ಮಹಿಳೆಯರು ಸ್ತನದ ಕ್ಯಾನ್ಸರಿನ ಕುರಿತು ತಿಳಿಯಬೇಕಾದ ವಿಷಯಗಳು
ಸ್ತನದ ಕ್ಯಾನ್ಸರಿನ ಕೇಸುಗಳ ಸಂಖ್ಯೆ ಪ್ರತಿಯೊಂದು ಭೂಖಂಡದಲ್ಲಿ ವೃದ್ಧಿಯಾಗುತ್ತಿದೆ. ಕೆಲವು ಅಂದಾಜುಗಳಿಗನುಸಾರ, ವರ್ಷ 2000ದೊಳಗೆ, ಜಗತ್ತಿನಲ್ಲಿ ಪ್ರತಿ ವರ್ಷ, ಸುಮಾರು ಹತ್ತು ಲಕ್ಷ ಹೊಸ ಕೇಸುಗಳು ಸ್ತನದ ಕ್ಯಾನ್ಸರೆಂದು ನಿರ್ಣಯಿಸಲ್ಪಡುವುವು.
ಈ ರೋಗವನ್ನು ಪಡೆಯುವುದರಿಂದ ಯಾವ ಮಹಿಳೆಯಾದರೂ ವಿಮುಕ್ತಳೊ? ಅದನ್ನು ತಡೆಯಲು ಏನನ್ನಾದರೂ ಮಾಡುವುದು ಸಾಧ್ಯವೆ? ಮತ್ತು ಈ ಶತ್ರುವಿನೊಂದಿಗೆ ಹೋರಾಡುತ್ತಿರುವವರಿಗೆ ಯಾವ ಸಾಂತ್ವನ ಮತ್ತು ಬೆಂಬಲವು ಅವಶ್ಯವಿದೆ?
ಅಧಿಕಾಂಶ ಚರ್ಮದ ಕ್ಯಾನ್ಸರ್ಗಳು ಸೂರ್ಯನ ನೀಲಲೋಹಿತಾತೀತ ಕಿರಣಗಳಿಂದ ಉಂಟಾಗುತ್ತವೆ. ಹೆಚ್ಚಿನ ಶ್ವಾಸಕೋಶದ ಕ್ಯಾನ್ಸರ್ಗಳು ಧೂಮಪಾನ ಮಾಡುವುದರಿಂದ ಉಂಟಾಗುತ್ತವೆ. ಆದರೆ ಸ್ತನ್ಯ ಕ್ಯಾನ್ಸರಿಗೆ ಇದೇ ಒಂದು ಸಂಗತಿ ಕಾರಣವೆಂದು ಸ್ಥಾಪಿಸಲ್ಪಟ್ಟಿರುವುದಿಲ್ಲ.
ಆದರೂ, ಇತ್ತೀಚಿನ ಸಂಶೋಧನೆಗನುಸಾರ, ತಳಿಶಾಸ್ತ್ರೀಯ, ಪರಿಸರೀಯ ಮತ್ತು ಚೋದಕ ಸ್ರಾವ ಸಂಬಂಧಿತ ಸಂಗತಿಗಳು ಸ್ತನದ ಕಾನ್ಸರಿನಲ್ಲಿ ಒಂದು ಪಾತ್ರವನ್ನು ವಹಿಸಬಹುದು. ಈ ಸಂಗತಿಗಳಿಗೆ ಒಡ್ಡಲ್ಪಟ್ಟಿರುವವರು ಹೆಚ್ಚಿನ ಅಪಾಯದಲ್ಲಿರಬಹುದು.
ಕುಟುಂಬ ಘಟನಾವಳಿ
ತಾಯಿ, ಸಹೋದರಿ, ಅಥವಾ ತಾಯಿಯ ಸಹೋದರಿ ಅಥವಾ ಅಜಿಯ್ಜಂತಹ, ಸ್ತನದ ಕ್ಯಾನ್ಸರಿರುವ ಕುಟುಂಬ ಸದಸ್ಯೆಯಿರುವ ಒಬ್ಬ ಸ್ತ್ರೀಗೆ, ಅದನ್ನು ವಿಕಸಿಸುವ ಹೆಚ್ಚಿನ ಸಂಭವನೀಯತೆಯಿದೆ. ಅವರಲ್ಲಿ ಅನೇಕರಿಗೆ ಈ ರೋಗವಿದ್ದಿರುವಲ್ಲಿ, ಆಕೆಗಿರುವ ಅಪಾಯವು ಇನ್ನೂ ಹೆಚ್ಚಿನದ್ದು.
