ಅಂಚೆಯ ತಲೆಚೀಟಿ (ಸ್ಟ್ಯಾಂಪ್)ಗಳ ಸಂಗ್ರಹಣ ಮಗ್ನಗೊಳಿಸುವ ಹವ್ಯಾಸ ಮತ್ತು ದೊಡ್ಡ ವ್ಯಾಪಾರ
ಬ್ರಿಟನ್ನಲ್ಲಿರುವ ಎಚ್ಚರ! ಸುದ್ದಿಗಾರರಿಂದ
ಅಂಚೆಯ ತಲೆಚೀಟಿಗಳ ಸಂಗ್ರಹಣ, ಅಥವಾ ಅಂಚೆಯ ಸ್ಟ್ಯಾಂಪುಗಳನ್ನು ಕೂಡಹಾಕುವುದು, “ಜಗತ್ತಿನ ಅತ್ಯಂತ ಮಹತ್ತಾದ ಹವ್ಯಾಸ” ಎಂದು ಹೇಳಲಾಗುತ್ತದೆ. ಬ್ರಿಟಿಷ್ ಅಂಚೆಯ ಸುಧಾರಕರಾದ ಸರ್ ರೋಲಂಡ್ ಹಿಲ್ (1795-1879)ಗನುಸಾರ, ಪ್ರಥಮ ಅಂಚೆ ಸ್ಟ್ಯಾಂಪುಗಳು ‘ಹಿಂಭಾಗದಲ್ಲಿ ಅಂಟಿನ ತೆಳು ದ್ರವದಿಂದ ಆವರಿಸಲ್ಪಟ್ಟ ಕಾಗದದ ಸಣ್ಣ ತುಣುಕುಗಳಾಗಿದ್ದು, ಉಪಯೋಗಿಸುವಾತನು ಸ್ವಲ್ಪ ನೀರನ್ನು ಹಚ್ಚಿ, ಪತ್ರವೊಂದರ ಹಿಂಭಾಗಕ್ಕೆ ಅವನ್ನು ಅಂಟಿಸಬಹುದಿತ್ತು.’ ಯಾವುದನ್ನು ಅವರು ‘ಕಾಗದದ ಸಣ್ಣ ತುಣುಕುಗಳು’ ಎಂದು ಕರೆದರೋ ಅದು ಎಷ್ಟು ಜನಪ್ರಿಯವಾಗಿ ಪರಿಣಮಿಸಿತೆಂದರೆ, ಲೋಕದ ಆದ್ಯಂತವಾಗಿ ಸಂಪರ್ಕ ವ್ಯವಸ್ಥೆಯ ಹಾದಿಯನ್ನೇ ಬದಲಾಯಿಸಿದ ಶೋಧನೆಯಾಗಿ ಅಂಚೆಯ ಸ್ಟ್ಯಾಂಪುಗಳನ್ನು ಇಂದು ಶ್ಲಾಘಿಸಲಾಗುತ್ತದೆ.
ಸಂಗ್ರಾಹಕರಿಗೆ ಮತ್ತು ವಿತರಣೆಗಾರರಿಗೆ, ಸ್ಟ್ಯಾಂಪ್ನ ಮೌಲ್ಯಗಳು ಬಹುಮಟ್ಟಿಗೆ ಶೂನ್ಯದಿಂದ ಹಿಡಿದು ಲಕ್ಷಗಟ್ಟಲೆ ಅಥವಾ ಹೆಚ್ಚು ಡಾಲರುಗಳ ಬೃಹತ್ಸಂಖ್ಯೆಯ ವರೆಗೆ ವೈವಿಧ್ಯವುಳ್ಳದ್ದಾಗಿವೆ. ಅಂಚೆಯ ಸ್ಟ್ಯಾಂಪುಗಳು ಇಷ್ಟೊಂದು ಸರ್ವಸಾಮಾನ್ಯವಾಗಿರುವಾಗ ಇದು ಹೇಗೆ ಸಾಧ್ಯವಿದೆ? ಮತ್ತು ಅವುಗಳಿಗೆ ಅವುಗಳ ಆಕರ್ಷಣೆ ಮತ್ತು ಮೌಲ್ಯವನ್ನು ಯಾವುದು ಕೊಡುತ್ತದೆ?
