ಗುವಾಮಿನ ಗುಪ್ತ ರೋಗಗಳು
ಗುವಾಮಿನ ಎಚ್ಚರ! ಸುದ್ದಿಗಾರರಿಂದ
ಅವಳದನ್ನು ಗುಮಾನಿಸಿದಳು. ಆದರೂ, ವೈದ್ಯರ ಮಾತುಗಳು ಅತಿ ತಲ್ಲಣಗೊಳಿಸುವಂಥವುಗಳಾಗಿದ್ದವು. “ನಮ್ಮೆಲ್ಲ ಪರೀಕ್ಷೆಗಳು ನಿನ್ನ ತಂದೆಗೆ ಲಿಟಿಕೊ ಮತ್ತು ಬಾಡಿಗ್ ಇದೆ ಎಂಬುದನ್ನು ದೃಢಪಡಿಸುತ್ತವೆ.” ಈ ಎರಡೂ ರೋಗಗಳು ಮರಣಾಂತಿಕಗಳೆಂದು ಅವಳಿಗೆ ತಿಳಿದಿತ್ತು.
ಅಮೆರಿಕಕ್ಕಿಂತ ಅನೇಕ ಪಟ್ಟು ಹೆಚ್ಚಾಗಿ, ಲೋಕದಲ್ಲಿ ಈ ರೋಗಗಳ ಅತ್ಯಧಿಕ ಪ್ರಸಂಗಗಳು ಗುವಾಮಿನಲ್ಲಿವೆ. ಆದರೆ ಈ ಸ್ತ್ರೀಯ ತಂದೆಯ ಜೀವವನ್ನು ಕಟ್ಟಕಡೆಗೆ ತೆಗೆದುಕೊಳ್ಳುವ ಈ ಭಯಂಕರ ರೋಗಗಳು ಏನಾಗಿವೆ? ಅವುಗಳು ಆಗುವಂತೆ ಮಾಡುವುದು ಯಾವುದು? ಮತ್ತು ಅವನ ಉಳಿದ ಸಮಯವನ್ನು ಸಹಿಸುವಂತೆ ಮಾಡಲು ಅವಳು ಏನು ಮಾಡಶಕ್ತಳು?
ಲಿಟಿಕೊ ಮತ್ತು ಬಾಡಿಗ್ ಏನಾಗಿವೆ?
ಲಿಟಿಕೊ ಮತ್ತು ಬಾಡಿಗ್‌ಗಳೆರಡೂ ನರಸ್ನಾಯುವಿನ ವ್ಯೂಹದ ಅಂಗವಿಕೃತ ರೋಗಗಳಾಗಿವೆ. ಏಮೈಯಟ್ರಾಫಿಕ್ ಲ್ಯಾಟೆರಲ್ ಸ್ಕಿಯರೋಸಿಸ್ (ಏಎಲ್‌ಎಸ್), ಯಾ ಲೂ ಗೆರಿಗ್ಸ್ ರೋಗವೆಂದು ವೈದ್ಯಕೀಯ ಲೋಕದಲ್ಲಿ ಲಿಟಿಕೊವನ್ನು ತಿಳಿಯಲಾಗಿದೆ. ನ್ಯೂ ಯಾರ್ಕ್ ಯಾನ್ಕಿ ಬೇಸ್‌ಬಾಲ್ ಆಟಗಾರ ಲೂ ಗೆರಿಗ್ ಈ ರೋಗದಿಂದ 1941ರಲ್ಲಿ ಸತ್ತನು. ಮತ್ತು ಅದು ಅವನ ಹೆಸರಿನಿಂದ ಜ್ಞಾತವಾಗಿದೆ. ಲಿಟಿಕೊ ಏಎಲ್‌ಎಸ್‌ಗೆ ಸ್ಥಳೀಯ ಹೆಸರಾಗಿದೆ.
