ನಿರುದ್ಯೋಗ ಏಕೆ?
ಹಲವಾರು ದೇಶಗಳಲ್ಲಿ, ಒಂದು ಜೀವನೋಪಾಯವನ್ನು ಸಂಪಾದಿಸಲು, ಅನೇಕ ಜನರು ಆಯಾಸಗೊಳಿಸುವ ಗತಿಯಲ್ಲಿ—ಬಹುಶಃ ಕಡಿಮೆ ಸಂಬಳಕ್ಕಾಗಿ ಒಂದು ಅಪಾಯಕಾರಿಯಾದ ಕೆಲಸವನ್ನೂ ಮಾಡುತ್ತಾ—ದೀರ್ಘವಾದ ತಾಸುಗಳ ವರೆಗೆ ಕಷ್ಟಕರ ಶಾರೀರಿಕ ಕೆಲಸವನ್ನು ಮಾಡುವಂತೆ ಒತ್ತಾಯಿಸಲ್ಪಡುತ್ತಾರೆ. ಇತ್ತೀಚಿನ ವರೆಗೆ, ಇತರ ದೇಶಗಳಲ್ಲಿದ್ದ ಅನೇಕರು, ತಾವು ಒಮ್ಮೆ ಒಂದು ದೊಡ್ಡ ಕಂಪನಿಯ ಮೂಲಕ ಅಥವಾ ಸರಕಾರದಿಂದ ನಿರ್ವಹಿಸಲ್ಪಟ್ಟ ವಿಭಾಗದಲ್ಲಿ ತೆಗೆದುಕೊಳ್ಳಲ್ಪಟ್ಟ ತರುವಾಯ, ನಿವೃತ್ತಿಯ ತನಕ ತಮಗೊಂದು ಭದ್ರವಾದ ಕೆಲಸವಿರುವ ವಿಷಯದಲ್ಲಿ ನಿಶ್ಚಿತರಾಗಿದ್ದರು. ಆದರೆ ಇಂದು, ಯಾವುದೇ ಮಟ್ಟದಲ್ಲಿ ಅಪೇಕ್ಷಣೀಯ ಉದ್ಯೋಗ ಮತ್ತು ಭದ್ರತೆಯನ್ನು ನೀಡಲು ಇನ್ನು ಮುಂದೆ ಶಕ್ತವಾಗಿರುವ ವ್ಯಾಪಾರಗಳು ಅಥವಾ ಸಂಸ್ಥೆಗಳು ಇರುವಂತೆ ತೋರುವುದಿಲ್ಲ. ಏಕೆ?
ಸಮಸ್ಯೆಯ ಕಾರಣಗಳು
ಸಾವಿರಾರು ಯುವ ಜನರು, ಅವರಿಗೊಂದು ಕಾಲೇಜು ಪದವಿ ಇರಲಿ ಇಲ್ಲದಿರಲಿ, ತಮ್ಮ ಪ್ರಥಮ ಕೆಲಸವನ್ನೂ ಕಂಡುಕೊಳ್ಳಲಾರರು. ಉದಾಹರಣೆಗೆ, ಇಟಲಿಯಲ್ಲಿ, ಮೂರನೆಯ ಒಂದಂಶದಷ್ಟು ನಿರುದ್ಯೋಗಿಗಳು, 15 ಮತ್ತು 24ರ ವಯೋವರ್ಗದ ಜನರಾಗಿದ್ದಾರೆ. ಈಗಾಗಲೇ ಕೆಲಸಮಾಡುತ್ತಿರುವ ಮತ್ತು ತಮ್ಮ ಕೆಲಸಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವವರ ಸರಾಸರಿ ಪ್ರಾಯವು ಹೆಚ್ಚಾಗುವುದರಿಂದ, ತಮ್ಮ ಪ್ರಥಮ ಕೆಲಸವನ್ನು ಕಂಡುಕೊಳ್ಳುವುದು ಯುವ ಜನರಿಗೆ ಅಧಿಕ ಕಷ್ಟಕರವಾಗಿದೆ. ಜೀತಗಾರ ಸರಬರಾಯಿ ಮಾರುಕಟ್ಟೆ (ಲೇಬರ್ ಮಾರ್ಕೆಟ್)ಯಲ್ಲಿ ಹೆಚ್ಚೆಚ್ಚಾಗಿ ಉಪಸ್ಥಿತರಾಗಿರುವ ಸ್ತ್ರೀಯರಲ್ಲಿಯೂ, ಹೆಚ್ಚಿನ ಪ್ರಮಾಣದ ನಿರುದ್ಯೋಗವಿದೆ. ಹೀಗೆ, ಜೀತಗಾರ ಸರಬರಾಯಿ ಮಾರುಕಟ್ಟೆಯಲ್ಲಿ ಸೇರಿಸಲ್ಪಡಲು, ಹೊಸ ಕೆಲಸಗಾರರ ಅಸಾಧಾರಣವಾದ ಸಂಖ್ಯೆಯು ಈಗ ಹೆಣಗಾಡುತ್ತಿದೆ.
