ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 4/8 ಪು. 2-5
  • ನಿರುದ್ಯೋಗದ ಪೀಡೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿರುದ್ಯೋಗದ ಪೀಡೆ
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಷ್ಕರುಣೆಯ ನಿರುದ್ಯೋಗ ಪ್ರಗತಿ
  • ನಿರುದ್ಯೋಗದ ಉನ್ನತ ಬೆಲೆ
  • ‘ಒಂದು ವಕ್ರ ವ್ಯವಸ್ಥೆಯ ಸೆರೆಯಾಳುಗಳು’
  • ಮುನ್‌ಸೂಚನೆಗಳು ಮತ್ತು ನಿರಾಶೆಗಳು
  • ನಿರುದ್ಯೋಗ ಏಕೆ?
    ಎಚ್ಚರ!—1996
  • ನಿರುದ್ಯೋಗದಿಂದ ಬಿಡುಗಡೆ ಹೇಗೆ ಮತ್ತು ಯಾವಾಗ?
    ಎಚ್ಚರ!—1996
  • “ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತಿದ್ದೇವೆ”
    ಎಚ್ಚರ!—2010
  • ಯೆಹೋವನು ನಿಮ್ಮನ್ನು ಎಂದಿಗೂ ಕೈಬಿಡುವದಿಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಎಚ್ಚರ!—1996
g96 4/8 ಪು. 2-5

ನಿರುದ್ಯೋಗದ ಪೀಡೆ

ಇಟಲಿಯಲ್ಲಿನ ಎಚ್ಚರ! ಸುದ್ದಿಗಾರರಿಂದ

ಅದು ವಿಕಾಸಗೊಂಡಿರುವ ಹಲವಾರು ದೇಶಗಳಲ್ಲಿನ ತುರ್ತು ಪರಿಸ್ಥಿತಿಯಾಗಿದೆ—ಆದರೆ ವಿಕಾಸಶೀಲ ರಾಷ್ಟ್ರಗಳನ್ನೂ ಅದು ಕಾಡುತ್ತದೆ. ಅದು ಅಸ್ತಿತ್ವದಲಿಲ್ಲವೆಂದು ಒಮ್ಮೆ ತೋರಿದ್ದಲ್ಲಿ ತಲೆಎತ್ತಿದೆ. ಅದು ಕೋಟಿಗಟ್ಟಲೆ ಜನರನ್ನು—ಅವರಲ್ಲಿ ಹೆಚ್ಚಿನವರು ತಾಯಂದಿರು ಮತ್ತು ತಂದೆಗಳಾಗಿರುವವರು—ಬಾಧಿಸುತ್ತದೆ. ಮೂರನೆಯ ಎರಡಾಂಶದಷ್ಟು ಇಟ್ಯಾಲಿಯನ್‌ ಜನರಿಗೆ, ಅದು “ಪ್ರಥಮ ದರ್ಜೆಯ ಬೆದರಿಕೆ” ಆಗಿದೆ. ಅದು ಹೊಸ ಸಾಮಾಜಿಕ ಅಸ್ವಸ್ಥತೆಗಳನ್ನು ಸೃಷ್ಟಿಸುತ್ತದೆ. ಸ್ವಲ್ಪ ಮಟ್ಟಿಗೆ, ಅದು ಅಮಲೌಷಧಗಳಲ್ಲಿ ಒಳಗೊಳ್ಳುವ ಅನೇಕ ಯುವ ಜನರ ಸಮಸ್ಯೆಗಳ ಬುಡದಲ್ಲಿದೆ. ಅದು ಲಕ್ಷಾಂತರ ಜನರ ನಿದ್ದೆಯನ್ನು ಕೆಡಿಸುತ್ತದೆ, ಮತ್ತು ಇತರ ಲಕ್ಷಾಂತರ ಜನರಿಗೆ ಅದು ತೀರ ಸಮೀಪದಲ್ಲಿರಸಾಧ್ಯವಿದೆ . . .

