ನಮ್ಮ ವಾಚಕರಿಂದ
ಯುವ ವಿವಾಹ “ಯುವ ಜನರು ಪ್ರಶ್ನಿಸುವುದು . . . ತೀರ ಚಿಕ್ಕಪ್ರಾಯದಲ್ಲಿ ವಿವಾಹ—ನಾವು ಸಫಲರಾಗಬಲ್ಲೆವೊ?” (ಮೇ 8, 1995) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ಸಭಾ ಹಿರಿಯರಾಗಿ, ವೈವಾಹಿಕ ಬಿಕ್ಕಟ್ಟನ್ನು ಹೊಂದಿದ್ದ ಒಬ್ಬ ಯುವ ದಂಪತಿಗಳಿಗೆ ಒಂದು ಕುರಿಪಾಲನಾ ಭೇಟಿಯನ್ನು ಮಾಡಲು ನಾವು ಏರ್ಪಡಿಸಿದ್ದೆವು. ಈ ಸಂಚಿಕೆ ಬಂದಾಗ ನನಗಾಗಿ ಎಂಥ ಒಂದು ಆಶ್ಚರ್ಯವು! ಆ ಯುವ ದಂಪತಿಗಳಿಗೆ ಸಹಾಯಮಾಡಲು ನಮಗೆ ಅದು ತಾನೇ ಅಗತ್ಯವಾಗಿತ್ತು. ಇಡೀ ಲೇಖನವನ್ನು ಹಾಗೂ ಉದ್ಧರಿಸಲ್ಪಟ್ಟ ಎಲ್ಲ ಬೈಬಲ್ ವಚನಗಳನ್ನು ನಾವು ಪರಿಗಣಿಸಿದೆವು.
ಎಮ್. ಸಿ., ಬ್ರೆಸಿಲ್
ಸಮುದ್ರತಳದ ಪರಿಶೋಧನೆ “ಅಲೆಗಳ ಕೆಳಗಿನ ಜಗತ್ತನ್ನು ಸುರಕ್ಷಿತವಾಗಿ ಪರಿಶೋಧಿಸುವುದು” ಎಂಬ ಲೇಖನವನ್ನು ನಾವು ಬಹಳವಾಗಿ ಗಣ್ಯಮಾಡಿದೆವು. (ಮೇ 8, 1995) ಕೆಂಪು ಸಮುದ್ರದ ಪ್ರವಾಸವೊಂದರಿಂದ ಈಗ ತಾನೇ ನಾವು ಮನೆಗೆ ಹಿಂದಿರುಗಿದ್ದೇವೆ ಮತ್ತು ನಿಮ್ಮ ಸಲಹೆಯು ಬಹಳ ಉಪಯುಕ್ತವಾಗಿತ್ತು ಎಂಬುದನ್ನು ಕಂಡುಕೊಂಡಿದ್ದೇವೆ. ನಾವು ಕೇವಲ ಒಂದು ಶೋಭಾಯಮಾನವಾದ ಸಮುದ್ರತಳವನ್ನು ಪರಿಶೋದಿಸಿದೆವು ಮಾತ್ರವಲ್ಲ ಬಹಳ ಹಣವನ್ನು ಸಹ ಉಳಿಸಿದೆವು!
ವಿ. ಸಿ. ಮತ್ತು ಕೆ. ಬಿ., ಇಟಲಿ
ನಮ್ಮ ಇಬ್ಬರು ಪುತ್ರರ ವಿರಾಮದ ಚಟುವಟಿಕೆಗಳ ಸಂಬಂಧದಲ್ಲಿ ಆಗಾಗ ನನ್ನ ಪತಿಗೆ ಮತ್ತು ನನಗೆ ಸಮಸ್ಯೆಗಳಿರುತ್ತವೆ. ನನ್ನ ಪತಿಗೆ ಧುಮುಕುವಿಯಲ್ಲಿ ಆಸಕ್ತಿಯಿದೆ, ಮತ್ತು ನಮ್ಮ ಕ್ಷೇತ್ರದಲ್ಲಿ ಈಚೆಗೆ ಹೊಸದಾದೊಂದು ಧುಮುಕು ಶಾಲೆಯು ತೆರೆಯಿತು. ನಿಮ್ಮ ಲೇಖನವನ್ನು ಓದಿದ ನಂತರ, ಅವರು ಭಾಗವಹಿಸುವಾಗ ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ನಾನು ಪಡೆದಿರಬಲ್ಲೆನೆಂಬುದಕ್ಕೆ ನಾನು ಸಂತೋಷಿತಳಾಗಿದ್ದೇನೆ.
