ವೇದನೆಯ ಚಿಕಿತ್ಸೆ ಮಾಡುವುದರಲ್ಲಿ ಪ್ರಗತಿ
ಇತ್ತೀಚೆಗಿನ ತನಕ ಕೆಲವೇ ವೈದ್ಯರು ವೇದನೆಯ ಕುರಿತು ತೀರ ಹೆಚ್ಚನ್ನು ತಿಳಿದಿದ್ದರು, ಮತ್ತು ಅನೇಕರು ಇನ್ನೂ ತಿಳಿದಿಲ್ಲ. ಇಂಟರ್ನ್ಯಾಷನಲ್ ಪೆಯ್ನ್ ಫೌಂಡೇಷನ್ನ ಹಿಂದಿನ ಅಧ್ಯಕ್ಷರಾದ ಡಾ. ಜಾನ್ ಲೀಬೆಸ್ಕಿಂಡ್, ಕೆಲವು ವರ್ಷಗಳ ಹಿಂದೆ ಗಮನಿಸಿದ್ದು: “ನಾಲ್ಕು ವರ್ಷಗಳಲ್ಲಿ, ವಿದ್ಯಾರ್ಥಿಗಳಿಗೆ ರೋಗ ನಿರ್ಣಯಿಸಲು ಮತ್ತು ವೇದನೆಯ ಸಮಸ್ಯೆಗಳಿಗೆ ಚಿಕಿತ್ಸೆ ನಡೆಸಲು ಕಲಿಸುವುದರಲ್ಲಿ ನಾಲ್ಕು ತಾಸುಗಳಿಗಿಂತ ಹೆಚ್ಚಿಗೆ ಕಳೆಯುವ ವೈದ್ಯಕೀಯ ಶಾಲೆಯೊಂದು ಲೋಕದಲ್ಲಿದೆ ಎಂದು ನಾನು ಅಭಿಪ್ರಯಿಸುವುದಿಲ್ಲ.”
ಹಾಗಿದ್ದರೂ, ವೇದನೆಯನ್ನು ಗ್ರಹಿಸುವುದರಲ್ಲಿ ಭೇದನಗಳು ಅದನ್ನು ಚಿಕಿತ್ಸಿಸುವುದರಲ್ಲಿ ಮಹತ್ತಾದ ಪ್ರಯತ್ನಗಳೊಂದಿಗೆ ಏಕಕಾಲಿಕವಾಗಿವೆ. ಹೀಗೆ, ವೇದನೆಯ ಅನುಭವಿಗಳಿಗೆ ನಿರೀಕ್ಷೆಯು ಕುದುರಿದೆ. “ನಿರಂತರವಾದ ವೇದನೆಯು ಕೇವಲ ಒಂದು ರೋಗಲಕ್ಷಣವಾಗಿರುವುದಿಲ್ಲ, ಬದಲಿಗೆ ಸ್ವತಃ ಚಿಕಿತ್ಸೆ ಮಾಡುವಂತಹ ರೋಗವಾಗಿದೆ ಎಂದು ಔಷಧ ಶಾಸ್ತ್ರವು ಈಗ ಅಂಗೀಕರಿಸುವುದರಿಂದ, ನಾವೆಲ್ಲರೂ ಕೃತಜ್ಞತೆಯುಳ್ಳವರಾಗಿರಸಾಧ್ಯವಿದೆ” ಎಂದು ಅಮೆರಿಕನ್ ಹೆಲ್ತ್ ಪತ್ರಿಕೆಯು ವರದಿಸಿತು. ವೇದನೆಗೆ ಚಿಕಿತ್ಸೆ ಮಾಡಲು ನಿವೇದಿಸಿಕೊಂಡಿರುವ ಚಿಕಿತ್ಸಾಲಯಗಳ ಸಂಖ್ಯೆಯಲ್ಲಿ ಮಹತ್ತರವಾದ ಅಭಿವೃದ್ಧಿಗೆ ಈ ವೀಕ್ಷಣವು ಸಹಾಯಮಾಡಿದೆ.
