ಜಗತ್ತನ್ನು ಗಮನಿಸುವುದು
ಕಾಯ್ಪಿನ ಇರುವೆಗಳು
ಸಹಾರಾ ಮರುಭೂಮಿಯಲ್ಲಿನ ನಿರ್ದಿಷ್ಟ ಇರುವೆಗಳು ಕಮರಿಸುವ 140 ಡಿಗ್ರಿ ಫ್ಯಾರನೈಟ್‌ನ ತಾಪಮಾನವನ್ನು ಏಕೆ ತಡೆಯಬಲ್ಲವೆಂಬುದನ್ನು ಸ್ವಿಟ್ಸರ್ಲೆಂಡ್‌ನಲ್ಲಿನ ಇಬ್ಬರು ಸಂಶೋಧನಕಾರರು ಕಂಡುಹಿಡಿದಿದ್ದಾರೆ. ಸೂರಿಕ್ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ಸಂಸ್ಥೆಯ ರ್ಯೂಡಿಗರ್ ವೆನರ್ ಮತ್ತು ಬೇಸಲ್ ವಿಶ್ವವಿದ್ಯಾನಿಲಯದ ಜೆನೆಟಿಸ್ಟಿನ್ ವಾಲ್ಟರ್ ಜೆರಿನ್, “ಯಾವುದು ಶಾಖದ ಹಾನಿಯಿಂದ ದೇಹದ ಪೌಷ್ಟಿಕಾಂಶಗಳನ್ನು ರಕ್ಷಿಸಲು ಸಹಾಯಮಾಡುತ್ತದೋ, ಆ ಶಾಖ ಪ್ರತಿರೋಧಕ ಪೌಷ್ಟಿಕಾಂಶಗಳೆಂದು (ಏಚ್‌ಎಸ್‌ಪಿಗಳು) ಹೇಳಲ್ಪಡುವ ಪದಾರ್ಥಗಳನ್ನು” ಇರುವೆಗಳು ಉತ್ಪಾದಿಸುತ್ತವೆ ಎಂಬುದಾಗಿ ಕಂಡುಕೊಂಡಿದ್ದಾರೆಂದು ಸೈಎನ್ಸ್ ಪತ್ರಿಕೆಯು ವರದಿಸುತ್ತದೆ. ವಿಪರೀತವಾದ ತಾಪಮಾನಗಳಿಗೆ ಒಳಪಡುವಾಗ, “[ಶಾಖ ಧಕ್ಕೆಯಿಂದ] ಹಾನಿಯು ಪ್ರಾರಂಭವಾದ ನಂತರ ಎಲ್ಲ ಪ್ರಾಣಿಗಳು ಕೆಲವು ಏಚ್‌ಎಸ್‌ಪಿಗಳನ್ನು ಮಾಡುತ್ತವೆ,” ಆದರೆ “ಇರುವೆಗಳು ಮೊದಲೇ ಆಕ್ರಮಣವನ್ನು ಮಾಡುತ್ತವೆ” ಎಂದು ಪತ್ರಿಕೆಯು ಹೇಳುತ್ತದೆ. ಯಾವ ವಿಧದಲ್ಲಿ? ಇರುವೆಗಳು ಶಾಖ ಪ್ರತಿರೋಧಕವನ್ನು ಅನುಕರಿಸುತ್ತವೆ ಮತ್ತು ಅವು ತಮ್ಮ ಗೂಡನ್ನು ಬಿಡುವ ಮುನ್ನವೇ ಏಚ್‌ಎಸ್‌ಪಿಗಳನ್ನು ಉತ್ಪಾದಿಸುತ್ತವೆಂದು ಸಂಶೋಧನಕಾರರು ಕಂಡುಕೊಂಡಿದ್ದಾರೆ. ಜೆರಿನ್ ಕೂಡಿಸುವುದು: “ಇದರ ಕುರಿತಾಗಿ ಆಲೋಚಿಸಲು ನಾವು ಸಾಕಷ್ಟು ಬುದ್ಧಿವಂತರಾಗಿರಲಿಲ್ಲ, ಆದರೆ ಇರುವೆಗಳು ಬುದ್ಧಿಯುಳ್ಳವುಗಳಾಗಿದ್ದವು.” ಅಥವಾ ಅವುಗಳ ಸೃಷ್ಟಿಕರ್ತನೋ?
