ನಮ್ಮ ವಾಚಕರಿಂದ
ಕ್ರೆಡಿಟ್ ಕಾರ್ಡುಗಳು “ಪ್ಲ್ಯಾಸ್ಟಿಕ್ ಹಣ—ನೀವು ಅದನ್ನು ಉಪಯೋಗಿಸಬೇಕೊ?” ಎಂಬ ಲೇಖನವನ್ನು ನಾನು ವಿಶೇಷವಾಗಿ ಆನಂದಿಸಿದೆ. (ಮಾರ್ಚ್ 8, 1993) ನಾವು ನಮ್ಮ ಕಾರ್ಡುಗಳನ್ನು ನಾಶಪಡಿಸಿದ ಬಳಿಕವೂ, ಅದನ್ನು ಸಂದಾಯಮಾಡಲು ದೀರ್ಘಾವಧಿಯನ್ನು ತೆಗೆದುಕೊಂಡ, ನಿರುತ್ಸಾಹಗೊಳಿಸುವ ಒಂದು ಕ್ರೆಡಿಟ್ ಕಾರ್ಡ್ ಸಾಲದಲ್ಲಿದ್ದೇನೆಂದು ಕೆಲವು ವರ್ಷಗಳ ಹಿಂದೆ ನನ್ನ ಹೆಂಡತಿ ಮತ್ತು ನಾನು ಸ್ವತಃ ಕಂಡುಕೊಂಡೆವು. ಆದಾಗ್ಯೂ, ನಮ್ಮ ಅನುಕೂಲಕ್ಕಾಗಿ ನಾವು ಇತ್ತೀಚೆಗೆ ಒಂದು ಹೊಸ ಕಾರ್ಡನ್ನು ಪಡೆದುಕೊಂಡೆವು. ಅದನ್ನು ಈ ಸಮಯದಲ್ಲಿ ದುರುಪಯೋಗಿಸದಂತೆ ನಿರ್ಣಯಿಸಲಿಕ್ಕಾಗಿ, ಪ್ಲ್ಯಾಸ್ಟಿಕ್ ಹಣ ಮತ್ತು ಅದರ ಅಪಾಯಗಳ ಕುರಿತಾದ ನಿಮ್ಮ ಕಾಲೋಚಿತವಾದ ಜ್ಞಾಪನಗಳು ನಮಗೆ ಸಹಾಯ ಮಾಡಿವೆ.
ಎಮ್. ಬಿ. ಮತ್ತು ಡಿ. ಬಿ., ಅಮೆರಿಕ
ಸಂಸರ್ಗ “ವಿವಾಹದಲ್ಲಿ ಸಂಸರ್ಗ” ಎಂಬ ಸರಣಿಗಳನ್ನು ಒಳಗೊಂಡಿರುವ ಜನವರಿ 22, 1994ರ ಸಂಚಿಕೆಯನ್ನು ನಾನು ಈ ದಿನ ಪಡೆದುಕೊಂಡೆ. ನಾನು ಈ ಮುಂಚೆ ಓದಿದ ಲೇಖನಗಳಲ್ಲಿ ಅತ್ಯುತ್ತಮವಾದ ಸರಣಿಗಳು ಇವುಗಳಾಗಿರುವುದು ತೀರ ಸಂಭವನೀಯ. ಒಂದೂವರೆ ವರ್ಷದಿಂದ ನನ್ನ ಗಂಡ ಮತ್ತು ನಾನು ವಿವಾಹಿತರಾಗಿದ್ದೇವೆ. ನಾವು ತುಂಬಾ ಒಳ್ಳೆಯ ಸಂಬಂಧವನ್ನು ಹೊಂದಿದ್ದೇವೆ ಮತ್ತು ಹೆಚ್ಚು ಸಂತೋಷದಿಂದಿದ್ದೇವೆ, ಆದರೂ ಆಗಾಗ ಅಸಂಸರ್ಗವು ಸಂಭವಿಸುತ್ತದೆ. ಇದು ಯಾಕೆ ಸಂಭವಿಸುತ್ತದೆ ಎಂಬುದರ ಕುರಿತು ಕೆಲವು ಅತ್ಯುತ್ತಮವಾದ ಒಳನೋಟಗಳನ್ನು ಎಚ್ಚರ!ವು ಒದಗಿಸಿತು. ಆ ಲೇಖನಗಳನ್ನು ಮೂರನೆಯ ಬಾರಿ ನಾನು ಓದಲು ಆರಂಭಿಸುವಾಗ, ಅಂತಹ ಸಮಯೋಚಿತವಾದ ಸಮಾಚಾರವನ್ನು ಪ್ರಕಾಶಿಸುತ್ತಿರುವುದಕ್ಕಾಗಿ ಯೆಹೋವನಿಗೆ ಮತ್ತು ನಿಮಗೆ ಉಪಕಾರವನ್ನು ನಾನು ಹೇಳುವಂತೆ ಬಿಡಿರಿ.
