ವಿಕಾಸ ವಾದದ ಪರಿಣಾಮಗಳು
ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲಿ, ಧರ್ಮ ಮತ್ತು ವಿಜ್ಞಾನವು, ಇದ್ದಮಟ್ಟಿಗೆ ಸ್ನೇಹಭಾವವುಳ್ಳ ಒಂದು ಸಂಬಂಧವನ್ನು ಅನುಭವಿಸಿದವು. ಜೀವಿತರ ಲೋಕವು “ಮುಂದಾದ ಪರ್ಯಾಲೋಚನೆ, ವಿವೇಕ, ಶ್ರೇಷ್ಠತೆ”ಯನ್ನು ತೋರಿಸುತ್ತದೆ ಮತ್ತು ನೈಸರ್ಗಿಕ ಇತಿಹಾಸದ ಒಂದು ಪ್ರಧಾನ ಉದ್ದೇಶವು “ವಿಶ್ವದ ಸೃಷ್ಟಿಕರ್ತನ ವಿಚಾರಗಳನ್ನು” ವಿಶ್ಲೇಷಿಸುವುದಾಗಿದೆಯೆಂದು, ದಿ ಆರಿಜಿನ್ ಆಫ್ ಸ್ಪೀಷೀಸ್ ಪ್ರಕಾಶಿಸಲ್ಪಡುವ ಕೇವಲ ಎರಡು ವರ್ಷಗಳ ಮುಂಚೆ, ಜೀವಶಾಸ್ತ್ರಜ್ಞ ಮತ್ತು ಹಾರ್ವಡ್ ಪ್ರೊಫೆಸರರಾದ ಲೂಈ ಅಗಾಸಿಸ್ ಬರೆದನು.
ಅಗಾಸಿಸನ ದೃಷ್ಟಿಕೋನವು ಅಸಾಮಾನ್ಯವಾಗಿರಲಿಲ್ಲ. ಅನೇಕ ಜನರು ವಿಜ್ಞಾನ ಮತ್ತು ಧರ್ಮವನ್ನು ಸಮರಸವಾಗಿ ವೀಕ್ಷಿಸಿದರು. ವಿಜ್ಞಾನದ ಅನೇಕ ಕಂಡುಹಿಡಿತಗಳು ಒಬ್ಬ ಭವ್ಯ ಸೃಷ್ಟಿಕರ್ತನ ಸಾಕ್ಷ್ಯವಾಗಿ ಗ್ರಹಿಸಲ್ಪಡುತ್ತಿದ್ದವು. ಆದರೆ ಧರ್ಮ ಮತ್ತು ವಿಜ್ಞಾನದ ನಡುವೆ ಒಂದು ನವಿರಾದ ಒಡಕು ಬೆಳೆಯುತ್ತಾ ಇತ್ತು.
ಸಂದೇಹವಾದವು ಬೇರನ್ನು ಬಿಡುತ್ತದೆ
ಯಾವುದರ ಪ್ರಥಮ ಸಂಪುಟವು 1830ರಲ್ಲಿ ತೋರಿಬಂತೋ, ಆ ಚಾರ್ಲ್ಸ್ ಲೈಯೆಲನ ಭೂವಿಜ್ಞಾನದ ಸೂತ್ರಗಳು (ಇಂಗ್ಲಿಷ್) ಪುಸ್ತಕವು ಬೈಬಲಿನ ಸೃಷ್ಟಿಯ ವೃತ್ತಾಂತದ ಮೇಲೆ ಸಂದೇಹವನ್ನು ಬೀರಿತು. ಸೃಷ್ಟಿಯು ಆರು ಅಕ್ಷರಶಃ ದಿನಗಳಲ್ಲಿ ಸಂಭವಿಸಿರುವ ಸಾಧ್ಯತೆಯಿಲ್ಲವೆಂದು ಲೈಯೆಲ್ ವಾದಿಸಿದನು. ಭೌತವಿಜ್ಞಾನಿ ಫ್ರೆಡ್ ಹೈಲ್ ಬರೆದುದು: “ಇಷ್ಟರ ವರೆಗೆ ಆಲೋಚಿಸಿರದ ಒಂದು ವಿಚಾರಕ್ಕಾಗಿ, ಬೈಬಲ್ ಹೇಗೂ ಕೆಲವು ಅಂಶಗಳಲ್ಲಿ ತಪ್ಪಾಗಿರಸಾಧ್ಯವಿದೆಯೆಂದು ಲೋಕಕ್ಕೆ ಮನಗಾಣಿಸುವುದರಲ್ಲಿ ಲೈಯೆಲನ ಪುಸ್ತಕಗಳು ಮುಖ್ಯವಾಗಿ ಜವಾಬ್ದಾರವಾಗಿದ್ದವು.”a
