ಮೀನಿನೂಟಗಳಿಗಾಗಿ ಹದ್ದುಗಳು ಹಾರಿಬರುವ ಸ್ಥಳ
ಅವು ಊಟಕ್ಕಾಗಿ ಸುಂದರವಾದ ಪೋಷಾಕುಗಳನ್ನು ತೊಟ್ಟು, ಅಲಾಸ್ಕ, ಬ್ರಿಟಿಷ್ ಕೊಲಂಬಿಯ, ಮತ್ತು ವಾಷಿಂಗ್ಟನ್ ರಾಜ್ಯದಷ್ಟು ದೂರದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಹಾರಿಬರುತ್ತವೆ. ತಮ್ಮ ಶ್ವೇತ ಶಿರಗಳಲ್ಲಿ ಮತ್ತು ಕೆಳಗಿಳಿಯುವಾಗ ವೇಗವನ್ನಿಳಿಸಲಿಕ್ಕಾಗಿ ಹೊರಚಾಚುವ ತಮ್ಮ ಬೆಡಗಿನ ಬಿಳಿ ಬಾಲದ ಗರಿಗಳಲ್ಲಿ, ಸುಪ್ರತಿಷ್ಠಿತವಾಗಿ ಕಾಣುವ ಅತಿ ಪ್ರಭಾವೂತ್ಪಾದಕ ಪಕ್ಷಿಗಳಿವು. ಕಡು ಕಂದು ಬಣ್ಣದ ದೇಹಗಳೂ, ಸರಾಸರಿ ಆರು ಕಿಲೋಗ್ರಾಮ್ ಭಾರವೂ, ಗಾತ್ರದಲ್ಲಿ ಹೆಣ್ಣುಗಳು ಗಂಡುಗಳಿಗಿಂತ ತುಸು ದೊಡ್ಡವುಗಳೂ ಆಗಿರುವ ಇವು, 1.8ರಿಂದ 2.4 ಮೀಟರ್ಗಳ ರೆಕ್ಕೆ ಹರವಿನೊಂದಿಗೆ ತಾಸಿಗೆ 50 ಕಿಲೊಮೀಟರ್ ದೂರ ಸಂಚರಿಸುತ್ತವೆ—ಆದರೆ ಅವುಗಳ ಚುರುಕಾದ ದೃಷ್ಟಿಯು ಒಂದು ಕಿಲೊಮೀಟರ್ ದೂರದಲ್ಲಿರುವ ಒಂದು ಮೀನನ್ನು ಕಂಡಲ್ಲಿ, ಒಂದು ತಾಸಿಗೆ 160 ಕಿಲೋಮೀಟರ್ ವೇಗದಲ್ಲಿ ಅದರ ಮೇಲೆ ಎರಗಿ, ಅದನ್ನು ಎತ್ತಿಕೊಳ್ಳಬಲ್ಲವು!
ಚಿಲ್ಕ್ಯಾಟ್ ನದಿಯ ಅವುಗಳ ಭೋಜನ ಗೋಷ್ಠಿಗಾದರೋ ಅಂತಹ ಪ್ರದರ್ಶನಾತ್ಮಕ ವಾಯುಮಯ ಸಾಹಸಕೃತ್ಯಗಳ ಅಗತ್ಯವಿಲ್ಲ. ಅವುಗಳ ಸ್ಯಾಮನ್ ಮೀನು ಭಕ್ಷ್ಯಗಳು ಎಲ್ಲಿಗೂ ಓಡಿಹೋಗುವುದಿಲ್ಲ. ಅವು ಅವುಗಳ ಎದುರಲ್ಲೀ ಸಮೃದ್ಧವಾಗಿ ಹರವಲ್ಪಟ್ಟು, ಗಬಗಬನೆ ತಿನ್ನಲ್ಪಡಲಿಕ್ಕಾಗಿ ಕಾಯುತ್ತಿವೆ. ಅವುಗಳಿಗೆ ಈ ಎಲ್ಲ ಹಬ್ಬ ಸಮಾರಂಭಗಳ ಆತಿಥ್ಯ ಮಾಡುವವರು, ಅಲಾಸ್ಕ ರಾಜ್ಯವು “ಲೋಕದ ಬೋಳು ತಲೆಯ ಹದ್ದುಗಳ ಅತಿ ದೊಡ್ಡ ಕೇಂದ್ರೀಕರಣವನ್ನು ಮತ್ತು ಅವುಗಳ ಜೀವನಾಧಾರದ ಇರುನೆಲೆಯನ್ನು ಕಾಪಾಡಿ, ಚಿರಸ್ಮರಣೀಯ ಮಾಡಲು” 1982ರಲ್ಲಿ ನಿರ್ಮಿಸಿದ ಅಲಾಸ್ಕ ಚಿಲ್ಕ್ಯಾಟ್ ಬಾಲ್ಡ್ ಈಗ್ಲ್ ಪ್ರಿಸರ್ವ್ (ಬೋಳು ತಲೆಯ ಹದ್ದುಗಳ ಸಂರಕ್ಷಣಾ ಸ್ಥಾನ) ಆಗಿದೆ.