ಸಿಗರೇಟ್‌ಗಳಿಗಿಂತ ಹೆಚ್ಚು ಹಾನಿಕಾರಕವಾದದ್ದು
ಇದು ಬಡ ಮನುಷ್ಯನ ಸಿಗರೇಟ್ ಎಂಬುದಾಗಿಯೂ ಕರೆಯಲ್ಪಡುವ, ಬೀಡಿಯ ವಿಷಯದಲ್ಲಿ ಭಾರತದಲ್ಲಿನ ಶಾಸನಸಭೆಯೊಂದರ ಕಮಿಟಿಯಿಂದ ಬಂದ ನಿರ್ಣಯವಾಗಿದೆ. ಹೊಗೆಸೊಪ್ಪು ಪುಡಿಯನ್ನು ಟೆಂಡು ಎಲೆಗಳಲ್ಲಿ ಸುತ್ತುತ್ತಾ ಮತ್ತು ಆ ಚಿಕ್ಕ ಸುರುಳಿಯನ್ನು ದಾರದಿಂದ ಕಟ್ಟುತ್ತಾ, ದಿನವೊಂದಕ್ಕೆ ಸುಮಾರು 30 ಕೋಟಿ ಬೀಡಿಗಳನ್ನು 40 ಲಕ್ಷಕ್ಕಿಂತ ಹೆಚ್ಚು ಪುರುಷರು, ಮಹಿಳೆಯರು, ಮತ್ತು ಮಕ್ಕಳು ಉತ್ಪಾದಿಸುತ್ತಾರೆಂಬುದಾಗಿ ಅಂದಾಜುಮಾಡಲಾಗಿದೆ. ದ ಟೈಮ್ಸ್ ಆಫ್ ಇಂಡಿಯಕ್ಕನುಸಾರ, ಸಿಗರೇಟ್‌ಗಳ ಕ್ಯಾನ್ಸರ್ ಉಂಟುಮಾಡುವ ಸಂಭವನೀಯತೆಯ ಎರಡೂವರೆ ಪಟ್ಟು ಸಂಭವನೀಯತೆಯನ್ನು ಬೀಡಿ ಹೊಂದಿದೆ, ಸಿಲಿಕ ರೋಗ ಮತ್ತು ಕ್ಷಯ ರೋಗವನ್ನು ಉಂಟುಮಾಡಬಲ್ಲದು ಮತ್ತು 36 ಪ್ರತಿಶತ ಟಾರ್ ಮತ್ತು 1.9 ಪ್ರತಿಶತ ನಿಕೋಟಿನ್ ಹೊಂದಿರುವ ಸ್ಟ್ಯಾಂಡರ್ಡ್ ಇಂಡಿಯನ್ ಸಿಗರೇಟ್‌ನೊಂದಿಗೆ ಹೋಲಿಸುವಾಗ, ಬೀಡಿ 47 ಪ್ರತಿಶತ ಟಾರ್ ಮತ್ತು 3.7 ಪ್ರತಿಶತ ನಿಕೋಟಿನ್ ಅನ್ನು ಒಳಗೊಂಡಿದೆಯೆಂದು ಇತ್ತೀಚಿನ ಒಂದು ವರದಿಯು ತೋರಿಸುತ್ತದೆ. ಗಂಡಾಂತರಕ್ಕೆ ಈಡಾಗುವವರು ಧೂಮಪಾನಿಗಳು ಮಾತ್ರವಲ್ಲ. ಬೀಡಿಗಳನ್ನು ತಯಾರಿಸುವ ಜನರಲ್ಲಿ ಲಕ್ಷಾಂತರ ಜನರು ಸಾಮಾನ್ಯವಾಗಿ ಆರೋಗ್ಯ ಸೂತ್ರಗಳಿಲ್ಲದ ಪರಿಸ್ಥಿತಿಗಳಲ್ಲಿ ಅನೇಕ ತಾಸುಗಳ ತನಕ ಕೆಲಸಮಾಡುತ್ತಿರುವುದು, ನ್ಯೂನ ವಾಯುಸಂಚಾರವುಳ್ಳ ಗುಡಿಸಲುಗಳಲ್ಲಿ ಹೊಗೆಸೊಪ್ಪು ಪುಡಿಯಲ್ಲಿ ಉಸಿರಾಡುತ್ತಿರುವದು ಕಾಣಬರುತ್ತದೆ. ವಿಶೇಷವಾಗಿ, ಶಿಶು ಕೂಲಿಕಾರರು ಬಾಧೆಪಡುತ್ತಾರೆ.