ಡಾ. ಪೆಟ್ರಿಶ ಕೆಲಿ, ಎಂಬ ಅಮೆರಿಕದ ತಳಿಶಾಸ್ತ್ರಜ್ಞೆ, ಎಚ್ಚರ!ಕ್ಕೆ ಹೇಳಿದ್ದೇನಂದರೆ, ಆನುವಂಶಿಕ ಸಂಗತಿಗಳು ಇದರಲ್ಲಿ ಸೇರಿರುವುದಾದರೂ, ಅವು ಎಲ್ಲ ಸ್ತನ್ಯ ಕಾನ್ಸರಿನ 5ರಿಂದ 10 ಪ್ರತಿಶತಗಳಿಗೆ ಮಾತ್ರ ಕಾರಣವಾಗಿರಬಹುದು. ಅವರು ವಿವರಿಸುವುದು: “ಉಳಿದ ಅನಿರ್ದಿಷ್ಟ ಸಂಖ್ಯೆಯ ಸ್ತನದ ಕ್ಯಾನ್ಸರುಗಳು, ಪರಿಸರದೊಂದಿಗೆ ಕೂಡಿ ಕೆಲಸ ಮಾಡುವ, ಅಷ್ಟೊಂದು ಬಲವತ್ತಾಗಿರದ ಅನುವಂಶಿಕ ಸಂಗತಿಗಳ ಕಾರಣದಿಂದಾಗಿದೆಯೆಂದು ನಾವು ಅಭಿಪ್ರಯಿಸುತ್ತೇವೆ.” ಒಂದೇ ರೀತಿಯ ವಂಶವಾಹಿಗಳಿರುವ ಕುಟುಂಬ ಸದಸ್ಯರು ಒಂದೇ ಪರಿಸರದಲ್ಲಿಯೂ ಪಾಲಿಗರಾಗುವ ಪ್ರವೃತ್ತಿಯವರಾಗುತ್ತಾರೆ.
ಪರಿಸರೀಯ ಸಂಗತಿಗಳು
ಈ ರೋಗವನ್ನು ಸಕ್ರಿಯಗೊಳಿಸುವುದರಲ್ಲಿ “ಸ್ಥೂಲವಾಗಿ ಕಲ್ಪಿಸಿದ ಪರಿಸರೀಯ ಸಂಗತಿಗಳು ಸ್ಪಷ್ಟವಾಗಿಗಿ ಸೇರಿಕೊಂಡಿವೆ,” ಎನ್ನುತ್ತಾರೆ ಡೆವ್ರ ಡೇವಿಸ್ ಎಂಬ ತಜ್ಞೆ, ಸೈಎನ್ಸ್ ಪತ್ರಿಕೆಯಲ್ಲಿ ಮಾತಾಡುತ್ತಾ. ಸ್ತ್ರೀ ಸ್ತನವು ಶರೀರದ ಅತ್ಯಂತ ವಿಕಿರಣಗ್ರಾಹಿ ಅಂಗಗಳಲ್ಲಿ ಒಂದಾಗಿರುವುದರಿಂದ, ವಿದ್ಯುದ್ವಿಭಜನ ವಿಕಿರಣಕ್ಕೆ ಒಡ್ಡಲ್ಪಟ್ಟಿರುವ ಮಹಿಳೆಯರಿಗೆ ಸ್ತನದ ಕ್ಯಾನ್ಸರಿನ ಹೆಚ್ಚಿನ ಅಪಾಯವಿದೆ. ವಿಷಕಾರಿ ರಸಾಯನ ಪದಾರ್ಥಗಳಿಗೆ ಒಡ್ಡಲ್ಪಟ್ಟಿರುವ ಸ್ತ್ರೀಯರೂ ಹಾಗೆಯೆ.
