ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 4/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1995
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1994
ಇನ್ನಷ್ಟು
ಎಚ್ಚರ!—1995
g95 4/8 ಪು. 30

ನಮ್ಮ ವಾಚಕರಿಂದ

ಆಟಿಕೆಗಳು “ಹೆತ್ತವರೇ—ನಿಮ್ಮ ಮಕ್ಕಳ ಆಟಿಕೆಗಳನ್ನು ವಿವೇಕದಿಂದ ಆರಿಸಿರಿ,” ಎಂಬ ಉತ್ತಮವಾದ ಲೇಖನವನ್ನು ನಾನು ಇತ್ತೀಚೆಗೆ ಓದಿ ಮುಗಿಸಿದೆ. (ಸೆಪ್ಟಂಬರ್‌ 8, 1994, ಇಂಗ್ಲಿಷ್‌) ಒಬ್ಬ ಹೆತ್ತವನೋಪಾದಿ, ನಾನು ಮಾಹಿತಿಯನ್ನು ಆಳವಾಗಿ ಗಣ್ಯ ಮಾಡಿದ್ದೇನೆ. ಹಾಗಿದ್ದರೂ, ಒಂದು ಎಚ್ಚರಿಕೆಯ ಸಲಹೆಯನ್ನು ಕೂಡಿಸಲು ನಾನು ಇಚ್ಛಿಸುತ್ತೇನೆ. ಕೊಂಚ ಪ್ರಮಾಣದ ದ್ರವ್ಯವಿರುವ ಕೊಳಗಪಾತ್ರೆಯಲ್ಲಿ ಅಥವಾ ಬಕೆಟ್ಟಿನಲ್ಲಿ ಕೂಡ ಪುಟ್ಟ ಮಕ್ಕಳು ಮುಳುಗಬಹುದಾದ ಸಾಧ್ಯತೆಯ ಕುರಿತು ದಯವಿಟ್ಟು ವಾಚಕರನ್ನು ಎಚ್ಚರಿಸಿರಿ.

ಇ. ವಿ., ಅಮೆರಿಕ

ಜ್ಞಾಪನಾ ಪತ್ರಕ್ಕೆ ಗಣ್ಯತೆ ಸೂಚಿಸಲ್ಪಡುತ್ತದೆ.—ಸಂಪಾ.

ನಾನು ಮತ್ತು ನನ್ನ ಮಗ, ಯಾವುದು ಅವನಿಗೆ ಉಚಿತವಲ್ಲವೆಂದು ನಾನು ನೆನಸಿದೆನೋ ಆ ಒಂದು ಆಟಿಕೆಯನ್ನು ನಾನು ಖರೀದಿಸಬೇಕನ್ನುವ ಅವನ ಇಚ್ಛೆಯ ಕುರಿತಾದ ಚರ್ಚೆಯೊಂದರಲ್ಲಿ ತೊಡಗಿದ್ದೆವು. ಒಬ್ಬ ಎಳೆಯನೋಪಾದಿ, ನನ್ನ ತರ್ಕಸರಣಿಯೊಂದಿಗೆ ಸಮ್ಮತಿಸಲು ಕ್ಲಿಷ್ಟಕರವೆಂದು ಅವನು ಕಂಡುಕೊಂಡನು. ನಾವು ಮಾತನಾಡುತ್ತಿದ್ದಂತೆ, ಇತ್ತೀಚಿನ ಎಚ್ಚರ!ವನ್ನು ಒಳಗೊಂಡ ಅಂಚೆಯನ್ನು ನಾವು ನೋಡಿದೆವು, “ನಿಮ್ಮ ಮಗುವು ಯಾವುದರೊಂದಿಗೆ ಆಟವಾಡುತ್ತಿದೆ ಎಂಬುದು ನಿಮಗೆ ತಿಳಿದಿದೆಯೋ?” ಎಂಬ ಶೀರ್ಷಿಕೆಯನ್ನು ನೋಡಲು ನಾವಿಬ್ಬರು ಆಶ್ಚರ್ಯಗೊಂಡೆವು. ಆ ಲೇಖನಗಳಿಂದ ಅವನಿಗೆ ಮನವರಿಕೆಯಾಯಿತು ಮತ್ತು ನನ್ನ ತರ್ಕಸರಣಿಯನ್ನು ಗ್ರಹಿಸಲಿಕ್ಕೆ ಪ್ರಾರಂಭಿಸಿದನು.

