ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 1/8 ಪು. 20-22
  • ಹಾರಾಡುವ ಬಂಡೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಾರಾಡುವ ಬಂಡೆಗಳು
  • ಎಚ್ಚರ!—1996
  • ಅನುರೂಪ ಮಾಹಿತಿ
  • ಉಲ್ಕಾ ನಕ್ಷತ್ರಗಳು ಎಲ್ಲಿಂದ ಬರುತ್ತವೆ?
    ಎಚ್ಚರ!—1993
  • ನಮ್ಮ ಅಮೂಲ್ಯವಾದ ವಾಯುಮಂಡಲ
    ಎಚ್ಚರ!—1995
  • ಈ ನಮ್ಮ ಜಗತ್ತನ್ನು ವಿಶ್ವವಿಪ್ಲವವು ನಾಶಗೊಳಿಸುವುದೋ?
    ಎಚ್ಚರ!—1999
  • ನಮ್ಮ ಅದ್ವಿತೀಯ ಸೌರವ್ಯೂಹ ಅಸ್ತಿತ್ವಕ್ಕೆ ಬಂದದ್ದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಎಚ್ಚರ!—1996
g96 1/8 ಪು. 20-22

ಹಾರಾಡುವ ಬಂಡೆಗಳು

ಮೋಡವಿಲ್ಲದ ರಾತ್ರಿಯಂದು, ಆಕಾಶಕ್ಕೆ ಅಡ್ಡಲಾಗಿ ಪ್ರಜ್ವಲಿಸುವ ಒಂದು ಉಲ್ಕಾ ನಕ್ಷತ್ರವನ್ನು ನೀವು ಎಂದಾದರೂ ನೋಡಿದ್ದೀರೊ? ನೀವು ಬಹಳ ಶೀಘ್ರದಲ್ಲೇ ಒಂದನ್ನು ನೋಡುವ ಸಂಭವವಿದೆ. ವಿಜ್ಞಾನಿಗಳಿಗನುಸಾರ ನಿಸರ್ಗದ ಈ ಪಟಾಕಿಗಳು, ಪ್ರತಿದಿನ ಸುಮಾರು 20,00,00,000 ಬಾರಿ, ಭೂಮಿಯ ಆಕಾಶಗಳ ಅಡ್ಡಲಾಗಿ ತಮ್ಮ ಪಥಗಳನ್ನು ನಿರೂಪಿಸುತ್ತವೆ!

ಅವು ಏನಾಗಿವೆ? ಅವು, ಭೂಮಿಯ ವಾಯುಮಂಡಲವನ್ನು ಪ್ರವೇಶಿಸಿದಂತೆ, ಬೆಳ್ಗಾವಿನಲ್ಲಿ ಬೆಳಗುವ ಉಲ್ಕಾ ಕಲ್ಪಗಳೆಂದು ಜ್ಞಾತವಾಗಿರುವ ಕಲ್ಲಿನಂಥ ಇಲ್ಲವೆ ಲೋಹದಂಥ ವಸ್ತುವಿನ ತುಂಡುಗಳಾಗಿವೆ ಅಷ್ಟೇ. ಭೂಮಿಯಿಂದ ಗಮನಿಸಲಾದಂತೆ, ಆಕಾಶದ ಅಡ್ಡಲಾಗಿ ಅವು ನಿರೂಪಿಸುವ ಬೆಳಕಿನ ಉಜ್ವಲವಾದ ಎಳೆಯು, ಉಲ್ಕೆ ಎಂದು ಜ್ಞಾತವಾಗಿದೆ.