“ನಿರುದ್ಯೋಗವು, ಬಹುಶಃ ನಮ್ಮ ಸಮಯಗಳ ಅತ್ಯಂತ ವ್ಯಾಪಕವಾಗಿ ಭಯಪಡುವ ಘಟನೆಯಾಗಿದೆ,” ಎಂಬುದಾಗಿ ಆರ್ಥಿಕ ಸಹಕಾರ ಮತ್ತು ವಿಕಾಸಕ್ಕಾಗಿರುವ ಸಂಸ್ಥೆ (ಓಈಸೀಡೀ)ಯು ದೃಢೀಕರಿಸುತ್ತದೆ. “ಈ ಘಟನೆಯ ವಿಸ್ತಾರ ಹಾಗೂ ಪರಿಣಾಮಗಳು ವಿದಿತವಾಗಿವೆ,” ಆದರೆ “ಅದರೊಂದಿಗೆ ನಿರ್ವಹಿಸುವುದು ಕಷ್ಟಸಾಧ್ಯ” ಎಂಬುದಾಗಿ ಯೂರೋಪಿಯನ್‌ ಸಮುದಾಯಗಳ ಆಯೋಗವು ಬರೆಯುತ್ತದೆ. ಅದು “ಯೂರೋಪ್‌ನ ರಸ್ತೆಗಳಲ್ಲಿ ಸುಳಿದಾಡಲು ಹಿಂದಿರುಗುತ್ತಿರುವ ಒಂದು ಪ್ರೇತ”ವಾಗಿದೆ ಎಂದು ಒಬ್ಬ ಪರಿಣತನು ಹೇಳುತ್ತಾನೆ. ಯೂರೋಪಿಯನ್‌ ಒಕ್ಕೂಟದಲ್ಲಿ (ಈಯು), ನಿರುದ್ಯೋಗಿಗಳ ಸಂಖ್ಯೆ ಈಗ ಸುಮಾರು ಎರಡು ಕೋಟಿಯಷ್ಟಿದೆ, ಮತ್ತು ಅಕ್ಟೋಬರ್‌ 1994ರಲ್ಲಿ, ಕೇವಲ ಇಟಲಿಯೊಂದರಲ್ಲಿಯೇ ಅವರ ಅಧಿಕೃತ ಸಂಖ್ಯೆಯು 27,26,000 ಆಗಿತ್ತು. ಯೂರೋಪಿಯನ್‌ ಒಕ್ಕೂಟದ ನಿಯೋಗಿಯಾದ, ಪಾತ್‌ರಿಗ್‌ ಫ್ಲಿನ್‌ರ ಅಭಿಪ್ರಾಯಕ್ಕನುಸಾರ, “ನಾವು ಎದುರಿಸುವ ಅತ್ಯಂತ ಪ್ರಮುಖ ಸಾಮಾಜಿಕ ಹಾಗೂ ಆರ್ಥಿಕ ಪಂಥಾಹ್ವಾನವು, ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸುವುದಾಗಿದೆ.” ನೀವು ನಿರುದ್ಯೋಗಿಯಾಗಿದ್ದರೆ ಅಥವಾ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದರೆ, ಅದು ಉಂಟುಮಾಡುವ ಭಯವನ್ನು ನೀವು ತಿಳಿದವರಾಗಿದ್ದೀರಿ.

ಆದರೆ ನಿರುದ್ಯೋಗವು, ಕೇವಲ ಒಂದು ಯೂರೋಪಿಯನ್‌ ಸಮಸ್ಯೆಯಾಗಿರುವುದಿಲ್ಲ. ಅದು ಎಲ್ಲ ಅಮೆರಿಕನ್‌ ದೇಶಗಳನ್ನು ಬಾಧಿಸುತ್ತದೆ. ಅದು ಆಫ್ರಿಕ, ಏಷ್ಯಾ, ಅಥವಾ ಓಷಿಯೇನಿಯವನ್ನು ಬಾಧಿಸದಿರುವುದಿಲ್ಲ. ಪೂರ್ವ ಯೂರೋಪಿಯನ್‌ ರಾಷ್ಟ್ರಗಳು, ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗದ ಸಮಸ್ಯೆಯನ್ನು ಎದುರಿಸಿವೆ. ಅದು ಎಲ್ಲೆಡೆಯೂ ಒಂದೇ ವಿಧದಲ್ಲಿ ತಾಕುವುದಿಲ್ಲ, ನಿಜ. ಆದರೆ ಕೆಲವು ಅರ್ಥಶಾಸ್ತ್ರಜ್ಞರಿಗನುಸಾರ, ಯೂರೋಪ್‌ ಮತ್ತು ಉತ್ತರ ಅಮೆರಿಕದಲ್ಲಿನ ನಿರುದ್ಯೋಗ ಪ್ರಮಾಣಗಳು ಹಿಂದಿನ ದಶಕಗಳಿಗಿಂತ ಹೆಚ್ಚು ಉನ್ನತವಾಗಿ, ದೀರ್ಘಾವಧಿಯ ವರೆಗೆ ಉಳಿಯುವವು.a ಮತ್ತು ಸನ್ನಿವೇಶವು, “ಕಡಮೆ ಉದ್ಯೋಗದ ವೃದ್ಧಿಯಿಂದ ಮತ್ತು ಲಭ್ಯವಿರುವ ಕೆಲಸಗಳ ಗುಣಮಟ್ಟದಲ್ಲಿ ಸಾಮಾನ್ಯ ಕ್ಷೀಣಿಸುವಿಕೆಯಿಂದ ಮತ್ತಷ್ಟು ಕೀಳಾಗಿಸಲ್ಪಟ್ಟಿದೆ,” ಎಂಬುದಾಗಿ ಅರ್ಥಶಾಸ್ತ್ರಜ್ಞರಾದ ರೆನಾಟೊ ಬ್ರೂನೆಟಾ ಸೂಚಿಸುತ್ತಾರೆ.