ಡಬ್ಲ್ಯೂ. ಎಫ್‌., ಅಮೆರಿಕ

ಆ ಲೇಖನಗಳಿಗಾಗಿ ನಿಮಗೆ ಉಪಕಾರ. ನಾನು ಬಹುತೇಕ 13 ವರ್ಷ ಪ್ರಾಯದವಳು ಮತ್ತು ಮನೆಯ ಹೊರಗಿನ ಚಟುವಟಿಕೆಗಳನ್ನು, ಕಲೆಗಳನ್ನು, ಕರಕೌಶಲಗಳನ್ನು ಹಾಗೂ ಪಿಯಾನೋ ನುಡಿಸುವುದನ್ನು ಸಂತೋಷಿಸುತ್ತೇನೆ. ನಾನು ಚಿಕ್ಕವಳಾಗಿದ್ದಾಗ, ನಾನೇ ಸ್ವತಃ ನನ್ನ ಆಟಿಕೆಗಳನ್ನು ರೂಪಿಸುತ್ತಿದ್ದೆ. ವಿಡಿಯೋ ಆಟಗಳಿಗಿಂತ ಹೆಚ್ಚು ಉತ್ತಮವಾಗಿ ಈ ವಿಷಯಗಳನ್ನು ಮಾಡಲು ನಾನು ಇಷ್ಟಪಡುತ್ತೇನೆ ಯಾಕೆಂದರೆ ಅವು ನನಗೆ ಪೂರೈಕೆಯ ಭಾವನೆಯನ್ನು ನೀಡುತ್ತವೆ. ಈ ಲೇಖನಗಳು ಇತರ ಮಕ್ಕಳಿಗೆ, ಈ ವಿಷಯಗಳು ಎಷ್ಟೊಂದು ವಿನೋದವಾಗಿರಬಲ್ಲವೆಂದು ತಿಳಿಯಲು ಸಹಾಯ ನೀಡಿತೆಂದು ನಾನು ನೆನಸುತ್ತೇನೆ.

ಸಿ. ಎಸ್‌., ಅಮೆರಿಕ

ನೀರಾನೆ “ನೀರಾನೆ ರಕ್ಷಣೆಗೆ!” (ಅಕ್ಟೋಬರ್‌ 8, 1994) ಎಂಬ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ ನಿಮಗೆ ಉಪಕಾರ, ನೀರಾನೆ ಆ ಇಂಪಾಲವನ್ನು ಯಾವ ರೀತಿಯಲ್ಲಿ ರಕ್ಷಿಸಿತೆಂಬುದರ ಕುರಿತು ನಾನು ಓದಿದಾಗ ತುಂಬಾ ಭಾವನಾತ್ಮಕವಾಗಿ ಕಲಕಿಸಲ್ಪಟ್ಟೆ. ಇಂದಿನ ತನಕ, ನನ್ನ ದೃಷ್ಟಿಯಲ್ಲಿ ನೀರಿನಲ್ಲಿರುವ ನೀರಾನೆಯು ಬಹು ದೊಡ್ಡ ಬಾಯನ್ನು ಅಗಲಿಸಿ ಬಹು ದೊಡ್ಡ ಹಲ್ಲುಗಳನ್ನು ಪ್ರದರ್ಶಿಸುವ, ಅಪರಿಮಿತವಾದೊಂದು ದೇಹ ಮಾತ್ರ ಆಗಿತ್ತು. ಆ ಮೃಗಗಳು ನನಗೆ ಇಷ್ಟವೆಂದು ನಾನು ಹೇಳುತ್ತಿರಲಿಲ್ಲ, ಆದರೆ ಈ ಲೇಖನವು ನನ್ನ ಅಭಿಪ್ರಾಯವನ್ನು ಬದಲಾಯಿಸಿದೆ.

