರಿಗೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹೆಚ್ಚಿನ ರೋಗದ ರವಾನೆಯು ಸಂಭವಿಸುವಾಗ, ಅದು ಮೊಲೆಯೂಡಿಸುವಿಕೆಯ ಮೂಲಕವೂ ಸಂಭವಿಸಬಲ್ಲದೆಂದು ರುಜುವಾತು ಇದೆ. ಆದಾಗ್ಯೂ, “ಏಚ್‌ಐವಿ ಸೋಂಕು ತಗಲಿದ ತಾಯಂದಿರ ಮೂಲಕ ಮೊಲೆಯೂಡಿಸಲ್ಪಟ್ಟ ಕೂಸುಗಳ ಹೆಚ್ಚಿನ ಪಾಲಿಗೆ, ಮೊಲೆಯೂಡಿಸುವಿಕೆಯ ಮೂಲಕ ಸೋಂಕು ಹಿಡಿಸಲ್ಪಡುವುದಿಲ್ಲ,” ಎನ್ನುತ್ತದೆ ಲೋಕಾರೋಗ್ಯ ಸಂಘ.

ಪರಿಣತರ ತಂಡವು ತೀರ್ಮಾನಿಸಿದ್ದು: “ಎಲ್ಲಿ ಸೋಂಕು ರೋಗಗಳು ಮತ್ತು ನ್ಯೂನ ಪೋಷಣೆಯು ಕೂಸು ಮರಣಗಳ ಪ್ರಮುಖ ಕಾರಣವಾಗಿದೆಯೊ ಮತ್ತು ಕೂಸು ಮರಣದ ಪ್ರಮಾಣವು ಉನ್ನತವಾಗಿದೆಯೊ, ಅಲ್ಲಿ—ಏಚ್‌ಐವಿ ಸೋಂಕಿಸಲ್ಪಟ್ಟವರನ್ನು ಸೇರಿಸಿ—ಬಸುರಾದ ಸ್ತ್ರೀಯರಿಗೆ ಮೊಲೆಯೂಡಿಸುವಿಕೆಯು ಸಾಮಾನ್ಯ ಬುದ್ಧಿವಾದವಾಗಿರಬೇಕು. ಇದು ಏಕೆಂದರೆ, ಮೊಲೆ ಹಾಲಿನ ಮೂಲಕ ಅವರ ಕೂಸಿಗೆ ಬರುವ ಏಚ್‌ಐವಿ ಸೋಂಕಿನ ಅಪಾಯವು ಮೊಲೆ ಹಾಲನ್ನು ಉಣಿಸದಿರುವಲ್ಲಿ ಇತರ ಕಾರಣಗಳಿಂದ ಬರುವ ಮರಣಾಪಾಯಗಳಿಗಿಂತ ಕಡಮೆಯಾಗಿರುವ ಸಂಭವವಿರುವುದೇ.

“ಇನ್ನೊಂದು ಕಡೆ, ಬಾಲ್ಯಾವಸ್ಥೆಯಲ್ಲಿ ಮರಣದ ಮುಖ್ಯ ಕಾರಣವು ಸೋಂಕು ರೋಗಗಳಾಗದೇ ಇರುವ ಸಂದರ್ಭದಲ್ಲಿ ಮತ್ತು ಶಿಶು ಮರಣದ ಪ್ರಮಾಣವು ಕಡಮೆ ಇರುವಾಗ, . . . . ಏಚ್‌ಐವಿ ಸೋಂಕಲ್ಪಟ್ಟವರೆಂದು ತಿಳಿದಿರುವ ಬಸುರಾದ ಸ್ತ್ರೀಯರಿಗೆ, ಸಾಮಾನ್ಯ ಬುದ್ಧಿವಾದವು ಮೊಲೆಯುಣಿಸುವುದಕ್ಕೆ ಬದಲು ಅವರು ಸುರಕ್ಷೆಯ ಉಣಿಸುವಿಕೆಯ ಅನ್ಯಮಾರ್ಗವನ್ನು ಉಪಯೋಗಿಸಬೇಕು ಎಂಬುದಾಗಿರಬೇಕು.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