ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 4/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸರಕಾರದ ಮೇಲೆ ಅವಿಶ್ವಾಸ
  • ಪ್ಲಾಚೇಬೊಗಳ ಶಕ್ತಿ
  • ಆತ್ಮೋನ್ನತಿ ಮಾಡುವ ಅನುಭವಗಳು ಒಬ್ಬನನ್ನು ಆರೋಗ್ಯವಂತನಾಗಿರಲು ಸಹಾಯಿಸುತ್ತವೆ
  • ವೃಷ್ಟಿ ದೇವತೆಗಳು ನಿರಾಶೆಗೊಳಿಸುತ್ತಾರೆ
  • ಸಂಧಾನದ ಮೇಲೆ ಸಂಧಾನ
  • ಬ್ರಿಟನಿನಲ್ಲಿ ರೋಮನ್‌ ನಿಕ್ಷೇಪದ ಪತ್ತೆ
  • ಲೋಕ ಆರೋಗ್ಯ ವರದಿ
  • ಅಮೆರಿಕದಲ್ಲಿ ಧೂಮಪಾನ ಸಂಬಂಧಿತ ಮರಣಗಳು ಕೆಳಗಿಳಿಯುತ್ತಿವೆ
  • ಗಾಲಿಗಳುಳ್ಳ ಆಸ್ಪತ್ರೆ
  • ಕೊನೆ ಕಾಣುವುದಿಲ್ಲ
  • ಲೋಕಾರೋಗ್ಯ ಪರಿಸ್ಥಿತಿ—ಬೆಳೆಯುತ್ತಿರುವ ಒಂದು ಅಂತರ
    ಎಚ್ಚರ!—1995
  • ಸಿಗರೇಟ್‌ಗಳು ನೀವು ಅವನ್ನು ನಿರಾಕರಿಸುತ್ತೀರೊ?
    ಎಚ್ಚರ!—1996
  • ಬಿಕ್ಕಟ್ಟಿನಲ್ಲಿರುವ ಮಕ್ಕಳು
    ಎಚ್ಚರ!—1993
  • ಲೋಕವನ್ನು ಗಮನಿಸುವುದು
    ಎಚ್ಚರ!—1993
ಇನ್ನಷ್ಟು
ಎಚ್ಚರ!—1994
g94 4/8 ಪು. 28-29

ಜಗತ್ತನ್ನು ಗಮನಿಸುವುದು

ಸರಕಾರದ ಮೇಲೆ ಅವಿಶ್ವಾಸ

“ಜನರು ಜಗದ್ವ್ಯಾಪಕವಾಗಿ ಈ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ,” ಎಂದು ವಾಷಿಂಗ್ಟನ್‌ ಪೋಸ್ಟ್‌ ಇತ್ತೀಚೆಗೆ ಸಮರ್ಥಿಸುತ್ತಾ, “ಎಲ್ಲೆಲ್ಲಿಯೂ, ಸರಕಾರವೆಂಬುದು ಅನಿಷ್ಟ ಪದ”ವೆಂದು ಕೂಡಿಸಿ ಹೇಳಿತು. ಇತ್ತೀಚಿನ ವರ್ಷಗಳಲ್ಲಿ ಮಾಡಿದ ಅನೇಕ ಸಾರ್ವಜನಿಕ ಅಭಿಪ್ರಾಯ ಮತಗಣನೆಯ ಕುರಿತು ಮಾತಾಡುತ್ತಾ, ಆ ಪತ್ರಿಕೆ ಗಮನಿಸಿದ್ದು: “ಕೆನಡದಿಂದ ಜಪಾನಿನ ವರೆಗೆ, ಮತ್ತು ಇವುಗಳ ಮಧ್ಯಭಾಗದಲ್ಲಿ, ಕೆಲವು ಸಲ ಸ್ಥೈರ್ಯಗೆಡಿಸುವ ಸಂಖ್ಯೆಯ ಬಹುಮತದ ಪ್ರಜೆಗಳು, ತಮ್ಮ ದೇಶದ ಸರಕಾರವನ್ನು ನಂಬುವುದು ಅಸಾಧ್ಯ, ತಮ್ಮ ರಾಷ್ಟ್ರದ ಆರ್ಥಿಕತೆ ಬಹುಮಟ್ಟಿಗೆ ಧ್ವಂಸಗೊಂಡಿದೆ, ಮತ್ತು ಪರಿಸ್ಥಿತಿಯು ಸುಧಾರಿಸುವ ಬದಲಿಗೆ ಹೆಚ್ಚು ಕೆಡುತ್ತಲೇ ಹೋಗುವುದು ಎಂದು ಹೇಳುತ್ತಿದ್ದಾರೆ.” ಉದಾಹರಣೆಗೆ, ಫ್ರಾನ್ಸಿನಲ್ಲಿ ಅಭಿಮತ ಕೊಟ್ಟವರಲ್ಲಿ ಸುಮಾರು 60 ಪ್ರತಿಶತ, ಭವಿಷ್ಯತ್ತಿನಲ್ಲಿ ವಿಷಯಗಳು ಹೆಚ್ಚು ಕೆಡುವುವು ಎಂದು ಹೇಳಿದಾಗ, ಸುಮಾರು ಅಷ್ಟೇ ಪ್ರಮಾಣದ ಜನರು ದೇಶವು ಆಳಲ್ಪಡುವ ರೀತಿಯ ಮೇಲೆ ಅತೃಪ್ತಿ ವ್ಯಕ್ತಪಡಿಸಿದರು. ಇಟೆಲಿಯಲ್ಲಿ ಸುಮಾರು 75 ಪ್ರತಿಶತ ಜನರು, ಸರಕಾರವು ಐದು ಯಾ ಹತ್ತು ವರ್ಷಗಳ ಹಿಂದೆ ಕಾರ್ಯ ನಡೆಸುತ್ತಿದ್ದಷ್ಟು ಉತ್ತಮವಾಗಿ ಈಗ ನಡೆಸುತ್ತಿಲ್ಲ ಎಂದು ಅಭಿಪ್ರಯಿಸಿದರು. ಕೆನಡದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು, ಮುಂದಿನ ತಲೆಮೊರೆಯಲ್ಲಿ ತಮ್ಮ ಸ್ವಂತ ಸಮಯದಲ್ಲಿರುವುದಕ್ಕಿಂತ ಕೆಟ್ಟಿರುವ ಆರ್ಥಿಕ ಪರಿಸ್ಥಿತಿಯಿರುವುದೆಂದು ಅಭಿಪ್ರಯಿಸಿದರು. (g94 3/22)

