ಜಗತ್ತನ್ನು ಗಮನಿಸುವುದು
ಒಂದು ಅಪೂರ್ವ ಗ್ರಹ
ಇತರ ಗ್ರಹಗಳಲ್ಲಿ ಜೀವವು ಅಸ್ತಿತ್ವದಲ್ಲಿರುವ ಸಂಭವನೀಯತೆಯ ಕುರಿತು ವಿಜ್ಞಾನಿಗಳು ಬಹಳ ದೀರ್ಘ ಸಮಯದ ವರೆಗೆ ವಿಚಾರಮಾಡಿದ್ದಾರೆ. ಭೂಮಿಯ ಮೇಲೆ ಜೀವಿಸುವುದನ್ನು ಸಾಧ್ಯಮಾಡುವ ಪರಿಸ್ಥಿತಿಗಳು, ವಿಶ್ವದ ಸಾವಿರಾರು ಕೋಟಿಗಳಷ್ಟು ಆಕಾಶಗಂಗೆಗಳ ನಡುವೆ ಎಲ್ಲಿಯಾದರೂ ತದ್ರೀತಿಯಲ್ಲಿ ಅಸ್ತಿತ್ವದಲ್ಲಿರಲೇಬೇಕೆಂದು ಭಾವಿಸಲಾಗಿತ್ತು. ಆದರೂ, “ತೀರ ಹೆಚ್ಚು ಅದ್ಭುತಕರವಾದ ಸಹಘಟನೆಗಳು ಭೂಮಿಯ ಮೇಲೆ ಮನುಷ್ಯನ ಜನ್ಮತಾಳುವಿಕೆಯ ಮೊದಲು ನಡೆದಿವೆ,” ಮತ್ತು ವಿಶ್ವ ಹಾಗೂ ಸ್ವತಃ ಭೂಮಿಯ ಕುರಿತಾದ ಅತ್ಯಾಧುನಿಕ ಅನ್ವೇಷಣೆಗಳು “ಅದೇ ಕಾರ್ಯವಿಧಾನವು ಬೇರೆಲಿಯ್ಲಾದರೂ ಸಂಭವಿಸಿದಿರ್ದಬಹುದೆಂಬ, ಈಗಾಗಲೇ ಕ್ಷುದ್ರವಾಗಿರುವ ಸಂಭವನೀಯತೆಯನ್ನು ವಿಪರೀತವಾಗಿ ಕಡಿಮೆಮಾಡಿವೆ” ಎಂಬುದು ಈಗ ಹೆಚ್ಚೆಚ್ಚು ಸುವ್ಯಕ್ತವಾಗುತ್ತಿದೆಯೆಂದು ಫ್ರೆಂಚ್ ಪತ್ರಿಕೆಯಾದ ಲ ನೂವೆಲ್ ಆಬ್ಸರ್ವಟ್ಯೂರ್ ಹೇಳುತ್ತದೆ. ಇನ್ನೊಂದು ಗ್ರಹದಲ್ಲಿ ಅಸ್ತಿತ್ವದಲ್ಲಿರುವ ಅನನ್ಯ ಪರಿಸ್ಥಿತಿಗಳ ಗಣಿತಶಾಸ್ತ್ರೀಯ ಅಸಂಭವನೀಯತೆಯ ಕುರಿತು ಹೇಳಿಕೆ ನೀಡುತ್ತಾ, ಜೀವವು ಕಡಿಮೆಪಕ್ಷ ಒಂದು ಗ್ರಹದಲ್ಲಿ—ನಮ್ಮದು—ಅಸ್ತಿತ್ವದಲ್ಲಿದೆಯೆಂದು ವಿಜ್ಞಾನಿಗಳು ಖಾತ್ರಿಯಿಂದಿದ್ದಾರೆದು ಪತ್ರಿಕೆಯು ಗಮನಿಸುತ್ತದೆ.
ನಿಷ್ಕೃಷ್ಟವಾದ ವಾರ್ತೆಗಾಗಿ ಟೆಲಿವಿಷನ್ ಅಥವಾ ವಾರ್ತಾಪತ್ರಿಕೆಗಳನ್ನು ಸಂಪರ್ಕಿಸಸಾಧ್ಯವಿದೆಯೆ?
