ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 6/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1995
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1994
ಇನ್ನಷ್ಟು
ಎಚ್ಚರ!—1995
g95 6/8 ಪು. 30

ನಮ್ಮ ವಾಚಕರಿಂದ

ಬೆಂಬಲಿಗ ಹೆತ್ತವರು “ಹೆತ್ತವರೇ—ಬೆಂಬಲಿಸುವವರಾಗಿರಿ!” (ಆಗಸ್ಟ್‌ 8, 1994) ಎಂಬ ಸರಣಿಗಾಗಿ ನಿಮಗೆ ಒಂದು ತುಂಬ ವಿಶೇಷವಾದ ಉಪಕಾರ. ಇತ್ತೀಚೆಗೆ, ನನ್ನ ಕಿರಿಯ ಮಗಳ ಶಾಲೆಯ ಮುಖ್ಯೋಪಾಧ್ಯಾಯಿನಿ ಹೆತ್ತವರ ಒಂದು ಗುಂಪಿನೊಂದಿಗೆ, ಹೆತ್ತವರ-ಶಿಕ್ಷಕರ ಒಳ್ಳೆಯ ಸಂಸರ್ಗದ ಕುರಿತಾದ ವಿಷಯವನ್ನು ಚರ್ಚಿಸಿದರು. ಪತ್ರಿಕೆಯನ್ನು ಮುಖ್ಯೋಪಾಧ್ಯಾಯಿನಿಗೆ ಕೊಟ್ಟೆ, ಮತ್ತು ತತ್‌ಕ್ಷಣವೇ ಅದನ್ನು ಆಕೆ ಓದಿದರು. ಎರಡು ವಾರಗಳ ಅನಂತರ ಮಾಸಿಕ ಶಾಲಾ ವಾರ್ತಾಪತ್ರವನ್ನು ನನ್ನ ಮಗಳು ನನಗೆ ತಂದುಕೊಟ್ಟಳು. ಮಾಹಿತಿಯಿಂದ, ಇಡೀ ಸಮುದಾಯವು ಪ್ರಯೋಜನ ಪಡೆಯಸಾಧ್ಯವಾಗುವಂತೆ, ಒಳ್ಳೆಯ ಸಂಸರ್ಗದ ಕುರಿತಾದ ಲೇಖನದ ಒಂದು ಭಾಗವು ಪುನರ್‌ಮುದ್ರಿಸಲ್ಪಟ್ಟಿತ್ತು.

ಡಬ್ಲ್ಯು. ಬಿ., ಅಮೆರಿಕ

ವೊಲ್ಫಿನ್‌ಗಳು “ತಿಮಿಂಗಿಲವೋ? ಡಾಲ್ಫಿನೋ?—ಇಲ್ಲ, ಇದೊಂದು ವೊಲ್ಫಿನ್‌!” (ಫೆಬ್ರವರಿ 22, 1994, ಇಂಗ್ಲಿಷ್‌) ಎಂಬ ಡಾಲ್ಫಿನ್‌/ತಿಮಿಂಗಿಲದ ಅಡ್ಡತಳಿಯ ಕುರಿತಾದ ಲೇಖನವನ್ನು ನಾನು ಆನಂದಿಸಿದೆ. ಸಮಾಪ್ತಿಯಲ್ಲಿ ಇದನ್ನು “ವೈವಿಧ್ಯಕ್ಕಾಗಿ ದೇವರು ತನ್ನ ಸೃಷ್ಟಿಯಲ್ಲಿ ನಿರ್ಮಿಸಿರುವ ವಿಸ್ಮಯಕರವಾದ ಸಾಮರ್ಥ್ಯದೊಳಗಿನ ನಸುನೋಟ” ಎಂಬುದಾಗಿ ನೀವು ಕರೆಯುತ್ತೀರಿ. ತಮ್ಮ ಸಹಜ ಪರಿಸರದಲ್ಲಿ ಕೂಡುವಿಕೆಯು ಸಂಭವಿಸುತ್ತಿರಲಿಲ್ಲದ ಕಾರಣ, ನಾನು ಇದರೊಂದಿಗೆ ಅಸಮ್ಮತಿಸಿದೆ.