ಹೀಗೆ ಸಂದೇಹವಾದಕ್ಕಾಗಿ ಒಂದು ಅಸ್ತಿವಾರವು ಹಾಕಲ್ಪಟ್ಟಿತ್ತು. ಅನೇಕರ ಮನಸ್ಸುಗಳಲ್ಲಿ, ವಿಜ್ಞಾನ ಮತ್ತು ಬೈಬಲನ್ನು ಇನ್ನುಮುಂದೆ ಹೊಂದಿಸಲು ಸಾಧ್ಯವಿಲ್ಲದ್ದಾಯಿತು. ಒಂದು ಆಯ್ಕೆಯೊಂದಿಗೆ ಎದುರಿಸಲ್ಪಟ್ಟವರಾಗಿ, ಅನೇಕರು ವಿಜ್ಞಾನವನ್ನು ಆಯ್ದುಕೊಂಡರು. “ಲೈಯೆಲನ ಕೃತಿಯು ಹಳೆಯ ಒಡಂಬಡಿಕೆಯ ಆರಂಭದ ಅಧ್ಯಾಯಗಳನ್ನು ಸಂದೇಹದೊಳಗೆ ಎಸೆದಿತ್ತು, ಮತ್ತು ಅದರ ಸ್ಥಾನಭರ್ತಿ ಮಾಡಲು ಡಾರ್ವಿನನ ಪುಸ್ತಕವಿತ್ತು” ಎಂದು ಫ್ರೆಡ್ ಹೈಲ್ ಬರೆದರು.
ಬೈಬಲನ್ನು ದೇವರ ವಾಕ್ಯವಾಗಿ ಸ್ವೀಕರಿಸಲು ಬಯಸದವರಿಗಾಗಿ ದಿ ಆರಿಜಿನ್ ಆಫ್ ಸ್ಪೀಷೀಸ್ ಪುಸ್ತಕವು ಅನುಕೂಲವಾದ ಸಮಯದಲ್ಲಿ ಬಂತು. ಮನುಷ್ಯ ಮತ್ತು ವಿಜ್ಞಾನದ ನಡುವೆ ಆಗಲೇ ಒಂದು ಪ್ರಣಯವು ಆರಂಭವಾಗಿತ್ತು. ಉನ್ಮತ್ತರಾದ ಸಾರ್ವಜನಿಕರು, ವಿಜ್ಞಾನದ ವಾಗ್ದಾನಗಳು ಮತ್ತು ಸಾಧನೆಗಳಿಂದ ಓಲೈಸಲ್ಪಟ್ಟರು. ಒಬ್ಬ ಧೀರ ವಿವಾಹಾರ್ಥಿಯಂತೆ, ವಿಜ್ಞಾನವು ಮನುಷ್ಯನ ಮೇಲೆ ನವೀನ ಕೊಡುಗೆಗಳ ಮಳೆಗರೆಯಿತು—ದೂರದರ್ಶಕ, ಸೂಕ್ಷ್ಮದರ್ಶಕ, ಮತ್ತು ಆವಿಯೆಂಜಿನು, ಮತ್ತು ನಂತರ, ವಿದ್ಯುತ್, ಟೆಲಿಫೋನ್ ಮತ್ತು ಮೋಟಾರು. ಹಿಂದೆಂದೂ ಕಂಡಿಲ್ಲದ ಭೌತಿಕ ಲಾಭಗಳನ್ನು ಸಾಮಾನ್ಯ ಮನುಷ್ಯನಿಗೆ ಒದಗಿಸುತ್ತಿದ್ದ ತಂತ್ರಜ್ಞಾನವು ಆಗಲೇ ಒಂದು ಕೈಗಾರಿಕೆಯ ಕ್ರಾಂತಿಯನ್ನು ಪೋಷಿಸಿತ್ತು.