ಇನ್ನೊಂದು ಪರಿಸರೀಯ ಸಂಗತಿಯು ಆಹಾರ ಕ್ರಮ. ಸ್ತನದ ಕ್ಯಾನ್ಸರ್ ಜೀವಸ್ವತ (ವಿಟಮಿನ್) ನ್ಯೂನತೆಯ ರೋಗವೆಂದು ಕೆಲವರು ಸೂಚಿಸಿ, ಡಿ ಜೀವಸತ್ವದ ಅಭಾವಕ್ಕೆ ಕೈ ತೋರಿಸುತ್ತಾರೆ. ಈ ಜೀವಸ್ವತವು ಕ್ಯಾಲ್ಸಿಯಮನ್ನು ಹೀರಿಕೊಳ್ಳಲು ಸಹಾಯಿಸುತ್ತದೆ, ಮತ್ತು ಇದು ಸರದಿಯಾಗಿ, ಅನಿಯಂತ್ರಿತ ಜೀವಕಣ ಬೆಳವಣಿಗೆಯನ್ನು ತಡೆಯಲು ಸಹಾಯಿಸಬಹುದು.
ಇತರ ಅಧ್ಯಯನಗಳು, ಆಹಾರದಲ್ಲಿರುವ ಕೊಬ್ಬನ್ನು, ಇದು ಕಾರಣವೆಂದಲ್ಲ, ಬದಲಿಗೆ, ಸ್ತನದ ಕ್ಯಾನ್ಸರಿನ ಪ್ರವರ್ತಕವೆಂದು ಸಂಬಂಧ ಸೂಚಿಸುತ್ತವೆ. ಎಫ್ಡಿಎ ಕನ್ಸೂಮರ್ ಪತ್ರಿಕೆ ಹೇಳಿದ್ದೇನಂದರೆ, ಕೊಬ್ಬು ಮತ್ತು ಪ್ರಾಣಿ ಸಸಾರಜನಕದ ಒಳಸೇವನೆಯು ಹೆಚ್ಚಾಗಿರುವ ಅಮೆರಿಕದಂತಹ ದೇಶಗಳಲ್ಲಿ, ಸ್ತನದ ಕ್ಯಾನ್ಸರಿನಿಂದ ಸಾಯುವವರ ಪ್ರಮಾಣವು ಅತಿ ಹೆಚ್ಚಾಗಿದೆ. ಅದು ಹೇಳಿದ್ದು: “ಜಪಾನೀ ಸ್ತ್ರೀಯರಿಗೆ ಐತಿಹಾಸಿಕವಾಗಿ ಸ್ತನದ ಕ್ಯಾನ್ಸರಿನ ಕಡಮೆ ಅಪಾಯವಿದೆ, ಆದರೆ ಆ ಅಪಾಯ, ಆಹಾರ ಕ್ರಮದ ‘ಪಾಶ್ಚಾತ್ಯೀಕರಣ’ದೊಂದಿಗೆ ಅಂದರೆ, ಕಡಮೆ ಕೊಬ್ಬಿನಿಂದ ಹೆಚ್ಚು ಕೊಬ್ಬಿನ ಆಹಾರ ಕ್ರಮದೊಂದಿಗೆ ಸಹವರ್ತಿಸುತ್ತಾ ನಾಟಕೀಯವಾಗಿ ಮೇಲೇರುತ್ತಿದೆ.”
ಇತ್ತೀಚಿನ ಒಂದು ಅಧ್ಯಯನ ಸೂಚಿಸಿದ್ದೇನಂದರೆ, ಹೆಚ್ಚು ಕೊಬ್ಬಿರುವ ಆಹಾರದಲ್ಲಿ ಸೇವಿಸಿದ ಕ್ಯಾಲೊರಿಗಳ ದೊಡ್ಡ ಸಂಖ್ಯೆಯು ನಿಜ ಅಪಾಯವನ್ನು ಪ್ರತಿನಿಧೀಕರಿಸಬಹುದು. ಸೈಎನ್ಸ್ ನ್ಯೂಸ್ ಹೇಳಿದ್ದು: “ಅತಿರೇಕವಾಗಿರುವ ಪ್ರತಿಯೊಂದು ಕ್ಯಾಲೊರಿ ಸ್ತನದ ಕ್ಯಾನ್ಸರಿನ ಅಪಾಯವನ್ನು ಹೆಚ್ಚಿಸುತ್ತದೆ, ಮತ್ತು ಅತಿರೇಕವಾಗಿರುವ ಪ್ರತಿಯೊಂದು