ಏಎಲ್‌ಎಸ್ ಬೆನ್ನು ಹುರಿಯ ಚಾಲಕ ನರಕಣಗಳನ್ನು ಮತ್ತು ನರಗಳನ್ನು ಬಾಧಿಸುತ್ತದೆ. ಕೈಗಳ, ಕಾಲುಗಳ, ಮತ್ತು ಗಂಟಲಿನ ಸ್ನಾಯುಗಳು ನಿಧಾನವಾಗಿ ಮತ್ತು ಸಿಮ್ತಿತ ರೀತಿಯಲ್ಲಿ ನಿಸ್ಸತ್ವಗೊಳ್ಳುತ್ತವೆ. ಆದರೂ, ಸ್ವಲ್ಪ ಸಮಯದವರೆಗೆ ಸ್ಪರ್ಶ ಸಾಮರ್ಥ್ಯ ಹಾಗೂ ಪುನರುತ್ಪತ್ತಿಮಾಡುವ ಸಾಮರ್ಥ್ಯ ಮತ್ತು ಮೂತ್ರ—ಗುದನಾಳದ ನಿಯಂತ್ರಣ, ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ನಿಶ್ಚಯವಾಗಿ, ಅನೇಕ ಮಕ್ಕಳು ಏಎಲ್‌ಎಸ್ ರೋಗಿಗಳಿಗೆ ಹುಟ್ಟಿರುತ್ತಾರೆ. ಒಬ್ಬಾಕೆ ಸ್ತ್ರೀಯು ಅವಳ 43ನೆಯ ವಯಸ್ಸಿನಲ್ಲಿ ಏಎಲ್‌ಎಸ್‌ನಿಂದ 14 ವರುಷ ಕಷ್ಟಾನುಭವಿಸಿ ಮರಣಿಸುವ ಮುಂಚೆ ಆರು ಸಹಜ ಸ್ಥಿತಿಯ ಮಕ್ಕಳಿಗೆ ಜನ್ಮವಿತಳ್ತು. ಆದಾಗ್ಯೂ, ಏಎಲ್‌ಎಸ್‌ನ ಮುಂದುವರಿದ ಹಂತದಲ್ಲಿ, ಮೂತ್ರದ ಪ್ರದೇಶದ ಸೋಂಕುಗಳು, ಶ್ವಾಸಕೋಶಗಳ ಉರಿಯೂತ, ಯಾ ಶ್ವಾಸೇಂದ್ರಿಯ ನ್ಯೂನತೆಯು ಮರಣಕ್ಕೆ ನಡೆಸುವುದು. ಏಎಲ್‌ಎಸ್ 35 ಮತ್ತು 60 ವರುಷಗಳ ಪ್ರಾಯದ ವಯಸ್ಕರಲ್ಲಿ ಹೆಚ್ಚು ಅಡಿಗಡಿಗೆ ಕಂಡುಬರುತ್ತದೆ. ಗುವಾಮಿನಲ್ಲಿ ಅತಿ ತರುಣ ಬಲಿಯು 19 ವರ್ಷ ಪ್ರಾಯದ ಅವಿವಾಹಿತ ಸ್ತ್ರೀಯಾಗಿದ್ದಳು.
ಮಿದುಳಿನ ಕ್ಷಯಿಸುವಿಕೆಗೆ ಬಾಡಿಗ್ ಎಂಬುದು ಸ್ಥಳೀಯ ಶಬ್ದವಾಗಿದೆ. ವೈದ್ಯಕೀಯವಾಗಿ ಪಾರ್ಕಿನ್ಸನಿಸಮ್—ಡಿಮೆನಿಯ್ಷ (ಪಿಡಿ) ಎಂದು ಕರೆಯಲ್ಪಡುವ ಈ ರೋಗವು, ಪಾರ್ಕಿನ್ಸನ್ಸ್ ರೋಗದ (ನರ ರೋಗ) ಮತ್ತು ಆ್ಯಲ್‌ಜೈಮರ್ಸ್ ರೋಗದ (ಕೇಂದ್ರ ನರವ್ಯೂಹದ ರೋಗ) ಲಕ್ಷಣಗಳ ಮಿಶ್ರಣವೆಂದು ವಿವರಿಸಲಾಗಿದೆ. ಪಾರ್ಕಿನ್ಸನ್ಸ್ ರೋಗ ಲಕ್ಷಣಗಳು (ನಿಧಾನ ಚಲನೆಗಳು, ಸ್ನಾಯುಗಳ ಸೆಡೆತ, ನಡುಕಗಳು) ಯಾ ಮಾನಸಿಕ ಬದಲಾವಣೆಗಳಲ್ಲಿ (ಜ್ಞಾಪಕ ಶಕ್ತಿಯ ನಷ್ಟ, ಭ್ರಾಂತಿಗೊಳ್ಳುವಿಕೆ, ವ್ಯಕ್ತಿತ್ವದ ಬದಲಾವಣೆಗಳು) ಯಾವುದಾದರೊಂದು ಮೊದಲು ಆರಂಭಿಸಬಹುದು. ಕೆಲವೊಮ್ಮೆ, ಎರಡೂ ರೋಗಗಳ ಲಕ್ಷಣಗಳು ಒಟ್ಟೊಟ್ಟಿಗೆ ಕಂಡುಬರುತ್ತವೆ. ಮುಂದುವರಿದ ಹಂತಗಳಲ್ಲಿ, ರೋಗಿಯು ಹಾಸಿಗೆ ಹುಣ್ಣುಗಳನ್ನು, ಮೂತ್ರ ಮತ್ತು ಮಲದ ಸಂಯಮವಿಲ್ಲದಿರುವಿಕೆ, ಅಸ್ತಿ ಉರಿಯೂತ, ಮೂಳೆಯ ಮುರಿತಗಳನ್ನು, ಮತ್ತು ರಕ್ತಕ್ಷಯವನ್ನು ವಿಕಸಿಸುತ್ತಾನೆ ಮತ್ತು ಅಂತಿಮವಾಗಿ ಸೋಂಕುಗಳಿಂದ ಸಾಯುತ್ತಾನೆ.