ಪ್ರಯಾಣ ಅಸ್ವಸ್ಥತೆ
ನೀವು ಪ್ರಯಾಣ ಅಸ್ವಸ್ಥತೆಯನ್ನು ಅನುಭವಿಸುತ್ತೀರೋ? ಹಾಗಿರುವಲ್ಲಿ, ಅನುಭವಿಸುವವರು ನೀವೊಬ್ಬರೇ ಅಲ್ಲ. 10 ಜನರಲ್ಲಿ ಸಂಪೂರ್ಣವಾಗಿ 9 ಜನರು ವಿವಿಧ ಮಟ್ಟಗಳಲ್ಲಿ ಚಲನೆಯ ಅಸ್ವಸ್ಥತೆಗೆ ಒಲವುಳ್ಳವರಾಗಿರುತ್ತಾರೆ ಎಂಬುದಾಗಿ ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯುನ್ ವರದಿಸುತ್ತದೆ. ನಾಯಿಗಳು, ವಿಶೇಷವಾಗಿ ನಾಯಿಮರಿಗಳು ಸಹ ಈಡಾಗುತ್ತವೆ. ಮೀನು ಕೂಡ ಬಿರುಸಾದ ಸಮುದ್ರಗಳ ಮೇಲೆ ದೋಣಿಯ ಮೂಲಕ ಸಾಗಿಸಲ್ಪಡುವಾಗ ಸಮುದ್ರ-ಪಿತ್ತಕ್ಕೆ ಒಳಗಾಗಬಲ್ಲವು! ಪರಿಹಾರವೇನಾಗಿದೆ? ಹೆಚ್ಚಿನ ಔಷಧಿ ಅಂಗಡಿಗಳಲ್ಲಿ ಖರೀದಿಸಸಾಧ್ಯವಿರುವ ಔಷಧಿಗಳಿಂದ ಅನೇಕ ಜನರು ಉಪಶಮನವನ್ನು ಪಡೆಯುತ್ತಾರೆ. ಸಹಾಯಮಾಡಬಹುದಾದ ಇತರ ಸಲಹೆಗಳು ಇಲ್ಲಿವೆ: ಚಲಿಸುತ್ತಿರುವ ವಾಹನವೊಂದರಲ್ಲಿ ಓದಬೇಡಿರಿ. ಕಡಿಮೆ ಚಲನೆಯಿರುವಲ್ಲಿ, ಉದಾಹರಣೆಗೆ, ಕಾರೊಂದರ ಮುಂದಿನ ಆಸನದಲ್ಲಿ, ಅಥವಾ ವಿಮಾನವೊಂದರ ರೆಕ್ಕೆಯ ಹತ್ತಿರವಿರುವ ಆಸನದಲ್ಲಿ ಕುಳಿತುಕೊಳ್ಳಿ. ಬಾನಂಚಿನಂತಹ, ಅತಿ ದೂರದಲ್ಲಿರುವ ವಸ್ತುಗಳ ಮೇಲೆ ಕೇಂದ್ರೀಕರಿಸಿರಿ. ಅದನ್ನು ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ, ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿರಿ.