ಹೆಚ್ಚಿನ ಉಲ್ಕಾ ಕಲ್ಪಗಳು ಭೂಮಿಯನ್ನು ತಲಪುವ ಮುಂಚೆ ಪೂರ್ಣವಾಗಿ ಸುಟ್ಟುಹೋಗುತ್ತವೆ, ಆದರೆ ಕೆಲವು ತೀಕ್ಷ್ಣವಾದ ಉಷ್ಣವನ್ನು ಪಾರಾಗಿ, ಭೂಮಿಯ ಮೇಲ್ಮೈಯನ್ನು ತಲಪುತ್ತವೆ. ಇವು ಉಲ್ಕಾಶಿಲೆಗಳೆಂದು ಜ್ಞಾತವಾಗಿವೆ. ಪ್ರತಿದಿನ ಸುಮಾರು 1,000 ಟನ್‌ಗಳಷ್ಟು ಹಾರುವ ಬಂಡೆಯು, ಭೂಮಿಯ ಮೇಲೆ ಶೇಖರವಾಗುತ್ತದೆ ಎಂದು ಕೆಲವು ವಿಜ್ಞಾನಿಗಳು ಅಂದಾಜು ಮಾಡುತ್ತಾರೆ.a

ಮುಖ್ಯವಾಗಿ ಈ ಹಾರುವ ಬಂಡೆಗಳ ಸಂಬಂಧ ಸೂಚಕವಾದ ಸಣ್ಣ ಗಾತ್ರದಿಂದಲೇ, ಈ ಬೀಳುವಿಕೆಗಳು ಮಾನವರಿಗೆ ಅಪಾಯಕರವಾಗಿರುವುದು ವಿರಳ. ವಾಸ್ತವದಲ್ಲಿ, ಹೆಚ್ಚಿನ ಉಲ್ಕೆಗಳು ಮರಳಿನ ಒಂದು ಕಣಕ್ಕಿಂತ ದೊಡ್ಡದಾಗಿರದ ಉಲ್ಕಾಶಿಲೆಗಳಿಂದ ಉಂಟಾಗುತ್ತವೆ. (“ಬಾಹ್ಯಾಕಾಶದಿಂದ ಬರುವ ಬಂಡೆಗಳು,” ಎಂಬ ರೇಖಾಚೌಕವನ್ನು ನೋಡಿ.) ಆದರೆ ಬಾಹ್ಯಾಕಾಶದಲ್ಲಿ ಹಾರುವ ಸಾವಿರಾರು ದೊಡ್ಡ ಬಂಡೆಗಳ ಕುರಿತೇನು? ದೃಷ್ಟಾಂತಕ್ಕೆ, ವ್ಯಾಸದಲ್ಲಿ ಸುಮಾರು 1,000 ಕಿಲೋಮೀಟರುಗಳಷ್ಟು ಇರುವ, ಸಿಅರೀಸ್‌ ಎಂಬುದಾಗಿ ಜ್ಞಾತವಾಗಿರುವ ಬಂಡೆಯನ್ನು ತೆಗೆದುಕೊಳ್ಳಿ! 190 ಕಿಲೋಮೀಟರುಗಳಿಗಿಂತಲೂ ಹೆಚ್ಚಿನ ವ್ಯಾಸವಿರುವ ಸುಮಾರು 30 ಇತರ ಜ್ಞಾತ ಬಂಡೆಗಳಿವೆ. ಈ ದೊಡ್ಡ ಬಂಡೆಗಳು ನಿಜವಾಗಿಯೂ ಸಣ್ಣ ಗ್ರಹಗಳಾಗಿವೆ. ವಿಜ್ಞಾನಿಗಳು ಅವುಗಳನ್ನು ಕ್ಷುದ್ರಗ್ರಹಗಳೆಂದು ಕರೆಯುತ್ತಾರೆ.