ಪ್ಲಾಚೇಬೊಗಳ ಶಕ್ತಿ

ರೋಗಿಗಳಲ್ಲಿ ಮೂರರಲ್ಲಿ ಒಂದಂಶ, ಯಾವ ನಿಜ ಔಷಧಾರ್ಥಕ ಬೆಲೆಯೂ ಇಲ್ಲದ ಒಂದು ಪ್ಲಾಚೇಬೊ (ಮನಃತೃಪ್ತಿಯ ಔಷಧ) ಕೊಡಲ್ಪಟ್ಟಾಗ ತುಸು ಅಭಿವೃದ್ಧಿಯನ್ನು ತೋರಿಸುತ್ತಾರೆಂದು ವೈದ್ಯಕೀಯ ಸಂಶೋಧಕರು ದೀರ್ಘಕಾಲದಿಂದ ನಂಬಿದ್ದಾರೆ. ಆದರೂ, ಪ್ಲಾಚೇಬೊಗಳು ಹೆಚ್ಚು ಶಕ್ತಿಯುತ ಪರಿಣಾಮವನ್ನು ಮಾಡಬಲ್ಲವೆಂದು ಹೊಸ ಅಧ್ಯಯನ ತೋರಿಸಿದೆ. ಅಮೆರಿಕದ ಕ್ಯಾಲಿಫೋರ್ನಿಯದ ಲ ಜೊಲದಲ್ಲಿ ವಿಜ್ಞಾನಿಗಳು, ಹೊಸ ಪ್ರಯೋಗಾತ್ಮಕ ಚಿಕಿತ್ಸೆಗಳನ್ನು ಕೊಟ್ಟರೂ, ಆ ಬಳಿಕ ಅವು ನಿರರ್ಥಕವೆಂದು ಕಂಡುಬಂದ ಸುಮಾರು 7,000 ರೋಗಿಗಳನ್ನು ಅಧ್ಯಯನಿಸಿದರು. ರೋಗಿಗಳಲ್ಲಿ ಮೂರರಲ್ಲಿ ಎರಡಂಶ, ತಾತ್ಕಾಲಿಕವಾಗಿಯಾದರೂ, ಈ ಚಿಕಿತ್ಸೆಗಳಿಗೆ ಪ್ರತಿವರ್ತನೆಯಾಗಿ ಅಭಿವೃದ್ಧಿಪಟ್ಟರೆಂದು ತೋರಿಸಿತು. ಈ ಪ್ಲಾಚೇಬೊ ಪರಿಣಾಮ, ಕೆಲವು ಸಂದರ್ಭಗಳಲ್ಲಿ ವಾಸ್ತವವಾದ ಜೀವವೈಜ್ಞಾನಿಕ ರೀತಿಯ ಗುಣ ಹೊಂದುವಿಕೆಯನ್ನು ಒಳಗೊಂಡರೂ, ಇದು ಕೆಲವು ಸಲ, ಗುಣ ಹೊಂದುವಿಕೆಯನ್ನು ವರದಿಸಿ ವೈದ್ಯರನ್ನು ಮೆಚ್ಚಿಸುವ ರೋಗಿಯ ಸ್ವಂತ ಬಯಕೆಯನ್ನು ಪ್ರತಿಬಿಂಬಿಸುತ್ತದೆಂದು ವಿಜ್ಞಾನಿಗಳು ಎಚ್ಚರಿಸುತ್ತಾರೆ. ಹೀಗೆ, ಕೆಲವು ಸಂಶೋಧಕರು ಈ ಅಧ್ಯಯನವನ್ನು, ಹೊಸ ಔಷಧಗಳನ್ನು ಇನ್ನೂ ಹೆಚ್ಚು ಕಟ್ಟುನಿಟ್ಟಾದ ಪರೀಕೆಗ್ಷೊಳಪಡಿಸಲು ಒಂದು ಕಾರಣವಾಗಿ ಉಲ್ಲೇಖಿಸುತ್ತಾರೆ. (g94 3/22)

