ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 7/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1996
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1994
  • ನಮ್ಮ ವಾಚಕರಿಂದ
    ಎಚ್ಚರ!—1996
ಇನ್ನಷ್ಟು
ಎಚ್ಚರ!—1996
g96 7/8 ಪು. 30

ನಮ್ಮ ವಾಚಕರಿಂದ

ಇನ್ನೂ ಅವಿವಾಹಿತರಾಗಿರುವುದೇಕೆ? “ಯುವ ಜನರು ಪ್ರಶ್ನಿಸುವುದು . . . ನನ್ನನ್ನು ಬಿಟ್ಟು ಪ್ರತಿಯೊಬ್ಬರೂ ವಿವಾಹವಾಗುತ್ತಿರುವುದೇಕೆ?” (ನವೆಂಬರ್‌ 8, 1995) ಎಂಬ ಲೇಖನಕ್ಕಾಗಿ ತುಂಬಾ ಉಪಕಾರಗಳು. ಅನೇಕರು ತೀರ ಚಿಕ್ಕ ಪ್ರಾಯದಲ್ಲಿ ವಿವಾಹವಾಗುತ್ತಿರುವುದರೊಂದಿಗೆ, ಈ ಕ್ಷೇತ್ರದಲ್ಲಿ ಒಂದು ವಿವಾಹ ಉತ್ಕರ್ಷವು ತಲೆದೋರಿದೆ. ನಾನು 18 ವರ್ಷ ಪ್ರಾಯದವಳೂ ಪ್ರಿಯತಮನಿಲ್ಲದವಳೂ ಆಗಿರುವುದರಿಂದ, ಕೆಲವರು ನನ್ನ ಕುರಿತಾಗಿ ಚಿಂತಿತರಾಗಿದ್ದಾರೆ. ಒಂದು ಸಮತೂಕದ ಮನೋಭಾವವನ್ನು ಕಾಪಾಡಿಕೊಳ್ಳುವಂತೆ ನನಗೆ ಸಹಾಯ ಮಾಡಲಿಕ್ಕಾಗಿ, ಈ ಲೇಖನವು ಸರಿಯಾಗಿ ಸೂಕ್ತ ಸಮಯದಲ್ಲೇ ಬಂತು.

ಎಸ್‌. ಸೆಡ್‌., ಜರ್ಮನಿ

19 ವರ್ಷ ಪ್ರಾಯದವಳೂ ಅವಿವಾಹಿತಳೂ ಆಗಿದ್ದು, ನನ್ನಲ್ಲಿ ಯಾರೊಬ್ಬನೂ ಆಸಕ್ತಿಯನ್ನು ತೋರಿಸದಿರಲು ನನ್ನಲ್ಲಿ ಯಾವ ಅಂಶಗಳ ಕೊರತೆಯಿದೆ ಎಂದು ನಾನು ಅನೇಕವೇಳೆ ಸೋಜಿಗಪಡುತ್ತೇನೆ. ಕೆಲವು ಅವಿಶ್ವಾಸಿಗಳು ಆಸಕ್ತಿಯನ್ನು ತೋರಿಸಿದ್ದಾರೆ, ಆದರೆ ಅದು ನಾನು ಬಯಸುವಂತಹ ರೀತಿಯ ಗಮನವಲ್ಲ. ತಾಳ್ಮೆಯು ಅಗತ್ಯವಾಗಿದೆ ಮತ್ತು ನಿಜವಾಗಿಯೂ ಪ್ರಾಮುಖ್ಯವಾಗಿರುವ ವಿಷಯವು, ನಾನು ಯೆಹೋವನನ್ನು ಸಂತೋಷಪಡಿಸುವುದೇ ಆಗಿದೆ ಎಂಬುದನ್ನು ಅವಲೋಕಿಸಲು, ಈ ಲೇಖನವು ನನಗೆ ಸಹಾಯ ಮಾಡಿತು.

ಜೆ. ಜಿ., ಅಮೆರಿಕ

38 ವರ್ಷ ಪ್ರಾಯದ ಒಬ್ಬ ಅವಿವಾಹಿತ ಪುರುಷನೋಪಾದಿ, ಈ ಲೇಖನದ ಶಿರೋನಾಮದಲ್ಲಿ ಎಬ್ಬಿಸಲ್ಪಟ್ಟಿರುವ ಪ್ರಶ್ನೆಯನ್ನು ಸ್ವತಃ ನಾನೇ ಕೇಳಿಕೊಳ್ಳುತ್ತಿರುವುದನ್ನು ನಾನು ಕಂಡುಕೊಂಡಿದ್ದೇನೆ. ಅವಿವಾಹಿತ ಕ್ರೈಸ್ತ ಸಹೋದರಿಯರಿಂದ ಅಸಂಖ್ಯಾತ ನಿರಾಕರಣೆಗಳನ್ನು ಸಹಿಸಿಕೊಂಡವನಾಗಿದ್ದು, “ಮುಂದೂಡಲ್ಪಟ್ಟ ನಿರೀಕ್ಷಣೆ”ಯಿಂದ ಉಂಟಾಗುವ ವೇದನೆಯು ನನಗೆ ಚೆನ್ನಾಗಿ ತಿಳಿದಿದೆ. (ಜ್ಞಾನೋಕ್ತಿ 13:12, NW) ಈ ಸನ್ನಿವೇಶದಲ್ಲಿರುವ ಅವಿವಾಹಿತ ಕ್ರೈಸ್ತರ ಭಾವನೆಗಳನ್ನು ಯೆಹೋವನು ನ್ಯಾಯಸಮ್ಮತವೆಂದು ಪರಿಗಣಿಸುತ್ತಾನೆ ಮತ್ತು ಆತನು ನಮ್ಮ ನಂಬಿಗಸ್ತ ತಾಳ್ಮೆಯನ್ನು ಗಣ್ಯಮಾಡುತ್ತಾನೆ ಎಂಬುದನ್ನು ತಿಳಿಯುವುದು ಪುನರಾಶ್ವಾಸನದಾಯಕವಾಗಿದೆ.