ಈ ಕ್ಷುದ್ರಗ್ರಹಗಳಲ್ಲಿ ಒಂದು ಭೂಮಿಗೆ ಅಪ್ಪಳಿಸುವುದಾದರೆ ಆಗೇನು? ವಿಜ್ಞಾನಿಗಳು ಕ್ಷುದ್ರಗ್ರಹಗಳನ್ನು ಅಭ್ಯಸಿಸುವ ಒಂದು ಪ್ರಮುಖ ಕಾರಣವು, ಸ್ಪಷ್ಟವಾಗಿರುವ ಈ ಬೆದರಿಕೆಯೇ. ಹೆಚ್ಚಿನ ಕ್ಷುದ್ರಗ್ರಹಗಳು ಮಂಗಳ (ಮಾರ್ಸ್‌) ಮತ್ತು ಗುರು (ಜುಪಿಟರ್‌) ಗ್ರಹಗಳ ಮಧ್ಯದಲ್ಲಿರುವ ಕ್ಷೇತ್ರದಲ್ಲಿ ಚಲಿಸುವುದಾದರೂ, ಖಗೋಳಶಾಸ್ತ್ರಜ್ಞರಿಂದ ಕಂಡುಹಿಡಿಯಲ್ಪಟ್ಟ ಕೆಲವು, ನಿಜವಾಗಿಯೂ ಭೂಮಿಯ ಕಕ್ಷೆಯನ್ನು ಅಡ್ಡಹಾಯುತ್ತವೆ. ಆಘಾತದ ಬೆದರಿಕೆಯು, ಅಮೆರಿಕದ ಆ್ಯರಿಸೋನದಲ್ಲಿ, ಫ್ಲ್ಯಾಗ್‌ಸ್ಟ್ಯಾಫ್‌ನ ಬಳಿ ಇರುವ ಉಲ್ಕಾ ಕುಳಿ (ಬ್ಯಾರಿಂಜರ್‌ ಕುಳಿಯೆಂದೂ ವಿದಿತ)ಗಳಂತಹ ದೊಡ್ಡದಾದ ಕುಳಿಗಳ ಅಸ್ತಿತ್ವದಿಂದ ಬಲಗೊಳಿಸಲ್ಪಟ್ಟಿದೆ. ಡೈನೋಸಾರ್‌ಗಳ ಅಳಿವಿನ ಸಿದ್ಧಾಂತಗಳಲ್ಲೊಂದು, ಒಂದು ದೊಡ್ಡ ಹೊಡೆತವು ವಾಯುಮಂಡಲವನ್ನು ಮಾರ್ಪಡಿಸಿತು ಮತ್ತು ಭೂಮಿಯನ್ನು ಚಳಿಗಾಲದ ಒಂದು ವಿಸ್ತಾರವಾದ ಅವಧಿಯೊಳಗೆ ನೂಕಿತು, ಇದರಿಂದ ಡೈನೋಸಾರ್‌ಗಳಿಗೆ ಬದುಕಿ ಉಳಿಯಲು ಸಾಧ್ಯವಾಗಲಿಲ್ಲ ಎಂಬುದೇ.

ಅಂತಹ ಒಂದು ದುರಂತರಕರವಾದ ಆಘಾತವು ಇಂದು, ಬಹುಶಃ ಮಾನವಜಾತಿಯನ್ನು ನಾಶಮಾಡೀತು. ಹಾಗಿದ್ದರೂ, ಬೈಬಲು ಸೂಚಿಸುವುದೇನೆಂದರೆ, “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.

[ಪಾದಟಿಪ್ಪಣಿ]

a ಅಂದಾಜುಗಳು ಭಿನ್ನವಾಗಿವೆ.

[ಪುಟ 31 ರಲ್ಲಿರುವ ಚೌಕ]

