ನಕ್ಷತ್ರಗಳು ಮತ್ತು ಮನುಷ್ಯನು ಒಂದು ಸಂಬಂಧವಿದೆಯೊ?
ಕ್ಷತ್ರಗಳನ್ನು ವೀಕ್ಷಿಸುವ ಆಚರಣೆಯು ಹೊಸದೇನಲ್ಲ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯಕ್ಕನುಸಾರ, ಸಾವಿರಾರು ವರ್ಷಗಳ ಹಿಂದೆ, ರೈತರು “ತಮ್ಮ ಬೆಳೆಗಳನ್ನು ಯಾವಾಗ ನೆಡಬೇಕೆಂಬುದನ್ನು ಅರಿಯಲು ನಕ್ಷತ್ರಗಳನ್ನು ವೀಕ್ಷಿಸಿದರು. ದಿಕ್ಕುಗಳನ್ನು ಹೇಳಲು ಪ್ರಯಾಣಿಕರು ನಕ್ಷತ್ರಗಳನ್ನು ಉಪಯೋಗಿಸಲು ಕಲಿತರು.” ಇಂದು ಬಾಹ್ಯಾಕಾಶದ ಪ್ರಯಾಣದಲ್ಲೂ, ನಕ್ಷತ್ರಗಳನ್ನು ಇನ್ನೂ ಮಾರ್ಗದರ್ಶಿಗಳಂತೆ ಉಪಯೋಗಿಸಲಾಗುತ್ತಿದೆ. ನಕ್ಷತ್ರಗಳ ಗುಂಪುಗಳಲ್ಲಿ ಯಾ ನಕ್ಷತ್ರ ಪುಂಜಗಳಲ್ಲಿ ಚಿತ್ರಿಸಲ್ಪಟ್ಟಿವೆಯೆಂದು ತಮಗೆ ಅನಿಸುವ ವ್ಯಕ್ತಿಗಳ ಮತ್ತು ಪ್ರಾಣಿಗಳ ಕಟ್ಟುಕಥೆಗಳನ್ನು ಸಹ ಪ್ರಾಚೀನರು ಕಂಡುಹಿಡಿದರು. ಸಕಾಲದಲ್ಲಿ ನಕ್ಷತ್ರಗಳು ತಮ್ಮ ಜೀವಿತಗಳನ್ನು ಪ್ರಭಾವಿಸಬಲ್ಲವೆಂದು ಜನರಿಗೆ ಅನಿಸತೊಡಗಿತು.
ನಕ್ಷತ್ರಗಳ ವಿಶಾಲವಾದ ಆಯ್ಕೆ
ಕೇವಲ ನಕ್ಷತ್ರಗಳ ಸಂಖ್ಯೆ ಮತ್ತು ಗಾತ್ರವು ಭಯಭಕ್ತಿಯನ್ನು ಪ್ರೇರಿಸುತ್ತದೆ. ವಿಶ್ವದಲ್ಲಿ ಸುಮಾರು ಹತ್ತು ಸಾವಿರ ಕೋಟಿ ಆಕಾಶ ಗಂಗೆಗಳು, ಯಾ ನಕ್ಷತ್ರಗಳ ಅತಿ ದೊಡ್ಡ ಗುಂಪುಗಳು ಇವೆಯೆಂದು ಅಂದಾಜು ಮಾಡಲಾಗುತ್ತದೆ! ದಿ ಇಂಟರ್ನ್ಯಾಷನಲ್ ಎನ್ಸೈಕ್ಲೊಪೀಡಿಯ ಆಫ್ ಅಸ್ಟ್ರಾನೊಮಿ ಹೇಳುವುದು: “ಅದು ಒಂದು ದೊಡ್ಡ ಚರ್ಚ್ ಕಟ್ಟಡದೊಳಗೆ ತುಂಬಬಹುದಾದ ಅಕ್ಕಿಯ ಕಾಳುಗಳ ಸಂಖ್ಯೆ.” ನಮ್ಮ ಸೌರವ್ಯೂಹದ ಒಂದು ಭಾಗವಾಗಿರುವ ಕ್ಷೀರಪಥ ಆಕಾಶ ಗಂಗೆಯಲ್ಲಿ, ಕಡಿಮೆಪಕ್ಷ ಅಷ್ಟೊಂದು ನಕ್ಷತ್ರಗಳು ಇವೆಯೆಂದು ಅಂದಾಜು ಮಾಡಲಾಗಿದೆ. ನಮ್ಮ ಭೂಮಿಗೆ (ಸೂರ್ಯನನ್ನು ಹೊರತು) ಅತಿ ಹತ್ತಿರವಿರುವ ಆಲ್ಫಾ ಸೆಂಟೌರಿ ಗುಂಪಿನ ಒಂದು ನಕ್ಷತ್ರವು, ಸುಮಾರು 4.3 ಜ್ಯೋತಿರ್ವರ್ಷಗಳಷ್ಟು ದೂರವಿದೆ. ಒಂದು ವರ್ಷದಲ್ಲಿ ಬೆಳಕು ಪ್ರಯಾಣಿಸುವ ಅಂತರವು ಒಂದು ಜ್ಯೋತಿರ್ವರ್ಷವಾಗಿದೆ. ಅಂದರೆ ನಾವು ಆ ನಕ್ಷತ್ರವನ್ನು ನೋಡುವಾಗ, ನಮ್ಮ ಕಣ್ಣನ್ನು ಪ್ರವೇಶಿಸುವ ಬೆಳಕು 4.3 ವರ್ಷಗಳ ಮುಂಚೆ ಆ ನಕ್ಷತ್ರವನ್ನು ಬಿಟ್ಟು, ಆ ಎಲ್ಲ ಸಮಯ ಬಾಹ್ಯಾಕಾಶದಲ್ಲಿ ಒಂದು ಸೆಕೆಂಡಿಗೆ 2,99,792 ಕಿಲೊಮೀಟರ್ಗಳ ವೇಗದಲ್ಲಿ ಪ್ರಯಾಣಿಸುತ್ತಾ ಇತ್ತು. ಒಳಗೊಂಡಿರುವ ಅಂತರವನ್ನು ಊಹಿಸುವುದು ನಮ್ಮ ಮಾನಸಿಕ ಸಾಮರ್ಥ್ಯವನ್ನು ಮೀರಿ ಅದೆ. ಆದರೂ, ಅದು ಅತಿ ಹತ್ತಿರವಿರುವ ನಕ್ಷತ್ರಮಾತ್ರ. ಕೆಲವು ನಕ್ಷತ್ರಗಳು ನಮ್ಮ ಆಕಾಶ ಗಂಗೆಯಿಂದ ನೂರಾರು ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿವೆ: “ಆಹಾ, ಆತನ ಗಣನೆಯಲ್ಲಿ ಜನಾಂಗಗಳು ಕಪಿಲೆಯಿಂದುದುರುವ ತುಂತುರಿನಂತೆಯೂ ತ್ರಾಸಿನ ತಟ್ಟೆಯ ದೂಳಿನ ಹಾಗೂ ಇರುತ್ತವೆ; ಇಗೋ, ದ್ವೀಪಗಳನ್ನು ಅಣುರೇಣುವಿನಂತೆ ಎತ್ತುತ್ತಾನೆ,” ಎಂಬುದಾಗಿ ದೇವರ ಪ್ರವಾದಿಯು ಘೋಷಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. (ಯೆಶಾಯ 40:15) ಧೂಳಿನ ಒಂದು ಚಿಕ್ಕ ಕಣದ ಕುರಿತು ಯಾರು ಚಿಂತಿಸುತ್ತಾರೆ?
ಭೂಮಿಗೆ ಅತಿ ಹತ್ತಿರದಲ್ಲಿರುವ ಆಕಾಶಸಕ್ಥಾಯವು ಚಂದ್ರ. ಅದು ನಮ್ಮ ಭೂಮಿಯ ಮೇಲೆ ಒಂದು ನಿಶ್ಚಿತ ಪ್ರಭಾವವನ್ನು ಬೀರುತ್ತದೆ. ಅದರ ಗುರುತ್ವಾಕರ್ಷಣೆಯು ಉಬ್ಬರವಿಳಿತದಲ್ಲಿ ಕೆಲವು ಸ್ಥಳಗಳಲ್ಲಿ 15 ಮೀಟರುಗಳಿಗಿಂತಲೂ ಹೆಚ್ಚು ವ್ಯತ್ಯಾಸವನ್ನು ಮಾಡುತ್ತದೆ. ಮೂವರು ಫ್ರೆಂಚ್ ವಿಜ್ಞಾನಿಗಳಿಗನುಸಾರ, ಋತುಗಳ ಕ್ರಮವಾದ ಬದಲಾವಣೆಯನ್ನು ದೃಢಪಡಿಸುತ್ತಾ, ಭೂಮಿಯ ಅಕ್ಷರೇಖೆಯನ್ನು 23 ಡಿಗ್ರಿಗಳಿಗೆ ಬಾಗಿಸಿ ಇಡುವಂಥದ್ದು ಚಂದ್ರನ ಗುರುತ್ವಾಕರ್ಷಣವಾಗಿದೆ ಎಂದು ಈಗ ನಂಬಲಾಗುತ್ತದೆ. (ನೇಚರ್, ಫೆಬ್ರವರಿ 18, 1993) ನಮ್ಮ ಗ್ರಹದ ಮೇಲೆ ಇಂತಹ ಒಂದು ಶಾರೀರಿಕ ಪ್ರಭಾವವನ್ನು ಚಂದ್ರನು ಬೀರುವುದರಿಂದ, ಹೀಗೆ ಕೇಳುವುದು ನ್ಯಾಯಸಮ್ಮತವಾಗಿದೆ, ನೂರಾರು ಕೋಟಿ ನಕ್ಷತ್ರಗಳ ಕುರಿತೇನು? ಆದರೆ ಪ್ರಥಮವಾಗಿ, ಬೈಬಲ್ನಂತಹ ಪ್ರಾಚೀನ ಮೂಲಗಳು, ನಕ್ಷತ್ರಗಳ ಕುರಿತು ನಮಗೆ ಏನನ್ನು ಹೇಳುತ್ತವೆ?