ವೇದನೆಗೆ ಚಿಕಿತ್ಸೆ ಮಾಡುವ ಸ್ಥಳ
ಡಾ. ಜಾನ್ ಜೆ. ಬಾನಿಕ್, ಪ್ರಥಮವಾಗಿ ಮಲಿಡ್ಟಿಸಿಪಿನ್ಲೆರಿ ಪೆಯ್ನ್ ಕಿನ್ಲಿಕನ್ನು ಅಮೆರಿಕದಲ್ಲಿ ತೆರೆದರು. “ಇಸವಿ 1969ರಲ್ಲಿ ಅಂತಹ ಕೇವಲ 10 ಚಿಕಿತ್ಸಾಲಯಗಳು ಲೋಕದಲ್ಲಿದ್ದವು,” ಎಂದು ಅವರು ವರದಿಸಿದರು. ಆದರೆ ಕಳೆದ 25 ವರ್ಷಗಳಲ್ಲಿ ವೇದನೆಗೆ ಚಿಕಿತ್ಸೆ ಮಾಡಲು ನಿವೇದಿಸಿಕೊಂಡಿರುವ ಚಿಕಿತ್ಸಾಲಯಗಳ ಸಂಖ್ಯೆಯು ನಾಟಕೀಯವಾಗಿ ಅಭಿವೃದ್ಧಿಗೊಂಡಿದೆ. ಈಗ ಸಾವಿರಕ್ಕಿಂತಲೂ ಹೆಚ್ಚು ವೇದನೆಯ ಚಿಕಿತ್ಸಾಲಯಗಳು ಇವೆ, ಮತ್ತು ರಾಷ್ಟ್ರೀಯ ನಿರಂತರವಾದ ವೇದನೆಯ ವ್ಯಾಪ್ತಿ ಸಂಘದ ಪ್ರತಿನಿಧಿಯೊಬ್ಬರು ಹೇಳಿದ್ದೇನಂದರೆ, “ಹೊಸ ಚಿಕಿತ್ಸಾಲಯಗಳು ಬಹುಮಟ್ಟಿಗೆ ಪ್ರತಿ ದಿನ ತೆರೆಯಲ್ಪಡುತ್ತಿವೆ.”a
ಅದರ ಅರ್ಥವೇನೆಂಬುದರ ಕುರಿತು ಯೋಚಿಸಿರಿ! “ಗಂಭೀರವಾದ ವೇದನೆಯಿಂದ ಪರಿಹಾರವನ್ನು ಪಡೆಯಲಿಕ್ಕಾಗಿ ನೂರಾರು ಅಥವಾ ಸಾವಿರಾರು ಮೈಲುಗಳನ್ನು ಪ್ರಯಾಣಿಸಬೇಕಾಗಿದ್ದ ರೋಗಿಗಳು ಇಂದು ಅದನ್ನು ಮನೆಯ ಸಮೀಪವೇ ಕಂಡುಕೊಳ್ಳಬಲ್ಲರು,” ಎಂದು ನ್ಯೂ ಯಾರ್ಕ್ ಸಿಟಿಯ ಅಸಂವೇದನ ಶಾಸ್ತ್ರಜ್ಞರಾದ ಡಾ. ಗ್ಯಾರಿ ಫೆಲ್ಡ್ಸ್ಟೈನ್ ಗಮನಿಸಿದರು. ಕಷ್ಟಾನುಭವಿಸುತ್ತಿರುವವರು ನೀವಾಗಿರುವುದಾದರೆ, ವೇದನೆಗೆ ಚಿಕಿತ್ಸೆ ನಡೆಸಲಿಕ್ಕಾಗಿ ತರಬೇತುಗೊಳಿಸಲ್ಪಟ್ಟ ವಿಶೇಷಜ್ಞರ ಒಂದು ತಂಡದಿಂದ ಸಹಾಯವನ್ನು ಪಡೆದುಕೊಳ್ಳುವುದು ಎಂತಹ ಒಂದು ಆಶೀರ್ವಾದವಾಗಿರಸಾಧ್ಯವಿದೆ!
ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕರೊಬ್ಬರ ಹೆಂಡತಿಯಾದ ಲಿಂಡ ಪಾರ್ಸನ್ಸ್, ಅನೇಕ ವರ್ಷಗಳ ವರೆಗೆ ಬೆನ್ನು ನೋವಿನಿಂದ ಕಷ್ಟಾನುಭವಿಸಿದಳು. ಒಬ್ಬ ವೈದ್ಯನ ಬಳಿಕ ಮತ್ತೊಬ್ಬನಿಂದ ಅವಳು ಸಹಾಯವನ್ನು ಪಡೆದುಕೊಂಡಳು, ಆದರೂ ಅವಳ ವೇದನೆಯು ತಗ್ಗದೆ ಮುಂದುವರಿಯಿತು. ಕಳೆದ ವರ್ಷದ ಮೇ ತಿಂಗಳ ಒಂದು ದಿನ, ತೀರ ಹತಾಶೆಯಿಂದ, ಅವಳ ಗಂಡನು ಫೋನ್ ಪುಸ್ತಕವನ್ನು ತೆಗೆದುಕೊಂಡನು ಮತ್ತು ವೇದನೆ ಎಂಬ ವಿಷಯದ ಕೆಳಗೆ ನೋಡಿದನು. ಅವರು ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಸೇವೆ ಮಾಡುತ್ತಿದ್ದ ಸ್ಥಳದಿಂದ ಹೆಚ್ಚು ದೂರವಿರದ ಒಂದು ವೇದನೆ ಚಿಕಿತ್ಸಾಲಯದ ಫೋನ್ ಸಂಖ್ಯೆಯು ಅಲ್ಲಿ ಪಟಿಮ್ಟಾಡಲ್ಪಟ್ಟಿತ್ತು. ಒಂದು ಭೇಟಿ ನಿಶ್ಚಯವನ್ನು ಮಾಡಲಾಯಿತು, ಮತ್ತು ಕೆಲವು ದಿನಗಳ ಬಳಿಕ ತನ್ನ ಆರಂಭದ ಸಮಾಲೋಚನೆಯನ್ನು ಪಡೆದುಕೊಳ್ಳಲಿಕ್ಕಾಗಿ ಮತ್ತು ರೋಗ ನಿರೂಪಣೆಗಾಗಿ ಲಿಂಡ ಒಬ್ಬ ವೈದ್ಯನನ್ನು ಸಂಪರ್ಕಿಸಿದಳು.
ಲಿಂಡಳನ್ನು ಹೊರರೋಗಿಯೋಪಾದಿ ಚಿಕಿತ್ಸೆ ನಡೆಸಲು ಏರ್ಪಾಡುಗಳನ್ನು ಮಾಡಲಾಯಿತು. ಅವಳು ಚಿಕಿತ್ಸೆಗಾಗಿ ಚಿಕಿತ್ಸಾಲಯವನ್ನು ವಾರವೊಂದಕ್ಕೆ ಮೂರು ಬಾರಿ ಭೇಟಿ ನೀಡಲು ಆರಂಭಿಸಿದಳು ಮತ್ತು ಮನೆಯಲ್ಲಿ ಸಹ ಚಿಕಿತ್ಸೆಯ ಕಾರ್ಯಕ್ರಮವನ್ನು ಅನುಸರಿಸಿದಳು. ಕೆಲವು ವಾರಗಳಲ್ಲೇ ಗಮನಾರ್ಹವಾದ ಅಭಿವೃದ್ಧಿಯನ್ನು ಅವಳು ಅನುಭವಿಸತೊಡಗಿದಳು. ಅವಳ ಗಂಡನು ವಿವರಿಸುವುದು: “ಒಂದು ಸಂಜೆ ಅವಳು ‘ನನಗೆ ಯಾವುದೇ ವೇದನೆಯ ಅನುಭವವಾಗುತ್ತಿಲ್ಲ ಎಂಬುದನ್ನು ನನಗೆ ನಂಬಲು ಸಾಧ್ಯವಾಗುವುದಿಲ್ಲ’ ಎಂದು ಬಹುಮಟ್ಟಿಗೆ ಆಶ್ಚರ್ಯದಿಂದ ಹೇಳುವುದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ.” ಕೆಲವು ತಿಂಗಳುಗಳೊಳಗೆ, ಚಿಕಿತ್ಸಾಲಯದ ಕ್ರಮವಾದ ಭೇಟಿಗಳನ್ನು ನಿಲ್ಲಿಸಸಾಧ್ಯವಾಯಿತು.