ನಿಷ್ಕರುಣೆಯ ನಿರುದ್ಯೋಗ ಪ್ರಗತಿ

ನಿರುದ್ಯೋಗವು, ಆರ್ಥಿಕ ನಿರ್ವಹಣದ ಎಲ್ಲ ವಿಭಾಗಗಳನ್ನು ಒಂದೊಂದಾಗಿ ಬಾಧಿಸಿದೆ: ಪ್ರಥಮವಾಗಿ ಕೃಷಿ, ಅದರ ಹೆಚ್ಚಿನ ಯಾಂತ್ರಿಕೀಕರಣದೊಂದಿಗೆ ಜನರನ್ನು ಕೆಲಸದಿಂದ ಹೊರಹಾಕುತ್ತದೆ; ನಂತರ ಕೈಗಾರಿಕೆ, ಇದು 1970ಗಳಿಂದ ಇಂಧನದ ವಿಷಮ ಸ್ಥಿತಿಯಿಂದ ಬಾಧಿಸಲ್ಪಟ್ಟಿದೆ; ಮತ್ತು ಈಗ, ಸೇವಾ ವಿಭಾಗವು—ವಾಣಿಜ್ಯ, ಶಿಕ್ಷಣ—ಹಿಂದೆ ಆಕ್ರಮಣ ಸಾಧ್ಯವಲ್ಲದ್ದೆಂದು ಪರಿಗಣಿಸಲ್ಪಟ್ಟಿದ್ದ ಒಂದು ವಿಭಾಗ. ಇಪ್ಪತ್ತು ವರ್ಷಗಳ ಹಿಂದೆ, 2 ಅಥವಾ 3 ಪ್ರತಿಶತ ಅಧಿಕವಾದ ನಿರುದ್ಯೋಗ ಪ್ರಮಾಣವು, ಹೆಚ್ಚಿನ ಭಯವನ್ನುಂಟು ಮಾಡುತ್ತಿತ್ತು. ಇಂದು ನಿರುದ್ಯೋಗವು 5 ಅಥವಾ 6 ಪ್ರತಿಶತದ ಕೆಳಗೆ ಇಡಲ್ಪಟ್ಟಿರುವಲ್ಲಿ ಒಂದು ಔದ್ಯಮೀಕರಿಸಲ್ಪಟ್ಟ ರಾಷ್ಟ್ರವು ತನ್ನನ್ನು ಸಫಲವಾದ ರಾಷ್ಟ್ರವೆಂದು ಪರಿಗಣಿಸಿಕೊಳ್ಳುತ್ತದೆ, ಮತ್ತು ಅನೇಕ ವಿಕಾಸಗೊಂಡಿರುವ ರಾಷ್ಟ್ರಗಳು ಹೆಚ್ಚು ಉನ್ನತವಾದ ಪ್ರಮಾಣಗಳನ್ನು ಪಡೆದಿವೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಓ)ಗನುಸಾರ, ಒಬ್ಬ ನಿರುದ್ಯೋಗಿಯು, ಕೆಲಸವಿಲ್ಲದವನೂ, ಕೆಲಸಮಾಡಲು