ಡಿ. ಟಿ., ಅಮೆರಿಕ

ಅತ್ಯಂತ ಮಹಾನ್‌ ಕಲಾಕಾರ “ಅತ್ಯಂತ ಮಹಾನ್‌ ಕಲಾಕಾರನ ಅನ್ವೇಷಣೆಯಲ್ಲಿ” (ಡಿಸೆಂಬರ್‌ 8, 1995) ಎಂಬ ವಿಷಯಸರಣಿಯನ್ನು ಓದಿದ ಬಳಿಕ, ನನ್ನ ಗಣ್ಯತೆಯನ್ನು ವ್ಯಕ್ತಪಡಿಸುವಂತೆ ನಾನು ಪ್ರಚೋದಿಸಲ್ಪಟ್ಟಿದ್ದೇನೆ. ಮಹಾನ್‌ ವಿನ್ಯಾಸಕಾರನಿಗೆ ಕೀರ್ತಿಯನ್ನು ನೀಡಲು ವಿಫಲವಾಗಿರುವ ಅನೇಕಾನೇಕ ನಿಸರ್ಗ ಕಾರ್ಯಕ್ರಮಗಳನ್ನು ನಾನು ಟೆಲಿವಿಷನ್‌ನಲ್ಲಿ ನೋಡಿದ್ದೇನೆ. ಎಚ್ಚರ! ಪತ್ರಿಕೆಯಾದರೊ, ಸಮಂಜಸವಾಗಿ ಆ ನಮ್ಮ ಅತ್ಯುತ್ಕೃಷ್ಟ ದೇವರಾದ ಯೆಹೋವನಿಗೆ ಕೀರ್ತಿಯನ್ನು ಕೊಡುತ್ತದೆ.

ಇ. ಸೆಡ್‌., ಅಮೆರಿಕ

ಯೆಹೋವನೆಡೆಗೆ ಪರಿಗಣನೆ ತೋರಿಸಲು ಎಂತಹ ಒಂದು ಅದ್ಭುತಕರವಾದ ಹೊಸ ಮಾರ್ಗ! ಆತನ ಕಲೆಯ ಗುಣಮಟ್ಟವು, ನಿಜವಾಗಿಯೂ ಅತುಲ್ಯ; ಅಂತೆಯೇ ಆತನ ಕೆಲಸದ ಪ್ರಮಾಣವು ಅಸಮಾನವಾದದ್ದಾಗಿದೆ. ಜನರನ್ನು ಯೆಹೋವ ದೇವರೆಡೆಗೆ ಆಕರ್ಷಿಸಲಿಕ್ಕಾಗಿ, ಎಚ್ಚರ! ಪತ್ರಿಕೆಯನ್ನು ಆಕರ್ಷಣೀಯವಾಗಿ ಮಾಡುವಂತಹ ಅನೇಕ ಕೌಶಲಭರಿತ ಕಲಾಕಾರರಿಗಾಗಿ, ಒಂದು ಮೆಚ್ಚಿಕೆಯನ್ನು ಕೂಡಿಸಲು ಸಹ ನಾನು ಬಯಸುತ್ತೇನೆ.

ಎಮ್‌. ಕ್ಯೂ., ಅಮೆರಿಕ

“ಅತ್ಯಂತ ಮಹಾನ್‌ ಕಲಾಕಾರನ ಅನ್ವೇಷಣೆಯಲ್ಲಿ” (ಡಿಸೆಂಬರ್‌ 8, 1995) ಎಂಬ ವಿಷಯಸರಣಿಗಾಗಿ ನಿಮಗೆ ಉಪಕಾರ. ಸ್ವತಃ ಒಬ್ಬ ಕಲಾಕಾರನಾಗಿದ್ದು, ಈ ಲೇಖನಗಳನ್ನು ನಾನು ತುಂಬಾ ಅಮೂಲ್ಯವೆಂದೆಣಿಸಿದೆ. ದೇವರ ಸೃಷ್ಟಿಯ ಮಹತ್ತಾದ ವೈವಿಧ್ಯ, ಕೀರ್ತನೆಗಳ ಕವಿತಾಗುಣವುಳ್ಳ ಕಲೆ, ಮತ್ತು ಸುಂದರವಾದ ನುಡಿಗಳಲ್ಲಿ ರಚಿಸಲ್ಪಟ್ಟಿರುವ ಇತರ ಬೈಬಲ್‌ ಭಾಗಗಳೆಲ್ಲವೂ, ಯೆಹೋವನು ಕಲೆಯನ್ನು ಸೃಷ್ಟಿಸುತ್ತಾನೆ ಮಾತ್ರವಲ್ಲ, ಅದರಲ್ಲಿ ಆನಂದಿಸುತ್ತಾನೆ ಸಹ ಎಂಬುದನ್ನು ತೋರಿಸುತ್ತವೆ!

