ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 9/8 ಪು. 8-9
  • ವಿಕಾಸ ಮತ್ತು ನೀವು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಕಾಸ ಮತ್ತು ನೀವು
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಾನವ ಪ್ರಯತ್ನವು ಏನನ್ನು ಉತ್ಪಾದಿಸಿದೆ?
  • ಬೈಬಲು ಭವಿಷ್ಯ ನುಡಿದಂತಹ ವಿಷಯ
  • ಒಂದು ಪುಸ್ತಕವು ಲೋಕವನ್ನು ಚಕಿತಗೊಳಿಸುತ್ತದೆ
    ಎಚ್ಚರ!—1995
  • ವಿಕಾಸ ವಾದದ ಪರಿಣಾಮಗಳು
    ಎಚ್ಚರ!—1995
  • ವಿಕಾಸ ವಾದ ವಿಚಾರಣೆಗೊಳಗಾಗುತ್ತದೆ
    ಕಾವಲಿನಬುರುಜು—1994
  • ವಿಜ್ಞಾನ, ಧರ್ಮ, ಮತ್ತು ಸತ್ಯಕ್ಕಾಗಿ ಅನ್ವೇಷಣೆ
    ಕಾವಲಿನಬುರುಜು—1994
ಇನ್ನಷ್ಟು
ಎಚ್ಚರ!—1995
g95 9/8 ಪು. 8-9

ವಿಕಾಸ ಮತ್ತು ನೀವು

ಹತ್ತೊಂಬತ್ತನೆಯ ಶತಮಾನದ ಸಮಯದಲ್ಲಿ, ಮನುಷ್ಯನು ದೈವಿಕ ಹಸ್ತಕ್ಷೇಪವಿಲ್ಲದೆ ಬದುಕುಳಿದಿದ್ದನು ಮತ್ತು ಹೀಗೆಯೇ ಮುಂದುವರಿಯುವನೆಂದು, ದಿ ಆರಿಜಿನ್‌ ಆಫ್‌ ಸ್ಪೀಷೀಸ್‌ ಪುಸ್ತಕವು ಜನರ ಸಮೂಹಗಳಿಗೆ ಮನಗಾಣಿಸಿತು. ವೈಜ್ಞಾನಿಕ ಉತ್ಕರ್ಷಗಳಿಂದ ಮೋಹಗೊಳಿಸಲ್ಪಟ್ಟು, ಇನ್ನುಮುಂದೆ ದೇವರ ಆವಶ್ಯಕತೆಯಿಲ್ಲವೆಂದೂ, ವಿಜ್ಞಾನವು ಮಾನವ ಜಾತಿಯನ್ನು ಉಳಿಸಬಲ್ಲದೆಂದೂ ಅನೇಕರಿಗನಿಸಿತು. 19ನೆಯ ಶತಮಾನವು “ಸಯುಕಿಕ್ತವಾಗಿ ಅನ್ವಯಿಸಲ್ಪಟ್ಟ ಮಾನವ ಪ್ರಯತ್ನವು ಲೋಕವನ್ನು ಮಾರ್ಪಡಿಸಬಲ್ಲದೆಂಬ ಒಂದು ಮನಗಾಣಿಕೆಯಿಂದ ಸಚೇತನವಾಗಿತ್ತು” ಎಂದು ಪ್ರಗತಿಯ ಯುಗ (ಇಂಗ್ಲಿಷ್‌) ಎಂಬ ಪುಸ್ತಕವು ಗಮನಿಸಿತು.

ಆದಾಗಲೂ, ಆ ಶತಮಾನದ ಅಂತ್ಯದಷ್ಟರಲ್ಲಿ, ಚಾರ್ಲ್ಸ್‌ ಡಾರ್ವಿನ್‌ ಸಹ ತನ್ನ ಆಶಾವಾದದಲ್ಲಿ ಕದಲಿದನು. ಒಬ್ಬ ಇತಿಹಾಸಕಾರನಿಗನುಸಾರವಾಗಿ, ವಿಕಾಸದ ವಾದವು “ದೇವರನ್ನು ಕೊಂದಿತ್ತು ಮತ್ತು ಮಾನವ ಕುಲದ ಭವಿಷ್ಯತ್ತಿಗಾಗಿರುವ ಫಲಿತಾಂಶಗಳು ಎಣಿಸಲಸಾಧ್ಯವಾದವುಗಳಾಗಿದ್ದವು” ಎಂದು ಡಾರ್ವಿನನು ಭಯಪಟ್ಟನು. ಡಾರ್ವಿನನ ಒಬ್ಬ ಸ್ವಲ್ಪ ಎಳೆಯ ಸಮಕಾಲೀನನಾದ ಆಲ್ಫ್ರೆಡ್‌ ರಸಲ್‌ ವಾಲಸ್‌, ಮರುಜ್ಞಾಪಿಸಿದ್ದು: “ಡಾರ್ವಿನನೊಂದಿಗಿನ ನನ್ನ ಕೊನೆಯ [ಡಾರ್ವಿನನ ಮರಣದ ಸ್ವಲ್ಪ ಮುಂಚೆ] ಸಂಭಾಷಣೆಯಲ್ಲಿ ಮಾನವ ಕುಲದ ಭವಿಷ್ಯತ್ತಿನ ಕುರಿತಾಗಿ ಒಂದು ತೀರ ವಿಷಣ್ಣ ನೋಟವನ್ನು ಅವನು ವ್ಯಕ್ತಪಡಿಸಿದನು.”