ತನ್ನ ವೇದನೆಯನ್ನು ನಿರ್ವಹಿಸಲಿಕ್ಕಾಗಿ ಲಿಂಡಳು ಪಡೆದುಕೊಂಡ ಸಹಾಯವು, ಅನೇಕ ಮಲಿಡ್ಟಿಸಿಪಿನ್ಲೆರಿ ಪೆಯ್ನ್ ಕಿನ್ಲಿಕ್ಗಳಿಂದ ಒದಗಿಸಲ್ಪಡುವುದಕ್ಕೆ ಸದೃಶವಾಗಿದೆ. ಅಂತಹ ಚಿಕಿತ್ಸಾಲಯವೊಂದು ಆರೋಗ್ಯ ವೃತ್ತಿಯವರ ತಂಡದ ನೈಪುಣ್ಯವನ್ನು ಪ್ರಯೋಗಿಸುತ್ತದೆ, ಡಾ. ಬಾನಿಕರಿಗನುಸಾರ ಅದು, “ನಿರಂತರವಾದ ವೇದನೆಯೊಂದಿಗೆ ವ್ಯವಹರಿಸುವುದಕ್ಕಾಗಿರುವ ಅತ್ಯುತ್ತಮವಾದ ಮಾರ್ಗ.” ಉದಾಹರಣೆಗೆ, ಲಿಂಡಳ ವೇದನೆಗಾಗಿ ಅವಳು ಹೇಗೆ ಚಿಕಿತ್ಸಿಸಲ್ಪಟ್ಟಳು?
ವೇದನೆಯನ್ನು ಚಿಕಿತ್ಸೆಗೆ ಒಳಪಡಿಸಬಹುದಾದ ವಿಧ
ಆಗಮನದ ಅನಂತರದ ಕಾರ್ಯವಿಧಾನವನ್ನು ಒಂದು ಕಿನ್ಲಿಕ್ ಬ್ರೋಷರ್ ವಿವರಿಸುತ್ತದೆ: “ವೇದನೆಗೆ ಆಧಾರವೇನೆಂಬುದನ್ನು ನಿರ್ಧರಿಸಲಿಕ್ಕಾಗಿ, ಪ್ರತಿಯೊಬ್ಬ ವ್ಯಕ್ತಿಯು ವೈದ್ಯನೊಬ್ಬನಿಂದ ರೋಗ ನಿರ್ಣಯ ಮಾಡಲ್ಪಡುತ್ತಾನೆ ಮತ್ತು ಅನಂತರ ವಾಸ್ತವವಾದ ಗುರಿಗಳು ಮತ್ತು ಚಿಕಿತ್ಸಾ ಕಾರ್ಯಕ್ರಮಗಳನ್ನು ರೇಖಿಸಲಾಗುತ್ತದೆ. . . . ವೇದನೆ ಮತ್ತು ಚಿಂತೆಯನ್ನು ತಗ್ಗಿಸಲು ಹಾಗೂ ಔಷಧ ಅವಲಂಬನೆಯನ್ನು ತೊರೆಯಲು ‘ಎಂಡಾರ್ಫಿನ್’ (ದೇಹದಲ್ಲಿ ಸ್ವಾಭಾವಿಕವಾಗಿ ಉತ್ಪತ್ತಿಮಾಡಲ್ಪಟ್ಟ ರಾಸಾಯನಿಕಗಳು)ನನ್ನು ಬಿಡುಗಡೆ ಮಾಡುವುದರಲ್ಲಿ ದೇಹಕ್ಕೆ ಸಹಾಯವನ್ನೀಯಲಿಕ್ಕಾಗಿ ವಿಶಿಷ್ಟವಾದ ತಂತ್ರಗಳು ಮತ್ತು ವಿಧಾನಗಳು ಉಪಯೋಗಿಸಲ್ಪಡುತ್ತವೆ.”