ಲಿಟಿಕೊ ಮತ್ತು ಬಾಡಿಗ್ ಎರಡು ರೋಗಗಳೆಂದು ಪರಿಗಣಿಸಲ್ಪಡುತ್ತವೆ. ಆದಾಗ್ಯೂ, ಅವುಗಳು ರೋಗಲಕ್ಷಣಗಳ ವಿಭಿನ್ನ ಅಭಿವ್ಯಕ್ತಿಗಳ ಒಂದು ರೋಗವೆಂದು ಕೆಲವರು ನಂಬುವಂತೆ ಸಂಶೋಧನೆಯು ನಡೆಸಿದೆ.
ರಹಸ್ಯ ಆಳವಾಗುತ್ತದೆ
ಸಂಶೋಧಿಸಲ್ಪಡುತ್ತಿರುವ ಪ್ರಧಾನ ಪ್ರಶ್ನೆಗಳಲ್ಲಿ ಕೆಲವು ಮುಂದಿನವುಗಳಾಗಿವೆ: (1) ಮ್ಯಾರಿಯಾನ ದ್ವೀಪಗಳಲ್ಲಿರುವ ಏಎಲ್‌ಎಸ್ ಮತ್ತು ಪಿಡಿ ರೋಗಿಗಳ 98 ಪ್ರತಿಶತವು ಶುದ್ಧವಾದ ಚಮಾರೊ ಕುಲದವರಾಗಿಯೂ ಮತ್ತು ಇತರ ಬಲಿಗಳು ದೀರ್ಘ ಸಮಯದ ಫಿಲಿಪಿನೊ ನಿವಾಸಿಗಳಾಗಿಯೂ ಇರುವುದೇಕೆ? (2) ಅತ್ಯಧಿಕ ಸಂಭವದ ಇತರ ಪ್ರದೇಶಗಳು ಅದೇ ರೇಖಾಂಶದಲ್ಲಿರುವ ಇತರ ಸ್ಥಳಗಳಲ್ಲಿ ಮಾತ್ರ ನೆಲೆಸಿರುವುದೇಕೆ? (3) ಮ್ಯಾರಿಯಾನಾ ದ್ವೀಪಗಳಲ್ಲಿರುವ ಅನೇಕ ಬಲಿಗಳಿಗೆ ಏಎಲ್‌ಎಸ್ ಮತ್ತು ಪಿಡಿ—ಎರಡೂ ರೋಗಗಳು ಇರುವಾಗ ಇತರ ಕಡೆಯಲ್ಲಿರುವ ರೋಗಿಗಳಿಗೆ ಏಕೆ ಕೇವಲ ಒಂದು ಯಾ ಇನ್ನೊಂದು ರೋಗ ಇದೆ? (4) ಈ ಬಲಿಗಳ ಕೇಂದ್ರ ನರವ್ಯೂಹದೊಳಗೆ ಸಾಂದ್ರೀಕರಿಸಲ್ಪಟ್ಟ ಅಲ್ಯೂಮಿನಿಯಂ ಹೇಗೆ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ? (5) ಅಲ್ಯೂಮಿನಿಯಂನ ಅಧಿಕ ಮಟ್ಟ ಇರುವಲ್ಲಿ ಏಕೆ ಮಿದುಳಿನ ಜೀವಕೋಶಗಳಲ್ಲಿ ಕೊಂಚ ಸತುವು ಕಂಡುಕೊಳ್ಳಲ್ಪಡುತ್ತದೆ? ಪಾಶ್ಚಾತ್ಯ ಶಾಂತಸಾಗರದ ಅತ್ಯಧಿಕ ಸಂಭವದ ಕ್ಷೇತ್ರದಲ್ಲಿನ ಪರಿಸರದ ಅಧ್ಯಯನಗಳು, ಭೂಮಿಯಲ್ಲಿ ಮತ್ತು ನೀರಿನಲ್ಲಿ ಅಲ್ಯೂಮಿನಿಯಂ, ಮ್ಯಾಂಗನೀಸ್, ಮತ್ತು ಕಬ್ಬಿಣದ ಹೆಚ್ಚಿನ ಮಟ್ಟಗಳನ್ನು ಮತ್ತು ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ಮತ್ತು ಸತುವುವಿನ ಕಡಿಮೆ ಪ್ರಮಾಣಗಳನ್ನು ತೋರಿಸಿತು.