ಈ ಸಂರಕ್ಷಣಾ ಸ್ಥಾನವು ಚಿಲ್ಕ್ಯಾಟ್, ಕೆಹ್ಲೇನಿ, ಮತ್ತು ಸಿರ್ಕೂ ನದಿಗಳ ನದೀತಳದ 19,000 ಹೆಕ್ಟೇರ್ಗಳಷ್ಟು ಸ್ಥಳವನ್ನು ಆವರಿಸುತ್ತದೆ, ಮತ್ತು ಹದ್ದುಗಳ ವಾಸಕ್ಕೆ ಪ್ರಾಮುಖ್ಯವಾದ ಕ್ಷೇತ್ರಗಳು ಮಾತ್ರ ಅದರಲ್ಲಿ ಒಳಗೂಡಿವೆ. ಎಲ್ಲಿ ಸಾವಿರಾರು ಹದ್ದುಗಳು ಒಟ್ಟುಸೇರುತ್ತವೋ ಮತ್ತು ಅವನ್ನು ನೋಡಲು ಸಂದರ್ಶಕರು ನೆರೆಯುತ್ತಾರೋ ಆ ವಿಶಿಷ್ಟ ಕ್ಷೇತ್ರವು, ಹೇನ್ಸ್ ಮತ್ತು ಕೂವ್ಲನ್ ಊರುಗಳ ನಡುವೆ ಹೇನ್ಸ್ ಹೆದ್ದಾರಿಯ ಅಂಚಿನಲ್ಲಿ ಚಿಲ್ಕ್ಯಾಟ್ ನದಿಯ ಉದ್ದಕ್ಕೂ ಇರುವ ಎಂಟು ಕಿಲೊಮೀಟರ್ ಸ್ಥಳವಾಗಿದೆ.
“ಅಲಾಸ್ಕ ಚಿಲ್ಕ್ಯಾಟ್ ಬಾಲ್ಡ್ ಈಗ್ಲ್ ಪ್ರಿಸರ್ವ್” ಎಂಬ ಶೀರ್ಷಿಕೆಯ ಒಂದು ಸರಕಾರಿ ಕರಪತ್ರವು, ನದಿಯ ಐದು ಮೈಲು ಹರವು ಉತ್ಪತ್ತಿ ಮಾಡಿದ ರುಚಿಕರ ಸ್ಯಾಮನ್ ಮೀನುಗಳನ್ನು ಹದ್ದುಗಳಿಗೆ ಏಕೆ ಬಡಿಸಲು ಶಕವ್ತಾಗಿದೆಯೆಂಬುದನ್ನು ತಿಳಿಸುತ್ತದೆ.
“ಹಿಮಗಟ್ಟುವ ತಿಂಗಳುಗಳಲ್ಲಿ ಚಿಲ್ಕ್ಯಾಟ್ ನದಿಯ ಐದು ಮೈಲುದದ್ದ ದ್ರವೀಕರಿಸಿದ ನೀರಿಗೆ, ನೈಸರ್ಗಿಕ ಪ್ರಕೃತಿಘಟನೆಯಾದ ‘ನೆರೆಮಣ್ಣಿನ ಪದಾರ್ಥ ಸಂಚಯ ಜಲಾಶಯ’ ಎಂಬುದು ಕಾರಣವಾಗಿದೆ. ಸಿರ್ಕೂ ಫ್ಯಾನ್ ಅಂದರೆ ಕಲ್ಲು, ಮಣ್ಣು, ಮತ್ತು ನೀರ್ಗಲಿನ್ಲ ಚೂರುಗಳ ಬೀಸಣಿಗೆಯಾಕಾರದ ರಾಶಿಯು, ಸಿರ್ಕೂ, ಕೆಹ್ಲೇನಿ, ಮತ್ತು ಚಿಲ್ಕ್ಯಾಟ್ ನದಿಗಳ ಸಂಗಮದಲ್ಲಿ ಒಂದು ದೊಡ್ಡ ಜಲಾಶಯವಾಗಿ ಕಾರ್ಯನಡಿಸುತ್ತದೆ.”