ವಿಡಿಯೊಟೇಪಿನಲ್ಲಿ ಒಂದು ಅಗ್ನಿಗೋಳ

ಕೆಲವೊಂದು ಉಲ್ಕೆಗಳು ಅಸಾಮಾನ್ಯವಾಗಿ ಉಜ್ವಲವೂ ದೊಡ್ಡವೂ ಆಗಿವೆ. ಅವು ಅಗ್ನಿಗೋಳಗಳೆಂದು ಜ್ಞಾತವಾಗಿವೆ. 1992, ಅಕ್ಟೋಬರ್‌ 9ರಂದು, ಮೇಲಿನ ಛಾಯಾಚಿತ್ರದಲ್ಲಿ ತೋರಿಸಲ್ಪಟ್ಟ ಅಗ್ನಿಗೋಳವು, ಅಮೆರಿಕದ ಹಲವಾರು ರಾಜ್ಯಗಳ ಮೇಲೆ ಆಕಾಶಗಳಲ್ಲಿ ಹೊಳೆದು ಚಲಿಸಿತು. ಅಗ್ನಿಗೋಳವು ಪ್ರಥಮವಾಗಿ ವೆಸ್ಟ್‌ ವರ್ಜಿನಿಯದ ಮೇಲೆ ಕಾಣಿಸಿಕೊಂಡಿತು ಮತ್ತು ಭೂಮಿಯ 700 ಕಿಲೋಮೀಟರ್‌ ವಿಸ್ತಾರದ ಮೇಲೆ ತೋರಿಬಂತು. ಸುಮಾರು 12 ಕಿಲೊಗ್ರಾಮ್‌ಗಳಷ್ಟು ತೂಕದ ಒಂದು ಚೂರು, ನ್ಯೂ ಯಾರ್ಕ್‌ನ ಪೀಕ್ಸ್‌ಕಿಲ್‌ನಲ್ಲಿ ನಿಂತಿದ್ದ ಒಂದು ಕಾರಿನ ಮೇಲೆ ಬಿದ್ದಿತು.

ಈ ಘಟನೆಯ ಕುರಿತು ಅಸಾಧಾರಣವಾದ ವಿಷಯವು ಯಾವುದೆಂದರೆ, ಉಲ್ಕಾ ಕಲ್ಪವು ವಾಯುಮಂಡಲವನ್ನು ಪ್ರವೇಶಿಸಿದಾಗ, ಸೋಕಿಕೊಂಡು ಹೋಗುವ ಅದರ ವಕ್ರತೆಯಿಂದಾಗಿ, 40 ಸೆಕೆಂಡುಗಳಿಗಿಂತಲೂ ಹೆಚ್ಚು ಸಮಯ ಉಳಿದ ಒಂದು ಉಜ್ವಲವಾದ ಅಗ್ನಿಗೋಳವು ಉಂಟಾಯಿತು. ಇದು, ಅದನ್ನು ಕಡಿಮೆಪಕ್ಷ 14 ಭಿನ್ನವಾದ ದೃಷ್ಟಿಬಿಂದುಗಳಿಂದ ವಿಡಿಯೊದಲ್ಲಿ ದಾಖಲಿಸಲು ಆಭೂತಪೂರ್ವ ಅವಕಾಶವನ್ನು ಒದಗಿಸಿತು. ನೇಚರ್‌ ಎಂಬ ಪತ್ರಿಕೆಗನುಸಾರ, “ಇವು ಯಾವುದರಿಂದ ಒಂದು ಉಲ್ಕಾ ಶಿಲೆಯನ್ನು ಪುನಃ ಪಡೆಯಲಾಯಿತೊ ಆ ಒಂದು ಅಗ್ನಿಗೋಳದ ಪ್ರಥಮ ಚಲನ ಚಿತ್ರಗಳಾಗಿವೆ.”

ಅಗ್ನಿಗೋಳವು ಕಡಿಮೆಪಕ್ಷ 70 ಚೂರುಗಳಾಗಿ ಒಡೆಯಿತು, ಇವು ಕೆಲವೊಂದು ವಿಡಿಯೊಟೇಪ್‌ಗಳಲ್ಲಿ ವ್ಯಕ್ತಿಪರ ಉರಿಯುವ ಕ್ಷಿಪಣಿಗಳೋಪಾದಿ ಕಾಣುತ್ತವೆ. ಈ ಘಟನೆಯಿಂದ ಕೇವಲ ಒಂದು ಉಲ್ಕಾ ಶಿಲೆಯು ಕಂಡುಕೊಳ್ಳಲ್ಪಟ್ಟಿದೆಯಾದರೂ, ಒಂದು ಅಥವಾ ಹೆಚ್ಚು ಇತರ ಚೂರುಗಳು ಭೂಮಿಯ ವಾಯುಮಂಡಲವನ್ನು ಭೇದಿಸಿ, ನೆಲದ ಮೇಲೆ ಅಪ್ಪಳಿಸಿರಬಹುದೆಂದು ವಿಜ್ಞಾನಿಗಳು ನಂಬುತ್ತಾರೆ. ಈ ಹಿಂದೆ ಸುಮಾರು 20 ಟನ್‌ಗಳಷ್ಟು ತೂಕವುಳ್ಳದ್ದಾಗಿದ್ದ ಈ ದೊಡ್ಡ ಉಲ್ಕಾ ಕಲ್ಪದಿಂದ ಇದು ಮಾತ್ರ ಉಳಿದಿರಬಹುದಾಗಿದೆ.