ರಹಸ್ಯವನ್ನು ಪ್ರಕಟಿಸಲು ಪ್ರಯತ್ನಿಸುವುದು
ಅನೇಕ ವರ್ಷಗಳಿಂದ ಗುವಾಮ್, ಜಪಾನ್, ಮತ್ತು ಕೆನಡದಲ್ಲಿರುವ ಸಂಶೋಧಕರು ಈ ರಹಸ್ಯ ರೋಗಗಳ ಕುರಿತು ನಿಜತ್ವಗಳನ್ನು ಪ್ರಕಟಿಸಲು ಪ್ರಯತ್ನಿಸಿದ್ದಾರೆ. ಈ ಸಂಶೋಧಕ ತಂಡಗಳ ಮೂಲಕ ಪ್ರತಿಪಾದಿಸಲಾದ ಹಲವಾರು ಸಿದ್ಧಾಂತಗಳಲ್ಲಿ, ವಿಭಿನ್ನ ಅಂಶಗಳು ಉದ್ಧರಿಸಲ್ಪಟ್ಟಿವೆ: ಅಪರೂಪವಾದೊಂದು ಆನುವಂಶಿಕ ಅಂಶ, ನಿಧಾನವಾದ ವಿಷಾಣುವಿನ ಸೋಂಕು, ಮತ್ತು ತೀವ್ರವಾದ ಅಸ್ಥಿಗತ ಕೊಂಚವೇ ಲೋಹದ ವಿಷಹರಡುವಿಕೆ.
ಮಿದುಳಿನ ಜೀವಕೋಶಗಳಲ್ಲಿ ಎರಡರಿಂದ ಮೂರು ಮಿಲಿಗ್ರಾಮಿನಷ್ಟು ಅಲ್ಪ ಪ್ರಮಾಣದ ಅಲ್ಯೂಮಿನಿಯಂ ಮಿದುಳಿನ ಸಾಮಾನ್ಯ ಕ್ರಿಯೆಯನ್ನು ಭಂಗಪಡಿಸಬಲ್ಲದೆಂದು ಒಬ್ಬ ಔಷಧಶಾಸ್ತ್ರಜ್ಞನು ವಾದಿಸಿದ್ದಾನೆ. ಭೂಮಿ ಮತ್ತು ನೀರಿನಿಂದ ಹೊರತು ಪಡಿಸಿ, ಅಲ್ಯೂಮಿನಿಯಂ ಮಿಶ್ರಣಗಳು ಹೆಚ್ಚಿನ ಮೊತ್ತಗಳಲ್ಲಿ ಒದಗಿನ ಪುಡಿಗಳಲ್ಲಿ, ದೋಸೆ (ಕೇಕ್) ಮತ್ತು ತೆಳು ದೋಸೆಯ ಮಿಶ್ರಣಗಳಲ್ಲಿ, ತಾನಾಗಿಯೇ ಉಬ್ಬುವ ಹಿಟ್ಟಿನಲ್ಲಿ, ಹೆಪ್ಪುಗಟ್ಟಿಸಿದ ಹಿಟ್ಟಿನಲ್ಲಿ, ಕೆಲವು ಪ್ರತ್ಯಾಮ್ಲಗಳು, ಗಂಧಹರಗಳು, ಮತ್ತು ಔಷಧಗಳಲ್ಲಿ ಸೇರಿಸಲ್ಪಟ್ಟಿವೆ. ತವರದ ಹಾಳೆಗಳು ಮತ್ತು ಅಡಿಗೆಯ ಪಾತ್ರೆಗಳು ಸಹ ನೆರವು ನೀಡುತ್ತವೆ, ಯಾಕೆಂದರೆ ಅವುಗಳಲ್ಲಿ ವಿಶೇಷವಾಗಿ ಹುಳಿಯಾದ ಯಾ ಕ್ಷಾರೀಯ ಆಹಾರಗಳನ್ನು ಬೇಯಿಸುವಾಗ ಅಲ್ಯೂಮಿನಿಯಂ ಪ್ರತ್ಯೇಕಿಸಲ್ಪಡುತ್ತದೆ.