ಪ್ರಥಮ ಕೈಗಾರಿಕೆಯ ಯಂತ್ರಗಳ ಸಮಯದಿಂದ, ತಾಂತ್ರಿಕ ನವೀನತೆಯು ಕಾರ್ಮಿಕರಿಗಾಗಿರುವ ಅಗತ್ಯವನ್ನು ಕಡಮೆಮಾಡಿದೆ. ಅನೇಕ ಜನರು, ದೀರ್ಘವಾದ, ಶಕ್ತಿಗುಂದಿಸುವ ಸರದಿಗಳಲ್ಲಿ ಕೆಲಸಮಾಡಬೇಕಾಗಿದ್ದ ಕಾರಣ, ಯಂತ್ರಗಳು ಕೆಲಸವನ್ನು ಕಡಮೆಮಾಡುವವೆಂದು ಅಥವಾ ಅದನ್ನು ಅಳಿಸಿಬಿಡುವವೆಂದು ಕಾರ್ಮಿಕರು ನಿರೀಕ್ಷಿಸಿದರು. ಸ್ವಯಂಚಾಲನೆಯು ಉತ್ಪಾದನೆಯನ್ನು ಹೆಚ್ಚಿಸಿದೆ ಮತ್ತು ಅನೇಕ ಅಪಾಯಗಳನ್ನು ತೊಡೆದುಹಾಕಿದೆ, ಆದರೆ ಅದು ಕೆಲಸಗಳನ್ನೂ ಕಡಮೆಗೊಳಿಸಿದೆ. ವಜಾಮಾಡಲ್ಪಟ್ಟವರು, ತಾವು ಹೊಸ ಕೌಶಲಗಳನ್ನು ಕಲಿಯದೆ ಇದ್ದರೆ, ದೀರ್ಘಾವಧಿಯ ನಿರುದ್ಯೋಗದ ಗಂಡಾಂತರವನ್ನು ಎದುರಿಸುತ್ತಾರೆ.
ನಾವು ವಾಣಿಜ್ಯ ಉತ್ಪಾದನೆಗಳ ಪುಷ್ಕಳತೆಯಿಂದ ಮುಳುಗಿಸಲ್ಪಡುವ ಗಂಡಾಂತರಕ್ಕೆ ಈಡಾಗಿದ್ದೇವೆ. ನಾವು ಬೆಳವಣಿಗೆಯ ಮಿತಿಗಳನ್ನು ಈಗಾಗಲೇ ತಲಪಿದ್ದೇವೆಂದು ಕೆಲವರಿಗೆ ಅನಿಸುತ್ತದೆ. ಇದಕ್ಕೆ ಸೇರಿಸಿ, ಕಡಮೆ ಉದ್ಯೋಗಸ್ಥರಿರುವುದರಿಂದ, ಕೊಂಡುಕೊಳ್ಳುವವರೂ ಕಡಮೆ ಜನರಾಗಿದ್ದಾರೆ. ಹೀಗಾಗಿ ಮಾರುಕಟ್ಟೆಯು ಬಳಸಸಾಧ್ಯವಿರುವುದಕ್ಕಿಂತ ಹೆಚ್ಚನ್ನು ಉತ್ಪಾದಿಸುತ್ತದೆ. ಉತ್ಪಾದನೆಯಲ್ಲಿ ನಿರೀಕ್ಷಿಸಲ್ಪಟ್ಟ ವೃದ್ಧಿಗಳನ್ನು ನಿರ್ವಹಿಸಲು ಕಟ್ಟಲ್ಪಟ್ಟಿದ್ದ ದೊಡ್ಡ ಸ್ಥಾವರಗಳು, ಇನ್ನು ಮುಂದೆ ಆರ್ಥಿಕವಾಗಿ ಬದುಕಸಾಧ್ಯವಿರದೆ, ಮುಚ್ಚಲ್ಪಡುತ್ತಿವೆ ಇಲ್ಲವೆ ಮಾರ್ಪಡಿಸಲ್ಪಡುತ್ತಿವೆ. ಈ ಬಗೆಯ ಪ್ರವೃತ್ತಿಗಳು, ಬಲಿಗಳ ಕಟಾವು ಮಾಡುತ್ತವೆ—ನಿರುದ್ಯೋಗಿಗಳಾಗುವವರು. ಆರ್ಥಿಕ ಹಿಂಜರಿತದಲ್ಲಿ, ಕೆಲಸಗಾರರಿಗಾಗಿರುವ ಬೇಡಿಕೆಯು ಕುಗ್ಗುತ್ತದೆ, ಮತ್ತು ಹಿಂಜರಿತಗಳ ಸಮಯದಲ್ಲಿ ಕಳೆದುಹೋದ ಕೆಲಸಗಳು, ವಿಸ್ತರಣೆಯ ಸಮಯಗಳಲ್ಲಿ ಪುನರ್‌ಸೃಷ್ಟಿಸಲ್ಪಡುವುದು ತೀರ ವಿರಳ. ಸ್ಪಷ್ಟವಾಗಿ, ನಿರುದ್ಯೋಗಕ್ಕೆ ಒಂದಕ್ಕಿಂತ ಹೆಚ್ಚು ಕಾರಣವಿದೆ.