ವೈ. ಹೆಚ್‌., ಜಪಾನ್‌

ಯೋಚನಾ ಸ್ವಾತಂತ್ರ್ಯ ಅನೇಕ ಸಲ ನನ್ನ ಮನಸ್ಸನ್ನು ಅಪೇಕ್ಷಣೀಯವಲದ್ಲ ಆಲೋಚನೆಗಳ ಮೇಲೆ ಲಕ್ಷ್ಯವನ್ನಿಟ್ಟು, ಕೇವಲ ಅನಿಶ್ಚಿತವಾಗಿ ಸಾಗುವಂತೆ ನಾನು ಬಿಟ್ಟಿದ್ದೆ. ಆದುದರಿಂದಲೇ, “ಬೈಬಲಿನ ದೃಷ್ಟಿಕೋನ: ಬೈಬಲು ಯೋಚನಾ ಸ್ವಾತಂತ್ರ್ಯವನ್ನು ನಿರುತ್ತೇಜಿಸುತ್ತದೊ?” (ಜೂನ್‌ 8, 1994) ಎಂಬ ಲೇಖನವನ್ನು ಓದಲು ನಾನು ಸ್ತಬ್ಧನಾದೆ. ಒಬ್ಬನು ಉದ್ದೇಶಪೂರ್ವಕವಾಗಿ ಒಂದು ತಪ್ಪಾದ ಹಾದಿಯನ್ನು ಧ್ಯಾನಿಸುವುದಾದರೆ ಯೆಹೋವ ದೇವರು ಅದನ್ನು ಒಂದು ಪಾಪದೋಪಾದಿ ದೃಷ್ಟಿಸುತ್ತಾನೆ ಎಂಬುದಾಗಿ ನಾನೆಂದೂ ಮನಗಂಡಿರಲಿಲ್ಲ. ನನ್ನ ವಕ್ರವಾದ ಆಲೋಚನೆಯನ್ನು ಸರಿಪಡಿಸಲಿಕ್ಕೆ ಸಹಾಯ ನೀಡುವ ಮುಚ್ಚುಮರೆಯಿಲ್ಲದಂಥ ಸಲಹೆಯನ್ನು ಕೊಟ್ಟದ್ದಕ್ಕಾಗಿ ಯೆಹೋವನಿಗೆ ಆಭಾರಿಯಾಗಿದ್ದೇನೆ!

ಜೆ. ಪಿ., ಫಿಲಿಪ್ಪೀನ್ಸ್‌

ಒತ್ತಡ“ಬೈಬಲಿನ ದೃಷ್ಟಿಕೋನ: ನೀವು ಒತ್ತಡವನ್ನು ನಿಭಾಯಿಸುವಂತೆ ಯಾವುದು ಸಹಾಯ ಮಾಡಬಲ್ಲದು?” (ಸೆಪ್ಟಂಬರ್‌ 8, 1994) ಎಂಬ ಲೇಖನಕ್ಕಾಗಿ ನಿಮಗೆ ಬಹಳ ಉಪಕಾರ. ನಾನು ಒಬ್ಬ ಕ್ರೈಸ್ತನಾಗಿ ಬೆಳಸಲ್ಪಟ್ಟಿದ್ದೆ ಆದರೆ ನನ್ನ ಹದಿವಯಸ್ಸಿನ ವರುಷಗಳಲ್ಲಿ ಸತ್ಯವನ್ನು ಬಿಟ್ಟುಬಿಟ್ಟೆ. ಈಗ ಹಿಂದಿರುಗಿ ಮೂರು ವರ್ಷಗಳಾಯಿತು, ಆದರೆ ನಾನು ಒಬ್ಬ ಅವಿಶ್ವಾಸಿಯನ್ನು ಮದುವೆಯಾಗಿದ್ದೇನೆ. ಇಷ್ಟೊಂದು ಒತ್ತಡವನ್ನು ಹೊಂದಿದ್ದ ಕಾರಣವು ಇದೇ ಎಂಬ ಗ್ರಹಿಕೆಯಿಲ್ಲದೆ, ನಾನು ಮಾಡಿದಂಥ ತಪ್ಪುಗಳ ಕುರಿತು ಸತತವಾಗಿ ಚಿಂತಿಸುತ್ತೇನೆ. ಗತಕಾಲದ ಕುರಿತು ಚಿಂತಿಸುವುದು ಒಳ್ಳೆಯದಲ್ಲವೆಂದು ನಾನು ನೋಡುವಂತೆ ಸಹಾಯ ಮಾಡಿದ್ದಕ್ಕಾಗಿ ನಿಮಗೆ ಉಪಕಾರ. ಬದಲಿಗೆ, ನನ್ನ ಭವಿಷ್ಯತ್ತಿನ ಕುರಿತು ನಾನು ಕೆಲಸ ಮಾಡಬೇಕು.