[ಪುಟ 32 ರಲ್ಲಿರುವ ಚೌಕ]

ಬಾಹ್ಯಾಕಾಶದಿಂದ ಬರುವ ಬಂಡೆಗಳು

ಕ್ಷುದ್ರಗ್ರಹ: ಒಂದು ಗ್ರಹಕಲ್ಪ ಅಥವಾ ಒಂದು ಸಣ್ಣಗ್ರಹ ಎಂದು ಸಹ ಜ್ಞಾತವಾಗಿದೆ. ಅತಿ ಚಿಕ್ಕದಾಗಿರುವ ಈ ಗ್ರಹಗಳು ಸೂರ್ಯನ ಸುತ್ತಲಿರುವ ಕಕ್ಷೆಯಲ್ಲಿ ಸಂಚರಿಸುತ್ತವೆ. ಹೆಚ್ಚಿನವುಗಳಿಗೆ ಅಕ್ರಮವಾದ ಆಕಾರಗಳಿರುವುದು, ಅವು ಒಮ್ಮೆ ದೊಡ್ಡದಾಗಿದ್ದ ವಸ್ತುಗಳ ತುಂಡುಗಳೆಂದು ಸೂಚಿಸಬಹುದು.

ಉಲ್ಕಾ ಕಲ್ಪ: ಬಾಹ್ಯಾಕಾಶದಲ್ಲಿ ತೇಲುತ್ತಿರುವ ಅಥವಾ ವಾಯುಮಂಡಲದ ಮುಖಾಂತರ ಬೀಳುತ್ತಿರುವ ಲೋಹದಂಥ ಅಥವಾ ಕಲ್ಲಿನಂಥ ವಸ್ತುವಿನ, ಸಂಬಂಧ ಸೂಚಕವಾಗಿ ಸಣ್ಣ ಚೂರು. ಹೆಚ್ಚಿನ ಉಲ್ಕಾ ಕಲ್ಪಗಳು ಆಘಾತಗಳ ಮೂಲಕ ಅಥವಾ ಅಳಿದುಹೋದ ಧೂಮಕೇತುಗಳ ಒರಟಾದ ಭಗ್ನಾವಶೇಷಗಳ ಮೂಲಕ ಉಂಟಾದ ಕ್ಷುದ್ರಗ್ರಹಗಳ ತುಂಡುಗಳೆಂದು ಕೆಲವು ವಿಜ್ಞಾನಿಗಳು ಯೋಚಿಸುತ್ತಾರೆ.

