ಯುವ ಜನರು ಪ್ರಶ್ನಿಸುವುದು . . .
ಅವಿವಾಹಿತ ತಾಯಂದಿರು ತಮ್ಮ ಸನ್ನಿವೇಶವನ್ನು ಅತ್ಯುತ್ತಮವಾದ ವಿಧದಲ್ಲಿ ಹೇಗೆ ನಿರ್ವಹಿಸಬಲ್ಲರು?
ಲಿಂಡಳ ಭಾವಾವೇಶಗಳು ಆಘಾತ, ನಿರಾಕರಣೆ, ಭಯ, ಕೋಪ, ಆಶಾರಹಿತತೆ, ಮತ್ತು ನಿರಾಶೆಯನ್ನು ಒಳಗೊಂಡಿದ್ದವು.a ಅವಳ ವಿಪರೀತ ಭಯವನ್ನು ಗರ್ಭಧಾರಣೆಗಾಗಿರುವ ವೈದ್ಯಕೀಯ ಪರೀಕ್ಷೆ ದೃಢಪಡಿಸಿತ್ತು—ಅವಳು ಮೂರು ತಿಂಗಳ ಗರ್ಭಿಣಿಯಾಗಿದ್ದಳು. ಅವಿವಾಹಿತೆ ಮತ್ತು ಕೇವಲ 15 ವರ್ಷ ಪ್ರಾಯದವಳಾದ ಲಿಂಡ, ಪ್ರತಿ ವರ್ಷ ಅಮೆರಿಕದಲ್ಲಿ ಗರ್ಭಧರಿಸುವ ಒಂದು ಲಕ್ಷ ಹದಿವಯಸ್ಸಿನವರಲ್ಲಿ ಕೇವಲ ಒಬ್ಬಳಾಗಿದ್ದಾಳೆ. ಆದರೂ, ಹದಿವಯಸ್ಕರ ಗರ್ಭಧಾರಣೆಯು, ಎಲ್ಲಾ ಕುಲಸಂಬಂಧವಾದ ಮತ್ತು ಸಾಮಾಜಿಕಾರ್ಥಿಕ ಗುಂಪುಗಳನ್ನು ಒಳಗೊಂಡ, ಒಂದು ಭೌಗೋಲಿಕ ಸಮಸ್ಯೆಯಾಗಿದೆ.
ಗರ್ಭಧಾರಣೆಯು ತಮ್ಮನ್ನು ಒಂದು ಅಸಂತೋಷಿತ ಮನೆಯ ಜೀವಿತದಿಂದ ಕಾಪಾಡುವುದೆಂದು ಯಾ ಒಬ್ಬ ಪ್ರಣಯಸ್ನೇಹಿತನೊಂದಿಗೆ ಒಂದು ಸಂಬಂಧವನ್ನು ಭದ್ರಪಡಿಸುವುದೆಂದು ಕೆಲವು ಹದಿವಯಸ್ಕ ಹುಡುಗಿಯರು ಭಾವಿಸುತ್ತಾರೆ. ಇತರರು ಒಂದು ಮಗುವನ್ನು ಸ್ಥಾನಮಾನದ ಚಿಹ್ನೆಯೋಪಾದಿ ಯಾ ತಮ್ಮದೇ ಆದ ಸ್ವಂತದ್ದನ್ನು ಹಿಡಿದುಕೊಂಡು ಪ್ರೀತಿಸಲಿಕ್ಕಾಗಿರುವ ವಸ್ತುವೆಂದು ವೀಕ್ಷಿಸುತ್ತಾರೆ. ಆದರೆ, ಒಂಟಿ ಜನ್ಮದಾತೃತದ್ವ ಕಟು ನಿಜತ್ವವು, ಬೇಗನೆ ಅಂಥ ಕಾಲ್ಪನಿಕ ಭಾವನೆಗಳನ್ನು ಹೋಗಲಾಡಿಸುತ್ತದೆ. ಒಬ್ಬ ಅವಿವಾಹಿತ ತಾಯಿ ಕಷ್ಟಕರವಾದ, ಆಗಾಗ ವ್ಯಥೆಗೊಳಿಸುವಂಥ ಆಯ್ಕೆಗಳನ್ನು ಮಾಡುವಂತೆ ಒತ್ತಾಯಿಸಲ್ಪಡುತ್ತಾಳೆ. ಆರ್ಥಿಕ ಸಮಸ್ಯೆಗಳು, ಭಾವಾವೇಶದ ನಿರಾಶೆ, ಒಂಟಿತನ ಮತ್ತು ಒಬ್ಬ ಸಂಗಾತಿಯಿಲ್ಲದೆ ಮಗುವನ್ನು ಪೋಷಿಸಬೇಕಾಗಿರುವ ಒತ್ತಡಗಳೊಂದಿಗೆ ಸಹ ಅವಳು ಹೋರಾಡಬಹುದು. ಹಾಗಾದರೆ ಸದುದ್ದೇಶದಿಂದ, ನಮ್ಮ ಸೃಷ್ಟಿಕರ್ತನು ಮದುವೆಯ ಮುಂಚಿನ ಲೈಂಗಿಕತೆಯನ್ನೂ ಒಳಗೊಂಡು, “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ” ಎಂದು ಕ್ರೈಸ್ತರಿಗೆ ಆಜ್ಞಾಪಿಸುತ್ತಾನೆ.—1 ಕೊರಿಂಥ 6:18; ಯೆಶಾಯ 48:17.