ವ್ಯತಿರಿಕ್ತವಾಗಿ, ಧರ್ಮವು ಪ್ರಗತಿಗೆ ಒಂದು ರಸ್ತೆತಡೆಗಟ್ಟಾಗಿ ಗ್ರಹಿಸಲ್ಪಟ್ಟಿತು. ಅದು ಜನರನ್ನು ವಿಜ್ಞಾನದ ಕ್ಷಿಪ್ರ ಉತ್ಕರ್ಷಗಳೊಂದಿಗೆ ಹೆಜ್ಜೆಯನ್ನಿಡಲು ಅಶಕ್ತರನ್ನಾಗಿ ಮಾಡುತ್ತಾ ಒಂದು ಮಂಪರಿನಲ್ಲಿ ಇಡುತ್ತಿತ್ತೆಂದು ಕೆಲವರಿಗೆ ಅನಿಸಿತು. ನಾಸ್ತಿಕರು ತಮ್ಮ ವೀಕ್ಷಣಗಳನ್ನು ಗಟ್ಟಿಯಾಗಿ ಮತ್ತು ಧೈರ್ಯದಿಂದ ಘೋಷಿಸಲು ಪ್ರಾರಂಭಿಸಿದರು. ದಿಟವಾಗಿ, ರಿಚರ್ಡ್ ಡಾಕಿನ್ಸ್ ಬರೆದಂತೆ, “ಒಬ್ಬ ಬುದ್ಧಿಗ್ರಾಹ್ಯ ನಾಸ್ತಿಕನಾಗಿರುವುದನ್ನು ಡಾರ್ವಿನನು ಸಾಧ್ಯಮಾಡಿದನು.” ವಿಜ್ಞಾನವು, ರಕ್ಷಣೆಗಾಗಿ ಮಾನವ ಕುಲದ ಹೊಸ ನಿರೀಕ್ಷೆಯಾಗಿ ಪರಿಣಮಿಸುತ್ತಿತ್ತು.
ಆರಂಭದಲ್ಲಿ, ಧಾರ್ಮಿಕ ಮುಖಂಡರು ವಿಕಾಸದ ವಾದವನ್ನು ವಿರೋಧಿಸಿದರು. ಆದರೆ ದಶಕಗಳು ಸಂದಂತೆ, ವೈದಿಕರು ಜನಸಾಮಾನ್ಯ ಅಭಿಪ್ರಾಯಕ್ಕೆ ಬಾಗುತ್ತಾ, ವಿಕಾಸ ಮತ್ತು ಸೃಷ್ಟಿಯ ಒಂದು ಮಿಶ್ರಣವನ್ನು ಸ್ವೀಕರಿಸಿದರು. 1938ರ ನ್ಯೂ ಯಾರ್ಕ್ ಟೈಮ್ಸ್‌ನ ಒಂದು ತಲೆಪಂಕ್ತಿಯು ಪ್ರಕಟಿಸಿದ್ದು: “ಚರ್ಚ್ ಆಫ್ ಇಂಗ್ಲೆಂಡ್ ವರದಿಯು ಸೃಷ್ಟಿಯ ವಿಕಾಸಾತ್ಮಕ ವಿಚಾರವನ್ನು ಎತ್ತಿಹಿಡಿಯುತ್ತದೆ.” ಯಾರ್ಕ್‌ನ ಆರ್ಚ್‌ಬಿಷಪರ ಕೆಳಗಿರುವ ಒಂದು ಮಂಡಳಿಯಿಂದ, ಆ ವರದಿಯು ತಿಳಿಸಿದ್ದು: “ವಿಕಾಸದ ಒಂದು ವಾದಕ್ಕೆ ಆದಿಕಾಂಡ I ಮತ್ತು IIರಲ್ಲಿರುವ ಎರಡು ಸೃಷ್ಟಿ ಆಖ್ಯಾನಗಳಿಂದ ಯಾವುದೇ ಆಕ್ಷೇಪಣೆಯು ದೊರೆಯಸಾಧ್ಯವಿಲ್ಲ, ಏಕೆಂದರೆ ಶಿಕ್ಷಿತರಾದ ಕ್ರೈಸ್ತರೊಳಗೆ, ಇವು ಮೂಲದಲ್ಲಿ ಮಿಥ್ಯಾ ಕಥನಗಳು ಮತ್ತು ಅವುಗಳ ಮೌಲ್ಯವು ನಮಗೆ, ಐತಿಹಾಸಿಕತೆಗಿಂಥ ಸಾಂಕೇತಿಕವಾಗಿದೆಯೆಂದು ಸಾಮಾನ್ಯವಾಗಿ ಸಮ್ಮತಿಸಲಾಗುತ್ತದೆ.” ಆರ್ಚ್‌ಬಿಷಪರ ಮಂಡಳಿಯು ತೀರ್ಮಾನಿಸಿದ್ದು: “ನೀವೇನನ್ನು ಇಷ್ಟಪಡುತ್ತೀರೋ ಅದನ್ನು ಯೋಚಿಸಿ, ಇನ್ನೂ ಒಬ್ಬ ಕ್ರೈಸ್ತರಾಗಿರಬಲ್ಲಿರಿ.”