ಕೊಬ್ಬು-ಸಿದಿತ್ಧ ಕ್ಯಾಲೊರಿ, ಇತರ ಮೂಲಗಳಿಂದ ಬರುವ ಕ್ಯಾಲೊರಿಗಳಿಗಿಂತ ಸುಮಾರು 67 ಪ್ರತಿಶತ ಹೆಚ್ಚು ಅಪಾಯವನ್ನು ಒಡ್ಡುತ್ತದೆ.” ಅತಿರೇಕ ಕ್ಯಾಲೊರಿಗಳು ದೇಹದ ತೂಕವನ್ನು ಹೆಚ್ಚಿಸುತ್ತವೆ, ಮತ್ತು ತೀರ ಹೆಚ್ಚು ತೂಕವಿರುವ ಮಹಿಳೆಯರಿಗೆ, ವಿಶೇಷವಾಗಿ ರಜಸ್ತಂಭನವಾದವರಿಗೆ, ಸ್ತನದ ಕ್ಯಾನ್ಸರಿನ ಅಪಾಯವು ಮೂರು ಪಾಲಿನಷ್ಟು ಹೆಚ್ಚಿದೆಯೆಂದು ಎಣಿಸಲಾಗುತ್ತದೆ. ದೇಹದ ಕೊಬ್ಬು ಎಸ್ಟ್ರಜೆನ್ ಎಂಬ ಹೆಣ್ಣುಜಾತಿಯ ಚೋದಕಸ್ರಾವವನ್ನು ಉತ್ಪಾದಿಸುತ್ತದೆ ಮತ್ತು ಇದು ಸ್ತನದ ಅಂಗಾಂಶಗಳ ಮೇಲೆ ಪ್ರತಿಕೂಲವಾಗಿ ವರ್ತಿಸಿ, ಕ್ಯಾನ್ಸರಿಗೆ ನಡೆಸಬಲ್ಲದು.
ವೈಯಕ್ತಿಕ ಇತಿಹಾಸ ಮತ್ತು ಚೋದಕ ಸ್ರಾವಗಳು
ಸ್ತ್ರೀಯ ಮೊಲೆಯೊಳಗೆ, ಆಕೆಯ ಜೀವನದಲ್ಲಿ ಯಾವಾಗಲೂ ಬದಲಾವಣೆಯನ್ನು ಉಂಟುಮಾಡುವ ಸಮೃದ್ಧ ಚೋದಕ ಸ್ರಾವದ ಪರಿಸರವಿದೆ. ಶಸ್ತ್ರ ಚಿಕಿತ್ಸಾ ಊತತಜ್ಞ, ಡಾ. ಪಾಲ್ ಕ್ರೀ, ಆಸ್ಟ್ರೇಲಿಯನ್ ಡಾಕ್ಟರ್ ವೀಕ್ಲಿಯಲ್ಲಿ ಬರೆಯುವುದು: “ಆದರೂ, ಕೆಲವು ಮಹಿಳೆಯರಲ್ಲಿ, ದೀರ್ಘ ಕಾಲದ ಚೋದಕ ಸ್ರಾವ ಪ್ರಚೋದನೆಗೆ ಸ್ತನದ ಅಂಗಾಂಶಗಳ ಒಡ್ಡಲ್ಪಡುವಿಕೆಯು . . . ಕ್ರಮೇಣ ಹರಡಿಕೊಳ್ಳುವ [ಕ್ಯಾನ್ಸರ್ ಸಂಬಂಧಿತ] ಪರಿವರ್ತನೆಯಾಗಿ ಪರಿಣಮಿಸುವ ಜೀವಕೋಶ ವಿಭಜನಾ ಪರಂಪರೆಯನ್ನು ಸಕ್ರಿಯಗೊಳಿಸುತ್ತದೆ.” ಈ ಕಾರಣದಿಂದ, ಬೇಗನೆ ಅಂದರೆ 12 ವಯಸ್ಸಿನೊಳಗೆ ಮುಟ್ಟಾಗಿದ್ದ, ಅಥವಾ ತಡವಾಗಿ ಅಂದರೆ ಮಧ್ಯ 50ಗಳಲ್ಲಿ ರಜಸ್ತಂಭನವಾದ ಮಹಿಳೆಯರು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದೆಣಿಸಲಾಗುತ್ತದೆ.