ಲೈಂಗಿಕ ಅನೈತಿಕತೆಯು ಯೆಹೋವನ ಸಾಕ್ಷಿಗಳ ನಡುವೆ ಸೈರಿಸಲ್ಪಡುವುದಿಲ್ಲ. (1 ಕೊರಿಂಥ 5:11-13) ಆದರೂ, ಅವರ ನಡುವೆ ಯುವ ಅವಿವಾಹಿತ ತಾಯಂದಿರು ಇದ್ದಾರೆ. ದೇವರ ಮಟ್ಟಗಳನ್ನು ಕಲಿಯುವ ಮುಂಚೆ ಕೆಲವರು ಗರ್ಭಿಣಿಯಾದರು. ಇತರರು ಕ್ರೈಸ್ತರೋಪಾದಿ ಬೆಳಸಲ್ಪಟ್ಟರು, ಆದರೆ ಅನೈತಿಕತೆಯೊಳಗೆ ಬಿದ್ದರು. ಕೆಲವರು, ಸಭೆಯ ಮೂಲಕ ಶಿಸ್ತುಗೊಳಿಸಲ್ಪಟ್ಟ ಕಾರಣ, ತಮ್ಮ ತಪ್ಪುಗಳಿಗಾಗಿ ಪಶ್ಚಾತಪ್ತಡುತ್ತಾರೆ. ಅಂಥ ಯುವಜನರಿಗಾಗಿ ಯಾವ ಸಹಾಯ ಮತ್ತು ಮಾರ್ಗದರ್ಶನೆಯನ್ನು ದೇವರ ವಾಕ್ಯವು ನೀಡುತ್ತದೆ?b
ನಾನು ನನ್ನ ಮಗುವಿನ ತಂದೆಯನ್ನು ವಿವಾಹವಾಗಬೇಕೋ?
ಗರ್ಭಪಾತವು ದೇವರ ನಿಯಮಕ್ಕೆ ವಿರುದ್ಧವಾಗಿದೆ ಎಂದು ಬೈಬಲು ಸ್ಪಷ್ಟೀಕರಿಸುತ್ತದೆ. (ವಿಮೋಚನಕಾಂಡ 20:13; ಹೋಲಿಸಿ ವಿಮೋಚನಕಾಂಡ 21:22, 23; ಕೀರ್ತನೆ 139:14-16.) ಮಗುವಿನ ಗರ್ಭಧಾರಣೆಯ ಅನಪೇಕ್ಷಣೀಯ ಪರಿಸ್ಥಿತಿಗಳ ಹೊರತೂ, ಒಬ್ಬ ಒಂಟಿ ತಾಯಿಗೆ ತನ್ನ ಮಗುವನ್ನು ಪೋಷಿಸುವ ಜವಾಬ್ದಾರಿಯಿದೆ ಎಂದು ಸಹ ಅದು ಕಲಿಸುತ್ತದೆ. (1 ತಿಮೊಥೆಯ 5:8) ಅನೇಕ ವಿದ್ಯಮಾನಗಳಲ್ಲಿ, ಮಗುವನ್ನು ದತ್ತು ಕೊಡುವುದರ ಬದಲಾಗಿ ಸ್ವತಃ ತಾಯಿಯೇ ಮಗುವನ್ನು ಬೆಳಸುವುದು ಅತ್ಯುತ್ತಮವಾಗಿದೆ.c
ಒಂದು ಮಗುವನ್ನು ಸ್ವತಃ ತಾವು ಬೆಳೆಸುವುದರಲ್ಲಿ ಇರುವ ಕಷ್ಟಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಕೆಲವು ತಾಯಂದಿರು ಮಗುವಿನ ತಂದೆಯನ್ನು ವಿವಾಹವಾಗುವದು ವಿವೇಕವುಳ್ಳದೆಂದು ನೆನಸಬಹುದು. ಆದರೆ ಅನೇಕ ಹದಿವಯಸ್ಕ ತಂದೆಯರಿಗೆ ಮಗು ಯಾ ಅದರ ತಾಯಿಯ ಕಡೆಗೆ ಬಹು ಮಟ್ಟಿಗೆ ಹಂಗಿನ ಭಾವನೆಯಿರುವುದಿಲ್ಲ. ಇದಲ್ಲದೆ, ಸಾಮಾನ್ಯವಾಗಿ ಯುವ ತಂದೆಯರು ಇನ್ನೂ ಶಾಲಾ ವಯಸ್ಕರು ಮತ್ತು ಉದ್ಯೋಗರಹಿತರು ಆಗಿದ್ದಾರೆ. “ವಿವಾಹಬಂಧದ ಹೊರಗಿನ ಜನನವನ್ನು ತಡೆಯುವದಕ್ಕಾಗಿ ಮಾತ್ರ ಕೈಗೊಂಡ ಒಂದು ಅಸ್ಥಿರವಾಗಿರುವ ಸಂಭವನೀಯ ವಿವಾಹ”ವೆಂದು