ಸಿದ್ಧನಾಗಿರುವವನೂ, ಮತ್ತು ಕೆಲಸಕ್ಕಾಗಿ ಸಕ್ರಿಯವಾಗಿ ಹುಡುಕುತ್ತಿರುವವನೂ ಆಗಿದ್ದಾನೆ. ಆದರೆ ಕಾಯಂ ಆದ ಪೂರ್ಣ ಸಮಯದ ಕೆಲಸವಿಲ್ಲದ ಅಥವಾ ಒಂದು ವಾರಕ್ಕೆ ಕೇವಲ ಕೆಲವು ತಾಸುಗಳು ಕೆಲಸಮಾಡಲು ಸಾಧ್ಯವಾಗುವ ವ್ಯಕ್ತಿಯ ಕುರಿತೇನು? ಅಂಶಕಾಲಿಕ ಕೆಲಸವು ಒಂದು ದೇಶದಿಂದ ಇನ್ನೊಂದಕ್ಕೆ ಭಿನ್ನವಾಗಿ ಪರಿಗಣಿಸಲಾಗುತ್ತದೆ. ಕೆಲವು ರಾಷ್ಟ್ರಗಳಲ್ಲಿ, ವಾಸ್ತವವಾಗಿ ನಿರುದ್ಯೋಗಿಗಳಾಗಿರುವ ಕೆಲವರು ಅಧಿಕೃತವಾಗಿ ಉದ್ಯೋಗಸ್ಥರೆಂದು ಎಣಿಸಲ್ಪಡುತ್ತಾರೆ. ಉದ್ಯೋಗ ಮತ್ತು ನಿರುದ್ಯೋಗದ ಮಧ್ಯೆ ಸಮರ್ಪಕವಾಗಿ ಅರ್ಥವಿವರಿಸಲ್ಪಡದ ಸನ್ನಿವೇಶಗಳು, ಯಾರು ನಿಜವಾಗಿಯೂ ನಿರುದ್ಯೋಗಿಗಳಾಗಿದ್ದಾರೆಂದು ನಿರ್ಧರಿಸುವುದನ್ನು ಕಷ್ಟಕರವಾಗಿ ಮಾಡುತ್ತವೆ, ಮತ್ತು ಈ ಕಾರಣಕ್ಕಾಗಿ ಅಂಕೆಸಂಖೆಗಳು ವಾಸ್ತವಿಕತೆಯ ಅಂಶವನ್ನು ಮಾತ್ರ ವರ್ಣಿಸುತ್ತವೆ. “[ಓಈಸೀಡೀ ದೇಶಗಳಲ್ಲಿ] ನಿರುದ್ಯೋಗಿಗಳಾಗಿರುವ 3 ಕೋಟಿ 50 ಲಕ್ಷ ಜನರ ಅಧಿಕೃತ ಸಂಖ್ಯೆಯೂ, ಕೆಲಸ ಇಲ್ಲದಿರುವಿಕೆಯ ಸಂಪೂರ್ಣ ವಿಸ್ತಾರವನ್ನು ಪ್ರತಿಬಿಂಬಿಸುವುದಿಲ್ಲ,” ಎಂಬುದಾಗಿ ಒಂದು ಯೂರೋಪಿಯನ್‌ ಅಧ್ಯಯನವು ಹೇಳುತ್ತದೆ.