ಸಿ. ಎಮ್., ಅಮೆರಿಕ
ಒಬ್ಬ ಕ್ರೈಸ್ತ ಹಿರಿಯನು ಮತ್ತು ಪೂರ್ಣ ಸಮಯದ ಸೌವಾರ್ತಿಕನೋಪಾದಿ ನನ್ನ ಗಂಡನು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾನೆ. ಹಾಗಿದ್ದರೂ, ನಾವು ವಿವಾಹವಾದಂದಿನಿಂದಲೂ ನಮ್ಮ ಮಧ್ಯೆ ಸಂಸರ್ಗ ಅಂತರವಿತ್ತು ಮತ್ತು ಇಕ್ಕಟ್ಟಿನ ಕ್ಷಣಗಳನ್ನು ನಾವು ಅನುಭವಿಸಿದ್ದೆವು. ಈ ಲೇಖನಗಳು ಸಮಸ್ಯೆಯ ಕಾರಣಗಳನ್ನು ನಮಗೆ ಬಹಿರಂಗವಾಗಿ ತೋರಿಸಿವೆ. ನಮ್ಮ ಸಂಬಂಧವನ್ನು ಪ್ರಗತಿಗೊಳಿಸುವಂತೆ ಅವು ನಮಗೆ ಸಹಾಯಮಾಡುವುವು ಎಂದು ನಾವು ಭರವಸೆಯಿಂದಿದ್ದೇವೆ.
ಸಿ. ಎ., ಜಪಾನ್
“ಪ್ಯಾಮ್‌ಳ” ಪ್ರತಿಕ್ರಿಯೆಗಳನ್ನು ಓದುವ ಮೂಲಕ, ನಾನು ನನ್ನ ಭಾವನೆಗಳನ್ನು ಇನ್ನೂ ಉತ್ತಮವಾಗಿ ವಿವರಿಸಲಾರೆ ಎಂದು ನಾನು ಗ್ರಹಿಸಿದೆ. ನನ್ನ ಗಂಡ ಮತ್ತು “ಜೆರಿ”ಯ ಕುರಿತೂ ಅದನ್ನೇ ಹೇಳಸಾಧ್ಯವಿದೆ. ಕೇವಲ ಪರಿಣಾಮಗಳಿಗೆ ಬದಲಾಗಿ, ಕಾರಣವನ್ನು ಪರಿಹರಿಸುವಂತೆ ಈ ಲೇಖನವು ಸಹಾಯಮಾಡುತ್ತದೆ. ಈ ಪ್ರಾಮುಖ್ಯವಾದ ವಿಷಯವನ್ನು ಲೇಖನಗಳು ಪ್ರಸ್ತುತಪಡಿಸುವ ಆಕರ್ಷಣೀಯ ವಿಧಾನದಿಂದ ಸಹ ನಾನು ಪ್ರಚೋದಿಸಲ್ಪಟ್ಟೆ.