ಆಸ್ಟ್ರೇಲಿಯದಲ್ಲಿ, ವಾರ್ತಾಪತ್ರಿಕೆಗಳು ವಿಶ್ವಾಸಾರ್ಹತೆಯನ್ನು ಗಳಿಸುತ್ತಿರುವಾಗ ಟೆಲಿವಿಷನ್ ವಾರ್ತೆಯು ಅದನ್ನು ಕಳೆದುಕೊಳ್ಳುತ್ತಿದೆ. ದಿ ಆಸ್ಟ್ರೇಲಿಯನ್‌ನಲ್ಲಿ ಪ್ರಕಾಶಿಸಲ್ಪಟ್ಟ ಒಂದು ವಾರ್ತಾ ಮಾಧ್ಯಮ ಅಧ್ಯಯನಕ್ಕನುಸಾರ, “ವರದಿಯನ್ನು ಆಕರ್ಷಕವಾದದ್ದೂ, ಕುತೂಹಲ ಕೆರಳಿಸುವಂತಹದ್ದೂ ಆಗಿ ಮಾಡಲು ಶಕವ್ತಾಗಲಿಕ್ಕಾಗಿ, ಟೆಲಿವಿಷನ್ ಬಹುತೇಕವಾಗಿ ನಿಷ್ಕೃಷ್ಟತೆ, ವಿಶ್ವಾಸಾರ್ಹತೆ ಮತ್ತು ಮಧುರತೆಯನ್ನು ತ್ಯಜಿಸಿದೆ.” ಉದಾಹರಣೆಗೆ, ಹೆಚ್ಚು ಸಂವೇದನಾತ್ಮಕವಾದ ಒಂದು ಕಥೆಯನ್ನು ಮಾಡಲಿಕ್ಕಾಗಿ, ಕೆಲವು ಟಿವಿ ವರದಿಗಳು ಹಳೆಯ ಫೈಲ್ ಟೇಪ್‌ಗಳಿಂದ ವರ್ಧಿಸಲ್ಪಡುತ್ತವೆ. ವಿಶ್ಲೇಷಿಸಲ್ಪಟ್ಟಿರುವ 500 ವಾರ್ತಾ ಕಥೆಗಳಲ್ಲಿ, 260 ಹಿಂದಿನ ಚಿತ್ರಗಳು ಉಪಯೋಗಿಸಲ್ಪಟ್ಟವೆಂದು ಅಧ್ಯಯನವು ಕಂಡುಕೊಂಡಿತು. ಟಿವಿ ವಾರ್ತಾವರದಿಯೊಂದು ಫೈಲ್ ಟೇಪ್‌ಗಳನ್ನು ಒಳಗೂಡುವುದಾದರೆ, ಅದು ಹಾಗೆಂದು ಒಪ್ಪಿಕೊಳ್ಳಬೇಕೆಂದು ಸಾಮಾನ್ಯವಾಗಿ ಜನರು ನಿರೀಕ್ಷಿಸುತ್ತಾರಾದರೂ, ಯಾವಾಗಲೂ ಹಾಗೆ ಮಾಡಲಾಗುವುದಿಲ್ಲ. ವರದಿಯು ಹೇಳುವುದು: “‘ನಿಷ್ಕೃಷ್ಟವಾದ ಮತ್ತು ವಿಶ್ವಾಸಾರ್ಹವಾದ ವಾರ್ತೆ’ಗಾಗಿ ಟೆಲಿವಿಷನ್ ಅತ್ಯುತ್ತಮವಾದ ಮಾಧ್ಯಮವಾಗಿತ್ತೆಂದು ನಂಬಿದ ಜನರ ಸಂಖ್ಯೆಯು, 1986ರಲ್ಲಿ 53.7 ಪ್ರತಿಶತದ ಉಚ್ಚಾಂಕದಿಂದ” 1993ರಲ್ಲಿ “41.5 ಪ್ರತಿಶತ ಅಂಶಗಳಿಗಿಂತಲೂ ಹೆಚ್ಚಿನ ಸಂಖ್ಯೆಗೆ ಇಳಿಯಿತೆಂದು ರೇ ಮಾರ್ಗನ್ ಸಂಶೋಧನಾ ಕೇಂದ್ರದಿಂದ ನಡೆಸಲ್ಪಟ್ಟ ಸಂಶೋಧನೆಯು ತೋರಿಸುತ್ತದೆ.”
ಹೆತ್ತವರು/ಮಗು ಸಂಬಂಧ?
ಹೆತ್ತವರು ತಮ್ಮ ಮಕ್ಕಳನ್ನು ಸಮಾನಸ್ಥರಂತೆ ಕಾಣಬೇಕೋ? ಸಾವುನ್ ಪೌಲೂ ವಿಶ್ವವಿದ್ಯಾನಿಲಯದ ಶಿಕ್ಷಕರಾದ ಲಿಸಾಂಡ್ರೆ ಮಾರಿಯ ಕಾಸೆಲ್ಟೊ ಬ್ರಾಂಕೊ, ಆ ಏಸಾಡ್ಟಾ ಸಾವುನ್ ಪೌಲೂ ಎಂಬ ಬ್ರೆಸಿಲಿಯನ್ ವಾರ್ತಾಪತ್ರಿಕೆಯಲ್ಲಿ ಹೇಳುವುದು: “ಹೆತ್ತವರು ಎಂದಿಗೂ ತಮ್ಮ ಮಕ್ಕಳಿಗೆ ಸಮಾನರಾಗಿಲ್ಲ. ಮತ್ತು ಇದು ಸ್ಪಷ್ಟಪಡಿಸಲ್ಪಡತಕ್ಕದ್ದು. . . . ಹೆತ್ತವರು ತಮ್ಮ ಅಧಿಕಾರದ ಸ್ಥಾನವನ್ನು ಅಂಗೀಕರಿಸದಿರುವಾಗ, ಯುವಜನರು ನಿಸ್ಸಹಾಯಕರಾಗಿ, ತಬ್ಬಲಿಯಾಗಿ ಪರಿಣಮಿಸುತ್ತಾರೆ. ತಮ್ಮ ಮಗುವನ್ನು ಶಿಕ್ಷಣಕ್ಕೊಳಪಡಿಸುವ ತಮ್ಮ ಜವಾಬ್ದಾರಿಯನ್ನು ಹೊರುವ ವಯಸ್ಕರಾಗಿರುವುದನ್ನು, ಒಂದು ಮಗುವು ಯಾವಾಗಲೂ ತನ್ನ ಹೆತ್ತವರಿಂದ ನಿರೀಕ್ಷಿಸುತ್ತದೆ.”