ಲಿಂಡಳು ಪಡೆದುಕೊಂಡ ಚಿಕಿತ್ಸೆಗಳಲ್ಲಿ, ಸೂಜಿ ಚಿಕಿತ್ಸೆ ಮತ್ತು ಟೆನ್ಸ್ (TENS)—ಇದರ ಅರ್ಥ ಟ್ರಾನ್ಸ್ಕ್ಯುಟೇನಿಯಸ್ (ಚರ್ಮದ ಒಳಗೆ) ಇಲೆಕ್ಟ್ರಿಕಲ್ ನರ್ವ್ ಸ್ಟಿಮ್ಯುಲೇಷನ್—ಒಳಗೂಂಡಿದ್ದವು. ಚಿಕಿತ್ಸಾಲಯದಲ್ಲಿ ವಿದ್ಯುಜನ್ಜಕ ಪ್ರಚೋದನಾ ಚಿಕಿತ್ಸೆಗಳನ್ನು ಅವಳು ಪಡೆದುಕೊಂಡಳು ಮತ್ತು ಮನೆಯಲ್ಲಿ ಉಪಯೋಗಿಸಲಿಕ್ಕಾಗಿ ಒಂದು ಸಣ್ಣ ಟೆನ್ಸ್ ಏಕಮಾನವು ಒದಗಿಸಲ್ಪಟ್ಟಿತ್ತು. ಜೈವಿಕ ಪ್ರತ್ಯಾಧಾನ (ಬಯೋಫೀಡ್ಬ್ಯಾಕ್)—ರೋಗಿಗೆ ತನ್ನ ದೇಹದ ಪ್ರತಿಕ್ರಿಯೆಯನ್ನು ನಿಯಂತ್ರಿಸಲು ಮತ್ತು ವೇದನೆಯ ಪ್ರಭಾವವನ್ನು ಕಡಿಮೆಗೊಳಿಸಲಿಕ್ಕಾಗಿ ಅವುಗಳನ್ನು ಮಾರ್ಪಡಿಸಲು ಕಲಿಸಲ್ಪಡುವ ಒಂದು ಕಾರ್ಯವಿಧಾನ—ವನ್ನು ಕೂಡ ಪ್ರಯೋಗಿಸಲಾಗಿತ್ತು.
ಆಳವಾದ ಅಂಗಾಂಶ ಮರ್ದನ (ಟಿಸ್ಯು ಮ್ಯಾಸಾಷ್)ದೊಂದಿಗೆ ಶಾರೀರಿಕ ಚಿಕಿತ್ಸೆಯು, ಚಿಕಿತ್ಸೆಯ ವ್ಯಾಯಾಮದ ಒಂದು ಅಂಶವಾಗಿತ್ತು. ಸಕಾಲದಲ್ಲಿ, ಆದರೆ ಲಿಂಡಳು ಅದಕ್ಕೆ ಸಿದ್ಧಳಾದ ಬಳಿಕ ಮಾತ್ರವೇ, ಚಿಕಿತ್ಸಾಲಯದ ವ್ಯಾಯಾಮ ಶಾಲೆಯಲ್ಲಿ ವ್ಯಾಯಾಮದ ಕಾರ್ಯಕ್ರಮವು ಪ್ರಾರಂಭಿಸಲ್ಪಟ್ಟಿತು, ಮತ್ತು ಅದು ಚಿಕಿತ್ಸೆಯ ಅಗತ್ಯವಾದ ಭಾಗವಾಗಿ ಪರಿಣಮಿಸಿತು. ನಿರಂತರವಾದ ವೇದನೆಯಿಂದ ಬರಿದು ಮಾಡಲ್ಪಟ್ಟ ಎಂಡಾರ್ಫಿನ್ಗಳನ್ನು ಅದು ಪುನರ್ಭರ್ತಿ ಮಾಡುತ್ತದೆಂದು ತಿಳಿದುಬಂದಿರುವುದರಿಂದ, ವ್ಯಾಯಾಮವು ಅತ್ಯವಶ್ಯ. ಹಾಗಿದ್ದರೂ, ವೇದನೆಯಲ್ಲಿರುವ ಜನರಿಗೆ ಪ್ರಯೋಜನಕಾರಿ ವ್ಯಾಯಾಮ ಕಾರ್ಯಕ್ರಮವನ್ನು ನಿರ್ವಹಿಸುವಂತೆ ಸಹಾಯಮಾಡುವುದು ಪಂಥಾಹ್ವಾನವಾಗಿದೆ.