ಶಾಸ್ತ್ರವಚನಗಳಲ್ಲಿ ನಕ್ಷತ್ರಗಳು
ನಕ್ಷತ್ರಗಳ ಕುರಿತು ಅನೇಕ ಉಲ್ಲೇಖಗಳನ್ನು ಬೈಬಲ್—ಶಾಬ್ದಿಕ ಹಾಗೂ ಸಾಂಕೇತಿಕ—ಎರಡೂ ಅರ್ಥದಲ್ಲಿ ಮಾಡುತ್ತದೆ. ಉದಾಹರಣೆಗೆ, ಒಬ್ಬ ಕೀರ್ತನೆಗಾರನಿಗನುಸಾರ, ನಕ್ಷತ್ರಗಳು ಭೂಮಿಗಾಗಿ ಬೆಳಕನ್ನು ಒದಗಿಸಲು ಸಹಾಯ ಮಾಡಲಿಕ್ಕಾಗಿ “ಚಂದ್ರನಕ್ಷತ್ರಗಳು ರಾತ್ರಿಯನ್ನಾಳು”ವಂತೆ ಸೃಷ್ಟಿಕರ್ತನು ಮಾಡಿದನು. (ಕೀರ್ತನೆ 136:9, ತನಕ್) ತದನಂತರ, ನಂಬಿಗಸ್ತ ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡುವಾಗ, ದೇವರು ಅಂದದ್ದು: “ಆಕಾಶದ ಕಡೆಗೆ ನೋಡು, ನಕ್ಷತ್ರಗಳನ್ನು ಲೆಕ್ಕಿಸುವದು ನಿನ್ನಿಂದಾದರೆ ಲೆಕ್ಕಿಸು; ನಿನ್ನ ಸಂತಾನವು ಅಷಾಗ್ಟುವದು ಅಂದನು.” (ಆದಿಕಾಂಡ 15:5) “ಸೂರ್ಯನ ಮಹಿಮೆ ಒಂದು ವಿಧ, ಚಂದ್ರನ ಮಹಿಮೆ ಮತ್ತೊಂದು ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ. ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚುಕಡಿಮೆಯುಂಟಷ್ಟೆ,” ಎಂಬುದಾಗಿ ಹೇಳುತ್ತಾ, ನಕ್ಷತ್ರಗಳಲ್ಲಿ ಭಿನ್ನತೆಗಳಿವೆ ಎಂಬುದನ್ನು ಅಪೊಸ್ತಲ ಪೌಲನು ಸೂಚಿಸುತ್ತಾನೆ.a (1 ಕೊರಿಂಥ 15:41) ಅದೇ ಸಮಯದಲ್ಲಿ, ನಕ್ಷತ್ರಗಳ ಈ ಅಪಾರ ಸಂಖ್ಯೆಯು ಮತ್ತು ಅವುಗಳ ಮಹಿಮೆಯು ಅವುಗಳ ಸೃಷ್ಟಿಕರ್ತನ ಕ್ಷೇತ್ರ ಯಾ ನಿಯಂತ್ರಣದ ಹೊರಗಿರುವುದಿಲ್ಲ: “ಆತನು ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ.”—ಕೀರ್ತನೆ 147:4.