ಕೆ. ಜಿ., ಅಮೆರಿಕ

ಅಂಥ ಒಂದು ಕೂಡುವಿಕೆಯು ಸಹಜವಾಗಿತ್ತು ಅಥವಾ ಅದಕ್ಕೆ ದೇವರು ಜವಾಬ್ದಾರನಾಗಿದ್ದನೆಂದು ನಾವು ಅರ್ಥೈಸಲಿಲ್ಲ. ಆದರೂ, ಅಂಥ ಒಂದು ಮೋಹಗೊಳಿಸುವ ಜೀವಿಯ ಅಸ್ತಿತ್ವಕ್ಕಾಗಿ ಪ್ರಶಂಸೆಯನ್ನು ಮನುಷ್ಯನಿಗೆ ಕೊಡಸಾಧ್ಯವಿಲ್ಲ. “ವೈವಿಧ್ಯಕ್ಕಾಗಿ ದೇವರು ತನ್ನ ಸೃಷ್ಟಿಯೊಳಗೆ ನಿರ್ಮಿಸಿರುವ ಸಾಮರ್ಥ್ಯ”ದ ಕಾರಣ ಮಾತ್ರವೇ ಅಡ್ಡತಳಿಗಳು ಅಸ್ತಿತ್ವದಲ್ಲಿವೆ. ಹೀಗೆ ನಮ್ಮ ಲೇಖನವು ದೇವರಿಗೆ ಸಲ್ಲತಕ್ಕ ಪ್ರಶಂಸೆಯನ್ನು ನೀಡಿತು.—ಸಂಪಾ.

ಜಗತ್ತನ್ನು ಗಮನಿಸುವುದು ಎಚ್ಚರ! ಪತ್ರಿಕೆಯು ಎಷ್ಟು ಜಾಗರೂಕ ರೀತಿಯಲ್ಲಿ ತಯಾರಿಸಲ್ಪಡುತ್ತದೆ ಎಂಬುದರ ಕುರಿತಾಗಿ ನಿಮ್ಮನ್ನು ನಾನು ಅಭಿನಂದಿಸಲು ಬಯಸುತ್ತೇನೆ. ವಿಶೇಷವಾಗಿ ನಾನು “ಜಗತ್ತನ್ನು ಗಮನಿಸುವುದು” ಎಂಬ ವಿಷಯವನ್ನು ಮೆಚ್ಚುತ್ತೇನೆ. ಇದು ವಿವಿಧ ವಿಷಯಗಳೊಂದಿಗೆ ಸಂಕ್ಷಿಪ್ತವಾಗಿ ವ್ಯವಹರಿಸುವುದಾದರೂ, ಅದರ ಸಹಾಯಕಾರಿಯಾದ ಬುದ್ಧಿವಾದ, ಕೌತುಕಗಳು, ಮತ್ತು ಪರಿಶೀಲನಗಳು ನನ್ನ ಅನೇಕ ಅಭ್ಯಾಸಗಳನ್ನು ಬದಲಾಯಿಸಲು ನನಗೆ ಸಹಾಯ ಮಾಡಿವೆ. “ಜಗತ್ತನ್ನು ಗಮನಿಸುವುದು” ಆಹ್ಲಾದಕರವಾದ ವಾಚನವನ್ನು ಒದಗಿಸುತ್ತದೆ.