ಸಿ. ಪಿ., ಜರ್ಮನಿ
ಹೊಗೆಸೊಪ್ಪಿನ ಉದ್ಯಮ “ಲಕ್ಷಗಟ್ಟಲೆ ಸಂಪಾದಿಸಲು ಲಕ್ಷಗಟ್ಟಲೆ ಜನರ ಸಂಹಾರ” (ಜೂನ್ 8, 1995) ಎಂಬ ಸರಣಿಯು ಬೋಧಪ್ರದವೂ ಅರಿವುಳ್ಳದ್ದೂ ಆಗಿತ್ತು. ವಿನ್ಸೆಂಟ್ ವ್ಯಾನ್ ಗೋಗ್ ಅವರ ಮುಖಪುಟದಲ್ಲಿನ ವರ್ಣಚಿತ್ರವು (“ಸಿಗರೇಟ್‌ನೊಂದಿಗೆ ತಲೆಬುರುಡೆ”) ಭೀತಿಗೊಳಿಸುವಂತಿತ್ತು! ಪ್ರಾಯಶಃ ಕೆಲವು ಜನರು ಧೂಮಪಾನವನ್ನು ನಿಲ್ಲಿಸುವಂತೆ ಮಾಡಲು ಅಥವಾ ಕೆಲವರನ್ನು ಕಡಿಮೆ ಪಕ್ಷ ಪ್ರಾರಂಭಿಸುವುದರಿಂದ ತಡೆಯುವುದಕ್ಕೆ ಈ ಚಿತ್ರವೊಂದೇ ಸಾಕು.
ಎಮ್. ಬಿ., ಅಮೆರಿಕ
ಅಮೆರಿಕದ ಕ್ಯಾನ್ಸರ್ ಸಂಸ್ಥೆಗಾಗಿ ನಾನು ಕೆಲಸ ಮಾಡುವುದರಿಂದ, ಈ ಲೇಖನಗಳನ್ನು ಓದಲು ನಾನು ವಿಶೇಷವಾಗಿ ಉತ್ಸಾಹಿತಳಾಗಿದ್ದೆ. ಹೊಗೆಸೊಪ್ಪು ಸ್ವತಂತ್ರ ಒಕ್ಕೂಟವೊಂದರ ಸ್ಥಳಿಕ ಶಾಖೆಯ ಅಧ್ಯಕ್ಷತೆಯನ್ನು ವಹಿಸುವ ಸ್ತ್ರೀಗೆ ನಾನು ಒಂದು ಪ್ರತಿಯನ್ನು ಕಳುಹಿಸಿದೆ. ಬರವಣಿಗೆಯ ಮತ್ತು ಸಂಶೋಧನೆಯ ಗುಣಮಟ್ಟದಿಂದ ಅವಳು ಪ್ರಭಾವಿತಳಾದಳು ಮತ್ತು ತನ್ನ ಸಹೋದ್ಯೋಗಿಗಳಿಗಾಗಿ 35 ಪ್ರತಿಗಳನ್ನು ಕೇಳಿಕೊಂಡಳು.
ಜೆ. ಓ., ಅಮೆರಿಕ
ನನ್ನ ಪತಿ ಮತ್ತು ನಾನು ಹತ್ತಿರ ಹತ್ತಿರ ಮೂರು ತಿಂಗಳಿನಿಂದ ಧೂಮಪಾನವನ್ನು ನಿಲ್ಲಿಸಿಬಿಟ್ಟಿದ್ದೆವು, ಆದರೆ ಸಿಗರೇಟ್‌ಗಳಿಗಾಗಿ ಹಾತೊರೆಯುವಿಕೆಗಳು ನನ್ನಲ್ಲಿ ಇನ್ನೂ ಇತ್ತು. ಆಗ ನಾನು ಈ ಲೇಖನವನ್ನು ಓದಿದೆ, ಮತ್ತು ಇದು ಒಂದು ಸಿಗರೇಟಿನಲ್ಲಿರುವ ಘಟಕಾಂಶಗಳಲ್ಲಿ ಕೆಲವು ಎಷ್ಟು ವಿಷಪೂರಿತವಾಗಿವೆ ಎಂದರೆ, ಜಮೀನು ಭರ್ತಿಯಲ್ಲಿ ಅದನ್ನು ಎಸೆಯುವುದು ಕಾನೂನುಬಾಹಿರವಾಗಿದೆ ಎಂಬುದನ್ನು ನಾನು ಗ್ರಹಿಸುವಂತೆ ಮಾಡಿತು! ಇದು ಯಾವುದು ಕೆಟ್ಟದಾಗಿದೆಯೋ ಅದನ್ನು ದ್ವೇಷಿಸಲು ನನ್ನನ್ನು ಬಲಪಡಿಸಿತು.