ಇನ್ನೊಂದು ಕಡೆಯಲ್ಲಿ, ಶಾಸ್ತ್ರಗಳಲ್ಲಿ ನಕ್ಷತ್ರಗಳನ್ನು ಅನೇಕ ವೇಳೆ ವ್ಯಕ್ತಿಗಳನ್ನು, ಅರಸರನ್ನು, ಮತ್ತು ದೇವದೂತರನ್ನು ಸೂಚಿಸಲು ಉಪಯೋಗಿಸಲಾಗಿದೆ. ಯಾಕೋಬನ ಮಗನಾದ ಯೋಸೇಫನು ಒಂದು ಕನಸನ್ನು ಕಾಣುತ್ತಾನೆ ಅದರಲ್ಲಿ ಅವನ ಹೆತ್ತವರು “ಸೂರ್ಯಚಂದ್ರ”ರಂತೆ ಮತ್ತು ಅವನ ಸಹೋದರರು “ನಕ್ಷತ್ರ”ಗಳಂತೆ ಚಿತ್ರಿಸಲ್ಪಡುತ್ತಾರೆ. ದೇವದೂತರು “ಮುಂಜಾನೆ ನಕ್ಷತ್ರಗಳಂತೆ” ಸೂಚಿಸಲ್ಪಡುತ್ತಾರೆ. ಇಸ್ರಾಯೇಲ್ ಜನಾಂಗದ ದಾವೀದನ ಸಂತತಿಯ ಅರಸರಾದ “ದೇವರ ನಕ್ಷತ್ರಗಳ” ಮೇಲಿರಲು ಬಾಬೆಲಿನ ಅರಸನು ಬಯಸಿದನೆಂದು ಅವನ ಕುರಿತು ಹೇಳಲಾಗುತ್ತದೆ. ಕ್ರೈಸ್ತ ಸಭೆಯಲ್ಲಿರುವ ಅಸ್ಥಿರ ಪುರುಷರು “ಅಲೆಯುವ ನಕ್ಷತ್ರ”ಗಳಿಗೆ ಹೋಲಿಸಲ್ಪಟ್ಟಿದ್ದಾರೆ, ಆದರೆ ಸಭಾ ಹಿರಿಯರುಗಳ ನಂಬಿಗಸ್ತ ಮಂಡಲಿಗಳು ಕ್ರಿಸ್ತನ ಬಲಗೈಯಲ್ಲಿರುವ “ನಕ್ಷತ್ರ”ಗಳಂತೆ ಉಲ್ಲೇಖಿಸಲ್ಪಡುತ್ತಾರೆ.—ಆದಿಕಾಂಡ 37:9, 10; ಯೋಬ 38:7; ಯೆಶಾಯ 14:13; ಯೂದ 13, ಪ್ರಕಟನೆ 1:16.
ಇಸ್ರಾಯೇಲ್ ಜನಾಂಗವನ್ನು 20 ವರ್ಷಗಳ ಕಾಲ ಪೀಡಿಸಿದ್ದ ಕಾನಾನ್ ದೇಶದ ರಾಜ ಯಾಬೀನನ ಸೇನಾಪತಿಯಾದ ‘ಸೀಸೆರನ ವಿರುದ್ಧ ನಕ್ಷತ್ರಗಳು ತಮ್ಮ ಕಕ್ಷೆಗಳಿಂದ ಹೋರಾಡಿದವು’ ಎಂಬುದಾಗಿ ಬೈಬಲ್ನಲ್ಲಿರುವ ಒಂದು ವೃತ್ತಾಂತವು ಹೇಳುತ್ತದೆ. ಇಸ್ರಾಯೇಲನ್ನು ದಾಸತ್ವದಿಂದ ರಕ್ಷಿಸಲು ಯೆಹೋವನು ನ್ಯಾಯಸ್ಥಾಪಕನಾದ ಬಾರಾಕನನ್ನು ನೇಮಿಸಿದನು ಮತ್ತು ಸೀಸೆರನ ಬಳಿಯಲ್ಲಿ ಒಂಭೈನೂರು ಕಬ್ಬಿಣದ ರಥಗಳು ಇದ್ದರೂ ಕೂಡ, ಅವನ ಮೇಲೆ ಪೂರ್ಣ ಜಯವನ್ನು ಬಾರಾಕನಿಗೆ ಕೊಟ್ಟನು. ಜಯಗೀತೆಯಲ್ಲಿ, ಇಸ್ರಾಯೇಲ್ಯರು ಹಾಡಿದ್ದು: “ನಕ್ಷತ್ರಗಳೂ ಆಕಾಶಪಥದಲ್ಲಿದ್ದು ಸೀಸೆರನೊಡನೆ ಯುದ್ಧಮಾಡಿದವು.” ನಕ್ಷತ್ರಗಳು ಹೇಗೆ ಯುದ್ಧಮಾಡಿದವು ಎಂಬುದರ ಕುರಿತು ಯಾವುದೇ ವಿವರಣೆಯನ್ನು ಕೊಟ್ಟಿಲ್ಲ. ಯುದ್ಧದಲ್ಲಿ ನಕ್ಷತ್ರಗಳು ನೇರವಾದ ಪ್ರಭಾವವನ್ನು ಬೀರಿದವು ಎಂಬುದಾಗಿ ಊಹಿಸುವ ಬದಲು, ಇಸ್ರಾಯೇಲಿನ ಪರವಾಗಿ ಯಾವುದೊ ರೀತಿಯ ದೈವಿಕ ಹಸ್ತಕ್ಷೇಪವನ್ನು ಆ ಅಭಿವ್ಯಕ್ತಿಯು ಸೂಚಿಸುತ್ತದೆ ಎಂದು ನಂಬುವುದು ಅಧಿಕ ಯುಕ್ತವಾಗಿದೆ.—ನ್ಯಾಯಸ್ಥಾಪಕರು 5:20.