ನರರೋಗ ಶಾಸ್ತ್ರಜ್ಞರೂ ಮತ್ತು ಈ ಅಪರೂಪವಾದ ರೋಗಗಳ ಮೇಲೆ ಅಧಿಕಾರಿಯೂ ಆಗಿರುವ ಡಾ. ಕ್ವಾಂಗ್ ಮಿಂಗ್ ಚೆನ್, ಹೇಳಿದ್ದು: “ಕಳೆದ 30 ವರ್ಷಗಳಿಂದ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ನ್ಯೂರೊಲಾಜಿಕಲ್ ಆ್ಯಂಡ್ ಕಮ್ಯೂನಿಕೇಟಿವ್ ಡಿಸೀಸಸ್ ಆ್ಯಂಡ್ ಸ್ಟ್ರೋಕ್ (NINCDS)ನ ಮೂಲಕ ನಡೆಸಲಾದ ವಿಸ್ತಾರವಾದ ಅಧ್ಯಯನಗಳು, ಮಾನವಜಾತಿಗೆ ತಿಳಿದಿರುವ ಕೇಂದ್ರ ನರವ್ಯೂಹದ (CNS) ಅತ್ಯಂತ ನಾಶಕಾರಕ ಮತ್ತು ಜಾರಿಕೊಳ್ಳುವ ರೋಗಗಳ ಗಮನಾರ್ಹವಾದ ಹೆಚ್ಚಿನ ಸಂಭವದ ಮತ್ತು ಕಾರಣದ ರಹಸ್ಯವನ್ನು ಪೂರ್ತಿಯಾಗಿ ಪ್ರಕಟಿಸಿಲ್ಲ.” ಹಾಗಿದ್ದರೂ, ಅಪರೂಪವಾದ ಆನುವಂಶಿಕ ಅಂಶ ಯಾ ಒಂದು ನಿಧಾನ ವಿಷಾಣುವಿನ ಸೋಂಕಿಗಿಂತ ತೀವ್ರವಾದ ಅಸ್ಥಿಗತ ಕೊಂಚವೇ ಲೋಹದ ವಿಷಹರಡುವಿಕೆಗೆ ಬಹಳ ಹೆಚ್ಚು ವಿಶ್ವಾಸಾರ್ಹತೆ ಇದೆಯೆಂದು ಅವರು ಸೂಚಿಸಿದರು. ಸಂಶೋಧನೆಯು ಇನ್ನೂ ಮುಂದುವರಿಯುತ್ತಾ ಇದೆ. ಉತ್ತರವನ್ನು ಕಂಡುಕೊಳ್ಳಲ್ಪಡುವ ತನಕ, ಒಬ್ಬನು ಮಾಡಬಲ್ಲ ವಿಷಯವೇನಂದರೆ, ಸಮಸ್ಯೆಗಳೊಂದಿಗೆ ನಿಭಾಯಿಸಲು ಪ್ರಯತ್ನಿಸುವಂಥದ್ದು ಮತ್ತು ನರಳುತ್ತಿರುವವರಿಗೆ ಸಾಧ್ಯವಾದಷ್ಟು ಹೆಚ್ಚಿನ ಸಹಾಯವನ್ನು ನೀಡುವುದಾಗಿದೆ.
ನಿರೀಕ್ಷಿಸಬಲ್ಲ ಸಂಗತಿ ಮತ್ತು ನಿಭಾಯಿಸುವ ವಿಧ
ರೋಗನಿರ್ಣಯದ ಕುರಿತು ಅವರು ಅರಿತಾಗ ಭಯಪಟ್ಟು ದುಃಖಿತರಾದರೂ, ಅವರ ಮನೋಭಾವವು ಸ್ವೀಕಾರದ ಮನೋಭಾವವಾಗಿತ್ತೆಂದು ಗುವಾಮಿನಲ್ಲಿ ಇಂಟರ್‌ವ್ಯೂ ಮಾಡಲಾದ ಕುಟುಂಬದವರು ಹೇಳಿದರು. ಅದಕ್ಕೆ ಮದ್ದಿಲ್ಲವೆಂದು ಅವರಿಗೆ ಗೊತ್ತಿತ್ತು.
ರೋಗಿಯಿಂದ ಮತ್ತು ಅವನ ಕುಟುಂಬದಿಂದ, ಹೀಗೆ ಇಬ್ಬರಿಂದಲೂ ಮಹತ್ತಾದ ಆಶಾಭಂಗವು ಮತ್ತು ಹತಾಶೆಯು ಅನುಭವಿಸಲ್ಪಡುತ್ತದೆ. ಅವನಿಗೆ ಅತ್ಯಂತ ಸಂಕಟವನ್ನು ಯಾವುದು ಉಂಟುಮಾಡಿತೆಂದು ಕೇಳಲ್ಪಟ್ಟಾಗ, ಒಬ್ಬ ಪಿಡಿ ಬಲಿಯು ಹೇಳಿದ್ದು: “ಸ್ಪಷ್ಟವಾಗಿಗಿ ಮಾತಾಡಲು ಮತ್ತು ಮನೆಯ ಸುತ್ತಲು ಓಡಾಡಲು ಅಶಕ್ತವಾಗಿರುವುದು ನನ್ನನ್ನು ನಿರಾಶೆಗೊಳಿಸುತ್ತದೆ.” ವ್ಯಕ್ತಿತ್ವದ ಬದಲಾವಣೆಗಳು ಮತ್ತು ಜ್ಞಾಪಕ ಶಕ್ತಿಯ ನಷ್ಟವು, ಕುಟುಂಬಕ್ಕೆ ನಿಭಾಯಿಸುವುದನ್ನು ಕಠಿನವಾಗಿ ಮಾಡುತ್ತದೆ. ಹಾಸಿಗೆಹುಣ್ಣುಗಳು ಮತ್ತು ಮೂತ್ರ ಹಾಗೂ ಮಲದ ಸಂಯಮವಿಲ್ಲದಿರುವಿಕೆ ಪೋಷಣೆಯನ್ನು ಅಧಿಕ ಕಷ್ಟಕರವಾಗಿ ಮಾಡುತ್ತದೆ. ಏಎಲ್‌ಎಸ್ ರೋಗಿಯು ಮಾನಸಿಕವಾಗಿ ಎಚ್ಚರವುಳ್ಳವನಾಗಿರುವುದರಿಂದ, ಅವನ ಮನೋಭಾವವು ಸಾಮಾನ್ಯವಾಗಿ ಅಧಿಕ ಸಹಕಾರಿಯಾಗಿರುತ್ತದೆ, ಆದರೆ ರೋಗದ ಮುಂದುವರಿದ ಹಂತಗಳಲ್ಲಿ ಅವನು ಸಂಪೂರ್ಣವಾಗಿ ಅಸಹಾಯಕನಾಗಿರುತ್ತಾನೆ.
