ನಾವು ವೃದ್ಧರಾಗಿ ಸಾಯುವುದೇಕೆ?
“ವೈಯಕ್ತಿಕ ಜೀವಕೋಶಗಳೊಳಗೆ ಸಂಭವಿಸುವ ವಯಸ್ಸಿನ ಬದಲಾವಣೆಗಳ ಕಂಡುಹಿಡಿಯುವಿಕೆಯ ಹೊರತು, ವೃದ್ಧಾಪ್ಯದ ಮೂಲಭೂತ ಕಾರಣದ ಕುರಿತಾಗಿ ನಾವು ಒಂದು ಶತಮಾನದ ಹಿಂದೆ ತಿಳಿದಿದುದ್ದಕ್ಕಿಂತಲೂ, ಇಂದು ನಮಗೆ ಅತ್ಯಧಿಕ ವಿಷಯವು ತಿಳಿದಿಲ್ಲ” ಎಂದು ಡಾ. ಲೆನರ್ಡ್ ಹೇಫ್ಲಿಕ್ ಒಪ್ಪಿಕೊಳ್ಳುತ್ತಾರೆ. ವಾಸ್ತವದಲ್ಲಿ, ಅವರು ಹೇಳುವುದು: “ವೃದ್ಧಾಪ್ಯವು ಏಕೆ ಸಂಭವಿಸಬೇಕು ಎಂಬುದಕ್ಕೆ ಸಮಂಜಸವಾದ ಯಾವ ಕಾರಣವೂ ನಮಗೆ ತಿಳಿದಿಲ್ಲ.”
ಸುಮಾರು 30 ವರ್ಷಗಳ ಹಿಂದೆ ನಡೆಸಲ್ಪಟ್ಟ ಪ್ರಯೋಗಾಲಯ ಪ್ರಯೋಗಗಳು ಪ್ರಕಟಪಡಿಸಿದ್ದೇನಂದರೆ, ಸಾಮಾನ್ಯ ಮಾನವ ಜೀವಕೋಶಗಳನ್ನು ಭ್ರೂಣವೊಂದರಿಂದ ತೆಗೆದು, ಅತ್ಯುತ್ತಮ ಪರಿಸ್ಥಿತಿಗಳ ಕೆಳಗೆ ಸಂಗೋಪನಕೃಷಿ ಮಾಡಲ್ಪಟ್ಟಾಗ, ಜೀವಕೋಶಗಳು 50 ಬಾರಿ ದ್ವಿಗುಣೀಕರಣಗೊಂಡ ಬಳಿಕ ಮರಣವು ಪರಿಣಮಿಸಿತು. ಇನ್ನೊಂದು ಕಡೆಯಲ್ಲಿ, ತೀರ ವೃದ್ಧನಾದ ವ್ಯಕ್ತಿಯೊಬ್ಬನಿಂದ ತೆಗೆದುಕೊಳ್ಳಲ್ಪಟ್ಟ ಜೀವಕೋಶಗಳು, ಅವು ಸಾಯುವುದಕ್ಕೆ ಮೊದಲು ಕೇವಲ ಎರಡರಿಂದ ಹತ್ತು ಬಾರಿಗಳ ನಡುವೆ ವಿಭಜಿತವಾದವು. ಹೀಗೆ ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿಯ ದಿ ಇನ್‌ಕ್ರೆಡಿಬ್‌ಲ್ ಮಷೀನ್ ಎಂಬ ಪುಸ್ತಕವು ಗಮನಿಸಿದ್ದು: “ಜನನದಲ್ಲಿಯೇ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಮರಣವು ನಿಷ್ಕೃಷ್ಟವಾಗಿ ಯೋಜಿಸಲ್ಪಡುತ್ತದೆ ಎಂಬ ಕಲ್ಪನೆಯನ್ನು ಪ್ರಾಯೋಗಿಕ ಪುರಾವೆಯು ಬೆಂಬಲಿಸುತ್ತದೆ.”
ಹಾಗಿದ್ದರೂ, ಜೀವಕೋಶ ವಿಭಜನೆಯ ನಿಂತುಹೋಗುವಿಕೆಯು ಅನಿವಾರ್ಯವಾಗಿದೆಯೊ? ಇಲ್ಲ, ಅದು ಅನಿವಾರ್ಯವಾಗಿಲ್ಲ. “ನಿಜವಾಗಿಯೂ, ಮುದಿಯಾಗದಿರುವಿಕೆ [ವೃದ್ಧರಾಗದಿರುವುದು]ಯು, ಭೂಮಿಯ ಮೇಲಿರುವ ಸಜೀವ ಜೀವಿಗಳ ಮೂಲ ಸ್ಥಿತಿಯಾಗಿದ್ದಂತೆ ತೋರುತ್ತದೆ” ಎಂದು ವೃದ್ಧಾಪ್ಯದ ಕುರಿತ ಇಬ್ಬರು ಪರಿಣತರು, ಪ್ರೊಫೆಸರ್ ರಾಬರ್ಟ್ ಎಮ್. ಸಾಪೋಲ್‌ಸ್ಕಿ ಮತ್ತು ಪ್ರೊಫೆಸರ್ ಕೇಲಬ್ ಈ. ಫಿಂಚ್ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಸ್ಯವ್ಯಂಗ್ಯವಾಗಿ, ಕೆಲವು ಅಸಾಮಾನ್ಯ ಮಾನವ ಜೀವಕೋಶಗಳು ಸಹ ಇಂದು ಮುದಿಯಾಗುವುದಿಲ್ಲ.
ಪ್ರಥಮವಾಗಿ ಮಾನವನಿಂದ ಮಾನವನಿಗೆ ಹೃದಯ ಸ್ಥಳಾಂತರ ಮಾಡಿದ, ಡಾ. ಕ್ರಿಸ್ಟಿಆನ್ ಬಾರ್ನರ್ಡ್‌ರಿಂದ ಸಂಪಾದಿಸಲ್ಪಟ್ಟ ದ ಬಾಡಿ ಮಷೀನ್ ಎಂಬ ಪುಸ್ತಕವು ವಿವರಿಸಿದ್ದು: “ಅಂತಹ ಜೀವಕೋಶಗಳು ಅಸಾಮಾನ್ಯವಾಗಿದ್ದವು ಎಂಬುದು ಸ್ಪಷ್ಟವಾಗಿಗುವ ತನಕ, ಮುದಿಯಾಗುವಿಕೆಯಲ್ಲಿ ಆಸಕ್ತರಾದ ಜೀವಶಾಸ್ತ್ರಜ್ಞರಿಗೆ ‘ಅಮರ ಜೀವಕೋಶಗಳ’ ಕಂಡುಹಿಡಿಯುವಿಕೆಯು ಒಂದು ಪ್ರಮುಖ ತಲೆನೋವನ್ನು ತಂದೊಡ್ಡಿತು.” ಹೌದು, ಕ್ಯಾನ್ಸರ್ ಕಣಗಳ ಕೆಲವು ಶ್ರೇಣಿಗಳನ್ನು ಅಂತ್ಯರಹಿತವೆಂಬಂತೆ ತೋರುವ ದ್ವಿಗುಣೀಕರಣದ ಮುಂದುವರಿಸಿದ ಸಂಗೋಪನಕೃಷಿಯ ಮೂಲಕ ಪೋಷಿಸಸಾಧ್ಯವಿದೆ! ದ ವರ್ಲ್ಡ್ ಬುಕ್ ಎನ್‌ಸೈಕ್ಲೊಪೀಡಿಯ ಗಮನಿಸಿದ್ದು: “ಇಂತಹ ಎಷ್ಟು ಅಸಾಮಾನ್ಯ ಜೀವಕೋಶಗಳು ಬದುಕಿ ಉಳಿಯುತ್ತವೆ ಎಂಬುದನ್ನು ವಿಜ್ಞಾನಿಗಳು ನಿರ್ಧರಿಸಸಾಧ್ಯವಿರುವಲ್ಲಿ, ಜೀವಕೋಶಗಳು ಮುದಿಯಾಗುವ ಪ್ರಕ್ರಿಯೆಯೊಳಗೆ ಒಳನೋಟವನ್ನು ಅವರು ಪಡೆಯಬಹುದು.” ಹೀಗೆ, ಸುವ್ಯಕ್ತವಾಗಿ ಇಂದು ಕೆಲವು ಕ್ಯಾನ್ಸರ್ ಜೀವಕೋಶಗಳು ಪ್ರಯೋಗಶಾಲೆಯಲ್ಲಿ ಅಪರಿಮಿತವಾಗಿ ಸಂಖ್ಯಾಭಿವೃದ್ಧಿಯಾಗಬಲ್ಲವು, ಆದರೆ ಸಾಮಾನ್ಯ ಜೀವಕೋಶದ ಸಂಗೋಪನಕೃಷಿಗಳು ಮುದಿಯಾಗಿ ಸಾಯುತ್ತವೆ.