ಅನೇಕರಿಗೆ, ವಿಕಾಸದೊಂದಿಗೆ ಬೈಬಲನ್ನು ರಾಜಿಮಾಡಿಕೊಳ್ಳುವ ಅಂತಹ ಪ್ರಯತ್ನಗಳು, ಬೈಬಲಿನ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದವು, ಅಷ್ಟೇ. ಅದು ಬೈಬಲಿನ ವ್ಯಾಪಕವಾದ ಸಂದೇಹವಾದದಲ್ಲಿ ಫಲಿಸಿತು, ಮತ್ತು ಅದು ಇಂದೂ, ಕೆಲವು ಧಾರ್ಮಿಕ ಮುಖಂಡರಲ್ಲೂ ಅಸ್ತಿತ್ವದಲ್ಲಿದೆ. ಬೈಬಲ್ ಒಂದು ವಿಜ್ಞಾನಪೂರ್ವ ಯುಗದಲ್ಲಿ ಬರೆಯಲ್ಪಟ್ಟಿತ್ತು ಮತ್ತು ಈ ಕಾರಣದಿಂದ ಪೂರ್ವಾಭಿಪ್ರಾಯ ಮತ್ತು ಅಜ್ಞಾನವನ್ನು ಪ್ರತಿಬಿಂಬಿಸಿತೆಂದು ಪ್ರತಿಪಾದಿಸಿದ, ಕೆನಡದಲ್ಲಿನ ಒಬ್ಬ ಎಪಿಸ್ಕೊಪಲ್ ಬಿಷಪರ ಹೇಳಿಕೆಗಳು ಲಾಕ್ಷಣಿಕವಾಗಿವೆ. ಯೇಸುವಿನ ಜನನ ಮತ್ತು ಪುನರುತ್ಥಾನದ ಕುರಿತಾಗಿ “ಐತಿಹಾಸಿಕ ತಪ್ಪುಗಳು” ಮತ್ತು “ಸುಸ್ಪಷ್ಟ ಅತಿಶಯೋಕಿಗ್ತಳು” ಬೈಬಲಿನಲ್ಲಿ ಅಡಕವಾಗಿವೆಯೆಂದು ಅವರು ಹೇಳಿದರು.
ಹೀಗೆ, ವೈದಿಕರ ಸದಸ್ಯರನ್ನು ಒಳಗೂಡಿಸಿ, ಅನೇಕರು ಬೈಬಲನ್ನು ಅಪಕೀರ್ತಿಗೊಳಿಸಲು ತ್ವರಿತರಾಗಿದ್ದಾರೆ. ಆದರೆ ಅಂತಹ ಸಂದೇಹವಾದವು ಎಲ್ಲಿಗೆ ನಡಿಸಿದೆ? ಯಾವ ಪರ್ಯಾಯ ನಿರೀಕ್ಷೆಯು ನೀಡಲ್ಪಟ್ಟಿದೆ? ಬೈಬಲಿನಲ್ಲಿ ದುರ್ಬಲಗೊಳಿಸಲ್ಪಟ್ಟ ನಂಬಿಕೆಯೊಂದಿಗೆ, ಕೆಲವರು ತತ್ವಜ್ಞಾನ ಮತ್ತು ರಾಜಕೀಯದೆಡೆಗೆ ನೋಡಿದ್ದಾರೆ.
ತತ್ವಜ್ಞಾನ ಮತ್ತು ರಾಜಕೀಯದ ಮೇಲಿನ ಪ್ರಭಾವಗಳು
ಮಾನವ ನಡವಳಿಕೆಯ ಮೇಲೆ ದಿ ಆರಿಜಿನ್ ಆಫ್ ಸ್ಪೀಷೀಸ್ ಒಂದು ನವೀನ ಹೊರನೋಟವನ್ನು ನೀಡಿತು. ಒಂದು ರಾಷ್ಟವ್ರು ಇನ್ನೊಂದು ರಾಷ್ಟ್ರವನ್ನು ಜಯಿಸುವುದರಲ್ಲಿ ಯಶಸ್ವಿಯಾಗುತ್ತದೇಕೆ? ಒಂದು ಜಾತಿಯು ಇನ್ನೊಂದು ಜಾತಿಯ ಮೇಲೆ ಮೇಲುಗೈಯನ್ನು ಪಡೆಯುತ್ತದೇಕೆ? ನೈಸರ್ಗಿಕ ಆಯ್ಕೆ ಮತ್ತು ಅತಿ ಯೋಗ್ಯವಾದದರ್ದ ಬದುಕುಳಿಯುವಿಕೆಯ ಮೇಲಿನ ಅದರ ಒತ್ತಿನೊಂದಿಗೆ, ದಿ ಆರಿಜಿನ್ ಆಫ್ ಸ್ಪೀಷೀಸ್, 19ನೇ ಶತಮಾನದ ಮುಂದಾಳುತ್ವ ವಹಿಸುತ್ತಿದ್ದ ತತ್ವಜ್ಞಾನಿಗಳನ್ನು ಪ್ರಚೋದಿಸಿದ ವಿವರಣೆಗಳನ್ನು ಕೊಟ್ಟಿತು.