ಸಿಸೇರಿಯನ್ ಶಸ್ತ್ರಕ್ರಿಯೆ ಅಧಿಕಗೊಳ್ಳುತ್ತಿದೆ
“ಹತ್ತು ಸಾವಿರ ಸ್ತ್ರೀರೋಗ ತಜ್ಞರು ಇಟಲಿಯನ್ನು ಆಪಾದಿಸಿದರು: ತೀರ ಹೆಚ್ಚು ಸಿಸೇರಿಯನ್‌ಗಳು,” ಎಂದು ರೋಮ್‌ನ ವಾರ್ತಾಪತ್ರಿಕೆಯಾದ ಇಲ್ ಮೆಸಾಜೇರೊ ವರದಿಸುತ್ತದೆ. ಸಿಸೇರಿಯನ್ ಶಸ್ತ್ರಕ್ರಿಯೆಯಿಂದಾದ ಜನನಗಳ ಸಂಖ್ಯೆಯ ಸಂಬಂಧದಲ್ಲಿ, ಇಟಲಿಯು ಯೂರೋಪಿನಲ್ಲಿ ಪ್ರಥಮದ್ದೂ, ಅಮೆರಿಕ ಮತ್ತು ಬ್ರೆಸಿಲ್‌ನ ನಂತರ ಜಗತ್ತಿನಲ್ಲಿ ಮೂರನೆಯ ಸ್ಥಾನದಲ್ಲಿಯೂ ಇವೆ. 1980ರಿಂದ, ಇಟಲಿಯಲ್ಲಿ ಸಿಸೇರಿಯನ್ ಶಸ್ತ್ರಕ್ರಿಯೆಗಳು ಇಮ್ಮಡಿಯಾಗಿವೆ; ಈಗ ಬಹುಮಟ್ಟಿಗೆ 4ರಲ್ಲಿ 1 ಮಗುವು ಸಿಸೇರಿಯನ್ ಶಸ್ತ್ರಕ್ರಿಯೆಯಿಂದ ಹೆರಿಗೆ ಮಾಡಿಸಲ್ಪಡುತ್ತದೆ. ಈ ವೃದ್ಧಿಯೇಕೆ? ಇಲ್ ಮೆಸಾಜೇರೊಗನುಸಾರ, ವೈದ್ಯಕೀಯ ಕಾರಣಗಳ ಹೊರತಾಗಿ ಇದಕ್ಕೆ ಎರಡು ಕಾರಣಗಳಿವೆ: ಸ್ತ್ರೀಯರು ವೇದನಾಭರಿತವಾದ ಪ್ರಸವಗಳನ್ನು ತಡೆಗಟ್ಟಲು ಬಯಸುತ್ತಾರೆ, ಮತ್ತು ಕೋರ್ಟ್ ಮೊಕದ್ದಮೆಗೆ ಹೆದರುತ್ತಾ ವೈದ್ಯರು ಕಡಿಮೆ ಅಪಾಯಕರವಾದ ಒಂದು ಕಾರ್ಯವಿಧಾನವನ್ನು ಇಷ್ಟಪಡುತ್ತಾರೆ. ಆದರೂ, ಸಿಸೇರಿಯನ್ ಶಸ್ತ್ರಕ್ರಿಯೆಗಳು ಬಹಳ ದೀರ್ಘ ಸಮಯದಿಂದಲೂ ಸುರಕ್ಷಿತವಾಗಿವೆಯೆಂದು ವೀಕ್ಷಿಸಲ್ಪಟ್ಟಿರುವಾಗ್ಯೂ, ಅವು ತೀರ ಜಾಸ್ತಿ ಉಪಯೋಗಿಸಲ್ಪಡುತ್ತವೆ ಮತ್ತು ಯಾವಾಗಲೂ ಒಳ್ಳೆಯ ಕಾರಣಗಳಿಗಾಗಿ ಅಲ್ಲವೆಂದು ಅನೇಕ ವೈದ್ಯರು ನಂಬುತ್ತಾರೆ. ರೋಮ್‌ನ ಲಾ ಸಾಪ್ಯೆನ್‌ಟ್ಸಾ ವಿಶ್ವವಿದ್ಯಾನಿಲಯದ ಕಾರ್ಲೊ ಸೀನ್ಯರೆಲಿ ಹೇಳಿದ್ದು: “ಸಿಸೇರಿಯನ್‌ಗಳು ಮತ್ತು ಜನನಾವರಣದ ಮರಣ ಸಂಖ್ಯೆಯ ನಡುವೆ ಪರಸ್ಪರವಾಗಿ ಯಾವುದೇ ಸಂಬಂಧವಿರುವಂತೆ ತೋರಿಬರುವುದಿಲ್ಲ.” ಮತ್ತು ಬೊಲೋನ್ಯದ ಎಸ್. ಆರ್ಸೋಲಾದಲ್ಲಿನ ಆಸ್ಪತ್ರೆಯ ಲೂಸ್ಯಾನೊ ಮೋವೀಸೆಲಿ ಗಮನಿಸಿದ್ದು: “ಸಿಸೇರಿಯನ್ ಹೆಚ್ಚು ಸುರಕ್ಷೆಗೆ ಸರಿಸಮವಾಗಿದೆಯೆಂಬ ನಿಶಿತ್ಚಾಭಿಪ್ರಾಯವನ್ನು ತೊಲಗಿಸಿಬಿಡತಕ್ಕದ್ದು, ಏಕೆಂದರೆ ಅದು ಖಂಡಿತವಾಗಿಯೂ ಸುಳ್ಳಾಗಿದೆ.”