ಯಾವುದನ್ನು ಒಬ್ಬ ಸಂಶೋಧಕನು ಕರೆಯುತ್ತಾನೋ ಅದರಲ್ಲಿ ಒಳಗೂಡುವುದು ಒಂದು ಕೆಟ್ಟ ಪರಿಸ್ಥಿತಿಯನ್ನು ಇನ್ನೂ ತೀರಾ ಕೆಟ್ಟದ್ದಾಗಿ ಮಾತ್ರವೇ ಮಾಡಬಹುದು. ಕ್ರೈಸ್ತರು “ಕ್ರಿಸ್ತನಲ್ಲಿ ಮಾತ್ರವೇ” ವಿವಾಹವಾಗಬೇಕು ಎನ್ನುವ ಬೈಬಲಿನ ಮಾರ್ಗದರ್ಶನೆಯನ್ನೂ ಜ್ಞಾಪಿಸಿಕೊಳ್ಳಿರಿ. (1 ಕೊರಿಂಥ 7:39, NW.) ಇದನ್ನು ಗ್ರಹಿಸಿದ, ಲಿಂಡ (ಆರಂಭದಲ್ಲಿ ಉಲ್ಲೇಖಿಸಲ್ಪಟ್ಟವಳು) ತನ್ನ ಮಗುವಿನ 18 ವರ್ಷ ಪ್ರಾಯದ ತಂದೆಯನ್ನು ವಿವಾಹವಾಗುವುದರ ವಿರುದ್ಧ ನಿರ್ಣಯಿಸಿದಳು. ಅವಳು ವಿವರಿಸುವುದು: “ಅವನಿಗೆ ದೇವರಲ್ಲಿ ಯಾ ಬೈಬಲಿನಲ್ಲಿ ಆಸಕ್ತಿಯಿರಲಿಲ್ಲ.”
ಇದು ಆ ಯುವ ತಂದೆಯನ್ನು ಸಂಪೂರ್ಣವಾಗಿ ಅಲಕ್ಷಿಸಬೇಕೆಂದು ಅರ್ಥೈಸುವುದಿಲ್ಲ. ಚಿಕ್ಕ ಮಗುವು ಕ್ರಮೇಣ ದೊಡ್ಡವನಾಗುವಾಗ, ಜನ್ಮಕೊಟ್ಟ ತನ್ನ ತಂದೆಯ ಕುರಿತು ತಿಳಿಯಲು ಬಯಸಬಹುದು. ಅಥವಾ ಯುವ ತಂದೆ ಯಾ ಅವನ ಹೆತ್ತವರು ಮಗುವಿನೊಂದಿಗೆ ಸಂಬಂಧ ಹೊಂದಿರಲು ಅಥವಾ ಆರ್ಥಿಕ ನೆರವನ್ನು ಒದಗಿಸಲು ತಮಗೆ ತುಸು ನೈತಿಕ ಹಂಗಿದೆ ಎಂದು ನೆನಸಬಹುದು. ಆದರೂ, ಒಬ್ಬ ಹುಡುಗಿಯ ಹೆತ್ತವರು ಇನ್ನು ಮುಂದೆ ಆ ಯೌವನಸ್ಥನೊಡನೆ ಅವಳು ಸಂಪರ್ಕವನ್ನಿಟ್ಟುಕೊಳ್ಳದೆ ಇರುವುದನ್ನು ಇಚ್ಛಿಸಬಹುದು. (1 ಥೆಸಲೊನೀಕ 4:3) ಆದರೂ, ಕೆಲವು ದೇಶಗಳಲ್ಲಿ, ಕೋರ್ಟುಗಳು ವಿವಾಹಿತ ತಂದೆಗಳಿಗಿರುವಂಥ ಕಾನೂನು ಸಮ್ಮತವಾದ ಹಕ್ಕನ್ನು ಜನ್ಮಕೊಟ್ಟ ಅವಿವಾಹಿತ ತಂದೆಯರಿಗೆ ಅನುಮತಿಸಿವೆ. ಆದುದರಿಂದ ಅವಿವಾಹಿತ ತಂದೆ ಮತ್ತು ಅವನ ಕುಟುಂಬದವರೊಂದಿಗೆ ಒಂದು ವಿನಯಪೂರ್ವಕ ಸಂಬಂಧವನ್ನು ಉಳಿಸಿಕೊಂಡು ಬರುವುದರಿಂದ ಅಧೀನತ್ವದ ಒಂದು ಕಹಿ ಹೋರಾಟವನ್ನು ತಪ್ಪಿಸಬಹುದು.d ಯುವ ತಂದೆಯೊಂದಿಗೆ ಸ್ವಲ್ಪ ಸಂಪರ್ಕವು ಆವಶ್ಯಕವಿರುವುದಾದರೂ, ಇದು ಒಂದು ಭಾವೂದ್ರೇಕದ ಯಾ ಸಂಭಾವ್ಯ ನೈತಿಕ ಒಪ್ಪಂದದ ಪರಿಸ್ಥಿತಿಯಾಗಬಾರದು. ಸಾಮಾನ್ಯವಾಗಿ ಪ್ರೌಢ ಮೇಲ್ವಿಚಾರಣೆಯು ಉಚಿತವಾಗಿದೆ.