ಆತ್ಮೋನ್ನತಿ ಮಾಡುವ ಅನುಭವಗಳು ಒಬ್ಬನನ್ನು ಆರೋಗ್ಯವಂತನಾಗಿರಲು ಸಹಾಯಿಸುತ್ತವೆ

“ಶಕ್ತಿಗುಂದಿಸುವ ಒತ್ತಡ ಮತ್ತು ಭಾವಾತ್ಮಕ ಸಮಸ್ಯೆಗಳು ದೇಹದ ಸ್ಥಿತಿ ಸ್ಥಾಪಕತ್ವವನ್ನು ಕೆಳಗಿಳಿಸುತ್ತದೆ, ಆದರೆ ಸಂತೋಷ ಮತ್ತು ಸುಖಾನುಭವವು ರೋಗ ರಕ್ಷಣ ವ್ಯವಸ್ಥೆಯನ್ನು ಉತ್ತೇಜಿಸಿ ರೋಗ ನಿರೋಧವನ್ನು ಬಲಪಡಿಸುತ್ತದೆ.” ಹೀಗೆಂದು ಜರ್ಮನ್‌ ವಾರ್ತಾಪತ್ರ ನಾಸೈಷಿ ನೊಯಿ ಪ್ರೆಸಿ ಹೊಸ ವಿಜ್ಞಾನವಾದ ಮನೋನರಸೋಂಕು ರಕ್ಷಾಶಾಸ್ತ್ರ (ಸೈಕೋನ್ಯೂರೋಇಮ್ಯುನಾಲಜಿ) ಒಟ್ಟುಗೂಡಿಸಿದ ಸಾಕ್ಷ್ಯವನ್ನು ಸಾರಾಂಶಿಸುತ್ತದೆ. ಕೆಲಸದಲ್ಲಾಗಲಿ ಮನೆಯಲ್ಲಾಗಲಿ ಬರುವ ನಕಾರಾತ್ಮಕ ಪ್ರಭಾವಗಳು ಶಾರೀರಿಕ ನಿರೋಧ ಶಕ್ತಿಯನ್ನು ನಿರ್ಬಲಗೊಳಿಸುತ್ತದೆ. ಇನ್ನೊಂದು ಪಕ್ಕದಲ್ಲಿ, ಪ್ರೊಫೆಸರರೂ ಸೂಕ್ಷ್ಮದರ್ಶಕ ಜೀವಿ ಶಾಸ್ತ್ರಜ್ಞರೂ ಆದ ಡಾ. ಆಂಟೋನ್‌ ಮೈರ್‌ ಇವರಿಗನುಸಾರ, ಸಕಾರಾತ್ಮಕ ಭಾವಾವೇಶಗಳಿಗೆ ಮತ್ತು ಅನುಭವಗಳಿಗೆ ಬಲದಾಯಕ ಪ್ರಭಾವವಿದೆ. ಅವರು ಉಲ್ಲೇಖಿಸಿದ ಕೆಲವು ಉದಾಹರಣೆಗಳು: “ನಂಬಿಕೆ, ನಿರೀಕ್ಷೆ, ಪ್ರೀತಿ, ಭರವಸೆ, ಭದ್ರತೆ, ಸಂಸರ್ಗ, ಜೀವನದಲ್ಲಿ ಸಕಾರಾತ್ಮಕ ಪ್ರಚೋದನೆ, ವಿನೋದ ವಿಹಾರ—ಮತ್ತು ಬದುಕುವ ಮತ್ತು ಆರೋಗ್ಯದಿಂದಿರಬೇಕೆನ್ನುವ ಮನಸ್ಸು.” (g94 3/22)