ಒಂದು ಸಾಮಾಜಿಕ ಪೀಡೆ
ಅದು ಯಾರಾನ್ನಾದರೂ ತಾಕಬಹುದಾದ ಕಾರಣ, ನಿರುದ್ಯೋಗವು ಒಂದು ಸಾಮಾಜಿಕ ಪೀಡೆಯಾಗಿದೆ. ಕೆಲವು ದೇಶಗಳು, ಇನ್ನೂ ಕೆಲಸಮಾಡುತ್ತಿರುವವರನ್ನು ಸಂರಕ್ಷಿಸಲಿಕ್ಕಾಗಿ—ಉದಾಹರಣೆಗೆ, ಕಡಿಮೆಮಾಡಲ್ಪಟ್ಟ ಸಂಬಳದೊಂದಿಗೆ ಕಡಿಮೆಮಾಡಲ್ಪಟ್ಟ ಕೆಲಸದ ವಾರವು—ಹಲವಾರು ತಂತ್ರಗಳನ್ನು ಒದಗಿಸುತ್ತವೆ. ಆದರೆ ಇದು, ಕೆಲಸಕ್ಕಾಗಿ ಹುಡುಕುತ್ತಿರುವ ಇತರರ ಪ್ರತೀಕ್ಷೆಗಳಿಗೆ ಹಾನಿಯನ್ನು ತರಬಹುದು.
ಉದ್ಯೋಗಸ್ಥರೂ ನಿರುದ್ಯೋಗಸ್ಥರೂ ಹೆಚ್ಚು ಪದೇ ಪದೇ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪ್ರತಿಭಟಿಸುತ್ತಾರೆ. ಆದರೆ ನಿರುದ್ಯೋಗಸ್ಥರು ಹೊಸ ಕೆಲಸಗಳ ಬೇಡಿಕೆ ಮಾಡುವಾಗ, ಕೆಲಸವಿರುವವರು ತಮ್ಮ ಸ್ವಂತ ಭದ್ರತೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ—ಯಾವಾಗಲೂ ಸಮಂಜಸವಾಗಿರದ ಎರಡು ಉದ್ದೇಶಗಳು. “ಕೆಲಸವಿರುವವರು ಹೆಚ್ಚಿನ ತಾಸುಗಳು ಕೆಲಸಮಾಡುವಂತೆ ಅನೇಕ ವೇಳೆ ಆಮಂತ್ರಿಸಲ್ಪಡುತ್ತಾರೆ. ಕೆಲಸವಿಲ್ಲದವರು ನಿರುದ್ಯೋಗಿಗಳಾಗಿಯೇ ಉಳಿಯುತ್ತಾರೆ. ಸಮಾಜವು ಎರಡು ಗುಂಪುಗಳಾಗಿ ವಿಭಜಿಸಲ್ಪಡುವ ಗಂಡಾಂತರವಿದೆ . . . ಒಂದು ಕಡೆಯಲ್ಲಿ, ಹೆಚ್ಚಿನ ತಾಸುಗಳು ಕೆಲಸಮಾಡುವವರು ಮತ್ತು ಇನ್ನೊಂದು ಕಡೆಯಲ್ಲಿ, ತಿರಸ್ಕೃತ ನಿರುದ್ಯೋಗಿಗಳು—ಇವರು ಬಹುಮಟ್ಟಿಗೆ ಇತರರ ದಯೆಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವವರು,” ಎಂಬುದಾಗಿ ಇಟ್ಯಾಲಿಯನ್ ಪತ್ರಿಕೆಯಾದ ಪ್ಯಾನೊರಾಮ ಹೇಳುತ್ತದೆ. ಯೂರೋಪಿನಲ್ಲಿ, ಪರಿಣತರು ಹೇಳುವುದು, ಆರ್ಥಿಕ ಬೆಳವಣಿಗೆಯ ಫಲಿತಾಂಶಗಳು, ಕೆಲಸವಿಲ್ಲದವರಿಗಿಂತ, ಮುಖ್ಯವಾಗಿ ಈಗಾಗಲೇ ಕೆಲಸಮಾಡುತ್ತಿರುವವರಿಂದ ಅನುಭೋಗಿಸಲ್ಪಟ್ಟಿವೆ.