ಸಾಮಾನ್ಯವಾಗಿ, ಒಂದು ನದಿಯು ಇನ್ನೊಂದು ನೀರಿನ ಪ್ರವಾಹವನ್ನು ಪ್ರವೇಶಿಸುವ ದ್ವಾರದಲ್ಲಿ ನಿಧಾನಿಸುವಾಗ, ಮಡ್ಡಿಯನ್ನು ಸಂಚಯಿಸಿ, ಒಂದು ನದೀ ಮುಖಜ ಭೂಮಿಯನ್ನು ರಚಿಸುತ್ತದೆ, ಆದರೆ ನೀರಿನ ಯಾವ ಜಲಾಶಯವೂ ಹಿಂದೆಬಿಡಲ್ಪಡುವುದಿಲ್ಲ. ಸಿರ್ಕೂ ನದಿಯು ಚಿಲ್ಕ್ಯಾಟ್ ನದಿಯನ್ನು ಪ್ರವೇಶಿಸುವ ಸ್ಥಳದಲ್ಲಿಯಾದರೋ, ಭೂಮಿಯ ಪದರಭಂಗಗಳು ಮತ್ತು ನೀರ್ಗಲಿನ್ಲ ಪ್ರಕ್ರಿಯೆಯು, ಸಮುದ್ರ ಮಟ್ಟಕ್ಕೆ 230 ಮೀಟರ್ಗಳಿಗಿಂತಲೂ ಹೆಚ್ಚಿನ ಆಳದಲ್ಲಿ ಒಂದು ದೊಡ್ಡ ಜಲಾನಯನ ಭೂಮಿಯನ್ನು ತೋಡಿತೆಗೆಯುವಂತೆ ಮಾಡಿದೆ. ನೀರ್ಗಲ್ಲುಗಳು ಹಿಂದೆಸರಿದಾಗ, ಪುಡಿಗಲ್ಲು ಗುಡ್ಡೆಗಳು ಹಿಂದೆಬಿಡಲ್ಪಟ್ಟವು, ಮತ್ತು ನದಿಗಳು ಕಲ್ಲು ಮತ್ತು ಮಣ್ಣುಗಳ ಸಂಚಯಗಳನ್ನು ಅದಕ್ಕೆ ಕೂಡಿಸಿದಾಗ, ಆ ಜಲಾನಯನ ಭೂಮಿಯ ತಳಬಂಡೆಯಲ್ಲಿ ಕೊನೆಗೆ 230 ಮೀಟರ್ಗಳಷ್ಟು ದಪ್ಪವಾದ ಸಡಿಲಾದ, ಸರಂಧ್ರ ಸಂಚಯಗಳು ಕುಳಿತಿದ್ದವು.
ಹೆಚ್ಚು ಬೆಚ್ಚಗೆನ ವಸಂತ, ಬೇಸಗೆ, ಮತ್ತು ಶರತ್ಕಾಲಗಳ ಆರಂಭದಲ್ಲಿ, ಹಿಮದ ನೀರು ಮತ್ತು ನೀರ್ಗಲಿನ್ಲ ಕರಗಿದ ಮಂಜು ನೆರೆಮಣ್ಣಿನೊಳಗೆ ಹರಿಯುತ್ತವೆಂದು ವಿವರಣೆಯು ತೋರಿಸುತ್ತದೆ. ಹೊರ ಪ್ರವಹಿಸ ಶಕವ್ತಾಗಿರುವುದಕ್ಕಿಂತಲೂ ಅಧಿಕ ವೇಗದಲ್ಲಿ ನೀರು ನೆರೆಮಣ್ಣಿಗೆ ಸೇರುತ್ತಾ, ಒಂದು ದೊಡ್ಡ ಜಲಾಶಯವನ್ನು ನಿರ್ಮಿಸುತ್ತದೆ. ಹದ್ದು ಸಂರಕ್ಷಣಾ ಸ್ಥಾನದ ಕರಪತ್ರವು ಮುಂದುವರಿಸಿ ಅನ್ನುವುದು: “ಚಳಿಗಾಲವು ಆಗಮಿಸುವಾಗ, ಹವೆಯು ತಣ್ಣಗಾಗಿ, ಸುತ್ತಲಿನ ನೀರುಗಳು ಘನೀಕರಿಸುತ್ತವೆ. ಆದರೂ, ಈ ದೊಡ್ಡ ಜಲಾಶಯದ ನೀರು, ಸುತ್ತಲಿನ ನೀರಿನ ತಾಪಮಾನಕ್ಕಿಂತ ಐದರಿಂದ ಹತ್ತು ಡಿಗ್ರಿ ಸೆಲ್ಸಿಯಸ್ ಶಾಖದಲ್ಲಿ ಉಳಿಯುತ್ತದೆ. ಹೆಚ್ಚು ಬೆಚ್ಚಗೆನ ಈ ನೀರು ಚಿಲ್ಕ್ಯಾಟ್ ನದಿಗೆ ‘ಸೋಸಿ ಬಂದು’ ಅದನ್ನು ಘನೀಕರಿಸುವುದರಿಂದ ತಡೆಯುತ್ತದೆ.