ಚಿಕಿತ್ಸಾಲಯಗಳಿಗೆ ಬರುತ್ತಿರುವ ನಿರಂತರವಾದ ವೇದನೆಯ ಅನೇಕ ಅನುಭವಿಗಳು ಅಧಿಕ ಪ್ರಮಾಣಗಳಲ್ಲಿ ವೇದನಹಾರಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಮತ್ತು ಲಿಂಡಳು ಇದರಿಂದ ಹೊರತಾಗಿರಲಿಲ್ಲ. ಆದರೆ ಬೇಗನೆ ಅವಳು ತನ್ನ ಔಷಧದಿಂದ ಬಿಡಿಸಲ್ಪಟ್ಟಿದ್ದಳು ಮತ್ತು, ಇದು ವೇದನೆಯ ಚಿಕಿತ್ಸಾಲಯಗಳ ಪ್ರಾಮುಖ್ಯ ಗುರಿಯಾಗಿದೆ. ಅದು ಅಸಾಮಾನ್ಯವಾಗಿಲ್ಲದಿರುವುದಾದರೂ, ಲಿಂಡಳು ತ್ಯಜನ ಲಕ್ಷಣಗಳನ್ನು ಅನುಭವಿಸಲಿಲ್ಲ. ವೇದನೆಯ ಪರಿಣತರಾದ ರಾನಲ್ಡ್ ಮೆಲ್ಜ್ಯಾಕ್ ಗಮನಿಸಿದ್ದೇನಂದರೆ, “ಸುಡುವಿಕೆಗೆ ಆಹುತಿಯಾದ 10,000ಕ್ಕಿಂತಲೂ ಅಧಿಕ ಮಂದಿಯ ಕುರಿತಾದ ಸಮೀಕ್ಷೆಯೊಂದರಲ್ಲಿ . . , ಅನಂತರ ವ್ಯಸನಿಗಳಾಗಿ ಪರಿಣಮಿಸಿದ ಒಬ್ಬ ರೋಗಿಯನ್ನೂ, ಆಸ್ಪತ್ರೆಯಲ್ಲಿ ಉಳಿದ ಸಮಯದಲ್ಲಿ ವೇದನೆಯ ಪರಿಹಾರಕ್ಕಾಗಿ ಕೊಡಲ್ಪಟ್ಟ ಔಷಧಕ್ಕೆ ಆರೋಪಿಸಸಾಧ್ಯವಿಲ್ಲ.”
ಅನೇಕ ವೇಳೆ ನಿರಂತರವಾದ ವೇದನೆಗೆ ಪ್ರಮುಖವಾದ ಒಂದು ಮನಶ್ಶಾಸ್ತ್ರಾನುಗುಣವಾದ ಅಂಶವು ಇರುವುದರಿಂದ, ರೋಗಿಗಳು ತಮ್ಮ ವೇದನೆಯನ್ನು ಮರೆತುಬಿಡುವಂತೆ, ಕಾರ್ಯತಃ, ಚಿಕಿತ್ಸಾಲಯಗಳು ಸಹಾಯ ಮಾಡಲು ಪ್ರಯತ್ನಿಸುತ್ತವೆ. “ನೀವು ಯಾವುದರ ಕುರಿತು ಆಲೋಚಿಸುತ್ತೀರಿ, ನೀವೇನನ್ನು ನಿರೀಕ್ಷಿಸುತ್ತೀರಿ, ಭಾವನೆಗಳಿಗೆ ನೀವು ಎಷ್ಟು ಗಮನವನ್ನು ಹರಿಸುತ್ತೀರಿ—ಎಂಬ ಎಲ್ಲಾ ವಿಷಯಗಳು, ವಾಸ್ತವವಾಗಿ ನೀವೇನನ್ನು ಅನುಭವಿಸುತ್ತೀರೊ ಅದರ ಮೇಲೆ ಮಹತ್ತರವಾದ ಪ್ರಭಾವವನ್ನು ಹೊಂದಿವೆ, ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್ನ ಫ್ರೊಫೆಸರರಾದ ಡಾ. ಆರ್ಥರ್ ಬಾರ್ಸ್ಕಿ ವಿವರಿಸಿದರು.” ಹೀಗೆ ರೋಗಿಗಳು ತಮ್ಮ ವೇದನೆಗೆ ಹೊರತಾದ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಂತೆ ಸಹಾಯಿಸಲ್ಪಡುತ್ತಾರೆ.
ಪರಿಹಾರಕ್ಕಾಗಿ ಪ್ರತೀಕ್ಷೆಗಳು
ವೇದನೆಯ ಈ ಹೊಸ ಚಿಕಿತ್ಸಾಲಯಗಳು ಮಾನವಕುಲದ ವೇದನೆಯ ಸಮಸ್ಯೆಗಳಿಗೆ ಉತ್ತರವಾಗಿವೆಯೊ? ಇಲ್ಲಿ ವಿವರಿಸಲಾಗಿರುವ ವೇದನೆಯ ಚಿಕಿತ್ಸಾ ವಿಧಾನಗಳು ಸಹಾಯಕವಾಗಿರಸಾಧ್ಯವಿರುವುದಾದರೂ, ದಕ್ಷ ಚಿಕಿತ್ಸಾಲಯವನ್ನು ಅಥವಾ ವೇದನೆಯ ವಿಶೇಷಜ್ಞನೊಬ್ಬನನ್ನು ಆರಿಸುವುದರಲ್ಲಿ ಜಾಗ್ರತೆಯನ್ನು ಉಪಯೋಗಿಸಬೇಕು. ಆಗಲು ಕೂಡ, ನಿರೀಕ್ಷೆಗಳು ವಾಸ್ತವಿಕವಾಗಿರಬೇಕು.