ಇ. ಎಫ್., ಇಟೆಲಿ
ನಾನು ಈಗ ಕೇವಲ 17 ವರ್ಷದವಳು, ಇನ್ನೂ ಕೆಲವು ವರ್ಷಗಳ ವರೆಗೆ ನಾನು ವಿವಾಹವಾಗಲು ಅಪೇಕ್ಷಿಸುವುದಿಲ್ಲವಾದರೂ, ಅವರು ಮಾಡುವ ರೀತಿಯಲ್ಲಿ ಯಾಕೆ ಜನರು ವರ್ತಿಸುತ್ತಾರೆ ಎಂಬುದರ ಕುರಿತಾದ ಈ ಒಳ ನೋಟವನ್ನು ನಾನು ಇನ್ನೂ ಮಹತ್ತರವಾಗಿ ಗಣ್ಯಮಾಡಿದೆ. ತದನಂತರದ ಕೆಲವು ವರ್ಷಗಳಲ್ಲಿ ಕ್ರಮವಾಗಿ ಓದಲಿಕ್ಕಾಗಿ ಈ ಲೇಖನವನ್ನು ಜೋಪಾನವಾಗಿರಿಸಲು ನಾನು ಯೋಜಿಸುತ್ತಿದ್ದೇನೆ. ನಾನು ವಿವಾಹವಾಗಲು ಸಿದ್ಧಳಾದಾಗ ವಿಶೇಷವಾಗಿ ಇದರ ಅಗತ್ಯ ನನಗಿರುವುದು!
ಎನ್. ಬಿ., ಅಮೆರಿಕ
ನನ್ನ ತಂದೆ ಬಹುಮಟ್ಟಿಗೆ “ಜೆರಿ”ಯಂತಿದ್ದಾರೆ. ಆದರೆ ಮೌನವನ್ನು ಆಶ್ರಯಿಸುವಾಗ ಮತ್ತು ನನ್ನೊಂದಿಗೆ ಮಾತಾಡದಿರುವಾಗ, ಅದು ಅವರ ಹಕ್ಕಾಗಿದೆಯೆಂದು ನಾನು ಈಗ ಗ್ರಹಿಸುತ್ತೇನೆ. ಲೇಖನವು ಜ್ಞಾನೋದಯವನ್ನುಂಟುಮಾಡುವಂಥದ್ದಾಗಿದ್ದರೂ, ಅವರು ಮಾಡುತ್ತಿರುವುದು ಸರಿಯಾಗಿದೆ ಎಂಬುದನ್ನು ದೃಢಪಡಿಸಲು ಅವರು ಈ ಲೇಖನವನ್ನು ಉಪಯೋಗಿಸುವರೆಂದು ನಾನು ಭಯಪಡುತ್ತೇನೆ.