ಬೇತ್ಲೆಹೇಮಿನ “ನಕ್ಷತ್ರ”
ಬೈಬಲಿನಲ್ಲಿ ಉಲ್ಲೇಖಿಸಲಾದ ಸುಪ್ರಸಿದ್ಧ ನಕ್ಷತ್ರಗಳಲ್ಲಿ ಬಹುಶಃ ಒಂದು, “ಮೂಡಣದೇಶ”ದಿಂದ ಬಂದ ಜೋಯಿಸರನ್ನು ಯೇಸು ಒಂದು ಕೊಟ್ಟಿಗೆಯಲ್ಲಿ ಜನಿಸಿದ ಬಳಿಕ ಅವನ ಹೆತ್ತವರು ಕೊಂಡೊಯ್ದಿದ್ದ ಮನೆಗೆ ಮಾರ್ಗದರ್ಶಿಸಿದ ಬೇತ್ಲೆಹೇಮಿನ “ನಕ್ಷತ್ರ”ವಾಗಿದೆ. ಅದು ಯಾವ ನಕ್ಷತ್ರವಾಗಿತ್ತು? ನಿಶ್ಚಯವಾಗಿಯೂ ಅದು ಸಾಧಾರಣವಾದ ನಕ್ಷತ್ರವಾಗಿರಲಿಲ್ಲ, ಯಾಕೆಂದರೆ ಅದನ್ನು ಜೋಯಿಸರು ಸುಮಾರು 1,600 ಕಿಲೊಮೀಟರುಗಳಿಂದ ಹಿಂಬಾಲಿಸುವಂತೆ ಅದು ಸಾಕಷ್ಟು ಕೆಳಗಿತ್ತು. “ನಕ್ಷತ್ರ”ವು ಮೊದಲು ಅವರನ್ನು ಯೆರೂಸಲೇಮಿಗೆ ನಡೆಸಿತು. ಇದರ ಕುರಿತು ಕೇಳುತ್ತಾ, ರಾಜ ಹೆರೋದನು ಅವರನ್ನು ಪ್ರಶ್ನಿಸಿದನು ಮತ್ತು ಆಮೇಲೆ ಶಿಶುವಾದ ಯೇಸುವನ್ನು ಕೊಲ್ಲಲು ನಿರ್ಧರಿಸಿದನು. ತದನಂತರ “ನಕ್ಷತ್ರ”ವು ಜೋಯಿಸರನ್ನು ಯೇಸು ಜೀವಿಸುತ್ತಾ ಇದ್ದ ನಿರ್ದಿಷ್ಟ ಮನೆಗೆ ನಡೆಸಿತು. ನಿಶ್ಚಯವಾಗಿಯೂ ಯಾವುದೇ ಸಾಧಾರಣವಾದ ನಕ್ಷತ್ರಕ್ಕೆ ಅದನ್ನು ಮಾಡಲು ಸಾಧ್ಯವಿರಲಿಲ್ಲ. ಈ ನಕ್ಷತ್ರದಂತಹ ವಸ್ತು ದೇವರಿಂದ ಉಗಮಿಸಿತೊ? ಜೋಯಿಸರ ಭೇಟಿಯು ಪರೋಕ್ಷವಾಗಿ ‘ಬೇತ್ಲೆಹೇಮಿನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಎರಡು ವರುಷದೊಳಗಿನ ಗಂಡುಕೂಸುಗಳ,’ ಸಂಹಾರಕ್ಕೆ ನಡೆಸಿದ್ದರಿಂದ, “ನಕ್ಷತ್ರ”ವು ದೇವರ ಮಗನನ್ನು ನಾಶಮಾಡುವ ಒಂದು ಪ್ರಯತ್ನದಲ್ಲಿ ದೇವರ ವಿರೋಧಿಯಾದ ಸೈತಾನನ ಮೂಲಕ ಉಪಯೋಗಿಸಲಾದ ಯಾವುದೊ ಒಂದು ಸಂಗತಿಯಾಗಿರಬೇಕೆಂದು ತೀರ್ಮಾನಿಸುವುದು ಯುಕ್ತವಲ್ಲವೊ?—ಮತ್ತಾಯ 2:1-11, 16.
ಜೋಯಿಸರು ಮೂಡಣ ದೇಶದಿಂದ, ಬಹುಶಃ ಮಾಟ, ಮಂತ್ರ, ಮತ್ತು ಜ್ಯೋತಿಷದ ಒಂದು ಪ್ರಾಚೀನ ಕೇಂದ್ರವಾಗಿದ್ದ ಬಾಬೆಲಿನಿಂದ ಬಂದರೆಂಬುದನ್ನು ಕೂಡ ಜ್ಞಾಪಕದಲ್ಲಿಡಬೇಕು. ಆಕಾಶಸ್ಥ ಕಾಯಗಳಲ್ಲಿ ಹೆಚ್ಚಿನವುಗಳು ಬಾಬೆಲಿನ ದೇವರುಗಳ ಹೆಸರುಗಳಿಂದ ಕರೆಯಲ್ಪಟ್ಟಿವೆ. ರಾಜ ನೆಬೂಕದ್ನೆಚ್ಚರನ ದಿನಗಳಲ್ಲಿ, ತನ್ನ ಯುದ್ಧ ಯಾತ್ರೆಗಳಲ್ಲಿ ತೆಗೆದುಕೊಳ್ಳಬೇಕಾದ ಮಾರ್ಗವನ್ನು ನಿರ್ಧರಿಸುವಂತೆ ಅವನಿಗೆ ಸಹಾಯಮಾಡಲು ಭವಿಷ್ಯಜ್ಞಾನವನ್ನು ಉಪಯೋಗಿಸಲಾಗುತ್ತಿತ್ತು.—ಯೆಹೆಜ್ಕೇಲ 21:20-22.