ಸಾಂಕೇತಿಕವಾದ ಒಂದು ಯಶ್ವಸೀ ಕಥೆಯನ್ನು ದೃಷ್ಟಾಂತಿಸಲು: ಆಕ್ರಮಣಗಾರನೊಬ್ಬನು ಕುತ್ತಿಗೆಗೆ ಗುಂಡು ಹೊಡೆದಾಗ ಅನುಭವಿಸಿದ್ದ ಬಹುಕಾಲದ ವೇದನೆಯ ಕಾರಣದಿಂದ ಹಿಂದಿನ ಒಲಿಂಪಿಕ್ ವೆಯ್ಟ್ ಲಿಫ್ಟರ್ ಸೀವ್ಟನ್ ಕಾಫ್ಮನ್ನು ಬಹುಮಟ್ಟಿಗೆ ದುರ್ಬಲನಾಗಿ ಬಿಡಲ್ಪಟ್ಟಿದ್ದನು. ವೇದನೆ-ಚಿಕಿತ್ಸೆಯ ಕಾರ್ಯಕ್ರಮವೊಂದರಲ್ಲಿ ಎಂಟು ತಿಂಗಳುಗಳನ್ನು ಕಳೆದ ಬಳಿಕ, ಅವನು ಪೂರ್ಣ ಸಮಯದ ಕೆಲಸಕ್ಕೆ ಮತ್ತು ಕ್ರಮೇಣವಾಗಿ ಸ್ಪರ್ಧಾತ್ಮಕ ಭಾರ ಎತ್ತುವಿಕೆಗೆ ಹಿಂದಿರುಗಲು ಶಕ್ತನಾಗಿದ್ದನು. ಆದರೂ ಅವನಂದದ್ದು: “ಆಗಿಂದಾಗ್ಗೆ, ಕುದಿಯುತ್ತಿರುವ ನೀರಿನಲ್ಲಿವೆಯೋ ಎಂಬಂತೆ ನನ್ನ ಕಾಲ್ಬೆರಳುಗಳಲ್ಲಿ ಉರಿಯುವ ಅನುಭವವಾಗುತ್ತದೆ.”
ಈ ಎಲ್ಲಾ ಉತ್ತೇಜನಕಾರಿ ಪ್ರಗತಿಯು ಇರುವುದಾದರೂ, ‘ವೇದನೆಯು ಇನ್ನು ಮುಂದೆ ಇರುವುದಿಲ್ಲ’ ಎಂಬ ಬೈಬಲಿನ ವಾಗ್ದಾನವನ್ನು ನೆರವೇರಿಸುವುದು, ಮಾನವ ಸಾಮರ್ಥ್ಯಕ್ಕೆ ಮೀರಿದ್ದಾಗಿದೆ ಎಂಬುದು ಸ್ಪಷ್ಟ. (ಪ್ರಕಟನೆ 21:4) ಹಾಗಾದರೆ, ಆ ಗುರಿಯನ್ನು ಹೇಗೆ ಸಾಧಿಸಸಾಧ್ಯವಿದೆ?
[ಅಧ್ಯಯನ ಪ್ರಶ್ನೆಗಳು]
a ಎಚ್ಚರ!ವು ನಿರ್ದಿಷ್ಟವಾದ ಯಾವುದೇ ವೇದನೆ ಚಿಕಿತ್ಸಾಲಯವನ್ನು ಅಥವಾ ಚಿಕಿತ್ಸೆಯ ವಿಧಾನವನ್ನು ಅನುಮೋದಿಸುವುದಿಲ್ಲ.
[ಪುಟ 9 ರಲ್ಲಿರುವ ಚಿತ್ರಗಳು]
ವಿದ್ಯುಜನ್ಜಕ ನರ ಪ್ರಚೋದನೆಯನ್ನು ಒಳಗೊಂಡು, ವೇದನೆಗೆ ಚಿಕಿತ್ಸೆ ನಡೆಸುವ ವಿಧಾನಗಳು
[ಕೃಪೆ]
Courtesy of Pain Treatment Centers of San Diego