ವೃಷ್ಟಿ ದೇವತೆಗಳು ನಿರಾಶೆಗೊಳಿಸುತ್ತಾರೆ

ತೀವ್ರ ಅನಾವೃಷ್ಟಿಯನ್ನು ಎದುರಿಸುತ್ತಾ, ಆಗ್ನೇಯ ಭಾರತದ ಆಂಧ್ರ ಪ್ರದೇಶ ರಾಜ್ಯ ಸರಕಾರವು ಮಳೆ ಬರಿಸಲು ಒಂದು ವಿಚಿತ್ರ ತಂತ್ರವನ್ನು ಹೂಡಿತು. ಇಂಡಿಯ ಟುಡೇ ಪತ್ರಿಕೆಗನುಸಾರ, ರಾಜ್ಯ ಸರಕಾರ “ವೃಷ್ಟಿ ದೇವತೆಗಳನ್ನು ಒಲಿಸಲು ಪುರಾತನಕಾಲದ ವೇದ ಸಂಬಂಧಿತ ಸಂಸ್ಕಾರಗಳನ್ನು” ಉತ್ತೇಜಿಸಿತು. “ದೇವರು ನಮ್ಮ ರಕ್ಷಣೆಗಾಗಿ ಬರುವನು,” ಎಂದು ರಾಜ್ಯದ ಉಂಬಳಿ ಮಂತ್ರಿ ತರ್ಕಿಸಿದರು. ಐವತ್ತು ಆಯ್ದು ತೆಗೆದ ದೇವಸ್ಥಾನಗಳಿಂದ ಬಂದ ಪುರೋಹಿತರು 11 ದಿನಗಳ ವರೆಗೆ ಸಂಸ್ಕಾರ ವಿಧಿಗಳನ್ನು ನಡಸಿದರು. ಪರಿಣಾಮವೊ? ಇಂಡಿಯ ಟುಡೇ ವರದಿಸುವುದು: “ದೇವತೆಗಳಿಗೆ ಇದರಿಂದ ಮನದಟ್ಟಾಗಲಿಲ್ಲವೆಂಬುದು ವ್ಯಕ್ತ. . . . ಧರ್ಮ ವಿಫಲಗೊಂಡದ್ದರಿಂದ, ಸರಕಾರ ಈಗ ವೈಜ್ಞಾನಿಕ ವಿಧಾನಕ್ಕೆ ಹೋಗಲು ತೀರ್ಮಾನಿಸಿದೆ. ಅದು ಈಗ ಮೋಡವನ್ನು ಬಿತ್ತಿ ಕೃತಕ ವೃಷ್ಟಿಯನ್ನು ಉಂಟುಮಾಡುವ ಕ್ರಮವನ್ನು ಕೈಕೊಂಡಿದೆ.” (g94 3/22)

ಸಂಧಾನದ ಮೇಲೆ ಸಂಧಾನ

ಅಮೆರಿಕದಲ್ಲಿ ಲೂತರನ್‌ಗಳು ಮತ್ತು ಬ್ರಿಟನ್ನಿನಲ್ಲಿ ಮೆತೊಡಿಸ್ಟರು ಇತ್ತೀಚೆಗೆ ಸಲಿಂಗಕಾಮದ ವಿವಾದಾಂಶಕ್ಕೆ ಗಮನಹರಿಸಿದ್ದಾರೆ. ಬ್ರಿಟನಿನಲ್ಲಿ ಒಂದು ಮೆತೊಡಿಸ್ಟ್‌ ಸಮ್ಮೇಳನವು ಒಂದು ಅನಿಶ್ಚಿತ ರೀತಿಯ ನಿರ್ಣಯಕ್ಕೆ ಬಂದಿತು. ಕ್ರೈಸ್ತ ಪುರೋಹಿತರಾಗಿ ಸಲಿಂಗಿಕಾಮಿಗಳಾದ ಪುರುಷರನ್ನು ಮತ್ತು ಮಹಿಳೆಯನ್ನು ಅವರು ನೇಮಿಸುವುದಿಲ್ಲವೆಂದು ನಿರ್ಧರಿಸಿದರು; ಆದರೆ ಅದೇ ಸಮಯದಲ್ಲಿ ಚರ್ಚು, “ಸಲಿಂಗರತಿ ಸ್ತ್ರೀ ಮತ್ತು ಪುರುಷಗಾಮಿಗಳ ಭಾಗವಹಿಸುವಿಕೆ ಮತ್ತು ಶುಶ್ರೂಷೆಯನ್ನು ಅಂಗೀಕರಿಸಿ, ದೃಢೀಕರಿಸಿ, ಘೋಷಿಸುತ್ತದೆ” ಎಂದು ಪ್ರಕಟಿಸಿತು. ಅಮೆರಿಕದಲ್ಲಿ, ಲೂತರನ್‌ ಚರ್ಚಿನ ಒಂದು ತಾತ್ಕಾಲಿಕ ಸಮಿತಿಯು, ಚರ್ಚಿನ 19,000 ಪುರೋಹಿತರು ಉತ್ತರ ಕೊಡುವಂತೆ ಅವರಿಗೆ ಕಳುಹಿಸಲ್ಪಡಲಿಕ್ಕಾಗಿ, 21 ಪುಟಗಳ ಒಂದು ವರದಿಯನ್ನು ಬಿಡುಗಡೆ ಮಾಡಿತು. ಅಸೋಸಿಯೇಟೆಡ್‌ ಪ್ರೆಸ್ಸಿಗನುಸಾರ, ಬೈಬಲು ಸಲಿಂಗೀಕಾಮ ವಿವಾಹಗಳನ್ನು ಬೆಂಬಲಿಸುತ್ತದೆಂದು ಆ ವರದಿ ಪ್ರತಿಪಾದಿಸುತ್ತದೆ. ಮುಷ್ಟಿಮೈಥುನವು “ಸಾಮಾನ್ಯವಾಗಿ ಯೋಗ್ಯವೂ ಆರೋಗ್ಯಕರವೂ” ಆಗಿದೆ. ಈ ಪ್ರತಿಪಾದನೆ ಮತ್ತು ವಾದದಲ್ಲಿ, ಬೈಬಲು ಈ ವಿಷಯ ಏನು ಹೇಳುತ್ತದೋ ಅದನ್ನು ಈ ವರದಿ ವಿರೋಧಿಸುತ್ತದೆ.—ರೋಮಾಪುರ 1:26, 27; 1 ಕೊರಿಂಥ 6:9, 10; ಕೊಲೊಸ್ಸೆ 3:6, 7. (g94 3/22)