ತೋರಿಕೆಯನ್ನು ಕಾಪಾಡಿಕೊಳ್ಳುವುದು
ಮದುವೆಗಳಲ್ಲಿ ಮತ್ತು ಶವಸಂಸ್ಕಾರಗಳಲ್ಲಿ ಸೂಕ್ತವಾದ ತೋರಿಕೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಜಪಾನಿನ ಮನುಷ್ಯನೊಬ್ಬನಿಗೆ ಸಾಕಷ್ಟು ಸಂಬಂಧಿಕರು ಅಥವಾ ಸ್ನೇಹಿತರು ಇರದಿದ್ದಲ್ಲಿ ಅವನೇನು ಮಾಡಬೇಕು? ಉತ್ತರ: ಸಂಬಂಧಿಕರನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ಒಬ್ಬ ವಧು ಮತ್ತು ವರರಲ್ಲಿ ಪ್ರತಿಯೊಬ್ಬರು ಸಾಮಾನ್ಯವಾಗಿ ಒಂದೇ ಸಮನಾದ ಸಂಖ್ಯೆಯ ಅತಿಥಿಗಳನ್ನು ಆಹ್ವಾನಿಸಲು ಪ್ರಯತ್ನಿಸುತ್ತಾರೆ. ಆದರೂ, ಎರಡೂ ಗುಂಪುಗಳು ಅಸಮವಾಗಿರುವುದಾದರೆ ಅಥವಾ ಸೂಕ್ತವಾದ ಪ್ರಭಾವವನ್ನು ಬೀರಲು ತೀರ ಚಿಕ್ಕದಾಗಿರುವುದಾದರೆ, ವಧು ಅಥವಾ ವರನು ಅಕ್ಷರಶಃ “ಉಪಯುಕ್ತ ವ್ಯಕ್ತಿ”ಗಳಾದ ಬೆನ್ರೀಯರ ಸೇವೆಯನ್ನು ರಹಸ್ಯವಾಗಿ ಕೇಳಿಕೊಳ್ಳಬಹುದು. ಬೆನ್ರೀಯ, ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಬದಲಿಯಾಗಿಡುವುದನ್ನು ಒಳಗೊಂಡು ಬಹುತೇಕವಾಗಿ ಹೆಚ್ಚಿನ ಯಾವದೇ ಕೆಲಸವನ್ನು ಮಾಡುತ್ತಾರೆ. ಉದಾಹರಣೆಗೆ, ಶವಸಂಸ್ಕಾರಗಳ ವಿಷಯದಲ್ಲಿ, ಅವರನ್ನು ವೃತ್ತಿಪರ ಶೋಕಪ್ರದರ್ಶಿಗಳಾಗಿ ಮಾತ್ರವಲ್ಲ, ಮೃತನ ಸಹೋದ್ಯೋಗಿಗಳು ಶವಸಂಸ್ಕಾರಕ್ಕೆ ಹಾಜರಾಗುವುದಿಲ್ಲ ಎಂಬುದನ್ನು ನೆರೆಯವರು ಕಂಡುಹಿಡಿಯದಂತೆ ಬದಲಿಯವರಾಗಿಯೂ ಬಾಡಿಗೆಗೆ ತೆಗೆದುಕೊಳ್ಳಲಾಗುತ್ತದೆ. ತಾನು ಹಾಜರಾಗಿದ್ದ ಕಂಪನಿಯ ಕಾರ್ಯನಿರ್ವಾಹಕನೊಬ್ಬನ ಶವಸಂಸ್ಕಾರದಲ್ಲಿ, ಹಾಜರಿದ್ದ ಸುಮಾರು 100ರಲ್ಲಿ 60 ಜನರು ಬೆನ್ರೀಯರಾಗಿದ್ದರೆಂದು, ಬೆನ್ರೀಯ ಸಂಘವೊಂದರ ಒಡೆಯನು ಹೇಳುವುದನ್ನು ಮೈನಿಚಿ ಡೈಲಿ ನ್ಯೂಸ್‌ನಲ್ಲಿ ವರದಿಸಲಾಗಿತ್ತು. “ಆ ಕುಟುಂಬವು 3ರಿಂದ 4 ಬೆನ್ರೀಯ ಸಂಘಗಳನ್ನು ಕರೆದಿರಬೇಕು,” ಎಂದು ಅವನು ಹೇಳಿದನು.