ಮಾನವ ಪ್ರಯತ್ನವು ಏನನ್ನು ಉತ್ಪಾದಿಸಿದೆ?

ಮುಂದೆ ನಿಜವಾಗಿಯೂ ತುಂಬ ವಿಷಣ್ಣತೆಯು ಕಾದಿತ್ತು ಎಂದು ಅಂದಿನಿಂದ 20ನೆಯ ಶತಮಾನದ ಇತಿಹಾಸವು ಪ್ರಕಟಿಸಿದೆ. ಡಾರ್ವಿನನ ಸಮಯದಂದಿನಿಂದ ತಂತ್ರಜ್ಞಾನದ ಸಾಧನೆಗಳು, ಎಲ್ಲಾ ಮಾನವ ಇತಿಹಾಸದಲ್ಲಿ ಇಷ್ಟರ ತನಕ ಅತೀ ಕತ್ತಲಿನ, ತೀರ ಹಿಂಸಾಚಾರದ ಯುಗವಾಗಿ ಪರಿಣಮಿಸಿರುವಂತಹದ್ದನ್ನು ಮರೆಮಾಡಿವೆ ಅಷ್ಟೆ. ಇತಿಹಾಸಕಾರನಾದ ಏಚ್‌. ಜಿ. ವೆಲ್ಸ್‌ ಯಾವುದನ್ನು “ಒಂದು ನಿಜ ನೀತಿಗೆಡಿಸುವಿಕೆ”ಯೆಂದು ವರ್ಣಿಸಿದ್ದಾನೋ ಅದರ ಮಧ್ಯದಲ್ಲಿ ನಾವು ಜೀವಿಸುತ್ತಿದ್ದೇವೆ.

ವೆಲ್ಸ್‌ ಆ ಹೇಳಿಕೆಯನ್ನು ಮಾಡಿದಂದಿನಿಂದ (ಸುಮಾರು 75 ವರ್ಷಗಳ ಹಿಂದೆ), ಲೋಕವು ಹೆಚ್ಚು ನೀತಿಗೆಡಿಸುವಿಕೆಯನ್ನು ಅನುಭವಿಸುವುದನ್ನು ಮುಂದುವರಿಸಿದೆ. ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ಸಾಮಾಜಿಕ ಏಜೆನ್ಸಿಗಳು, ಮಾನವ ಸರಕಾರಗಳು, ಅಥವಾ ಈ ಲೋಕದ ಧರ್ಮಗಳು ಪ್ರಯತ್ನಿಸಿರುವ ಯಾವ ವಿಷಯವೂ, ಸನ್ನಿವೇಶಕ್ಕೆ ಪರಿಹಾರವನ್ನು ನೀಡಿಲ್ಲ ಅಥವಾ ನೀತಿಗೆಡಿಸುವಿಕೆಯ ಉಬ್ಬರವನ್ನು ಪ್ರತಿಬಂಧಿಸಿಯೂ ಇಲ್ಲ. ಪರಿಸ್ಥಿತಿಗಳು ಹದಗೆಡುತ್ತಾ ಮುಂದುವರಿದಿವೆ.