ಒಂದು ದೋಷಯುಕ್ತ ಯಂತ್ರಸಂಯೋಜನೆ
ದ ಬಾಡಿ ಮಷೀನ್ ಪುಸ್ತಕವು ಹೇಳುವಂತೆ, ಮಾನವ ವೃದ್ಧಾಪ್ಯ ಮತ್ತು ಮರಣಗಳು “[ಸಾಮಾನ್ಯ] ಜೀವಕೋಶ ಸಂಖ್ಯೆಯಲ್ಲಿನ ಸಂಖ್ಯಾಭಿವೃದ್ಧಿಯ ಸಾಮರ್ಥ್ಯದ ಕೊರತೆ”ಯ ಫಲಿತಾಂಶವಾಗಿವೆಯೊ? ಹಾಗಿರುವಲ್ಲಿ, ಆ ಪುಸ್ತಕವು ಹೇಳಿದ್ದು, “ಮಾನವ ಜೀವಮಾನವನ್ನು ಹೆಚ್ಚಿಸಲಿಕ್ಕಾಗಿರುವ ಒಂದು ಪ್ರಯತ್ನದಲ್ಲಿ ಇದನ್ನು ಕೌಶಲದಿಂದ ನಿರ್ವಹಿಸಲಿಕ್ಕಾಗಿ, ಈ ಪರಿಮಿತ ಪುನರಾವರ್ತನ ಸಾಮರ್ಥ್ಯವನ್ನು ನಿಯಂತ್ರಿಸುವ ಯಂತ್ರಸಂಯೋಜನೆಯನ್ನು ಕಂಡುಹಿಡಿಯುವುದು ಮತ್ತು ತಿಳಿದುಕೊಳ್ಳುವುದು ಪ್ರಾಮುಖ್ಯವಾಗಿದೆ.”
ಹಿಂದಿನ ಲೇಖನದಿಂದ ನೀವು ಜ್ಞಾಪಿಸಿಕೊಳ್ಳಬಹುದಾಗಿರುವ, “ಗರ್ಭಧಾರಣೆಯಿಂದ ಜನನದ ವರೆಗೆ ಮತ್ತು ತದನಂತರ ಲೈಂಗಿಕ ಪ್ರೌಢತೆ ಹಾಗೂ ಪ್ರೌಢಾವಸ್ಥೆಗೆ ನಮ್ಮನ್ನು ಕೊಂಡೊಯ್ಯುವ ಅದ್ಭುತಗಳ” ಕುರಿತು ಡಾ. ಹೇಫ್ಲಿಕ್ ಮಾತಾಡಿದರು. ಬಳಿಕ ಅವರು “ಆ ಅದ್ಭುತಗಳನ್ನು ಸದಾಕಾಲ ಕಾಪಾಡಿಕೊಳ್ಳುವ ಹೆಚ್ಚು ಸರಳವಾಗಿ ತೋರಬಹುದಾದ ಪ್ರಕ್ರಿಯೆ”ಗೆ ನಿರ್ದೇಶಿಸಿದರು.
ಅನೇಕ ವರ್ಷಗಳ ಯೋಜಿತ ಪ್ರಯತ್ನಗಳ ಹೊರತಾಗಿಯೂ, ವಿಜ್ಞಾನಿಗಳು ಜೀವವನ್ನು ಸದಾಕಾಲ ಕಾಪಾಡುವಂತಹ ಒಂದು ಯಂತ್ರಸಂಯೋಜನೆಯನ್ನು ಕಂಡುಹಿಡಿಯುವುದರಲ್ಲಿ ಸೋತುಹೋಗಿದ್ದಾರೆ. “ವೃದ್ಧಾಪ್ಯದ ಕಾರಣಗಳು ಒಂದು ರಹಸ್ಯವಾಗಿ ಉಳಿದಿವೆ” ಎಂದು ದಿ ಇನ್‌ಕ್ರೆಡಿಬ್‌ಲ್ ಮಷೀನ್ ಎಂಬ ಪುಸ್ತಕವು ಒಪ್ಪಿಕೊಳ್ಳುತ್ತದೆ.