ಸಹಾಯವನ್ನು ಪಡೆದುಕೊಳ್ಳುವುದು
ಸರ್ವೈವಿಂಗ್ ಟೀನ್ ಪ್ರೆಗ್ನೆನ್ಸಿ ಎನ್ನುವ ಪುಸ್ತಕ ಹೇಳುವುದು: “ನಿಮ್ಮ ಮಗುವನ್ನು ಇಟ್ಟುಕೊಂಡು ಬೆಳಸಲು ನೀವು ನಿರ್ಧರಿಸುವಾಗ, ತತ್ಕ್ಷಣ ಪ್ರಾಯಸ್ಥರಾಗುವ ಆಯ್ಕೆ ನೀವು ಮಾಡುತ್ತೀರಿ. . . . ಹೆಚ್ಚು ನಿಶ್ಚಿಂತತೆ, ಸ್ವಲ್ಪವೇ ಜವಾಬ್ದಾರಿಗಳನ್ನು ಯಾ ಹಂಗುಗಳನ್ನು ಹೊಂದಿದ ತಮ್ಮದೇ ಆದ ಒಂದು ಭಾಗವನ್ನು ಹಿಂದಕ್ಕೆ ಬಿಡಲು ನೀವು ಆಯ್ಕೆ ಮಾಡುತ್ತೀರಿ.” ಹೀಗೆ ಒಬ್ಬ ಹದಿಪ್ರಾಯದ ಹೆತ್ತವಳಿಗೆ ಸಹಾಯ ಮತ್ತು ಬೆಂಬಲದ ಅಗತ್ಯವಿದೆ. ಒಬ್ಬ ಎದೆಗುಂದಿದ ಯುವ ತಾಯಿ ತನ್ನ ಶಿಶು ಆರೈಕೆಯ ಕುಶಲತೆಗಳಲ್ಲಿ ಭರವಸೆಯನ್ನು ಬೆಳೆಸಲು (ಸಾರ್ವಜನಿಕ ಗ್ರಂಥಾಲಯದಲ್ಲಿ ಸುಗಮ್ಯವಾಗಿ ಸಿಗಬಹುದಾದ) ಸಂಬಂಧಿಸಿದ ವೈದ್ಯಕೀಯ ಸಾಹಿತ್ಯವನ್ನು ಓದುವುದು ಹೆಚ್ಚಿನ ಸಹಾಯವನ್ನು ನೀಡಬಹುದು.
ವಿಶೇಷವಾಗಿ ಹೆತ್ತವರ ಬೆಂಬಲವು ಅಮೂಲ್ಯವುಳ್ಳದ್ದಾಗಿದೆ. ಮಗುವನ್ನು ಬೆಳೆಸುವ ವ್ಯವಹಾರ ಜ್ಞಾನದಲ್ಲಿ ಒಬ್ಬರ ತಾಯಿಯು ತಿಳಿವಳಿಕೆಯ ಒಂದು ಅಮೂಲ್ಯ ಮೂಲವಾಗಿರಬಹುದು. ನಿಜ, ಸಹಾಯಕ್ಕಾಗಿ ಕೇಳುವುದು ಸುಲಭವಾಗಿರಲಿಕ್ಕಿಲ್ಲ. ಒಬ್ಬ ಹುಡುಗಿಯ ಹೆತ್ತವರು ಇನ್ನೂ ನೋವು ಮತ್ತು ಕೋಪವನ್ನು ಹೊಂದಿದವರಾಗಿರಬಹುದು. ಗರ್ಭಧಾರಣೆಯು ತಮ್ಮ ಸ್ವಂತ ಜೀವನ ಶೈಲಿಯ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವ ಭಯ ಸಹ ಅವರಿಗೆ ಇರಬಹುದು. 17 ವರ್ಷ ಪ್ರಾಯದ ಡಾನ ಜ್ಞಾಪಿಸಿಕೊಳ್ಳುವುದು: “ನನ್ನ ಹೆತ್ತವರು ಕ್ಷೋಭೆಗೊಂಡಿದ್ದರು ಯಾಕೆಂದರೆ ಅವರು ಮಾಡಲಪೇಕ್ಷಿಸಿದ ಈ ಎಲ್ಲಾ ಚಟುವಟಿಕೆಗಳು ಅವರಿಗಿದ್ದವು. ಈ ಮಗುವನ್ನು ನಾನು ಹೆತ್ತಿರುವುದರಿಂದ ಅವರ ಚಟುವಟಿಕೆಗಳು ಪ್ರತಿಬಂಧಿಸಲ್ಪಡುತ್ತವೆಂದು ಅವರೀಗ ಹೇಳುತ್ತಾರೆ.” ಸಕಾಲದಲ್ಲಿ ಅಧಿಕಾಂಶ ಹೆತ್ತವರು ತಮ್ಮ ಸಂಕಟಭರಿತ ಭಾವಾವೇಶಗಳನ್ನು ಜಯಿಸಲು ಪ್ರಯತ್ನಿಸುತ್ತಾರೆ ಮತ್ತು ಕೆಲವೊಂದು ವಿಧದಲ್ಲಿ ಸಹಾಯ ನೀಡಲು ಮನಸ್ಸುಳ್ಳವರಾಗುತ್ತಾರೆ. ಪಶ್ಚಾತ್ತಾಪ ಪಟ್ಟಿರುವ ಯುವತಿಯೊಬ್ಬಳು ತನ್ನ ನಿಮಿತ್ತ ಆದ ನೋವನ್ನು ಒಪ್ಪಿಕೊಳ್ಳುವುದರ ಮೂಲಕ ಮತ್ತು ಒಂದು ಪ್ರಾಮಾಣಿಕ ಕ್ಷಮೆಯಾಚನೆಯನ್ನು ಕೇಳುವುದರ ಮೂಲಕ, ಉದ್ವೇಗಗಳನ್ನು ಶಮನಗೊಳಿಸಲು ಹೆಚ್ಚಿನದನ್ನು ಮಾಡಸಾಧ್ಯವಿದೆ.—ಹೋಲಿಸಿ ಲೂಕ 15:21.