ನಿರುದ್ಯೋಗದ ಉನ್ನತ ಬೆಲೆ

ಆದರೆ ಸಂಖ್ಯೆಗಳು ಇಡೀ ಕಥೆಯನ್ನು ಹೇಳುವುದಿಲ್ಲ. “ನಿರುದ್ಯೋಗದ ಆರ್ಥಿಕ ಹಾಗೂ ಸಾಮಾಜಿಕ ವೆಚ್ಚಗಳು ಮಹತ್ತರವಾಗಿವೆ,” ಎಂಬುದಾಗಿ ಯೂರೋಪಿಯನ್‌ ಸಮುದಾಯಗಳ ನಿಯೋಗವು ಹೇಳುತ್ತದೆ, ಮತ್ತು ಅವು “ನಿರುದ್ಯೋಗಿಗಳಿಗಿರುವ ಯೋಗಕ್ಷೇಮದ ಸಂದಾಯಗಳ ನೇರವಾದ ಖರ್ಚಿನಿಂದ ಮಾತ್ರವಲ್ಲ, ಆದರೆ ಅವರು ಉದ್ಯೋಗಸ್ಥರಾಗಿದ್ದಲ್ಲಿ ನಿರುದ್ಯೋಗಿಗಳು ಸಹಾಯವಾಗಿ ಕೊಡುತ್ತಿದ್ದ ರಾಜ್ಯಾದಾಯದ ನಷ್ಟದಿಂದಲೂ” ಫಲಿಸುತ್ತದೆ. ಮತ್ತು ನಿರುದ್ಯೋಗದ ಲಾಭಗಳು, ಅಧಿಕ ಭಾರವಾದವುಗಳಾಗಿ ಪರಿಣಮಿಸುತ್ತಿವೆ, ಸರಕಾರಗಳಿಗೆ ಮಾತ್ರವಲ್ಲ, ಹೆಚ್ಚಿನ ತೆರಿಗೆಗಳಿಗೆ ಅಧೀನರಾದ ಉದ್ಯೋಗಸ್ಥರಿಗೂ.

ನಿರುದ್ಯೋಗವು ಕೇವಲ ದತ್ತಾಂಶಗಳು ಮತ್ತು ಸಂಖ್ಯೆಗಳ ವಿಷಯವಾಗಿರುವುದಿಲ್ಲ. ಫಲಿತಾಂಶವು ವ್ಯಕ್ತಿಗತ ಸನ್ನಿವೇಶಗಳಾಗಿವೆ, ಏಕೆಂದರೆ ಈ ಪೀಡೆಯು ಜನರನ್ನು—ಪ್ರತಿಯೊಂದು ಸಾಮಾಜಿಕ ವರ್ಗದ ಪುರುಷರು, ಸ್ತ್ರೀಯರು ಮತ್ತು ಯುವ ಜನರನ್ನು—ತಾಕುತ್ತದೆ. ಈ “ಕಡೇ ದಿವಸಗಳ” ಇತರ ಎಲ್ಲ ಸಮಸ್ಯೆಗಳೊಂದಿಗೆ ಸೇರಿ, ನಿರುದ್ಯೋಗವು ಮಹತ್ತರವಾದೊಂದು ಹೊರೆಯಾಗಿ ಪರಿಣಮಿಸಬಲ್ಲದು. (2 ತಿಮೊಥೆಯ 3:1-5; ಪ್ರಕಟನೆ 6:5, 6) ವಿಶೇಷವಾಗಿ “ದೀರ್ಘ ಸಮಯದ ನಿರುದ್ಯೋಗ”ದಿಂದ ಆಘಾತಿಸಲ್ಪಟ್ಟರೆ—ಬೇರೆ ಯಾವುದೇ ಅಂಶಗಳು ಸನ್ನಿವೇಶವನ್ನು ಪ್ರಭಾವಿಸದೆ ಇರುವಲ್ಲಿ—ಒಂದು ದೀರ್ಘ ಸಮಯದ ವರೆಗೆ ಕೆಲಸದಿಂದ ಹೊರಗಿದ್ದ ವ್ಯಕ್ತಿಯು ಒಂದು ಕೆಲಸವನ್ನು ಕಂಡುಕೊಳ್ಳುವುದನ್ನು ಇನ್ನೂ ಹೆಚ್ಚು ಕಷ್ಟಕರವಾಗಿ ಕಾಣುವನು. ದುಃಖಕರವಾಗಿ, ಕೆಲವರು ಮತ್ತೆಂದೂ ಉದ್ಯೋಗಸ್ಥರಾಗದೆ ಇರಬಹುದು.b