“ಮಂತ್ರಾಲೋಚನೆಗಳನ್ನು ಕೇಳಿ ಕೇಳಿ ನಿನಗೆ ಸಾಕಾಯಿತಲ್ಲವೇ” ಖಗೋಲಜ್ಞರು, ಜೋಯಿಸರು, ಪಂಚಾಂಗದವರು, ಇವರೆಲ್ಲರೂ ನಿಂತು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ಉದ್ಧರಿಸಲಿ. ಆಹಾ, ಇವರೆಲ್ಲಾ ಕೂಳೆಯಂತಿರುವರು, ಬೆಂಕಿಯು ಅವರನ್ನು ಸುಟ್ಟುಬಿಡುವದು, ಜ್ವಾಲೆಯ ರಭಸದಿಂದ ತಮ್ಮನ್ನು ರಕ್ಷಿಸಿಕೊಳ್ಳಲಾರರು; . . . ನಿನ್ನನ್ನು ರಕ್ಷಿಸಲು ಒಬ್ಬನೂ ಇರನು,” ಎಂಬುದಾಗಿ ಹೇಳುತ್ತಾ ಪ್ರವಾದಿಯಾದ ಯೆಶಾಯನು ಬಾಬೆಲಿನ ಸಲಹೆಗಾರರನ್ನು ಆಹ್ವಾನಿಸಿದನು. ಯೆಶಾಯನ ಪ್ರವಾದನೆಗೆ ಸರಿಯಾಗಿ, ಬಲಿಷ್ಠ ಬಾಬೆಲ್ ಸಾ.ಶ.ಪೂ. 539ರಲ್ಲಿ ಮಹಾ ಕೋರೇಷನ ಕೈಗೆ ಬಿದ್ದಿತು. ನಕ್ಷತ್ರಗಳಿಂದ ತರಲ್ಪಟ್ಟದ್ದೆಂದು ಹೇಳಿಕೊಂಡ ಆ ಬಾಬೆಲಿನ ಜೋಯಿಸರ ಮಾರ್ಗದರ್ಶನವು ಸಂಬಂಧಪಟ್ಟ ಎಲ್ಲರಿಗೂ ವಿಪತ್ತಾಗಿ ಪರಿಣಮಿಸಿತು.—ಯೆಶಾಯ 47:13-15, ಟುಡೇಸ್ ಇಂಗ್ಲಿಷ್ ವರ್ಷನ್.
ಇದರ ಅರ್ಥ ನಾವು ನಕ್ಷತ್ರಗಳಿಂದ ಏನನ್ನೂ ಕಲಿಯಲು ಸಾಧ್ಯವಿಲ್ಲ ಎಂಬುದಾಗಿದೆಯೊ?
[ಅಧ್ಯಯನ ಪ್ರಶ್ನೆಗಳು]
a ಆಧುನಿಕ ಖಗೋಲ ಶಾಸ್ತ್ರವು ಪೌಲನ ಮಾತುಗಳನ್ನು ದೃಢಪಡಿಸುತ್ತವೆ, ಯಾಕೆಂದರೆ ನಕ್ಷತ್ರಗಳು ಬಣ್ಣ, ಗಾತ್ರ, ಉತ್ಪಾದಿಸಲಾದ ಬೆಳಕಿನ ಪ್ರಮಾಣ, ತಾಪಮಾನ, ಮತ್ತು ಸಂಬಂಧಸೂಚಕವಾದ ಸಾಂದ್ರತೆಯ ವಿಷಯಗಳಲ್ಲಿ ಭಿನ್ನವಾಗಿವೆ.
[ಪುಟ 16 ರಲ್ಲಿರುವ ಚೌಕ]
ಕೆಲವರು ಹೇಳಿರುವ ವಿಷಯ
ಜ್ಯೋತಿಶ್ಶಾಸ್ತ್ರ: “ಜ್ಯೋತಿಷವು ಖಗೋಲಶಾಸ್ತ್ರದ ಒಂದು ಅನುಷಂಗ ಮತ್ತು ಸಹಕಾರಿಯಾಗಿದೆ.”—ಯೊಹಾನೆಸ್ ಕೆಪ್ಲ್ರ್ (1571-1630) ಜರ್ಮನ್ ಖಗೋಲಜ್ಞ.