ಎ. ಬಿ., ಅಮೆರಿಕ
ಪುರುಷರು ಮತ್ತು ಸ್ತ್ರೀಯರು ನಿರ್ದಿಷ್ಟ ವಿಧಗಳಲ್ಲಿ ಅಭಿಪ್ರಯಿಸುವ ಮತ್ತು ವರ್ತಿಸುವ ಪ್ರವೃತ್ತಿಯುಳ್ಳವರಾಗಿದ್ದಾರೆಂದು ಓದುಗರು ಗ್ರಹಿಸುವಂತೆ ಸಹಾಯಮಾಡಲಿಕ್ಕಾಗಿ ಈ ಲೇಖನಗಳು ಪ್ರಯತ್ನಿಸಿದವು. ಆದಾಗ್ಯೂ, ಪುರುಷರಾಗಲಿ ಸ್ತ್ರೀಯರಾಗಲಿ ಅಸಂಸರ್ಗದ ಅಥವಾ ಅಸಂಗತವಾದ ನಡವಳಿಕೆಗೆ ಹೇಗೊ ಒಂದು ಹಕ್ಕನ್ನು ಹೊಂದಿದ್ದಾರೆ ಎಂದು ಅಭಿಪ್ರಯಿಸುವುದನ್ನು ನಾವು ಅರ್ಥೈಸಲಿಲ್ಲ. ತಂದೆಗಳು ‘ತಮ್ಮ ಮಕ್ಕಳನ್ನು ಮನಗುಂದಿಸುವುದನ್ನು’ ತೊರೆಯುವಂತೆ ಶಾಸ್ತ್ರವಚನಗಳು ಉತ್ತೇಜಿಸುತ್ತವೆ. (ಕೊಲೊಸ್ಸೆ 3:21) ಮಕ್ಕಳಿಗೆ ಹೆತ್ತವರ ಮಾರ್ಗದರ್ಶನ ಅಗತ್ಯವಿರುವಾಗ ಮತ್ತು ಮಕ್ಕಳು ಬಯಸುವಾಗ, ಅವಿವೇಕದಿಂದ ದೀರ್ಘ ಕಾಲಾವಧಿಯ ಮೌನದಲ್ಲಿ ಲೋಲುಪರಾಗಿರುವುದನ್ನು ವರ್ಜಿಸಲು ಇದು ಸಾಧ್ಯಮಾಡುತ್ತದೆ.—ಸಂ.
ಈ ಲೇಖನಗಳ ಕುರಿತಾದ ಸಕಾರಾತ್ಮಕ ಹೇಳಿಕೆಗಳಿಂದ ಪತ್ರಗಳು ಹೇರಳವಾಗಿ ಬರುತ್ತಿರಬೇಕೆಂದು ನನಗೆ ವಿಶ್ವಾಸವಿದೆ. ದಯಮಾಡಿ ನನ್ನ ಹೇಳಿಕೆಗಳನ್ನೂ ಕೂಡಿಸಿರಿ. “ಜೆರಿ” ಮತ್ತು “ಪ್ಯಾಮ್”ರ ಕುರಿತಾದ ಲೇಖನದಲ್ಲಿ ನೀವು ನನ್ನ ಮತ್ತು ನನ್ನ ಹೆಂಡತಿಯ ಹೆಸರನ್ನು ಬದಲಿಯಾಗಿ ಇಡಬಹುದಿತ್ತು. ನನ್ನ ಹೆಂಡತಿಯ ಭಾವನೆಗಳನ್ನು ನಾನು ಗ್ರಹಿಸಬಹುದಾಗಿತ್ತೆಂದು ನಾನು ಎಷ್ಟೊಂದು ಹಾರೈಸುತ್ತೇನೆ! ನಾನು “ಜೆರಿ”ಯಂತೆಯೇ ಅವಳ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತಿದ್ದೆ, ಆದರೆ ನಾನು ಅಪೇಕ್ಷಿಸುವಂತೆ ಮಾಡುವ ಮೂಲಕ ನನ್ನ ಸ್ವಂತ ಅಗತ್ಯಗಳನ್ನು ನಾನು ಪೂರೈಸಿದೆ. ಈಗ 20 ವರ್ಷಗಳಿಂದ ನನ್ನ ಹೆಂಡತಿಯು ನನ್ನನ್ನು ವಿಚ್ಛೇದಿಸಿದ್ದಾಳೆ. ಬಹುಶಃ ಈ ಲೇಖನಗಳಿಂದ ನನ್ನ ಹೆಂಡತಿಯ ಹೃದಯವು ಸ್ಪರ್ಶಿಸಲ್ಪಡುವುದು, ಮತ್ತು ನಮ್ಮ ವಿವಾಹವನ್ನು ಪುನಃ ನಿರ್ಮಿಸಲು ನಾವು ಪ್ರಯತ್ನಿಸಬಲ್ಲೆವು.
ಜೆ. ಕೆ., ಅಮೆರಿಕ