ಶಿಕ್ಷಕರನ್ನು ಜನಪ್ರಿಯವಾಗಿ ಮಾಡುವಂತಹದು ಯಾವುದು?
“ಹೆಚ್ಚು ಹೆಚ್ಚಾಗಿ ಅನೇಕ ಮಕ್ಕಳು ಶಾಲೆಯ ಕುರಿತು ಪ್ರಲಾಪಿಸುತ್ತಾರಾದರೂ, ಆಗಲೂ ಅವರಲ್ಲಿ ಅಧಿಕಾಂಶ ಮಂದಿಗೆ ಒಬ್ಬ ಅಚ್ಚುಮೆಚ್ಚಿನ ಶಿಕ್ಷಕರಿರುತ್ತಾರೆ,” ಎಂದು ಜರ್ಮನ್ ವಾರ್ತಾಪತ್ರಿಕೆಯಾದ ನಾಸ್‌ಆವೀಶಿ ನಾಯೆ ಪ್ರೆಸೆ ವರದಿಸುತ್ತದೆ. ವಾಸ್ತವವಾಗಿ, 91 ಪ್ರತಿಶತ ಹುಡುಗಿಯರಿಗೆ ಮತ್ತು 83 ಪ್ರತಿಶತ ಹುಡುಗರಿಗೆ ಒಬ್ಬ ಅಚ್ಚುಮೆಚ್ಚಿನ ಶಿಕ್ಷಕರಿದ್ದಾರೆ. ಶಿಕ್ಷಕರನ್ನು ತಮ್ಮ ವಿದ್ಯಾರ್ಥಿಗಳೊಂದಿಗೆ ಜನಪ್ರಿಯವಾಗಿ ಮಾಡುವ ಗುಣಗಳಾವುವೆಂಬುದನ್ನು ಅನ್ವೇಷಿಸಲು, 7ರಿಂದ 16 ವರ್ಷ ಪ್ರಾಯಗಳ ನಡುವಿನ 2,080 ವಿದ್ಯಾರ್ಥಿಗಳ ಸಮೀಕ್ಷೆಯೊಂದು ಪ್ರಯತ್ನಿಸಿತು. “ಕಡಿಮೆ ಶಾಲಾ ಮನೆಗೆಲಸವನ್ನು ಕೊಡುವಂತಹ ಒಬ್ಬ ಶಿಕ್ಷಕರು ಅಗತ್ಯವಾಗಿ ಅಚ್ಚುಮೆಚ್ಚಿನವರಾಗಿರಲಿಲ್ಲ” ಎಂಬುದು ಅನೇಕ ಮಂದಿಗೆ ಆಶ್ಚರ್ಯಕರವಾಗಿರಬಹುದು. ಅತ್ಯಂತ ಪ್ರಾಮುಖ್ಯವಾದ ವಿಷಯವೇನೆಂದರೆ, ಶಿಕ್ಷಕರು ಪ್ರಸನ್ನರೂ, ಹಾಸ್ಯದೃಷ್ಟಿಯುಳ್ಳವರೂ, ಮತ್ತು ಪಾಠಗಳನ್ನು ಆಸಕ್ತಿದಾಯಕವಾಗಿ ಮಾಡುವವರೂ ಆಗಿರತಕ್ಕದ್ದು. ಇನ್ನೂ ಹೆಚ್ಚಾಗಿ, ವಿಷಯಗಳನ್ನು ಒಳ್ಳೆಯದಾಗಿ ವಿವರಿಸಲು, ಶಾಂತರಾಗಿರಲು, ಮತ್ತು ಸಾಮರಸ್ಯವನ್ನು ತೋರಿಸಲು ಶಕ್ತರಾಗಿರುವ ಶಿಕ್ಷಕರನ್ನು ವಿದ್ಯಾರ್ಥಿಗಳು ಗಣ್ಯಮಾಡುತ್ತಾರೆ.