“ಜ್ಯೋತಿಷವು ಒಂದು ರೋಗವಾಗಿದೆ, ಒಂದು ವಿಜ್ಞಾನವಾಗಿಲ್ಲ. . . . ಅದು, ಎಲ್ಲ ರೀತಿಯ ಮೂಢನಂಬಿಕೆಗಳು ಅದರ ನೆರಳಿನ ಕೆಳಗೆ ವರ್ಧಿಸುವ ಒಂದು ಮರವಾಗಿದೆ.”—ಮೋಸೆಸ್ ಮೈಮಾನಡೀಸ್ (1135-1204), ಮಧ್ಯ ಯುಗಗಳ ಯೆಹೂದಿ ವಿದ್ವಾಂಸ.
“ವೈಯಕ್ತಿಕ ವ್ಯಕ್ತಿತ್ವವನ್ನು ಮತ್ತು ವರ್ತನೆಯನ್ನು ನಿರ್ಧರಿಸಲು ಮತ್ತು ಭವಿಷ್ಯತ್ತಿನ ಒಲವುಗಳನ್ನು ಮತ್ತು ಘಟನೆಗಳನ್ನು ಆಕಾಶದ ರೂಪಗಳಿಂದ ಮುಂತಿಳಿಸಲು ಶಕವ್ತಾಗಿದೆ ಎಂದು ಹೇಳಿಕೊಳ್ಳುವ ಒಂದು ಪ್ರಾಚೀನ ವಿಜ್ಞಾನ. . . . ಬಹುಶಃ ಸಾ.ಶ. 6ನೆಯ ಶತಮಾನದ ಸಮಯಕ್ಕೆ—ಇರಾಕ್ನ ದಕ್ಷಿಣ ಭಾಗದಲ್ಲಿರುವ ಬಾಬೆಲಿನವರು ವೈಯಕ್ತಿಕ ಜಾತಕವನ್ನು ಪರಿಚಯಿಸಿರಬಹುದೆಂದು ನೆನಸಲಾಗುತ್ತದೆ. ಇದು ಜನನದ ಸಮಯದಲ್ಲಿ ಸ್ಥಿರವಾಗಿರುವ ನಕ್ಷತ್ರಗಳು, ಅಷ್ಟೇ ಅಲ್ಲದೆ ಸೂರ್ಯ, ಚಂದ್ರ ಮತ್ತು ಐದು ಗ್ರಹಗಳ ಮೂಲಕ ಬೀರಲಾದ ಪ್ರಭಾವಗಳನ್ನು ಒಳಗೊಂಡಿತ್ತು. . . . ಖಗೋಲಜ್ಞರು ಮತ್ತು ಹೆಚ್ಚಿನ ಇತರ ವಿಜ್ಞಾನಿಗಳು, ಕಾಲ್ಪನಿಕವಾಗಿ ಮತ್ತು ಅಸ್ವೀಕಾರಯೋಗ್ಯವಾಗಿ ಕಾಣುವ ವಿಚಾರಗಳ ಮೇಲೆ ಜ್ಯೋತಿಷದ ಕಾರ್ಯವಿಧಾನಗಳು ಮತ್ತು ಜಾತಕಗಳ ಅರ್ಥವಿವರಣೆಯು ಅವಲಂಬಿಸಿರುತ್ತವೆ.”—ಸಿ. ಎ. ರೋನಾನ್, ಯೋಜನಾ ನಿರ್ದೇಶಕ, ಪೂರ್ವ ಏಷಿಯಾದ ಹಿಸ್ಟರಿ ಆಫ್ ಸೈಎನ್ಸ್ ಟ್ರಸ್ಟ್, ಕೇಂಬ್ರಿಡ್ಜ್, ಇಂಗ್ಲೆಂಡ್, ಮತ್ತು ಈ ಉದ್ಧರಣೆಯು ತೆಗೆಯಲ್ಪಟ್ಟಿರುವ ದ ಇಂಟರ್ನ್ಯಾಷನೆಲ್ ಎನ್ಸೈಕ್ಲೊಪೀಡಿಯ ಆಫ್ ಅಸ್ಟ್ರಾನೊಮಿಗೆ ಲೇಖನದಾತ.
ಈ ವೈಯಕ್ತಿಕ ದೃಷ್ಟಿಯನ್ನು ದೃಷ್ಟಾಂತಿಸಲು, ಪಾಶ್ಚಾತ್ಯ ಮನಸ್ಸಿಗೆ ಕೆಂಪು ಗ್ರಹವಾದ ಮಾರ್ಜ್, ಯುದ್ಧ ಮತ್ತು ಯುದ್ಧಾವಸ್ಥೆಯೊಂದಿಗೆ ಸೇರಿರುವುದಾದರೆ, ಚೈನಾ ದೇಶದವರಿಗೆ, ಕೆಂಪು ಬಹಳ ಸುಂದರವಾದ ಬಣ್ಣವಾಗಿದೆ, ಮತ್ತು ಮಾರ್ಜ್ಗೆ ಶುಭಕರವಾದ ಪ್ರಭಾವವಿದೆಯೆಂಬುದಾಗಿ ವೀಕ್ಷಿಸಲಾಗುತ್ತದೆ ಎಂದು ರೋನಾನ್ ವಿವರಿಸುತ್ತಾರೆ. ವ್ಯತಿರಿಕ್ತವಾಗಿ, ಪಾಶ್ಚಾತ್ಯ ಪುರಾಣಸಾಹಿತ್ಯವು ವೀನಸನ್ನು ಬಿಳಿ ಬಣ್ಣ ಮತ್ತು ಸೌಂದರ್ಯದೊಂದಿಗೆ ಸಂಬಂಧಿಸುತ್ತದೆ. ಚೈನಾ ದೇಶದವರಿಗೆ “ಬಿಳಿ ಬಣ್ಣವು . . . ಮರಣ, ಕ್ಷೀಣತೆ ಮತ್ತು ನಾಶನದ ಬಣ್ಣವಾಗಿದೆ; ಆದುದರಿಂದ ವೀನಸ್ ‘ಯುದ್ಧದ ಖಿನ್ನ ಗ್ರಹ”ದೋಪಾದಿ ಸೂಚಿಸಲ್ಪಟ್ಟಿತು.”
