ಲೋಕ ಸರಕಾರ ಸಂಯುಕ್ತ ರಾಷ್ಟ್ರವು ಉತ್ತರವಾಗಿದೆಯೇ?
ಇತ್ತೀಚೆಗಿನ ವರ್ಷಗಳಲ್ಲಿ, ಸಂಯುಕ್ತ ರಾಷ್ಟ್ರವು, ಲೋಕದಲ್ಲಿ ಸುವಿಖ್ಯಾತ ಭರವಸೆ ಮತ್ತು ಮೆಚ್ಚಿಗೆಯನ್ನು ಪಡೆದಿದೆ. ಲಕ್ಷಾಂತರ ಜನರಿಗೆ “ಯುಎನ್” (ಸಂಯುಕ್ತ ರಾಷ್ಟ್ರ) ಎಂಬ ಸಂಕೇತಾಕ್ಷರವು, ವೀರೋಚಿತ ಕಲ್ಪನೆಗಳನ್ನು ಎಬ್ಬಿಸುತ್ತದೆ: ಶಾಂತಿಯನ್ನು ಸ್ಥಾಪಿಸಲು, ಲೋಕದ ತೊಂದರೆಗೀಡಾದ ಪ್ರಾಂತಗಳಿಗೆ ನೀಲಿ ಬಣ್ಣದ ಟೋಪಿಗಳನ್ನು ಧರಿಸಿ ಧೈರ್ಯದಿಂದ ಧಾವಿಸುತ್ತಿರುವ ಸೈನಿಕರು, ಆಫ್ರಿಕದ ಉಪವಾಸವಿರುವ ನಿರಾಶ್ರಿತರಿಗೆ ಆಹಾರವನ್ನು ತರುತ್ತಿರುವ ಪರಿಹಾರ ಕಾರ್ಮಿಕರು, ಮತ್ತು ಒಂದು ಹೊಸ ಲೋಕ ವ್ಯವಸ್ಥೆಯನ್ನು ಸ್ಥಾಪಿಸಲು ನಿಸ್ವಾರ್ಥವಾಗಿ ಕೆಲಸಮಾಡುತ್ತಿರುವ ಸಮರ್ಪಿತ ಪುರುಷರು ಮತ್ತು ಸ್ತ್ರೀಯರು.
ಇಂಟರ್ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್ನಲ್ಲಿ ವರದಿಸಲಾದಂತೆ, ದ ವಾಷಿಂಗ್ಟನ್ ಪೋಸ್ಟ್ನ ಮೂಲಕ ಮಾಡಲಾದ ಒಂಬತ್ತು ತಿಂಗಳ ತನಿಖೆಗನುಸಾರ, ಕಲ್ಪನೆಯ ಹಿಂದೆ ಇರುವ ನಿಜತ್ವವು, “ತನ್ನ ಕಾರ್ಯಸಾಧಕತೆಯನ್ನು ಕುಗ್ಗಿಸುವ, ಅಪಪ್ರಯೋಗ ಮತ್ತು ಕುಂದುಗಳಿಗೆ ಒಳಗಾಗುವ ಮಹಾ, ಅನಿಯಂತ್ರಿತ ಅಧಿಕಾರಿವರ್ಗ ಅದಾಗಿದೆ.” ಸಾವಿರಾರು ಪುಟಗಳ ದಾಖಲೆಗಳ ಮತ್ತು ಪ್ರಚಲಿತ ಹಾಗೂ ಹಿಂದಿನ ಯುಎನ್ ಅಧಿಕಾರಿಗಳೊಂದಿಗೆ ಇಂಟರ್ವ್ಯೂಗಳ ಮೇಲೆ ಆಧಾರಿತವಾದ ಅಧ್ಯಯನವು, ಈ ಮುಂದಿನ ಚಿತ್ರವನ್ನು ಪ್ರಕಟಿಸಿತು.
ಆಫ್ರಿಕಗೆ ನೆರವು: ಯುದ್ಧ, ಬರ, ಬಡತನ, ಮತ್ತು ರೋಗಗಳಿಂದ ಧ್ವಂಸಮಾಡಲ್ಪಟ್ಟ ಒಂದು ಭೂಖಂಡವಾದ ಆಫ್ರಿಕದೊಳಗೆ, ಬಹಳವಾಗಿ ಬೇಕಾದ ಕೋಟ್ಯಾಂತರ ಡಾಲರುಗಳನ್ನು ಯುಎನ್ ಸುರಿದಿದೆ. ಎಣಿಸಲಾರದಷ್ಟು ಜೀವಗಳನ್ನು ರಕ್ಷಿಸಲಾಗಿದೆ.
ಆದರೂ, ಅವ್ಯವಸ್ಥೆ, ಅಲಕ್ಷ್ಯ, ಮತ್ತು ಕೆಲವೊಮ್ಮೆ ಭ್ರಷ್ಟಾಚಾರದ ಕಾರಣದಿಂದಾಗಿ, ಸಾವಿರಾರು ಜೀವಗಳು ಮತ್ತು ಲಕ್ಷಾಂತರ ಡಾಲರುಗಳು ಕೂಡ ನಷ್ಟಮಾಡಲ್ಪಟ್ಟಿವೆ. ಪ್ರತಿ ದಿನ ಅನೇಕ ಜನರು ಸಾಯುತ್ತಿರುವ ಬರ ಬಡಿದ ಸೊಮಾಲಿಯಕ್ಕೆ, ಪರಿಹಾರವನ್ನು ಸಂಯುಕ್ತ ರಾಷ್ಟ್ರವು ತಲುಪಿಸಿದೆ. ಆದರೆ ಮಾನವ ಹಕ್ಕುಗಳ ಬೆಂಗಾವಲು, (ಹ್ಯೂಮನ್ ರೈಟ್ಸ್ ವಾಚ್) ಎಂಬ ಸಂಸ್ಥೆಯ ಕಾರ್ಯನಿರ್ದೇಶಕರಾದ, ಆರ್ಯೆ ನೇಅರ್, ಟ್ರಿಬ್ಯೂನ್ ಪತ್ರಿಕೆಯಲ್ಲಿ ಹೀಗೆ ಹೇಳಿದ್ದಾಗಿ ನಮೂದಿಸಲಾಗಿದೆ: “ಸಂಯುಕ್ತ ರಾಷ್ಟ್ರವು ಮತ್ತು ಅದರ ಇತರ ವಿಭಿನ್ನ ಸಂಸ್ಥೆಗಳು ಎಷ್ಟು ಘೋರವಾಗಿ ನಿರ್ಲಕ್ಷವಾಗಿಯೂ, ಅನರ್ಹವಾಗಿಯೂ ಇದ್ದವೆಂದರೆ, ಸೊಮಾಲಿಯದ ದುರವಸ್ಥೆಯನ್ನು ಕಡಿಮೆಗೊಳಿಸುವಲ್ಲಿ ಬಹುಮಟ್ಟಿಗೆ ಯಾವುದೇ ಪಾತ್ರವನ್ನು ಅವು ವಹಿಸಿಲ್ಲ.”
ಆಹಾರ ಸಹಾಯವನ್ನು ಬೇರೆ ಕಡೆಗೆ ತಿರುಗಿಸುವುದರಲ್ಲಿ, ಮಾನವ ಸಹಾಯದ ದುರುಪಯೋಗವನ್ನು ಮಾಡಿಕೊಳ್ಳುವುದರಲ್ಲಿ, ಕುಯುಕ್ತಿಯ ಮೂಲಕ ಸರಕುಗಳನ್ನು ಯಾ ಸೇವೆಗಳನ್ನು ಪಡೆದುಕೊಳ್ಳುವುದರಲ್ಲಿ, ಕಳ್ಳ ವ್ಯಾಪಾರಮಾಡುವುದರಲ್ಲಿ, ಮತ್ತು ಹಣ ವಿನಿಮಯದಲ್ಲಿ ಕೈಚಳಕ ಪ್ರದರ್ಶಿಸುವುದರಲ್ಲಿ, ಕೆಲವು ಯುಎನ್ ಅಧಿಕಾರಿಗಳು ಸೇರಿದ್ದಾರೆಂದು ಕೂಡ ವರದಿಯು ಆಪಾದಿಸುತ್ತದೆ. ಏಳಕ್ಕಿಂತ ಹೆಚ್ಚಿನ ಆಫ್ರಿಕನ್ ದೇಶಗಳಲ್ಲಿ ಇಂಥ ಕುಯುಕ್ತಿಯ ಪ್ರಮಾಣವನ್ನು ಯುಎನ್ನ ತನಿಖೆಗಾರರು ಕಂಡರು.