ಇನ್ನೂ ಹೆಚ್ಚಾಗಿ, ನಿರುದ್ಯೋಗವು, ಸ್ಥಳಿಕ ಆರ್ಥಿಕ ನಿರ್ವಹಣೆಯ ಸ್ಥಿತಿಗೆ ಸಂಬಂಧಿಸಲ್ಪಟ್ಟಿದೆ, ಇದರಿಂದ, ಜರ್ಮನಿ, ಇಟಲಿ, ಮತ್ತು ಸ್ಪೆಯ್ನ್‌ನಂತಹ ಕೆಲವು ರಾಷ್ಟ್ರಗಳಲ್ಲಿ, ಒಂದು ಕ್ಷೇತ್ರದ ಅಗತ್ಯಗಳು ಮತ್ತು ಇನ್ನೊಂದರ ನಡುವೆ ಬಹು ದೊಡ್ಡ ವ್ಯತ್ಯಾಸಗಳು ಅಸ್ತಿತ್ವದಲ್ಲಿರುತ್ತವೆ. ಕೆಲಸಗಾರರು ಹೊಸ ಕೌಶಲಗಳನ್ನು ಕಲಿಯಲು ಅಥವಾ ಮತ್ತೊಂದು ಕ್ಷೇತ್ರಕ್ಕೆ ಇಲ್ಲವೆ ಮತ್ತೊಂದು ದೇಶಕ್ಕೂ ಸ್ಥಳಾಂತರಿಸಲು ಸಿದ್ಧರಾಗಿದ್ದಾರೊ? ಇದು ಅನೇಕ ವೇಳೆ ಒಂದು ನಿರ್ಣಾಯಕ ಅಂಶವಾಗಿರಬಲ್ಲದು.
ಯಾವ ಪರಿಹಾರಗಳಾದರೂ ಕಾಣುತ್ತವೆಯೊ?
ಬಹುಮಟ್ಟಿಗೆ, ನಿರೀಕ್ಷೆಗಳು ಆರ್ಥಿಕ ಅಭಿವೃದ್ಧಿಯ ಮೇಲಿವೆ. ಆದರೆ ಕೆಲವು ಜನರು ಸಂದೇಹಿಗಳಾಗಿದ್ದು ಅಂತಹ ಒಂದು ಅಭಿವೃದ್ಧಿಯು, ಇಸವಿ 2000ದ ತನಕ ಸಂಭವಿಸದೆಂದು ನೆನೆಸುತ್ತಾರೆ. ಇತರರ ಅಭಿಪ್ರಾಯದಲ್ಲಿ, ಚೇತರಿಸುವಿಕೆಯು ಈಗಾಗಲೇ ಆರಂಭಿಸಿದೆ, ಆದರೆ ಇಟಲಿಯಲ್ಲಿ, ಉದ್ಯೋಗದಲ್ಲಿನ ಇತ್ತೀಚಿನ ಇಳಿಕೆಯಿಂದ ವ್ಯಕ್ತವಾಗಿರುವಂತೆ, ಫಲಿತಾಂಶಗಳನ್ನು ಉತ್ಪಾದಿಸುವುದರಲ್ಲಿ ಅದು ನಿಧಾನವಾಗಿದೆ. ಆರ್ಥಿಕ ಚೇತರಿಸುವಿಕೆಯು ಅಗತ್ಯವಾಗಿ ನಿರುದ್ಯೋಗದಲ್ಲಿ ಕಡಮೆಯಾಗುವಿಕೆಯನ್ನು ಅರ್ಥೈಸುವುದಿಲ್ಲ. ಬೆಳವಣಿಗೆಯು ಮಿತವಾಗಿರುವಾಗ, ವ್ಯಾಪಾರಗಳು ಇತರರನ್ನು ಕೆಲಸಕ್ಕಿಟ್ಟುಕೊಳ್ಳುವ ಬದಲಿಗೆ ಈಗಾಗಲೇ ತಮ್ಮಲ್ಲಿರುವ ನೌಕರರನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಲು ಬಯಸುತ್ತವೆ—ಅಂದರೆ, “ಕೆಲಸದ ಅವಕಾಶಗಳಲ್ಲಿ ವೃದ್ಧಿಯಿರದ ಆರ್ಥಿಕ ಬೆಳವಣಿಗೆ” ಎಂದರ್ಥ. ಅದೂ ಅಲ್ಲದೆ, ನಿರುದ್ಯೋಗಸ್ಥರ ಸಂಖ್ಯೆಯು ಅನೇಕ ವೇಳೆ ಸೃಷ್ಟಿಸಲ್ಪಟ್ಟ ಹೊಸ ಕೆಲಸಗಳ ಸಂಖ್ಯೆಗಿಂತ ವೇಗವಾಗಿ ಬೆಳೆಯುತ್ತದೆ.