ಹಾಗಿದ್ದರೂ, ವೃದ್ಧಾಪ್ಯ ಮತ್ತು ಮರಣದ ಕಾರಣವು ವಾಸ್ತವವಾಗಿ ರಹಸ್ಯವಾಗಿಲ್ಲ. ಅದಕ್ಕೆ ಉತ್ತರವು ಲಭ್ಯವಿದೆ.
ಉತ್ತರವೇನು?
“ಗರ್ಭಧಾರಣೆಯಿಂದ ಜನನದ ವರೆಗೆ . . . ನಮ್ಮನ್ನು ಕೊಂಡೊಯ್ಯುವ ಅದ್ಭುತ”ಗಳಿಗೆ ಜವಾಬ್ದಾರನಾದ, ಒಬ್ಬನ—ನಮ್ಮ ಸರ್ವಜ್ಞಾನಿ ಸೃಷ್ಟಿಕರ್ತನಾದ ಯೆಹೋವ ದೇವರ—ಬಳಿ ಇದಕ್ಕೆ ಉತ್ತರವಿದೆ. “ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ” ಎಂದು ಆತನ ಕುರಿತು ಬೈಬಲ್ ಹೇಳುತ್ತದೆ. “ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ. ನಮ್ಮನ್ನು ಉಂಟುಮಾಡಿದವನು ಆತನೇ, ಮತ್ತು ನಾವಾಗಿಯೇ ಅಲ್ಲ.”—ಕೀರ್ತನೆ 36:9; 100:3, NW.
ನಿಮ್ಮನ್ನು ಒಬ್ಬ ಅಪೂರ್ವ ವ್ಯಕ್ತಿಯನ್ನಾಗಿ ಮಾಡಲಿಕ್ಕಾಗಿ, ಮಾಹಿತಿಗಳ ಒಂದು ಪುಸ್ತಕವನ್ನು ಬರೆಯುವ ಮೂಲಕವೋ ಎಂಬಂತೆ, ಯೆಹೋವ ದೇವರು ಗರ್ಭಾಶಯದಲ್ಲಿನ ನಿಮ್ಮ ವಿಕಸನವನ್ನು ಎಷ್ಟು ಅದ್ಭುತಕರವಾಗಿ ನಿಷ್ಕೃಷ್ಟ ರೀತಿಯಲ್ಲಿ ಯೋಜಿಸಿದನೆಂಬುದರ ಕುರಿತು ಆಲೋಚಿಸಿರಿ! “ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ?” ಎಂದು ಬೈಬಲ್ ಕೀರ್ತನೆಗಾರನೊಬ್ಬನು ಬರೆದನು. “ನಾನು ಗುಪ್ತಸ್ಥಳದಲ್ಲಿ . . . ರಚಿಸಲ್ಪಡುತ್ತಾ ಇದ್ದಾಗ ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ. ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು; . . . ಅದರ ಎಲ್ಲಾ ದಿನಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು.” (ಓರೆಅಕ್ಷರಗಳು ನಮ್ಮವು.) (ಕೀರ್ತನೆ 139:13, 15, 16) ಸುವ್ಯಕ್ತವಾಗಿ, ಅದ್ಭುತಕರವಾಗಿ ವಿನ್ಯಾಸಿಸಲ್ಪಟ್ಟಿರುವ ನಮ್ಮ ಮಾನವ ದೇಹವು, ಕೇವಲ ಆಕಸ್ಮಿಕ ಘಟನೆಯ ಉತ್ಪನ್ನವಾಗಿಲ್ಲ!
ಆದರೂ, ನಾವು ಸದಾಕಾಲ ಜೀವಿಸಸಾಧ್ಯವಾಗುವಂತೆ ಯೆಹೋವ ದೇವರು ನಮ್ಮನ್ನು ಪರಿಪೂರ್ಣರನ್ನಾಗಿ ಸೃಷ್ಟಿಸಿರುವುದಾದರೆ, ನಾವು ವೃದ್ಧರಾಗಿ ಸಾಯುವುದೇಕೆ? ಯಾರನ್ನು ದೇವರು ಭೂಮಿಯ ಮೇಲಿನ ಒಂದು ಸುಂದರವಾದ ಮನೆಯಲ್ಲಿ ಇಟ್ಟನೋ, ಆ ಪ್ರಥಮ ಪುರುಷನಾದ ಆದಾಮನ ಮೇಲೆ ಹಾಕಲ್ಪಟ್ಟ ನಿಷೇಧವೊಂದರಲ್ಲಿ ಉತ್ತರವು ಕಂಡುಬರುತ್ತದೆ. ದೇವರು ಅವನಿಗೆ ಆಜ್ಞಾಪಿಸಿದ್ದು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇಹೋಗುವಿ.” (ಓರೆಅಕ್ಷರಗಳು ನಮ್ಮವು.)—ಆದಿಕಾಂಡ 2:16, 17.