ಇಆರ್ಟಿ (ಎಸ್ಟ್ರಜೆನ್ ಪುನರ್ಭರ್ತಿ ಚಿಕಿತ್ಸೆ)ಯಿಂದ ಪಡೆದಿರುವ ಹೆಚ್ಚಿನ ಎಸ್ಟ್ರಜೆನ್ಗಳು ಸ್ತನದ ಕ್ಯಾನ್ಸರಿಗೆ ಸಂಬಂಧಿಸಿರುವ ಸಾಧ್ಯತೆಯು ದೊಡ್ಡ ವಾಗ್ವಾದದ ವಿಷಯವಾಗಿ ಪರಿಣಮಿಸಿದೆ. ಇಆರ್ಟಿ ಅಪಾಯವನ್ನು ಹೆಚ್ಚಿಸುವುದಿಲ್ಲವೆಂದು ಕೆಲವು ಅಧ್ಯಯನಗಳು ತೋರಿಸುವಾಗ, ಇತರ ಅಧ್ಯಯನಗಳು, ಅದರ ದೀರ್ಘಾವಧಿಯ ಗ್ರಾಹಕರಿಗೆ ಇದರಿಂದ ಗಮನಾರ್ಹ ಅಪಾಯವಿದೆಯೆಂದು ತೋರಿಸುತ್ತವೆ. ಪುನರ್ವಿಮರ್ಶಿಸಲ್ಪಟ್ಟ ಅಧ್ಯಯನಗಳನ್ನು ಪರಿಗಣಿಸುತ್ತಾ, 1992ರ ಬ್ರಿಟಿಷ್ ಮೆಡಿಕಲ್ ಬುಲೆಟಿನ್ ಹೇಳಿದ್ದೇನಂದರೆ, ದೀರ್ಘಾವಧಿಯ ಬಳಕೆಯ ಅನಂತರ, “ಗರ್ಭನಿರೋಧಕವಲ್ಲದ ಎಸ್ಟ್ರಜೆನ್, ಸ್ತನದ ಕ್ಯಾನ್ಸರಿನ ಅಪಾಯವನ್ನು 30-50% ವೃದ್ಧಿಸುತ್ತದೆ.”
ಮೌಖಿಕ ಗರ್ಭನಿರೋಧಕಗಳು ಮತ್ತು ಸ್ತನದ ಕ್ಯಾನ್ಸರಿನ ಮಧ್ಯೆ ಇರುವ ಸಂಬಂಧದ ಕುರಿತ ವರದಿಗಳು, ಇದರ ಬಳಕೆಯಿಂದ ಕಡಮೆ ಹಾನಿಯನ್ನು ಸೂಚಿಸುತ್ತವೆ. ಆದರೂ, ತುಸು ಹೆಚ್ಚು ಅಪಾಯಕ್ಕೊಳಗಾಗುವ ಸ್ತ್ರೀಯರ ಒಂದು ಉಪಗುಂಪು ಹೊರಬರುತ್ತದೆ. ಕಡಮೆ ಪ್ರಾಯದ ಸ್ತ್ರೀಯರು, ಮಕ್ಕಳನ್ನು ಎಂದಿಗೂ ಹಡೆಯದಿದ್ದ ಸ್ತ್ರೀಯರು, ಮತ್ತು ದೀರ್ಘಕಾಲದಿಂದ ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸಿರುವ ಸ್ತ್ರೀಯರು ಸ್ತನದ ಕ್ಯಾನ್ಸರನ್ನು ಪಡೆಯುವುದರಲ್ಲಿ 20 ಪ್ರತಿಶತದಷ್ಟೂ ಹೆಚ್ಚು ಅಪಾಯಕ್ಕೊಳಗಾಗಬಹುದು.
ಆದರೂ, ಸ್ತನದ ಕ್ಯಾನ್ಸರಿರುವ ಪ್ರತಿ 4 ಮಂದಿ ಸ್ತ್ರೀಯರಲ್ಲಿ 3 ಮಂದಿ, ತಮ್ಮ ರೋಗಕ್ಕೆ ಇದೇ ಸಹಾಯ ಮಾಡಿದೆಯೆಂದು ನಿರ್ದಿಷ್ಟವಾಗಿ ಯಾವುದನ್ನೂ ತೋರಿಸಲಾರರು. ಆದುದರಿಂದ, ಹಾಕಲ್ಪಡುವ ಪ್ರಶ್ನೆಯು, ಯಾವಳೇ ಮಹಿಳೆಯು ತಾನು ಸ್ತನ್ಯ ಕಾನ್ಸರಿನಿಂದ ಸುರಕ್ಷಿತಳೆಂದು ಎಣಿಸಬಲಳ್ಲೊ? ಎಫ್ಡಿಎ ಕನ್ಸೂಮರ್ ವರದಿಸುವುದು: “ಪ್ರಾಯೋಗಿಕ ಚಿಕಿತ್ಸಕನ ವೀಕ್ಷಣದಲ್ಲಿ, ಎಲ್ಲ ಮಹಿಳೆಯರು ಸ್ತನದ ಕ್ಯಾನ್ಸರಿನ ಗಣನೀಯ ಅಪಾಯಕ್ಕೊಳಗಾಗಿದ್ದಾರೆಂದು ಭಾವಿಸಬೇಕು.”