ರೋನಾನ್ ಮುಂದುವರಿಸುವುದು: “ಅದರ ಪ್ರಾಚೀನ ವೈಜ್ಞಾನಿಕ ಸ್ವಭಾವದ ಹೊರತೂ, ಆದಿ ಸಮಯಗಳಲ್ಲಿ ಜ್ಯೋತಿಷವು ಖಗೋಲವಿದ್ಯೆಯ ವೀಕ್ಷಣೆಯನ್ನು ಮತ್ತು ಅದನ್ನು ಮುನ್ನಡೆಸಲು ನಿಧಿಯನ್ನು ಒದಗಿಸುವುದರಲ್ಲಿ ಉಪಯುಕ್ತವಾದ ಭಾಗವನ್ನು ವಹಿಸಿತು.”
ಹತ್ತೊಂಬತ್ತು ನೋಬೆಲ್ ಬಹುಮಾನ ವಿಜೇತರು, ಇತರ ವಿಜ್ಞಾನಿಗಳೊಂದಿಗೆ ಜೊತೆಗೂಡಿ, 1975ರಲ್ಲಿ “ಜ್ಯೋತಿಷಶಾಸ್ತ್ರಕ್ಕೆ ಆಕ್ಷೇಪಣೆಗಳು—192 ಪ್ರಧಾನ ವಿಜ್ಞಾನಿಗಳ ಮೂಲಕ ಮಾಡಲಾದ ಒಂದು ಹೇಳಿಕೆ” ಎಂಬ ಹೆಸರಿನ ಒಂದು ಘೋಷಣೆಯನ್ನು ಹೊರಡಿಸಿದರು. ಅದು ಘೋಷಿಸಿದ್ದು:
“ಪ್ರಾಚೀನ ಸಮಯಗಳಲ್ಲಿ ಜನರಿಗೆ . . . ಭೂಮಿಯಿಂದ ಗ್ರಹಗಳಿಗೆ ಮತ್ತು ನಕ್ಷತ್ರಗಳಿಗಿರುವ ಅಪಾರವಾದ ಅಂತರದ ಕಲ್ಪನೆ ಇರಲಿಲ್ಲ. ಈಗ ಈ ಅಂತರಗಳನ್ನು ಲೆಕ್ಕಿಸಸಾಧ್ಯವಿದೆ ಮತ್ತು ಲೆಕ್ಕಿಸಿರುವುದರಿಂದ, ದೂರದಲ್ಲಿರುವ ಗೃಹಗಳ ಮತ್ತು ಇನ್ನೂ ಹೆಚ್ಚು ದೂರವಿರುವ ನಕ್ಷತ್ರಗಳ ಮೂಲಕ ತಯಾರಾದ ಗುರುತ್ವಾಕರ್ಷಣೆ ಮತ್ತು ಇತರ ಪ್ರಭಾವಗಳು ಎಷ್ಟು ಅತ್ಯಲ್ಪವಾಗಿವೆ ಎಂದು ನಾವು ಕಾಣಬಲ್ಲೆವು. ಜನನದ ಗಳಿಗೆಯಲ್ಲಿ ನಕ್ಷತ್ರಗಳ ಮತ್ತು ಗ್ರಹಗಳ ಮೂಲಕ ಬೀರಲಾದ ಶಕ್ತಿಗಳು ನಮ್ಮ ಭವಿಷ್ಯಗಳನ್ನು ಯಾವುದೊ ರೀತಿಯಲ್ಲಿ ರೂಪಿಸಬಲ್ಲವೆಂದು ಊಹಿಸುವುದು ಕೇವಲ ತಪ್ಪಾಗಿದೆ.”b
[ಅಧ್ಯಯನ ಪ್ರಶ್ನೆಗಳು]
b ಜ್ಯೋತಿಷದ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ, ಮೇ 8, 1986ರ ಅವೇಕ್! ಪುಟಗಳು 3-9ನ್ನು ನೋಡಿರಿ.