ಗಮನಿಸಲ್ಪಡದ ಮಕ್ಕಳು
ಹೆತ್ತವರಿಬ್ಬರು ಕೆಲಸದಲ್ಲಿರುವಾಗ ಅಥವಾ ಸಮಾಜ ಗೋಷ್ಠಿಯಲ್ಲಿರುವಾಗ, ಆರು ವರ್ಷ ಪ್ರಾಯದಷ್ಟು ಎಳೆಯ ಮಕ್ಕಳು ಮನೆಯಲ್ಲಿ ಒಂಟಿಯಾಗಿ ಬಿಡಲ್ಪಡುತ್ತಿದ್ದಾರೆ ಎಂಬುದಾಗಿ ಆಸ್ಟ್ರೇಲಿಯದ ರಾಷ್ಟ್ರೀಯ ಸಮೀಕ್ಷೆಯೊಂದು ಪ್ರಕಟಪಡಿಸಿತೆಂದು ದ ಕ್ಯಾನ್‌ಬೆರಾ ಟೈಮ್ಸ್ ವರದಿಸುತ್ತದೆ. ಬಾಯ್ಸ್ ಟೌನ್ ನ್ಯಾಷ್‌ನಲ್ ಕಮ್ಯುನಿಟಿ ಪ್ರಾಜೆಕ್ಟ್ಸ್‌ಗೆ ಪ್ರತಿನಿಧಿಯಾಗಿರುವ ವೆಂಡಿ ರಿಡ್‌ಗನುಸಾರ, “12 ವರ್ಷ ಪ್ರಾಯದ ಕೆಳಗಿರುವವರ ಒಂದು ಅಧಿಕ ಪ್ರತಿಶತವು ಕತ್ತಲೆಯ, ಬಿರುಗಾಳಿಗಳ, ಬಲವಂತದಿಂದ ನುಗ್ಗುವವರ, ಅಥವಾ ಅಪಹರಣದ ಕುರಿತಾಗಿ ಭಯಭೀತರಾಗಿರುವಾಗ, ಮಕ್ಕಳಲ್ಲಿ ಅರ್ಧ ಭಾಗಕ್ಕಿಂತ ಹೆಚ್ಚು ಮಕ್ಕಳು ತಾವು ಒಂಟಿಗರಾಗಿದ್ದೆವು ಮತ್ತು ತಮ್ಮ ಹೆತ್ತವರ ಸಹವಾಸವನ್ನು ಕಳೆದುಕೊಂಡೆವು ಎಂದು ಹೇಳಿದರು.” ಕೂಡಿಸುವಿಕೆಯಾಗಿ, “ತೊಂದರೆಯು ಏಳುವಲ್ಲಿ ಮಕ್ಕಳಲ್ಲಿ 71 ಪ್ರತಿಶತ ಮಕ್ಕಳು ಅನುಸರಿಸಲು ಒಂದು ಉಪಾಯಯುಕ್ತ ವಿಧಾನವನ್ನು ಹೊಂದಿರಲಿಲ್ಲ ಮತ್ತು 12 ವರ್ಷ ಪ್ರಾಯದ ಕೆಳಗಿರುವ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ತಮ್ಮ ಹೆತ್ತವರೊಂದಿಗೆ ಹೇಗೆ ಸಂಪರ್ಕಿಸಬೇಕೆಂಬುದನ್ನೂ ತಿಳಿದಿರಲಿಲ್ಲ,” ಎಂದು ರಿಡ್ ಹೇಳಿದರೆಂದು ಟೈಮ್ಸ್ ವರದಿಸಿತು.