ಹುಡುಗಿಯ ಹೆತ್ತವರು ಸಹಾಯವನ್ನು ನೀಡಲು ನಿರಾಕರಿಸಿದರೆ ಯಾ ಅವಳು ತಮ್ಮೊಂದಿಗೆ ಜೀವಿಸುವುದನ್ನು ಮುಂದುವರಿಸುವುದರ ಕುರಿತು ಅನುಮತಿಸಲು ಕೇವಲ ಅಸಮರ್ಥರಾಗಿದ್ದರೆ ಆಗೇನು? ಸಾರ್ವಜನಿಕ ನೆರವು ಒದಗಿಸಲ್ಪಡುವ ದೇಶಗಳಲ್ಲಿ, ಒಬ್ಬ ಅವಿವಾಹಿತ ತಾಯಿಗೆ ಆರಂಭದಲ್ಲಿಯಾದರೂ ಅದರಿಂದ ಪ್ರಯೋಜನ ಪಡೆಯದ ಹೊರತು ಇನ್ನಾವ ಆಯ್ಕೆಗಳೂ ಇಲ್ಲದಿರಬಹುದು. ಬೈಬಲು ಅಂಥ ಒದಗಿಸುವಿಕೆಗಳನ್ನು ಉಪಯೋಗಿಸಿಕೊಳ್ಳುವಂತೆ ಕ್ರೈಸ್ತರನ್ನು ಅನುಮತಿಸುತ್ತದೆ. ಆದರೂ, ಇದು ಒಂದು ಕಟ್ಟುನಿಟ್ಟಾದ ಆಯವ್ಯಯದ ಮೇಲೆ ಜೀವಿಸುವುದನ್ನು ಅರ್ಥೈಸುತ್ತದೆ. 17 ವರ್ಷ ಪ್ರಾಯದ ಶ್ಯಾರನ್ ಹೇಳುವುದು “ನನ್ನ ದೊಡ್ಡ ಸಮಸ್ಯೆಯು ಹಣವೆಂದು ತೋರುತ್ತದೆ, ಆಹಾರ ಮತ್ತು ನ್ಯಾಪ್ಕಿನ್ಗಳನ್ನು ಖರೀದಿಸಲು ನನಗೆ ಸಾಧ್ಯ, ಆದರೆ ನನ್ನ ಹಣ ಅಷ್ಟಕ್ಕೆ ಮುಗಿದುಹೋಗುತ್ತದೆ.” ಸಕಾಲದಲ್ಲಿ ಒಂದು ಹೊರಗಿನ ಕೆಲಸವನ್ನು ಮಾಡಲು ಸಾಧ್ಯವಾಗಬಹುದು. ತಾಯ್ತನ, ಕೆಲಸ, ಮತ್ತು ಆತ್ಮಿಕ ಚಟುವಟಿಕೆಗಳನ್ನು ಒಂದು ಸಮತೋಲನದ ವಿಧದಲ್ಲಿ ನಿರ್ವಹಿಸಲು ಪ್ರಯತ್ನಿಸುವುದು ಸುಲಭವಾಗಿರುವುದಿಲ್ಲ, ಆದರೆ ಇತರರು ಅದನ್ನು ನಿಭಾಯಿಸಲು ಶಕ್ತರಾಗಿದ್ದಾರೆ.