ಆರ್‌. ಎಲ್‌., ಅಮೆರಿಕ

‘ಎಲ್ಲ ವಯಸ್ಸಿನ ಜನರು ಒತ್ತಡವನ್ನು ಅನುಭವಿಸುತ್ತಿದ್ದಾರೆ’ ಎಂದು ನೀವು ಹೇಳಿದಿರಿ. ನಾನು 21 ವರ್ಷದವಳು ಮತ್ತು ಉತ್ಕಟವಾದ ಒತ್ತಡದಿಂದ ನರಳುತ್ತಿದ್ದೇನೆ. ಎಂಟು ತಿಂಗಳಿನೊಳಗೆ ಎರಡು ಸಲ ಸ್ನಾಯು ಸೆಡೆತಕ್ಕಾಗಿ ಮತ್ತು ಒತ್ತಡ ಸಂಬಂಧಿತ ಅರೆತಲೆನೋವಿಗಾಗಿ ನಾನು ಆಸ್ಪತ್ರೆಯಲ್ಲಿದ್ದೆ. ಪ್ರತಿ ಸಲವೂ ಒತ್ತಡವನ್ನು ಹೊಂದಲು ನಾನು ತೀರಾ ಚಿಕ್ಕವಳೆಂದು ವೈದ್ಯರು ನನಗೆ ಹೇಳಿದರು. ನಿಮ್ಮ ಲೇಖನವು ಹೀಗೆ ನೆಮ್ಮದಿಯ ಒಂದು ಭಾವನೆಯನ್ನು ನನಗೆ ನೀಡಿತು.

ವಿ. ಪಿ., ಅಮೆರಿಕ

ಭೂಗೋಲಶಾಸ್ತ್ರ ಪಾಠಗಳು ನಾನೊಬ್ಬ 11 ವರ್ಷ ಪ್ರಾಯದ ಹುಡುಗಿ, ಮತ್ತು “ಟಿಟಿಕಾಕ ಸರೋವರದ ತೇಲುವ ದ್ವೀಪಗಳು” ಎಂಬ ಲೇಖನಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. (ಜೂನ್‌ 22, 1994, ಇಂಗ್ಲಿಷ್‌) ಭೂಗೋಲಶಾಸ್ತ್ರದ ತರಗತಿಯಲ್ಲಿ, ಟಿಟಿಕಾಕ ಸರೋವರದ ಮೇಲೆ ಜನರು ಜೀವಿಸಿದ್ದರೋ ಎಂದು ನಮ್ಮನ್ನು ಶಿಕ್ಷಕಿಯು ಕೇಳಿದರು. ನನ್ನ ಸಹಪಾಠಿಗಳೆಲ್ಲಾ ಇಲ್ಲ ಎಂದು ಹೇಳಿದರು. ಎಚ್ಚರ!ವನ್ನು ಓದಿದರ್ದಿಂದ, ನಾನು ಹೌದು ಎಂದು ಉತ್ತರಿಸಿದೆ. ನನಗೆ ಅದು ಹೇಗೆ ತಿಳಿದಿತ್ತೆಂದು ಶಿಕ್ಷಕಿಯು ಕೇಳಿದರು, ಇದು ಒಂದು ಒಳ್ಳೆಯ ಸಾಕ್ಷಿಯನ್ನು ನೀಡಲಿಕ್ಕೆ ನನಗೆ ಅವಕಾಶವನ್ನಿತ್ತಿತ್ತು.

ಎಸ್‌. ಬಿ., ಇಟಲಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