ಗದ್ದಲವನ್ನು ನಿಲ್ಲಿಸಿರಿ
“ಆ ಗದ್ದಲವನ್ನು ದಯವಿಟ್ಟು ನಿಲ್ಲಿಸಿರಿ” ಎಂದು ಟೊರಾಂಟೋ ಸ್ಟಾರ್ ವಾರ್ತಾಪತ್ರಿಕೆಯಲ್ಲಿನ ತಲೆಬರಹವೊಂದು ಬೇಡಿಕೊಳ್ಳುತ್ತದೆ. ಹುಲ್ಲನ್ನು ಕತ್ತರಿಸುವ ಗ್ಯಾಸ್ ಯಂತ್ರಗಳ, ಎಲೆ ಬೀಸುಗ ಯಂತ್ರಗಳ, ಕಲ್ಲನ್ನು ಹೊಡೆಯುವ ಯಂತ್ರಗಳ, ಕಾರ್ ಹಾರ್ನ್ ಮತ್ತು ಅಪಾಯ ಸೂಚಕ ಯಂತ್ರಗಳ, ಬೂಮ್ ಬಾಕ್ಸ್‌ಗಳ, ಬೊಗಳುತ್ತಿರುವ ನಾಯಿಗಳ, ಅಳುತ್ತಿರುವ ಶಿಶುಗಳ, ಮತ್ತು ರಾತ್ರಿ ಬಹು ಹೊತ್ತಿನ ತನಕ ನಡೆಯುವ ಗೋಷ್ಠಿಗಳಿಂದ ಆಗುವ ನಿರ್ದಯವಾದ ನಗರ ಗದ್ದಲವು, ಶಾಂತಿ ಮತ್ತು ಪ್ರಶಾಂತತೆಗಾಗಿ ಗದ್ದಲನಿರೋಧಕ ಪ್ರತಿನಿಧಿಗಳನ್ನು ಹೋರಾಟ ನಡೆಸುವಂತೆ ಮಾಡಿವೆ. ಅಂಥ ಗದ್ದಲಕ್ಕೆ ಅತಿ ಹೆಚ್ಚಾದ ಒಡ್ಡುವಿಕೆಯು “ಆಯಾಸ ಮತ್ತು ವ್ಯಾಕುಲತೆಯನ್ನು ಅಧಿಕಗೊಳಿಸಬಲ್ಲವು” ಎಂಬುದಾಗಿ ಸ್ಟಾರ್ ಹೇಳುತ್ತದೆ. ಅದು ಕೂಡಿಸುವುದು: “ರಕ್ತದೊತ್ತಡ ಏರಬಲ್ಲದು, ಹೃದಯದ ಗತಿ ಬದಲಾಗಬಲ್ಲದು, ಮತ್ತು ರಕ್ತನಾಳಗಳನ್ನು ಪ್ರಭಾವಿಸುವ ಅಡ್ರನೆಲಿನ್ ಮತ್ತು ಇತರ ಹಾರ್ಮೋನ್‌ಗಳನ್ನು ದೇಹವು ಉತ್ಪಾದಿಸುತ್ತದೆಂದು ವೈದ್ಯಕೀಯ ಸಂಶೋಧನೆಯು ತೋರಿಸುತ್ತದೆ.” ಆರೋಗ್ಯ ಅಧಿಕಾರಿಗಳಿಗನುಸಾರ, ಅತಿ ಗದ್ದಲವನ್ನು ಉಂಟುಮಾಡುವ ಹುಲ್ಲನ್ನು ಕತ್ತರಿಸುವ ಯಂತ್ರ ಅಥವಾ ಒಂದು ಮೋಟಾರು ಬೈಕ್‌ನಂಥ 85 ಡೆಸಿಬಲ್ಸ್‌ಗಿಂತ ಹೆಚ್ಚಿನ ಯಾವುದೇ ಶಬ್ದಕ್ಕೆ ಎಂಟು ತಾಸುಗಳಿಗಿಂತ ಹೆಚ್ಚು ತಾಸುಗಳ ವರೆಗಿನ ಒಡ್ಡಲ್ಪಡುವಿಕೆಯು ನಿಮ್ಮ ಶ್ರವಣಶಕ್ತಿಗೆ ಅಪಾಯಕರವಾಗಿದೆ.