ಒಟ್ಟಾಗಿ ವಾಸಿಸುವುದರಲ್ಲಿ ವಿವೇಕ ಮತ್ತು ವಿವೇಚನೆಯನ್ನು ಉಪಯೋಗಿಸುವುದು
ಒಬ್ಬರ ಹೆತ್ತವರು ಒಪ್ಪುವುದಾದರೆ, ಸ್ವತಂತ್ರರಾಗಿ ಜೀವಿಸುವ ಸಾಹಸವನ್ನು ಮಾಡುವುದರ ಬದಲು ಹೆತ್ತವರೊಂದಿಗೆ ಜೀವಿಸುವುದರಲ್ಲಿ ನಿಜವಾಗಿಯೂ ಪ್ರಯೋಜನಗಳಿರಬಹುದು. ಮನೆಯಲ್ಲಿ ಜೀವಿಸುವುದು ಸಾಮಾನ್ಯವಾಗಿ ಕಡಮೆ ಖರ್ಚುಳ್ಳದ್ದಾಗಿದೆ. ಅಲ್ಲದೆ, ಚೆನ್ನಾಗಿ ಪರಿಚಿತವಾಗಿರುವ ಮನೆಯ ಪರಿಸರಗಳು ಸುರಕ್ಷೆಯ ಮತ್ತು ಭದ್ರತೆಯ ಒಂದು ಭಾವನೆಯನ್ನು ನೀಡಬಹುದು. ಮನೆಯಲ್ಲಿ ವಾಸಿಸುವುದು ಒಬ್ಬ ಹುಡುಗಿ ತನ್ನ ಶಾಲಾಶಿಕ್ಷಣವನ್ನು ಮುಂದುವರಿಸುವಂತೆ ಸಹ ಸಹಾಯ ಮಾಡಬಹುದು. ಮಾಧ್ಯಮಿಕ ಶಾಲೆಯಿಂದ ಪದವೀಧರಳಾಗುವ ಮೂಲಕ, ಒಬ್ಬ ಹುಡುಗಿ ದಾರಿದ್ರ್ಯದ ಒಂದು ಜೀವನವನ್ನು ತಪ್ಪಿಸಿಕೊಳ್ಳುವ ಅವಳ ಸಾಧ್ಯತೆಗಳನ್ನು ಹೆಚ್ಚು ಉತ್ತಮಗೊಳಿಸುತ್ತಾಳೆ.e
ಒಂದು ಮನೆ ಮೂರು ಸಂತತಿಗಳನ್ನು ಹೊಂದಿರುವಂಥದ್ದು ಒತ್ತಡವನ್ನು ಸೃಷ್ಟಿಸಸಾಧ್ಯವೆಂಬುದು ಮತ್ತು ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಶ್ರಮವಾಗಿರಸಾಧ್ಯವೆಂಬುದು ನಿಸ್ಸಂದೇಹ. ಆ ಒಂಟಿಗಳಾದ ತಾಯಿಯು ಸಂಕುಚಿತ ವಸತಿಯಲ್ಲಿ ವಾಸಿಸುವುದನ್ನು ನಿರ್ವಹಿಸಬೇಕಾಗಿರಬಹುದು. ಮಗುವಿನ ಅಳುವಿಕೆಯ ಮೂಲಕ ಆಗುವ ನಿದ್ರಾಭಂಗಕ್ಕೆ ಹೆತ್ತವರು ಮತ್ತು ಮಕ್ಕಳು ಹೊಂದಿಕೊಳ್ಳಬೇಕಾಗಿರಬಹುದು. ಕುಟುಂಬದ ದಿನಚರಿ ಅಡಿಗ್ಡೊಳ್ಳಬಹುದು. ಆದರೆ ಜ್ಞಾನೋಕ್ತಿ 24:3 ಹೇಳುವುದು: “ಮನೆಯನ್ನು ಕಟ್ಟುವುದಕ್ಕೆ ಜ್ಞಾನವೇ [ವಿವೇಕ, NW] ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ [ವಿವೇಚನೆ, NW] ಆಧಾರ;” ಹೌದು, ಸಂಬಂಧಪಟ್ಟ ಎಲ್ಲರೂ ನಿಸ್ವಾರ್ಥ ಪ್ರೀತಿಯನ್ನು ಮತ್ತು ಪರಿಗಣನೆಯನ್ನು ತೋರಿಸುವುದಾದರೆ, ಕುಟುಂಬದೊಳಗೆ ಘರ್ಷಣೆಯನ್ನು ಕಡಮೆ ಮಾಡಸಾಧ್ಯವಿದೆ.