ಅಪೂರ್ವವಾದ ಪೆನಿ ಬ್ಲ್ಯಾಕ್
ಅಂಚೆ ಹಾಸಲನ್ನು ಮುಂದಾಗಿ ಸಲ್ಲಿಸುವುದನ್ನು ನಿರ್ದೇಶಿಸುವ, ಕೈಯಿಂದ ಮುದ್ರೆಯೊತ್ತಿದ ಮೊದಲ ಸ್ಟ್ಯಾಂಪುಗಳು, 1680ರಲ್ಲಿ ಲಂಡನ್ ಪೆನಿ ಪೋಸ್ಟನ್ನು ಆರಂಭಿಸಿದ ವರ್ತಕನಾದ ವಿಲಿಯಮ್ ಡಾಕ್ರನ ಕಂಡುಹಿಡಿತವಾಗಿದ್ದವು. ಟಪಾಲಿನ ಕಚೇರಿಯಲ್ಲಿ ಸಂಚಯವಾದ ಟಪಾಲು, ಪೆನಿ ಪೋಸ್ಟ್ ಪೇಡ್ ಎಂಬ ಪದಗಳಿಂದ ಕೆತ್ತಲಾದ ಜೋಡಿ ತ್ರಿಕೋನಗಳ ಅಂಚೆಯ ಮುದ್ರೆಯಿಂದ ಸ್ಟ್ಯಾಂಪ್ ಒತಲ್ತಾಗಿ, ಡಾಕ್ರನ ಓಲೆಕಾರರಿಂದ ರವಾನೆಗಾಗಿ ಸಿದ್ಧವಾಗಿರುತ್ತಿತ್ತು. ಆದರೆ ತಮ್ಮ ಜೀವನೋಪಾಯಕ್ಕೆ ಅಪಾಯವಿದೆ ಎಂದು ಭಾವಿಸಿದ ಇತರ ಓಲೆಕಾರರು ಮತ್ತು ಸರಕು ಸಾಗಿಸುವವರು ಈ ಏರ್ಪಾಡನ್ನು ತೀವ್ರವಾಗಿ ವಿರೋಧಿಸಿದರು. ಡಾಕ್ರನ ಅಂಚೆಯು ತನ್ನ ಏಕ ಸ್ವಾಮ್ಯತೆಯ ಅತಿಕ್ರಮಿಸುವಿಕೆಯೆಂದು ಸರಕಾರದ ಅಂಚೆಯ ಕಚೇರಿಯು ಸಹ ಅಭಿಪ್ರಾಯಪಟ್ಟಿತು.
19ನೆಯ ಶತಮಾನದ ಆರಂಭದ ವರೆಗೆ, ದೇಶದಾದ್ಯಂತವಾಗಿ ಪೆನಿ ಅಂಚೆಯ ಹಾಸಲನ್ನು ದೊರೆಯುವಂತೆ ಮಾಡುವುದರಲ್ಲಿ ಅಂಚೆಯ ಸುಧಾರಣೆಗಳು ಯಶಸ್ವಿಯಾಗಲಿಲ್ಲ. 1840ರ ಮೇ ತಿಂಗಳಲ್ಲಿ, ಅಂಟು ಹಚ್ಚಿದ ಮೊದಲ ಅಂಚೆಯ ಸ್ಟ್ಯಾಂಪು ಬ್ರಿಟನ್ನಲ್ಲಿ ಮಾರಾಟವಾಗಲಾರಂಭಿಸಿತು ಮತ್ತು ಬೇಗನೆ ಪೆನಿ ಬ್ಲ್ಯಾಕ್ ಆಗಿ ಪ್ರಸಿದ್ದಿಯಾಯಿತು. (ಫೋಟೊ ನೋಡಿ.) ಅದಕ್ಕೆ ಸಾಲುರಂಧ್ರ ಮಾಡಲ್ಪಟ್ಟಿರಲಿಲ್ಲ, ಮತ್ತು ಹಾಳೆಯೊಂದರಿಂದ ಪ್ರತಿಯೊಂದು ಸ್ಟ್ಯಾಂಪನ್ನು ಕತ್ತರಿಸಿ ತೆಗೆಯಬೇಕಾಗಿತ್ತು.