ಹೀಗೆ, ಮಹಿಳೆಯರು, ಅದರಲ್ಲೂ ವಯಸ್ಸಾಗಿರುವ ಮಹಿಳೆಯರು, ಈ ಕಾಯಿಲೆಗೆ ಸುಲಭಭೇದ್ಯರು. ಡಾ. ಕೆಲಿ ಹೇಳುವುದೇನಂದರೆ, ಸ್ತನದ ಕ್ಯಾನ್ಸರಿಗೆ ವಿವಿಧ ಕಾರಣಗಳಿವೆಯಾದರೂ, ‘ನನ್ನ ಅನುಮಾನವೇನಂದರೆ, ಅದರಲ್ಲಿ ಕೆಲವು, ವಯಸ್ಸಾಗುವ ಮತ್ತು ಜೀವಕಣಗಳ ತಪ್ಪು ವಿಭಜನೆಯ ಕಾರಣದಿಂದ ಸಂಭವಿಸುತ್ತದೆ.’
ಸುಲಭಭೇದ್ಯರೇಕೆ
ಹೆಣ್ಣಿನ ಸ್ತನದ ಸಂಯೋಜನೆಯ ಪರೀಕ್ಷೆಯು, ಅದು ಕ್ಯಾನ್ಸರಿಗೆ ಅಷ್ಟು ಸುಲಭಭೇದ್ಯವೇಕೆಂದು ವಿವರಿಸುತ್ತದೆ. ಅದರೊಳಗೆ ಹಾಲು ಉತ್ಪಾದನಾ ಕೋಶಗಳಿಂದ ಅದರ ತೊಟ್ಟಿಗೆ ಹಾಲನ್ನು ರವಾನಿಸುವ ನಾಳಗಳು, ಸೂಕ್ಷ್ಮ ಸಾಗಣೆಮಾರ್ಗಗಳು ಇವೆ. ನಾಳಗಳ ಪದರವಾಗಿ, ಸ್ತ್ರೀಯನ್ನು ಗರ್ಭಧಾರಣೆಗೆ, ಮೊಲೆಯೂಡಿಸುವಿಕೆಗೆ ಮತ್ತು ಆಕೆಯ ಶಿಶುವನ್ನು ಪಾಲನೆ ಮಾಡಲು ತಯಾರಿಸುತ್ತಾ, ಅವಳ ಋತುಚಕ್ರಕ್ಕೆ ಪ್ರತಿವರ್ತಿಸುತ್ತಾ ಸಂತತ ವಿಂಗಡಗೊಂಡು ಬದಲಾಗುವ ಜೀವಕಣಗಳಿವೆ. ಹೆಚ್ಚಿನ ಸ್ತನದ ಕ್ಯಾನ್ಸರುಗಳು ಬೆಳೆಯುವುದು ಈ ನಾಳಗಳಲ್ಲೇ.