ತನ್ನ ಸ್ವಂತ ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಆ ಯುವ ತಾಯಿಯು ಪ್ರಯತ್ನಿಸುವುದು ಮತ್ತು ಎಲ್ಲಾ ಕೆಲಸವನ್ನು ಅಜಿಯ್ಜು ಮಾಡುವಂತೆ ಎದುರು ನೋಡುವುದು ಸಹ ಸಮಸ್ಯೆಗಳನ್ನು ಹುಟ್ಟಿಸುತ್ತದೆ. (ಹೋಲಿಸಿ ಗಲಾತ್ಯ 6:5.) ಯಾ ಸದುದ್ದೇಶವುಳ್ಳ ಅಜ್ಜಿ ಕಾರ್ಯತಃ ಬಲಾತ್ಕಾರದಿಂದ ತನ್ನ ಮೊಮ್ಮಗುವಿನ ಆರೈಕೆಯನ್ನು ಮಾಡಬಹುದು. ಫೇಸಿಂಗ್ ಟೀನೇಜ್ ಪ್ರೆಗ್ನೆನ್ಸಿ ಎನ್ನುವ ಪುಸ್ತಕವು ವಿಶದಪಡಿಸುವುದು: “ಒಬ್ಬ ಅವಿವಾಹಿತ ಮಗಳ ಮಗುವನ್ನು ಅಜ್ಜಅಜ್ಜಿಯರು ತಮ್ಮ ಸ್ವಂತದ್ದೇ ಎನ್ನುವ ಹಾಗೆ ಬೆಳೆಸುವಾಗ ಕುಟುಂಬದ ಘರ್ಷಣೆಗೆ ಇದು ಕೂಡಿಸಬಹುದು ಮತ್ತು ನಿಜವಾದ ಹೆತ್ತವರು ಯಾರೆಂದು ತಿಳಿಯಲು ಮಗುವಿಗೆ ಗಲಿಬಿಲಿ ಉಂಟುಮಾಡಬಹುದು.” ಅಜ್ಜಅಜಿಯ್ಜರ ಸಹಾಯ ಮತ್ತು ಬೆಂಬಲ ಅತ್ಯಮೂಲ್ಯವಾಗಿರುವುದಾದರೂ, ಶಾಸ್ತ್ರವಚನಗಳು ಮಗುವನ್ನು ಬೆಳೆಸುವ ಜವಾಬ್ದಾರಿಯನ್ನು ಹೆತ್ತವರಿಗೆ ವಹಿಸುತ್ತದೆ. (ಎಫೆಸ 6:1, 4) ಆದುದರಿಂದ ತೆರೆದ ಸಂವಹನ ಮತ್ತು ಸಹಕಾರ, ವೈಮನಸ್ಸುಗಳನ್ನು ತಡೆಯಲು ಹೆಚ್ಚಿನದ್ದನ್ನು ಮಾಡಸಾಧ್ಯವಿದೆ.—ಜ್ಞಾನೋಕ್ತಿ 15:22.
ನೀವು ಏಕಾಂಗಿಯಾಗಿಲ್ಲ
ವಿವಾಹಬಂಧದ ಹೊರಗೆ ಒಂದು ಮಗುವನ್ನು ಹೊಂದಿರುವುದು ಕ್ಲಿಷ್ಟಕರವಾಗಿರುವುದಾದರೂ, ಇದು ಒಂದು ಆಶಾರಹಿತ ಪರಿಸ್ಥಿತಿಯಲ್ಲ. ತಮ್ಮ ತಪ್ಪುಗಳಿಗೆ ಯಾರು ಪಶ್ಚಾತ್ತಾಪ ಪಡುತ್ತಾರೋ ಅವರಿಗೆ ದೇವರು ‘ಮಹಾಕೃಪೆಯಿಂದ ಕ್ಷಮಿಸುವನು.’ (ಯೆಶಾಯ 55:7) ಈ ವಿಷಯದ ಮೇಲೆ ಧ್ಯಾನಿಸುವುದು, ಒಬ್ಬ ಒಂಟಿ ತಾಯಿಗೆ ನಿರ್ದಿಷ್ಟ ಸಮಯಗಳಲ್ಲಿ ಅವಳಿಗಾಗುವ ಜುಗುಪ್ಸೆಯ ಭಾವನೆಗಳ ಮೇಲೆ ಜಯಹೊಂದುವಂತೆ ಸಹಾಯ ಮಾಡಬಹುದು. ನಿರುತ್ಸಾಹಗೊಂಡಂತೆ ಅನಿಸುವಾಗ, ಅವಳು ಯೆಹೋವನ ಮೇಲೆ ಆತುಕೊಂಡು, ಆತನನ್ನು ಪ್ರಾರ್ಥನೆಯಲ್ಲಿ ಸಮೀಪಿಸಸಾಧ್ಯವಿದೆ. ತನ್ನ ಮಗುವನ್ನು ಬೆಳೆಸುವುದರಲ್ಲಿ ದೇವರ ಸಹಾಯಕ್ಕಾಗಿ ಸಹ ಅವಳು ಮೊರೆಯಿಡಸಾಧ್ಯವಿದೆ.—ಹೋಲಿಸಿ ನ್ಯಾಯಸ್ಥಾಪಕರು 13:8.