ಬ್ರಿಟನಿನಲ್ಲಿ ರೋಮನ್‌ ನಿಕ್ಷೇಪದ ಪತ್ತೆ

ಬಂಗಾರ, ಬೆಳ್ಳಿ, ಮತ್ತು ಕಂಚಿನ 14,780 ನಾಣ್ಯಗಳ ರಾಶಿ, ಹಾಗೂ ಒಂದು 90 ಸೆಂಟಿಮೀಟರಿನ ಚಿನ್ನದ ಹಾರ, 15 ಚಿನ್ನದ ಬಳೆಗಳು, ಮತ್ತು ಸುಮಾರು 100 ಚಮಚಗಳನ್ನು ಇಂಗ್ಲೆಂಡಿನ ಸಫಕ್‌ ಊರಿನ ಒಂದು ಹೊಲದಲ್ಲಿ ಕಂಡುಹಿಡಿಯಲಾಗಿದೆ. ಇದನ್ನು ಒಬ್ಬ ನಿವೃತ್ತ ತೋಟಗಾರನು ಕಂಡುಹಿಡಿದನು. ಅವನು ತನ್ನ ಕಳೆದುಹೋಗಿದ್ದ ಸುತ್ತಿಗೆಗಾಗಿ ಒಂದು ಲೋಹಶೋಧಕವನ್ನು ಉಪಯೋಗಿಸುತ್ತಿದ್ದ. ಈ ಕಂಡುಹಿಡಿತದ ಮೌಲ್ಯ ಕಡಮೆ ಪಕ್ಷ 1.5 ಕೋಟಿ ಡಾಲರೆಂದು ಒಬ್ಬ ಪರಿಣತನು ಅಂದಾಜು ಮಾಡಿದ್ದಾನೆ. ಈ ನಿಕ್ಷೇಪವು ಬ್ರಿಟಿಷ್‌ ಸರಕಾರದ ಸ್ವತ್ತೆಂದು ಒಂದು ನ್ಯಾಯದರ್ಶಿ ಮಂಡಲಿಯು ನಿರ್ಧರಿಸಿತು. ಇದರ ಅರ್ಥವು, ಆ ನಿಕ್ಷೇಪವನ್ನು ಕಂಡುಹಿಡಿದ 70 ವಯಸ್ಸಿನ ಎರಿಕ್‌ ಲಾಸ್‌, ಮಾರುಕಟ್ಟೆಯಲ್ಲಿ ಆ ನಿಧಿಗೆ ದೊರೆಯುವುದಕ್ಕೆ ಸಮಾನವಾದ ಹಣವನ್ನು ಅನುಗ್ರಹದ ರೀತಿಯಲ್ಲಿ ಪಡೆಯುವನು. ಈ ನಿಕ್ಷೇಪವನ್ನು ಬ್ರಿಟಿಷ್‌ ಮ್ಯುಸೀಯಮ್‌ನಲ್ಲಿ ಸಾರ್ವಜನಿಕ ಪ್ರದರ್ಶನಕ್ಕಾಗಿ ಇಡಲಾಗಿದೆ, ಎಂದು ಗಾರ್ಡಿಯನ್‌ ವೀಕ್ಲಿ ವರದಿಸುತ್ತದೆ. (g94 4/8)