1843ರಲ್ಲಿ, ಇಡೀ ದೇಶದಾದ್ಯಂತ ಉಪಯೋಗಿಸಲಿಕ್ಕಾಗಿ ಸಮಂಜಸವಾದ ಅಂಟು ಹಚ್ಚಿದ ಸ್ಟ್ಯಾಂಪನ್ನು ಹೊರಡಿಸುವುದರಲ್ಲಿ ಬ್ರೆಜಿಲ್, ಬ್ರಿಟನ್ಗೆ ದ್ವಿತೀಯವಾಗಿ ಪರಿಣಮಿಸಿತು. ಕ್ರಮೇಣ ಇತರ ದೇಶಗಳು ಒಳನಾಡಿನ (ಇನ್ಲ್ಯಾಂಡ್) ಟಪಾಲಿಗಾಗಿ ಅವುಗಳ ಉಪಯೋಗವನ್ನು ಅಳವಡಿಸಿಕೊಂಡವು. ತದನಂತರ, ಸಮುದ್ರದಾಚೆಯ ವಿತರಣೆಯನ್ನು ಅನುಕೂಲಗೊಳಿಸಲಿಕ್ಕಾಗಿ ಒಂದು ಲೋಕವ್ಯಾಪಕವಾದ ಅಂಚೆಯ ಸಂಘವು ವಿಕಸಿಸಲ್ಪಟ್ಟಿತು. ಇಂದು ಸ್ವಿಟ್ಸರ್ಲೆಂಡ್ನ ಬರ್ನ್ನಲ್ಲಿರುವ ಜಾಗತಿಕ ಮುಖ್ಯಕಾರ್ಯಾಲಯವಾದ ಯೂನಿವರ್ಸಲ್ ಪೋಸ್ಟಲ್ ಯೂನಿಯನ್, ಸಂಯುಕ್ತ ರಾಷ್ಟ್ರ ಸಂಘದ ಒಂದು ವಿಶಿಷ್ಟೀಕೃತ ಏಜೆನ್ಸಿಯಾಗಿದೆ.
ಸಂಗ್ರಹಣೆಗಳು ಒಂದು ಕಥೆಯನ್ನು ಹೇಳುತ್ತವೆ
ಅಂತಾರಾಷ್ಟ್ರೀಯ ಸಂಪರ್ಕ ವ್ಯವಸ್ಥೆಗಳು ಅಧಿಕಗೊಂಡಂತೆ, ಪ್ರತಿಯೊಂದು ದೇಶವು ಭಿನ್ನತಾಸೂಚಕ ಸ್ಟ್ಯಾಂಪುಗಳನ್ನು ವಿನ್ಯಾಸಿಸಿತು ಮತ್ತು ಮುದ್ರಿಸಿತು. ಪ್ರಮುಖವಾದ ಘಟನೆಗಳು ಮತ್ತು ಜನರನ್ನು ದೃಷ್ಟಾಂತಿಸುವ ಕೆಲವು ಸ್ಟ್ಯಾಂಪುಗಳನ್ನು ಸ್ಮಾರಕಾರ್ಥಗಳೆಂದು ಕರೆಯಲಾಗುತ್ತದೆ; ಮಾಮೂಲಿನವು ಎಂದು ಕರೆಯಲ್ಪಡುವ ಇತರ ಸ್ಟ್ಯಾಂಪುಗಳು, ಅಂಚೆಯ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಮೌಲ್ಯಗಳ ಸರಣಿಯಲ್ಲಿ ನಿಯತಕ್ರಮದ ಬಳಕೆಗಾಗಿ ಸುನಿರ್ದಿಷ್ಟವಾಗಿವೆ. ಕಳೆದ ವರ್ಷಗಳಲ್ಲಿ ಸುಮಾರು 600 ಅಂಚೆಯ ಕಾರ್ಯಾಂಗಗಳು, ವಾರ್ಷಿಕವಾಗಿ ಅಂದಾಜುಮಾಡಲ್ಪಟ್ಟ 10,000 ಹೊಸ ಸ್ಟ್ಯಾಂಪುಗಳನ್ನು ಹೊರಡಿಸಿವೆ. ಸ್ಟ್ಯಾಂಪುಗಳ ಗಂಭೀರ ವಿದ್ಯಾರ್ಥಿ (ಅಂಚೆಯ ತಲೆಚೀಟಿಗಳ ಸಂಗ್ರಾಹಕ) ಮತ್ತು ಕಾಲಕ್ಷೇಪಕ್ಕಾಗಿ ಸ್ಟ್ಯಾಂಪುಗಳನ್ನು ಸಂಗ್ರಹಿಸುವುದರಲ್ಲಿ ಕೇವಲ ಆನಂದಿಸುವ ವ್ಯಕ್ತಿ, ಇಷ್ಟರ ವರೆಗೆ ಹೊರಡಿಸಲ್ಪಟ್ಟಿರುವ ಎರಡೂವರೆ ಲಕ್ಷ ವಿವಿಧ ಸ್ಟ್ಯಾಂಪುಗಳಲ್ಲಿ, ತಮ್ಮ ಅಭಿರುಚಿಗಳಿಗೆ ಸರಿಹೊಂದುವ ಏನನ್ನಾದರೂ ಕಂಡುಕೊಳ್ಳಬಲ್ಲರು!