ಯೆಹೋವನು ಕ್ರೈಸ್ತ ಸಭೆಯ ಮೂಲಕ ಸಹ ನೆರವನ್ನೊದಗಿಸುತ್ತಾನೆ. ಯೆಹೋವನ ಸಾಕ್ಷಿಗಳು ಅನೈತಿಕತೆಯನ್ನು ಅಲಕ್ಷಿಸುವುದಿಲ್ಲವಾದರೂ, ದೇವರನ್ನು ಮೆಚ್ಚಿಸಲು ಪಶ್ಚಾತ್ತಾಪಪೂರ್ವಕವಾಗಿ ಯಾರು ತಮ್ಮ ಜೀವನಗಳನ್ನು ಬದಲಾಯಿಸಿಕೊಳ್ಳುತ್ತಾರೋ ಅವರಿಗೆ, ಅವರು ಪರಿಗಣನೆಯನ್ನು ನೀಡುತ್ತಾರೆ. (ರೋಮಾಪುರ 15:7; ಕೊಲೊಸ್ಸೆ 1:10) ಸಭೆಗಳಲ್ಲಿ ಕೆಲವರು ಒಬ್ಬ ಒಂಟಿ ಜನ್ಮದಾತೃವಿಗೆ ಪ್ರಾಯೋಗಿಕವಾದ ನೆರವನ್ನು ನೀಡಲು ವಿವೇಕಯುಕ್ತವಾದ ವಿಧಗಳನ್ನು ಕಂಡುಹಿಡಿಯುವಂತೆ ಪ್ರಚೋದಿಸಲ್ಪಡಬಹುದು. (ಹೋಲಿಸಿ ಧರ್ಮೋಪದೇಶಕಾಂಡ 24:17-20; ಯಾಕೋಬ 1:27.) ಕಡಮೆ ಪಕ್ಷ, ಅಗತ್ಯವಿದ್ದಾಗ ಅವರು ಸ್ನೇಹವನ್ನೊದಗಿಸಸಾಧ್ಯವಿದೆ ಮತ್ತು ಸಹಾನುಭೂತಿಯ ಕೇಳುಗರಾಗಿರಸಾಧ್ಯವಿದೆ. (ಜ್ಞಾನೋಕ್ತಿ 17:17) ಹೆತ್ತವರು ಒಂದು ಗಂಭೀರವಾದ ಪಾಪವನ್ನು ಮಾಡಿರುವುದಾದರೂ, ಮಗುವು ನಿರ್ದೋಷಿಯಾಗಿದೆ. ಆದುದರಿಂದ ತಾಯಿಯು ಒಂದು ಸರಿಯಾದ ಭಾವವನ್ನು ತೋರಿಸುವುದಾದರೆ ಸಭೆಯು ಸಹಾಯವನ್ನು ನೀಡಸಾಧ್ಯವಿದೆ.
ಮೊದಲೇ ದೇವರ ನಿಯಮಗಳನ್ನು ಉಲ್ಲಂಘಿಸದಿರುವುದು ಎಷ್ಟೊಂದು ಉತ್ತಮವಾಗಿದೆ! ತಮ್ಮ ಮೊಂಡು ಮಾರ್ಗಕ್ಕಾಗಿ ಪಶ್ಚಾತ್ತಾಪಪಟ್ಟು ಅದರಂತೆ ವರ್ತಿಸಿರುವ ತಪ್ಪುಗಾರರು ತಮ್ಮ ಪರಿಸ್ಥಿತಿಯನ್ನು ಅತಿ ಹೆಚ್ಚು ಸುಧಾರಿಸಲು ಯೆಹೋವನ ಸಹಾಯದ ಆಶ್ವಾಸನೆಯನ್ನು ಪಡೆಯಬಲ್ಲರು.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
b ಈ ಲೇಖನವು ಅಗಮ್ಯಗಮನ ಮತ್ತು ಬಲಾತ್ಕಾರಸಂಭೋಗಕ್ಕೆ ಬಲಿಯಾದವರಿಗೆ ಉದ್ದೇಶಿಸಲ್ಪಟ್ಟಿಲ್ಲ, ಆದರೂ ಇಲ್ಲಿರುವ ಕೆಲವು ವಿಷಯಗಳು ಅಂಥವರಿಗೆ ಸಹಾಯವುಳ್ಳದ್ದಾಗಿ ಪರಿಣಮಿಸಬಹುದು.
c “ಯುವ ಜನರು ಪ್ರಶ್ನಿಸುವುದು . . . ಹದಿಹರೆಯದವರ ಗರ್ಭಧಾರಣೆ—ಒಬ್ಬ ಹುಡುಗಿ ಏನು ಮಾಡಬೇಕು?” (ಇಂಗ್ಲಿಷ್) ಎನ್ನುವ ಮೇ 8, 1990ರ ನಮ್ಮ ಸಂಚಿಕೆಯನ್ನು ನೋಡಿ.
d “ಮಗುವನ್ನು ಯಾರು ಪಡೆಯುತ್ತಾರೆ?” ಎಂಬ ಲೇಖನವನ್ನು ಅಕ್ಟೋಬರ 22, 1988ರ ನಮ್ಮ (ಇಂಗ್ಲಿಷ್) ಸಂಚಿಕೆಯಲ್ಲಿ ನೋಡಿ.
e ಕೆಲವರು ವಿಕ್ರಯಿಸ ಸಾಧ್ಯವಿರುವ ಕೆಲಸದ ಕುಶಲತೆಗಳನ್ನು ಕಲಿಸುವ ಸರಕಾರದ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ತಾಯಿಯು ತರಗತಿಗೆ ಹಾಜರಾಗುತ್ತಿರುವಾಗಲೇ, ಅಲ್ಲಿಯೇ ಶಿಶುವಿನ ಆರೈಕೆಗೆ ಒಂದು ಏರ್ಪಾಡಿರಬಹುದು.
[ಪುಟ 21 ರಲ್ಲಿರುವ ಚಿತ್ರ]
ಒಬ್ಬ ಅವಿವಾಹಿತ ತಾಯಿಗೆ ಸಹಾಯ ಮತ್ತು ಬೆಂಬಲದ ಅಗತ್ಯವಿದೆ