ನಿಮಗಾಗಿ ನಕ್ಷತ್ರಗಳಲ್ಲಿ ಏನಿದೆ?
ಬ್ರೆಜಿಲ್ನಲ್ಲಿನ ಎಚ್ಚರ! ಸುದ್ದಿಗಾರನಿಂದ
“ಕೇಳಿದ್ದೀರೋ ಇದಿದೆ ಭಾಗ್ಯತಾರೆಯಲ್ಲೆಂದು, ಮುಂದಿನ ಜುಲೈಯಲ್ಲಿ ಹೊಡೆಯುತ್ತೇವೆ ಢಿಕ್ಕಿ ಮಂಗಳಗ್ರಹಕ್ಕೆಂದು?” ಮನುಷ್ಯನ ಭವಿಷ್ಯತ್ತು ಯಾವುದಾದರೊಂದು ರೀತಿಯಲ್ಲಿ ನಕ್ಷತ್ರಗಳಿಗೆ ಸಂಬಂಧಿಸಿದೆ ಎಂಬ ಸಾಮಾನ್ಯ ಹಾಗೂ ಪ್ರಾಚೀನ ನಂಬಿಕೆಯನ್ನು, ಕೋಲ್ ಪೋರ್ಟರ್ನ ಇಂಪಾದ ಹಾಡಿನ ಈ ಪದಗಳು ಚೆನ್ನಾಗಿ ವ್ಯಕ್ತಪಡಿಸುತ್ತವೆ.a ಆದರೆ ಆಕಾಶಸ್ಥ ಕಾಯಗಳ ಮತ್ತು ಭೂಮಿಯ ಮೇಲೆ ಮಾನವಕುಲದ ಜೀವಿತದ ನಡುವೆ ಯಾವುದೇ ವಾಸ್ತವ ಸಂಬಂಧವು ಇದೆಯೇ? ಹಾಗಿರುವಲ್ಲಿ, ಮಾನವಕುಲವು ಹೇಗೆ ಪ್ರಭಾವಿಸಲ್ಪಡುತ್ತದೆ? ಹಾಗಿರದಿರುವಲ್ಲಿ, ಯಾವ ಉದ್ದೇಶವನ್ನು ನಕ್ಷತ್ರಗಳು ಪೂರೈಸುತ್ತವೆ?
ಕೆಲವು ಇತ್ತೀಚೆಗಿನ ನಾಟಕೀಯ ಘಟನೆಗಳನ್ನು ನಾವು ಪರಿಗಣಿಸುವಾಗ, ಇಷ್ಟೊಂದು ಜನರು ಭವಿಷ್ಯತ್ತಿನಲ್ಲಿ ಆಸಕ್ತರಾಗಿರುವುದು ಆಶ್ಚರ್ಯಕರವಾಗಿರುವುದಿಲ್ಲ—ಬರ್ಲಿನ್ ಗೋಡೆಯ ಬೀಳಿಕೆ ಹಾಗೂ ಹಿಂದಿನ ಸೋವಿಯಟ್ ಒಕ್ಕೂಟದ ತೀವ್ರವಾದ ವಿಘಟನ, ರಾಜಕೀಯ ನಾಯಕರಲ್ಲಿ ಆತ್ಮವಿಶ್ವಾಸದ ಕೊರತೆ, ಆಫ್ರಿಕ ಮತ್ತು ಯೂರೋಪಿನಲ್ಲಿ ರೂಪಗೊಳ್ಳುತ್ತಿರುವ ಕುಲ ಸಂಬಂಧವಾದ ದ್ವೇಷ, ಭಾರತ ಮತ್ತು ಐರ್ಲೆಂಡ್ನಲ್ಲಿನ ಧಾರ್ಮಿಕ ವೈರತ್ವ, ಎಷ್ಟೊಂದು ದೇಶಗಳನ್ನು ಬಾಧಿಸುವ ತೀವ್ರವಾಗಿ ಪ್ರಗತಿ ಮಾಡುತ್ತಿರುವ ಬೆಲೆ ಏರಿಕೆ, ಮತ್ತು ಯುವ ಜನರ ದಂಗೆ. ಹ್ಯಾಮ್ಬರ್ಗ್ ವಿಶ್ವವಿದ್ಯಾಲಯದಿಂದ ಬಂದ ಒಂದು ವರದಿಗನುಸಾರ, ವಿಭಿನ್ನ ದೇಶಗಳಲ್ಲಿ 52 ಸಶಸ್ತ್ರ ಗಲಭೆಗಳಿಂದ, ಎರಡನೆಯ ಲೋಕ ಯುದ್ಧದ ಅಂತ್ಯದಿಂದ ಈಚೆಗೆ, 1992 ಅತ್ಯಂತ ಕಲಹಪರ ವರ್ಷವಾಗಿತ್ತು. ಶಾಂತಿ ಪ್ರಿಯ ಜನರು ಸ್ವಾಭಾವಿಕವಾಗಿ ಕೇಳುವುದು: ‘ಸ್ಥಿರತೆ, ಶಾಂತಿ, ಮತ್ತು ಭದ್ರತೆಗಾಗಿ ನಾವು ಎಲ್ಲಿಗೆ ನೋಡಬಲ್ಲೆವು?’