ಸ್ಪಷ್ಟವಾಗಿಗಿ, ಸ್ಟ್ಯಾಂಪುಗಳ ಅಂತಹ ಮೊತ್ತ ಮತ್ತು ವಿವಿಧತೆಯೊಂದಿಗೆ, ಇಂದಿನ ತನಕ ಹೊರಡಿಸಲ್ಪಟ್ಟಿರುವ ಪ್ರತಿಯೊಂದು ವಿಧದ ಸ್ಟ್ಯಾಂಪಿನ ಒಂದು ಪ್ರತಿಯನ್ನು ಪಡೆದುಕೊಳ್ಳಲು ಯಾವನೇ ಒಬ್ಬ ಸಂಗ್ರಾಹಕನು ನಿರೀಕ್ಷಿಸಲಾರನು. ಬದಲಾಗಿ, ಅನೇಕರು ವಿಷಯ ವಸ್ತುಗಳಿಗನುಸಾರ ಸ್ಟ್ಯಾಂಪುಗಳನ್ನು ಸಂಗ್ರಹಿಸಲು ಆಯ್ದುಕೊಳ್ಳುತ್ತಾರೆ. ಅಂಚೆಯ ಇಲಾಖೆಗಳು, ಅಂಟಾರ್ಕ್ಟಿಕ, ಅಂತರಿಕ್ಷ, ಎಸ್ಪೆರಾಂಟೊ, ಒಲಿಂಪಿಕ್ ಸ್ಪರ್ಧೆಗಳು, ಔಷಧ, ಕಲ್ಲಿದ್ದಲು, ಕೀಟಗಳು, ಕ್ರೀಡೆಗಳು, ಕೈಗಾರಿಕೆ, ಗುಹೆಗಳು, ಛಾಯಾಚಿತ್ರ, ದೇಶ, ಧರ್ಮ, ಪಕ್ಷಿಗಳು, ಪ್ರಾಣಿಗಳು, ಬ್ರಿಡ್ಜ್ಗಳು, ಬೆಂಕಿ, ಬೈಬಲ್, ಭೂವಿಜ್ಞಾನ, ಯುಎನ್, ಯೂರೋಪ್, ರೆಡ್ ಕ್ರಾಸ್, ವ್ಯವಸಾಯ, ಶಕ್ತಿ, ಶಿಲೀಂಧ್ರ, ಸಾಗಣೆ, ಸಿನಿಮಾ, ಸಂಗೀತ, ಹವಾಮಾನ, ಹಾರಾಟ, ಮತ್ತು ಹೂವುಗಳು ಸಹ—ಇವೆಲ್ಲಾ ಸಂಗ್ರಹಣೀಯ ವಿಷಯಗಳಾಗಿವೆ. ನೀವು ಆಲೋಚಿಸಬಹುದಾದ ಯಾವುದೇ ವಿಷಯದ ಕುರಿತು ಸ್ಟ್ಯಾಂಪುಗಳಿವೆ.
ಇತರ ಸಂಗ್ರಾಹಕರು ಸ್ಟ್ಯಾಂಪಿನ ವ್ಯತ್ಯಾಸಗಳ ಮೇಲೆ ಕೇಂದ್ರೀಕರಿಸುತ್ತಾರೆ. ಇದು ಏನನ್ನು ಒಳಗೂಡುತ್ತದೆ? ಪೆನಿ ಬ್ಲ್ಯಾಕ್ನ ಕಡೆಗೆ ಪುನಃ ನೋಟವನ್ನು ಹರಿಸಿರಿ. ಸ್ಟ್ಯಾಂಪಿನ ಕೆಳಗಿನ ಅಂಚುಗಳಲ್ಲಿ ಮುದ್ರಿಸಲ್ಪಟ್ಟಿರುವ ಅಕ್ಷರಗಳನ್ನು ನೀವು ಗಮನಿಸಿದ್ದೀರೊ? ಮೂಲತಃ, 12ರ 20 ಸಮ ಮಟ್ಟದ ಸಾಲುಗಳಲ್ಲಿ ಕ್ರಮವಾಗಿ ಜೋಡಿಸಿದ 240 ಪ್ರತ್ಯೇಕ ಸ್ಟ್ಯಾಂಪುಗಳಿಂದ ಮಾಡಲ್ಪಟ್ಟಿರುವ ಹಾಳೆಯೊಂದರಲ್ಲಿ ಈ ಸ್ಟ್ಯಾಂಪುಗಳು ಮುದ್ರಿಸಲ್ಪಟ್ಟಿದ್ದವು. ಮೇಲಿನ ಸಾಲಿನ ಮೊದಲ ಸ್ಟ್ಯಾಂಪಿನಲ್ಲಿ ಏಏ(AA) ಎಂಬ ಅಕ್ಷರಗಳಿದ್ದವು; ಆ ಸಾಲಿನ ಕೊನೆಯಲ್ಲಿರುವ ಸ್ಟ್ಯಾಂಪಿನಲ್ಲಿ ಏಎಲ್(AL), ಮತ್ತು ವರ್ಣಾನುಕ್ರಮದಲ್ಲಿ ಹಾಳೆಯ ಕೊನೆಗೆ, 20ನೆಯ ಸಾಲಿನ ಆರಂಭ ಮತ್ತು ಅಂತ್ಯದಲ್ಲಿ ಟಿಏ(TA) ಮತ್ತು ಟಿಎಲ್(TL) ವರೆಗೆ ಕ್ರಮವಾಗಿ ಮುಂದುವರಿದಿತ್ತು. ಮುದ್ರಣ ಫಲಕ ತಯಾರು ಮಾಡುವ ಅಂತಿಮ ಹಂತಗಳಲ್ಲಿ ವಿನ್ಯಾಸದ ಅಂಚಿನ ಚೌಕಗಳಲ್ಲಿ ಅಕ್ಷರಗಳನ್ನು ಕೈಯಿಂದ ಕೊರೆಯಲಾಗುತ್ತಿತ್ತು. ಅಂಚೆ ಕಚೇರಿಯ ನೌಕರನೊಬ್ಬನು ನಿರ್ವಹಿಸುತ್ತಿದ್ದ ಅನೇಕ ಪತ್ರಗಳ ಮೇಲಿನ ಸ್ಟ್ಯಾಂಪುಗಳು ಒಂದೇ ರೀತಿಯ ಎರಡು ಅಕ್ಷರಗಳನ್ನು ಪ್ರದರ್ಶಿಸುವುದಾದರೆ, ಅವನು, ಅದು ಖೋಟಾವೆಂದು ಸಂಶಯಿಸಸಾಧ್ಯವಿತ್ತು.
ಅಂದಾಜು ಮಾಡಲ್ಪಟ್ಟ 6 ಕೋಟಿ 80 ಲಕ್ಷ ಪ್ರತ್ಯೇಕ ಪೆನಿ ಬ್ಲ್ಯಾಕ್ ಸ್ಟ್ಯಾಂಪುಗಳು ಹೊರಡಿಸಲ್ಪಟ್ಟಿರುವಾಗ್ಯೂ, ಇಂದು ಬಳಸದ ಒಂದು ಪೆನಿ ಬ್ಲ್ಯಾಕ್ ಸ್ಟ್ಯಾಂಪ್ ಇರುವ ಸಂಗ್ರಾಹಕನೊಬ್ಬನು ಅಪರೂಪವಾದ ಮತ್ತು ಬಹುಮೌಲ್ಯದ—4,200 ಡಾಲರುಗಳಿಂದ 6,800 ಡಾಲರುಗಳ ವರೆಗಿನ ಅಂತರ—ಏನನ್ನೋ ಹೊಂದಿದ್ದಾನೆ.
ವಿನ್ಯಾಸಗಳಲ್ಲಿ ಸೂಕ್ಷ್ಮವಾದ ವ್ಯತ್ಯಾಸಗಳ ಹೊರತಾಗಿ, ಬೇರೆ ಬೇರೆ ಮುದ್ರಣ ಫಲಕಗಳಿಂದ ಮುದ್ರಿಸಲ್ಪಟ್ಟ ಸ್ಟ್ಯಾಂಪುಗಳು, ವಿವಿಧ ಜಲ ಚಿಹ್ನೆ (ಕಾಗದದ ಹಾಳೆಯನ್ನು ಬೆಳಕಿಗೆ ಹಿಡಿದಾಗ, ಹಾಳೆಯಲ್ಲಿ ಕಾಣುವ ಮಸುಕು ಮಸುಕಾದ ಗುರುತು)ಯಿರುವ ಹಾಳೆಯ ಮೇಲಿನ ಸ್ಟ್ಯಾಂಪುಗಳು, ಮತ್ತು ಬೇರೆ ಬೇರೆ ಸಂಖ್ಯೆಯಲ್ಲಿ ಸಾಲು ರಂಧ್ರಗಳನ್ನು (ಅಂಚುಗಳ ಉದ್ದಕ್ಕೂ ಇರುವ ರಂಧ್ರಗಳು) ಹೊಂದಿರುವ ಸ್ಟ್ಯಾಂಪುಗಳೆಲ್ಲವೂ ವಿಶಿಷ್ಟೀಕೃತ ಸಂಗ್ರಾಹಕರ ಆಸಕ್ತಿಯನ್ನು ಕೆರಳಿಸುತ್ತವೆ. ಯಶಸ್ವಿಯಾಗಲಿಕ್ಕಾಗಿ, ಅಂತಹ ಪ್ರವೀಣರಿಗೆ ಸಣ್ಣ ಚಿಮುಟಗಳು (ನಿಮ್ಮ ಬೆರಳುಗಳನ್ನು ಎಂದಿಗೂ ಉಪಯೋಗಿಸದಿರಿ!) ಮತ್ತು ಭೂತಗನ್ನಡಿಗಿಂತಲೂ ಹೆಚ್ಚಿನದರ ಆವಶ್ಯಕತೆಯಿದೆ. ಸಾಲು ರಂಧ್ರಗಳಲ್ಲಿ ಭಿನ್ನತೆಗಳನ್ನು ಅಳತೆಯ ಸಲಕರಣೆಗಳು ಕಂಡುಹಿಡಿಯುತ್ತವೆ; ಆಗಿರುವ ಹಾನಿಯನ್ನು, ಅಡಗಿರುವ ಮಿನುಗುರಂಜನೆಯನ್ನು, ಮತ್ತು ಇತರ ಅತಿ ಸೂಕ್ಷ್ಮ ವಿವರಣೆಗಳನ್ನು ನೀಲಲೋಹಿತಾತೀತ ಲ್ಯಾಂಪ್ಗಳು ತೋರಿಸುತ್ತವೆ.
ಸ್ಟ್ಯಾಂಪಿನ ವಿನ್ಯಾಸ ಮತ್ತು ಮುದ್ರಣದಲ್ಲಿರುವ ದೋಷಗಳಲ್ಲಿ ಕೆಲವು ಸಂಗ್ರಾಹಕರು ವಿಶೇಷ ಆಸಕ್ತಿಯನ್ನು ತೋರಿಸುತ್ತಾರೆ. ಅವರಿಗೆ, ಇತರ ಸಂಗ್ರಾಹಕರು ಗಮನಿಸದಿರುವ ಏನನ್ನಾದರೂ ಹೊಂದಿರುವುದು ದೊಡ್ಡ ವಿಷಯವಾಗಿರುತ್ತದೆ. ಮೌಲ್ಯಗಳಲ್ಲಿ ಭಿನ್ನತೆಯನ್ನು ಪರಿಗಣಿಸಿರಿ. 1990ರ ಅಂದಾಜಿಗನುಸಾರ, ಯಾವುದು ಹಾಳೆಯ ಎರಡನೆಯ ಸಾಲಿನ ಮೊದಲನೆಯ ಸ್ಟ್ಯಾಂಪಿನ ದೋಷವಾಗಿತ್ತೋ, ಆ ಏ(A) ಅಕ್ಷರವು ಬಿಟ್ಟುಹೋಗಿದ್ದ, 1841ರ ಪೆನಿ ರೆಡ್, ಈ ದೋಷ ಇಲ್ಲದೆ ಇದ್ದ ಸ್ಟ್ಯಾಂಪಿಗಿಂತ 1,300 ಪಾಲು ಹೆಚ್ಚು ಬೆಲೆಯುಳ್ಳದ್ದಾಗಿತ್ತು!