ಫ್ರೀಡ್ರಿಕ್ ನೀಟ್ಚ (1844-1900) ಮತ್ತು ಕಾರ್ಲ್ ಮಾರ್ಕ್ಸ್ (1818-1883), ರಾಜಕೀಯದ ಮೇಲೆ ಒಂದು ಆಳವಾದ ಪ್ರಭಾವವನ್ನು ಬೀರಿದಂತಹ ತತ್ವಜ್ಞಾನಿಗಳಾಗಿದ್ದರು. ಇಬ್ಬರೂ ವಿಕಾಸದಿಂದ ಮರುಳುಗೊಳಿಸಲ್ಪಟ್ಟಿದ್ದರು. “ಡಾರ್ವಿನನ ಪುಸ್ತಕವು ಪ್ರಾಮುಖ್ಯವಾಗಿದ್ದು, ಇತಿಹಾಸದಲ್ಲಿನ ವರ್ಗೀಯ ಹೋರಾಟಕ್ಕಾಗಿ ನನಗೆ ಒಂದು ಸ್ವಾಭಾವಿಕ ವೈಜ್ಞಾನಿಕ ಆಧಾರವಾಗಿ ಕಾರ್ಯನಡಿಸುತ್ತದೆ” ಎಂದು ಮಾರ್ಕ್ಸ್ ಹೇಳಿದನು. ಇತಿಹಾಸಗಾರ ವಿಲ್ ಡ್ಯುರ್ಯಾಂಟ್, ನೀಟ್ಟನನ್ನು “ಡಾರ್ವಿನನ ಮಗು” ಎಂದು ಕರೆದರು. ತತ್ವಜ್ಞಾನ—ಒಂದು ಹೊರಮೇರೆಯ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕವು, ನೀಟ್ಟನ ನಂಬಿಕೆಗಳಲ್ಲಿ ಒಂದನ್ನು ಸಾರಾಂಶಿಸಿತು: “ಬಲಶಾಲಿಗಳು, ಸಾಹಸಿಗರು, ದಬ್ಬಾಳಿಕೆಯವರು, ಹೆಮ್ಮೆಯುಳ್ಳವರು, ಭವಿಷ್ಯತ್ತಿನ ಸಮಾಜಕ್ಕೆ ಅತ್ಯುತ್ಕೃಷವ್ಟಾಗಿ ತಕ್ಕವರಾಗಿದ್ದಾರೆ.”
ಭವಿಷ್ಯತ್ತಿನಲ್ಲಿ “ಅಂತ್ಯವಿಲ್ಲದ ಸಂಖ್ಯೆಯ ಕೆಳಮಟ್ಟದ ಜಾತಿಗಳು, ಹೆಚ್ಚು ಉನ್ನತವಾಗಿ ಸಂಸ್ಕರಿಸಲ್ಪಟ್ಟ ಜಾತಿಗಳಿಂದ ಲೋಕದಾದ್ಯಂತವಾಗಿ ನಿರ್ಮೂಲಗೊಳಿಸಲ್ಪಟ್ಟಿರುವುವು” ಎಂದು ಡಾರ್ವಿನನು ನಂಬಿದನು, ಮತ್ತು ಒಬ್ಬ ಮಿತ್ರನಿಗೆ ಒಂದು ಪತ್ರದಲ್ಲಿ ಬರೆದನು. ಇತರರ ಮೇಲೆ ಯೂರೋಪಿನವರ ವಿಜಯವನ್ನು ಒಂದು ಪೂರ್ವನಿದರ್ಶನವಾಗಿ ಅವನು ಉಪಯೋಗಿಸಿದನು ಮತ್ತು ಇದನ್ನು “ಅಸ್ತಿತ್ವಕ್ಕಾಗಿರುವ ಹೋರಾಟ”ಕ್ಕೆ ಜೋಡಿಸಿದನು.