ಭವಿಷ್ಯತ್ತಿನ ಅನಿಶ್ಚಿತತೆಯು ಹಲವಾರು ಬಗೆಗಳಲ್ಲಿ ಕಣಿ ಹೇಳುವಿಕೆಯ ಜನಪ್ರಿಯತೆಗೆ ನಡೆಸಿದೆ. ಇವುಗಳಲ್ಲಿ ಸುಪ್ರಸಿದ್ಧವಾಗಿರುವುದು ಬಹುಶಃ ಜ್ಯೋತಿಷ. ಖಗೋಲಶಾಸ್ತ್ರದ ವಿಜ್ಞಾನದಿಂದ ಭಿನ್ನವಾಗಿರುವ ಜ್ಯೋತಿಷವು “ಮಾನವ ಕಾರ್ಯಗಳ ಮತ್ತು ಭೂಮಿಯ ಘಟನೆಗಳ ಮೇಲೆ ನಕ್ಷತ್ರಗಳ ಮತ್ತು ಗ್ರಹಗಳ ಸ್ಥಾನಗಳ ಹಾಗೂ ಆಕಾರಗಳ ಮೂಲಕ ಅವುಗಳ ಊಹಿತ ಪ್ರಭಾವಗಳ ಭವಿಷ್ಯಜ್ಞಾನ”ವಾಗಿದೆ. ಇಂದು ಲಕ್ಷಾಂತರ ಜನರು ತಮ್ಮ ಭವಿಷ್ಯತ್ತಿನ ಕುರಿತಾದ ಸುಳಿವುಗಳಿಗಾಗಿ ತಮ್ಮ ಜಾತಕಗಳನ್ನು ಓದುವುದನ್ನು ತಡೆದು ಹಿಡಿಯಲಾರರು.b
ಭವಿಷ್ಯತ್ತನ್ನು ಮುಂತಿಳಿಸುತ್ತೇವೆಂದು ಜ್ಯೋತಿಷಿಗಳು ಹೇಳಿಕೊಳ್ಳುವ ಇತರ ಕ್ಷೇತ್ರಗಳಲ್ಲಿ, ಮದುವೆಯ ಕಷ್ಟಗಳ ಮತ್ತು ಆರೋಗ್ಯ ಸಮಸ್ಯೆಗಳ ಫಲಿತಾಂಶ, ರಾಜಕೀಯ ನಾಯಕರ ಹುಟ್ಟು ಮತ್ತು ಪತನ, ಒಂದು ಹೊಸ ವ್ಯಾಪಾರವನ್ನು ಆರಂಭಿಸಲಿಕ್ಕಿರುವ ಅತ್ಯುತ್ತಮ ತಾರೀಖು, ಮತ್ತು ಲಾಟರಿಯೊಂದನ್ನು ಪಡೆಯಲಿಕ್ಕೆ ಉಪಯೋಗಿಸಬೇಕಾದ ಸಂಖ್ಯೆಗಳು, ಸೇರಿವೆ.