“ಲಾಭರಹಿತ” ಏಯ್ಡ್ಸ್ ಲಸಿಕೆ
ಕೆಲವು ಔಷಧ ವಸ್ತುಗಳ ಪ್ರಯೋಗ ಶಾಲೆಗಳು, ಏಯ್ಡ್ಸ್ ರೋಗಿಗಳ ಚಿಕಿತ್ಸೆ ನಡೆಸಲಿಕ್ಕಾಗಿ ಔಷಧಗಳ ಪರವಾಗಿ ಏಯ್ಡ್ಸ್ ಲಸಿಕೆಯ ತಮ್ಮ ಅನ್ವೇಷಣೆಯನ್ನು ಕೈಬಿಡುವಂತೆ ಆರ್ಥಿಕ ಕಾರಣಗಳು ಮಾಡಿವೆಯೆಂದು ಲೋಕಾರೋಗ್ಯ ಸಂಸ್ಥೆಯ ಸಂಶೋಧನೆ ಮತ್ತು ವಿಕಸನದ ನಿರ್ದೇಶಕರಾದ ಡಾ. ಪ್ಜಾ ಪ್ರಕಟಿಸಿದ್ದಾರೆ. ಪರಿಣಾಮಕಾರಿಯಾದ ಏಯ್ಡ್ಸ್ ಲಸಿಕೆಯು ಹೊರಗೆಡವಲ್ಪಡುವುದಾದರೆ, ಲಾಭಕ್ಕಾಗಿ ಅವಕಾಶವನ್ನು ಕೊಡದೆ, ಉತ್ಪನ್ನವನ್ನು ಸಾರ್ವಜನಿಕರಿಗೆ ಒಪ್ಪಿಸುವಂತೆ ಸರಕಾರದ ಒತ್ತಡವು ಅವರನ್ನು ಒತ್ತಾಯಿಸುವುದೆಂದು ಪ್ರಯೋಗಶಾಲೆಗಳು ಭಯಪಡುತ್ತವೆ ಎಂದು ವರದಿಸಲಾಗಿದೆ.
ಕಲುಷಿತಗೊಳಿಸಲ್ಪಟ್ಟ ಪ್ರಯಾಣಿಕರು
ಪ್ರತಿ ವರ್ಷ ಪ್ರಯಾಣಿಸುವ 400 ಕೋಟಿ ಜನರಲ್ಲಿ 20ರಿಂದ 50 ಪ್ರತಿಶತ ಮಂದಿ, ಸಾಮಾನ್ಯವಾಗಿ ಕಲುಷಿತಗೊಳಿಸಲ್ಪಟ್ಟ ಆಹಾರ ಅಥವಾ ನೀರಿನ ಕಾರಣದಿಂದ ಅತಿಭೇದಿಯಿಂದ ಬಾಧಿಸಲ್ಪಡುತ್ತಾರೆಂದು ಡಬ್ಲ್ಯುಏಚ್‌ಓ (ಲೋಕಾರೋಗ್ಯ ಸಂಸ್ಥೆ) ಅಂದಾಜು ಮಾಡುತ್ತದೆ. ಪ್ರಯಾಣಿಕನ ನಿರೋಧ ಶಕ್ತಿಯನ್ನು ದುರ್ಬಲಗೊಳಿಸುವ ಮೂಲಕ, ಪ್ರಯಾಣದ ಆಯಾಸ, ಅಥವಾ ಆಹಾರ ಪಥ್ಯದಲ್ಲಿ ಒಂದು ಬದಲಾವಣೆ ಮತ್ತು ಹವಾಮಾನವು ಸಮಸ್ಯೆಗೆ ಹೆಚ್ಚನ್ನು ಕೂಡಿಸಬಹುದು. ಅತಿಭೇದಿಯ ಸಂಭವನೀಯತೆಯನ್ನು ಕಡಿಮೆ ಮಾಡಲಿಕ್ಕಾಗಿ, ಡಬ್ಲ್ಯುಏಚ್‌ಓ ಈ ಕೆಳಗಿನ ವಿಷಯವನ್ನು ಶಿಫಾರಸ್ಸು ಮಾಡುತ್ತದೆ: ಆಹಾರವು ಚೆನ್ನಾಗಿ ಬೇಯಿಸಲ್ಪಟ್ಟಿದೆ ಮತ್ತು ಬಡಿಸಲ್ಪಡುವಾಗ ಇನ್ನೂ ಬಿಸಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಕುಡಿಯುವ ನೀರು ಅರಕ್ಷಿತವಾಗಿರಬಹುದಾದಲ್ಲಿ, ಅದನ್ನು ಕುದಿಸಿರಿ ಅಥವಾ ಔಷಧ ಸಂಗ್ರಹಾಲಯಗಳಲ್ಲಿ ದೊರಕುವ ವಿಶ್ವಾಸಾರ್ಹವಾದ ಮಾತ್ರೆಗಳಿಂದ ಅದನ್ನು ಸೊಂಕಿಲ್ಲದಂತೆ ಶುದ್ಧಮಾಡಿರಿ. ಸಿಪ್ಪೆ ಸುಲಿಯಸಾಧ್ಯವಿರುವ ಅಥವಾ ಕರಟಗಳಿಂದ ಹೊರತೆಗೆಯಸಾಧ್ಯವಿರುವ ಹಣ್ಣು ಅಥವಾ ತರಕಾರಿಗಳನ್ನು ಹೊರತು ಹಸಿಯ ಆಹಾರಗಳನ್ನು ತೊರೆಯಿರಿ. “ಅದನ್ನು ಬೇಯಿಸಿರಿ, ಸುಲಿಯಿರಿ ಅಥವಾ ಬಿಟ್ಟುಬಿಡಿರಿ ಎಂಬ ನೀತಿವಾಕ್ಯವನ್ನು ನೆನಪಿನಲ್ಲಿಡಿರಿ,” ಎಂದು ಡಬ್ಲ್ಯುಏಚ್‌ಓ ಹೇಳುತ್ತದೆ.