“ಇದರಲ್ಲಿ ಮತ್ತು ಹತ್ತಿರದ ಬೇರೆ ತೊರೆಗಳಲ್ಲಿ ಮತ್ತು ಉಪನದಿಗಳಲ್ಲಿ ಐದು ಜಾತಿಯ ಸ್ಯಾಮನ್ ಮೀನುಗಳು ಮೊಟ್ಟೆಯಿಡುತ್ತವೆ. ಸ್ಯಾಮನ್ ಮೀನುಗಳ ಮೊಟ್ಟೆಯಿಡುವಿಕೆ ಬೇಸಗೆಯಿಂದ ಆರಂಭಿಸಿ ಶರತ್ಕಾಲದ ಕೊನೆಯ ತನಕ ಅಥವಾ ಚಳಿಗಾಲದ ಆರಂಭದ ತನಕ ಮುಂದುವರಿಯುತ್ತದೆ. ಮೊಟ್ಟೆಯಿಟ್ಟ ಸ್ವಲ್ಪ ಸಮಯದೊಳಗೆ ಈ ಸ್ಯಾಮನ್ ಮೀನುಗಳು ಸಾಯುತ್ತವೆ ಮತ್ತು ಈ ಸತ್ತ ಮೀನುಗಳೇ ಹದ್ದುಗಳಿಗೆ ಅಧಿಕ ಪ್ರಮಾಣದ ಆಹಾರವನ್ನು ಒದಗಿಸುತ್ತವೆ.”
ಈ ಸ್ಯಾಮನ್ ಮೀನಿನ ಔತಣವು ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಿ ಫೆಬ್ರವರಿ ತಿಂಗಳಲ್ಲಿ ಕೊನೆಗೊಳ್ಳುತ್ತದೆ, ಮತ್ತು ತದನಂತರ ಸ್ವಲ್ಪ ಸಮಯದೊಳಗೆ ಹದ್ದುಗಳು ಸಾವಿರಾರು ಸಂಖ್ಯೆಯಲ್ಲಿ ಸುತ್ತಲಿನ ದೂರದ ಹಳ್ಳಿಗಾಡುಗಳಿಗೆ ಚದರಿ ಹೋಗಲಾರಂಭಿಸುತ್ತವೆ. ಆ ಸಂರಕ್ಷಣಾ ಸ್ಥಾನವಾದರೋ ಸುಮಾರು 200ರಿಂದ 400 ಹದ್ದುಗಳ ವರ್ಷವಿಡಿಯ ಬೀಡಾಗಿರುತ್ತದೆ. ತಾವು ಹಿಡಿಯಬಲ್ಲ ಯಾವುದೇ ಮೀನು ಮಾತ್ರವಲ್ಲದೆ ನೀರುಕೋಳಿ, ಚಿಕ್ಕ ಸಸ್ತನಿ ಪ್ರಾಣಿಗಳು, ಮತ್ತು ಕೊಳೆತ ಮಾಂಸವನ್ನು ಅವು ತಮ್ಮ ಪಥ್ಯಕ್ಕೆ ಸೇರಿಸುತ್ತವೆ.