ಸ್ಟ್ಯಾಂಪುಗಳು ಒಂದು ದೊಡ್ಡ ವ್ಯಾಪಾರ
ಇಂದಿನ ದಿನಗಳಲ್ಲಿ ಸ್ಟ್ಯಾಂಪಿನ ಹವ್ಯಾಸವು ಬೇರೆ ಬೇರೆ ನಿಯೋಜಕರನ್ನು ಆಕರ್ಷಿಸುತ್ತದೆ. ಒಂದು ನಿಗದಿತ ಅವಧಿಯ ವರೆಗೆ ಮೌಲ್ಯದಲ್ಲಿ ಹೆಚ್ಚಳವಾಗುವ ಸಂಭವವಿದೆ ಎಂದು ವಿತರಣೆಗಾರರು ನಂಬುವ ಅಪರೂಪದ ಆದರ್ಶಪ್ರಾಯ ಸ್ಟ್ಯಾಂಪುಗಳ ಸಂಪುಟಗಳನ್ನು ನೈಜ ನಿಯೋಜಕನು ಖರೀದಿಸುತ್ತಾನೆ. ಬಂಡವಾಳದ ವಾಯಿದೆ ತುಂಬಿದಾಗ, ವಿತರಣೆಗಾರನು ತನ್ನ ಗಿರಾಕಿಯ ಹಿಡುವಳಿಗಳನ್ನು ದೊರಕಿಸಿಕೊಳ್ಳಸಾಧ್ಯವಿರುವ ಅತ್ಯಂತ ಹೆಚ್ಚಿನ ಬೆಲೆಗಳಿಗೆ ಮಾರಲು ಜವಾಬ್ದಾರಿ ಹೊತ್ತುಕೊಳ್ಳುತ್ತಾನೆ. “ಲಘುವಾದ, ಸ್ಫುಟವಾದ ಅಂಚೆಯ ಮುದ್ರೆಗಳು ಅಂಚೆಯಿಂದ ಉಪಯೋಗಿಸಲ್ಪಟ್ಟ ಸ್ಟ್ಯಾಂಪುಗಳಿಗೆ ಅಗತ್ಯವಾಗಿವೆ—ಅನೇಕವೇಳೆ ಆದರ್ಶಪ್ರಾಯವಾದ ಮತ್ತು ಅಸಾಮಾನ್ಯ ಅಂಚೆಯ ಮುದ್ರೆಗಳಿರುವ ಅತ್ಯಂತ ಸಾಮಾನ್ಯವಾದ ಸ್ಟ್ಯಾಂಪುಗಳು, ತುಲನಾತ್ಮಕವಾಗಿ ಅಪೂರ್ವವಾಗಿವೆ ಮತ್ತು ಅನುಗುಣವಾದ ಸಂಭಾವನೆಗೆ ಯೋಗ್ಯವಾಗಿವೆ. ಒಂದು ಸ್ಟ್ಯಾಂಪಿನ ಮೌಲ್ಯಕ್ಕೆ ಸ್ಟ್ಯಾಂಪುಗಳ ಉತ್ತಮ ಸ್ಥಿತಿಯು ಬಹು ಮುಖ್ಯವಾದದ್ದಾಗಿದೆ” ಎಂದು ಸ್ಟ್ಯಾಂಪ್ ತಜ್ಞನಾದ ಜೇಮ್ಸ್ ವಾಟ್ಸನ್ ಬರೆಯುತ್ತಾರೆ.
“ಕಳೆದ ಐದು ವರ್ಷಗಳಲ್ಲಿ, ಕ್ಲ್ಯಾಸಿಕ್ ಸ್ಟ್ಯಾಂಪುಗಳ ಬೆಲೆಯೇರುವಿಕೆಯು (1840ರಿಂದ 1870ರ ವರೆಗಿನ ದಿನಾಂಕದವುಗಳು), ಷೇರುಗಳು, ಮತ್ತು ಬಂಡವಾಳದ ಇತರ ವಿಧಗಳಿಗಿಂತಲೂ ಬಹಳ ಹೆಚ್ಚಾಗಿವೆ, ಮತ್ತು ಅನೇಕ ವಿದ್ಯಮಾನಗಳಲ್ಲಿ ಸ್ಥಿರಾಸ್ತಿಗಿಂತಲೂ ಹೆಚ್ಚಾಗಿವೆ” ಎಂದು 1979ರಲ್ಲಿ ಲಂಡನಿನ ಡೇಲಿ ಮೇಲ್ ವರದಿಸಿತು. 1974ರಲ್ಲಿ 84,700 ಡಾಲರುಗಳಷ್ಟು ಬೆಲೆಬಾಳುವ, ಏಳು ಅಪೂರ್ವ ಸ್ಟ್ಯಾಂಪುಗಳ ಒಂದು ಸಂಪುಟವು, ಅದರ ಮೌಲ್ಯವನ್ನು 306,000 ಡಾಲರುಗಳಿಗೆ ಹೆಚ್ಚಿಸಿತು.