ಇಂದಿನ ನಿರುದ್ಯೋಗಸ್ಥರಲ್ಲಿ, ಮನೋರೋಗ ಸಂಬಂಧಿತ ಹಾಗೂ ಮನೋವೈಜ್ಞಾನಿಕ ಸಮಸ್ಯೆಗಳು, ಅಷ್ಟೇ ಅಲ್ಲದೆ ಭಾವನಾತ್ಮಕ ಅಸ್ಥಿರತೆ, ಆಶಾಭಂಗ, ಪ್ರಗತಿಪರ ಉದಾಸೀನತೆ, ಮತ್ತು ಆತ್ಮ ಗೌರವದ ನಷ್ಟ ಹೆಚ್ಚಾಗುತ್ತಿವೆ ಎಂಬುದನ್ನು ಮನಶಾಸ್ತ್ರಜ್ಞರು ಕಂಡುಕೊಳ್ಳುತ್ತಾರೆ. ಪರಾಮರಿಸಲು ಮಕ್ಕಳಿರುವ ವ್ಯಕ್ತಿಯೊಬ್ಬನು ಕೆಲಸವನ್ನು ಕಳೆದುಕೊಳ್ಳುವಾಗ, ಅದು ಭಯಂಕರವಾದ ವೈಯಕ್ತಿಕ ದುರಂತವಾಗಿದೆ. ಅವರ ಸುತ್ತಲಿನ ಲೋಕವು ಕುಸಿದುಬಿದ್ದಿದೆ. ಭದ್ರತೆಯು ಕಾಣೆಯಾಗಿದೆ. ಇಂದು, ವಾಸ್ತವದಲ್ಲಿ, ಒಬ್ಬನ ಕೆಲಸದ ಕಳೆದುಕೊಳ್ಳುವಿಕೆಯ ಸಾಧ್ಯತೆಯೊಂದಿಗೆ ಸಂಬಂಧಿಸಿರುವ “ಮುನ್ನೆಣಿಕೆಯ ಕಾತರ”ದ ಹೊರಹೊಮ್ಮಿಕೆಯನ್ನು ಕೆಲವು ಪರಿಣತರು ಗಮನಿಸುತ್ತಾರೆ. ಈ ಕಾತರವು ಕುಟುಂಬ ಸಂಬಂಧಗಳನ್ನು ಗಂಭೀರವಾಗಿ ಪ್ರಭಾವಿಸಬಲ್ಲದು ಮತ್ತು ನಿರುದ್ಯೋಗಸ್ಥರ ಇತ್ತೀಚಿನ ಆತ್ಮಹತ್ಯೆಗಳು ಸೂಚಿಸಬಹುದಾದಂತೆ, ಇನ್ನೂ ಹೆಚ್ಚಿನ ದುರಂತಕರ ಪರಿಣಾಮಗಳನ್ನು ಪಡೆದಿರಸಾಧ್ಯವಿದೆ. ಇನ್ನೂ ಹೆಚ್ಚಾಗಿ, ಒಬ್ಬನ ಪ್ರಥಮ ಕೆಲಸವನ್ನು ಕಂಡುಕೊಳ್ಳುವ ಕಷ್ಟವು, ಯುವ ಜನರಲ್ಲಿನ ಹಿಂಸಾಕೃತ್ಯ ಮತ್ತು ಸಾಮಾಜಿಕ ವಿಮುಖಗೊಳ್ಳುವಿಕೆಯ ಕಾರಣಗಳಲ್ಲಿ ಬಹುಶಃ ಒಂದಾಗಿದೆ.

‘ಒಂದು ವಕ್ರ ವ್ಯವಸ್ಥೆಯ ಸೆರೆಯಾಳುಗಳು’

ತಮ್ಮ ಕೆಲಸಗಳನ್ನು ಕಳೆದುಕೊಂಡಿರುವ ಹಲವಾರು ಜನರ ಸಂದರ್ಶನವನ್ನು ಎಚ್ಚರ! ನಡೆಸಿತು. ಐವತ್ತು ವರ್ಷ ಪ್ರಾಯದ ಆರ್ಮಾಂಡೊ ಹೇಳಿದ್ದೇನೆಂದರೆ, ಅವನಿಗೆ ಅದು “30 ವರ್ಷಗಳ ಪ್ರಯತ್ನಗಳು ವ್ಯರ್ಥವಾಗುವುದನ್ನು ನೋಡುವುದು, ಪುನಃ ಆರಂಭಿಸಬೇಕಾದುದನ್ನು,” ಮತ್ತು “ಒಂದು ವಕ್ರ ವ್ಯವಸ್ಥೆಯ ಸೆರೆಯಾಳಿನೋಪಾದಿ” ಅನಿಸುವುದನ್ನು ಅರ್ಥೈಸಿತು. ಫ್ರಾನ್‌ಚೆಸ್ಕೊ, ‘ತನ್ನ ಮೇಲೆ ಲೋಕವು ಕುಸಿಯುವುದನ್ನು ಕಂಡನು.’ ಸ್ಟೇಫಾನೊವಿಗೆ, “ಪ್ರಚಲಿತ ಜೀವನದ ವ್ಯವಸ್ಥೆಯಲ್ಲಿ ಅಗಾಧವಾದ ನಿರಾಶೆಯ ಅನಿಸಿಕೆಯಾಯಿತು.”