ಬಿ. ಆರ್‌., ಅಮೆರಿಕ

ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಕಲೆಯಲ್ಲಿ ಒಳಗೊಂಡಿರುವವನಾಗಿದ್ದು, ನಾನು ಇಂತಹ ಒಂದು ಅದ್ಭುತಕರವಾದ ಲೇಖನವನ್ನು ಸಿದ್ಧಗೊಳಿಸುವುದರಲ್ಲಿ ಪಾಲನ್ನು ಪಡೆದಿದ್ದವರೆಲ್ಲರನ್ನು ಪ್ರಶಂಸಿಸಲು ಬಯಸುತ್ತೇನೆ! ನಮ್ಮ ಮಹಾ ದೇವರಾದ ಯೆಹೋವನ ಹಾಗೂ ಆತನ ಕ್ರಿಯಾತ್ಮಕ ಸೃಜನಶೀಲ ಸಾಮರ್ಥ್ಯಗಳ ಕುರಿತಾದ, ಒಂಬತ್ತು ಪುಟಗಳ ಅತ್ಯುತ್ತಮ ಸಮರ್ಥನೀಯ ಹಾಗೂ ತರ್ಕಬದ್ಧ ನಿರೂಪಣೆಯು ಅದಾಗಿತ್ತು.

ಪಿ. ಎಮ್‌., ಅಮೆರಿಕ

ಆಹಾರವಾಹಿತ ಅನಾರೋಗ್ಯ “ನಿಮ್ಮನ್ನು ಆಹಾರವಾಹಿತ ಅನಾರೋಗ್ಯದಿಂದ ಸಂರಕ್ಷಿಸಿರಿ” (ನವೆಂಬರ್‌ 22, 1995, ಇಂಗ್ಲಿಷ್‌) ಎಂಬ ನಿಮ್ಮ ಲೇಖನದಲ್ಲಿ ನಾನು ಆನಂದಿಸಿದೆ. ನಾನು ಒಬ್ಬ ಮುಖ್ಯ ಅಡಿಗೆಗಾರನಾಗಿದ್ದೇನೆ, ಮತ್ತು ನಾನು ಒಂದು ಹೇಳಿಕೆಯನ್ನು ಕೂಡಿಸಲು ಇಷ್ಟಪಡುತ್ತೇನೆ. ಸ್ವಲ್ಪವೇ ಬೇಯಿಸಲ್ಪಟ್ಟ ಮಾಂಸವನ್ನು ತಿನ್ನುವುದರಲ್ಲಿ ಒಬ್ಬನು ಆನಂದಿಸುತ್ತಾನಾದರೆ, ಆಹಾರವಾಹಿತ ಅನಾರೋಗ್ಯವನ್ನು ತೊರೆಯುವ ವಿಷಯದಲ್ಲಿ ಚಿಂತೆಯಿರುವ ಸ್ಥಳದಲ್ಲಿ ಇದು ಸಾಧ್ಯವಾಗದಿರಬಹುದು. ಮಾಂಸವನ್ನು ಅತಿ ಹೆಚ್ಚಿನ ಉಷ್ಣತೆಗಳಲ್ಲಿ ಬೇಯಿಸುವುದು, ಮಾಂಸವನ್ನು ಬತ್ತಿಹೋಗುವಂತೆ ಮಾಡುತ್ತದೆ ಹಾಗೂ ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಕಷ್ಟಕರವನ್ನಾಗಿ ಮಾಡಬಹುದೆಂಬುದು ನಿಜ. ಮಾಂಸವನ್ನು ಚೆನ್ನಾಗಿ ಬೇಯಿಸಲು ಮತ್ತು ಅದರ ತೇವಾಂಶವನ್ನು ತಡೆದಿಡಲಿಕ್ಕಾಗಿರುವ ಉತ್ತಮ ವಿಧಾನವು, ಅದನ್ನು ನಿಧಾನವಾಗಿ ಬೇಯಿಸುವುದು ಅಥವಾ ಮುಚ್ಚಿದ ಪಾತ್ರೆಯಲ್ಲಿಟ್ಟು ಕೆಳಗೂ ಮೇಲೂ ಕೆಂಡಹಾಕಿ ಬೇಯಿಸುವುದಾಗಿದೆ.

ಜೆ. ಪಿ. ಕೆ., ಅಮೆರಿಕ

ಅಡಿಗೆಯ ಸಲಹೆಗಾಗಿ ಉಪಕಾರಗಳು.—ಸಂಪಾ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