1990ರಲ್ಲಿ ಟೈಮ್ ಇಂಟರ್ನ್ಯಾಷನಲ್ ಜಾಹೀರಾತು ವರದಿ ಮಾಡಿದ್ದು: “ಸ್ಟ್ಯಾಂಪುಗಳ ಬಂಡವಾಳ ಮೌಲ್ಯವು ಮಹತ್ತರವಾದ ಏರಿಳಿತಗಳನ್ನು ಹೊಂದಿದೆ. 1970ಗಳಲ್ಲಿ, ಅಪೂರ್ವವಾದ ಸ್ಟ್ಯಾಂಪುಗಳಿಂದ ಲಾಭವನ್ನು ಗಳಿಸಲು ನಿರೀಕ್ಷಿಸುತ್ತಿದ್ದ ಸಟ್ಟಾ ವ್ಯಾಪಾರಿಗಳು ಬಂಡವಾಳ ಸಂಪುಟಗಳನ್ನು ರಚಿಸುತ್ತಿದ್ದಂತೆ, ಬೆಲೆಗಳು ಬಹಳ ತೀವ್ರಗತಿಯಲ್ಲಿ ಅಧಿಕಗೊಂಡವು. ಆದರೆ ಲಂಡನ್ ಅದರ 1980 ಸ್ಟ್ಯಾಂಪ್ನ ಜಾಗತಿಕ ಪ್ರದರ್ಶನವನ್ನು ಇಟ್ಟಾಗ, ಅವರ ನಿರೀಕ್ಷೆಗಳು ಜರ್ಜರಿತವಾದವು ಮತ್ತು ಮಾರುಕಟ್ಟೆಯನ್ನು ಬಲಗೊಳಿಸಲು ಸಿದ್ಧರಾಗಿರುವ ಜನರು, ಸಂಗ್ರಾಹಕರು ಮಾತ್ರ ಎಂದು ಸಾಹಸ ವ್ಯಾಪಾರಿಗಳು ಕಂಡುಕೊಂಡರು ಮತ್ತು ಅವರು ವಿವೇಕದಿಂದ ಹಿಂದೆಗೆದುಕೊಂಡಿದ್ದರು. ‘ನಿಯೋಜಕರು ತಮ್ಮ ಸಂಪುಟಗಳಿಗೆ ಹಣವನ್ನು ಪಡೆದುಕೊಳ್ಳಲಿಕ್ಕಾಗಿ ಪ್ರಯತ್ನಿಸಿದಾಗ, ಅನೇಕ ಸ್ಟ್ಯಾಂಪುಗಳು ಅವರು ಊಹಿಸಿದ್ದಷ್ಟು ಅಪೂರ್ವವಾದವುಗಳಾಗಿರಲಿಲ್ಲ ಎಂದು ಅವರು ಕಂಡುಕೊಂಡರು,’” ಮತ್ತು ನಿರೀಕ್ಷಿಸಿದ ಗಳಿಕೆಯನ್ನು ಪಡೆದುಕೊಳ್ಳುವುದರಲ್ಲಿ ಅವರು ಸೋತುಹೋದರು. ಸ್ಟ್ಯಾಂಪುಗಳಲ್ಲಿ ಹಣವನ್ನು ವಿನಿಯೋಗಿಸುವವರಿಗಾಗಿ ಇದು ಎಂತಹ ಒಂದು ಎಚ್ಚರಿಕೆಯಾಗಿದೆ!
ಆದುದರಿಂದ, ಸಂಗ್ರಾಹಕರೋಪಾದಿ, ಅಥವಾ ಅಂಚೆಯ ತಲೆಚೀಟಿಗಳ ಸಂಗ್ರಹಣಗಾರರೋಪಾದಿ ಸಹ ಸಮತೆಯ ಗುರಿಯನ್ನಿಡಿರಿ. ನಿಮ್ಮ ಸ್ಟ್ಯಾಂಪುಗಳನ್ನು ಆನಂದಿಸಿರಿ. ಲೋಕ, ಅದರ ಭೂಗೋಳ ಶಾಸ್ತ್ರ, ಜನರು, ಮತ್ತು ಸಂಸ್ಕೃತಿಗಳ ಕುರಿತು ಅವುಗಳಿಂದ ಕಲಿಯಿರಿ. ಸಂಗ್ರಹಿಸುವುದನ್ನು ಒಂದು ಗೀಳಾಗಿ ಪರಿಣಮಿಸುವಂತೆ ಬಿಡಬೇಡಿರಿ. ಸ್ಟ್ಯಾಂಪುಗಳಲ್ಲಿ ನಿಮ್ಮ ಆಸಕ್ತಿಯನ್ನು ಜಾಗರೂಕತೆಯಿಂದ ತೂಗಿನೋಡಿರಿ ಮತ್ತು ಜೀವಿತದಲ್ಲಿನ ಅತ್ಯಂತ ಪ್ರಮುಖ ವಿಷಯಗಳ ಎದುರಾಗಿ ಇದನ್ನು ಪರೀಕ್ಷಿಸಿ ನೋಡಿರಿ.
[ಪುಟ 20 ರಲ್ಲಿರುವ ಚಿತ್ರ]
ಪೆನಿ ಬ್ಲ್ಯಾಕ್
[ಪುಟ 31 ರಲ್ಲಿರುವ ಚಿತ್ರಗಳು]
ಆಸ್ಟ್ರಿಯ, ಸ್ಪೆಯಿನ್, ಮತ್ತು ಬ್ರಿಟನ್ನ ಸ್ಟ್ಯಾಂಪುಗಳು