ಇಂದು ರಾಷ್ಟ್ರೀಯ ಆರ್ಥಿಕ ನಿರ್ವಹಣಗಳು ಭೂಗೋಲೀಕರಣವನ್ನು ಅನುಭವಿಸುತ್ತಿವೆ. ಕೆಲವು ಅರ್ಥಶಾಸ್ತ್ರಜ್ಞರು ನೆನೆಸುವುದೇನೆಂದರೆ, ಉತ್ತರ ಅಮೆರಿಕದ ಮುಕ್ತ ವ್ಯಾಪಾರ ಒಪ್ಪಂದ (ಎನ್‌ಎಎಫ್‌ಟಿಎ) ಮತ್ತು ಏಷ್ಯಾ ಪ್ಯಾಸಿಫಿಕ್ ಆರ್ಥಿಕ ಸಹಕಾರ (ಎಪಿಈಸೀ)ಗಳಂತಹ ದೊಡ್ಡ, ನವೀನ ರಾಷ್ಟ್ರಾತೀತ ವ್ಯಾಪಾರ ಕ್ಷೇತ್ರಗಳ ಸೃಷ್ಟಿಯು ಸಹ, ಲೋಕದ ಆರ್ಥಿಕ ನಿರ್ವಹಣಕ್ಕೆ ಪ್ರಚೋದನೆಯನ್ನು ನೀಡಬಹುದು. ಹಾಗಿದ್ದರೂ, ಕಾರ್ಮಿಕ ಬೆಲೆಯು ಅಗ್ಗವಾಗಿರುವಲ್ಲಿ ತಮ್ಮನ್ನು ಸ್ಥಾಪಿಸಿಕೊಳ್ಳುವಂತೆ ಈ ಪ್ರವೃತ್ತಿಯು ದೊಡ್ಡ ಸಂಸ್ಥೆಗಳನ್ನು ಪ್ರೇರಿಸುತ್ತದೆ, ಇದರ ಪರಿಣಾಮವಾಗಿ, ಔದ್ಯಮೀಕರಿಸಲ್ಪಟ್ಟ ರಾಷ್ಟ್ರಗಳು ಕೆಲಸಗಳನ್ನು ಕಳೆದುಕೊಳ್ಳುತ್ತವೆ. ಅದೇ ಸಮಯದಲ್ಲಿ, ಬಹಳಷ್ಟನ್ನು ಸಂಪಾದಿಸದೆ ಇರುವ ಕೆಲಸಗಾರರು, ಈಗಾಗಲೇ ಅತ್ಯಲ್ಪವಾಗಿರುವ ತಮ್ಮ ಸಂಪಾದನೆಗಳು ಕಡಮೆಯಾಗುವುದನ್ನು ನೋಡುತ್ತಾರೆ. ಹಲವಾರು ದೇಶಗಳಲ್ಲಿ, ಈ ವ್ಯಾಪಾರದ ಒಪ್ಪಂದಗಳ ವಿರುದ್ಧವಾಗಿ ಅನೇಕರು—ಉಗ್ರವಾಗಿಯೂ—ಪ್ರತಿಭಟಿಸಿದ್ದಾರೆಂಬುದು ಕಾಕತಾಳೀಯವಲ್ಲ.