ಆದುದರಿಂದ, ವಾಸ್ತವಿಕವಾಗಿ, ಇದು ಕೇಳಲ್ಪಡಬೇಕು: ಮಾನವ ಪ್ರಯತ್ನವು ಏನನ್ನು ಉತ್ಪಾದಿಸಿದೆ? ವಿಜ್ಞಾನ ಮತ್ತು ತಂತ್ರಜ್ಞಾನಗಳು ಒಂದು ಉತ್ಕೃಷ್ಟ ಲೋಕವನ್ನು ತಂದಿವೆಯೊ? “ನಾವು ದಿನನಿತ್ಯದ ವಾರ್ತಾಪತ್ರಿಕೆಗಳನ್ನು ತೆರೆದು, ಏನು ನಡಿಯುತ್ತಿದೆಯೆಂದು ನೋಡುವಾಗ, ಸಮಸ್ಯೆಗಳು ವೈಜ್ಞಾನಿಕವಾಗಿಲ್ಲ. ಅವು ಸಾಮಾಜಿಕ ವ್ಯವಸ್ಥಾಪನೆ, ವಿಷಯಗಳು ಹೆಚ್ಚು ದೊಡ್ಡದಾಗಿರುವುದರ, ಜನರು ಲಾಭದ ಹಿಂದೆ ಹೋಗುತ್ತಾ ಮಾನವ ಅಗತ್ಯಗಳನ್ನು ಅಲಕ್ಷಿಸುತ್ತಿರುವುದರ ಕುರಿತ ಸಮಸ್ಯೆಗಳಾಗಿವೆ” ಎಂದು ಜೀವಶಾಸ್ತ್ರಜ್ಞ ರೂತ್‌ ಹಬ್ಬರ್ಡ್‌ ಹೇಳುತ್ತಾರೆ. ಹಬ್ಬರ್ಡ್‌ ಕೂಡಿಸಿದ್ದು: “ಸಂಪನ್ಮೂಲಗಳ ಒಂದು ಮಿತವಾದ ಹಂಚಿಕೆಯಲ್ಲಿ, ವಿಜ್ಞಾನವು ಲೋಕದಲ್ಲಿರುವ ಜನರಿಗೆ ತೊಂದರೆ ಕೊಡುವ ಯಾವುದೇ ಅಥವಾ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದೆಂದು ನಾನು ನಿಜವಾಗಿಯೂ ನೆನಸುವುದಿಲ್ಲ.”

ನಿಜವಾಗಿಯೂ, ಮನುಷ್ಯನು ಚಂದ್ರನಲ್ಲಿಗೆ ಪ್ರಯಾಣಿಸಬಲ್ಲನಾದರೂ ಮಾನವ ಕುಟುಂಬದ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲದವನಾದರೆ ಏನು ಲಾಭ? ಅಣು ಬಾಂಬಿನಂತಹ, ಹೆಚ್ಚೆಚ್ಚು ನಾಶಕಾರಕ ಆಯುಧಗಳ ನಿರ್ಮಾಣವು, ಯುದ್ಧಗಳು ಮತ್ತು ಕುಲಸಂಬಂಧೀ ಹಿಂಸಾಚಾರಕ್ಕೆ ಒಂದು ಅಂತ್ಯವನ್ನು ತಂದಿತೋ? ವಿಜ್ಞಾನದ ಸಾಧನೆಗಳು, ಪಾತಕ, ಕುಟುಂಬ ಒಡೆತ, ರತಿ ರವಾನಿತ ರೋಗಗಳು, ಅನೈತಿಕತೆ, ಜಾರಜ ಜನನಗಳು, ಪ್ರಮುಖ ಸ್ಥಾನಗಳಲ್ಲಿ ಭ್ರಷ್ಟಾಚಾರ, ಬಡತನ, ಹಸಿವೆ, ನಿರ್ವಸಿತತೆ, ಅಮಲೌಷಧದ ದುರುಪಯೋಗ, ಮಾಲಿನ್ಯವನ್ನು ಗಮನಾರ್ಹವಾಗಿ ಕುಂದಿಸಿವೆಯೋ? ಇಲ್ಲ, ವ್ಯತಿರಿಕ್ತವಾಗಿ, ವಿಜ್ಞಾನವು ಈ ವಿಷಯಗಳಲ್ಲಿ ಕೆಲವನ್ನು ಹೆಚ್ಚು ಕೆಡಿಸಿದೆ. ದೇವರನ್ನು ತೊರೆದು ವಿಕಾಸ ಮತ್ತು ವಿಜ್ಞಾನವನ್ನು ಅದರ ಬದಲಿಯಾಗಿ ಇಟ್ಟಿರುವುದರಿಂದ, ಮಾನವ ಕುಟುಂಬವು ತನ್ನ ಪರಿಸ್ಥಿತಿಗೆ ಸಹಾಯ ಮಾಡಿಲ್ಲ, ಬದಲಾಗಿ ಅದನ್ನು ಘಾಸಿಗೊಳಿಸಿದೆ.