ಭಾರತದ ವಿವಾಹಿತ ದಂಪತಿಗಳು ಆಕ್ರಮಣಕ್ಕೊಳಗಾಗಿದ್ದಾರೆ
ಭಾರತದಲ್ಲಿ, ವಿವಾಹವು “ತೀವ್ರಗತಿಯಲ್ಲಿ ‘ತಾನು ಮೊದಲು’ ಎಂಬ ಸಮಾಜವಾಗಿ ಪರಿಣಮಿಸುತ್ತಿರುವುದರಲ್ಲಿ ಆಕ್ರಮಣಕ್ಕೊಳಗಾಗಿದೆ,” ಎಂದು ಇಂಡಿಯ ಟುಡೇ ಪತ್ರಿಕೆಯು ಹೇಳುತ್ತದೆ. ಹೆಚ್ಚು ಮತ್ತು ಎಳೆಯ ದಂಪತಿಗಳು ತಮ್ಮ ಜಗಳಗಳೊಂದಿಗೆ ನ್ಯಾಯಾಲಯಗಳಿಗೆ ಪ್ರವಹಿಸುತ್ತಿದ್ದಾರೆ. ಇಂಡಿಯ ಟುಡೇಗನುಸಾರವಾಗಿ “ಕಳೆದ ಐದು ವರ್ಷಗಳಲ್ಲಿ, ವಿವಾಹದ ಪ್ರಥಮದ ಕೆಲವು ವರ್ಷಗಳಲ್ಲಿ ವೃತ್ತಿಪರ ಸಲಹೆಗಾಗಿ ಬರುತ್ತಿರುವ ಜನರ ಸಂಖ್ಯೆಯು ಇಮ್ಮಡಿಯಾಗಿದೆಯೆಂದು” ಸಲಹೆಗಾರರಾದ ಡಾ. ನಾರಾಯಣ ರೆಡ್ಡಿ ವರದಿಸುತ್ತಾರೆ. ಕೆಲವು ದಂಪತಿಗಳು ತಮ್ಮ ವಿವಾಹದ ಬಳಿಕ ಕೇವಲ ಕೆಲವು ದಿನಗಳೊಳಗೇ ವೃತ್ತಿಪರ ಸಹಾಯವನ್ನು ಆಶ್ರಯಿಸಿದ್ದಾರೆ. ಸಾಮಾನ್ಯವಾಗಿ, ಭಾರತದ ವಿವಾಹಗಳ ನಡುವೆ ಹಾವಳಿಯನ್ನುಂಟುಮಾಡುವ ಅಂಶಗಳ ಕುರಿತು ಯಾವುದೇ ಹೊಸ ವಿಷಯವು ಇರುವುದಿಲ್ಲ: ವ್ಯಭಿಚಾರ, ಮದ್ಯವ್ಯಸನ, ಹಣಕಾಸಿನ ಹಾಗೂ ಆಸ್ತಿಯ ವಾಗ್ವಾದಗಳು, ವಿವಾಹದಿಂದುಂಟಾದ ಸಂಬಂಧಿಗಳೊಂದಿಗೆ ತೊಂದರೆಗಳು, ಮತ್ತು ಲೈಂಗಿಕ ವಿವಾದಾಂಶಗಳು. ಒತ್ತಡವು “ಭಾರತದ ಮನೆಯಲ್ಲಿ ಸರ್ವವ್ಯಾಪಕವಾದ, ಅದೃಶ್ಯವಾದ ಮತ್ತು ಕೇಡೆಣಿಸುವ ಆಗಂತುಕನಾಗಿ ಪರಿಣಮಿಸಿದೆ.”
ಸೊಳ್ಳೆವಿರೋಧಕ ರೇಡಿಯೊ?