ಲೋಕ ಆರೋಗ್ಯ ವರದಿ

ರೋಗದ ವಿರುದ್ಧ ನಡೆಯುವ ಹೋರಾಟದ ಕುರಿತ ಒಂದು ಮೊಬ್ಬಾದ ಚಿತ್ರವನ್ನು ಚಿತ್ರಿಸುತ್ತಾ, ಜಾಗತಿಕ ಆರೋಗ್ಯ ಸಂಸ್ಥೆ ತನ್ನ ಲೋಕಾರೋಗ್ಯ ಪರಿಸ್ಥಿತಿಯ ಬಗೆಗೆ ಎಂಟನೆಯ ವರದಿ (ಇಂಗ್ಲಿಷ್‌ನಲ್ಲಿ) ಯಲ್ಲಿ ಹೇಳುವುದು: “ವಾಂತಿಭೇದಿ ಈ ಶತಕದಲ್ಲಿ ಅಮೆರಿಕಗಳಿಗೆ ಮೊದಲನೆಯದಾಗಿ ಹಬ್ಬುತ್ತಾ, ಪೀತ ಜ್ವರ ಮತ್ತು ಡೆಂಗೇ ಜ್ವರದ ಸಾಂಕ್ರಾಮಿಕ ರೋಗಗಳು ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಜನರಿಗೆ ತಟ್ಟುತ್ತಾ ಮತ್ತು ಮಲೇರಿಯದ ಸ್ಥಿತಿ ಇನ್ನೂ ಕೆಡುತ್ತಾ ಇದ್ದು, ಹೀಗೆ ಉಷ್ಣವಲಯದ ರೋಗಗಳು ಆವೇಶದಿಂದ ಹಬ್ಬುವಂತೆ ಕಾಣುತ್ತದೆ. . . . ಏಯ್ಡ್ಸ್‌ ಸರ್ವವ್ಯಾಪಿ ವ್ಯಾಧಿ ಭೌಗೋಲಿಕವಾಗಿ ಹರಡುತ್ತಿದೆ. . . . ಶ್ವಾಸಾಪಧಮನಿಯ ಕ್ಷಯರೋಗ ಹೆಚ್ಚುತ್ತಿದೆ. . . . ವಿಕಾಸಶೀಲ ದೇಶಗಳಲ್ಲಿ, ಕ್ಯಾನ್ಸರ್‌ ಕೇಸುಗಳು ಮೊದಲನೆಯ ಬಾರಿ, ವಿಕಾಸ ಹೊಂದಿದ ದೇಶಗಳ ಸಂಖ್ಯೆಯನ್ನು ಬೆನ್ನುಹಿಡಿದು ಹಿಂದೆ ಹಾಕಿದೆ. ಮಧುಮೂತ್ರ ವ್ಯಾಧಿ ಎಲ್ಲೆಲ್ಲಿಯೂ ಹೆಚ್ಚಾಗುತ್ತಿದೆ.” ಇಸವಿ 1985-90ರ ವರದಿಯನ್ನು ಆವರಿಸುತ್ತಾ, ಪ್ರತಿ ವರ್ಷ ಆಗುವ 5 ಕೋಟಿ ಮರಣಗಳಲ್ಲಿ 4 ಕೋಟಿ 65 ಲಕ್ಷ ಮರಣಗಳು ಅನಾರೋಗ್ಯ ಮತ್ತು ರೋಗಗಳಿಂದ ಆಗುತ್ತವೆಂದೂ, ಮತ್ತು ಪ್ರತಿ ವರ್ಷ ಹುಟ್ಟುವ 14 ಕೋಟಿ ಶಿಶುಗಳಲ್ಲಿ 40 ಲಕ್ಷ ಶಿಶುಗಳು ಅವು ಹುಟ್ಟಿದ ಕೆಲವೇ ತಾಸುಗಳಲ್ಲಿ ಅಥವಾ ದಿನಗಳೊಳಗೆ ಸಾಯುತ್ತವೆಂದೂ ವರದಿ ತೋರಿಸುತ್ತದೆ. ಪ್ರತಿ ವರ್ಷ ಎಪ್ಪತ್ತು ಲಕ್ಷ ಹೊಸ ಕ್ಯಾನ್ಸರ್‌ ಕೇಸುಗಳು ಉಂಟಾಗುತ್ತವೆ, ಮತ್ತು ಒಂದು ವರ್ಷಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಜನರು ಏಯ್ಡ್ಸ್‌ ಉಂಟುಮಾಡುವ ಏಚ್‌ಐವಿಯಿಂದ ಬಾಧಿತರಾಗುತ್ತಾರೆ. ಉಲ್ಲಾಸದ ಪಕ್ಕದಲ್ಲಿ, ಶೈಶವದ ರೋಗಗಳಾದ ದಡಾರ ಮತ್ತು ನಾಯಿಕೆಮ್ಮು ಕಡಮೆಯಾಗುತ್ತಿವೆ ಮತ್ತು ಜೀವ ನಿರೀಕ್ಷಣೆ ಒಂದು ಮತ್ತು ಎರಡು ವರ್ಷಗಳ ಮಧ್ಯೆ ಇರುವಷ್ಟು ಹೆಚ್ಚಾಗಿದೆ. ಈಗ ಭೌಗೋಲಿಕ ಸರಾಸರಿ 65 ವರ್ಷ. (g94 4/8)