ನಿರುದ್ಯೋಗದ ವಿರುದ್ಧ ಹೋರಾಡಲು ಪರಿಣತರು ಅನೇಕ ಉಪಾಯಗಳನ್ನು ಸೂಚಿಸುತ್ತಾರೆ. ಕೆಲವು, ಅವು ಅರ್ಥಶಾಸ್ತ್ರಜ್ಞರಿಂದ, ರಾಜಕಾರಣಿಗಳಿಂದ ಅಥವಾ ಸ್ವತಃ ಕೆಲಸಗಾರರಿಂದಲೇ ಸೂಚಿಸಲ್ಪಟ್ಟಿವೆಯೊ ಇಲ್ಲವೊ ಎಂಬುದರ ಮೇಲೆ ಅವಲಂಬಿಸುತ್ತಾ, ವಿರೋಧಾತ್ಮಕವಾಗಿಯೂ ಇವೆ. ತೆರಿಗೆಯ ಹೊರೆಯನ್ನು ಕಡಮೆಮಾಡುವ ಮೂಲಕ, ಸಿಬ್ಬಂದಿಯನ್ನು ಹೆಚ್ಚಿಸಲು ಕಂಪನಿಗಳಿಗೆ ಪ್ರೋತ್ಸಾಹಕಗಳನ್ನು ನೀಡುವ ಪ್ರಸ್ತಾಪವನ್ನು ಮಾಡುವವರಿದ್ದಾರೆ. ಕೆಲವರು ಮಹತ್ತರವಾದ ಸರಕಾರೀ ಮಧ್ಯಸ್ತಿಕೆಯ ಸಲಹೆ ನೀಡುತ್ತಾರೆ. ಇತರರು ಕೆಲಸವನ್ನು ವಿಭಿನ್ನವಾಗಿ ಹಂಚುವ ಮತ್ತು ತಾಸುಗಳನ್ನು ಕಡಿಮೆಮಾಡುವ ಸೂಚನೆಯನ್ನು ಕೊಡುತ್ತಾರೆ. ಇದನ್ನು ಈಗಾಗಲೇ ಕೆಲವು ದೊಡ್ಡ ಕಂಪನಿಗಳಲ್ಲಿ ಮಾಡಲಾಗಿದೆ; ಕಳೆದ ಶತಮಾನದಲ್ಲಿ ಎಲ್ಲ ಔದ್ಯಮೀಕರಿಸಲ್ಪಟ್ಟ ರಾಷ್ಟ್ರಗಳಲ್ಲಿ ಕೆಲಸದ ವಾರವು ಕ್ರಮಬದ್ಧವಾಗಿ ಕಡಮೆಮಾಡಲ್ಪಟ್ಟಿದ್ದರೂ, ಇದು ನಿರುದ್ಯೋಗವನ್ನು ಕಡಮೆಮಾಡಿರುವುದಿಲ್ಲ. “ಕಟ್ಟಕಡೆಗೆ, ಪ್ರತಿಯೊಂದು ಕಾರ್ಯನೀತಿಯು ಫಲಕಾರಿಯಲ್ಲದ್ದಾಗಿ ಪರಿಣಮಿಸುತ್ತದೆ, ವೆಚ್ಚಗಳು ಲಾಭಗಳನ್ನು ಅತಿಶಯಿಸುತ್ತವೆ,” ಎಂಬುದಾಗಿ ಅರ್ಥಶಾಸ್ತ್ರಜ್ಞರಾದ, ರೆನಾಟೊ ಬ್ರುನೆಟಾ ಅಭಿಪ್ರಯಿಸುತ್ತಾರೆ.
“ನಾವು ನಮ್ಮನ್ನು ಮೋಸಪಡಿಸಿಕೊಳ್ಳಬಾರದು, ಸಮಸ್ಯೆಯು ಕಷ್ಟಕರವಾಗಿದೆ,” ಎಂಬುದಾಗಿ ಲಸ್‌ಪ್ರೆಸೊ ಪತ್ರಿಕೆಯು ತೀರ್ಮಾನಿಸುತ್ತದೆ. ಬಗೆಹರಿಸಲು ತೀರ ಕಷ್ಟಕರವೊ? ನಿರುದ್ಯೋಗದ ಸಮಸ್ಯೆಗೆ ಒಂದು ಪರಿಹಾರವಿದೆಯೊ?