ನ್ಯಾನ್ಸಿ ರೇಗನ್, ಆಗ ಅಮೆರಿಕದ ಅಧ್ಯಕ್ಷರಾಗಿದ್ದ ತನ್ನ ಗಂಡನು, ಯಾವಾಗ ಭಾಷಣಗಳನ್ನು ಕೊಡಬೇಕು, ಅವನ ವಿಮಾನ ಯಾವಾಗ ಹೊರಡಬೇಕು ಮತ್ತು ಕೆಳಗಿಳಿಯಬೇಕು ಎಂಬ ಬಗ್ಗೆ ಜೋತಿಷಿ ಜೋನ್ ಕಿಗ್ವಿಯ್ಲನ್ನು ಕ್ರಮವಾಗಿ ವಿಚಾರಿಸುತ್ತಿದ್ದರೆಂದು ಒಂದು ರಾಯ್ಟರ್ಸ್ ಸಮಾಚಾರ ವರದಿ ಮಾಡಿತು. “ಜ್ಯೋತಿಷವು, ತನ್ನ ಪಟ್ಟಾಭಿಷೇಕದ ದಿನವನ್ನು ಗುರುತಿಸಲು ಪೋಪ್ ಜೂಲಿಯಸ್ IIರಿಂದ [1503-13] ಮತ್ತು ಪ್ರತಿಯೊಂದು ಮಠಸಭೆಯ ಯೋಗ್ಯವಾದ ಸಮಯವನ್ನು ನಿರ್ಧರಿಸಲು ಪೌಲ IIIರಿಂದ [1534-49] ಉಪಯೋಗಿಸಲ್ಪಡುತ್ತಿತ್ತು,” ಎಂಬುದಾಗಿ ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಪ್ರಕಟಿಸಿತು. ಬಂಡವಾಳಪತ್ರದ ಪೇಟೆಯಲ್ಲಿ ಹಣ ಹಾಕುವವರಿಗೆ ಸಲಹೆ ನೀಡಲು ಜ್ಯೋತಿಷ್ಯವನ್ನು ಉಪಯೋಗಿಸುವ ಒಂದು ಸ್ವಿಜ್ ವ್ಯಾಪಾರ ಕಂಪನಿಯ ನಿರ್ದೇಶಕರಾದ ಆಲ್ಫ್ರೇಟ್ ಹೂಗ್, ಅತ್ಯುತ್ತಮ ಫಲಿತಾಂಶಗಳ ಭರವಸೆ ನೀಡುತ್ತಾರೆ. “ಅದು ನಕ್ಷತ್ರಗಳಲ್ಲಿ ಬರೆದದೆ,” ಎಂದು ಅವರು ದೃಢಪಡಿಸುತ್ತಾರೆ.
ಮಾನವ ಜೀವಿಗಳ ಜೀವಿತಗಳನ್ನು ನಕ್ಷತ್ರಗಳು ಪ್ರಭಾವಿಸುತ್ತವೆಂದು ಅನೇಕರಿಗೆ ಅನಿಸುತ್ತದೆಂಬುದು ಸ್ಪಷ್ಟ. ಜ್ಯೋತಿಷವು ಆರಂಭಗೊಂಡದ್ದು ಹೇಗೆ? ಜ್ಯೋತಿಷ ಮತ್ತು ಜ್ಯೋತಿಷಿಗಳ ಕುರಿತು ಪ್ರಾಚೀನ ಪುಸ್ತಕವಾದ ಬೈಬಲಿಗೆ ಏನಾದರೂ ಹೇಳಲಿಕ್ಕಿದೆಯೆ?
[ಅಧ್ಯಯನ ಪ್ರಶ್ನೆಗಳು]
a “ಪ್ರಾಚೀನ ಚೈನಾದಲ್ಲಿ, . . . ಚಕ್ರವರ್ತಿಯ ಮತ್ತು ಅವನ ಸರಕಾರದ ಕಾರ್ಯಗಳನ್ನು ಮತ್ತು ದುಷ್ಕಾರ್ಯಗಳನ್ನು ಆಕಾಶದಲ್ಲಿನ ಚಿಹ್ನೆಗಳು ಅಷ್ಟೇ ಅಲ್ಲದೆ ನೈಸರ್ಗಿಕ ವಿಪತ್ತುಗಳು, ಪ್ರತಿಬಿಂಬಿಸುವುದಾಗಿ ನೆನಸಲಾಗುತ್ತಿತ್ತು.”—ದಿ ಇಂಟರ್ನ್ಯಾಷನಲ್ ಎನ್ಸೈಕ್ಲೊಪೀಡಿಯ ಆಫ್ ಅಸ್ಟ್ರಾನೊಮಿ.
b ಜಾತಕವು “ಒಂದು ನಿರ್ದಿಷ್ಟ ಸಮಯದಲ್ಲಿ (ಉದಾಹರಣೆಗೆ ಒಬ್ಬನ ಜನನದ ಸಮಯ) ಗ್ರಹಗಳ ಸಂಬಂಧಸೂಚಕ ಸ್ಥಾನಗಳ ಮತ್ತು ರಾಶಿ ಚಕ್ರದ ಚಿಹ್ನೆಗಳ ಒಂದು ಚಿತ್ರವಾಗಿದೆ” ಮತ್ತು ಒಬ್ಬ ವ್ಯಕ್ತಿಯ ಜೀವಿತದಲ್ಲಿನ ಭವಿಷ್ಯತ್ತಿನ ಘಟನೆಗಳನ್ನು ಮುಂತಿಳಿಸಲು ಪ್ರಯತ್ನಿಸಲಿಕ್ಕಾಗಿ ಜ್ಯೋತಿಷಿಗಳ ಮೂಲಕ ಉಪಯೋಗಿಸಲ್ಪಡುತ್ತದೆ.