ಶಾಂತಿಯನ್ನು ಕಾಪಾಡುವುದು: ಇಸವಿ 1945ರಲ್ಲಿ ಅದರ ಸ್ಥಾಪನೆಯಂದಿನಿಂದ ಗತಿಸಿದ ವರ್ಷಗಳಲ್ಲಿ, ನೂರಕ್ಕೂ ಹೆಚ್ಚು ದೊಡ್ಡ ಘರ್ಷಣೆಗಳಾಗಿದ್ದು, ಯುದ್ಧದಲ್ಲಿ ಎರಡು ಕೋಟಿ ಜನರು ಕೊಲ್ಲಲ್ಪಟ್ಟಿದ್ದರೂ, ಶಾಂತಿಯನ್ನು ಕಾಪಾಡುವುದು ಯುಎನ್ನ ಪ್ರಥಮ ಗುರಿಯಾಗಿದೆ. ಇಸವಿ 1987ರಂದಿನಿಂದ,—ಅದಕ್ಕೆ ಮುಂಚೆ ಅದರ ಸಂಪೂರ್ಣ ಇತಿಹಾಸದಲ್ಲಿ ಮಾಡಿರುವಷ್ಟೇ ಕಾರ್ಯಾಚರಣೆಯನ್ನು—ಶಾಂತಿಯನ್ನು ಕಾಪಾಡುವ 13 ಕಾರ್ಯಾಚರಣೆಗಳನ್ನು ಯುಎನ್ ಪ್ರಾರಂಭಿಸಿದೆ.
ಯುದ್ಧದ ಭಯಂಕರ ಬೆಲೆಗಿಂತ ಈ ಕಾರ್ಯಾಚರಣೆಗಳ ವೆಚ್ಚವು ಹೆಚ್ಚು ಹಿತಕರವೆಂದು ಎಂದು ಕೆಲವರು ವಾದಿಸಿದರೂ, ವಿಷಯಗಳು ಮಿತಿ ಮೀರಿ ಹೋಗಿವೆ ಎಂದು ಅನೇಕರು ದೂರು ನೀಡುತ್ತಾರೆ. ಉದಾಹರಣೆಗೆ, ವಿಚಾರವಿನಿಮಯಗಳು ಬಿಕ್ಕಟ್ಟಿನಲ್ಲಿ ಉಳಿದಾಗ್ಯೂ, ನೂರಾರು ಲಕ್ಷ ಡಾಲರುಗಳನ್ನು ಖರ್ಚುಮಾಡುತ್ತಾ, ಶಾಂತಿಯನ್ನು ಕಾಪಾಡುವ ಕಾರ್ಯಾಚರಣೆಗಳು ದಶಕಗಳ ವರೆಗೆ ಮುಂದುವರಿಯುತ್ತವೆ. ಕಂಬೋಡಿಯದಲ್ಲಿರುವ ಯುಎನ್ ಶಾಂತಿಯನ್ನು ಕಾಪಾಡುವ ನಿಯೋಗವು, ಸೈನಿಕರಿಗಾಗಿ ಟಿವಿ ಮತ್ತು ವಿಸಿಆರ್ಗಳಿಗೆ 10 ಲಕ್ಷ ಡಾಲರುಗಳಿಗಿಂತಲೂ ಹೆಚ್ಚನ್ನು ಮತ್ತು ಪ್ರತಿಕೆಗಳ ಹಾಗೂ ವಾರ್ತಾಪತ್ರಿಕೆಗಳ ಚಂದಾಗಳಿಗಾಗಿ ಇನ್ನೊಂದು 6,00,000 ಡಾಲರುಗಳನ್ನು ಗೊತ್ತುಮಾಡುತ್ತದೆ.