ಅಂತಹ ಹೇಳಿಕೆಗಳನ್ನು ಶಕ್ತಿಶಾಲಿ ವ್ಯಕ್ತಿಗಳು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳಲು ತ್ವರಿತರಾಗಿದ್ದರು. ಇತಿಹಾಸದ ಹೊರಮೇರೆ ಎಂಬ ಪುಸ್ತಕದಲ್ಲಿ ಏಚ್. ಜಿ. ವೆಲ್ಸ್ ಬರೆದುದು: “ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿದ್ದ ಪ್ರಬಲ ಜನರು, ಯಾವುದರಲ್ಲಿ ಬಲಶಾಲಿಗಳು ಮತ್ತು ಕುಯುಕ್ತಿಯುಳ್ಳವರು, ದುರ್ಬಲ ಮತ್ತು ಭರವಸವಿಡಸಾಧ್ಯವಿರುವವರನ್ನು ಸೋಲಿಸುತ್ತಾರೋ, ಆ ಅಸ್ತಿತ್ವಕ್ಕಾಗಿರುವ ಹೋರಾಟದ ಬಲದಿಂದ ತಾವು ಮೇಲುಗೈಯನ್ನು ಪಡೆದೆವೆಂದು ನಂಬಿದರು. ಮತ್ತು ಇನ್ನೂ ಹೆಚ್ಚಾಗಿ ತಾವು ಬಲಶಾಲಿಗಳು, ಚುರುಕಾದವರು, ನಿರ್ದಯಿಗಳು, ‘ವ್ಯಾವಹಾರಿಕರು,’ ಆತ್ಮ ದುರಭಿಮಾನಿಗಳಾಗಿರಲೇಬೇಕೆಂದು ಅವರು ನಂಬಿದರು.”
ಹೀಗೆ, “ಅತಿ ಯೋಗ್ಯವಾದದರ್ದ ಬದುಕುಳಿಯುವಿಕೆ”ಯು ತತ್ವಜ್ಞಾನೀಯ, ಸಾಮಾಜಿಕ, ಮತ್ತು ರಾಜಕೀಯ ಅರ್ಥಗಳನ್ನು ತೆಗೆದುಕೊಳ್ಳಲಾರಂಭಿಸಿತು, ಮತ್ತು ಅನೇಕಸಲ ಒಂದು ಅಸಂಗತ ಮಟ್ಟದ ತನಕ. “ಕೆಲವರಿಗೆ ಯುದ್ಧವು ‘ಒಂದು ಜೀವಶಾಸ್ತ್ರೀಯ ಆವಶ್ಯಕತೆ’ಯಾಯಿತು,” ಎಂದು ಇತಿಹಾಸದ ಮೈಲಿಗಲ್ಲುಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳಿತು. ಮತ್ತು ಮುಂದಿನ ಶತಮಾನದಲ್ಲಿ “ಡಾರ್ವಿನ್ಯನ್ ವಿಚಾರಗಳು ಹಿಟ್ಲರನ ಜಾತೀಯ ಶ್ರೇಷ್ಠತೆಯ ಬೋಧನೆಯ ಒಂದು ಅಖಂಡ ಭಾಗವನ್ನು ರೂಪಿಸಿದವು” ಎಂದು ಈ ಪುಸ್ತಕವು ಗಮನಿಸಿತು.
ತಮ್ಮ ವಿಚಾರಗಳು ಹೇಗೆ ಅನ್ವಯಿಸಲ್ಪಡುವುವು, ಅಥವಾ ದುರನಯ್ವಿಸಲ್ಪಡುವುವು ಎಂದು ನೋಡುವಷ್ಟು ಸಮಯ, ಡಾರ್ವಿನ್, ಮಾರ್ಕ್ಸ್ ಇಲ್ಲವೇ ನೀಟ್ಚ ಬದುಕಲಿಲ್ಲವೆಂಬುದು ಸತ್ಯ. ಅಸ್ತಿತ್ವಕ್ಕಾಗಿರುವ ಹೋರಾಟವು ಮನುಷ್ಯನ ಜೀವನ ರೀತಿಯನ್ನು ಉತ್ತಮಗೊಳಿಸುವುದೆಂದು ಅವರು ನಿರೀಕ್ಷಿಸಿದ್ದರು, ಖಂಡಿತ. “ಎಲ್ಲಾ ಶಾರೀರಕ ಮತ್ತು ಮಾನಸಿಕ ಗುಣಗಳು ಪರಿಪೂರ್ಣತೆಯ ಕಡೆಗೆ ಪ್ರಗತಿ ಮಾಡಲು ಚಲಿಸುವುವು” ಎಂದು ದಿ ಆರಿಜಿನ್ ಆಫ್ ಸ್ಪೀಷೀಸ್‌ನಲ್ಲಿ ಡಾರ್ವಿನ್ ಬರೆದನು. ಇಪ್ಪತ್ತನೆಯ ಶತಮಾನದ ಪಾದ್ರಿ ಮತ್ತು ಭೌತವಿಜ್ಞಾನಿ ಪಿಯರ್ ಟೇಯಾರ್ ಡ ಶಾರ್ಡಾನ್ ಇದರೊಂದಿಗೆ ಸಮ್ಮತಿಸುತ್ತಾ, ಕಟ್ಟಕಡೆಗೆ ‘ಇಡೀ ಮಾನವ ಜಾತಿಯ ಮನಸ್ಸುಗಳ ವಿಕಾಸವು’ ಸಂಭವಿಸುವುದು; ‘ಎಲ್ಲರೂ ಒಂದೇ ಗುರಿಯ ಕಡೆಗೆ ಸಮರಸವಾಗಿ ಕೆಲಸ ಮಾಡುವರು’ ಎಂದು ವಾದ ಹೂಡಿದನು.