ಟಿ. ಸಿ. ಸಿ., ಬ್ರೆಸಿಲ್‌

ಏಯ್ಡ್ಸ್‌ ಮೂರು ವರುಷಗಳ ವರೆಗೆ ನಾನು ಪೂರ್ಣ ಸಮಯ ಸೌವಾರ್ತಿಕನೋಪಾದಿ ಸೇವೆ ಸಲ್ಲಿಸಿದೆ. ಹಾಗಿದ್ದರೂ, ಈಗ ನನಗೆ ಅಸಾಧ್ಯ. ನನಗೆ ಏಯ್ಡ್ಸ್‌ ಇದೆ. “ಏಯ್ಡ್ಸ್‌ ಇರುವವರಿಗೆ ಸಹಾಯ ಮಾಡುವುದು” (ಮಾರ್ಚ್‌ 22, 1994, ಇಂಗ್ಲಿಷ್‌) ಎಂಬ ಲೇಖನದಲ್ಲಿ ಈ ಕ್ಲಿಷ್ಟಕರವಾದ ವಿಷಯದೊಂದಿಗೆ ನೇರವಾಗಿ ವ್ಯವಹರಿಸಿದ್ದಕ್ಕಾಗಿ ನಿಮಗೆ ಉಪಕಾರ. ನೀವು ಪ್ರತಿಯೊಬ್ಬರ ಕುರಿತು ಹೃದಯದಾಳದಿಂದ ಆಸ್ಥೆ ಹೊಂದಿದ್ದೀರೆಂದು ನಾನು ನೋಡಬಲ್ಲೆ. ಆದರೂ, ಕ್ಲೇಶಗೊಂಡವರಿಗಾಗಿ ಅನುಕಂಪವನ್ನು ಉತ್ತೇಜಿಸಿದ ಮತ್ತು ಉಲ್ಲೇಖಿಸಲ್ಪಟ್ಟ “ಸಮಂಜಸ ಮುನ್ನೆಚ್ಚರಿಕೆಗಳ” ಮೇಲೆ ಕೇಂದ್ರೀಕರಿಸಿದ ಲೇಖನದ ಭಾಗಗಳನ್ನು ಅನೇಕರು ಗ್ರಹಿಸಲು ತಪ್ಪಿಹೋಗಿದ್ದಾರೆ ಎಂದು ತೋರುತ್ತದೆ. ಲೇಖನವು ಕೆಲವರಿಗೆ ಬೆರೆಯದಿರಲು ಅನುಮತಿಯೊಂದನ್ನು ಕೊಟ್ಟಿತೋ ಎಂಬಂತೆ ಇದೆ. ಇದರ ಕುರಿತು ನನಗೇನೂ ಮಾಡಸಾಧ್ಯವಿಲ್ಲ ಆದರೆ, ನಾನು ತೀರ ವಿಷಮ ಸ್ಥಿತಿಯಲ್ಲಿರುವಾಗ ಮತ್ತು ನನಗೆ ನಿಜವಾಗಿಯೂ ನನ್ನ ಸಹೋದರರಿಂದ ಪ್ರೀತಿ ಮತ್ತು ಬೆಂಬಲದ ಅಗತ್ಯತೆ ಇರುವಾಗ ಏನು ಸಂಭವಿಸುವುದೋ ಎಂಬುದಾಗಿ ಯೋಚಿಸುತ್ತೇನೆ. ವೈರಸ್‌ ರೋಗಾಣುಗಳನ್ನು ಹತ್ತಿಸಿಕೊಳ್ಳುವ ಭಯ ಅವರಿಗಿರುವ ಕಾರಣ ನನ್ನನ್ನು ಭೇಟಿಯಾಗಲು ಕೆಲವರು ನಿರಾಕರಿಸುವರೋ?

ಎಮ್‌. ಎನ್‌., ಅಮೆರಿಕ

ಈ ನೇರವಾದ ಹೇಳಿಕೆಗಳನ್ನು ನಾವು ಗಣ್ಯ ಮಾಡುತ್ತೇವೆ. ಏಯ್ಡ್ಸ್‌ ಬಲಿಗಳಿಗೆ ಬೆಂಬಲವನ್ನು ನೀಡುವುದರ ಕುರಿತು ನಿರುತ್ತೇಜಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ವಾಸ್ತವವಾಗಿ, ನಾವು ಹೇಳಿದ್ದು: “ಪ್ರಸ್ತುತ ಒಮ್ಮತದ ಆಧಾರದ ಮೇಲೆ, ಆಕಸ್ಮಿಕ ಸಂಪರ್ಕವು ಏಯ್ಡ್ಸ್‌ಅನ್ನು ರವಾನಿಸುವುದಿಲ್ಲ. . . . ಏಯ್ಡ್ಸ್‌ ಹೊಂದಿರುವ ಜನರ ಮಧ್ಯೆಯಿರಲು ಒಬ್ಬರು ಅನುಚಿತವಾಗಿ ಭಯಭರಿತರಾಗುವ ಆವಶ್ಯಕತೆಯಿಲ್ಲ.” ಸೂಚಿಸಿದ ಮುನ್ನೆಚ್ಚರಿಕೆಗಳು, ಏಯ್ಡ್ಸ್‌ ಬಲಿಗಳೊಂದಿಗೆ ಅವರು ಸಹಾನುಭೂತಿಯಿಂದ ವ್ಯವಹರಿಸುವಾಗ, ಸ್ವಲ್ಪಮಟ್ಟಿಗೆ ಸಂರಕ್ಷಣೆಯಿದೆಯೆಂದು ತಿಳಿಯಲಿಕ್ಕೆ ಇತರರಿಗೆ ಸಹಾಯ ಮಾಡಬಲ್ಲದು.—ಸಂಪಾ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