[ಪುಟ 9 ರಲ್ಲಿರುವ ಚೌಕ]
ಒಂದು ಪ್ರಾಚೀನ ಸಮಸ್ಯೆ
ನಿರುದ್ಯೋಗವು ಒಂದು ಹಳೆಯ ಸಮಸ್ಯೆಯಾಗಿದೆ. ಶತಮಾನಗಳ ವರೆಗೆ, ಜನರು ಆಗಿಂದಾಗ್ಗೆ ತಮ್ಮನ್ನು ಅನೈಚ್ಛಿಕವಾಗಿ, ಕೆಲಸವಿಲ್ಲದವರಾಗಿ ಕಂಡುಕೊಂಡಿದ್ದಾರೆ. ದೊಡ್ಡ ನಿರ್ಮಾಣ ಯೋಜನೆಗಳಲ್ಲಿ ಕೆಲಸವು ಒಮ್ಮೆ ಮುಗಿಯಿತೆಂದರೆ, ಉಪಯೋಗಿಸಲ್ಪಟ್ಟಿದ್ದ ಹತ್ತಾರು ಸಾವಿರ ಕೆಲಸಗಾರರು—ಕಡಿಮೆ ಪಕ್ಷ ಬೇರೆಡೆಯಲ್ಲಿ ಉದ್ಯೋಗಸ್ಥರಾಗುವ ತನಕ—ನಿರುದ್ಯೋಗಸ್ಥರಾದರು. ಆ ಮಧ್ಯೆ ಅವರು, ಅತ್ಯಂತ ಅನಿಶ್ಚಿತವಾದ ಜೀವನವನ್ನು ನಡೆಸಿದರು.
ಮಧ್ಯ ಯುಗಗಳ ಸಮಯದಲ್ಲಿ, “ಆಧುನಿಕ ಅರ್ಥದಲ್ಲಿರುವ ನಿರುದ್ಯೋಗದ ಸಮಸ್ಯೆಯು ಅಸ್ತಿತ್ವದಲಿಲ್ಲದಿದ್ದರೂ,” ನಿರುದ್ಯೋಗಸ್ಥರು ಅಸ್ತಿತ್ವದಲ್ಲಿದ್ದರು. (ಲಾ ಡೀಸೋಕೂಪಾಟ್ಸ್ಯೋನೆ ನೆಲ್ಲಾ ಸ್ಟೋರ್ಯಾ [ಇತಿಹಾಸದಲ್ಲಿ ನಿರುದ್ಯೋಗ]) ಆದರೆ, ಆ ದಿನಗಳಲ್ಲಿ, ಕೆಲಸಮಾಡದೆ ಇದ್ದ ಯಾರಾದರೂ, ಮುಖ್ಯವಾಗಿ, ಕೆಲಸಕ್ಕೆ ಬಾರದವರೂ ಅಥವಾ ಅಲೆಮಾರಿಗಳೆಂದು ಪರಿಗಣಿಸಲ್ಪಟ್ಟರು. 19ನೆಯ ಶತಮಾನದಷ್ಟು ಇತ್ತೀಚೆಗೆ, ಅನೇಕ ಬ್ರಿಟಿಷ್ ವಿಶ್ಲೇಷಕರು, “ನಿರುದ್ಯೋಗಸ್ಥರನ್ನು ಪ್ರಧಾನವಾಗಿ ‘ಪುಂಡರೊಂದಿಗೆ’ ಮತ್ತು ಹೊರಗೆ ಮಲಗಿದ ಅಥವಾ ರಾತ್ರಿಯಲ್ಲಿ ರಸ್ತೆಗಳಲ್ಲಿ ಸುತ್ತಾಡಿದ ಪೋಲಿಗಳೊಂದಿಗೆ ಜೊತೆಗೂಡಿಸಿದರು,” ಎಂಬುದಾಗಿ ಪ್ರೊಫೆಸರ್ ಜಾನ್ ಬರ್ನೆಟ್ ವಿವರಿಸುತ್ತಾರೆ.—ಕೆಲಸವಿಲ್ಲದ ಕೈಗಳು (ಇಂಗ್ಲಿಷ್).
“ನಿರುದ್ಯೋಗದ ಕಂಡುಹಿಡಿತವು” 19ನೆಯ ಶತಮಾನದ ಕೊನೆಯಲ್ಲಿ ಅಥವಾ 20ನೆಯ ಶತಮಾನದ ಆರಂಭದಲ್ಲಿ ಸಂಭವಿಸಿತು. 1895ರಲ್ಲಿ, “ಉದ್ಯೋಗದ ಕೊರತೆಯಿಂದ ಸಂಕಟ” ಎಂಬ ವಿಷಯದ ಮೇಲೆ ಬ್ರಿಟಿಷ್ ಹೌಸ್ ಆಫ್ ಕಾಮನ್ಸ್‌ನ ಸಿಲೆಕ್ಟ್ ಕಮಿಟಿಯಂತಹ, ವಿಶೇಷ ಸರಕಾರೀ ಆಯೋಗಗಳು, ಸಮಸ್ಯೆಯ ಅಧ್ಯಯನ ಮಾಡಲು ಮತ್ತು ಅದನ್ನು ಬಗೆಹರಿಸಲು ಸ್ಥಾಪಿಸಲ್ಪಟ್ಟವು. ಕೆಲಸವಿಲ್ಲದಿರುವಿಕೆಯು ಒಂದು ಸಾಮಾಜಿಕ ಪೀಡೆಯಾಗಿ ಪರಿಣಮಿಸಿತ್ತು.