ಅಭಿವೃದ್ಧಿಯಲ್ಲ, ಅವನತಿ
ಅಂತಹ ಅಭಿವೃದ್ಧಿಯು ಸಂಭವಿಸುತ್ತಿರುವುದನ್ನು ನೀವು ಕಾಣುತ್ತೀರೋ? ಡ ಶಾರ್ಡಾನನ ಆಶಾವಾದದ ಮೇಲೆ ಒಂದು ಮಿಥ್ಯೆಗೆ ಅಂಟಿಕೊಂಡಿರುವುದು (ಇಂಗ್ಲಿಷ್) ಎಂಬ ಪುಸ್ತಕವು ಹೇಳಿಕೆಯನ್ನಿತ್ತದ್ದು: “ಮಾನವ ರಕ್ತಪಾತದ ಇತಿಹಾಸದ ಕುರಿತಾಗಿ ಮತ್ತು ಪಶ್ಚಿಮ ಆಫ್ರಿಕದ ವರ್ಣಭೇದ ನೀತಿಯಂತಹ ಜಾತೀಯ ವ್ಯವಸ್ಥೆಗಳ ಕುರಿತಾಗಿ ಡ ಶಾರ್ಡಾನ್ ಮರೆತಿರಬೇಕು. ಈ ಲೋಕದಲ್ಲಿ ಜೀವಿಸುತ್ತಿರದ ಒಬ್ಬ ಮನುಷ್ಯನಂತೆ ಅವನು ಧ್ವನಿಸುತ್ತಾನೆ.” ಐಕ್ಯದ ಕಡೆಗೆ ಪ್ರಗತಿ ಮಾಡುವ ಬದಲಿಗೆ, ಈ ಶತಮಾನದಲ್ಲಿ ಮಾನವತ್ವವು ಪೂರ್ವನಿದರ್ಶನವಿಲ್ಲದಂತಹ ಪ್ರಮಾಣದಲ್ಲಿ ಜಾತೀಯ ಮತ್ತು ರಾಷ್ಟ್ರೀಯ ವಿಭಜನೆಯನ್ನು ಅನುಭವಿಸಿದೆ.
ಮನುಷ್ಯನು ಪರಿಪೂರ್ಣತೆಯ ಅಥವಾ ಕಡಿಮೆಪಕ್ಷ ಅಭಿವೃದ್ಧಿಯ ಕಡೆಗೆ ಪ್ರಗತಿ ಮಾಡುವನು, ಎಂದು ದಿ ಆರಿಜಿನ್ ಆಫ್ ಸ್ಪೀಷೀಸ್‌ನಲ್ಲಿ ನೀಡಲ್ಪಟ್ಟಿರುವ ನಿರೀಕ್ಷೆಯು ತೀರ ಹೆಚ್ಚಾಗಿ ನೆರವೇರದೆ ಹೋಗಿದೆ. ಮತ್ತು ಆ ನಿರೀಕ್ಷೆಯು ಸಮಯದ ಗತಿಸುವಿಕೆಯೊಂದಿಗೆ ಕಡಮೆಯಾಗುತ್ತಾ ಹೋಗುತ್ತಿದೆ, ಏಕೆಂದರೆ ವಿಕಾಸದ ಸಾಮಾನ್ಯ ಸ್ವೀಕರಣೆಯಂದಿನಿಂದ, ಮಾನವ ಕುಟುಂಬವು ಹೆಚ್ಚಾಗಿ ಬರ್ಬರತೆಯೊಳಗೆ ಇಳಿದಿದೆ. ಪರಿಗಣಿಸಿರಿ: ಈ ಶತಮಾನದ ಯುದ್ಧಗಳಲ್ಲಿ ಹತ್ತು ಕೋಟಿಗಿಂತಲೂ ಹೆಚ್ಚು—ಲೋಕ ಯುದ್ಧ IIರಲ್ಲಿಯೇ ಸುಮಾರು ಐದು ಕೋಟಿ—ಜನರು ಕೊಲ್ಲಲ್ಪಟ್ಟಿದ್ದಾರೆ. ರುಆಂಡ ಮತ್ತು ಪೂರ್ವ ಯುಗೊಸ್ಲಾವಿಯದಂತಹ ಸ್ಥಳಗಳಲ್ಲಿನ ಕುಲಸಂಬಂಧೀ ಹತಿಸುವಿಕೆಯನ್ನೂ ಪರಿಗಣಿಸಿರಿ.