ಅಮೆರಿಕದಲ್ಲಿ ಧೂಮಪಾನ ಸಂಬಂಧಿತ ಮರಣಗಳು ಕೆಳಗಿಳಿಯುತ್ತಿವೆ

ಅಮೆರಿಕದ ರೋಗ ನಿಯಂತ್ರಣ ಮತ್ತು ನಿವಾರಣ ಕೇಂದ್ರಗಳು (ಸಿಡಿಸಿ), ಧೂಮಪಾನ ಸಂಬಂಧಿತ ಮರಣಗಳ ಸಂಖ್ಯೆಯಲ್ಲಿ ಇಳಿತವನ್ನು—1985ರಲ್ಲಿ ದಾಖಲೆ ಇಡಲು ಆರಂಭವಾದಂದಿನಿಂದ ಪ್ರಥಮ ಸಲ—ಪ್ರಕಟಿಸಿವೆ. ಪ್ರತಿ ವರ್ಷ, ಸಿಗರೇಟು ಸೇವನೆಯಿಂದ ಸಾಯುವ ಅಮೆರಿಕನರ ಸಂಖ್ಯೆ 15,000ದಷ್ಟು, 1990ರಲ್ಲಿ 4,19,000ಕ್ಕೆ, ಪ್ರಧಾನವಾಗಿ ಧೂಮಪಾನ ಉದ್ರೇಕಿತ ಹೃದ್ರೋಗದಲ್ಲಿ ಕಡಮೆಯ ಕಾರಣ ಇಳಿದಿದೆ. ಅಮೆರಿಕದ ವಯಸ್ಕರಲ್ಲಿ 1965ರಲ್ಲಿ, ಸುಮಾರು 42.4 ಪ್ರತಿಶತ ಧೂಮಪಾನ ಮಾಡಿದರು. ಅದು 1990ರಲ್ಲಿ 25.5 ಪ್ರತಿಶತವಾಯಿತು. ಆದರೂ, ಧೂಮಪಾನವು ನಿವಾರಿಸಸಾಧ್ಯವಿರುವ ರೋಗ ಮತ್ತು ಮರಣಗಳ ಅತಿ ದೊಡ್ಡ ಕಾರಣವಾಗಿ ಉಳಿದಿದ್ದು ಆರೋಗ್ಯಕ್ಕಾಗಿ ಹಣವನ್ನು ಸುಮಾರು 2,000 ಕೋಟಿ ಡಾಲರುಗಳಷ್ಟು ಹೆಚ್ಚಿಸುತ್ತದೆ. ಸರಕಾರವು ಧೂಮಪಾನ ವಿರೋಧದ ಜಾಹೀರಾತಿಗಾಗಿ ಸುಮಾರು 10 ಲಕ್ಷ ಡಾಲರುಗಳನ್ನು ವ್ಯಯಿಸುವಾಗ, ತಂಬಾಕು ಉದ್ಯಮವು 400 ಕೋಟಿ ಡಾಲರುಗಳನ್ನು ಧೂಮಪಾನದ ಅಭಿವೃದ್ಧಿಗಾಗಿ ಪ್ರವರ್ತನ ಮತ್ತು ಜಾಹೀರಾತುಗಳಿಗಾಗಿ ವ್ಯಯಿಸುತ್ತದೆ. ಧೂಮಪಾನವು ಪ್ರತಿ ಧೂಮಪಾಯಿಗೆ ಸರಾಸರಿಯಾಗಿ ಐದು ವರ್ಷಗಳ ಜೀವ ನಿರೀಕ್ಷಣ ನಷ್ಟವನ್ನು ಆಗಿಸುತ್ತದೆ, ಎನ್ನುತ್ತದೆ ಸಿಡಿಸಿ ವರದಿ. (g94 4/8)

ಗಾಲಿಗಳುಳ್ಳ ಆಸ್ಪತ್ರೆ

ಒಂದು ವಿಶಿಷ್ಟ ರೀತಿಯ ಆಸ್ಪತ್ರೆ ಭಾರತದ ರೋಗಿಗಳಿಗೆ ಸಹಾಯ ಮಾಡುತ್ತಿದೆ: ಇದು ಲೈಫ್‌ಲೈನ್‌ ಎಕ್ಸ್‌ಪ್ರೆಸ್‌ ಎಂದು ಕರೆಯಲಾಗುವ ರೆಯ್ಲು ಗಾಡಿ. ಸ್ವಯಂಸೇವಕ ವೈದ್ಯರಿರುವ ಈ ರೆಯ್ಲು, “ಕಾರ್ಯತಃ ಗಾಲಿಗಳುಳ್ಳ ಒಂದು ಆಸ್ಪತ್ರೆಯೇ,” ಎನ್ನುತ್ತದೆ ಏಷಿಯವೀಕ್‌ ಪತ್ರಿಕೆ. ಅದು ಹಳ್ಳಿಗಳಿಗೆ ಹೋಗಿ, ಒಂದರಿಂದ ಒಂದೂವರೆ ತಿಂಗಳ ತನಕ ನಿಂತು, ಅಲ್ಲಿಂದ ಮುಂದಿನ ಹಳ್ಳಿಗೆ ಹೋಗುವ ಮೊದಲು ಅದರಲ್ಲಿರುವ ಶಸ್ತ್ರಚಿಕಿತ್ಸಕರು ಕಡಮೆ ಪಕ್ಷ 600 ಮಂದಿಗಾದರೂ ಚಿಕಿತ್ಸೆ ನೀಡುವಂತೆ ಸಮಯ ನೀಡುತ್ತದೆ. ಇಂಪ್ಯಾಕ್ಟ್‌ ಇಂಡಿಯ ಫೌಂಡೇಷನ್‌ ಎಂಬ ಲಾಭರಹಿತ ಗುಂಪಿನಿಂದ ನಡಸಲ್ಪಡುವ ಈ ಚಲಿಸಬಲ್ಲ ಆಸ್ಪತ್ರೆ ಇದುವರೆಗೆ 4,00,000 ಜನರಿಗೆ ಸಹಾಯ ಮಾಡಿಯದೆ. ಇಂಪ್ಯಾಕ್ಟ್‌ ಇಂಡಿಯದ ಜೆಲ್ಮ ಲಾಜರಸ್‌ ವರದಿಸುವುದು: “ಈ ಯೋಜನೆ ಮಿತಿಮೀರಿ ಬೆಳೆದಿದೆ. ಇದೇ ರೀತಿಯ ಚಲಿಸಬಲ್ಲ ಆಸ್ಪತ್ರೆಯ ವ್ಯವಸ್ಥೆಯನ್ನು ಸ್ಥಾಪಿಸಬೇಕೆಂದು ಈಗ ಇತರ ದೇಶಗಳು ನಮ್ಮನ್ನು ಕೇಳುತ್ತಿವೆ.” (g94 3/22)