ಅನ್ಯ ಮಾರ್ಗಗಳು: ಸ್ತನದ ಕ್ಯಾನ್ಸರಿನ ಮೇಲಿನ ಯುದ್ಧದಲ್ಲಿ ಹೊಸ ಬೆಳವಣಿಗೆಗಳು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಸಂಶೋಧಕಿ ರೋಸ್ ಕುಶ್ನರ್ ವಿವರಿಸುವುದು: “ಒಂದಲ್ಲ ಒಂದು ತಡೆಯಿಂದ ಸತತವಾಗಿ ಉದ್ರೇಕಗೊಳ್ಳುವ ಯಾವುದೇ ಕ್ರಮವಿಧಾನವು—ಅದು ಪರಿಪೂರ್ಣವಾಗಿ ಸ್ವಾಭಾವಿಕವಾಗಿದ್ದರೂ . . . —ತಪ್ಪುಗಳ ಹೆಚ್ಚಿನ ಅಪಾಯಕ್ಕೊಳಗಾಗುತ್ತದೆ.” ಅವರು ಇನ್ನೂ ಹೇಳುವುದು: “ವಿಪರೀತ ಕೆಲಸ ಮಾಡುತ್ತಿರುವ ಸ್ತನದ ಜೀವಕಣವು, ಸದಾ ಅದನ್ನು ತೋಯಿಸುತ್ತಿರುವ ಯಾವುದೋ ಚೋದಕ ಸ್ರಾವದಿಂದ, ‘ಹಾಗೆ ಮಾಡುವುದನ್ನು ನಿಲ್ಲಿಸು. ಇದನ್ನು ಮಾಡಲಾರಂಭಿಸು,’ ಎಂದು ಆಜ್ಞಾಪಿಸಲ್ಪಡುತ್ತಿರುತ್ತದೆ. ಈ ಕಾರಣದಿಂದ ಅದರಿಂದ ಹುಟ್ಟುವ ಜೀವಕಣಗಳಲ್ಲಿ ಅಷ್ಟೊಂದು ಕಣಗಳು ನಿಯಂತ್ರಣ ತಪ್ಪುವುದರಲ್ಲಿ ಆಶ್ಚರ್ಯವಿಲ್ಲ.”
ಒಂದು ಅಸಾಮಾನ್ಯ ಜೀವಕೋಶ ವಿಭಾಗವಾಗಿ, ಅದರ ಬೆಳವಣಿಗೆಯ ಕಾರ್ಯಗತಿಯ ನಿಯಂತ್ರಣವನ್ನು ಕಳೆದುಕೊಂಡು, ಸಂಖ್ಯಾಭಿವೃದ್ಧಿ ಹೊಂದಲಾರಂಭಿಸುವಾಗ ಸ್ತನದ ಕ್ಯಾನ್ಸರ್ ಆರಂಭಗೊಳ್ಳುತ್ತದೆ. ಇಂಥ ಜೀವಕೋಶಗಳು ಪುನರುತ್ಪತ್ತಿಯಾಗುವುದನ್ನು ನಿಲ್ಲಿಸುವುದಿಲ್ಲ, ಮತ್ತು ಸಮಯ ಹೋದಂತೆ ಅವು ಸುತ್ತಮುತ್ತಲಿನ ಸ್ವಸ್ಥವಾಗಿರುವ ಅಂಗಾಂಶಗಳನ್ನು ನಾಶಗೊಳಿಸುತ್ತವೆ. ಹೀಗೆ ಸ್ವಸ್ಥವಾಗಿರುವ ಅವಯವವನ್ನು ರೋಗಗ್ರಸ್ತವಾಗಿ ಮಾಡುತ್ತವೆ.
ಸ್ಥಾನಾಂತರ ಹೊಂದುವುದು
ಕ್ಯಾನ್ಸರನ್ನು ಮೊಲೆಯೊಳಗೆ ನಿಗ್ರಹಿಸುವಲ್ಲಿ, ಅದರ ಹರಡುವಿಕೆಯನ್ನು ತೆಗೆಯುವುದು ಸಾಧ್ಯ. ಸ್ತನದ ಕ್ಯಾನ್ಸರ್ ದೇಹದ ದೂರದ ಅಂಗಗಳಿಗೆ ಹರಡಿದಾಗ ಅದನ್ನು ಸ್ಥಾನಾಂತರ ಹೊಂದಿದ (ಮೆಟಸ್ಟ್ಯಾಟಿಕ್) ಸ್ತನದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಸ್ತನದ ಕ್ಯಾನ್ಸರ್ ರೋಗಿಗಳಲ್ಲಿ ಮರಣಕ್ಕೆ ಇದು ಹೆಚ್ಚು ಸಂಭವನೀಯ ಕಾರಣ. ಸ್ತನದಲ್ಲಿ ಕ್ಯಾನ್ಸರ್ ಕಣಗಳು ವೃದ್ಧಿಯಾಗುತ್ತಾ ಊತವು ಗಾತ್ರದಲ್ಲಿ ಬೆಳೆದಂತೆ, ಕ್ಯಾನ್ಸರ್ ಕಣಗಳು ಸದ್ದಿಲ್ಲದೆ ಮತ್ತು ಗುಪ್ತವಾಗಿ ಊತದ ಪ್ರಧಾನ ಸ್ಥಳದಿಂದ ನಿರ್ಗಮಿಸಿ, ರಕ್ತನಾಳದ ಗೋಡೆಗಳನ್ನು ಮತ್ತು ದುಗ್ಧರಸ ಗ್ರಂಥಿಗಳನ್ನು ತೂರಿ ಹೋಗಬಲ್ಲವು.