ಗತ ಶತಮಾನಗಳಲ್ಲಿ ಯಾವುದೇ ಯುದ್ಧಗಳು ಮತ್ತು ಕ್ರೌರ್ಯಗಳು ಇರಲಿಲ್ಲವೆಂಬುದು ಇದರ ಅರ್ಥವೊ? ಇಲ್ಲ, ಖಂಡಿತವಾಗಿಯೂ ಅವು ಇದ್ದವು. ಆದರೆ ವಿಕಾಸ ವಾದದ ಸ್ವೀಕರಣೆ, ಅಸ್ತಿತ್ವಕ್ಕಾಗಿರುವ ಹೋರಾಟದ ಈ ಪಾಶವೀಯ ಮನೋವೃತ್ತಿ, ಯೋಗ್ಯವಾದದರ್ದ ಬದುಕುಳಿಯುವಿಕೆಯ ಈ ವಿಚಾರವು, ಮನುಷ್ಯನ ಜೀವನ ರೀತಿಯನ್ನು ಅಭಿವೃದ್ಧಿಗೊಳಿಸಲು ಕಾರ್ಯನಡಿಸಿಲ್ಲ. ಹೀಗೆ ಮನುಷ್ಯನ ಎಲ್ಲಾ ತೊಂದರೆಗಳಿಗೆ ವಿಕಾಸವನ್ನು ದೂಷಿಸಲು ಸಾಧ್ಯವಿಲ್ಲದಿರುವಾಗ, ಅದು ಮಾನವ ಕುಟುಂಬವನ್ನು ಇನ್ನೂ ಹೆಚ್ಚಿನ ದ್ವೇಷ, ಪಾತಕ, ಹಿಂಸಾಚಾರ, ಅನೈತಿಕತೆ, ಮತ್ತು ಅವನತಿಯೊಳಗೆ ದೂಡಲು ಸಹಾಯ ಮಾಡಿದೆ. ಮಾನವರು ಪ್ರಾಣಿಗಳಿಂದ ಬಂದರು ಎಂದು ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿರುವುದರಿಂದ, ಹೆಚ್ಚೆಚ್ಚು ಜನರು ಪ್ರಾಣಿಗಳಂತೆ ವರ್ತಿಸುವುದು ಆಶ್ಚರ್ಯಕರವಾಗಿರುವುದಿಲ್ಲ.
[ಅಧ್ಯಯನ ಪ್ರಶ್ನೆಗಳು]
a ವಾಸ್ತವವಾಗಿ, ಭೂಮಿಯು ಆರು ಅಕ್ಷರಶಃ ದಿನಗಳಲ್ಲಿ (144 ತಾಸುಗಳು) ಸೃಷ್ಟಿಸಲ್ಪಟ್ಟಿತೆಂದು ಬೈಬಲ್ ಕಲಿಸುವುದಿಲ್ಲ. ಈ ತಪ್ಪು ತಿಳುವಳಿಕೆಯ ಮೇಲೆ ಹೆಚ್ಚಿನ ಮಾಹಿತಿಗಾಗಿ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್., ಇವರಿಂದ ಪ್ರಕಾಶಿಸಲಾದ, ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? (ಇಂಗ್ಲಿಷ್) ಎಂಬ ಪುಸ್ತಕದ 25-37 ಪುಟಗಳನ್ನು ನೋಡಿರಿ.
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಡಾರ್ವಿನನ ಪುಸ್ತಕವು, ಇತಿಹಾಸದಲ್ಲಿನ ವರ್ಗೀಯ ಹೋರಾಟಕ್ಕಾಗಿ ನನಗೆ ಒಂದು ಸ್ವಾಭಾವಿಕ ವೈಜ್ಞಾನಿಕ ಆಧಾರವಾಗಿ ಕಾರ್ಯನಡಿಸುತ್ತದೆ.’—ಕಾರ್ಲ್ ಮಾರ್ಕ್ಸ್
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಕೆಳಮಟ್ಟದ ಜಾತಿಗಳು, ಹೆಚ್ಚು ಉನ್ನತವಾಗಿ ಸಂಸ್ಕರಿಸಲ್ಪಟ್ಟ ಜಾತಿಗಳಿಂದ ನಿರ್ಮೂಲಗೊಳಿಸಲ್ಪಟ್ಟಿರುವುವು.’—ಚಾರ್ಲ್ಸ್ ಡಾರ್ವಿನ್
[ಪುಟ 7 ರಲ್ಲಿರುವ ಚಿತ್ರ ಕೃಪೆ]
U.S. National Archives photo
[ಪುಟ 7 ರಲ್ಲಿರುವ ಚಿತ್ರ ಕೃಪೆ]
Copyright British Museum