ಸುಧಾರಣೆ: ಯುಎನ್ ಒಳಗಿನ ಸುಧಾರಣೆಗಾಗಿ ವ್ಯಾಪಕ ಕರೆಗಳಿವೆ, ಆದರೆ ಯಾವುದು ಸುಧಾರಿಸಲ್ಪಡಬೇಕು ಎಂಬುದರ ಕುರಿತು ಅಭಿಪ್ರಾಯಗಳು ಭಿನ್ನವಾಗಿವೆ. ನಿರ್ಣಯವನ್ನು ಮಾಡುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಅಧಿಕಾರಕ್ಕಾಗಿ ವಿಕಾಸಶೀಲ ರಾಷ್ಟ್ರಗಳು ಕರೆನೀಡುತ್ತಾ, ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ವಿಸ್ತಾರಗೊಳಿಸಲು ಬಯಸುತ್ತವೆ. ಉದ್ಯೋಗಶೀಲ ರಾಷ್ಟ್ರಗಳು ಈ ಕಾರ್ಯಕ್ರಮಗಳನ್ನು ಕಡಿಮೆಗೊಳಿಸಿ, ಭ್ರಷ್ಟತೆ, ಅವ್ಯವಸ್ಥೆ, ಮತ್ತು ನಷ್ಟವನ್ನು ಕೊನೆಗೊಳಿಸಲು ಬಯಸುತ್ತವೆ.
ಒಬ್ಬ ಹಿರಿಯ ಯುಎನ್ ಅಧಿಕಾರಿಯು ಹೇಳಿದ್ದು: “ನಿಜವಾಗಿ ಸುಧಾರಿಸಲು, ಅಧಿಕಾರ ವರ್ಗದಲ್ಲಿ ಮಾಡಲು ಅಸಾಧ್ಯವಾದ ವಿಷಯವನ್ನು ನೀವು ಮಾಡಬೇಕು. ನೀವು ಸ್ಥಳವನ್ನು ಶುಚಿಮಾಡಬೇಕು. ಅರ್ಥಭರಿತವಾಗಿ ಏನನ್ನಾದರೂ ಮಾಡಬೇಕಾದರೆ, 45 ವರ್ಷಗಳ ಚಿಪ್ಪುಜಂತುಗಳನ್ನು ಕೊರೆದು ತೆಗೆಯಬೇಕಾಗುವುದು, ಮತ್ತು ಅದರ ಅರ್ಥವು ಬಹಳಷ್ಟು ಚಿಪ್ಪುಜಂತುಗಳೆಂದೇ.”
ಮಾನವವರ್ಗದ ಕಾರ್ಯಗಳನ್ನು ನಿರ್ವಹಿಸಲು, ಒಂದು ಸಭೆಯ ಅಗತ್ಯವನ್ನು ಕ್ರೈಸ್ತರು ಕಂಡರೂ, ಸಂಯುಕ್ತ ರಾಷ್ಟ್ರವು ಇದಕ್ಕೆ ಉತ್ತರವೆಂದು ಅವರು ನಂಬುವುದಿಲ್ಲ. ಅದರ ಬದಲು, ತನ್ನ ಶಿಷ್ಯರಿಗೆ ಅದಕ್ಕಾಗಿ ಪ್ರಾರ್ಥಿಸಿರಿ ಎಂದು ಯೇಸು ಹೇಳಿದ ಸರಕಾರವಾದ, ದೇವರ ರಾಜ್ಯದ ಕಡೆಗೆ ಅವರು ಎದುರುನೋಡುತ್ತಾರೆ.—ಮತ್ತಾಯ 6:10. (g93 9/22)