ಪೋಲೆಂಡ್‌ನಲ್ಲಿರುವ ಒಂದು ರೇಡಿಯೊ ಸ್ಟೇಶನ್, ಸೊಳ್ಳೆಯ ಬಹುಕಾಲದಿಂದ ಅಸ್ತಿತ್ವದಲ್ಲಿರುವ ಬಾಧೆಯನ್ನು ಎದುರಿಸಲಿಕ್ಕಾಗಿ ಹೊಸ ರೀತಿಯ ವಿಧಾನವನ್ನು ಪರಿಚಯಿಸಿದೆಯೆಂದು ಪ್ರತಿಪಾದಿಸಲ್ಪಟ್ಟಿದೆ. ಪೋಲೆಂಡ್‌ನಲ್ಲಿ ಸೊಳ್ಳೆ ಮರಿ ಮಾಡುವ ಕಾಲದಲ್ಲಿ, ಸಾವಿರಗಟ್ಟಲೆ ರೇಡಿಯೊ ಕೇಳುಗರು ಕೀಟನಾಶಕಗಳನ್ನು ಉಪಯೋಗಿಸದೇ, ಕಿರಿಕಿರಿಗೊಳಿಸುವ ಈ ಕೀಟಗಳನ್ನು ಓಡಿಸಲು ಶಕ್ತರಾಗಿದ್ದರೆಂದು ಫ್ರೆಂಚ್‌ನ ನಿಸರ್ಗದ ಕುರಿತ ಪತ್ರಿಕೆಯಾದ ಟೆರ್ ಸೋವಾಸ್ ವರದಿಸುತ್ತದೆ. ಅವರು ಕೇವಲ ತಮ್ಮ ರೇಡಿಯೊಗಳನ್ನು ರೇಡಿಯೊ ಸೆಟ್ ಎಂಬ ಹೆಸರಿನ ಸ್ಟೇಶನ್‌ಗೆ ಅಳವಡಿಸಿದರು. ಟೆರ್ ಸೋವಾಸ್‌ಗನುಸಾರ, ಮನುಷ್ಯರಿಗೆ ಕೇಳದಿರುವಾಗ ಸೊಳ್ಳೆಗಳಿಗೆ ಕೇಳಿಸುವ ಒಂದು ಸತತ ಸಂಜ್ಞೆಯನ್ನು ಆ ರೇಡಿಯೊ ಸ್ಟೇಶನ್ ಪ್ರಸಾರ ಮಾಡಿತು. ಸೊಳ್ಳೆಗಳನ್ನು ತಿನ್ನುವ ಬಾವಲಿಗಳು ಹೊರಸೂಸುವ—ಕೇಳುದೂರದಲ್ಲಿರುವ ಯಾವುದೇ ಸೊಳ್ಳೆಯನ್ನು ಓಡಿಸಿಬಿಡಲು ಸಾಕಾಗುವ—ತೀವ್ರ ಕಂಪನದ ವಿದ್ಯುತ್ ಅನುಕರಣೆಯ ಪ್ರಸಾರವು ಅದಾಗಿತ್ತು.
ಹೆಚ್ಚು ಜನರು ವೃದ್ಧರಾಗುತ್ತಿದ್ದಾರೆ
ಮಾನವ ಕುಟುಂಬಕ್ಕೆ ಹೆಚ್ಚು ವಯಸ್ಸಾಗುತ್ತಿದೆ. “65 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರ ಪ್ರಸ್ತುತ ಲೋಕದ ಒಟ್ಟು ಸಂಖ್ಯೆಯು, ಪ್ರತಿ ತಿಂಗಳು 8,00,000 ವ್ಯಕ್ತಿಗಳಷ್ಟು ಹೆಚ್ಚಾಗುತ್ತದೆ,” ಎಂದು ಲೋಕಾರೋಗ್ಯ ಸಂಸ್ಥೆಯ ಒಂದು ಪತ್ರಿಕೆಯಾದ ವರ್ಲ್ಡ್ ಹೆಲ್ತ್ ವಿವರಿಸುತ್ತದೆ. ಮುಂದಿನ 30 ವರ್ಷಗಳಲ್ಲಿ, ವೃದ್ಧರ ಸಂಖ್ಯೆಯು ಅಂದಾಜು ಮಾಡಲ್ಪಟ್ಟಿರುವ 85 ಕೋಟಿಗಳನ್ನು ತಲಪುವುದೆಂದು ನಿರೀಕ್ಷಿಸಲಾಗುತ್ತದೆ. ಯೂರೋಪ್ ಮತ್ತು ಉತ್ತರ ಅಮೆರಿಕದಲ್ಲಿ, “ಕಡಿಮೆ ಫಲವತತ್ತೆ ಮತ್ತು ಅಧಿಕಗೊಳ್ಳುತ್ತಿರುವ ಜೀವನಾವಧಿಯು ನಿತ್ಯವಾಗಿ” ಇರುವುದರಿಂದ, ಆ ದೇಶಗಳಲ್ಲಿ ವೃದ್ಧ ಜನರ ಪ್ರತಿಶತ ಪ್ರಮಾಣದಲ್ಲಿ ನಾಟಕೀಯವಾದ ಬೆಳವಣಿಗೆಯನ್ನು ಅನುಭವಿಸುತ್ತಿದ್ದಾರೆಂದು ವರ್ಲ್ಡ್ ಹೆಲ್ತ್ ಹೇಳುತ್ತದೆ. “ಅದರ ಪ್ರಜೆಗಳಲ್ಲಿ 18%ಕ್ಕಿಂತಲೂ ಹೆಚ್ಚಿನವರು 65 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದು ಸ್ವೀಡನ್ ಈಗ ಲೋಕದ ‘ಅತಿ ವೃದ್ಧ’ ಜನಸಂಖ್ಯೆಯನ್ನು ಹೊಂದಿದೆ,” ಎಂದು ಪತ್ರಿಕೆಯು ಗಮನಿಸುತ್ತದೆ.