ಸಡಗರದ ಪ್ರಣಯಾಚರಣೆಗಳು, ಬಾಳುವ “ವಿವಾಹಗಳು”
ಅವು ಜೀವಾರಭ್ಯ ಜೊತೆಯಾಗಿರುತ್ತವೆ—40 ವಯಸ್ಸನ್ನು ತಲಪಬಲ್ಲವು—ಆದರೆ ಸಾಮಾನ್ಯವಾಗಿ ಮರಿಮಾಡುವ ಕಾಲದಲ್ಲಿ ಮಾತ್ರ ಒಟ್ಟಾಗಿರುತ್ತವೆ. ಪ್ರಣಯಾಚರಣೆಯ ವರ್ತನೆಯು ಎಪ್ರಿಲ್ ತಿಂಗಳಿನಲ್ಲಿ ಆರಂಭವಾಗುತ್ತದೆ ಮತ್ತು ಈಗ್ಲ್ಸ್—ದಿ ಅಲಾಸ್ಕ ಚಿಲ್ಕ್ಯಾಟ್ ಬಾಲ್ಡ್ ಈಗ್ಲ್ ಪ್ರಿಸರ್ವ್ನ ಸುತ್ತೋಲೆಗೆ ಅನುಸಾರವಾಗಿ, “ಹದ್ದುಗಳು ಥಟ್ಟನೆ ಇಳಿದು, ಮೊನೆಯುಗುರುಗಳನ್ನು ಸಿಕ್ಕಿಸಿಕೊಂಡು ಅಂತರಾಳದಲ್ಲಿ ಪಲಿಹ್ಟಾಕುವ ಪ್ರೇಕ್ಷಣೀಯ ಪ್ರಣಯಾಚರಣೆಯ ಪ್ರದರ್ಶನೆಗಳನ್ನು ಒಳಗೂಡಬಲ್ಲದು.” ಅದೆಲ್ಲವು ಮತ್ತು ಕೈಗಳನ್ನು ಹಿಡಿದುಕೊಂಡು ಸಹ? ಘೋರವಾದ ಪ್ರಣಯ ರಂಜನೆಯಂತೆ ಕಾಣುತ್ತದೆ!
ಸಂರಕ್ಷಣಾ ಸ್ಥಾನದಲ್ಲಿ ತೊಂಬತ್ತನಾಲ್ಕು ಗೂಡುಗಳನ್ನು ಅವಲೋಕಿಸಲಾಗಿದೆ. 34 ಅಥವಾ 35 ದಿನ ಕಾವಿಗೆ ಕುಳಿತುಕೊಂಡ ನಂತರ, ಮೇ ತಿಂಗಳ ಅಂತ್ಯ ಮತ್ತು ಜೂನ್ ತಿಂಗಳಿನ ಆರಂಭದ ನಡುವೆ ಸಾಮಾನ್ಯವಾಗಿ 1-3 ಮೊಟ್ಟೆಗಳೊಡೆದು ಮರಿಯಾಗುತ್ತವೆ. ಸೆಪ್ಟೆಂಬರ್ ತಿಂಗಳೊಳಗೆ ಮರಿಗಳು ಗೂಡನ್ನು ಬಿಟ್ಟುಹೋಗುತ್ತವೆ, ಆದರೆ ಅವು ಕಂದು ಮತ್ತು ಬಿಳಿಯ ಚುಕ್ಕೆಗಳ ಗರಿಗಳಲ್ಲಿ ತೃಪ್ತವಾಗಿರಬೇಕು. ತಮ್ಮ ಸೊಬಗಿನ ಶ್ವೇತ ಶಿರ ಮತ್ತು ಬಾಲಗಳನ್ನು ನಾಲ್ಕು ಅಥವಾ ಐದು ವರ್ಷಗಳಾಗುವ ತನಕ ಅವು ಪಡೆಯುವುದಿಲ್ಲ!