ಉಲ್ಕೆ: ಉಲ್ಕಾಕಲ್ಪವೊಂದು ಭೂಮಿಯ ವಾಯುಮಂಡಲವನ್ನು ಹಾದುಹೋಗುವಾಗ, ವಾಯುವಿನ ಘರ್ಷಣೆಯು ತೀಕ್ಷ್ಣವಾದ ಉಷ್ಣತೆಯನ್ನು ಮತ್ತು ಪ್ರಜ್ವಲವಾದ ಉರಿಯನ್ನು ಉತ್ಪಾದಿಸುತ್ತದೆ. ಬಿಸಿಯಾದ ಉರಿಯುವ ಈ ಅನಿಲಗಳ ಹಾದಿಯು ಕ್ಷಣಿಕವಾಗಿ ಆಕಾಶದಲ್ಲಿ ಬೆಳಕಿನ ಒಂದು ಎಳೆಯಂತೆ ದೃಗ್ಗೋಚರವಾಗಿದೆ. ಬೆಳಕಿನ ಈ ಎಳೆಯು ಉಲ್ಕೆಯೆಂದು ಜ್ಞಾತವಾಗಿದೆ. ಅನೇಕರು ಅದನ್ನು ಉಲ್ಕಾನಕ್ಷತ್ರವೆಂದು ಅಥವಾ ಉಲ್ಕಾಪಾತವೆಂದು ಕರೆಯುತ್ತಾರೆ. ಹೆಚ್ಚಿನ ಉಲ್ಕೆಗಳು, ಅವು ಭೂಮಿಯ ಮೇಲ್ಮೈಯ ಸುಮಾರು 100 ಕಿಲೋಮೀಟರುಗಳ ಮೇಲೆ ಇರುವಾಗ, ಮೊದಲು ಕಾಣಿಸಿಕೊಳ್ಳುತ್ತವೆ.

ಉಲ್ಕಾ ಶಿಲೆ: ಕೆಲವೊಮ್ಮೆ ಒಂದು ಉಲ್ಕಾ ಕಲ್ಪವು ಎಷ್ಟು ದೊಡ್ಡದಾಗಿರುತ್ತದೆ ಎಂದರೆ, ನಮ್ಮ ವಾಯುಮಂಡಲವನ್ನು ಪ್ರವೇಶಿಸುವಾಗ ಅದು ಸಂಪೂರ್ಣವಾಗಿ ಸುಟ್ಟುಹೋಗುವುದಿಲ್ಲ, ಮತ್ತು ಅದು ಭೂಮಿಗೆ ಅಪ್ಪಳಿಸುತ್ತದೆ. ಅಂತಹ ಒಂದು ಉಲ್ಕಾ ಕಲ್ಪಕ್ಕೆ ಬಳಸಲ್ಪಡುವ ಪದವು ಉಲ್ಕಾ ಶಿಲೆ ಎಂದಾಗಿದೆ. ಕೆಲವು ಬಹಳ ದೊಡ್ಡವೂ, ಭಾರವಾದವುಗಳೂ ಆಗಿರಸಾಧ್ಯವಿದೆ. ಆಫ್ರಿಕದ ನಮಿಬಿಯದಲ್ಲಿರುವ ಒಂದು ಉಲ್ಕಾ ಶಿಲೆಯು, 60 ಟನ್‌ಗಳಿಗಿಂತ ಹೆಚ್ಚು ತೂಕವುಳ್ಳದ್ದಾಗಿದೆ. 15 ಟನ್‌ಗಳು ಅಥವಾ ಹೆಚ್ಚು ತೂಕವುಳ್ಳ ಇತರ ದೊಡ್ಡ ಉಲ್ಕಾ ಶಿಲೆಗಳು, ಗ್ರೀನ್ಲೆಂಡ್‌, ಮೆಕ್ಸಿಕೊ, ಮತ್ತು ಅಮೆರಿಕದಲ್ಲಿ ಕಂಡುಕೊಳ್ಳಲ್ಪಟ್ಟಿವೆ.

[ಪುಟ 32 ರಲ್ಲಿರುವ ಚೌಕ/ಚಿತ್ರಗಳು]