ಈ ಹಂತದಲ್ಲಿ ಊತದ ಕಣಗಳು ದೇಹದ ದೂರದ ಭಾಗಗಳಿಗೆ ಪ್ರಯಾಣಿಸಬಲ್ಲವು. ರಕ್ತದಲ್ಲಿ ಮತ್ತು ದುಗ್ಧರಸ ಸ್ರಾವದಲ್ಲಿ ಪರಿಚಲಿಸುತ್ತಿರುವ, ಸ್ವಾಭಾವಿಕವಾಗಿ ಕೊಲ್ಲುವ ಕಣಗಳು ಸೇರಿರುವ ಶರೀರದ ರೋಗರಕ್ಷಕ ತಡೆಗಳಿಂದ ಅವು ತಪ್ಪಿಸಿಕೊಳ್ಳುವಲ್ಲಿ, ಈ ಹಾನಿಕಾರಕ ಕಣಗಳು ಪಿತ್ತಜನಕಾಂಗ, ಶ್ವಾಸಕೋಶಗಳು ಮತ್ತು ಮಿದುಳುಗಳಂತಹ ಪ್ರಧಾನ ಅಂಗಗಳನ್ನು ಆಕ್ರಮಿಸಿ ನೆಲೆಸಬಲ್ಲವು. ಅಲ್ಲಿ ಅವು, ಈ ಅಂಗಗಳನ್ನು ಕ್ಯಾನ್ಸರ್ ಪೀಡಿತವಾಗಿ ಮಾಡಿದ ಬಳಿಕ, ವೃದ್ಧಿಯಾಗಿ ಪುನಃ ಹರಡಬಲ್ಲವು. ಈ ಸ್ಥಾನಾಂತರ ಒಮ್ಮೆ ಆರಂಭವಾಯಿತೆಂದರೆ, ಒಬ್ಬ ಮಹಿಳೆಯ ಜೀವ ಗಂಡಾಂತರದಲ್ಲಿದೆ.
ಆದುದರಿಂದ, ಬದುಕಿ ಉಳಿಯುವಿಕೆಗಿರುವ ಒಂದು ಕೀಲಿ ಕೈ, ಸ್ತನದ ಕ್ಯಾನ್ಸರನ್ನು ಅದರ ಬೆಳವಣಿಗೆಯ ಆದಿಯಲ್ಲಿ, ಅದಕ್ಕೆ ಹರಡುವ ಸಂದರ್ಭ ದೊರೆಯುವ ಮೊದಲು ಕಂಡುಹಿಡಿಯುವುದೇ. ಇಂತಹ ಆರಂಭದ ಕಂಡುಹಿಡಿಯುವಿಕೆಯ ಸಂದರ್ಭಗಳನ್ನು ಅಭಿವೃದ್ಧಿಗೊಳಿಸಲು ಪ್ರತಿಯೊಬ್ಬ ಮಹಿಳೆಯು ಏನು ಮಾಡಬಲ್ಲಳು? ಮೊದಲ ಹಂತದಲ್ಲಿ ಸ್ತನದ ಕ್ಯಾನ್ಸರನ್ನು ತಡೆಗಟ್ಟುವಂತೆ ಸಹಾಯ ಮಾಡಸಾಧ್ಯವಿರುವ ಯಾವುದಾದರೂ ಇದೆಯೆ?
[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸ್ತನದ ಕ್ಯಾನ್ಸರಿರುವ ಪ್ರತಿ 4 ಮಂದಿ ಸ್ತ್ರೀಯರಲ್ಲಿ 3 ಮಂದಿ, ತಮ್ಮ ರೋಗಕ್ಕೆ ಇದೇ ಸಹಾಯ ಮಾಡಿದೆಯೆಂದು ನಿರ್ದಿಷ್ಟವಾಗಿ ಯಾವುದನ್ನೂ ತೋರಿಸಲಾರರು