ಈ ಹೊಸ ಅರಿವು ನಾಟಕೀಯವಾಗಿ ಬೆಳೆಯಿತು, ವಿಶೇಷವಾಗಿ ಪ್ರಥಮ ಜಾಗತಿಕ ಯುದ್ಧದ ತರುವಾಯ. ಆ ಘರ್ಷಣೆಯು, ಅದರ ಆವೇಶಪೂರಿತ ಯುದ್ಧಶಸ್ತ್ರಗಳ ಉತ್ಪಾದನೆಯೊಂದಿಗೆ, ಸಂಪೂರ್ಣವಾಗಿ ನಿರುದ್ಯೋಗವನ್ನು ತೊಡೆದುಹಾಕಿತ್ತು. ಆದರೆ 1920ಗಳಲ್ಲಿ ಆರಂಭಿಸುತ್ತಾ, ಪಾಶ್ಚಾತ್ಯ ಲೋಕವು, 1929ರಲ್ಲಿ ಆರಂಭಿಸಿದ ಮತ್ತು ಲೋಕದ ಎಲ್ಲ ಔದ್ಯಮೀಕರಿಸಲ್ಪಟ್ಟಿದ್ದ ಆರ್ಥಿಕ ನಿರ್ವಹಣಗಳನ್ನು ತಾಕಿದ ಮಹಾ ಕುಸಿತದಲ್ಲಿ ಅತ್ಯುನ್ನತ ಸ್ಥಿತಿಗೇರುತ್ತಾ, ಆರ್ಥಿಕ ಹಿಂಜರಿತಗಳ ಸರಣಿಗಳನ್ನು ಎದುರಿಸಿತು. ಎರಡನೆಯ ಜಾಗತಿಕ ಯುದ್ಧದ ನಂತರ, ಅನೇಕ ದೇಶಗಳು ಹೊಸದಾದ ಆರ್ಥಿಕ ನಿರ್ವಹಣದ ಉತ್ಕರ್ಷವನ್ನು ಅನುಭವಿಸಿದವು, ಮತ್ತು ನಿರುದ್ಯೋಗವು ಕೆಳಗಿಳಿಯಿತು. ಆದರೆ, “ಇಂದಿನ ನಿರುದ್ಯೋಗ ಸಮಸ್ಯೆಯ ಆರಂಭಗಳನ್ನು, 1960ಗಳ ಮಧ್ಯಭಾಗಕ್ಕೆ ಪತ್ತೆಹಚ್ಚಸಾಧ್ಯವಿದೆ,” ಎಂಬುದಾಗಿ ಆರ್ಥಿಕ ಸಹಕಾರ ಮತ್ತು ವಿಕಾಸಕ್ಕಾಗಿರುವ ಸಂಸ್ಥೆಯು ಹೇಳುತ್ತದೆ. ಜೀತಗಾರ ಸರಬರಾಯಿ ಮಾರುಕಟ್ಟೆಯು, 1970ಗಳ ತೈಲದ ವಿಷಮ ಸ್ಥಿತಿಗಳಿಂದ ಮತ್ತು ಕಂಪ್ಯೂಟರೀಕೃತ ಮಾಹಿತಿಯ ಸ್ಫೋಟನೆಯಿಂದ—ಅದರ ಅನುಗತ ಕೆಲಸ ವಜಾಗಳೊಂದಿಗೆ—ಉಂಟಾದ ಹೊಸದೊಂದು ಹೊಡೆತವನ್ನು ಅನುಭವಿಸಿತು. ನಿರುದ್ಯೋಗವು, ಒಮ್ಮೆ ಭದ್ರವೆಂದೆಣಿಸಲ್ಪಟ್ಟ ಆಫೀಸು ಹಾಗೂ ವ್ಯವಸ್ಥಾಪಕ ವಿಭಾಗಗಳ ಒಳಗೂ ನುಗ್ಗುತ್ತಾ, ನಿಷ್ಠುರವಾದ ಆರೋಹಣವನ್ನು ಆರಂಭಿಸಿದೆ.
[ಪುಟ 8 ರಲ್ಲಿರುವ ಚಿತ್ರ]
ಹೆಚ್ಚಿನ ಕೆಲಸಗಳ ಬೇಡಿಕೆಯನ್ನು ಮಾಡುವುದು, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸದು
[ಕೃಪೆ]
Reuters/Bettmann