ಮತ್ತೊಂದು ಕಡೆಯಲ್ಲಿ, ಬಹುಮಟ್ಟಿಗೆ 30 ವರ್ಷಗಳ ಕಾಲ, ಪ್ರಾಮುಖ್ಯವಾದೊಂದು ಇಟ್ಯಾಲಿಯನ್‌ ಮೋಟಾರುಗಾಡಿ ಕೈಗಾರಿಕೆಯ ತಾಂತ್ರಿಕ ನಿರ್ವಹಣೆಯಲ್ಲಿ ಕೆಲಸಮಾಡಿದ ನಂತರ, ಕೆಲಸದಿಂದ ತೆಗೆದುಬಿಡಲ್ಪಟ್ಟ ಲೂಚಾನೊ, “ಇಷ್ಟೊಂದು ವರ್ಷಗಳು ಕೆಲಸಮಾಡಿದ ಸಮಯದಲ್ಲಿನ ತನ್ನ ಪ್ರಯತ್ನಗಳು, ಕಟ್ಟುನಿಟ್ಟು, ಮತ್ತು ವಿಶ್ವಾಸಾರ್ಹತೆಯು ಬೆಲೆಯಿಲ್ಲದ್ದಾಗಿ ಪರಿಗಣಿಸಲ್ಪಟ್ಟದ್ದನ್ನು ನೋಡಿ, ಕೋಪ ಮತ್ತು ವಂಚಿತ ಅನಿಸಿಕೆಯನ್ನು ಅನುಭವಿಸಿದನು.”

ಮುನ್‌ಸೂಚನೆಗಳು ಮತ್ತು ನಿರಾಶೆಗಳು

ಕೆಲವು ಅರ್ಥಶಾಸ್ತ್ರಜ್ಞರು, ಬಹಳ ಭಿನ್ನವಾದ ದೃಶ್ಯ ವಿವರಗಳನ್ನು ಎದುರುನೋಡಿದ್ದರು. 1930ರಲ್ಲಿ ಅರ್ಥಶಾಸ್ತ್ರಜ್ಞರಾದ ಜಾನ್‌ ಮನಾರ್ಡ್‌ ಕೇನ್ಸ್‌, ಆಶಾವಾದಿಯಾಗಿ ಮುಂದಿನ 50 ವರ್ಷಗಳೊಳಗೆ “ಎಲ್ಲರಿಗೆ ಕೆಲಸ”ವನ್ನು ಮುನ್‌ಸೂಚಿಸಿದರು, ಮತ್ತು ಪೂರ್ಣ ಉದ್ಯೋಗವು ತಲುಪಬಲ್ಲ ಲಕ್ಷ್ಯವೆಂದು ದಶಕಗಳ ವರೆಗೆ ಪರಿಗಣಿಸಲಾಗಿದೆ. 1945ರಲ್ಲಿ ವಿಶ್ವ ಸಂಸ್ಥೆಯ ಸನ್ನದು, ಪೂರ್ಣ ಉದ್ಯೋಗದ ತೀವ್ರವಾದ ಸಾಧನೆಯನ್ನು ಒಂದು ಲಕ್ಷ್ಯವಾಗಿ ಸ್ಥಾಪಿಸಿತು. ಪ್ರಗತಿಯು, ಎಲ್ಲರಿಗಾಗಿ ಒಂದು ಕೆಲಸವನ್ನು ಮತ್ತು ಕೆಲಸದಲ್ಲಿ ಕಡಿಮೆ ತಾಸುಗಳನ್ನು ಅರ್ಥೈಸುವುದೆಂದು, ಇತ್ತೀಚಿನ ವರೆಗೆ ನಂಬಲಾಗಿತ್ತು. ಆದರೆ ವಿಷಯಗಳು ಆ ರೀತಿಯಾಗಿ ಪರಿಣಮಿಸಿರುವುದಿಲ್ಲ. ಕಳೆದ ದಶಕದ ಗಂಭೀರವಾದ ಹಿಂಜರಿತವು, “1930ಗಳ ಮಹಾ ಕುಸಿತದಂದಿನಿಂದ ಅತಿ ಕೆಟ್ಟದಾದ ಭೌಗೋಲಿಕ ಉದ್ಯೋಗದ ವಿಷಮ ಸ್ಥಿತಿಯನ್ನು” ಉಂಟುಮಾಡಿದೆ ಎಂಬುದಾಗಿ ಐಎಲ್‌ಓ ಹೇಳುತ್ತದೆ. ದಕ್ಷಿಣ ಆಫ್ರಿಕದಲ್ಲಿ—ಸುಮಾರು 30 ಲಕ್ಷ ಕರಿಯ ಆಫ್ರಿಕನರನ್ನು ಸೇರಿಸಿ—ಕಡಿಮೆ ಪಕ್ಷ 30.6 ಲಕ್ಷ ಜನರು ಕೆಲಸದಲಿಲ್ಲ. ಜಪಾನ್‌ ಸಹ—ಕಳೆದ ವರ್ಷ 20 ಲಕ್ಷ ಜನರು ಕೆಲಸದಲ್ಲಿರದೆ—ವಿಷಮ ಸ್ಥಿತಿಯನ್ನು ಅನುಭವಿಸುತ್ತಿದೆ.