ಪ್ರಥಮ ಮಾನವರನ್ನು ಸೃಷ್ಟಿಸಿದಂತಹ ಒಬ್ಬ ದೇವರಿದ್ದಾನೆಂಬುದಕ್ಕೆ ವಿರುದ್ಧವಾಗಿ, ಮನುಷ್ಯನು ಕಪಿಯಂತಹ ಜೀವಿಗಳಿಂದ ವಿಕಸಿಸಿದನೆಂಬ ವಾದವನ್ನು ಅನೇಕರು ಪುನರ್‌ಪರ್ಯಾಲೋಚಿಸುತ್ತಿದ್ದಾರೆ ಎಂಬುದು ಆಶ್ಚರ್ಯಜನಕವಲ್ಲ. ಅಮೆರಿಕದವರಲ್ಲಿ ಕೇವಲ 9 ಶೇಕಡ ಜನರು, ಮನುಷ್ಯನು ಯಾವುದೇ ದೈವಿಕ ಹಸ್ತಕ್ಷೇಪವಿಲ್ಲದೇ ವಿಕಸಿಸಿದನು ಎಂಬ ನಂಬಿಕೆಯನ್ನು ಹಿಡಿದುಕೊಂಡಿದ್ದಾರೆ; ಅವನ ಸದ್ಯದ ರೂಪದಲ್ಲಿ ಮನುಷ್ಯನನ್ನು ದೇವರು ಸೃಷ್ಟಿಸಿದನೆಂಬ ವಿಚಾರವನ್ನು 47 ಶೇಕಡ ಜನರು ಸ್ವೀಕರಿಸುತ್ತಾರೆಂದು, ಅಮೆರಿಕದಲ್ಲಿ ಒಂದು ಗ್ಯಾಲಪ್‌ ಸಮೀಕ್ಷೆಯು ಪ್ರಕಟಪಡಿಸಿತು.

ಬೈಬಲು ಭವಿಷ್ಯ ನುಡಿದಂತಹ ವಿಷಯ

ಮನುಷ್ಯನು ಪರಿಪೂರ್ಣತೆಯ ಕಡೆಗೆ ಪ್ರಗತಿ ಮಾಡುವನೆಂದು ದಿ ಆರಿಜಿನ್‌ ಆಫ್‌ ಸ್ಪೀಷೀಸ್‌ ಮುಂದಾಗಿ ತಿಳಿಸಿರುವಾಗ, ಲೋಕವು ಒಂದು ನೈತಿಕ ಬಿಕ್ಕಟ್ಟಿನಿಂದ ಓಲಾಡಿಸಲ್ಪಡುವುದೆಂದು ಬೈಬಲ್‌ ಮುಂತಿಳಿಸಿತು. (ಮತ್ತಾಯ 24:3-12; 2 ತಿಮೊಥೆಯ 3:1-5) ಈ ಬಿಕ್ಕಟ್ಟು ಒಂದು ಪರಮಾವಧಿಯನ್ನು ತಲಪುವುದೆಂದೂ, ಇದರ ನಂತರ ನಂಬಿಗಸ್ತ ಮಾನವ ಕುಲದ ಬಾಧ್ಯತೆಯು, ಇಂದಿನ ಎಲ್ಲಾ ಸಮಸ್ಯೆಗಳಿಂದ ಮುಕ್ತವಾಗಿರುವ ಒಂದು ಪ್ರಮೋದವನವಾಗಿರುವುದೆಂದು ಬೈಬಲ್‌ ಮುಂತಿಳಿಸಿತು.—ಕೀರ್ತನೆ 37:10, 11, 29; ಯೆಶಾಯ 11:6-9; 35:1-7; ಪ್ರಕಟನೆ 21:4, 5.