ಏಎಲ್‌ಎಸ್ ಯಾ ಪಿಡಿ ರೋಗಿಯ ಗಂಟಲನ್ನು ಸ್ವಚ್ಛಗೊಳಿಸುವಂತೆ ಸಹಾಯ ಮಾಡಲು ಒಂದು ಹೀರು ಪಂಪ್ ಅನೇಕ ವೇಳೆ ಬೇಕಾಗಿದೆ. ಆಹಾರವು ಮೆದುವಾಗಿರಬೇಕು, ಮತ್ತು ಉಸಿರುಕಟ್ಟುವುದನ್ನು ತಡೆಯಲು ಸಣ್ಣ ಚಮಚ ತುಂಬ ಊಟವು ಗಂಟಲಿನ ಒಳಗೆ ಇರಿಸಲ್ಪಡಬೇಕು. ಉಸಿರಾಡುವುದು ಕಷ್ಟವಾದಾಗ, ಆಮ್ಲಜನಕದ ಅಗತ್ಯವಿರುತ್ತದೆ.
ಶಾರೀರಿಕ ಚಿಕಿತ್ಸೆ, ಸೋಂಕಿನ ನಿಯಂತ್ರಣ, ಮತ್ತು ಭಾವನಾತ್ಮಕ ಬೆಂಬಲ—ಇವೆಲ್ಲವು ಹೋಮ್ ಕೇರ್ ಸರ್ವಿಸ್ ಏಜೆನ್ಸಿಯ ಮೂಲಕ ಒದಗಿಸಲಾಗುತ್ತದೆ. ಇತರ ಆವಶ್ಯಕತೆಗಳೊಂದಿಗೆ, ಗುವಾಮಿನ ಲಿಟಿಕೊ ಮತ್ತು ಬಾಡಿಗ್ ಅಸೊಸಿಎಷನ್ ಎತ್ತುಪಟ್ಟಿಗಳನ್ನು, ಗಡುಸುಪಟ್ಟಿಗಳನ್ನು, ಶಸ್ತ್ರ ಚಿಕಿತ್ಸಾ ಹಾಸಿಗೆ ಮತ್ತು ಮೆತ್ತೆಗಳನ್ನು, ಗಾಲಿಕುರ್ಚಿಗಳನ್ನು, ಮತ್ತು ಶೌಚಪಾತ್ರೆಗಳನ್ನು ಒದಗಿಸುತ್ತದೆ. ಇಸವಿ 1970ರಂದಿನಿಂದ, ಪಿಡಿ ರೋಗಿಗಳು ಸ್ನಾಯು ಸೆಡೆತಗಳನ್ನು ಸಡಿಲಗೊಳಿಸುವ ಮತ್ತು ನಿಧಾನ ಚಲನೆಗಳನ್ನು ಉತ್ತಮಗೊಳಿಸುವ ಎಲ್ ಡೋಪಾ (ಅಮಿನೋ ಆಮ್ಲ)ದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಃಖಕರವಾಗಿ, ಡಿಮೆನಿಯ್ಷ ಯಾ ಏಎಲ್‌ಎಸ್ ರೋಗಿಗಳಿಗೆ ಪ್ರಭಾವಕಾರಿಯಾದ ಯಾವುದೇ ಮದ್ದು ಇರುವುದಿಲ್ಲ.
