ಮಲೇರಿಯ ವಿರುದ್ಧ ಹೊಸ ಅಸ್ತ್ರ
ಮೇ 8, 1993ರ ಎಚ್ಚರ!ದಲ್ಲಿ ವರದಿ ಮಾಡಲ್ಪಟ್ಟಂತೆ, ಮಲೇರಿಯ ರೋಗವು ಒಂದು ಲೋಕ ವಿಪತ್ತಿನೋಪಾದಿ ಪುನರಾಗಮಿಸುತ್ತಾ ಇದೆ. “ಕಳೆದ ವರ್ಷ, 5,60,000 ಮಲೇರಿಯದ ರೋಗಿಗಳನ್ನು ಬ್ರೆಜಿಲ್ ವರದಿಮಾಡಿತ್ತು,” ಎಂದು ದಿ ನ್ಯೂ ಯಾರ್ಕ್ ಟೈಮ್ಸ್ (ಮಾರ್ಚ್ 23, 1993) ವರದಿಮಾಡಿತು. ವಾರ್ಷಿಕವಾಗಿ, ಬ್ರೆಜಿಲ್ನ ಸುಮಾರು 8,000 ಮಂದಿ ಮಲೇರಿಯ ರೋಗದಿಂದ ಸಾಯುತ್ತಾರೆ. ಈಗ ಡಾ. ಮ್ಯಾನುಎಲ್ ಎಲ್ಕಿನ್ ಪಾಟರೋಯೊ, ಎಂಬ ಕೊಲಂಬಿಯದ ಒಬ್ಬ ಪರಿಶೋಧಕರು, ಒಂದು ಬೇರೆ ಮಾರ್ಗ—ಮೂರು ವಿಕಿರಣ ಪ್ರಮಾಣಗಳಿಗೆ ಕೇವಲ 30 ಸೆಂಟ್ಸ್ ಬೆಲೆಯುಳ್ಳ ಒಂದು ಸಂಯೋಜಿತ ರಾಸಾಯನಿಕ ಲಸಿಕೆ—ವನ್ನು ಬಳಕೆಗೆ ತಂದಿದ್ದಾರೆ. “[ಕೊಲಂಬಿಯದಲ್ಲಿ] ಒಂದು ಕೋಕ ಕೋಲ ಪಾನೀಯದ ಕ್ರಯಕ್ಕಿಂತಲೂ ಕಡಿಮೆ,” ಎಂದು ಡಾ. ಪಾಟರೋಯೊ ಹೇಳಿದರು. ಈ ವರೆಗೆ ಚಿಕಿತ್ಸೆ ನೀಡಲ್ಪಟ್ಟ ರೋಗಿಗಳಲ್ಲಿ ಇದು ಸುಮಾರು 67 ಪ್ರತಿಶತ ಪರಿಣಾಮಕಾರಿಯಾಗಿದೆಯೆಂದು ದೃಢಪಡಿಸಲಾಗಿದೆ. ಮಾರಕ ಮಲೇರಿಯ ರೋಗಕ್ಕೆ ಒಂದು ಸಂಪೂರ್ಣವಾದ ಉತ್ತರವು ಆಗಿರದಿದ್ದರೂ, ಮಲೇರಿಯ ವಿರುದ್ಧದ ಹೋರಾಟದಲ್ಲಿ ಒಂದು ದೊಡ್ಡ ಮುನ್ನಡಿಗೆಯಂತೆ ತೋರುತ್ತದೆ. (g93 11/08)