ಎಲ್. ಟಿ., ದಕ್ಷಿಣ ಆಫ್ರಿಕ
ಲೂಪಸ್ ರೋಗದಿಂದ ಬಳಲುವವರು “ಈಗ ಮೀಯ ಮತ್ತು ಯೆಹೋವ ಮಾತ್ರ” ಎಂಬ ಲೇಖನದಲ್ಲಿನ ಲೂಪಸ್ ಕುರಿತಾದ ಮಾಹಿತಿಗಾಗಿ ನಿಮಗೆ ಬಹಳ ಉಪಕಾರ. (ಮಾರ್ಚ್ 8, 1995) ನಾನು 18 ವರ್ಷ ಪ್ರಾಯದವಳು, ಮತ್ತು ಸುಮಾರು ಎರಡು ವರ್ಷಗಳಿಂದ ನಾನು ಈ ರೋಗದಿಂದ ಬಳಲುತ್ತಿದ್ದೇನೆ. ಲೋಕದ ಬೇರೆಬೇರೆ ಭಾಗಗಳಲ್ಲಿರುವ ಇತರ ಸಹೋದರ ಸಹೋದರಿಯರಿಂದ ಕಷ್ಟಾನುಭವವು ಹೇಗೆ ಸಹಿಸಲ್ಪಟ್ಟಿದೆ ಎಂಬುದನ್ನು ತಿಳಿಯುವುದು ಮತ್ತು ನಮ್ಮ ಸೃಷ್ಟಿಕರ್ತನು ನಮ್ಮನ್ನು ಯಾವಾಗಲೂ ಹೇಗೆ ಪ್ರೀತಿಪೂರ್ವಕವಾಗಿ ಬೆಂಬಲಿಸುತ್ತಾನೆಂಬುದನ್ನು ನೋಡುವುದು ಉತ್ತೇಜನಕಾರಿಯಾಗಿದೆ.
ಜೆ. ಎ. ವೈ., ಇಟಲಿ
ತೊಂದರೆಯುಕ್ತ ಹೆತ್ತವರು “ಯುವ ಜನರು ಪ್ರಶ್ನಿಸುವುದು . . . ನನ್ನ ಹೆತ್ತವರು ಕೊರತೆಯುಳ್ಳವರಾದರೆ ಆಗೇನು?” ಎಂಬಂತಹ ಲೇಖನವೊಂದಕ್ಕಾಗಿ ನಾನು ಪ್ರಾರ್ಥಿಸಿದ್ದೆ. (ಜೂನ್ 8, 1995) ಕ್ರೈಸ್ತ ಸಭೆಯಿಂದ ನನ್ನ ತಾಯಿಯು ಬಹಿಷ್ಕರಿಸಲ್ಪಟ್ಟಾಗ ನಾನು ಎಷ್ಟೊಂದು ದುಃಖಿತಳೂ ಘಾಸಿಗೊಂಡವಳೂ ಆಗಿದ್ದೆ! ನಾನು ಬಹುಮಟ್ಟಿಗೆ ಪಯನೀಯರಿಂಗ್, ಪೂರ್ಣಸಮಯದ ಸುವಾರ್ತೆಯನ್ನು ಬಿಟ್ಟುಬಿಟ್ಟೆ. ಯೆಹೋವನೊಂದಿಗೆ ತಾಯಿಗಿರುವ ಸಂಬಂಧದ ಕುರಿತು ಹೆಚ್ಚಾಗಿ ಚಿಂತಿಸುವ ಬದಲಾಗಿ, ‘ಮನೋಭೀತಿಯಿಂದ ನನ್ನ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಲು’ ಲೇಖನವು ನನಗೆ ಬಲವನ್ನಿತ್ತಿತು. (ಫಿಲಿಪ್ಪಿ 2:12) ನಿಮಗೆ ಬಹಳ ಉಪಕಾರ.
ಜೆ. ಪಿ., ಫಿಲಿಪ್ಪೀನ್ಸ್
ನಾನೊಬ್ಬ ದೀಕ್ಷಾಸ್ನಾನಿತ ಕ್ರೈಸ್ತಳಾಗಿದ್ದೇನೆ, ಆದರೆ ಪ್ರತಿ ದಿನ ಮನೆಗೆ ಕುಡಿದು ಬರುವ ನನ್ನ ತಂದೆಯನ್ನು ಗೌರವಿಸುವುದನ್ನು ನಾನು ಬಹಳ ಕಷ್ಟಕರವನ್ನಾಗಿ ಕಂಡುಕೊಂಡಿದ್ದೇನೆ. ಈ ಲೇಖನವನ್ನು ಓದುತ್ತಿದ್ದಾಗ, ನನಗೆ ಅಳುವುದನ್ನು ನಿಲ್ಲಿಸಲಿಕ್ಕೆ ಆಗಲಿಲ್ಲ. ಈಗ ಅದನ್ನು ನಾನು ಓದಿರುವುದರಿಂದ, ನನ್ನ ತಂದೆಯೆಡೆಗಿನ ನಕಾರಾತ್ಮಕ ಭಾವನೆಗಳು ಮತ್ತು ಆಲೋಚನೆಯು ಕಡಿಮೆಗೊಂಡಿದೆ, ಮತ್ತು ಆಂತರಿಕವಾಗಿ ಹೆಚ್ಚು ಸಮಾಧಾನಗೊಂಡಂತೆ ನನಗೆ ಅನಿಸುತ್ತದೆ.
ಎನ್. ಎಮ್., ಜಪಾನ್