ಈ ಅಸ್ವಸ್ಥಗಳು ತಟ್ಟುವಾಗ ನಿಕಟ ಕುಟುಂಬ ಸಹಕಾರವು ಸಾಮಾನ್ಯವಾಗಿ ಎದ್ದುಕಾಣುವಂತಹದ್ದಾಗಿದೆ. ತನ್ನ ತಂದೆಯನ್ನು, ಹಿರಿಯ ಸಹೋದರಿಯನ್ನು, ಮತ್ತು ಕುಟುಂಬದ ಇತರ ಆರು ಸದಸ್ಯರನ್ನು ಏಎಲ್‌ಎಸ್ ಯಾ ಪಿಡಿ ರೋಗದಿಂದ ಕಳೆದುಕೊಂಡ ಒಬ್ಬಾಕೆ ಸ್ತ್ರೀಯು, ಹೀಗೆ ಹೇಳುತ್ತಾ ಆಕೆಯ ಕುಟುಂಬವನ್ನು ಪ್ರಶಂಸಿಸಿದಳು: “ಸಹಾಯ ಮಾಡುವುದರಲ್ಲಿ ಅವರೆಲ್ಲರು ಒಳ್ಳೆಯವರಾಗಿದ್ದರು.” ಆಕೆಯ ಅಸ್ವಸ್ಥಳಾದ ಅಕ್ಕನ ಗಂಡನಿಂದ ಬಂದ ಸಹಾಯದ ಕುರಿತು ಸವಿ ನೆನಪಿನಿಂದ ಮಾತಾಡುತ್ತಾ, ಆಕೆ ಹೇಳಿದ್ದು: “ಎಂತಹ ಮಹಾ ಪ್ರೀತಿಯನ್ನು ಅವನು ತೋರಿಸಿದನು! ಪ್ರತಿದಿನ ಅವಳನ್ನು ಒಂದು ಗಾಲಿಕುರ್ಚಿಯ ಮೇಲೆ ಕುಳ್ಳಿರಿಸಿ, ಅವಳನ್ನು ಗಾಳಿ ಸಂಚಾರಕ್ಕೆ ಕರೆದುಕೊಂಡು ಹೋದನು.”
ತನ್ನ ತಾಯಿಯ ಕಾಳಜಿ ವಹಿಸಲು ಒಬ್ಬಾಕೆ ಹೆಂಗಸು ಅನೇಕ ವರ್ಷಗಳ ವರೆಗೆ ಒಂಟಿಯಾಗಿ ಉಳಿಯಲು ಆರಿಸಿದಳು. ಆಕೆಯ ಕುಟುಂಬವು ಏಎಲ್‌ಎಸ್‌ನಿಂದ ಈಗಾಗಲೇ ಮೂರು ಸದಸ್ಯರನ್ನು ಕಳೆದುಕೊಂಡಿತ್ತು, ಮತ್ತು ಇತರರು ರೋಗಲಕ್ಷಣಗಳನ್ನು ಪ್ರದರ್ಶಿಸಲು ತೊಡಗಿದ್ದರು. ಇಪ್ಪತ್ತನಾಲ್ಕು ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಸಂಪೂರ್ಣವಾಗಿ ಶಕಿಹ್ತೀನ ಸ್ಥಿತಿಯಲ್ಲಿದ್ದ ಇನ್ನೊಬ್ಬ ಹೆಂಗಸಿಗೆ ಮೂರು ಜನ ಹೆಣ್ಣು ಮಕ್ಕಳಿದ್ದರು, ಮತ್ತು ಅವರಲ್ಲಿ ಇಬ್ಬರು ತಮ್ಮ ತಾಯಿಗೆ ವ್ಯಾಪಕವಾದ ಪೋಷಣೆಯನ್ನು ನೀಡುವ ಸಲುವಾಗಿ ಶಾಲೆಯನ್ನು ಬಿಟ್ಟರು. ಹಗಲು ರಾತ್ರಿ 30 ನಿಮಿಷಗಳ ಅಂತರದಲ್ಲಿ ಆಕೆ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ತಿರುಗಿಸಲ್ಪಡುತ್ತಿದ್ದಳು. ಸಂತತವಾದ ಪೋಷಣೆಯ ಬೇಡಿಕೆಗಳ ಕಾರಣದಿಂದ, ರೋಗಿಗಳನ್ನು ಆಸ್ಪತ್ರೆಗಳಲ್ಲಿ ಹಾಕುವುದು ಅಗತ್ಯವೆಂದು ಕೆಲವು ಕುಟುಂಬಗಳು ಕಂಡುಕೊಂಡಿವೆ, ಅಲ್ಲಿ ತರಬೇತು ಪಡೆದ ಸಿಬ್ಬಂದಿಯು ಅವರ ಆವಶ್ಯಕತೆಗಳನ್ನು ಪೂರೈಸಬಲ್ಲದು.