ಪಾರಾಗಿ ಉಳಿಯಲಿಕ್ಕಾಗಿ ಹದ್ದುಗಳ ಹೋರಾಟದ ಕುರಿತ ತುಸು ಹಿನ್ನೆಲೆಯನ್ನು ಮತ್ತು ಸಂರಕ್ಷಣಾ ಸ್ಥಾನವನ್ನು ನಿರಪಾಯಕರವಾಗಿ ಆನಂದಿಸುವ ವಿಧಾನದ ಕುರಿತ ಸಲಹೆಯನ್ನೂ ಸುತ್ತೋಲೆಯು ಕೊಡುತ್ತದೆ:
“ಅಲಾಸ್ಕ ಚಿಲ್ಕ್ಯಾಟ್ ಬಾಲ್ಡ್ ಈಗ್ಲ್ ಪ್ರಿಸರ್ವ್ನಲ್ಲಿ ಹದ್ದುಗಳ ಸಂರಕ್ಷಣೆಗಾಗಿ 19,000 ಹೆಕ್ಟೇರ್ಗಳಷ್ಟು ಜಾಗವು ಬದಿಗಿಡಲ್ಪಟ್ಟಿದೆ. ಆದರೆ ಹದ್ದುಗಳು ಮೊದಲಿನಿಂದಲೂ ಕಾಪಾಡಲ್ಪಟ್ಟಿರಲಿಲ್ಲ; ಅವು ಒಂದು ಸಮಯದಲ್ಲಿ ಪ್ರೋತ್ಸಾಹಧನಕ್ಕಾಗಿ ಬೇಟೆಗಾರರಿಂದ ಕಾನೂನುಬದ್ಧವಾಗಿ ಕೊಲ್ಲಲ್ಪಡುತ್ತಿದ್ದವು. ಜೀವಂತ ಸ್ಯಾಮನ್ ಮೀನು ಮತ್ತು ಚಿಕ್ಕ ಪ್ರಾಣಿಗಳಿಗಾಗಿ ಹದ್ದುಗಳ ಪ್ರಚಂಡವಾದ ಹಸಿವೆಯ ಕುರಿತಾದ ವರದಿಗಳ ಆಧಾರದ ಮೇಲೆ ಅಲಾಸ್ಕ ಪ್ರಾದೇಶಿಕ ಶಾಸನ ಸಭೆಯು 1917ರಲ್ಲಿ ಹದ್ದುಗಳ ಮೇಲೆ ಒಂದು ಪ್ರೋತ್ಸಾಹಧನವನ್ನು ನಿರ್ಮಿಸಿತು. ಹೇನ್ಸ್ನಲ್ಲಿರುವ ಫೋರ್ಟ್ ವಿಲ್ಯಮ್ ಎಚ್. ಸೂಅರ್ಡ್ನ ಮಾಜಿ ಸೈನಿಕರು ತಮ್ಮ ಅಲ್ಪ ಸೈನಿಕ ವೇತನವನ್ನು, ಪ್ರತಿಯೊಂದು ಜೋಡಿ ಮೊನೆಯುಗುರುಗಳಿಗೆ ಕೊಡಲ್ಪಟ್ಟ 1 ಡಾಲರ್ (ಅನಂತರ 2 ಡಾಲರುಗಳಿಗೆ ಏರಿಸಲ್ಪಟ್ಟಿತು) ಹಣದಿಂದ ಭರ್ತಿಮಾಡಿದ್ದ ಕಥೆಗಳನ್ನು ಹೇಳುತ್ತಾರೆ.
“ಸ್ಯಾಮನ್ ಮೀನುಗಳ ತಂಡಕ್ಕೆ ಹದ್ದುಗಳಿಂದ ಹಾನಿಯು ನಿಜವಾಗಿರುವುದಕ್ಕಿಂತ ಅತಿಶಯಿಸಲ್ಪಟ್ಟಿತ್ತೆಂದು ಅನಂತರದ ಸಂಶೋಧನೆಗಳು ಕಂಡುಕೊಂಡವು, ಮತ್ತು ಪ್ರೋತ್ಸಾಹಧನವು 1953ರಲ್ಲಿ ತೆಗೆಯಲ್ಪಟ್ಟಿತು. ಆ ಸಮಯದೊಳಗೆ, ಪ್ರೋತ್ಸಾಹಧನಕ್ಕಾಗಿ 1,28,000 ಹದ್ದುಗಳನ್ನು ಗುಂಡಿಕ್ಕಿ ಕೊಲಲ್ಲಾಗಿತ್ತು. ಆಗ್ನೇಯ ಅಲಾಸ್ಕದಲ್ಲಿ 1940ಗಳಲ್ಲಿ, ಪ್ರೋತ್ಸಾಹಧನವು ಇನ್ನೂ ಜಾರಿಯಲ್ಲಿದ್ದಾಗ, ಹದ್ದುಗಳ ಸಂಖ್ಯೆಯು 1970ಗಳಲ್ಲಿದುದ್ದಕ್ಕಿಂತ ಅರ್ಧ ಪಾಲೆಂದು ಅಂದಾಜುಮಾಡಲಾಗಿತ್ತು.