ಅನೇಕರು ಬೈಬಲನ್ನು ತೀವ್ರ ಆಸಕ್ತಿಯಿಂದ ಪರಿಶೀಲಿಸುವಂತೆ ಈ ನಿರೀಕ್ಷೆಯು ಮಾಡಿದೆ. ಜೀವಿತದ ಉದ್ದೇಶವು ನಿಜವಾಗಿಯೂ ಅಸ್ತಿತ್ವಕ್ಕಾಗಿರುವ ಒಂದು ಹೋರಾಟಕ್ಕಿಂತಲೂ ಹೆಚ್ಚಾಗಿರಸಾಧ್ಯವೋ? ಮಾನವನ ಗತಕಾಲಕ್ಕೆ ಮಾತ್ರವಲ್ಲದೆ, ನಿಮ್ಮದನ್ನು ಸೇರಿಸಿ ಆತನ ಭವಿಷ್ಯತ್ತಿಗೂ ಬೈಬಲ್‌ ಒಂದು ಕೀಲಿ ಕೈಯನ್ನು ಹೊಂದಿರಸಾಧ್ಯವೊ? ದೇವರ ಕುರಿತಾಗಿ ಮತ್ತು ಈ ಭೂಮಿ ಹಾಗೂ ಅದರ ಜನರಿಗಾಗಿರುವ ಆತನ ಉದ್ದೇಶದ ಕುರಿತಾಗಿ ಬೈಬಲ್‌ ನಿಜವಾಗಿಯೂ ಏನನ್ನು ಕಲಿಸುತ್ತದೆಂಬುದನ್ನು ಶೋಧಿಸುವುದು ತುಂಬ ಸಾರ್ಥಕವಾಗಿರುವುದು. ನೀವು ಹೆಚ್ಚಿನ ಮಾಹಿತಿಯನ್ನು ಇಷ್ಟಪಡುವಲ್ಲಿ, ಯೆಹೋವನ ಸಾಕ್ಷಿಗಳು ನಿಮಗೆ ನೆರವನ್ನು ನೀಡಲು ಸಂತೋಷಿಸುವರು.

[ಪುಟ 0 ರಲ್ಲಿರುವ ಚೌಕ]

ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ (ಇಂಗ್ಲಿಷ್‌) ಎಂಬ ಪುಸ್ತಕವನ್ನು ಉಪಯೋಗಿಸುತ್ತಾ ಕೋಟಿಗಟ್ಟಲೆ ಜನರು, ಸೃಷ್ಟಿಯ ದೇವರ ಕುರಿತಾಗಿ ಸಾಕ್ಷ್ಯವನ್ನು ಪುನರ್‌ಪರಿಶೀಲಿಸುವಂತೆ ಸಹಾಯ ಮಾಡಲ್ಪಟ್ಟಿದ್ದಾರೆ.* ಸದ್ಯದ ಸಮಯದ ತನಕ, 27 ಭಾಷೆಗಳಲ್ಲಿ ಸುಮಾರು ಮೂರು ಕೋಟಿ ಪ್ರತಿಗಳು ಮುದ್ರಿಸಲ್ಪಟ್ಟಿವೆ. ಎಚ್ಚರ! ಪತ್ರಿಕೆಯು ಸಹ, ವಿಕಾಸ ವಾದದ ಸಮಂಜಸತೆಯ ಕುರಿತಾಗಿ ನಿಜ ವಿಜ್ಞಾನದ ವಾಸ್ತವಾಂಶಗಳು ಏನನ್ನು ತೋರಿಸುತ್ತವೆ ಎಂಬುದರ ಕುರಿತಾಗಿ ಮಾಹಿತಿಯನ್ನು ಪ್ರಕಾಶಿಸುವುದನ್ನು ಮುಂದುವರಿಸುತ್ತಿದೆ.

[ಅಧ್ಯಯನ ಪ್ರಶ್ನೆಗಳು]

ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ನ್ಯೂ ಯಾರ್ಕ್‌, ಇನ್ಕ್‌., ಇವರಿಂದ ಪ್ರಕಾಶಿತ.

[Picture on page 8, 9]

ವಿಕಾಸ ವಾದಕ್ಕೆ ವ್ಯತಿರಿಕ್ತವಾಗಿ, ಬೈಬಲು ಇಂದಿನ ನೈತಿಕ ಬಿಕ್ಕಟ್ಟು ಮತ್ತು ಅದರ ಪರಿಹಾರ—ಒಂದು ತೊಂದರೆಮುಕ್ತ ಪ್ರಮೋದವನದ ಕುರಿತಾಗಿ ಭವಿಷ್ಯ ನುಡಿಯಿತು

[ಪುಟ 9 ರಲ್ಲಿರುವ ಚಿತ್ರ ಕೃಪೆ]

U.S. Coast Guard photo

[ಪುಟ 9 ರಲ್ಲಿರುವ ಚಿತ್ರ ಕೃಪೆ]

Starving child: WHO photo by P. Almasy

[ಪುಟ 9 ರಲ್ಲಿರುವ ಚಿತ್ರ ಕೃಪೆ]

Right: U.S. National Archives photo

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