ಏಎಲ್‌ಎಸ್ ಮತ್ತು ಪಿಡಿ ರೋಗಗಳೊಂದಿಗೆ ಯಶಸ್ವಿಯಾಗಿ ನಿಭಾಯಿಸಿದ ಕುಟುಂಬಗಳು ಈ ಮುಂದಿನ ಸಲಹೆಗಳನ್ನು ನೀಡಿದವು; ಪ್ರೀತಿಪರರಾಗಿ ಆದರೆ ದೃಢರಾಗಿ ಇರ್ರಿ. ಅಸಹನೆಯನ್ನು ತೋರಿಸದಿರಿ ಯಾ ರೋಗಿಯಿಂದ ಬಹಳಷ್ಟನ್ನು ಅಪೇಕ್ಷಿಸದಿರಿ. ದೇವರಲ್ಲಿ ನಂಬಿಕೆಯನ್ನಿಡಿರಿ. ಅನೇಕ ಬಾರಿ ಪ್ರಾರ್ಥನೆ ಮಾಡಿರಿ. ರೋಗಿಯೊಂದಿಗೆ ಅತಿ ಹೆಚ್ಚಿನ ಸಮಯವನ್ನು ವ್ಯಯಿಸುವ ಕುಟುಂಬ ಸದಸ್ಯರಿಗೆ ಸ್ವಲ್ಪ ಏಕಾಂತ ಸಮಯವನ್ನು ಏರ್ಪಡಿಸಿರಿ. ಕೆಲವೊಮ್ಮೆ ರೋಗಿಯನ್ನು ವಾಯುವಿಹಾರಗಳಿಗೆ ಕರೆದುಕೊಂಡುಹೋಗಿರಿ ಮತ್ತು ಹಳ್ಳಿಯ ಯಾ ಸಾಮಾಜಿಕ ಕಾರ್ಯಕ್ರಮಗಳನ್ನು ಹಾಜರಾಗಲು ಅವನಿಗೆ ಸಹಾಯಮಾಡಿರಿ. ಕುಟುಂಬದಲ್ಲಿ ಒಬ್ಬ ರೋಗಿಯನ್ನು ಹೊಂದಿರುವುದರ ಕುರಿತು ನಾಚಿಕೆ ಪಟ್ಟುಕೊಳ್ಳಬೇಡಿ. ಮತ್ತು ಬಲಿಯಾದವರು ಅನೇಕ ವೇಳೆ ಒಬ್ಬಂಟಿಗರಾಗಿರುವ ಕಾರಣ ಅವರನ್ನು ಸಂದರ್ಶಿಸುವಂತೆ ಮಕ್ಕಳನ್ನು, ಮೊಮ್ಮಕ್ಕಳನ್ನು, ಮತ್ತು ಮಿತ್ರರನ್ನು ಉತ್ತೇಜಿಸಿರಿ.
ಈ ರೋಗಗಳಿಗೆ ನಿಕರವಾದ ಒಂದು ವಿವರಣೆಯನ್ನು ವೈದ್ಯಕೀಯ ವಿಜ್ಞಾನವು ಕಂಡುಹಿಡಿಯದಿದ್ದಾಗ್ಯೂ, ರೋಗ ಅನುಭವಿಸುತ್ತಿರುವವರಿಗೆ ಮತ್ತು ಅವರ ಕುಟುಂಬಗಳಿಗೆ—ಇಬ್ಬರಿಗೂ ನಿರೀಕ್ಷೆಯಿದೆ. ಬೇಗನೆ, ದೇವರ ಹೊಸ ಲೋಕದಲ್ಲಿ, ಎಲ್ಲ ರೋಗ, ವೇದನೆ, ಮತ್ತು ಮರಣ ಅನಂತವಾಗಿ ತೆಗೆದುಹಾಕಲ್ಪಡುವುದೆಂದು ಬೈಬಲ್ ತೋರಿಸುತ್ತದೆ. ಬದಲಿಗೆ, ಅನಂತ ಜೀವದ ನೋಟದೊಂದಿಗೆ, ಮನಸ್ಸು ಮತ್ತು ದೇಹದ ಪರಿಪೂರ್ಣತೆ ಅಲ್ಲಿರುವುದು. ಮರಣಹೊಂದಿರುವ ಪ್ರಿಯರು ಕೂಡ ಭೂಮಿಯ ಮೇಲೆ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವರು. ಅಸ್ವಸ್ಥವಾಗಿರುವ ಪ್ರಿಯ ವ್ಯಕ್ತಿಯು ಮುಂದಿರುವ ಅದ್ಭುತಕರ ನಿರೀಕ್ಷೆಯ ಕುರಿತು ಕಲಿಯುವಂತೆ ದೇವರ ವಾಕ್ಯವಾದ ಬೈಬಲನ್ನು ದಯವಿಟ್ಟು ಅವನಿಗೆ ಓದಿಹೇಳಿರಿ.—ಕೀರ್ತನೆ 37:11, 29; ಯೆಶಾಯ 33:24; 35:5-7; ಅ. ಕೃತ್ಯಗಳು 24:15; ಪ್ರಕಟನೆ 21:3-5.
[ಪುಟ 26 ರಲ್ಲಿರುವ ಚಿತ್ರ]
ಇಂತಹ ಮರಣಾಂತಿಕ ರೋಗಗಳೊಂದಿಗೆ ನಿಭಾಯಿಸುವುದು ಒಂದು ಪಂಥಾಹ್ವಾನವೆಂದು ಕುಟುಂಬ ಸದಸ್ಯರು ಕಂಡುಕೊಳ್ಳುತ್ತಾರೆ