“1959ರಲ್ಲಿ ಅಲಾಸ್ಕವು ರಾಜ್ಯವಾಗಿ ಪರಿಣಮಿಸಿದಾಗ, ಅಲಾಸ್ಕದಲ್ಲಿನ ಬೋಳು ತಲೆಯ ಹದ್ದುಗಳು 1940ರ ಬಾಲ್ಡ್ ಈಗ್ಲ್ ಕಾಯಿದೆಯ ಸರಕಾರದ ಸಂರಕ್ಷಣೆಯ ಕೆಳಗೆ ಬಂದವು. ಹದ್ದನ್ನು ಕೊಲ್ಲುವುದು ಸರಕಾರಿ ನಿಯಮದ ಉಲ್ಲಂಘನೆಯಾಗಿದೆ, ಜೀವಂತ ಅಥವಾ ಮೃತ ಹದ್ದುಗಳನ್ನು ಅಥವಾ ಅವುಗಳ ಯಾವುದೇ ಅಂಗಗಳನ್ನು (ಗರಿಗಳನ್ನೂ ಸೇರಿಸಿ!) ಹೊಂದಿರುವುದು ಸಹ, ಕೆಲವು ನಿರ್ದಿಷ್ಟ ಷರತ್ತುಗಳ ಕೆಳಗೆ ಹೊರತು, ನ್ಯಾಯವಿರುದ್ಧವಾಗಿದೆ.
“1972ರಲ್ಲಿ ಅಲಾಸ್ಕ ರಾಜ್ಯ ಶಾಸನವು, ಹದ್ದುಗಳ ದೊಡ್ಡ ಕೇಂದ್ರೀಕರಣದ ಸಂರಕ್ಷಣೆಯನ್ನು ನಿಶ್ಚಿತ ಮಾಡಲು, ಅಲಾಸ್ಕ ಡಿಪಾರ್ಟ್ಮೆಂಟ್ ಆಫ್ ಫಿಷ್ ಆ್ಯಂಡ್ ಗೇಮ್ನಿಂದ ನಿರ್ವಹಿತ ಚಿಲ್ಕ್ಯಾಟ್ ರಿವರ್ ಕ್ರಿಟಿಕಲ್ ಹ್ಯಾಬಿಟ್ಯಾಟ್ ಏರಿಯವನ್ನು ಸ್ಥಾಪಿಸಿತು. ಹದ್ದುಗಳ ಇರು ನೆಲೆಯ ವಿಸ್ತಾರ ಕ್ಷೇತ್ರಗಳು ಸಂರಕ್ಷಣೆರಹಿತವಾಗಿ ಉಳಿದವು, ಮತ್ತು ಚಿಲ್ಕ್ಯಾಟ್ ತಗ್ಗಿನ ಜಮೀನನ್ನು ಬಳಸುವ ವಿಷಯದಲ್ಲಿ ಒಂದು ದೀರ್ಘವಾದ ಮತ್ತು ಕೆಲವೊಮ್ಮೆ ಕಟು ಹೋರಾಟವು ಪರಿಸರವಾದಿಗಳ ಮತ್ತು ವಿಕಾಸಮನಸ್ಕ ಅಧಿಕಾರಿಗಳ ನಡುವೆ ನಡೆದಿವೆ. ನ್ಯಾಷನಲ್ ಆಡಬನ್ ಸೊಸೈಟಿಯಿಂದ ಮತ್ತು ರಾಜ್ಯನಿಧಿ ಪೋಷಿತ ಹೇನ್ಸ್/ಕೂವ್ಲನ್ ರಿಸೋರ್ಸ್ ಸಡ್ಟಿಯ ತೀವ್ರ ಅಧ್ಯಯನದ ಬಳಿಕ, ಮರಕಡಿಯುವವರು, ಬೆಸ್ತರು, ಪರಿಸರವಾದಿಗಳು, ವ್ಯಾಪಾರಸ್ಥರು ಮತ್ತು ಸ್ಥಳಿಕ ರಾಜಕಾರಣಿಗಳು ಕಟ್ಟಕಡೆಗೆ ಒಂದು ಒಪ್ಪಂದಕ್ಕೆ ಬಂದರು. 1982ರಲ್ಲಿ ರಾಜ್ಯ ಶಾಸನ ಸಭೆಯು ಅಲಾಸ್ಕ ಚಿಲ್ಕ್ಯಾಟ್ ಬಾಲ್ಡ್ ಈಗ್ಲ್ ಪ್ರಿಸರ್ವ್ಗಾಗಿ 19,000 ಹೆಕ್ಟೇರ್ ಜಾಗವನ್ನು ನಿರ್ಮಿಸಿ ಆ ಒಪ್ಪಂದವನ್ನು ಒಂದು ನಿಯಮವಾಗಿ ಮಾರ್ಪಡಿಸಿತು.