ನಿರುದ್ಯೋಗವು ಇಂತಹ ಬಹು ವ್ಯಾಪಕವಾದ ಪೀಡೆಯಾಗಿದೆ ಏಕೆ? ಅದರೊಂದಿಗೆ ನಿಭಾಯಿಸಲು ಯಾವ ಪರಿಹಾರಗಳು ಪ್ರಸ್ತಾಪಿಸಲ್ಪಟ್ಟಿವೆ?

[ಅಧ್ಯಯನ ಪ್ರಶ್ನೆಗಳು]

a ನಿರುದ್ಯೋಗ ಪ್ರಮಾಣವು, ನಿರುದ್ಯೋಗಸ್ಥರಾಗಿರುವ ಒಟ್ಟು ಕಾರ್ಮಿಕ ತಂಡದ ಪ್ರತಿಶತವಾಗಿದೆ.

b “ದೀರ್ಘ ಸಮಯದ ನಿರುದ್ಯೋಗಿಗಳು,” 12 ತಿಂಗಳುಗಳಿಗಿಂತಲೂ ಹೆಚ್ಚು ಸಮಯದ ವರೆಗೆ ಕೆಲಸದಿಂದ ಹೊರಗಿದ್ದವರಾಗಿದ್ದಾರೆ. ಈಯುನಲ್ಲಿ ಸುಮಾರು ಅರ್ಧದಷ್ಟು ನಿರುದ್ಯೋಗಿಗಳು ಈ ವರ್ಗದೊಳಗೆ ಸೇರುತ್ತಾರೆ.

[Map on page 2, 3]

(For fully formatted text, see publication)

ಕೆನಡ 9.6 ಪ್ರತಿಶತ

ಅಮೆರಿಕ 5.7 ಪ್ರತಿಶತ

ಕೊಲಂಬಿಯ 9 ಪ್ರತಿಶತ

ಐರ್ಲೆಂಡ್‌ 15.9 ಪ್ರತಿಶತ

ಸ್ಪೆಯ್ನ್‌ 23.9 ಪ್ರತಿಶತ

ಫಿನ್‌ಲೆಂಡ್‌ 18.9 ಪ್ರತಿಶತ

ಆ್ಯಲ್ಬೇನಿಯ 32.5 ಪ್ರತಿಶತ

ದಕ್ಷಿಣ ಆಫ್ರಿಕ 43 ಪ್ರತಿಶತ

ಜಪಾನ್‌ 3.2 ಪ್ರತಿಶತ

ಫಿಲಿಪ್ಪೀನ್ಸ್‌ 9.8 ಪ್ರತಿಶತ

ಆಸ್ಟ್ರೇಲಿಯ 8.9 ಪ್ರತಿಶತ

[ಕೃಪೆ]

Mountain High Maps™ copyright © 1993 Digital Wisdom, Inc.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