ಐಡ ಮತ್ತು ಅದರ ಮಗು ಚಂದ್ರ

ಐಡ ಎಂಬ ಹೆಸರಿನ ಕ್ಷುದ್ರಗ್ರಹದ ಛಾಯಾಚಿತ್ರವನ್ನು ತೆಗೆಯುವಾಗ, ಗ್ಯಾಲಿಲಿಯೊ ಆಕಾಶನೌಕೆಯು, ಗುರು ಗ್ರಹಕ್ಕೆ ಹೋಗುವ ತನ್ನ ಹಾದಿಯಲ್ಲಿ ಅನಿರೀಕ್ಷಿತವಾದ ಒಂದು ಕಂಡುಹಿಡಿತವನ್ನು ಮಾಡಿತು—ಒಂದು ಚಂದ್ರನು ಒಂದು ಕ್ಷುದ್ರಗ್ರಹವನ್ನು ಸುತ್ತುತ್ತಿರುವ, ಪ್ರಥಮ ಬಾರಿ ದಾಖಲು ಮಾಡಲ್ಪಟ್ಟ ಉದಾಹರಣೆ. ಸ್ಕೈ ಆ್ಯಂಡ್‌ ಟೆಲಿಸ್ಕೋಪ್‌ನಲ್ಲಿ ವರದಿಸಲಾದಂತೆ, ಡ್ಯಾಕ್ಟಿಲ್‌ ಎಂಬುದಾಗಿ ಹೆಸರಿಸಲ್ಪಟ್ಟ ಈ ಮೊಟ್ಟೆ ಆಕಾರದ ಚಂದ್ರ, 1.6 ಕಿಲೋಮೀಟರ್‌ ಅಗಲ, 1.2 ಕಿಲೋಮೀಟರ್‌ ಉದ್ದ ಅಳತೆಯುಳ್ಳದ್ದೆಂದು ವಿಜ್ಞಾನಿಗಳು ಅಂದಾಜು ಮಾಡುತ್ತಾರೆ. ಅದರ ಕಕ್ಷೆಯು, 56 ಕಿಲೋಮೀಟರ್‌ ಅಗಲ, 21 ಕಿಲೋಮೀಟರ್‌ ಉದ್ದ ಅಳತೆಯುಳ್ಳ ಐಡ ಕ್ಷುದ್ರಗ್ರಹದ ಮಧ್ಯದಿಂದ ಸುಮಾರು 100 ಕಿಲೋಮೀಟರುಗಳಷ್ಟು ದೂರದಲ್ಲಿದೆ. ಅವುಗಳ ರಕ್ತವರ್ಣಾತೀತ ಬಣ್ಣದ ಗುಣಗಳು, ಐಡಾ ಮತ್ತು ಅದರ ಚಿಕ್ಕ ಚಂದ್ರ—ಎರಡೂ—ಕ್ಷುದ್ರಗ್ರಹಗಳ ಕರೋನಿಸ್‌ ಕುಟುಂಬದ ಭಾಗವಾಗಿವೆ ಎಂಬುದನ್ನು ಸೂಚಿಸುತ್ತವೆ. ಇವು ಬಾಹ್ಯಾಕಾಶದಲ್ಲಿ ಒಂದು ಆಘಾತದಿಂದ ನುಚ್ಚುನೂರು ಮಾಡಲ್ಪಟ್ಟ ಏಕೈಕ ದೊಡ್ಡ ಬಂಡೆಯ ತುಂಡುಗಳೆಂದು ಅಭಿಪ್ರಯಿಸಲಾಗಿವೆ.

[ಕೃಪೆ]

NASA photo/JPL

[ಪುಟ 33 ರಲ್ಲಿರುವ ಚಿತ್ರ]

ಅಮೆರಿಕದ ಆ್ಯರಿಸೋನದಲ್ಲಿ ಫ್ಲ್ಯಾಗ್‌ಸ್ಟ್ಯಾಫ್‌ನ ಬಳಿ ಇರುವ ಉಲ್ಕಾ ಕುಳಿ, ವ್ಯಾಸದಲ್ಲಿ 1,200 ಮೀಟರುಗಳು ಮತ್ತು ಆಳದಲ್ಲಿ 200 ಮೀಟರುಗಳ ಅಳತೆಯುಳ್ಳದ್ದಾಗಿದೆ

[ಕೃಪೆ]

Photo by D. J. Roddy and K. Zeller, U.S. Geological Survey

[ಪುಟ 31 ರಲ್ಲಿರುವ ಚಿತ್ರ ಕೃಪೆ]

Sara Eichmiller Ruck

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