“ಸಂರಕ್ಷಣಾ ಸ್ಥಾನದಲ್ಲಿ ಯಾವ ಮರಕಡಿಯುವಿಕೆ ಅಥವಾ ಗಣಿಗಾರಿಕೆಗೆ ಅನುಮತಿಯಿಲ್ಲ, ಆದರೆ ಜಾಗದ ಸಾಂಪ್ರದಾಯಿಕ ಬಳಕೆಗಳಾದ ಬೆರಿ ಹಣ್ಣನ್ನು ಹೆಕ್ಕುವುದು, ಮೀನು ಹಿಡಿಯುವುದು, ಬೇಟೆಯಾಡುವುದು ಮುಂದುವರಿಯಬಲ್ಲವು. ಸಂರಕ್ಷಣಾ ಸ್ಥಾನವು ಸ್ಥಳಿಕ ನಿವಾಸಿಗಳು, ರಾಜ್ಯ ಅಧಿಕಾರಿಗಳು, ಮತ್ತು ಒಬ್ಬ ಜೀವವಿಜ್ಞಾನಿಯು ಕೂಡಿರುವ 12 ಸದಸ್ಯರ ಸಲಹೆಗಾರ ಸಮಿತಿಯ ಸಹಾಯದಿಂದ ಅಲಾಸ್ಕ ಡಿವಿಷನ್ ಆಫ್ ಪಾರ್ಕ್ಸ್ನಿಂದ ನಿರ್ವಹಿಸಲ್ಪಡುತ್ತದೆ.
“ಪರಿಸರವನ್ನು ಹಾಳುಮಾಡದೆ ತಗ್ಗು ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸುವುದು ಹೇಗೆಂಬುದು ಮುಂದುವರಿಯುತ್ತಿರುವ ಒಂದು ಪ್ರಶ್ನೆ, ಮತ್ತು ಜಮೀನಿನ ಉಪಯೋಗದ ಪ್ರಶ್ನೆಗಳು ಚಿಲ್ಕ್ಯಾಟ್ ತಗ್ಗಿನಲ್ಲಿ ಇನ್ನೂ ವಾಗ್ವಾದವನ್ನು ಕೆರಳಿಸಬಲ್ಲವು. ಆದರೆ ಹದ್ದುಗಳ ಸಂರಕ್ಷಣೆಗಾಗಿ ಒಂದು ಸ್ಥಳಿಕ ಪರಿಹಾರವನ್ನು ಕಂಡುಕೊಂಡದ್ದಕ್ಕಾಗಿ ಸ್ಥಳಿಕ ನಿವಾಸಿಗಳು ಹೆಮ್ಮೆಯಿಂದಿದ್ದಾರೆ.”
ಸಂದರ್ಶಕರು ಹದ್ದುಗಳನ್ನು ವೀಕ್ಷಿಸಸಾಧ್ಯವಿರುವ ಮುಖ್ಯ ಕ್ಷೇತ್ರವು, ಚಿಲ್ಕ್ಯಾಟ್ ನದಿಗೆ ಸಮಾಂತರವಾಗಿರುವ ಹೇನ್ಸ್ ಹೆದ್ದಾರಿಯ ಉದ್ದಕ್ಕೂ ಇದೆ, ಮತ್ತು ಈ ಉದ್ದೇಶಕ್ಕಾಗಿ ಅಲ್ಲಿ ವೀಕ್ಷಣ ಸ್ಥಾನಗಳು ಒದಗಿಸಲ್ಪಟ್ಟಿವೆ.
[Map on page 15]
(For fully formatted text, see publication)
ಚಿಲ್ಕ್ಯಾಟ್ ನದಿ ಚಿಲ್ಕೂಟ್ ನದಿ
ಕೆಹ್ಲೇನಿ ನದಿ ಕೂವ್ಲನ್
ಹದ್ದು ವೀಕ್ಷಣ ಕ್ಷೇತ್ರ
(ನೆರೆಮಣ್ಣಿನ ಸಂಚಯ)
▴
▴
ಹೇನ್ಸ್
ಸಿರ್ಕೂ ನದಿ ▾ ಚಿಲ್ಕ್ಯಾಟ್ ಸರೋವರ
ಚಿಲ್ಕೂಟ್ ಸರೋವರ ▾
ಚಿಲ್ಕ್ಯಾಟ್ ನದಿ ▾ ಲೂಟಕ್ ಖಾರಿ
ಟ್ಯಾಕಿನ್ ನದಿ ▾
ಹೇನ್ಸ್ ಹೆದ್ದಾರಿ
[ಕೃಪೆ]
Mountain High Maps™ copyright © 1993 Digital Wisdom, Inc.
[ಪುಟ 26 ರಲ್ಲಿರುವ ಚಿತ್ರ ಕೃಪೆ]
Bald eagles on pages 15-18: Alaska Division of Tourism