ಏನು ಸಂಭವಿಸಿತು? ತನ್ನ ಸ್ವರ್ಗೀಯ ತಂದೆಗೆ ವಿಧೇಯನಾಗುವ ಬದಲಾಗಿ, ಮರದಿಂದ ಹಣ್ಣನ್ನು ತಿನ್ನುವುದರಲ್ಲಿ ಆದಾಮನು ತನ್ನ ಪತ್ನಿಯಾದ ಹವ್ವಳೊಂದಿಗೆ ಜೊತೆಗೂಡಿ ಅವಿಧೇಯನಾದನು. ಒಬ್ಬ ದೇವದೂತ ದಂಗೆಕೋರನ ಸುಳ್ಳು ವಾಗ್ದಾನವನ್ನು ಅವರು ಸ್ವಾರ್ಥದಿಂದ ಅಂಗೀಕರಿಸಿದರು. (ಆದಿಕಾಂಡ 3:1-6; ಪ್ರಕಟನೆ 12:9) ಆದುದರಿಂದ, ದೇವರು ಎಚ್ಚರಿಸಿದ್ದಂತೆ, ಅವರು ಸತ್ತರು. ಆದಾಮಹವ್ವರು ಸದಾಕಾಲ ಜೀವಿಸುವ ಸಾಮರ್ಥ್ಯದಿಂದ ವಿನ್ಯಾಸಿಸಲ್ಪಟ್ಟಿದ್ದರೂ, ದೇವರಿಗೆ ವಿಧೇಯತೆ ತೋರಿಸುವುದರ ಮೇಲೆ ಇದು ಅವಲಂಬಿತವಾಗಿತ್ತು. ಅವಿಧೇಯರಾಗುವ ಮೂಲಕ ಅವರು ಪಾಪ ಮಾಡಿದರು. ತದನಂತರ, ಪಾಪಿಗಳೋಪಾದಿ ಅವರು ತಮ್ಮ ದೇಹಗಳಲ್ಲಿದ್ದ ಮರಣಕಾರಕ ದೋಷವನ್ನು ತಮ್ಮ ಎಲ್ಲಾ ಸಂತತಿಗೆ ದಾಟಿಸಿದರು. “ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 5:12; ಯೋಬ 14:4.
ಆದರೂ, ವೃದ್ಧಾಪ್ಯ ಮತ್ತು ಮರಣವನ್ನು ಜಯಿಸಲಿಕ್ಕಾಗಿ ಯಾವುದೇ ನಿರೀಕ್ಷೆ ಇಲ್ಲವೆಂಬುದು ಇದರ ಅರ್ಥವಲ್ಲ. ನಮ್ಮ ಸರ್ವಜ್ಞಾನಿಯಾದ ಸೃಷ್ಟಿಕರ್ತನು, ಯಾವುದೇ ತಳಿಶಾಸ್ತ್ರೀಯ ಅಕ್ರಮಗಳನ್ನು ವಾಸಿಮಾಡಬಲ್ಲನು ಮತ್ತು ನಮ್ಮ ಜೀವಗಳು ಸದಾಕಾಲ ಮುಂದುವರಿಯುವುದಕ್ಕಾಗಿ ಶಕ್ತಿಯನ್ನು ಒದಗಿಸಬಲ್ಲನು ಎಂಬುದನ್ನು ನಂಬುವುದು ಕಷ್ಟಕರವಾಗಿರಬಾರದು. ಆದರೆ ಆತನು ಇದನ್ನು ಹೇಗೆ ಮಾಡುವನು? ಮತ್ತು ನಿತ್ಯ ಜೀವದ ಕುರಿತಾದ ಆತನ ವಾಗ್ದಾನಗಳನ್ನು ಅನುಭವಿಸಲು ನಾವೇನು ಮಾಡತಕ್ಕದ್ದು?