ಕೊನೆ ಕಾಣುವುದಿಲ್ಲ

ಏಳು ವಯಸ್ಸಿನ ಬ್ರಿಟಿಷ್‌ ಹುಡುಗ ಕ್ರೇಗ್‌ ಷರ್‌ಗೋಲ್ಡ್‌, 1989ರಲ್ಲಿ ಮಿದುಳಿನ ಗೆಡ್ಡೆಯಿಂದ ಯಿಂದ ನರಳುತ್ತಾ, ಜೀವಿಸುವ ನಿರೀಕ್ಷಣೆಯಲ್ಲಿರಲಿಲ್ಲ. ಸ್ವಸ್ಥತೆಯನ್ನು ಕೋರುವ ಕಾರ್ಡುಗಳನ್ನು ಪಡೆಯುವ ಸಂಬಂಧದಲ್ಲಿ ತಾನು ವಿಶ್ವ ದಾಖಲೆಯನ್ನು ಮುರಿಯಬೇಕೆಂಬುದು ಅವನ ಅಪೇಕ್ಷೆಯಾಗಿತ್ತು. ವಾರ್ತಾ ಮಾಧ್ಯಮಗಳಿಂದ ಮತ್ತು ಅಟ್ಲಾಂಟದ ಚಿಲ್‌ಡ್ರನ್ಸ್‌ ವಿಶ್‌ ಫೌಂಡೇಷನ್‌ ಇಂಟರ್‌ನ್ಯಾಷನಲ್‌ನಿಂದ ಇದು ಬಹಿರಂಗವಾದಾಗ ಕೆಲವೇ ತಿಂಗಳುಗಳಲ್ಲಿ ಈ ದಾಖಲೆ ಮುರಿಯಲ್ಪಟ್ಟಿತು. ಒಂದನೆಯ ವರ್ಷದಲ್ಲಿ 1 ಕೋಟಿ 60 ಲಕ್ಷ ಅಭಿವಂದನಾ ಕಾರ್ಡುಗಳನ್ನು, 1992ರೊಳಗೆ 3 ಕೋಟಿ 30 ಲಕ್ಷ ಕಾರ್ಡುಗಳನ್ನು ಪಡೆಯಲಾಯಿತು. ಇನ್ನು ಕಾರ್ಡುಗಳನ್ನು ಕಳುಹಿಸುವುದು ಬೇಡವೆಂಬ ಬೇಡಿಕೆಯನ್ನು ಎರಡು ವರ್ಷಗಳಿಗಿಂತಲೂ ಹೆಚ್ಚು ಹಿಂದೆಯೇ ಪ್ರಕಟಿಸಲಾಗಿದೆಯಾದರೂ, ಅವು ಈಗಲೂ ಒಂದು ವಾರಕ್ಕೆ 3,00,000ಗಳ ಪ್ರಮಾಣದಲ್ಲಿ ಬರುತ್ತಿವೆ. ಆರು ಕೋಟಿ ಕಾರ್ಡುಗಳು ಬಂದಾಗ ಲೆಕ್ಕಿಸುವುದನ್ನು ನಿಲ್ಲಿಸಲಾಯಿತು. “ಚಾವಣಿಯ ವರೆಗೆ ರಾಶಿ ಹಾಕಿರುವ, ಇನ್ನೂ ತೆರೆಯದಿರುವ ಟಪಾಲು ಇಟ್ಟಿರುವ 900 ಚದರ ಮೀಟರಿನ ಒಂದು ಸರಕು ಗೃಹ ನಮ್ಮಲ್ಲಿದೆ,” ಎನ್ನುತ್ತಾರೆ, ಆ ಫೌಂಡೇಷನಿನ ಅಧ್ಯಕ್ಷ ಆರ್ಥರ್‌ ಸ್ಟೈನ್‌. ಒಬ್ಬ ದಾನಿಯ ಸಹಾಯದಿಂದ, 1991ರ ಆದಿಭಾಗದಲ್ಲಿ ಕ್ರೇಗ್‌ಗೆ ಶಸ್ತ್ರಚಿಕಿತ್ಸೆ ನಡೆದು, 90 ಪ್ರತಿಶತ ಗೆಡ್ಡೆಯನ್ನು ತೆಗೆಯಲಾಯಿತು. (g94 3/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